Tag: ಬೆಲೆ

  • 1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    ಕೊಲ್ಕತ್ತಾ: ಒಂದು ಕಪ್ ಚಹಾದ ಬೆಲೆ 10 ರೂಪಾಯಿ ಇರುತ್ತೆ. ದೊಡ್ಡ ಹೋಟೆಲ್‍ಗಳಲ್ಲಿ ಸ್ವಲ್ಪ ಹೇಚ್ಚಾಗಿರುತ್ತದೆ. ಆದರೆ ಕೋಲ್ಕತ್ತಾದಲ್ಲಿ ಸಿಗುವ ಟೀ ಬೆಲೆ ಬರೋಬ್ಬರಿ 1000 ರೂಪಾಯಿ ಆಗಿದೆ.

    ಒಂದು ಕಪ್ ಟೀ ಬೆಲೆ ಬರೋಬ್ಬರಿ 1000 ರೂಪಾಯಿಯಂತೆ. ಕೋಲ್ಕತ್ತಾದಲ್ಲಿನ ಮುಕುಂದಪುರದ ನಿಜಶ್ ಟೀ ಅಂಗಡಿಯಲ್ಲಿ ಇಷ್ಟೋಂದು ಬೆಲೆಬಾಳುವ ಟೀಗಳು ದೊರೆಯುತ್ತದೆ.

    ಈ ಹೋಟೆಲ್‍ನಲ್ಲಿ ಸಿಗುವ ಟೀಗಳಲ್ಲಿ ಅತೀ ದುಬಾರಿ ಟೀ ಎಂದರೆ ಬೋ-ಲಿಯೋ ಚಹಾದ ಒಂದು ಕಪ್‍ಗೆ 1000ರೂಪಾಯಿ ಆಗಿದೆ. ಟೀ ತಯಾರಿಸಲು ಬಳಸುವ ಬೋ-ಲಿಯೋ ಸೊಪ್ಪಿಗೆ 1 ಕೇಜಿಗೆ ಬರೋಬ್ಬರಿ 3 ಲಕ್ಷರೂಪಾಯಿಯಂತೆ. ಹಾಗಾಗಿ ಈ ಟೀ ಇಷ್ಟೊಂದು ಬೆಲೆ ಎಂದು ಹೇಳಲಾಗುತ್ತಿದೆ.

    ಸಿಲ್ವರ್ ಸ್ಯೂ ವೈಟ್, ಬ್ಲೂ ಟೆಸಾನೆ, ಲೆವೆಂಡರ್, ಹಿಬಿಸ್ಕಾಸ್, ವೈನ್ ಟೀ ಸೇರಿದಂತೆ ಹತ್ತಾರು ಬಗೆಯ ಟೀಗಳು ನಿಮಗೆ ಇಲ್ಲಿ ದೊರೆಯುತ್ತವೆ. 12 ರೂಪಾಯಿನಿಂದ ಪ್ರಾರಂಭವಾಗಿ 1000 ರೂಪಾಯಿ ಬೆಲೆಬಾಳುವ ಟೀಗಳು ಈ ಅಂಗಡಿಯಲ್ಲಿ ದೊರೆಯತ್ತವೆ.

    ಈ ಅಂಗಡಿ ಮಾಲೀಕರಾಗಿರುವ ಆಪಾರ್ಥ ಪ್ರತಿಮ್ ಗಂಗೂಲಿ ಅವರು ಮೊದಲು ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಮುಂದೆ ಒಂದು ದಿನ ನಾನ್ಯಾಕೆ ಒಂದು ವ್ಯಾಪಾರ ಶುರು ಮಾಡಬಾರದು ಎಂದು ಯೋಚಿಸುತ್ತಿದ್ದಾಗ ಟೀ ಅಂಗಡಿ ಮಾಡುವ ಆಲೋಚನೆ ಇವರಿಗೆ ಬಂದಿದೆ. ಇದೀಗ ಕೋಲ್ಕತ್ತಾದಲ್ಲಿ ಫೇಮಸ್ ಟೀ ಅಂಗಡಿಗಳಲ್ಲಿ ಇದೂ ಕೂಡಾ ಒಂದಾಗಿದೆ.

  • ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿ

    ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿ

    ದುಬೈ: ಭಾರತೀಯ ರೆಸ್ಟೋರೆಂಟ್‍ನಲ್ಲಿ ತಯಾರಾದ ಬಿರಿಯಾನಿಗೆ ಬರೋಬ್ಬರಿ 20 ಸಾವಿರ ರೂಪಾಯಿ ಬೆಲೆ ನಿಗದಿಯಾಗುವ ಮೂಲಕ ಸುದ್ದಿಯಾಗಿದೆ.

    ಬಿರಿಯಾನಿ ಹಲವಾರು ದೇಶಗಳಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದೆ ಮತ್ತು ಬಿರಿಯಾನಿ ಪ್ರಿಯರು ಸಾಮಾನ್ಯವಾಗಿ ಕೇಸರಿ-ರುಚಿಯ ಅಕ್ಕಿ ಖಾದ್ಯಗಳಿರುವು ವಿಶೇಷವಾಗಿದೆ. ಆದರೆ ದುಬೈನ ರಾಯಲ್ ಗೋಲ್ಡ್‍ನಲ್ಲಿ ಸಿಗುವ ಬಿರಿಯಾನಿ ವಿಶೇಷ ಮತ್ತು ಕೊಂಚ ವಿಭಿನ್ನವಾಗಿದೆ. ಬೆಲೆ ಬಿರಿಯಾನಿ ಪ್ರಿಯರಿಗೆ ಆಶ್ಚರ್ಯವನ್ನುಂಟು ಮಾಡಿದೆ.

    ರಾಯಲ್ ಗೋಲ್ಡ್ ಬಿರಿಯಾನಿ ಆರ್ಡ್‍ರ್ ಮಾಡಿದರೆ ಅದನ್ನು ತಂದುಕೊಡುವುದಕ್ಕೆ 45 ನಿಮಿಷ ತೆಗೆದುಕೊಳ್ಳುತ್ತದೆ. ನೀವು ಒಂದು ಪ್ಲೇಟ್ ಬಿರಿಯಾನಿಗಾಗಿ ಬರೋಬ್ಬರಿ 20 ಸಾವಿರವನ್ನು ನೀಡಬೇಕಾಗುತ್ತದೆ. ಈ ಬಿರಿಯಾನಿಗೆ ಮೂರು ರೀತಿಯ ಅಕ್ಕಿಯನ್ನು ಹಾಕಿ ತಯಾರಿಸಲಾಗುತ್ತದೆ. ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್ ಮತ್ತು ವೈಟ್ ಕೇಸರಿಯಿಂದ ತಯಾರಿಸಲಾಗುತ್ತದೆ.

    ಬಿಯಾರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿ 3 ಬಗೆಯ ಚಿಕನ್ ಗ್ರಿಲ್, ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ ಮತ್ತು ಚಿಕನ್ ಮೀಟ್‍ಬಾಲ್, ಬೇಯಿಸಿದ ಬೇಬಿ ಆಲೂ ಹಾಗೂ ಮೊಟ್ಟೆ ಬಿರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿರುತ್ತದೆ.

    ಲ್ಯಾಂಚ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಂದ ತಟ್ಟೆಯನ್ನು ಆಲಂಕರಿಸಿರುತ್ತಾರೆ. ನಿಹಾರಿ ಸಲಾನ್, ಜೋದ್‍ಪುರ್ ಸಲಾನ್, ಬಾದಾಮಿ ಸಾಸ್, ದಾಳಿಂಬೆ ರೈತಾ ಬಿರಿಯಾನಿಯೊಂದಿಗೆ ಸಿಗುತ್ತದೆ.

  • ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ ಸೇಲ್ – ಬೆಲೆ ಎಷ್ಟು ಗೊತ್ತಾ?

    ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ ಸೇಲ್ – ಬೆಲೆ ಎಷ್ಟು ಗೊತ್ತಾ?

    ಹಾಂಕಾಂಗ್: ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ 59 ದಶಲಕ್ಷ ಡಾಲರ್ ಗೆ(429 ಕೋಟಿ ರೂ.) ಮಾರಾಟವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ.

    ಹಾಂಕಾಂಗ್ ಉದ್ಯಮಿ ವಿಕ್ಟರ್ ಲಿ ಅವರ ಸಿಕೆ ಅಸೆಟ್ ಹೋಲ್ಡಿಂಗ್ಸ್ ಒಡೆತನದ ಅಪಾರ್ಟ್‍ಮೆಂಟ್ ಅನ್ನು ಅನಾಮಿಕ ವ್ಯಕ್ತಿಯೊಬ್ಬರು ಇಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.

