Tag: ಬೆಲೆ

  • ಕೇಂದ್ರದ ಬಳಿಕ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ರೂಪಾಯಿ ಇಳಿಕೆ..?

    ಕೇಂದ್ರದ ಬಳಿಕ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ರೂಪಾಯಿ ಇಳಿಕೆ..?

    ನವದೆಹಲಿ: ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಹಾದಿಯನ್ನೇ ಹಿಡಿದಿದ್ದು, ಇಂಧನಗಳ ಮೇಲಿನ ವ್ಯಾಟ್ ಇಳಿಕೆ ಮಾಡುತ್ತಿವೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ದೀಪಾವಳಿ ಹಬ್ಬದ ಖುಷಿಯನ್ನು ದುಪ್ಪಟ್ಟುಗೊಳಿಸಿವೆ.

    PM MODI

    ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮೇಲೆ ಐದು ರೂಪಾಯಿ ಮತ್ತು ಡೀಸೆಲ್ ಮೇಲೆ ಹತ್ತು ರೂಪಾಯಿ ಅಬಕಾರಿ ಸುಂಕವನ್ನು ಇಳಿಸುತ್ತಿರುವುದಾಗಿ ಘೋಷಿಸಿತು. ಈ ನಿರ್ಧಾರದ ಬೆನ್ನಲ್ಲೇ ಹಲವು ರಾಜ್ಯಗಳು ವ್ಯಾಟ್ ಕಡಿತದ ನಿರ್ಧಾರ ಪ್ರಕಟಿಸುತ್ತಿವೆ. ಈವರೆಗೂ ಯಾವ್ಯಾವ ರಾಜ್ಯಗಳು ಎಷ್ಟೆಷ್ಟು ವ್ಯಾಟ್ ಕಡಿತಗೊಳಿಸಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

    ಗೋವಾ: ನರೇಂದ್ರ ಮೋದಿ ಅವರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸುವ ಮೂಲಕ ಎಲ್ಲಾ ಭಾರತೀಯರಿಗೆ ದೀಪಾವಳಿಯ ಉಡುಗೊರೆಯನ್ನು ನೀಡಿದ್ದಾರೆ. ಈ ಖುಷಿಯನ್ನು ಗೋವಾ ಸರ್ಕಾರ ಹೆಚ್ಚು ಮಾಡುತ್ತಿದ್ದು, ಪೆಟ್ರೋಲ್ ಮೇಲೆ 7 ರೂಪಾಯಿ ಮತ್ತು ಡೀಸೆಲ್ ಮೇಲೆ 7 ರೂಪಾಯಿ ವ್ಯಾಟ್ ಕಡಿಮೆ ಮಾಡಲಾಗುವುದು. ಇದರಿಂದಾಗಿ ಡೀಸೆಲ್ ಬೆಲೆಯನ್ನು ರೂ. 17 ರಷ್ಟು ಕಡಿಮೆ ಮಾಡುತ್ತಿದೆ. ಲೀಟರ್ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 12 ರೂ. ಕಡಿಮೆಯಾಗಲಿದೆ ಎಂದು ಸಿಎಂ ಪ್ರಮೋದ್‌ ಸಾವಂತ್ ಟ್ವೀಟ್ ಮಾಡಿದ್ದಾರೆ. ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಅಸ್ಸಾಂ: ಮೋದಿ ಟ್ವೀಟ್ ಮಾಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ತಮ್ಮ ರಾಜ್ಯ ಸರ್ಕಾರದ ನಿರ್ಧಾರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಏಳು ರೂಪಾಯಿ ಕಡಿಮೆ ಮಾಡುತ್ತಿರುವುದಾಗಿ ಹೇಳಿದರು. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಗುಜರಾತ್: ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡುವ ಸಂಬಂಧ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ರಾಜ್ಯದಲ್ಲಿ ಪೆಟ್ರೋಲ್/ಡೀಸೆಲ್ ಮೇಲಿನ ವ್ಯಾಟ್  ಲೀಟರ್ ಗೆ 7 ರೂಪಾಯಿಗಳಷ್ಟು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

    ತ್ರಿಪುರ: ನರೇಂದ್ರ ಮೋದಿ ಸರ್ಕಾರ ನಿರ್ಧಾರ ಸ್ವಾಗತಿಸಿದ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇಂದ್ರದ ಹಾದಿಯಲ್ಲೆ ರಾಜ್ಯ ಸರ್ಕಾರವು ಇಂಧನಗಳ ಬೆಲೆ ಕಡಿಮೆ ಮಾಡಲಿದ್ದು ಏಳು ರೂಪಾಯಿ ವ್ಯಾಟ್ ಇಳಿಕೆ ಮಾಡುತ್ತಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸರ್ಕಾರದ ನಿರ್ಧಾರದ ಬಳಿಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ  ಲೀಟರ್ ಗೆ ಕ್ರಮವಾಗಿ 98.33 ಮತ್ತು 85.63 ರೂಪಾಯಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

