Tag: ಬೆಲ್ಲಿ ಡ್ಯಾನ್ಸ್

  • ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್!

    ವೀಡಿಯೋ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಬೆಲ್ಲಿ ಡ್ಯಾನ್ಸ್!

    ಮುಂಬೈ: ಇತ್ತೀಚೆಗಷ್ಟೇ 39 ಕೋಟಿ ಮೌಲ್ಯದ ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ಖರೀದಿಸಿ ಭಾರೀ ಸುದ್ದಿಯಾಗಿದ್ದ ನಟಿ ಜಾಹ್ನವಿ ಕಪೂರ್ ಇದೀಗ ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಹೌದು. ಈಗಾಗಲೇ ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಜಾಹ್ನವಿ ಇದೀಗ ಬೆಲ್ಲಿ ಡ್ಯಾನ್ಸ್ ಮಾಡಿರುವ ಮೂಲಕ ಸುದ್ದಿಯಾಗಿದ್ದಾರೆ. ನಟಿ ಕರೀನಾ ಕಪೂರ್ ಅಭಿನಯದ ಅಶೋಕ ಸಿನಿಮಾದ ಸನ್.. ಸನನ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಅದರ ವೀಡಿಯೋವನ್ನು ನಟಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಬಿಳಿ ಬಣ್ಣದ ಪೈಜಾಮಾ ಹಾಗೂ ಕ್ರಾಪ್ ಟಾಪ್ ಧರಿಸಿ ಜಾಹ್ನವಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಜಾಹ್ನವಿ ಈ ಡ್ಯಾನ್ಸ್ ಗೆ ಸಾಕಷ್ಟು ಕಾಮೆಂಟ್ ಗಳು ಬರುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ಜಾಹ್ನವಿ ತಾಯಿ ಶ್ರೀದೇವಿ ಅವರು ಅಧ್ಬುತ ನೃತ್ಯಗಾರ್ತಿ ಎಂಬ ವಿಚಾರ ಎಲ್ಲರಿಗೂ ತಿಳೀದಿದೆ. ಇದೀಗ ಮಗಳು ಕೂಡ ತಾಯಿಯ ನೃತ್ಯ ಕೌಶಲ್ಯಗಳನ್ನು ಬಳುವಳಿಯಾಗಿ ಪಡೆದ ರೀತಿ ಜಾಹ್ನವಿ ನೃತ್ಯ ಮಾಡಿ ಸೈ ಎನಿಸಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

  • 20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಸುಶ್ಮಿತಾ ಸೇನ್ ಬೆಲ್ಲಿ ಡ್ಯಾನ್ಸ್: ವಿಡಿಯೋ ನೋಡಿ

    20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಸುಶ್ಮಿತಾ ಸೇನ್ ಬೆಲ್ಲಿ ಡ್ಯಾನ್ಸ್: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಸುಶ್ಮಿತಾ ಸೇನ್ 20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ತನ್ನ ಬೆಲ್ಲಿ ಡ್ಯಾನ್ಸ್ ವಿಡಿಯೋವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    20 ವರ್ಷಗಳ ಹಿಂದೆ ಸುಶ್ಮಿತಾ ದಿಲ್‍ಬರ್ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಈಗ ‘ಸತ್ಯಮೇವ ಜಯತೆ’ ಚಿತ್ರದಲ್ಲಿ ಈ ಹಾಡನ್ನು ರಿಮೀಕ್ಸ್ ಮಾಡಲಾಗಿದ್ದು, ಈ ರಿಮೀಕ್ಸ್ ಹಾಡಿನಲ್ಲಿ ನೋರಾ ಫತೇಹಿ ಮಾದಕತೆಯಿಂದ ತಮ್ಮ ಸೊಂಟವನ್ನು ಬಳುಕಿಸಿದ್ದಾರೆ.

    ದಿಲ್‍ಬರ್ ರಿಮೀಕ್ಸ್ ಹಾಡು ಸುಶ್ಮಿತಾ ಅವರಿಗೆ ಇಷ್ಟವಾಗಿದ್ದು, ಅಂದು ಸಹಜವಾಗಿ ಡ್ಯಾನ್ಸ್ ಮಾಡಿದ ಇವರು ಇಂದು ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ನಿದ್ದೆ ಕೆಡಿಸಿದ್ದಾರೆ.

