Tag: ಬೆಲೆ

  • ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ

    ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ

    ನವದೆಹಲಿ: 2024ರ ಆರ್ಥಿಕ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ (Commercial Cylinder) ಬೆಲೆಗಳಲ್ಲಿ (Price) ಭಾರೀ ಇಳಿಕೆ ಕಂಡಿದ್ದು, 92 ರೂ. ರಷ್ಟು ಕಡಿತಗೊಳಿಸಲಾಗಿದೆ.

    ಈ ಹಿಂದೆ ಮಾರ್ಚ್‍ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಗಳನ್ನು 350 ರೂ. ಹೆಚ್ಚಿಸಿತ್ತು. ಆದರೆ ಶನಿವಾರ 92 ರೂ. ಇಳಿಕೆಯಾಗಿದೆ.

    ಆದರೆ ದೇಶೀಯ ಎಲ್‍ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಕಳೆದ ತಿಂಗಳು ಕೇಂದ್ರವು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿತ್ತು. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ 2,028 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ (Bengaluru) ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯೂ 1115.5 ರೂ. ಆಗಿದೆ. ಮುಂಬೈನಲ್ಲಿ 1112.5 ರೂ., ಕೋಲ್ಕತ್ತಾದಲ್ಲಿ 1,129 ಹಾಗೂ ಚೆನ್ನೈನಲ್ಲಿ 1118.5 ರೂ.ನಲ್ಲಿ ಖರೀದಿಸಬಹುದಾಗಿದೆ. ಇದನ್ನೂ ಓದಿ: ಕೊನೆ ಗಳಿಗೆ ಕಸರತ್ತಿನಲ್ಲಿ ಸಿದ್ದರಾಮಯ್ಯ, ಡಿಕೆಶಿ ಆಟ- 45 ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಪಟ್ಟು

  • Special- ‘ಆಸ್ಕರ್’ ಪ್ರಶಸ್ತಿ ಮೌಲ್ಯ ಕೇವಲ ರೂ.82: ಅಚ್ಚರಿಯಾದರೂ ಸತ್ಯ

    Special- ‘ಆಸ್ಕರ್’ ಪ್ರಶಸ್ತಿ ಮೌಲ್ಯ ಕೇವಲ ರೂ.82: ಅಚ್ಚರಿಯಾದರೂ ಸತ್ಯ

    ಗತ್ತಿನಾದ್ಯಂತ ಸದ್ಯ ಆಸ್ಕರ್ (Oscar) ಪ್ರಶಸ್ತಿಯ ಬಗ್ಗೆಯೇ ಮಾತನಾಡಲಾಗುತ್ತಿದೆ. ಭಾರತಿಯ ಕಾಲಮಾನದ ಪ್ರಕಾರ ಮಾರ್ಚ್ 13ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಒಂದು ತಿಂಗಳಿಂದ ನಿರಂತರವಾಗಿ ಅಕಾಡೆಮಿಯು ಹಗಲಿರುಳು ಕೆಲಸ ಮಾಡುತ್ತಿದೆ. ಜಗತ್ತಿನ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರಶಸ್ತಿ ಕುರಿತಾಗಿ ಹಲವು ವಿಶೇಷ ಸಂಗತಿಗಳನ್ನು ಹುಡುಕಿ, ಆ ಕುರಿತು ಪ್ರಚಾರ ಮಾಡಲಾಗುತ್ತಿದೆ.

