Tag: ಬೆಲ್ಲಮಕೊಂಡ ಶ್ರೀನಿವಾಸ್‌

  • ರಶ್ಮಿಕಾ ಜೊತೆ ಡೇಟ್‌ ಮಾಡ್ತಿದ್ದಾರಾ? ಬೆಲ್ಲಮಕೊಂಡ ಶ್ರೀನಿವಾಸ್ ಸ್ಪಷ್ಟನೆ

    ರಶ್ಮಿಕಾ ಜೊತೆ ಡೇಟ್‌ ಮಾಡ್ತಿದ್ದಾರಾ? ಬೆಲ್ಲಮಕೊಂಡ ಶ್ರೀನಿವಾಸ್ ಸ್ಪಷ್ಟನೆ

    ಸೌತ್ ಸಿನಿರಂಗದಲ್ಲಿ ಸದ್ಯ ಸೌಂಡ್ ಮಾಡ್ತಿರುವ ವಿಚಾರ ಅಂದರೆ ಬೆಲ್ಲಮಕೊಂಡ ಶ್ರೀನಿವಾಸ್- ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ ಸುದ್ದಿ. ನಮ್ಮ ನಡುವೆ ಏನಿಲ್ಲ ಎಂದು ಹೇಳಿದರೂ ವಿಜಯ್ ದೇವಕೊಂಡ ಅವರನ್ನ ಬಿಟ್ಟು ಬೆಲ್ಲಮಕೊಂಡ (Bellamkonda Srinivas) ಜೊತೆ ರಶ್ಮಿಕಾ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

    ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರು ಸುದ್ದಿಯಾಗುತ್ತೆ. ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಸುಂದರಿ ಸುದ್ದಿಯಲ್ಲಿರುತ್ತಾರೆ. ಇದೀಗ ಬೆಲ್ಲಮಕೊಂಡ ಜೊತೆ ಮುಂಬೈ ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಬಳಿಕ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಲವ್ವಿ-ಡವ್ವಿ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ‘ಸೀತಾರಾಮಂ’ ನಟಿ

    ಬೆಲ್ಲಮಕೊಂಡ ಶ್ರೀನಿವಾಸ್ ಅವರು ‘ಛತ್ರಪತಿ’ (Chatrapati) ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೇ 12ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಪ್ರಚಾರದ ಸಮಯದಲ್ಲಿ ರಶ್ಮಿಕಾ ಜೊತೆಗಿನ ಡೇಟಿಂಗ್ ಬಗ್ಗೆ ಕೇಳಲಾಗಿದೆ.

    ಇದೆಲ್ಲಾ ಹೇಗೆ ಹುಟ್ಟಿತು ಅಂತ ಗೊತ್ತಿಲ್ಲ. ಮುಂಬೈ ಏರಪೋರ್ಟ್‌ನಲ್ಲೊ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ ಎಂದ ಮಾತ್ರಕ್ಕೆ ಡೇಟ್ ಮಾಡ್ತಿದ್ದೇವೆ ಎಂದರ್ಥವಲ್ಲ. ನಾವಿಬ್ಬರೂ ಹೈದರಾಬಾದ್‌ನವರು, ಮುಂಬೈನಲ್ಲಿ ಸಿಕ್ಕಾಗ ಭೇಟಿಯಾದ್ವಿ ಎಂದು ಡೇಟಿಂಗ್ ಸುದ್ದಿಗೆ ನೋ ಎಂದು ಸ್ಪಷ್ಟನೆ ನೀಡಿದ್ದಾರೆ.