ಕಳೆದ ವಾರ ಸ್ನೇಹಿತ ದಯಾನಂದ ಗುಂಡ್ಲೂರನಿಂದ 2 ಸಾವಿರ ಹಣ ಸಾಲವನ್ನಾಗಿ ಮಂಜುನಾಥ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಇದೇ ಹಣದ ವಿಚಾರಕ್ಕೆ ಮಂಜುನಾಥ ಹಾಗೂ ದಯಾನಂದ ಮಧ್ಯೆ ಜಗಳ ಆಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥನನ್ನು ದಯಾನಂದ ಕೊಲೆ ಮಾಡಿದ್ದಾನೆ.
ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿನ ಜಾವ ಕೊಡ್ಲಿಯಿಂದ ಹೊಡೆದು ಮಂಜುನಾಥನ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಉಸಿರು ಚಲ್ಲಿದ್ದಾನೆ. ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿದು ಪೊಲೀಸರಿಗೆ ಸ್ವಯಂ ಪ್ರೇರಿತವಾಗಿ ಹೋಗಿ ದಯಾನಂದ ಶರಣಾಗಿದ್ದಾನೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಭಾರತೀಯ ಮೂಲದ 20ರ ಯುವತಿ ಮೇಲೆ ಅತ್ಯಾಚಾರ
ಬೆಳಗಾವಿ: ತನ್ನ ವಿವಾಹಿತ ಪ್ರೇಯಸಿಗೆ (Lover) 9 ಬಾರಿ ಚಾಕುವಿನಿಂದ ಇರಿದು ಕೊಂದ ಬಳಿಕ ಪಾಗಲ್ ಪ್ರೇಮಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಪಾಗಲ್ ಪ್ರೇಮಿ ಆನಂದ ಮದ್ವೆ ಬಳಿಕವೂ ವಿವಾಹಿತೆ ರೇಷ್ಮಾ ಜೊತೆಗೆ ಅನೈತಿಕ ಸಂಬಂದ ಹೊಂದಿದ್ದ. ನನ್ನ ಹೆಂಡ್ತಿಯಂತೆ ನೀನೂ ನನ್ನ ಮಾತು ಕೇಳಬೇಕು ಅಂತ ಆಕೆಯನ್ನ ಪೀಡಿಸುತ್ತಲೇ ಇದ್ದ. ಇದೀಗ ಪ್ರೇಯಸಿಯನ್ನ 9 ಬಾರಿ ಇರಿದು ಕೊಂದಿದ್ದಾನೆ. ಆಕೆ ಸಾವನಪ್ಪುತ್ತಿದ್ದಂತೆ ಭಯಗೊಂಡು ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಸಾವನ್ನಪ್ಪಿದ್ದಾನೆ.
ಆಂಟಿ-ಅಂಕಲ್ ಲವ್ವಿಡವ್ವಿ ಸ್ವಾರಸ್ಯ ಏನು?
ಆನಂದ ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಸಲುಗೆ ಹೊಂದಿದ್ದ. ಒಂದೇ ಊರಿನ, ಒಂದೇ ಕಾಲೊನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹ ಇತ್ತು. ಮದುವೆ ಬಳಿಕ ಸಲುಹೆ ಹೆಚ್ಚಾಗಿ ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕಳೆದ ತಿಂಗಳಷ್ಟೇ ರೇಷ್ಮಾ ಪತಿ ಕೈಗೆ ಇಬ್ಬರೂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ನಂದಗಡ ಪೊಲೀಸರಿಗೆ ಮಾಹಿತಿ ರೇಷ್ಮಾ ಪತಿ ಶೀವು ತಿರವಿರ ಮಾಹಿತಿ ನೀಡಿದ್ದ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್ ಚೇಂಬರ್, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?
ಬಳಿಕ ಅದೇ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಅಪ್ರಾಪ್ತೆಯ ಮೇಲೆ ಮತ್ತೊಮ್ಮೆ ರೇಪ್ ಮಾಡಿದ್ದರು. ಈ ಸಂದರ್ಭದಲ್ಲೂ ಸಹ ದುರುಳರು ವೀಡಿಯೊ ಮಾಡಿಕೊಂಡಿದ್ದರು. ಅತ್ಯಾಚಾರದ ವೀಡಿಯೊ ಇಟ್ಟುಕೊಂಡು, ಈಗ ಮತ್ತೆ ಅಪ್ರಾಪ್ತ ಬಾಲಕಿಯನ್ನು ಬೆದರಿಸುತ್ತಿರುವ ಹಿನ್ನೆಲೆ ಆರೋಪಿಗಳ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದು ಪಂಜಾಬ್-ಮುಂಬೈ ನಡ್ವೆ ಕ್ವಾಲಿಫೈಯರ್-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!