    ಆಸ್ಕರ್ ಪ್ರಶಸ್ತಿ ಮೌಲ್ಯದ (Price) ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಪ್ರಶಸ್ತಿಯನ್ನು ಪ್ರಶಸ್ತಿ ವಿಜೇತರು ಯಾರಾದರೂ ಮಾರಲು ಬಯಸಿದರೆ, ಅದು ಮೌಲ್ಯ ಕೇವಲ 82 ರೂಪಾಯಿಗಳು ಮಾತ್ರ. ನಿಜ. ಆಸ್ಕರ್ ಅಕಾಡೆಮಿಯೇ ಈ ಮೌಲ್ಯವನ್ನು ನಿರ್ಧಾರ ಮಾಡಿದೆ. ಅಲ್ಲದೇ, ಈ ಪ್ರಶಸ್ತಿಯನ್ನು ಬೇರೆಲ್ಲೂ ಮಾರುವಂತಿಲ್ಲ. ಮಾರುವುದಾದರೆ ಅದನ್ನು ಅಕಾಡೆಮಿ ವಾಪಸ್ಸು ಮಾರಬೇಕು. ಈ ಕಾರಣದಿಂದಾಗಿಯೇ ಅತೀ ಕಡಿಮೆ ಬೆಲೆಯನ್ನು ನಿಗದಿ ಮಾಡಿದೆ. ಈ ಪ್ರಶಸ್ತಿಯನ್ನೂ ಯಾರು ಮಾರಬಾರದು ಎನ್ನುವ ಉದ್ದೇಶವೂ ಇದರ ಹಿಂದಿದೆ. ಪ್ರಶಸ್ತಿ ನೀಡುವಾಗಲೇ ವಿಜೇತರು ಒಪ್ಪಂದಕ್ಕೆ ಸಹಿ ಕೂಡ ಮಾಡಬೇಕಾಗುತ್ತದೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಮಾರಾಟದ ಬೆಲೆ 82 ರೂಪಾಯಿಗಳಾದರೆ, ಅದನ್ನು ತಯಾರಿಸುವ ವೆಚ್ಚ ಬರೋಬ್ಬರು 32,813 ರೂಪಾಯಿಗಳಾಗಿರುತ್ತದೆ. 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿ ಇದಾಗಿದ್ದು, ತಲೆ ಮೇಲೆ ಕೂದಲು ಇಲ್ಲದ ವ್ಯಕ್ತಿಯೊಬ್ಬ ಕತ್ತಿಯೊಂದನ್ನು ಹಿಡಿದುಕೊಂಡು ನಿಂತಿರುವ ಮೂರ್ತಿ ಅದಾಗಿದೆ. ಪ್ರಶಸ್ತಿ ವಿಜೇತರಿಗೆ ಯಾವುದೇ ಗೌರವ ಮೊತ್ತವನ್ನು ನೀಡದೇ ಕೇವಲ ಈ ಮೂರ್ತಿಯನ್ನು ಮಾತ್ರ ನೀಡಲಾಗುತ್ತದೆ.

    ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕಾದ (America) ಲಾಸ್ ಏಂಜಲ್ಸ್‍  ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿದ್ದು, ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈಗಾಲೇ ಆರ್.ಆರ್.ಆರ್ ಸಿನಿಮಾ ತಂಡ ಕಾರ್ಯಕ್ರಮ ನೀಡುವುದಕ್ಕಾಗಿ ಅಮೆರಿಕಾಗೆ ತೆರಳಿದೆ.

  • ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

    ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

    ನವದೆಹಲಿ: ಮಾರ್ಚ್ ತಿಂಗಳ ಮೊದಲ ದಿನದಂದೇ ಎಲ್‍ಪಿಜಿ ಸಿಲಿಂಡರ್ (Cylinder)  ಗ್ರಾಹಕರಿಗೆ ಕಹಿ ಸುದ್ದಿ ಸಿಕ್ಕಿದೆ. ಭಾರೀ ದರ ಏರಿಕೆಯಾಗುವ ಮೂಲಕ ಜನಸಮಾನ್ಯರಿಗೆ ಬಿಸಿಯಾಗಿದೆ. ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‍ಗೆ 350.50 ಹಾಗೂ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‍ಗೆ 50 ರೂ.ರಷ್ಟು ಹೆಚ್ಚಿಸಿವೆ.

    ಪರಿಷ್ಕೃತ ದರಗಳ ಪ್ರಕಾರ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳು ದೆಹಲಿಯಲ್ಲಿ (Delhi) ಪ್ರತಿ ಯೂನಿಟ್‍ಗೆ 2,119.50 ರೂ. ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಯೂನಿಟ್‍ಗೆ 1,103 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ (Bengaluru) ಗೃಹಬಳಕೆಯ ಸಿಲಿಂಡರ್ ಬೆಲೆ (Cooking Gas Cylinder) 1,055.50 ರೂ. ಆಗಿದೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಬಾಡೂಟ ಪಾಲಿಟಿಕ್ಸ್

    LPG

    ಈ ಎಲ್ಲಾ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿದೆ. ಈ ವರ್ಷದಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಏರಿಕೆಯಾಗಿದೆ. ಇದಕ್ಕೂ ಮುನ್ನ ಜನವರಿ 1 ರಂದು ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‍ಗೆ 25 ರೂ. ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಪತ್ನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗೆಳೆಯ ಮಟಾಶ್!

  • ಆಭರಣ ಪ್ರಿಯರಿಗೆ ದುಬಾರಿ ಶಾಕ್..!

    ಆಭರಣ ಪ್ರಿಯರಿಗೆ ದುಬಾರಿ ಶಾಕ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ನವದೆಹಲಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಯೂನಿಟ್‍ಗೆ 2.63 ರೂ. ರಷ್ಟು ಹೆಚ್ಚಿಸಲಾಗಿದೆ.

    ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಬಿಡಲಾಗುತ್ತೆ. ಈ ಹಿನ್ನೆಲೆ ಪೈಪ್‍ಲೈನ್ ಅಡುಗೆ ಅನಿಲಗಳ ಬೆಲೆಯನ್ನು ಆಗಾಗ ಹೆಚ್ಚಿಸಲಾಗುವುದು.  ಜುಲೈ 26 ರಂದು ಪೈಪ್‍ಲೈನ್ ಅಡುಗೆ ಅನಿಲ ಪರಿಷ್ಕರಿಸಿ ಪ್ರತಿ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 2.1 ರೂ. ಹೆಚ್ಚಿಸಲಾಗಿತ್ತು. ಆದರೆ ಬೆಲೆ ಹೆಚ್ಚಿಸಿ 2 ವಾರವೂ ಇನ್ನೂ ಕಳೆದಿಲ್ಲ. ಈಗಾಗಲೇ ಮತ್ತೆ 2.63 ರೂ. ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ 

    ಈ ಕುರಿತು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್(IGL) ಟ್ವೀಟ್ ಮಾಡಿದ್ದು, ಈ ಹಿಂದೆ ಪೈಪ್‍ಲೈನ್ ಅಡುಗೆ ಅನಿಲ ರೂ. 47.96 ರಷ್ಟಿತ್ತು. ಆದರೆ ದೆಹಲಿಯಲ್ಲಿ ಪೈಪ್ ಮೂಲಕ ಅಡುಗೆ ಅನಿಲದ ಬೆಲೆ ಈಗ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ ರೂ 50.59 ಆಗಲಿದೆ. ಈ ಹೆಚ್ಚಳವು ‘ಇನ್‍ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

    ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‍ನಲ್ಲಿ ಪಿಎನ್‍ಜಿಗೆ ಪ್ರತಿ ಎಸ್‍ಸಿಎಂಗೆ 50.46 ರೂ. ವೆಚ್ಚವಾಗಲಿದೆ. ಆದರೆ ಗುರುಗ್ರಾಮದಲ್ಲಿ ಪ್ರತಿ ಎಸ್‍ಸಿಎಂಗೆ 48.79 ರೂ. ಹರಿಯಾಣದ ಕರ್ನಾಲ್ ಮತ್ತು ರೇವಾರಿಯಲ್ಲಿ ಪ್ರತಿ ಎಸ್‍ಸಿಎಂಗೆ 49.40 ರೂ ಮತ್ತು ಮುಜಫರ್‍ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಪಿಎನ್‍ಜಿ ಪ್ರತಿ ಎಸ್‍ಸಿಎಂಗೆ 53.97 ರೂ. ಉತ್ತರ ಪ್ರದೇಶದ ಕಾನ್ಪುರ ಮತ್ತು ಫತೇಪುರ್‌ನಲ್ಲಿ ಗ್ಯಾಸ್‍ಗೆ 53.10 ರೂ. ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಭಿನ್ನವಾಗಿರುತ್ತವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ

    ಈ ಹಿಂದೆ ಆಗಸ್ಟ್ 3 ರಂದು ಮುಂಬೈನಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‍ಜಿ) ಬೆಲೆಯನ್ನು ಪ್ರತಿ ಯೂನಿಟ್‍ಗೆ 4 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ನಗರದ ಅನಿಲ ಕಂಪನಿಗಳಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.18ರಷ್ಟು ಏರಿಕೆ ಮಾಡುವುದಾಗಿ ಉಂIಐ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ, ದೇಶದ ಇತರ ನಗರಗಳಲ್ಲಿ ಸಿಎನ್‍ಜಿ ಮತ್ತು ಪಿಎನ್‍ಜಿ ಬೆಲೆಗಳು ಹೆಚ್ಚಾಗಲು ಪ್ರಾರಂಭಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಹಬ್ಬಕ್ಕೆ ಕೆಆರ್ ಮಾರ್ಕೆಟ್‍ನಲ್ಲಿ ಖರೀದಿ ಭರಾಟೆ – ಹೂ, ಹಣ್ಣು, ಕಾಯಿ ರೇಟ್ ದುಬಾರಿ