    ಈ ಕಟ್ಟಡದ ಒಂದು ಚದರ ಅಡಿ ಜಾಗದ ಬೆಲೆ 17,500 ಡಾಲರ್ (12.70 ಲಕ್ಷ ರೂ.) ಇದೆ. 23 ಮಹಡಿಯಲ್ಲಿರುವ ಈ ಫ್ಲ್ಯಾಟ್ 3,378 ಚದರ ಅಡಿಯನ್ನು ಹೊಂದಿದೆ. ಇದರಲ್ಲಿ 5 ಬೆಡ್ ರೂಂ, ಒಂದು ಈಜು ಕೊಳ, ಖಾಸಗಿ ಟೆರೆಸ್, ಮತ್ತು ವಾಹನ ನಿಲುಗಡೆಗಾಗಿ ಮೂರು ಪಾರ್ಕಿಂಗ್ ಜಾಗ ಮೀಸಲಿಡಲಾಗಿದೆ.

    ಹಾಂಕಾಂಗ್‍ನಲ್ಲಿ ಹಲವು ದುಬಾರಿ ಕಟ್ಟಡಗಳಿದ್ದು, ಶ್ರೀಮಂತ ಉದ್ಯಮಿಗಳು ಈ ಅಪಾರ್ಟ್‍ಮೆಂಟ್‍ನ ಒಡೆಯರಾಗಿದ್ದಾರೆ. 2019ರಲ್ಲಿ ಸಿಬಿಆರ್‍ಇ  ನಡೆಸಿದ ಸರ್ವೇ ಪ್ರಕಾರ ಹಾಂಕಾಂಗ್ ವಿಶ್ವದ ದುಬಾರಿ ಪಟ್ಟಣಗಳಲ್ಲಿ ಒಂದಾಗಿದೆ.

  • ಶತಕ ಬಾರಿಸಿದ ಪೆಟ್ರೋಲ್ ಬೆಲೆ

    ಶತಕ ಬಾರಿಸಿದ ಪೆಟ್ರೋಲ್ ಬೆಲೆ

    ಜೈಪುರ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತೈಲ ಬೆಲೆ ಇದೀಗ ರಾಜಸ್ಥಾನ ಮತ್ತು ಕೆಲ ರಾಜ್ಯಗಳಲ್ಲಿ 100 ರೂಪಾಯಿಗೆ ತಲುಪಿದೆ. ಈ ಮೂಲಕ ದೇಶದಲ್ಲಿ ತೈಲ ಬೆಲೆ ಶತಕ ಬಾರಿಸಿ ದಾಖಲೆ ನಿರ್ಮಿಸಿದೆ.

    ತೈಲ ಮಾರಾಟ ಕಂಪನಿಗಳು ಸತತ 9ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದೆ. ಪರಿಣಾಮ ಬ್ರ್ಯಾಂಡೆಡ್ ಪೆಟ್ರೋಲ್ ದರವು ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 100 ರೂಪಾಯಿ ಗಡಿದಾಟಿದೆ. ಇದರೊಂದಿಗೆ ದೇಶದಲ್ಲಿ ಮೊದಲ ಬಾರಿಗೆ 100 ರೂಪಾಯಿಗೆ ಪೆಟ್ರೋಲ್ ದುಬಾರಿಯಾಗಿದೆ.

    ದೇಶದಲ್ಲೇ ಅತಿಹೆಚ್ಚಿನ ತೆರಿಗೆ ವ್ಯಾಟ್ ಇರುವ ರಾಜ್ಯವಾದ ರಾಜಸ್ಥಾನದಲ್ಲಿ ಪೆಟ್ರೋಲ್ 25 ಪೈಸೆ ಹೆಚ್ಚಳಗೊಂಡು ಲೀಟರ್‍ಗೆ 100.13 ರೂಪಾಯಿ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 89.54 ರೂಪಾಯಿಯಾದರೆ, ಮುಂಬೈನಲ್ಲಿ 96 ರೂಪಾಯಿ, ಬೆಂಗಳೂರಿನಲ್ಲಿ 92.54 ರೂಪಾಯಿಯಾಗಿದೆ. ಡೀಸೆಲ್ ಬೆಲೆ ದೆಹಲಿಯಲ್ಲಿ 79.95, ಬೆಂಗಳೂರಿನಲ್ಲಿ 84.75 ರೂಪಾಯಿ ಕಂಡುಬಂದಿದೆ.