ವಾರದ ಹಿಂದೆಯಷ್ಟೇ ರೆಸಾರ್ಟ್ ಒಂದರಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಬಾಲಾಪರಾಧಿ ಸೇರಿ ಐದು ಜನರ ಬಂಧನವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಹೆಂಡತಿ ಕಾಟಕ್ಕೆ ಬೇಸತ್ತು ಡೆತ್ ನೋಟ್ (Death Note) ಬರೆದಿಟ್ಟು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ನಗರದ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.
ಸುನೀಲ್ ಮೂಲಿಮನಿ (33) ಆತ್ಮಹತ್ಯೆ (Suicide) ಮಾಡಿಕೊಂಡ ಪತಿ. ತನ್ನದೇ ಕಂಪ್ಯೂಟರ್ ಶಾಪ್‌ನಲ್ಲಿ ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 4 ವರ್ಷಗಳ ಹಿಂದೆ ಪೂಜಾ ಎಂಬಾಕೆಯನ್ನ ಸುನೀಲ್ ಮದುವೆಯಾಗಿದ್ದರು. ಈಗ ದಂಪತಿಗೆ ಮೂರು ವರ್ಷದ ಮಗು ಇದೆ. ಇದನ್ನೂ ಓದಿ: ಲಾರಿ, ಬೈಕ್ ನಡುವೆ ಭೀಕರ ಅಪಘಾತ – ಹಾರಿ ಹೋದ ಬೈಕ್ ಸವಾರನ ರುಂಡ
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಸದ್ದಿಲ್ಲದೇ ಮಕ್ಕಳ ಮಾರಾಟ ಜಾಲ (Child Sale Gang) ಆಕ್ಟೀವ್ ಆಗಿದೆ. ನೇರವಾಗಿ ಫೀಲ್ಡಿಗಿಳಿಯದ ಈ ಗ್ಯಾಂಗ್ ಗಂಡ ಇಲ್ಲದ ಮಹಿಳೆಯರನ್ನೇ ಟಾರ್ಗೆಟ್ ಮಾಡ್ತಿತ್ತು. ಅವರಿಗೆ 2ನೇ ಮದುವೆ ಮಾಡಿಸಿ ಬಳಿಕ ಅವರ ಮಕ್ಕಳನ್ನ ಗಯಾಬ್ ಮಾಡುತ್ತಿತ್ತು ಈ ಗ್ಯಾಂಗ್.
ಕಳೆದ 1 ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಷ್ಟು ಮಕ್ಕಳ ಮಾರಾಟ ಆಗಿವೆ? ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿ ಮಕ್ಕಳ ಮಾರಾಟ ಗ್ಯಾಂಗ್ ಯಾವ ರೀತಿ ಕೆಲಸ ಮಾಡ್ತಿದೆ. ಮೂರು ಪ್ರಕರಣದಲ್ಲಿ ಖೆಡ್ಡಾಗೆ ಬಿದ್ದ ಖದೀಮರು ಎಷ್ಟು? ಮಕ್ಕಳ ಮಾರಾಟ ಜಾಲದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ…
