Tag: ಬೆಳೆಹಾನಿ

  • ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

    ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

    ಚಿತ್ರದುರ್ಗ: ನಿರಂತರ ಮಳೆಯಿಂದಾಗಿ (Rain) ಅಪಾರ ಪ್ರಮಾಣದಲ್ಲಿ ಈರುಳ್ಳಿ, ಹೂವು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಚಳ್ಳಕೆರೆ ತಾಲೂಕಿನ ಬಾಲೆನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಈರುಳ್ಳಿ ಬೆಳೆಯ ಜಮೀನಿಗೆ ಇಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು (Horticulture Department) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್

    ರೈತರು ಅಲ್ಪಕಾಲದಲ್ಲೇ ಲಾಭದಾಯಕ ಬೆಳೆ ಎಂದು ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ ನಿರಂತರ ಮಳೆ ಹೆಚ್ಚಾಗಿ ಜಮೀನಿನಲ್ಲೇ ಈರುಳ್ಳಿ ಕೊಳೆಯಲಾರಂಭಿಸಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆ ದಿಢೀರ್ ಕುಸಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಅಧಿಕಾರಿಗಳು ಈರುಳ್ಳಿ ಬೆಳೆ ನಷ್ಟ ಕುರಿತಂತೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಟ್ಟು ಬೆಳೆ ವಿಮೆ ಬೆಳೆ ಪರಿಹಾರವನ್ನು ಸಿಗುವಂತೆ ಮಾಡಬೇಕು ಎಂದು ರೈತ ಮುಖಂಡ ಚಿದಾನಂದಪ್ಪ ತಿಪ್ಪೇಸ್ವಾಮಿ ಮನವಿ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

    ಇನ್ನು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತೋಟಗಾರಿಕೆ ಸಹಾಯಕಾಧಿಕಾರಿ ಮಧು ಅವರು, ಬೆಳೆ ಹಾನಿಯಾದ ಪ್ರದೇಶಗಳಿಗೆ ಇಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಮಳೆ ಆಗಿರುವ ಕಾರಣ ಈರುಳ್ಳಿ ಬೆಳೆಗೆ ಮಚ್ಚೆರೋಗ, ಹಳದಿ ರೋಗ ಸೇರಿದಂತೆ ಈರುಳ್ಳಿ ಬೆಳೆಗೆ ವಿವಿಧ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದರೂ ಪ್ರಯೋಜನವಿಲ್ಲ. ಆದರೆ ಈರುಳ್ಳಿ ಕಟಾವು ಮಾಡಿದ ನಂತರ ಮಳೆಗೆ ಸಿಲುಕದಂತೆ ಎಚ್ಚರಿಕೆವಹಿಸಿ ಕಟಾವು ಮಾಡಿದ ಬೆಳೆಯನ್ನ ಸಂರಕ್ಷಣೆ ಮಾಡಿಕೊಳ್ಳುವಂತೆ ರೈತರಿಗೆ ಸೂಚಿಸಿದರು. ಇದನ್ನೂ ಓದಿ: ಪವನ್‌ ಖೇರಾ ಬಳಿ 2 ವೋಟರ್‌ ಐಡಿ – ಬಿಜೆಪಿ ಬಾಂಬ್‌, EC ನೋಟಿಸ್‌ ಜಾರಿ

    ಈ ವೇಳೆ ಬೆಳೆ ಹಾನಿಗೆ ಸೂಕ್ತ ಪರಿಹಾರಕ್ಕೆ ಇಲಾಖೆಗೆ ಮಾಹಿತಿ ನೀಡುವ ಭರವಸೆ ನೀಡಿದ್ದು, ರೈತರಾದ ಓಟಿ ತಿಪ್ಪೇಸ್ವಾಮಿ, ಚಿದಾನಂದಪ್ಪ ಅವರು ತ್ವರಿತವಾಗಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೈತರಾದ ಕೃಷ್ಣಪ್ಪ, ಮಲ್ಲ ರೆಡ್ಡಿ, ತಿಮ್ಮ ರೆಡ್ಡಿ, ಸುಭಾಷ್ ರೆಡ್ಡಿ, ಸೇರಿದಂತೆ ಬಾಲೇನ ಹಳ್ಳಿಯ ಅನೇಕ ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು ಆರೋಪ – ಕಂದಾಯ ನಿರೀಕ್ಷಕ, ಗ್ರಾಮಾಡಳಿತ ಅಧಿಕಾರಿ ಸಸ್ಪೆಂಡ್