    ದೇಶದಲ್ಲಿ ಕಳೆದ 9 ದಿನಗಳ ಅವಧಿಯಲ್ಲಿ ಒಂದೇ ಸಮನೆ ಏರಿಕೆಯತ್ತ ಮುಖ ಮಾಡಿರುವ ತೈಲ ಬೆಲೆ ಇಂದು ಒಂಬತ್ತು ದಿನಗಳ ಅವಧಿಗೆ ಒಟ್ಟು ಪೆಟ್ರೋಲ್ ದರ 2.54 ರೂಪಾಯಿ ಏರಿಕೆ ಕಂಡರೆ, ಡೀಸೆಲ್ 2.82 ರೂಪಾಯಿ ಹೆಚ್ಚಳಗೊಂಡಿದೆ.

    ಇತ್ತ ಪ್ರತಿದಿನ ತೈಲ ಬೆಲೆ ಏರಿಕೆ ವಿರುದ್ಧ ಜನಸಾಮಾನ್ಯರು ಬಿದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದರು ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

  • ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಬೆಂಗಳೂರು: ದಿನೇ ದಿನೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಫೆಬ್ರವರಿಯಲ್ಲಿ 6 ಬಾರಿ ಏರಿಕೆಯಾಗಿರುವ ಪೆಟ್ರೋಲ್- ಡೀಸೆಲ್ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

    ಸದ್ಯ 4 ದಿನಗಳಿಂದ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, 4 ದಿನಗಳಿಂದ 1.43 ಪೈಸೆ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.09 ರೂ. ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83.09 ರೂ.ಗೆ ಹೆಚ್ಚಳವಾಗಿದೆ.

    ನಿತ್ಯ ಬೆಲೆ ಏರಿಕೆ ಕಿರಿಕಿರಿ ಉಂಟು ಮಾಡುತ್ತಿದ್ದು ಬಂಕ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ವಾಕ್ ಸಮರಕ್ಕೆ ಕಾರಣವಾಗುತ್ತಿದೆ.

    ಪೆಟ್ರೋಲಿಯಂ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ತೈಲಗಳ ಮೇಲಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗುತ್ತಾ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ 300 ದಿನಗಳ ಪೈಕಿ 60 ದಿನಗಳ ಕಾಲ ಬೆಲೆ ಏರಿಕೆಯಾಗಿದೆ. ಹತ್ತಿರ ಹತ್ತಿರ 250 ದಿನಗಳ ಕಾಲ ನಾವು ಬೆಲೆಯನ್ನು ಏರಿಕೆ ಮಾಡಿಲ್ಲ, ಇಳಿಕೆಯೂ ಮಾಡಿಲ್ಲ ಎಂದು ಉತ್ತರಿಸಿದ್ದರು.

    ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆ ಮತ್ತು ಇಳಿಕೆ ಆಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಮೂಲಕ ಸರ್ಕಾರಕ್ಕೆ ಸಂಪನ್ಮೂಲ ಬರುತ್ತದೆ. ಸಂಗ್ರಹಗೊಂಡ ತೆರಿಗೆಯನ್ನು ಅಭಿವೃದ್ಧಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹದಲ್ಲಿ ಬಹಳ ಜಾಗರೂಕವಾಗಿದೆ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿವೃದ್ಧಿ ಬದ್ಧತೆ ಇದೆ. ಈ ಕಾರಣಕ್ಕೆ ಈ ಮಾರ್ಗದಿಂದ ಕೆಲವು ಸಂಪನ್ಮೂಲಗಳು ಬೇಕಾಗುತ್ತದೆ. ಪೆಟ್ರೋಲಿಯಂ ಮೇಲಿನ ತೆರಿಗೆ ಪೈಕಿ ಗಣನೀಯ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ ಎಂದು ಹೇಳಿದ್ದರು.

  • ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ – ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ

    ಧಾರವಾಡ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕಟ್ಟಿಗೆ ಹೊರೆ ಹೊತ್ತು ಪ್ರತಿಭಟನೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದ್ದು ಇದನ್ನು ಖಂಡಿಸಿ ಧಾರವಾಡದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ವಿವೇಕಾನಂದ ವೃತ್ತದಲ್ಲಿ ಧಾರವಾಡ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ತಲೆ ಮೇಲೆ ಕಟ್ಟಿಗೆ ಹೊರೆ ಹೊತ್ತು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿಲಿಂಡರ್ ಸಿಗಲ್ಲ, ಕಟ್ಟಿಗೆ ಖರೀದಿ ಮಾಡಿಕೊಂಡು ಇಟ್ಟುಕೊಳ್ಳಿ, ಸಿಲಿಂಡರ್ ಬೆಲೆ ಕೂಡಾ ಸಾಕಷ್ಟು ಏರಿಕೆಯಾಗಿದೆ ಎಂದು ಜನರಿಗೆ ಕಟ್ಟಿಗೆ ಕೊಟ್ಟು ಕಳಿಸಿದ್ದಾರೆ.

  • 2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    -ಹಸು ಮಾರಾಟ ಬೆಲೆಯಲ್ಲಿ ವಿಶ್ವ ದಾಖಲೆ

    ಲಂಡನ್: ಹರಾಜಿನಲ್ಲಿ ಹಸು ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕವಾಗಿ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿರುವ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಧ್ಯ ಇಂಗ್ಲೇಂಡ್‍ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿತ್ತು. ಈ ವೇಳೆ ಹಸು 2,62,000 ಪೌಂಡ್ಸ್‍ಗೆ ಹರಾಜಾಗಿದೆ. ಭಾರತದಲ್ಲಿ ಸುಮಾರು 2.61 ಕೋಟಿ ಆಗುತ್ತದೆ. ನಾಲ್ಕು ತಿಂಗಳ ಫೋಶ್ ಸ್ಪೈಸ್ ತಳಿಯ ಈ ಹಸು ಮಾರಾಟ ಬೆಲೆಯಲ್ಲಿ ವಿಶ್ವದಾಖಲೆಯನ್ನು ಮುರಿದಿದೆ ಎಂದು ಹೇಳಿದರೆ ತಪ್ಪಾಗಲಾರದು. 2014 ರಲ್ಲಿ ಇದೇ ತಳಿಯ ಹಸು ಮಾರಾಟವಾಗಿತ್ತು. ಆದರೆ ಈ ಬಾರಿ ದುಪ್ಪಟ್ಟು ಬೆಲೆಗೆ ಹಸು ಮಾರಾಟವಾಗಿದೆ.

    ನಾನು ಕ್ರಿಸ್ಟೀನ್ ವಿಲಿಯಮ್ಸ್ ಹೈನುಗಾರಿಕೆ ನನ್ನ ಕಸುಬು. ನಮ್ಮ ತಂದೆ ಈ ತಳಿಯ ಹಸುವನ್ನು ಸಾಕಿದ್ದರು. ತಂದೆ ನಿಧನರಾದ ಬಳಿಕ ಕ್ರೀಸ್ಟೀನ್ ಹಸು ಸಾಕಾಣಿಕೆಯನ್ನು ಮುಂದುವರಿಸಿದ್ದೇನೆ. ಆದರೆ ನಮ್ಮ ಹಸು ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೇಳೆಕಾಳುಗಳ ದರ ಏರಿಕೆ – ಯಾವುದಕ್ಕೆ ಎಷ್ಟು ರೂ.?

    ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು, ಇದರ ನೇರ ಪರಿಣಾಮ ಬೇಳೆಕಾಳುಗಳ ಮೇಲೆ ಬಿದ್ದಿದ್ದು ದರ ಏರಿಕೆ ಆಗತೊಡಗಿದೆ.

    ಹೊಲಸೇಲ್ ಗಿಂತ ರಿಟೇಲ್ ಅಂಗಡಿಗಳಲ್ಲಿ ದರ ಏರಿಕೆಯಾಗಿದೆ. ಅದ್ರಲ್ಲೂ ಬಟಾಣಿ ಬೆಲೆ ಕೆ.ಜಿಗೆ 150 ರೂಪಾಯಿ ಏರಿಕೆಯಾಗಿದೆ. ದೋಸೆ, ಪಡ್ಡು ಹಾಗೂ ಇಡ್ಲಿಗೆ ಅವಶ್ಯವಾದ ಉದ್ದಿನ ಬೇಳೆ ಕೆಜಿಗೆ 130 ರೂಪಾಯಿ ಆಗಿದೆ. ತೋಗರಿಬೇಳೆ ಕೆ.ಜಿಗೆ 150 ರೂಪಾಯಿ ಆಗಿದೆ.