ಹೌದು. ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಮತ್ತೆ ಆಕ್ಟೀವ್ ಆಗಿದೆ. ಸದ್ದಿಲ್ಲದೇ ಲಕ್ಷ ಲಕ್ಷ ಹಣಕ್ಕೆ ಮಕ್ಕಳನ್ನ ಮಾರಿ ದುಡ್ಡು ಮಾಡ್ತಿರುವ ಕತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಖೆಡ್ಡಾಗೆ ಬಿದ್ದಿದೆ. ಕಳೆದ 1 ತಿಂಗಳಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ವರೆಗೂ ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿ 13 ಜನ ಆರೋಪಿಗಳನ್ನ ವಿವಿಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಷ್ಟಕ್ಕೂ ಈ ಗ್ಯಾಂಗ್ ಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಅಂತಾ ಕೇಳಿದ್ರೇ ನೀವು ಕೂಡ ಶಾಕ್ ಆಗ್ತಿರಿ. ಮದುವೆಯಾಗಿ ಮಕ್ಕಳಿದ್ದು ಗಂಡ ಇಲ್ಲದಿರುವ ಮಹಿಳೆಯರನ್ನ ಟಾರ್ಗೆಟ್ ಮಾಡ್ತಾರೆ. ಜೀವನ ನಡೆಸಲು ಹರಸಾಹಸ ಪಡುವ ಮಹಿಳೆಯರಿಗೆ ಮತ್ತೊಂದು ಮದುವೆ ಆಸೆ ಹಚ್ಚುತ್ತಾರೆ. ಇದಾದ ಬಳಿಕ 2ನೇ ಮದುವೆ ಕೂಡ ಮಾಡಿಸುತ್ತಾರೆ. ಮದುವೆಯಾದ ಬಳಿಕ ಮಗುವನ್ನ ನಾವು ನೋಡಿಕೊಳ್ತೇವಿ ಗಂಡ-ಹೆಂಡತಿ ಸ್ವಲ್ಪ ದಿನ ಅರಾಮಾಗಿ ಇರೀ ಅಂತಾ ಆ ಮಗುವನ್ನ ತಮ್ಮೊಟ್ಟಿಗೆ ಕರೆದುಕೊಂಡು ಹೋಗ್ತಾರೆ. ಹೀಗೆ ಹೋದವರು ಮಹಾರಾಷ್ಟ್ರದಲ್ಲಿರುವ ತಮ್ಮ ಟೀಮ್ ಜೊತೆಗೆ ಸೇರಿಕೊಂಡು ಅಲ್ಲಿ ಮೂರು, ನಾಲ್ಕು ಲಕ್ಷಕ್ಕೆ ಮಗುವನ್ನ ಮಾರಾಟ ಮಾಡ್ತಾರೆ. ಹೀಗೆ ಮಾರಿದ ಬಳಿಕ ಸ್ವಂತ ತಾಯಿ ಸಂಪರ್ಕಕ್ಕೆ ಇವರು ಸಿಗುವುದಿಲ್ಲ. ಈ ರೀತಿ ಮಕ್ಕಳನ್ನ ಮಾರಾಟ ಮಾಡಿ ಬಿಂದಾಸ್ ಜೀವನ ಮಾಡ್ತಿದ್ದ ಗ್ಯಾಂಗ್ ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿವೆ.
ಅಷ್ಟಕ್ಕೂ ಮೂರು ಕೇಸ್‌ಗಳಲ್ಲಿ ಹೇಗೆಲ್ಲಾ ಮಕ್ಕಳ ಮಾರಾಟ ಆಗಿತ್ತು ಅನ್ನೋದನ್ನ ನೋಡೊದಾದ್ರೇ.. ಈ ಎರಡನೇ ಮದುವೆ ಮಾಡಿಸಿ ಹೇಗೆ ಮಕ್ಕಳನ್ನ ಮಾರಾಟ ಮಾಡಿದ್ರೂ ಅನ್ನೋದನ್ನ ಮೊದಲು ಹೇಳ್ತೇವೆ ನೋಡಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ್ ಅನ್ನೋ ಈ ಗ್ರಾಮದಲ್ಲೇ ಇಬ್ಬರು ಮಹಿಳೆಯರಿಗೆ ಬೇರೆ ಬೇರೆ ಸಮಯದಲ್ಲಿ ಎರಡನೇ ಮದುವೆ ಮಾಡಿಸಿ ಎರಡು ಮಕ್ಕಳನ್ನ ಮಾರಾಟ ಮಾಡಿದ್ದರು. ಸಂಗೀತಾ ಅನ್ನೋ ಮಹಿಳೆ ಸದಾಶಿವ ಅನ್ನೋನಿಗೆ ಎರಡನೇ ಮದುವೆಯಾಗಿದ್ದ, ಮದುವೆ ಮಾಡಿಸಿದ್ದ ಲಕ್ಷ್ಮೀ ಗೋಲಬಾಂವಿ ಹೊಸದಾಗಿ ಮದುವೆ ಮಾಡಿಕೊಂಡಿದೀರಿ ಮಗುವನ್ನ ತಾನೇ ಸಾಕುವುದಾಗಿ ಹೇಳಿ ಸಂಗೀತಾ ಕಡೆಯಿಂದ ಮಗು ತೆಗೆದುಕೊಳ್ತಾಳೆ. ಇದಾದ ಬಳಿಕ ಸಂಗೀತಾಳನ್ನ ಮದುವೆಯಾಗಿದ್ದ ಸದಾಶಿವ ಮಗದುಮ್ ಹಾಗೂ ಸಂಗೀತಾ ಸಾವಂತ್, ಅನುಸೂಯಾ ದೊಡ್ಡಮನಿ ಮೂರು ಜನ ಸೇರಿ ಬೆಳಗಾವಿ ನಗರದ ದಿಲ್ ಶಾದ್ ಎಂಬಾಕೆಗೆ 4 ಲಕ್ಷ ಹಣಕ್ಕೆ ಮಗು ಮಾರಿರುತ್ತಾರೆ. ಮೂರು ತಿಂಗಳ ಬಳಿಕ ಸಂಗೀತಾ ಸ್ಪಂದನಾ ಎಂಬ ಎನ್‌ಜಿಒ ಸುಶೀಲಾ ಅವರಿಗೆ ಹೇಳ್ತಾಳೆ. ಸುಶೀಲಾ ಕೂಡಲೇ ಹುಕ್ಕೇರಿ ಠಾಣೆಗೆ ಸಂಗೀತಾಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು ಈ ಕೇಸ್‌ನಲ್ಲಿ 6 ಆರೋಪಿಗಳ ಪೈಕಿ ನಾಲ್ಕು ಜನ ಆರೋಪಿಗಳನ್ನ ಬಂಧಿಸುತ್ತಾರೆ. ಈ ವೇಳೆ ಅರ್ಚನಾ ಎಂಬಾಕೆ ಕೂಡ ಸುಶೀಲಾ ಅವರಿಗೆ ತನ್ನ ಮಗಳು ಕೂಡ ಮಾರಾಟ ಮಾಡಿದ್ದಾರೆ ಅನ್ನೋದನ್ನ ಹೇಳ್ತಾರೆ, ಈ ಕಾರಣಕ್ಕೆ ವಾರದ ಹಿಂದೆ ಮತ್ತೊಂದು ಕೇಸ್ ದಾಖಲಿಸಿದ್ದಾರೆ. ಇಲ್ಲಿ ಕೂಡ ಅರ್ಚನಾ ಅನ್ನೋ ಮಹಿಳೆಗೆ ಎರಡನೇ ಮದುವೆ ಮಾಡಿಸಿ ಬಳಿಕ ತನ್ನ ಮಗುವನ್ನ ನೋಡಿಕೊಳ್ತೇತಿ ಅಂತಾ ಹೇಳಿ ಸಂಗೀತಾ ಗೌಳಿ ತನ್ನೊಟ್ಟಿಗೆ ಮಗುವನ್ನ ತೆಗೆದುಕೊಂಡು ಹೋಗಿ ಮಹಾರಾಷ್ಟ್ರದ ಗಡಹಿಂಗ್ಲಜ್ ನ ಮೋಹನ್ ತಾವಡೆ, ಸಂಗೀತಾ ತಾವಡೆ ಮೂಲಕ ಬೇರೆ ಅವರಿಗೆ ಮೂರು ಲಕ್ಷಕ್ಕೆ ಮಗು ಮಾರಾಟ ಮಾಡಿರುತ್ತಾರೆ.
ಕೇಸ್ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ಈ ಕೇಸ್ ನಲ್ಲಿ ಕೂಡ ಮೂರು ಜನ ಆರೋಪಿಗಳನ್ನ ಬಂಧಿಸಿದ್ದು ಇಬ್ಬರು ತಾಯಂದಿರಿಗೂ ಎರಡು ಮಕ್ಕಳನ್ನ ವಾಪಾಸ್ ಮಡಿಲು ಸೇರಿಸಿದ್ದಾರೆ. ಇತ್ತ ಜ.8ರಂದು ಬೆಳಗಾವಿ ನಗರದಲ್ಲಿ ಮತ್ತೊಂದು ಹೆಣ್ಣು ಮಗು ಮಾರಾಟ ಆಗಿದ್ದನ್ನ ರಕ್ಷಣೆ ಮಾಡಿ ತಾಯಿ ಮಡಿಲು ಸೇರಿಸಿದ್ದ ಪ್ರಕರಣ ಕೂಡ ನಡೆದಿತ್ತು. ನಾಲ್ಕು ಲಕ್ಷ ರೂಪಾಯಿಗೆ ಗೋವಾ ಮೂಲದ ಮಹಿಳೆಗೆ ಮಗು ಮಾರಾಟ ಮಾಡಿದ್ದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಈ ಕೇಸ್ ನಲ್ಲಿ ಮಧ್ಯವರ್ತಿಗಳು ಸೇರಿ ಆರು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿ ಬಳಿಕ ಮಗುವನ್ನ ಹೆತ್ತವರಿಗೆ ಮರಳಿಸಿದ್ದರು.
