Tag: ಬೆಳೆನಾಶ

  • 2 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಫಸಲು ಹಾಳು – ಅನ್ನದಾತರು ಕಂಗಾಲು

    2 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳ ಫಸಲು ಹಾಳು – ಅನ್ನದಾತರು ಕಂಗಾಲು

    -ಹಿಂಗಾರು ಮಳೆಯ ಆರ್ಭಟಕ್ಕೆ ತತ್ತರಿಸಿದ ಹಾವೇರಿ ಜಿಲ್ಲೆಯ ಅನ್ನದಾತರು

    ಹಾವೇರಿ: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗುಡ್ಡೆ ಹಾಕಿದಲ್ಲೇ ಮೆಕ್ಕೆಜೋಳದ ತೆನೆಗಳು ಮೊಳಕೆ ಒಡೆಯುತ್ತಿದೆ. ಇದರಿಂದಾಗಿ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ರೈತರು ಕಂಗಾಲಾಗಿದ್ದಾರೆ.

    ಮೆಕ್ಕೆಜೋಳ ಬೆಳೆದ ರೈತರ ಪರಿಸ್ಥಿತಿಯಂತೂ ತೀರ ಹದಗೆಟ್ಟಿದೆ. ಗ್ರಾಮದ ಶಿವನಗೌಡ ಸೊಲಬಗೌಡ್ರ ಎಂಬ ರೈತ ತಮ್ಮ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಭರ್ಜರಿ ಫಸಲು ಕೂಡ ಬಂದಿತ್ತು. ಮೆಕ್ಕೆಜೋಳ ಕಟಾವು ಮಾಡಿ ರಾಶಿ ಮಾಡಲು ಗುಡ್ಡೆ ಹಾಕಿದ್ದರು. ಆದರೆ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದ ಮೆಕ್ಕೆಜೋಳ ಗುಡ್ಡೆ ಹಾಕಿದಲ್ಲೇ ಮೊಳಕೆ ಒಡೆಯುತ್ತಿದೆ. ಇದನ್ನೂ ಓದಿ: ಚನ್ನಪಟ್ಟಣ ಉಪಕಣ; ನಾಮಪತ್ರ ಸಲ್ಲಿಕೆಗೆ ಸಿ.ಪಿ.ಯೋಗೇಶ್ವರ್ ಸಿದ್ಧತೆ

    ಜಿಲ್ಲೆಯಲ್ಲಿ ಶೇ.80ರಷ್ಟು ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ನಿರಂತರ ಮಳೆಗೆ ಅನ್ನದಾತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳದ ತೆನೆಗಳು ಮೊಳಕೆಯೊಡೆದು ಹಾಳಾಗಿವೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಗಳಲ್ಲಿ ಬಹುತೇಕ ತೆನೆಗಳು ಮೊಳಕೆಯಿಡೆದು ಹಾಳಾಗಿವೆ. ಇದು ರೈತರನ್ನು ಅಕ್ಷರಶಃ ಕಂಗಾಲಾಗಿಸಿದೆ. ಸುಮಾರು ಎರಡು ಲಕ್ಷ ರೂ. ಅಧಿಕ ಮೌಲ್ಯದ ಮೆಕ್ಕೆಜೋಳದ ಫಸಲು ಹಾಳಾಗಿದ್ದು, ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದನ್ನೂ ಓದಿ: ನ್ಯಾಯಯುತವಾಗಿ ಚನ್ನಪಟ್ಟಣ ಟಿಕೆಟ್‌ ನಮಗೇ ಬರಬೇಕು: ಹೆಚ್‌ಡಿಕೆ ಪಟ್ಟು

  • ಹಾವೇರಿಯಲ್ಲಿ ಮಳೆಗೆ 4 ಎಕರೆ ಶೇಂಗಾ ಬೆಳೆ ನಾಶ – ಲಕ್ಷಾಂತರ ರೂ. ನಷ್ಟ

    ಹಾವೇರಿಯಲ್ಲಿ ಮಳೆಗೆ 4 ಎಕರೆ ಶೇಂಗಾ ಬೆಳೆ ನಾಶ – ಲಕ್ಷಾಂತರ ರೂ. ನಷ್ಟ

    ಹಾವೇರಿ: ಕಳೆದ ಮೂರು ದಿನಗಳಿಂದ ಧಾರಕಾರ ಮಳೆಯಾಗುತ್ತಿದ್ದು, ಹಾವೇರಿ (Haveri) ಜಿಲ್ಲೆಯ ಕೋಳೂರು (Koluru) ಗ್ರಾಮದಲ್ಲಿ ಶೇಂಗಾ ಬೆಳೆ ಹಾನಿಯಾಗಿದೆ. ಮಳೆಯ ಅವಾಂತರಕ್ಕೆ ಅನ್ನದಾತರು ಕಂಗಾಲಾಗಿದ್ದಾರೆ.