  • Kolar| ಜಡಿ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ – ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ

    Kolar| ಜಡಿ ಮಳೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿ – ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ

    ಕೋಲಾರ: ಫೆಂಗಲ್ ಚಂಡಮಾರುತ (Fengal Cyclone) ಹಿನ್ನೆಲೆ ಕೋಲಾರದಲ್ಲಿ (Kolar) ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬೆಳೆಗಳು  ಹಾನಿಯಾಗಿದೆ.

    ಜಡಿ ಮಳೆಯಿಂದಾಗಿ (Rain) ರೈತರು ಬೆಳೆದಿದ್ದ ರಾಗಿ, ಅವರೆಕಾಯಿ, ಹೂಕೋಸು, ಹೂವು ಸೇರಿದಂತೆ ಸಾಕಷ್ಟು ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಇದರಿಂದ ರೈತರು ಕಂಗಾಲಾಗಿದ್ದರಲ್ಲದೆ, ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದರು. ಮಳೆ ಹಾನಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಇದರಿಂದ ಎಚ್ಚೆತ್ತ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ (Akram Pasha) ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನದಿಂದ ಬೆಂಗಳೂರು ನೀರಿನ ಬವಣೆಗೆ ಮುಕ್ತಿ: ಹೆಚ್‌.ಡಿ ದೇವೇಗೌಡ

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ, ಕಂದಾಯ ಇಲಾಖೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆಗೆ ತಿಳಿಸಲಾಗಿದೆ. ಮಳೆ ನಿಂತ ತಕ್ಷಣ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಮಾಡಿ ರಾಜ್ಯ ಸರ್ಕಾರಕ್ಕೆ ಬೆಳಹಾನಿ ಮಾಹಿತಿ ಒದಗಿಸಲಾಗುವುದು, ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ, ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಲಾಗುವುದು ಎಂದು  ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿಪಿವೈ ಗೆದ್ರೆ ಡಿಕೆಶಿ ಸಿಎಂ ಆಗ್ತಾರೆ ಅಂದ್ರು ಈಗೇನು ಮಾಡ್ತಾರೆ: ಛಲವಾದಿ ಪ್ರಶ್ನೆ

  • ಡಿಸೆಂಬರ್ 1 ರಿಂದ ಬೆಳೆಹಾನಿ ಪರಿಹಾರ ವಿತರಣೆ: ಹಾಲಪ್ಪ ಆಚಾರ್

    ಡಿಸೆಂಬರ್ 1 ರಿಂದ ಬೆಳೆಹಾನಿ ಪರಿಹಾರ ವಿತರಣೆ: ಹಾಲಪ್ಪ ಆಚಾರ್

    ರಾಯಚೂರು: ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಾನಿಯಾಗಿರುವ ಬೆಳೆ ಸರ್ವೇ ಕಾರ್ಯ ನವೆಂಬರ್ 30ರೊಳಗೆ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿಸೆಂಬರ್ 1 ರಿಂದ ರೈತರಿಗೆ ಪರಿಹಾರ ನೀಡಬೇಕು ಅಂತ ಕಠಿಣವಾಗಿ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