    ಮಣಿಪುರ: ಕೇಂದ್ರದ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು, “ಈ ದೀಪಾವಳಿಯಂದು ಈ ರಾಷ್ಟ್ರದ ಜನರಿಗೆ ಉಡುಗೊರೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದು, ರಾಜ್ಯ ಸರ್ಕಾರವೂ ಮಣಿಪುರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ತಕ್ಷಣವೇ ಜಾರಿಗೆ ಬರುವಂತೆ ತಲಾ 7 ರೂಪಾಯಿಯಷ್ಟು ಕಡಿಮೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಮಾದಪ್ಪನ ಬೆಟ್ಟದಲ್ಲಿ ಸರಳವಾಗಿ ನಡೆದ ಹಾಲರುವೆ ಉತ್ಸವ

    ಕರ್ನಾಟಕ: ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಾ ಪೆಟ್ರೋಲ್ ಡಿಸೇಲ್ ಮೇಲೆ ಏಳು ರೂಪಾಯಿ ವ್ಯಾಟ್ ಕಡಿತಗೊಳಿಸುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 2,100 ಕೋಟಿ ರೂಪಾಯಿಗಳ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

    ಹರ್ಯಾಣ: ಹರ್ಯಾಣ ಸರ್ಕಾರ ವಿಶೇಷ ಎನ್ನುವಂತ ನಿರ್ಧಾರ ಪ್ರಕಟಿಸಿದೆ. ಎಲ್ಲ ರಾಜ್ಯಗಳು ಏಳು ರೂಪಾಯಿಯಷ್ಟು ವ್ಯಾಟ್ ಕಡಿಮೆ ಮಾಡಿದರೆ ಸಿಎಂ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲೆ 12 ರೂಪಾಯಿ ಕಡಿಮೆ ಮಾಡಿದೆ.

  • ಕಚ್ಚಾ ತೈಲ ದರ ಏರಿಕೆ – 150 ರೂ. ಗಡಿ ದಾಟುತ್ತಾ ಪೆಟ್ರೋಲ್ ಬೆಲೆ?

    ಕಚ್ಚಾ ತೈಲ ದರ ಏರಿಕೆ – 150 ರೂ. ಗಡಿ ದಾಟುತ್ತಾ ಪೆಟ್ರೋಲ್ ಬೆಲೆ?

    ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ಈ ನಡುವೆ ಪ್ರಸಿದ್ಧ ಜಾಗತಿಕ ಹಣಕಾಸು ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 150 ರೂ. ತಲುಪಲಿದೆ ಎಂದು ವರದಿಮಾಡಿದೆ.

    ಇದೀಗ ಗೋಲ್ಡ್‌ಮನ್ ಸ್ಯಾಚ್ಸ್ ವರದಿಯ ಪ್ರಕಾರ, ಮುಂದಿನ ವರ್ಷದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್(159 ಲೀಟರ್) 110 ಡಾಲರ್ ಏರಬಹುದು ಎಂದು ವರದಿ ಮಾಡಿದೆ. ಪ್ರಸ್ತುತ, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‍ಗೆ 85 ಡಾಲರ್(ಅಂದಾಜು 6,366 ರೂ.) ಇದೆ. ತೈಲ ಬೆಲೆಗಳು ಈಗಿನ ಬೆಲೆಗೆ ಹೋಲಿಸಿದರೆ ಮುಂದಿನ ವರ್ಷದ ವೇಳೆಗೆ ಶೇ.30 ರಷ್ಟು ಹೆಚ್ಚಾಗಬಹುದು. ಜಾಗತಿಕ ಬೇಡಿಕೆ ಪೂರೈಕೆಯು ಅಸಮತೋಲನಗೊಂಡಿದೆ ಎಂದು  ಗೋಲ್ಡ್‌ಮನ್ ಸ್ಯಾಚ್ಸ್ ನ ತೈಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾದಿಂದಾಗಿ ಜಾಗತಿಕ ಮಟ್ಟದ ಮಾರುಕಟ್ಟೆಯಲ್ಲಿ ಈ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

    ಕಚ್ಚಾ ತೈಲ ಬೆಲೆಯ ಹೆಚ್ಚಳವು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಗೋಲ್ಡ್‍ಮನ್ ಸ್ಯಾಚ್ಸ್ ವರದಿಯ ಪ್ರಕಾರ ಕಚ್ಚಾ ತೈಲ ಬೆಲೆಯಲ್ಲಿ ಶೇ.30 ರಷ್ಟು ಹೆಚ್ಚಳವಾದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 150 ರೂ ಮತ್ತು ಡೀಸೆಲ್ ಬೆಲೆ ಲೀಟರ್​ಗೆ 140 ರೂ. ತಲುಪುತ್ತದೆ. ಜೊತೆಗೆ ಗ್ಯಾಸ್ ಬೆಲೆ 1,000 ರೂ ಗಡಿದಾಟುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಆರ್ಯನ್ ಖಾನ್ ಬಂಧನ ಕೇಸ್‍ಗೆ ತಿರುವು – ಸಮೀರ್ ಆಪ್ತ ಕಿರಣ್ ಗೋಸಾವಿ ಬಂಧನ