ಸದ್ಯ 1 ತಿಂಗಳ ಅವಧಿಯಲ್ಲಿ ಮೂರು ಕೇಸ್‌ಗಳಲ್ಲಿ ಮೂರು ಮಕ್ಕಳನ್ನ ರಕ್ಷಣೆ ಮಾಡಿ ಆಯಾ ತಾಯಂದಿರಿಗೆ ಪೊಲೀಸರು ಮರಳಿಸಿದ್ದಾರೆ. ಆದ್ರೆ ಇಲ್ಲಿ ಹಣದ ಆಸೆಗೆ ಇಲ್ಲಾ ಅನಿವಾರ್ಯತೆಗೆ ತಮ್ಮ ಮಕ್ಕಳನ್ನ ಹೆತ್ತವರು ಮಾರಾಟ ಮಾಡ್ತಿದ್ದಾರಾ? ಅಥವಾ ಅವರ ದಿಕ್ಕು ತಪ್ಪಿಸಿ ಗ್ಯಾಂಗ್‌ಗಳು ಮಕ್ಕಳ ಮಾರಾಟ ಮಾಡ್ತಿವೆಯಾ ಅನ್ನೋದು ಕೂಡ ಪೊಲೀಸರು ತನಿಖೆಯಿಂದ ಹೊರ ಬರಬೇಕಿದೆ. ಅದೇನೆ ಇರಲಿ ಈ ರೀತಿ ಬಡ ಹೆಣ್ಣು ಮಕ್ಕಳ ಮುದ್ಧತೆ ದುರ್ಬಳಕೆ ಮಾಡಿಕೊಳ್ತಿರುವ ಖದೀಮರಿಗೆ ತಕ್ಕ ಶಿಕ್ಷೆ ಆಗಲಿ.
– ಮಹಜರಿಗೆ ಅನುಮತಿ ಕೇಳಿದ ಪೊಲೀಸರ ಮೇಲೆ ಸಭಾಪತಿ ಗರಂ
– ನಮ್ಮಲ್ಲಿ ವಿಡಿಯೋ ರೆಕಾರ್ಡ್ ಆಗಿಲ್ಲ, ಫೇಕ್ ಇರಬೇಕು ಎಂದ ಹೊರಟ್ಟಿ
ಬೆಂಗಳೂರು: ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಪೊಲೀಸರ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ ರವಿ (CT Ravi) – ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕೇಸ್ ಮುಗಿದ ಅಧ್ಯಾಯ. ಡಿ.19ರಂದೇ ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆ ಆಗಿದೆ. ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR
ಮಹಜರು ಮಾಡ್ತೀನಿ ಅಂತಾ ಪೊಲೀಸರು ಕೇಳಿದ್ರು, ಅದಕ್ಕೆ ನಾವು ಅನುಮತಿ ಕೊಟ್ಟಿಲ್ಲ, ಬಾಗಿಲು ಹಾಕಿದ್ದೇವೆ. ಸದನದಲ್ಲಿ ಮಹಜರು ಮಾಡಲು ಬರಲ್ಲ ಅಂತಾ ಪೊಲೀಸರಿಗೆ ತಿಳಿಸಿದ್ದೇನೆ. ಅವರು ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ರೆ, ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡಲ್ಲ. ಆದ್ರೆ ಆ ದಿನ ರಾತ್ರಿ 1 ಗಂಟೆ ತನಕವೂ ಸಿ.ಟಿ ರವಿ ಜೊತೆ ಸಂಪರ್ಕದಲ್ಲಿ ಇದ್ದೆ. ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿ ಎಚ್ಚರಿಕೆ ಕೊಟ್ಟಿದ್ದೆ. ಏನಾದರೂ ಆದ್ರೆ ಸುಮ್ಮನೆ ಬಿಡಲ್ಲ ಅಂತ ಹೇಳಿದ್ದೆ. ಬೆಳಗ್ಗೆ ತನಕವೂ ನಾನು ಟ್ರ‍್ಯಾಕ್ ಮಾಡಿದ್ದೆ, ಬೆಳಗ್ಗೆ 5 ಗಂಟೆಗೆ ಎಸ್ಪಿಗೂ ಕೂಡ ಮಾತಾಡಿದ್ದೆ. ಅಲ್ಲದೇ ಈಗಾಗಲೇ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದ್ದಾರೆ.
ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರಿಷತ್‌ನಲ್ಲಿ ನಿಂದನೆ ಆರೋಪ ಪ್ರಕರಣದಲ್ಲಿ ಮಹಿಳಾ ಆಯೋಗ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಿಳಾ ಆಯೋಗಕ್ಕೆ ಸಭಾಪತಿಗೆ ಕೇಳುವ ಅಧಿಕಾರ ಇಲ್ಲ, ಅವರು ಪತ್ರ ಬರೆಯಲಿ, ಆದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾಗಿಯೂ ಇಲ್ಲ. ಬೇಕಿದ್ರೆ, ಬೇರೆಯವರಿಗೆ ನೋಟೀಸ್ ಕೊಡಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್ ಕೃಷ್ಣನ್ ನೇಮಕ
ಇನ್ನೂ ಸಿ.ಟಿ ರವಿ ಪ್ರಾಸ್ಟಿ** ಹೇಳಿಕೆ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿರುವ ಕುರಿತು ಮಾತನಾಡಿ, ನಮ್ಮಲ್ಲಿ ವಿಡಿಯೋ ರೆಕಾರ್ಡ್ ಆಗಿಲ್ಲ. ಅದೆಲ್ಲ ಫೇಕ್ ವಿಡಿಯೋ ಇರಬೇಕು, ಇದ್ದರೆ ದೂರು ಕೊಡಲಿ ಎಫ್‌ಎಸ್‌ಎಲ್‌ಗೆ ಕೊಡ್ತೀವಿ, ಆ ಬಳಿಕ ಏನ್ ಮಾಡಬೇಕು ತೀರ್ಮಾನ ಮಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು
ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ (CT Ravi) ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹೌದು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಸೌಧದೊಳಕ್ಕೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಅಲ್ಲದೇ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಇದೀಗ ಸಿ.ಟಿ ರವಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಖಾನಾಪುರ ಪೊಲೀಸ್ ಠಾಣೆಗೆ ಸಿ.ಟಿ ರವಿ ಲಿಖಿತ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಗೆ ವರ್ಗಾಯಿಸಲಾಗಿತ್ತು. ಭಾನುವಾರ ಸಿ.ಟಿ ರವಿ ಅವರು ನೀಡಿದ್ದ ಲಿಖಿತ ದೂರಿನ ಪ್ರತಿ ಪೋಸ್ಟ್ ಮೂಲಕ ಪೊಲೀಸರ ಕೈ ಸೇರಿದ ಬೆನ್ನಲ್ಲೇ ಬೆಳಗಾವಿ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಾಗಲಕೋಟೆ: ಮಾಧ್ಯಮದವರು ಇಲ್ಲದೇ ಇದ್ದಿದ್ರೆ, ಸಿ.ಟಿ ರವಿ (CT Ravi) ಅವರನ್ನ ಫೇಕ್ ಎನ್‌ಕೌಂಟರ್ ಮಾಡುವಂತಹ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನ್ನಿಸುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಬಾಂಬ್ ಸಿಡಿಸಿದ್ದಾರೆ.