    ತನ್ನ ಡ್ಯಾನ್ಸ್ ವಿಡಿಯೋದಲ್ಲಿ ಸುಶ್ಮಿತಾ ಬೆಲ್ಲಿ ಡ್ಯಾನ್ಸ್ ಮಾಡುತ್ತ ತಮ್ಮ ಎಬ್ಸ್ ನನ್ನು ಫ್ಲಾಂಟ್ ಮಾಡಿದ್ದಾರೆ. ತನ್ನ ವರ್ಕೌಟ್ ಬಳಿಕ ಸುಶ್ಮಿತಾ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.

    ಸದ್ಯ ಸುಶ್ಮಿತಾ ತನ್ನ ಡ್ಯಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ದಿಲ್‍ಬರ್ ಯಾವತ್ತಿದ್ದರೂ ಒಂದು ಒಳ್ಳೆಯ ಅನುಭವವಾಗಿರುತ್ತದೆ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    1999ರ ಜೂನ್ 11ರಂದು ಬಿಡುಗಡೆಯಾಗಿದ್ದ ‘ಸಿರ್ಫ್ ತುಮ್’ ಚಿತ್ರದಲ್ಲಿ ಈ ಹಾಡಿಗೆ ನಟ ಸಂಜಯ್ ಕಪೂರ್ ಜೊತೆ ಸುಶ್ಮಿತಾ ಸೇನ್ ಹೆಜ್ಜೆ ಹಾಕಿದ್ದರು. ಆ ಕಾಲದಲ್ಲೂ ಕೂಡ ಈ ಹಾಡು ಸಾಕಷ್ಟು ಹಿಟ್ ಆಗಿತ್ತು. ಆದರೆ ಸುಶ್ಮಿತಾ ಈಗ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಈ ಹಾಡನ್ನು ಮತ್ತೊಮ್ಮೆ ಹಿಟ್ ಆಗುವ ರೀತಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 31 ಲಕ್ಷ ವ್ಯೂವ್ ಪಡೆದುಕೊಂಡ ಊರ್ವಶಿಯ 10 ಸೆಕೆಂಡ್‍ನ ಬೆಲ್ಲಿ ಡ್ಯಾನ್ಸ್

    31 ಲಕ್ಷ ವ್ಯೂವ್ ಪಡೆದುಕೊಂಡ ಊರ್ವಶಿಯ 10 ಸೆಕೆಂಡ್‍ನ ಬೆಲ್ಲಿ ಡ್ಯಾನ್ಸ್

    ಮುಂಬೈ: ಬಾಲಿವುಡ್ ಸಿಜ್ಲಿಂಗ್ ಸ್ಟಾರ್ ಊರ್ವಶಿ ರೌತೆಲಾರ ಬೆಲ್ಲಿ ಡ್ಯಾನ್ಸ್ ವಿಡಿಯೋ ಇಂಟರ್ ನೆಟ್‍ನಲ್ಲಿ ಸಂಚಲನವನ್ನು ಹುಟ್ಟು ಹಾಕಿದೆ. ಕೇವಲ 10 ಸೆಕೆಂಡ್ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿಯೇ 31 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ನೃತ್ಯ ತರಬೇತಿ ವೇಳೆ ಈ ವಿಡಿಯೋ ಮಾಡಲಾಗಿದ್ದು, ಸಹ ನೃತ್ಯಗಾರ್ತಿಯೊಂದಿಗೆ ಊರ್ವಶಿ ತಮ್ಮ ಮಾದಕ ಅಭಿನಯದಿಂದ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ವಿಡಿಯೋವನ್ನು ಊರ್ವಶಿ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ.

    2013ರಲ್ಲಿ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಸಿನಿಮಾ ಅಂಗಳಕ್ಕೆ ಊರ್ವಶಿ ಪಾದಾರ್ಪಣೆ ಮಾಡಿದರು. ಗ್ರೇಟ್ ಗ್ರ್ಯಾಂಡ್ ಮಸ್ತಿ, ಸನಮ್ ರೇ, ಕಾಬಿಲ್, ಹೇಟ್ ಸ್ಟೋರಿ-4 ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ.

    https://www.instagram.com/p/BkNoPPShlwa/?taken-by=urvashirautela