    ಬೆಳೆಹಾನಿ ಪರಿಹಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ನಾಶವಾಗಿದೆ. ಒಟ್ಟು 49,953 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಈ ವರ್ಷ ಮಳೆಯಿಂದಾಗಿ ರೈತರು ಬೆಳೆ ಮುಟ್ಟದಂತಹ ಪರಿಸ್ಥಿತಿಯಿದೆ. ಅದಕ್ಕೆ ಈ ಕುರಿತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಪರಿಹಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ಬೆಳೆಹಾನಿಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಮೃತ ರೈತರ ಕುಟುಂಬಗಳನ್ನು ನಾವು ಇಂದು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ. ನಂತರ ಸರ್ಕಾರಿಂದ ಏನೆಲ್ಲಾ ಪರಿಹಾರ ನೀಡಬೇಕು ಅದನ್ನು ಮಾಡುತ್ತೇವೆ ಎಂದು ಹೇಳಿದರು.

    ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, 100ಕ್ಕೆ 100ರಷ್ಟು ನಾವೇ ಗೆಲ್ಲುತ್ತೇವೆ. ಗ್ರಾಮ ಪಂಚಾಯತಿ ಸೇರಿ ಒಟ್ಟು 6 ಸಾವಿರ ಮತದಾರರಿದ್ದಾರೆ. ನಾವು ಸಂಘಟನಾತ್ಮಕವಾಗಿದ್ದೇವೆ. ಅದಕ್ಕೆ ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ. ನಮ್ಮ ನಾಯಕರು ಸೂಚಿಸುವ ಅಭ್ಯರ್ಥಿ ಗೆಲ್ಲಿಸೋದು ನಮ್ಮ ಗುರಿ ಎಂದು ತಿಳಿಸಿದರು.

  • ಬೆಳೆಹಾನಿ ಬಗ್ಗೆ ಅಳಲು ತೋಡಿಕೊಂಡ ರೈತರ ವಿಡಿಯೋಗಳು ಫುಲ್ ವೈರಲ್

    ಬೆಳೆಹಾನಿ ಬಗ್ಗೆ ಅಳಲು ತೋಡಿಕೊಂಡ ರೈತರ ವಿಡಿಯೋಗಳು ಫುಲ್ ವೈರಲ್

    ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಮಾಂಜ್ರಾನದಿಗೆ ಬಿಡುಗಡೆ ಮಾಡಿದ ಹಿನ್ನೆಲೆ ಮಾಂಜ್ರಾನದಿ ದಡದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಬೆಳೆಹಾನಿ ಬಗ್ಗೆ ಗಡಿ ಜಿಲ್ಲೆ ಬೀದರ್ ನ ರೈತರು ವೀಡಿಯೋ ಮಾಡಿ ಅಳಲು ತೋಡಿಕೊಂಡ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿವೆ. ಕಮಲನಗರ ತಾಲೂಕಿನ ಸೋನಾಳ ಗ್ರಾಮದ ರೈತರ ಸೋಯಾಬೀನ್ ಬೆಳೆಗೆ ನೀರು ನುಗ್ಗಿದ್ದು, ಜಲಾವೃತವಾದ ಬೆಳೆ ಮಧ್ಯೆ ನಿಂತು ರೈತನೋರ್ವ ಮರಾಠಿ ಭಾಷೆಯಲ್ಲಿ, ಸಾಲ ಮಾಡಿಕೊಂಡ ರೈತ ಬದುಕುವುದು ಹೇಗೆ? ಎಂದು ಹಾಡು ಹಾಡಿದ್ದಾರೆ. ಅವರು ಹಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುವ ಮೂಲಕ ರೈತ ನೋವು ತೋಡಿಕೊಂಡಿಕೊಂಡಿದ್ದಾರೆ. ಇದನ್ನೂ ಓದಿ: ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ಭಾಲ್ಕಿ ತಾಲೂಕಿನ ಲಖನಗಾಂವ್ ಹೋಬಳಿ ವ್ಯಾಪ್ತಿಯ ಸೋಮಪುರ ಗ್ರಾಮದ ಇನ್ನೊಬ್ಬ ರೈತ ಉತ್ತಮ ಬಿರಾದರ್ ಕೂಡಾ ವೀಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೈತನ ಎಂಟು ಎಕರೆ ಸೋಯಾಬೀನ್ ಬೆಳೆ ಸಹ ನೀರು ಪಾಲಾಗಿದ್ದು, ಬೆಳೆಗೆ ಪರಿಹಾರ ನೀಡುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಯಾರೊಬ್ಬರು ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ – ಜಾಮೀನು ಅರ್ಜಿ ಸಲ್ಲಿಸಿದ ಎರಡನೇ ಆರೋಪಿ ಅಂಬಿಕಾ