    ಬಹುತೇಕ ಎಲ್ಲಾ ಅಡುಗೆ ಸಾಮಗ್ರಿಗಳಲ್ಲೂ ಕಳೆದ ಒಂದು ತಿಂಗಳಿನಲ್ಲಿ 5-10 ರೂ. ಹೆಚ್ಚಳವಾಗಿದೆ. ಈ ಬೆಲೆ ಹೆಚ್ಚಳ, ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ಎಷ್ಟು ದರ ಇದೆ?
    ಪದಾರ್ಥಗಳ ಹೆಸರು – ಹೋಲ್ ಸೇಲ್ ರೇಟ್(ಕೆ.ಜಿಗೆ) ರಿಟೈಲ್ ರೇಟ್(ಕೆ.ಜಿಗೆ)
    ತೊಗರಿಬೇಳೆ – 100 ರೂ. – 120 ರೂ.
    ಉದ್ದಿನಬೇಳೆ – 115 ರೂ. – 130 ರೂ.
    ಹೆಸರಬೇಳೆ – 95 ರೂ. – 110 ರೂ.
    ಕಡಲೆಬೇಳೆ – 60 ರೂ. – 75 ರೂ.
    ಹೆಸರಕಾಳು – 105 ರೂ. -120 ರೂ.
    ಕಡಲೆಕಾಳು – 50 ರೂ. -70 ರೂ.
    ಅಳಸಂದಿ – 60 ರೂ. – 80 ರೂ.
    ಬಟಾಣಿ – 120 ರೂ. – 150 ರೂ.
    ಸೋನಾಮಸೂರಿ ಅಕ್ಕಿ – 50 ರೂ. – 56 ರೂ.
    ರಾ ರೈಸ್ – 50 ರೂ. – 56 ರೂ.

  • ಮತ್ತೆ ತೈಲ ಬೆಲೆ ಏರಿಕೆ ವಾಹನ ಸವಾರರ ಜೇಬಿಗೆ ಕತ್ತರಿ

    ಮತ್ತೆ ತೈಲ ಬೆಲೆ ಏರಿಕೆ ವಾಹನ ಸವಾರರ ಜೇಬಿಗೆ ಕತ್ತರಿ

    ಬೆಂಗಳೂರು: ಪ್ರತಿದಿನ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಇಂದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುವುದರ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗಿದೆ.

    ಇಂದು ಪೆಟ್ರೋಲ್ ದರ ಲೀಟರ್ ಗೆ 89.53 ರೂಪಾಯಿ ಆಗಿದೆ. ಬುಧವಾರ ಲೀಟರ್‍ ಗೆ 89.21 ರೂಪಾಯಿ ಇತ್ತು. ಈ ಮೂಲಕ ಬರೋಬ್ಬರಿ 23 ಪೈಸೆ ಹೆಚ್ಚಳ ಕಂಡಿದೆ. ಹಾಗೆ ಡೀಸೆಲ್ ದರವೂ ಮತ್ತೆ ಹೆಚ್ಚಳ ಕಂಡು ಬಂದಿದ್ದು ಡೀಸೆಲ್ ಲೀಟರ್ ಗೆ ಇಂದು 81.44 ರೂಪಾಯಿ ಆಗಿದೆ. ನಿನ್ನೆ ಡೀಸೆಲ್ 81.10 ರೂಪಾಯಿ ಇತ್ತು. ಇದೀಗ 34 ಪೈಸೆ ಡೀಸೆಲ್ ದರ ಹೆಚ್ಚಳವಾಗುದರೊಂದಿಗೆ ಮತ್ತಷ್ಟೂ ದುಬಾರಿಯಾಗಿದೆ ನಿತ್ಯ ಹೀಗೆ ಬೆಲೆ ಏರಿಕೆ ಕಾಣುತ್ತಿದರೆ ಇತ್ತ ವಾಹನ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಪೆಟ್ರೋಲ್ ಡೀಸೆಲ್‍ನೊಂದಿಗೆ ಅಡುಗೆ ಅನಿಲದ ಬೆಲೆಯಲ್ಲೂ ಏರಿಕೆ ಕಂಡಿದು ನಿನ್ನೆ 697 ರೂಪಾಯಿ ಇದ್ದ ಬೆಲೆ ಇಂದು 722 ರೂಪಾಯಿಯೊಂದಿಗೆ 25 ರೂಪಾಯಿ ಹೆಚ್ಚಳಗೊಂಡಿದೆ.