ಸಿ.ಟಿ ರವಿ ಅವರನ್ನು ಬಂಧಿಸಿದ್ದ ವಿಚಾರ ಕುರಿತು ಬಾಗಲಕೋಟೆಯಲ್ಲಿ (Bagalkote) ಮಾತನಾಡಿದ ಅವರು, ಅವಕಾಶ ಸಿಕ್ಕಿದ್ರೆ ಸಿ.ಟಿ ರವಿ ಅವರನ್ನು ಮುಗಿಸಬೇಕು ಅಂತಾ ಯೋಚನೆ ಮಾಡಿದ್ದರು ಅನ್ನಿಸುತ್ತೆ. ಆದ್ರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ. ಏಕೆಂದರೆ ಆಗ ನಮ್ಮ ಮತ್ತೊಬ್ಬರು ಎಂಎಲ್‌ಸಿ ಕೇಶವ್ ಪ್ರಸಾದ್ ಜೊತೆಯಲ್ಲಿದ್ದರು. ಮಾಧ್ಯಮದವರಿಂದ ನಮಗೆ ಲೈವ್ ಲೊಕೇಶನ್ ಸಿಗ್ತಾ ಇತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿ ಸಾವು – ಮುಖ್ಯಶಿಕ್ಷಕ ಸೇರಿ 6 ಶಿಕ್ಷಕರು ಅಮಾನತು
ನಿಜವಾಗ್ಲೂ ನಾವು ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಷ್ಟು ರಾತ್ರಿಯಲ್ಲೂ ಪೊಲೀಸರ ಬೆನ್ನತ್ತಿ, ವಿಡಿಯೋ ಮಾಡಿ, ಲೈವ್ ಲೊಕೇಶನ್ ಹಾಕ್ತಾ ಇದ್ರು. ಹಾಗಾಗಿ ಸಿ.ಟಿ ರವಿ ಅವರನ್ನ ಮುಗಿಸಲು ಅವಕಾಶ ಸಿಕ್ಕಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ, ಹೀಗಾಗಿ ನಾವಿದನ್ನ ಇಲ್ಲಿಗೆ ಬಿಡಲ್ಲ. ಈಗಾಗಲೇ ನಾನು, ಸಿ.ಟಿ ರವಿ ಅವರಿಗೆ ಸೂಕ್ತ ಕಾನೂನು ಸಲಹೆ ಪಡೆಯುವಂತೆ ಹೇಳಿದ್ದೇನೆ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲು ನಾವು ಕೋರ್ಟ್‌ಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಪ್ ಕಾರ್ನ್ ಮೇಲೆ 3 ರೀತಿಯ ಜಿಎಸ್‌ಟಿ – ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ; ಯಾವುದು ದುಬಾರಿ?
ಇನ್ನೂ ಸಿ.ಟಿ ರವಿ ಅವಹೇಳನಕಾರಿ ಶದ್ಧ ಬಳಸಿದಕ್ಕೆ ಎನ್ಕೌಂಟರ್ ಮಾಡ್ತಿದ್ರಾ? ಎಂಬ ಮಾಧ್ಯಮದವ್ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದೊಂದೇ ಕಾರಣ ಅಂತ ನಾನು ಹೇಳೋದಿಲ್ಲ. ಈ ರೀತಿ ಒಬ್ಬರನ್ನ ಎನ್‌ಕೌಂಟರ್ ಮಾಡಿಬಿಟ್ರೆ, ಬಿಜೆಪಿಯವ್ರು ಮುಂದೆ ಯಾವುದೇ ಚಟುವಟಿಕೆ ಮಾಡಲ್ಲ, ಹೆದರಿಕೊಂಡು ಮೂಲೆ ಸೇರುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು/ಬೆಳಗಾವಿ: ಸಿ.ಟಿ ರವಿ (CT Ravi) ಅವರ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಸಿ.ಟಿ ರವಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಬಿಜೆಪಿಯ ಕೊನೆಗಾಲ ಆರಂಭವಾಗಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಎಚ್ಚರಿಸಿದ್ದಾರೆ.
ಅಮಿತ್ ಶಾ ಹೇಳಿಕೆಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸದನದಲ್ಲಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ನಾಯಕ ಎಂದು ಕೂಗಿದ್ರು. ಪರಿಷತ್‌ನಲ್ಲಿದ್ದ ನಮ್ಮ ಸದಸ್ಯರ ಬಳಿ ಮಾಹಿತಿ ಪಡೆದೆ, ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಇದಕ್ಕೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಕಾರು ಅಪಘಾತ ಪ್ರಕರಣ ಪ್ರಸ್ತಾಪಿಸಿ ಕೊಲೆಗಡುಕ ಎಂದಿದ್ದಾರೆ. ಕೊಲೆಗಡುಕ ಎಂದಿದ್ದಕ್ಕೆ ಆ ರೀತಿ ನಿಂದಿಸಿದ್ದು ಸರಿನಾ..? ಸಂಸ್ಕೃತಿ ಹೊಂದಿರುವ ಪಕ್ಷ, ನಾಲಗೆಯಲ್ಲಿ ಆಚಾರ, ವಿಚಾರ ಎಲ್ಲಿದೆ? ಪೊಲೀಸರು ಕಾನೂನು ಕ್ರಮ ಏನಾಗಬೇಕೋ ಅದಾಗುತ್ತೆ ಎಂದು ಹೇಳಿದ್ದಾರೆ.