    ರೈತರ ಸಂಕಷ್ಟ ಪ್ರಧಾನಿ ನೇರಂದ್ರ ಮೋದಿ ತನಕ ಹೋಗಲಿ ಎಂದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

     

  • ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ರಾಯಚೂರು: ಮುಂಗಾರು ಬೆಳೆಹಾನಿ ಪರಿಹಾರದ ಅರ್ಜಿ ತೆಗೆದುಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಯೊಬ್ಬ ರೈತರಿಂದ ಹಣ ವಸೂಲಿ ಮಾಡುವುದನ್ನ ರೈತರೇ ವಿಡಿಯೋ ಚಿತ್ರಿಕರಿಸಿ ಬಯಲು ಮಾಡಿದ್ದಾರೆ.

    ರಾಯಚೂರಿನ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾವೂರು, ಚಿತ್ತಾಪೂರ, ರೋಡಲಬಂಡಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಶಿವಪ್ಪ ಸೋಮನಾಳ ಮೇಲೆ ಲಂಚದ ಆರೋಪ ಕೇಳಿ ಬಂದಿದೆ.

    ಪ್ರತಿಯೊಬ್ಬ ರೈತರಿಂದ 200, 300 ರೂಪಾಯಿಗಳನ್ನ ವಸೂಲಿ ಮಾಡಿ ಅರ್ಜಿಯನ್ನು ಮುಂದಕ್ಕೆ ಕಳುಹಿಸುವುದಾಗಿ ಹೇಳುತ್ತಿದ್ದಾನೆ. ಇದುವರೆಗೂ 120 ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡಿದ್ದಾನೆ ಅಂತ ರೈತರು ಆರೋಪಿಸಿದ್ದಾರೆ.

    ಆದ್ರೆ ಅರ್ಜಿಯನ್ನು ಆನ್ ಲೈನ್ ಮೂಲಕವೇ ತುಂಬಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಬೇಕು. ಅರ್ಜಿಯೊಂದಿಗೆ ಆಧಾರ ಕಾರ್ಡ್‍ನ್ನೂ ಲಿಂಕಮಾಡಬೇಕು. ಬೆಳೆಪರಿಹಾರಕ್ಕೆ ಅರ್ಜಿ ಹಾಕುವ ಪ್ರಕ್ರೀಯೆ ಈಗಾಗಲೇ ಎರಡು ತಿಂಗಳ ಹಿಂದೆಯೇ ಮುಗಿದ್ದಿದ್ದರೂ, ಆಫ್‍ಲೈನ್ ಅರ್ಜಿ ತುಂಬಬೇಕು ಅಂತ ಶಿವಪ್ಪ ಹಣ ವಸೂಲಿಗೆ ಇಳಿದಿದ್ದಾನೆ ಅಂತ ರೈತರು ಹೇಳಿದ್ದಾರೆ.

    ಈ ಬಗ್ಗೆ ಲಿಂಗಸುಗೂರು ತಹಶೀಲ್ದಾರ್ ಶಿವಾನಂದ್ ಸಾಗರ್‍ಗೂ ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಶಿವಾನಂದ್ ಸಾಗರ್ ತಿಳಿಸಿದ್ದಾರೆ.

    https://www.youtube.com/watch?v=x-eozmX-iNE