    ಇನ್ನೂ ಪ್ರತಿ ದಿನ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಜತೆ ದರದ ಬಗ್ಗೆ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ವಾಹನ ಒಡಿಸುದಾದರೂ ಹೇಗೆ ಎಂಬ ಪ್ರಶ್ನೆ ಸವಾರರಲ್ಲಿ ಕಾಡ ತೊಡಗಿದೆ.

  • ಸಂಸತ್ ಕ್ಯಾಂಟೀನ್ ಹೊಸ ದರಪಟ್ಟಿ

    ಸಂಸತ್ ಕ್ಯಾಂಟೀನ್ ಹೊಸ ದರಪಟ್ಟಿ

    ನವದೆಹಲಿ: ಶುಕ್ರವಾರದಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಆದರೆ ಸಂಸತ್ ಕ್ಯಾಂಟೀನ್ ನಲ್ಲಿ ಪೈಸೆ, ರೂಪಾಯಿ ಲೆಕ್ಕದಲ್ಲಿ ಸಂಸದರು ಭೂರಿ ಭೋಜನ ಮಾಡಲು ಆಗುವುದಿಲ್ಲ. ಏಕೆಂದರೆ ದಶಕಗಳ ಕಾಲ ಸಂಸತ್ತಿನ ಪಾರ್ಲಿಮೆಂಟ್ ನಲ್ಲಿ ಸಂಸದರಿಗೆ ನೀಡ್ತಾ ಬರ್ತಿದ್ದ ರಿಯಾಯ್ತಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

    ನಾಳೆಯಿಂದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಕಾರ್ಯದರ್ಶಿಗಳ, ಆಹಾರ ಪದಾರ್ಥಗಳ ದರಪಟ್ಟಿ ಪ್ರಕಟಿಸಿದೆ. ಹೊಸ ದರ ಪಟ್ಟಿಯಲ್ಲಿ ದರ ಹೆಚ್ಚಳ ಸ್ಪಷ್ಟವಾಗಿ ಕಂಡು ಬರುತ್ತದೆ. ಸಂಸತ್ ಕ್ಯಾಂಟೀನ್‍ನಲ್ಲಿ ಅತ್ಯಂತ ಅಗ್ಗದಲ್ಲಿ ಸಿಗೋ ಆಹಾರ ಅಂದ್ರೆ ಅದು ಚಪಾತಿ. ಇದರ ಬೆಲೆ ಮೂರು ರೂಪಾಯಿ. ಹಾಗೆಯೇ ದುಬಾರಿ ದರ ಅಂದ್ರೆ ಅದು ನಾನ್‍ವೆಜ್ ಊಟ. ಅದರ ದರ 700 ರೂಪಾಯಿ. ಸಂಸದರಿಗೆ ರಿಯಾಯ್ತಿ ಕಡಿತ ಮಾಡಿರುವ ಕಾರಣ ಸರ್ಕಾರಕ್ಕೆ ಪ್ರತಿವರ್ಷ 8 ಕೋಟಿ ಉಳಿತಾಯ ಆಗಲಿದೆ.

    ಸಂಸತ್ ಕ್ಯಾಂಟೀನ್, ಹೊಸ ದರಪಟ್ಟಿ
    * ಒಂದು ಚಪಾತಿ – 3 ರೂ.
    * ನಾನ್ ವೆಜ್ ಊಟ (ಬಫೆ ಸ್ಟೈಲ್) – 700 ರೂ.
    * ವೆಜ್ ಊಟ (ಬಫೆ ಸ್ಟೈಲ್) – 500 ರೂ.
    * ಸಸ್ಯಹಾರಿ ಥಾಲಿ – 100 ರೂ.
    * ಚಿಕನ್ ಬಿರಿಯಾನಿ – 100 ರೂ.
    * ಮಸಾಲೆ ದೋಸೆ – 50 ರೂ.
    * 2 ಇಡ್ಲಿ, ಚಟ್ನಿ, ಸಾಂಬರ್ – 25 ರೂ.
    * ಚಿತ್ರನ್ನ – 30 ರೂ.