    ಬೆಲೆ ಏರಿಕೆ ಯಾಕೆ?
    ಕೋವಿಡ್ 19 ವೇಳೆ ರಾಷ್ಟ್ರಗಳು ಲಾಕ್‍ಡೌನ್ ಹೇರಿತ್ತು. ಈ ವೇಳೆ ಬೇಡಿಕೆ ಕಡಿಮೆಯಾಗಿ ಬ್ಯಾರೆಲ್ ತೈಲ ದರ 19 ಡಾಲರ್​ಗೆ ಇಳಿಕೆಯಾಗಿತ್ತು. ಈ ವೇಳೆ ತೈಲ ಉತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. 2020ರ ಮಧ್ಯ ಭಾಗದ ಬಳಿಕ ರಾಷ್ಟ್ರಗಳು ಲಾಕ್‍ಡೌನ್ ತೆರವು ಮಾಡಿದ್ದರೂ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳ ಮಾಡುತ್ತಿಲ್ಲ.  ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

    ಬೇಡಿಕೆ ಜಾಸ್ತಿ ಇದ್ದರೂ ಉತ್ಪಾದನೆ ಹೆಚ್ಚಳ ಮಾಡದ ಕಾರಣ ಬೆಲೆ ಏರತೊಡಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಉತ್ಪಾದನೆ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟರೂ  ಒಪೆಕ್ ರಾಷ್ಟ್ರಗಳು ಕೊರೊನಾಗಿಂತ ಮೊದಲು ಮಾಡುತ್ತಿದ್ದಷ್ಟು ಉತ್ಪಾದನೆ ಮಾಡುತ್ತಿಲ್ಲ. ಕೋವಿಡ್ ಸಮಯದಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚು ಮಾಡದ ಕಾರಣ ವಿಶ್ವಾದ್ಯಂತ ತೈಲ ಬೆಲೆ ಏರತೊಡಗಿದೆ.

    ಜಿಎಸ್‍ಟಿಗೆ ಬರುತ್ತಾ?
    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ಬಗ್ಗೆ ಜನಸಾಮಾನ್ಯರು ಮತ್ತು ರಾಜಕೀಯ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದರೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಗೆ ಸರ್ಕಾರಕ್ಕೆ ಮನಸ್ಸು ಮಾಡಿದಂತಿಲ್ಲ. ತೈಲ ಬೆಲೆ ಭಾರೀ ಏರಿಕೆಯಾದರೆ ತೈಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ವಾದಕ್ಕೆ ಬೆಲೆ ಸಿಗಬಹುದು. ರಾಜ್ಯ ಸರ್ಕಾರಗಳು ಒಪ್ಪಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಶಿರಸಿಯಲ್ಲಿ ಶತಕ ದಾಟಿದ ಡೀಸಲ್ ದರ-ಸಾಗಾಟ ವೆಚ್ಚ ದುಬಾರಿ

    ಶಿರಸಿಯಲ್ಲಿ ಶತಕ ದಾಟಿದ ಡೀಸಲ್ ದರ-ಸಾಗಾಟ ವೆಚ್ಚ ದುಬಾರಿ

    ಕಾರವಾರ: ಶಿರಸಿ ನಗರದ ಪೆಟ್ರೋಲ್ ಬಂಕ್‍ಗಳಲ್ಲಿ ಇಂದು ಲೀಟರ್ ಡೀಸೆಲ್ ದರ 100.12ಕ್ಕೆ ಏರಿಕೆಯಾಗಿದ್ದು, ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

    ಇಂದು ಪ್ರತಿ ಲೀಟರ್ ದರ 97.35 ಪೈಸೆ ಇತ್ತು. ಒಂದೇ ದಿನಕ್ಕೆ ಅದು 37 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ದರ ಕೂಡ 109.71ಕ್ಕೆ ಏರಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 30 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಸರಾಸರಿ ಮೂವತ್ತು ಪೈಸೆ ಹೆಚ್ಚಳವಾಗುತ್ತಿದೆ. ಆದರೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮಾತ್ರ ಪೆಟ್ರೋಲ್ 109.30, ಡೀಸೆಲ್ 99.79 ದರ ಏರಿಕೆ ಕಂಡಿದೆ. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ದುಬಾರಿ ಸಾಗಾಟ ವೆಚ್ಚ ಡೀಸೆಲ್ ದರ ಹೆಚ್ಚಳ:
    ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ. ಸಾಗಾಣಿಕೆ ವೆಚ್ಚ ಹೆಚ್ಚಳವಾಗುವ ಕಾರಣ ದರ ಉಳಿದ ಕಡೆಗಿಂತ ಹೆಚ್ಚಾಗಿದೆ. ಕಾರವಾರಕ್ಕೆ ಬೆಳಗಾವಿ ಕಡೆಯಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತದೆ. ಹೀಗಾಗಿ ಇಲ್ಲಿ ದರ ಕಡಿಮೆ ಇದೆ. ಇದೀಗ ಏಕಾ ಏಕಿ ನೂರರ ಗಡಿ ದಾಟಿರುವುದು ವಾಹನ ಸವಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

  • ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

    ಚಿಕ್ಕಬಳ್ಳಾಪುರ: ಒಂದು ಕಡೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಸಕಲ ತಯಾರಿಯಲ್ಲಿದ್ದರೇ ಇತ್ತ ಹೂವಿನ ಬೆಲೆ ಪಾತಾಳಕ್ಕೆ ಕುಸಿದ ಹಿನ್ನಲೆ ರೈತರೊಬ್ಬರು ತನ್ನ ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಾಲೂಕಿನ ಡಿ. ಹೊಸೂರು ಗ್ರಾಮದ ರೈತ ಪಿಳ್ಳೇಗೌಡ ಅವರು ತಮ್ಮ ಒಂದು ಎಕೆರೆಯಲ್ಲಿ ಬೆಳೆದಿದ್ದ 1300 ಗುಲಾಬಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದಾರೆ. ಸದ್ಯ ಪಿತೃ ಪಕ್ಷದ ಎಫೆಕ್ಟ್ ನಿಂದ ಮಾರುಕಟ್ಟೆಯಲ್ಲಿ ಹೂ ಕೇಳೋರೇ ಇಲ್ಲ. ಕೆಜಿ 5 ರೂಪಾಯಿಗೂ ಖರೀದಿ ಮಾಡೋರಿಲ್ಲದಂತಾಗಿದ್ದು, ನೊಂದ ರೈತ ಪಿಳ್ಳೇಗೌಡ ಅವರು ಇಡೀ ಗುಲಾಬಿ ತೋಟವನ್ನ ಬುಡದವರೆಗೂ ಕಟಾವು ಮಾಡಿ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ:  DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ

    ಮಾರ್ಕೆಟ್‍ನಲ್ಲಿ ರೇಟ್ ಇಲ್ಲ, ಗಿಡದಲ್ಲಿ ಹೂವು ಹಾಗೆ ಬಿಟ್ಟರೆ ಗಿಡ ಹಾಳಾಗುತ್ತದೆ. ಹೂವು ಕಟಾವು ಮಾಡೋಣ ಎಂದರೆ ಕೂಲಿ ಹಣನೂ ಸಿಗಲ್ಲ. ಇದರ ಜೊತೆಗೆ ಗಿಡಗಳನ್ನ ಕಾಪಾಡಿಕೊಳ್ಳೋಕೆ ಫರ್ಟಿಲೈಸರ್ಸ್ ಖರೀದಿ ಮಾಡಬೇಕು. ಅವು ಸಹ ದುಬಾರಿ ಬೆಲೆ, ಏನ್ ಮಾಡೋದು ಸರ್ ಲಾಭ ಇಲ್ಲ ಎಲ್ಲವೂ ನಷ್ಟವಾಗಿದೆ. ಹೀಗಾಗಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದೇವೆ ಎಂದು ರೈತ ಪಿಳ್ಳೇಗೌಡ ಅವರು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

     

    ಕೆಜಿ 5 ರೂಪಾಯಿಗೂ ಕೇಳೋರಿಲ್ಲ:

    ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದಲ್ಲಿ ಪುಷ್ಪೋದ್ಯಮ ಮಾಡಲಾಗುತ್ತದೆ. ಗುಲಾಬಿ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ತರಹೇವಾರಿ ಹೂವುಗಳನ್ನ ಬೆಳೆಯಲಾಗುತ್ತದೆ. ಇನ್ನೂ ಕೊರೊನಾ ಹೊಡೆತಕ್ಕೆ ಪುಷ್ಪೋದ್ಯಮ ನಲುಗಿ ಹೋಗಿದೆ. ಇತ್ತೀಚೆಗೆ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳಿಂದ ಚೇತರಿಸಿಕೊಂಡಿತ್ತು. ಆದರೆ ಪಕ್ಷದ ಕಾರಣ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವು ಕೆಜಿ 5 ರೂಪಾಯಿಗೂ ಕೇಳೋರಿಲ್ಲ. ಬಲವಂತ ಮಾಡಿ ನಾವೇ ಕೊಟ್ಟು ಬರಬೇಕಾಗಿದೆ ಅಂತಾರೆ ರೈತ ಸುನೀಲ್. ಮತ್ತೊಂದೆಡೆ ಚೆಂಡು ಹೂ ಸಹ ಕೇಳೋರು ಇಲ್ಲ, ಹೀಗಾಗಿ ಚಿಕ್ಕಬಳ್ಳಾಪುರ ನಗರದ ಹೂವು ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಎಲ್ಲಂದರಲ್ಲಿ ಬಿಸಾಡಲಾಗಿದೆ. ರೈತರೊಬ್ಬರು ಟ್ರ್ಯಾಕ್ಟರ್ ತುಂಬಾ ಗುಲಾಬಿ ಹೂವನ್ನ ರಸ್ತೆ ಬದಿ ಸುರಿದು ಹೋಗಿದ್ದ. ಮಾರುಕಟ್ಟೆಯಲ್ಲಿ ಎತ್ತ ನೋಡಿದರು ಈಗ ರಾಶಿ ರಾಶಿ ಹೂವುಗಳು ಕಣ್ಣಿಗೆ ಕಾಣುತ್ತಿವೆ.

  • ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ

    ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ

    – ಬಿಜೆಪಿ ಲೂಟ್ ಎಂದು ಸಿದ್ದರಾಮಯ್ಯ ವಾಗ್ದಾಳಿ

    ಬೆಂಗಳೂರು: ಬೆಲೆ ಏರಿಕೆ ಮೇಲಿನ ಚರ್ಚೆ ಇದೇ ಮೊದಲಲ್ಲ, ಈ ಹಿಂದೆಯೂ ಚರ್ಚೆ ಆಗಿದೆ. ಸಂಸತ್ತಿನಲ್ಲೂ ತೀಕ್ಷ್ಣವಾಗಿ ಚರ್ಚೆ ಆಗಿದೆ. ಬೆಲೆ ಏರಿಕೆ 60ರ ದಶಕದಿಂದಲೂ ಪ್ರಾರಂಭವಾಗಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.

    ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ ಬೆಲೆ ಸತತವಾಗಿ ಹೆಚ್ಚಳವಾಗಿದೆ. ಬೆಲೆ ಏರಿಕೆ ನಿರಂತರವಾಗಿ ಹೆಚ್ಚಳವಾಗಿದೆ. ಕೇವಲ ಈಗಿರುವ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ ಎಂಬ ಮಾತು ಸರಿ ಇಲ್ಲ. ಕ್ರಿಮಿನಲ್ ಲೂಟ್ ಪದವನ್ನ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ವಾಜಪೇಯಿ ಯಾವ ಅರ್ಥದಲ್ಲಿ ಹೇಳಿದ್ರೂ ಅನ್ನೋದನ್ನ ಚರ್ಚೆ ಮಾಡಲ್ಲ. ಯಾರ್ಯಾರು ಬೆಲೆ ಹೆಚ್ಚು ಮಾಡಿದ್ದಾರೋ ಅವರೆಲ್ಲ ಕ್ರಿಮಿನಲ್ ಲೂಟ್ ಮಾಡಿದ್ದಾರೆ ಅಂತಾ ನಾನು ಹೇಳುತ್ತೇನೆ ವಿರೋಧ ಪಕ್ಷದ ನಾಯಕರ ಮಾತನ್ನ ನಾನು ಒಪ್ಪಲ್ಲ ಎಂದಿದ್ದಾರೆ. ಇದನ್ನೂ ಓದಿ:  ಐವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲ: ಶಂಕರ್ ತಂಗಿ

    ಮಾತಿಗೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಕ್ರಿಮಿನಲ್ ಲೂಟ್ ನೀವು ಮಾಡಿರೋದು ಎಂದು ಆರೋಪ ಮಾಡಿದ್ದಾರೆ. ನಿಮಗೆ ನೋವಾಗಿದ್ರೆ ಕುಳಿತುಕೊಳ್ಳಿ ಕುಳಿತುಕೊಳ್ಳಿ ಎಂದು ಬೊಮ್ಮಾಯಿ ಹೇಳಿದ್ದಾರೆ. ನನಗ್ಯಾಕೆ ನೋವು ಆಗಬೇಕು, ನೋವು ನರೇಂದ್ರ ಮೋದಿ ಅವರಿಗೆ ಆಗಬೇಕು, ನಿಮಗೆ ನೋವಾಗಬೇಕು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