    ಭಾರೀ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಕೋಳೂರು ಗ್ರಾಮದಲ್ಲಿ ಅಪಾರ ಪ್ರಮಾಣದ ಶೇಂಗಾ ಬೆಳೆ ಹಾನಿಯಾಗಿದೆ. ಗದೀಗಯ್ಯ ಹಿರೇಮಠ ಎಂಬುವವರು 4 ಎಕರೆ ಜಮೀನಲ್ಲಿದ್ದ ಶೇಂಗಾ ಸಂಪೂರ್ಣ ಒದ್ದೆಯಾಗಿ ಕೊಳೆತು ಹೋಗಿದೆ. ಕಟಾವಿಗೆ ಬಂದ ಫಸಲು ನೀರಿನಲ್ಲಿ ಕೊಳೆತು ಜಾನುವಾರಿಗೆ ಮೇವು ಇಲ್ಲದಂತಾಗುತ್ತಿದೆ. ಲಕ್ಷಾಂತರ ರೂ. ಹಣ ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: MUDA Scam | ಮೊದಲ ಹಂತದ ತನಿಖೆ ಮುಕ್ತಾಯ – 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆ ಸೀಜ್‌

    ಹಾವೇರಿ ಜಿಲ್ಲೆಯ ಎಲ್ಲಾ ಶೇಂಗಾ ಬೆಳೆಗಾರರು ಮಳೆಯಿಂದ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಬಂದಿದೆ. ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಜಿಲ್ಲೆಯ ಅನ್ನದಾತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

  • ಆನೆಗಳ ಹಿಂಡು ಪ್ರತ್ಯಕ್ಷ -ಬೆಳೆ ನಾಶ

    ಆನೆಗಳ ಹಿಂಡು ಪ್ರತ್ಯಕ್ಷ -ಬೆಳೆ ನಾಶ

    ಮಂಡ್ಯ: ಬೆಳ್ಳಂಬೆಳಗ್ಗೆ ಆನೆಗಳ ಹಿಂಡು ಪ್ರತ್ಯಕ್ಷವಾಗಿರುವುದನ್ನು ಕಂಡು ಗ್ರಾಮಸ್ಥರು ಆತಂಕಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿ ಅನೇಕ ದಾಂಧಲೆಯನ್ನು ನಡೆಸಿವೆ. ಇದನ್ನು ಕಂಡು ರೈತರು ಭಯಗೊಂಡಿದ್ದಾರೆ.

    ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ಆನೆ ಹಿಂಡು ನಾಶ ಮಾಡಿದೆ. ಆನೆ ಹಿಂಡನ್ನು ಓಡಿಸಲು ರೈತರು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೂ ತುಂಬಾ ಸಮಯದವರೆಗೆ ಆನೆಗಳ ಹಿಂಡು ರೈತರು ಬೆಳೆದ ಬೆಳೆಗಳ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

    ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆ ದಾಳಿಯಿಂದ ಕಷ್ಟಪಟ್ಟು ಬೆಳೆದ ಬೆಳೆಗಳಲ್ಲಾ ನಾಶವಾಗಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

  • ಕಾಫಿನಾಡಿನಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

    ಕಾಫಿನಾಡಿನಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ನಾಡಿನಲ್ಲಿ ಕೆರೆ ಕುಂಟೆಗಳು ತುಂಬಿ, ಜನಜೀವನ ಅಸ್ತವ್ಯಸ್ತವಾಗಿದೆ.