ಇನ್ನೂ ತನ್ನ ವಿರುದ್ಧ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಸಿ.ಟಿ ರವಿ ಆರೋಪಕ್ಕೆ ಪ್ರತಿಕ್ರಿಯಿಸಿ, ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಸಿಟಿ ರವಿ ಕೊಲೆಗೆ ಯತ್ನ ಆರೋಪ ಮಾಡ್ತಿದ್ದಾರೆ ಅಂತ ತಿಳಿಸಿದ್ದಾರೆ. ಇದೇ ವೇಳೆ ಸಭಾಪತಿಗಳು ಪೊಲೀಸರ ನಡೆಯ ಬಗ್ಗೆಯೂ ಡಿಸಿಎಂ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar( ಅವರಿಗೆ ನಿಂದಿಸಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಘಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಸಿ.ಟಿ ರವಿ ಬಂಧನ (CT Ravi Arrest) ಖಂಡಿಸಿ ಡಿ. 20ರಂದು ಚಿಕ್ಕಮಗಳೂರು ನಗರ ಬಂದ್‌ಗೆ (Chikkamagaluru Bandh) ನಗರ ಬಿಜೆಪಿ ಕರೆ ಕೊಟ್ಟಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಗಸ್ತು ತಿರುಗುತ್ತಿದ್ದಾರೆ. ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ 6 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಧಾರವಾಡ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಯರಗಟ್ಟಿ ಮೂಲಕ ಮತ್ತೆ ಬೆಳಗಾವಿಯತ್ತ ಕರೆತಂದಿದ್ದಾರೆ. ಸಿ.ಟಿ ರವಿಗೆ ಉಪಹಾರ, ಕಾಫಿ, ಟೀ ವ್ಯವಸ್ಥೆ ಮಾಡಿಕೊಟ್ಟ ಪೊಲೀಸರು ರಾತ್ರಿಯಿಡೀ ಜಾಗರಣೆ ಮಾಡಿಸಿದ್ದಾರೆ. ಇಂದು ಬೆಳಗ್ಗೆ ಯರಗಟ್ಟಿ ಬಳಿಯ ಡಾಬಾದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಖಾನಾಪುರ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ:
ಇನ್ನೂ ಸಿ.ಟಿ ರವಿ ಅವರನ್ನ ಬೆಂಗಳೂರಿಗೆ ಕರೆತರುವ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಸಿ.ಟಿ ರವಿ ಅವರನ್ನ ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಸಿ.ಟಿ ರವಿ ಚೀರಾಡಿದ್ದಾರೆ. ರಸ್ತೆ ಮಧ್ಯೆ ಧರಣಿ ಕುಳಿತು, ನನ್ನನ್ನ ಕೊಲೆ ಮಾಡಲು ಪ್ರಯತ್ನ ಮಾಡ್ತಿದ್ದೀರಿ, ನೀವು ಅಧಿಕಾರಿಗಳಂತೆ ನಡೆದುಕೊಳ್ತಿದ್ದೀರಾ? ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ನೂಕಾಟದಿಂದ ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ – ರಾಹುಲ್ ಗಾಂಧಿ ವಿರುದ್ಧ FIR
ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ:
ಸಿ.ಟಿ ರವಿ ಬಂಧನ ಖಂಡಿಸಿ ತಡರಾತ್ರಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಆರ್. ಅಶೋಕ್, ರಾಜ್ಯವನ್ನು ಕಾಂಗ್ರೆಸ್‌ನವರು ಮಿನಿ ಪಾಕಿಸ್ತಾನ ಮಾಡಿದ್ದಾರೆ, ಸಿಟಿ ರವಿ ಜನಪ್ರತಿನಿಧಿಯೆಂಬುದನ್ನು ಮರೆತು ಹಲ್ಲೆ ಮಾಡಿದ್ದಾರೆ. ಸಿಟಿ ರವಿ ಹಣೆಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ, ಪೊಲೀಸರಿಗೆ ನಮ್ಮ ಸರ್ಕಾರ ಬಂದ ಬಳಿಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಕ್ತ ಬರುವಂತೆ ಸಿ.ಟಿ ರವಿ ಮೇಲೆ ಹಲ್ಲೆ – ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆಂದು ಚೀರಾಡಿದ ಎಂಎಲ್‌ಸಿ