    ನಿಮ್ಮ ಅವಧಿಯಲ್ಲಿ ಶೇ.60 ರಷ್ಟು ಹೆಚ್ಚಾಗಿತ್ತು, ಈಗ ಶೇ.30ರಷ್ಟು ಹೆಚ್ಚಾಗಿದೆ. ಯಾರು ಕ್ರಿಮಿನಲ್ ಲೂಟ್ ಮಾಡಿದ್ದು ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಿಮಗೆ ಕ್ರಿಮಿನಲ್ ಲೂಟ್ ಅನ್ನೋದು ಬೇಡ ಎಂದ್ರೆ ಕಾಂಗ್ರೆಸ್ ಲೂಟ್ ಎಂದು ಕರೆಯುತ್ತೇನೆ. ಭೂತದ ಬಾಯಲ್ಲಿ ಭಗವದ್ಗೀತೆ, ನಿಮಗೆ ಮಾತನಾಡುವ ಅಧಿಕಾರ ಇಲ್ಲ ಎಂದ ಸಿಎಂ ಹೇಳಿದಾಗ ಕಾಂಗ್ರೆಸ್ ಸದಸ್ಯರ ಆಕ್ಷೇಪ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಿಜೆಪಿ ಲೂಟ್ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತವರಿಗೆ ವಿಷ ಇಟ್ಟ ಮಗಳು

    ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರದ ವೇಳೆ ಕಾವೇರಿದ ಗದ್ದಲದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಹೊರಗಡೆಯೂ ಮಳೆ ಜೋರು ಬರ್ತಿದೆ, ಒಳಗಡೆಯೂ ಮಳೆ ಜೋರಾಗುತ್ತಿದೆ ಎಂದು ನಗೆಚಟಾಕೆ ಹಾರಿಸಿದರು.

    ನಮ್ಮ ನರೇಂದ್ರ ಮೋದಿ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಾರೆ ಎಂದಿದ್ದಾರೆ. ಆಗ ರೈತರು ಏಕೆ ಚಳವಳಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಏಕೆ ರೈತ ಚಳವಳಿ ಆಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ರೈತರು ಸುಮ್ ಸುಮ್ನೆ ಚಳವಳಿ ಮಾಡುತ್ತಿದ್ದಾರಾ ಎಂದ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಅಲ್ಲಿ ಮಾಡುತ್ತಿರುವುದು ಸ್ಪಾನ್ಸರ್ ಚಳವಳಿಯಾಗಿದೆ. ರಾಜಕೀಯ ಪ್ರೇರಿತವಾಗಿದ್ದರೆ ಅದು ಸ್ಪಾನ್ಸರ್ ಚಳವಳಿ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

  • ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

    ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

    ಮಡಿಕೇರಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪೆಟ್ರೋಲ್, ಡೀಸೆಲ್‍ನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪ್ರತಿ ಲೀಟರ್ ಗೆ 20 ರೂಪಾಯಿ ಕಡಿಮೆ ಆಗುತ್ತೆ. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಹೀಗಾಗಿ ಜಿಎಸ್‍ಟಿ ವ್ಯಾಪ್ತಿಗೆ ತರುವುದನ್ನು ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಾದಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದರು. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

    ದೇಶದಲ್ಲಿ ತೈಲ ಬೆಲೆ ಏರಿಕೆ ಅಗುತ್ತಿರುವ ಕಾರಣ ಕೋವಿಡ್ ಬಂದ ಬಳಿಕ ಈಗಾಗಲೇ ವ್ಯಾಕ್ಸಿನ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕೆಲ್ಲಾ ಹಣ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ತಿಳಿಸಿದರು.

    ಈ ಹಿಂದೆ ದೇಶವನ್ನಾಳಿದ ಸರ್ಕಾರಗಳು ಅರಬ್ ದೇಶಗಳಲ್ಲಿ ಆಯಿಲ್ ಬಾವಿಗಳನ್ನು ಖರೀದಿಸಬೇಕಾಗಿತ್ತು. ಅಂದು ಖರೀದಿಸಿದ್ದರೆ ಇಂದು ಅನುಕೂಲವಾಗುತಿತ್ತು. ಕಚ್ಚಾತೈಲ ಬೆಲೆ ಜಾಸ್ತಿಯಾದಾಗ ನಮ್ಮ ಬಾವಿಗಳಿಂದಲೇ ತೈಲ ಪೂರೈಸಬಹುದಾಗಿತ್ತು. ಇನ್ನಾದರೂ ಅರಬ್ ದೇಶಗಳಲ್ಲಿ ತೈಲ ಬಾವಿಗಳ ಖರೀದಿಸುವ ಕೆಲಸವಾಗಬೇಕಿದೆ. ಅಷ್ಟೇ ಅಲ್ಲದೆ ಗ್ಯಾಸ್ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುವ ಚಿಂತನೆ ಮೋದಿ ಅವರು ಮಾಡಿದ್ದಾರೆ ಎಂದು ಹೇಳಿದರು.

  • ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತೆ, ಏನೂ ಸಮಸ್ಯೆ ಆಗಲ್ಲ: ನಾರಾಯಣಗೌಡ ಉಡಾಫೆ

    ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತೆ, ಏನೂ ಸಮಸ್ಯೆ ಆಗಲ್ಲ: ನಾರಾಯಣಗೌಡ ಉಡಾಫೆ

    ಬೆಂಗಳೂರು: ಇಂಧನ ಮತ್ತು ಗ್ಯಾಸ್ ಬೆಲೆ ಯಾಕೆ ಜಾಸ್ತಿ ಆಗಿದೆ ಅಂತಾ ಎಲ್ಲರಿಗೂ ಗೊತ್ತಿದೆ. ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತದೆ. ಆದರೆ ಇಲ್ಲಿ ರಾಜಕಾರಣ ಮಾಡಲಾಗುತ್ತಿದೆ, ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ, ಬೀದಿಗೆ ಬಂದಿರುವವರು ರಾಜಕಾರಣಿಗಳು ಎಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರದಲ್ಲಿ ಸಚಿವ ನಾರಾಯಣಗೌಡ ಉಡಾಫೆಯ ಉತ್ತರ ನೀಡಿದ್ದಾರೆ.

    ಬಿಜೆಪಿ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ವಿಚಾರದ ಪ್ರತಿಭಟನೆಯಲ್ಲಿ ಒಂದು ಡ್ರಾಮಾ ನಡೆಯುತ್ತಿದೆ. ನಿಜವಾದ ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿಲ್ವಾ? ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ ಎಂದು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜೊತೆ ಚರ್ಚೆ ಮಾಡುವೆ: ಸಿಎಂ

    ಅಲ್ಲದೆ ಮನೆ ಮನೆಗೆ ಗ್ಯಾಸ್ ಕೊಟ್ಟಿರುವವರು ಯಾರು? ಹೆಣ್ಣು ಮಕ್ಕಳಿಗೆ ತೊಂದರೆ ಅಗಬಾರದು ಎಂದು ಉಚಿತವಾಗಿ ಕೊಟ್ಟಿರೋದು ಅದು. ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತದೆ. ಸಮಸ್ಯೆ ಬಗೆಹರಿಸಲು ಪ್ರಧಾನಿ ಸನ್ನದ್ಧವಾಗುತ್ತಿದ್ದಾರೆ. ಕಾಂಗ್ರೆಸ್ ಅವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಪ್ರಹ್ಲಾದ್ ಜೋಶಿ

    ಪ್ರತಿಭಟನೆ ಮಾಡಿಸುತ್ತಿರೋದು ರಾಜಕಾರಣ. ಬೆಲೆ ಏರಿಕೆ ತಾತ್ಕಾಲಿಕ, ಅದು ಕಡಿಮೆ ಆಗುತ್ತದೆ. ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಿಲ್ಲ, ನಾವೂ ಕೇಳಿಲ್ಲ. ಶಾಸಕರಿಗೂ ಡೀಸೆಲ್, ಪೆಟ್ರೋಲ್ ಖರ್ಚು ಇರುತ್ತದೆ ಎಂದು ಹೇಳಿದ್ದಾರೆ.

  • ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆ- ರೈತರು ಫುಲ್ ಖುಷ್

    ತುಮಕೂರು: ಹಲವು ತಿಂಗಳಿನಿಂದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದ ಕೊಬ್ಬರಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕ್ವಿಂಟಲ್ ಕೊಬ್ಬರಿ ಬೆಲೆ 17 ಸಾವಿರ ರೂ. ಗಡಿ ದಾಟಿದೆ.

    ಕೆಲ ರವಾನೆದಾರರ ಪ್ರಕಾರ ಹೊರ ರಾಜ್ಯದಲ್ಲಿ ಕೊಬ್ಬರಿಗೆ ಬೇಡಿಕೆ ಬಂದಿರುವ ಕಾರಣ ಬೆಲೆಯಲ್ಲಿ ಕೊಂಚ ಬದಲಾವಣೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದಿದ್ದಾರೆ.

    ರೈತರು ಬಹು ದಿನಗಳಿಂದ ಬೆಲೆ ಏರಿಕೆಗೆ ಕಾಯುತ್ತಿದ್ದರು. ಆದರೆ ಕೆಲ ತಿಂಗಳಿಂದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದೀಗ 17 ಸಾವಿರ ರೂ.ಗೆ ತಲುಪಿರುವುದು ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಕೊಂಚ ನೆಮ್ಮದಿ ನೀಡಿದೆ.

    ಹೊರ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ. ಕೋವಿಡ್ ಲಾಕ್‍ಡೌನ್ ಘೊಷಣೆಯಾಗುವ ಆತಂಕದಿಂದ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬರಿ ಅಮದು ಮಾಡಿಕೊಳ್ಳಲಾಗುತ್ತಿದೆ. ಎಣ್ಣೆ ಕಾಳುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿರುವುದರಿಂದ ಕೊಬ್ಬರಿ ಎಣ್ಣೆ ತಯಾರಿಕೆ, ಬಳಕೆ ಹೆಚ್ಚಿದೆ ಎನ್ನುತ್ತಾರೆ ರವಾನೆದಾರರು.