    ಬೆಳಗಿನ ಜಾವ ಮೂರು ಗಂಟೆಯಿಂದ ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ ಜೋರಾಗಿತ್ತು. ಇದರಿಂದಾಗಿ ಶಿವನಿ ಕೆರೆಯಿಂದ ಹೊರ ಹರಿಯುತ್ತಿರುವ ಭಾರೀ ನೀರಿನಿಂದಾಗಿ ಕೆರೆ ಏರಿ ಮೇಲಿನ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಅಷ್ಟೆ ಅಲ್ಲದೆ ಕೆರೆ ಸಮೀಪದ ತೋಟ, ಜಮೀನಿಗೆ ನೀರು ನುಗ್ಗಿ ಹಾನಿಗೊಳಗಾಗಿದೆ.

    ಅಜ್ಜಂಪುರ ತಾಲೂಕಿನ ಶಿವನಿ, ತಡಗ, ದಂದೂರು ಸುತ್ತಮುತ್ತ ಸುರಿದ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೆರೆಗಳಿಂದ ಬಂದ ನೀರು ರಾಗಿ ಹೊಲಕ್ಕೆ ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

    ವರುಣನ ಆರ್ಭಟದಿಂದಾಗಿ ಕಟಾವು ಮಾಡಿದ ರಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ನಾಶವಾಗಿದೆ. ಮಳೆಯ ಮುನ್ಸೂಚನೆ ಇಲ್ಲದೆ ರೈತರು ಕಣ ಮಾಡಿದ್ದರು. ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರೈತರು ಹೈರಾಣರಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?

    ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿಯ ಭಾರೀ ಮಳೆಯಿಂದಾಗಿ ಆಹುತಿ ಹಳ್ಳ ಭರ್ತಿಯಾಗಿ ರಸ್ತೆಯಲ್ಲಿ ನೀರು ಹರಿದಿದೆ. ಆಹುತಿ ಹಳ್ಳದ ನೀರಿನಿಂದ 15 ಹಳ್ಳಿ ಸಂಪರ್ಕ ಕಡಿತವಾಗಿದೆ. ಅಷ್ಟೆ ಅಲ್ಲದೆ ಕಡೂರು- ಹೊಸದುರ್ಗ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪರ್ಯಾಯ ಬೀರೂರು ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತ್ತೆ ಕೇರಳದ ಐವರು ವಿದ್ಯಾರ್ಥಿಗಳಿಗೆ ಕೊರೊನಾ

  • ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

    ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

    ಹಾಸನ: ಮಲೆನಾಡು ಭಾಗದಲ್ಲಿ ಒಂಟಿ ಸಲಗದ ಉಪಟಳ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ಮನೆ ಮುಂದೆ ಬಂದು ನಿಂತ ಒಂಟಿ ಸಲಗ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಇಂದು ಬೆಳಗ್ಗೆ ಗ್ರಾಮದೊಳಗೆ ಕಾಡಾನೆ ಬಂದು ಮನೆಯೊಂದರ ಬಾಗಿಲ ಮುಂದೆಯೇ ನಿಂತಿದೆ. ಕಾಡಾನೆ ಕಂಡು ಮನೆಯವರು ಮತ್ತು ಗ್ರಾಮಸ್ಥರು ಆತಂಕಕ್ಕೀಡಾಗಿ ಮನೆಯೊಳಗೆ ಕೆಲ ಕಾಲ ಉಳಿದಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ

    ಈ ರೀತಿಯಾಗುತ್ತಿರುವುದು ಮೊದಲಲ್ಲ. ಕಳೆದ ಒಂದು ವಾರದಿಂದ ಈ ಒಂಟಿ ಸಲಗ ಜನನಿಬಿಡ ಪ್ರದೇಶದಲ್ಲಿಯೇ ಸಂಚರಿಸುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅದು ಅಲ್ಲದೇ ಈ ಭಾಗದಲ್ಲಿ ಪ್ರತಿದಿನ ಒಂದಿಲ್ಲ ಒಂದು ರೀತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ. ಕೆಲವೊಮ್ಮೆ 20ಕ್ಕೂ ಹೆಚ್ಚು ಆನೆಗಳು ಜಮೀನಿಗೆ ದಾಳಿ ಮಾಡಿ ಕಾಫಿ, ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆ ನಾಶ ಮಾಡುತ್ತಿವೆ.

    ಆನೆ ದಾಳಿಯಿಂದ ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುತ್ತಿಲ್ಲ. ಮತ್ತೊಂದೆಡೆ ಜೀವ ಭಯದಲ್ಲೇ ದಿನದೂಡಬೇಕಾಗಿದೆ. ಅಧಿಕಾರಿಗಳಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.