    ಹಬ್ಬಕ್ಕೆ ಕೆಆರ್ ಮಾರ್ಕೆಟ್‍ನಲ್ಲಿ ಖರೀದಿ ಭರಾಟೆ – ಹೂ, ಹಣ್ಣು, ಕಾಯಿ ರೇಟ್ ದುಬಾರಿ

    ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ನಲ್ಲಿ ಬೆಂಗಳುರು ಮಂದಿ ಹೂವು, ಹಣ್ಣು ಖರೀದಿಯಲ್ಲಿ ನಿರತರಾಗಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆನೆ ಜನ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೂವು, ಹಣ್ಣು, ತರಕಾರಿ, ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. ಕೆಆರ್ ಮಾರ್ಕೆಟ್ ಮುಖ್ಯರಸ್ತೆಯ ಎರಡು ಬದಿಗಳಲ್ಲೂ ಹಬ್ಬದ ವ್ಯಾಪಾರ ಜೋರಾಗಿತ್ತು. ಮುಖ್ಯ ರಸ್ತೆಯಲ್ಲೇ ವ್ಯಾಪಾರ ನಡೀತಿರುವ ಕಾರಣ ಕೆಆರ್ ಮಾರ್ಕೆಟ್ ಮುಖ್ಯ ರಸ್ತೆ ಬ್ಲಾಕ್ ಆಗಿತ್ತು.

    ವರಮಹಾಲಕ್ಷ್ಮಿ ಹಬ್ಬಕ್ಕೆ ಹಿನ್ನೆಲೆಯಲ್ಲಿ 30 ರಿಂದ 40% ನಷ್ಟು ಹೂವು ಹಣ್ಣುಗಳ ಬೆಲೆ ಏರಿಕೆಯಾಗಿದೆ. ಸೇವಂತಿಗೆ ಹೂವು ಕೆ.ಜಿಗೆ 320 ರೂ. (ಒಂದು ಮೊಳ – 80), ಮಲ್ಲಿಗೆ ಒಂದು ಕೆ.ಜಿಗೆ 2350 ರಿಂದ 2450 ರೂ., ಕನಕಾಂಬರ- ಒಂದು ಕೆಜಿ 4000 ರೂ., ಗುಲಾಬಿ ಹೂವು ಕೆ.ಜಿ 320-350 ರೂ., ಮಲ್ಲಿಗೆ ಕೆ.ಜಿಗೆ 350 ರೂ. (ಒಂದು ಮೊಳ 100 ರೂ.), ಕಮಲ ಹೂ ಜೋಡಿ 80-100 ರೂ., ಬಟನ್ಸ್ ಹೂವು ಕೆ.ಜಿ 300 ರೂ. ಮಲ್ಲೆ ಹೂವು ಕೆ.ಜಿ 320 ರೂ. (ಒಂದು ಮೊಳ – 60 ರೂ.) ಆಗಿದೆ.

    ಬಾಳೆ ಹಣ್ಣು ಕೆ.ಜಿ 120-150 ರೂ., ಸೀತಾಫಲ ಕೆ.ಜಿ 200 ರೂ., ಸೇಬು ಕೆ.ಜಿ 320-460 ರೂ., ಮೂಸಂಬಿ ಕೆ.ಜಿ 130-150 ರೂ., ದಾಳಿಂಬೆ ಕೆಜಿ 320 ರೂ., ದ್ರಾಕ್ಷಿ 400 ರೂ., ಅಡಿಕೆ ಎಲೆ 1 ಕಟ್ಟಿಗೆ 100 ರೂ., ಅನಾನಸ್ 1ಕ್ಕೆ 80-100 ರೂ., ಅಂಬೂರ್ ಮಲ್ಲಿಗೆ ಞg- 1200 ರೂಪಾಯಿ ಆಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ

    ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಬಲು ಜೋರಾಗಿದೆ. ಹೂವು, ಹಣ್ಣುಗಳ ಬೆಲೆಯೇರಿಕೆಯಾಗಿದ್ದರೂ ಖರೀದಿ ಮಾತ್ರ ಹಿಂದೆ ಬಿದ್ದಿಲ್ಲ. ಖರೀದಿ ಬಂದಿರುವ ಜನಸಾಗರದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಅಜ್ಜಂದಿರು ಬಳಸುವ ಪಟಾಪಟಿ ಚಡ್ಡಿಯ ಬೆಲೆ ಇಂಟರ್ನೆಟ್‍ನಲ್ಲಿ ಬರೋಬ್ಬರಿ 15,450 ರೂಪಾಯಿ!