    ಕೆಲ ತಿಂಗಳಿನಿಂದ ಎಪಿಎಂಸಿಗೆ ಉಂಡೆ ಕೊಬ್ಬರಿ ಬರುತ್ತಿರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಫಸಲು ಕಡಿಮೆ ಆಗಿರುವ ಬಗ್ಗೆ ರೈತರು ಮಾಹಿತಿ ನೀಡುತ್ತಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗಿದೆ ಎಂದಿದ್ದಾರೆ.

  • ಬೆಲೆ ಏರಿಕೆ ನಡುವೆ ಒಂದೇ ದಿನ 30 ಬೈಕ್‍ನಿಂದ ಪೆಟ್ರೋಲ್ ಕದ್ದ ಕಳ್ಳರು

    ಬೆಲೆ ಏರಿಕೆ ನಡುವೆ ಒಂದೇ ದಿನ 30 ಬೈಕ್‍ನಿಂದ ಪೆಟ್ರೋಲ್ ಕದ್ದ ಕಳ್ಳರು

    ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ನಡುವೆ ಪೆಟ್ರೋಲ್ ಕಳ್ಳರ ಹಾವಳಿ ಸಹ ಹೆಚ್ಚಾಗುತ್ತಿದ್ದು, ನಗರದ ಪುರ್ಲೆ ಬಡಾವಣೆಯಲ್ಲಿ ಒಂದೇ ದಿನ 30ಕ್ಕೂ ಹೆಚ್ಚು ಬೈಕುಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನವಾಗಿದೆ.

    ಶಿವಮೊಗ್ಗ ನಗರದ ಪುರ್ಲೆ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪೆಟ್ರೋಲ್ ಕಳ್ಳತನ ನಡೆದಿದೆ. ಈ ಬಡಾವಣೆಯ ಎರಡ್ಮೂರು ಬೀದಿಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೆಟ್ರೋಲ್ ಪೈಪ್ ಕತ್ತರಿಸಿರುವ ಖದೀಮರು ಪೆಟ್ರೋಲ್ ಕಳ್ಳತನ ನಡೆಸಿದ್ದಾರೆ.

    ಮೊದಲೇ ಕೋವಿಡ್ ಸಂಕಷ್ಟದಲ್ಲಿ ಜನ ಪರದಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಾಗಿ ವಾಹನಗಳಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಇಂತಹದರಲ್ಲಿ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ. ಪೊಲೀಸರು ಈ ಕೂಡಲೇ ದುಷ್ಕರ್ಮಿಗಳ ಪತ್ತೆ ಹಚ್ಚುವಂತೆ ಹಾಗೂ ರಾತ್ರಿ ವೇಳೆ ಬೀಟ್ ಪೊಲೀಸರ ಗಸ್ತು ಹೆಚ್ಚಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.

    ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ: ಪ್ರಧಾನ್

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ: ಪ್ರಧಾನ್

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವಾಗಲೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆಗೆ ಕಾಂಗ್ರೆಸ್ ಹಾಗೂ ಆರ್ಥಿಕ ಪರಿಸ್ಥಿತಿ ಕಾರಣ. ಯುಪಿಎ ಸರ್ಕಾರ ಇದ್ದಾಗ ತೈಲ ಬಾಂಡ್‍ಗಳ ಮೇಲೆ ಕೋಟ್ಯಂತರ ರೂ. ಸಾಲ ಮಾಡಿತ್ತು. ಈ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ. ಬಿಜೆಪಿ ಸರ್ಕಾರ ಈ ಸಾಲವನ್ನು ಬಡ್ಡಿ ಸಮೇತ ತೀರಿಸುತ್ತಿದೆ. ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವುದಕ್ಕೆ ಇದು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ತೈಲ ದರ ಹೆಚ್ಚಳವಾಗಿದೆ. ನಾವು ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತೇವೆ. ಇದು ಭಾರತದಲ್ಲಿ ಇಂಧನ ಬೆಲೆ ಏರಿಕೆಯಾಗಲು ಪ್ರಮುಖ ಕಾರಣ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

    ಈ ಹಿಂದೆ ಸಹ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ್ದ ಅವರು, ಇಂಧನ ಬೆಲೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಸರ್ಕಾರ ಇತರೆ ಕಲ್ಯಾಣ ಯೋಜನೆಗಳಿಗೆ ಹಣವನ್ನು ಉಳಿತಾಯ ಮಾಡುತ್ತಿದೆ ಎಂದು ಅವರು ಹೇಳಿದ್ದರು.

    ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ಗಡಿ ದಾಟಿದ್ದು, ಈ ಕುರಿತು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇತ್ತಿಚೆಗೆ ಕಾಂಗ್ರೆಸ್ ಸಹ ಪೆಟ್ರೋಲ್ ಬಂಕ್‍ಗಳ ಮುಂದೆ ಪ್ರತಿಭಟನೆ ನಡೆಸಿದೆ. ಹೀಗಾಗಿ ಈ ಕುರಿತು ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.