    ಹಿಂದಿನ ಕಾಲದಿಂದಲೂ ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅಜ್ಜಂದಿರು ಪಟಾಪಟಿ ಚಡ್ಡಿ ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಪುರುಷರಿಗೆಂದೇ ಕಲರ್‌ಫುಲ್, ವೆಸ್ಟ್ರನ್, ಸ್ಟೈಲಿಷ್, ವೆರೈಟಿ ಡಿಸೈನರ್ ಚಡ್ಡಿಗಳು ಮಾರುಕಟ್ಟೆಗೆ ಬಂದಿದೆ. ಅಲ್ಲದೇ ಇವುಗಳಿಗೆ ಹೆಚ್ಚಾಗಿ ಬೇಡಿಕೆ ಇದೆ. ಈ ಮಧ್ಯೆ ಆನ್‍ಲೈನ್‍ನಲ್ಲಿ ಪಟ್ಟಾಪಟ್ಟಿ ಚಡ್ಡಿ ಬೆಲೆ ಸಖತ್ ಸದ್ದು ಮಾಡುತ್ತಿದೆ.

    ಹೌದು, ಒಂದು ಸ್ಮಾರ್ಟ್ ಫೋನ್‍ನಷ್ಟೇ ದುಬಾರಿ ಬೆಲೆ ಇರುವ ಪಟ್ಟಾಪಟ್ಟಿ ಚಡ್ಡಿಯನ್ನು ಆನ್‍ಲೈನ್‍ನಲ್ಲಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಒಂದು ಪಟಾಪಟಿ ಚಡ್ಡಿಯ ಬೆಲೆ 200-300 ರೂಪಾಯಿಯಷ್ಟಿರುತ್ತದೆ. ಆದರೆ ಆನ್‍ಲೈನ್‍ನಲ್ಲಿ ಇದಕ್ಕೆ 15,450 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಈ ವಿಚಾರ ಇದೀಗ ಭಾರೀ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಆಂಜನೇಯನ ದೇಗುಲದ ಮುಂದೆಯೇ ಬಂದು ಪ್ರಾಣಬಿಟ್ಟ ಕೋತಿ!

    ಪಟ್ಟಾಪಟ್ಟಿ ಚಡ್ಡಿ ಬೆಲೆಯ ಸ್ಕ್ರೀನ್‍ಶಾಟ್ ಅನ್ನು ಅರ್ಷದ್ ವಹೀದ್ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಷ್ಟೊಂದು ಬೆಲೆ ಏಕೆ ಎಂದು ಪ್ರಶ್ನಿಸಿದ್ದಾರೆ. ಫೋಟೋದಲ್ಲಿ ನೀಲಿ ಮತ್ತು ಹಸಿರು ಪಟ್ಟೆಗಳು ಕೆಂಪು ಬಣ್ಣದ ಗೆರೆಗಳಿದ್ದು, ಶರ್ಟ್ ಮೇಲೆ ಚೆಕ್ಕರ್ ಪ್ರಿಂಟ್ ಇದೆ. ಅಲ್ಲದೇ ಇದು ಅದೇ ಹಸಿರು ಚೆಕ್ಕರ್ ಪ್ರಿಂಟ್ ಶಾರ್ಟ್ರ್ ನೊಂದಿಗೂ ಲಭ್ಯವಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಖತ್ ಟ್ರೋಲ್ ಆಗುತ್ತಿದೆ. ಅನೇಕ ಮಂದಿ ಇದಕ್ಕೆ 15 ಸಾವಿರ ರೂಪಾಯಿ ಕೊಟ್ಟು ಖರೀದಿಸುವುದು ಹುಚ್ಚುತನ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಿಫ್ಟ್‌ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

    ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

    ನವದೆಹಲಿ: ದಿನಬಳಕೆಯ ವಸ್ತುಗಳ ಮೇಲೆ ಜೆಎಸ್‍ಟಿ ಶೇ.5ರಷ್ಟು ಹೆಚ್ಚಳ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ದುನಿಯಾ ದುಬಾರಿ ಆಗಲಿದೆ.

    meat ban

    ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನು, ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ. ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಾಗಲಿದೆ. ಜುಲೈ 18 ರಿಂದಲೇ ಜಿಎಸ್‍ಟಿ ಅನ್ವಯವಾಗಲಿದೆ. ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ ಅಧಿಸೂಚನೆ ಹೊರಡಿಸಿದೆ.

    ನಿತ್ಯದ ಬಾಡಿಗೆ 1,000ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಇದ್ದ ವಿನಾಯಿತಿ ರದ್ದಾಗಿ, ಇನ್ನೂ ಶೇ.12ರಷ್ಟು ತೆರಿಗೆ ಬೀಳಲಿದೆ. ದಿನಕ್ಕೆ 5000 ರೂ.1ಗಿ0ತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೆಂದ್ರಗಳು, ಮಾಸಿಕ 2500ರೂ.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್‍ಟಿ ಜಾರಿಯಾಗಲಿದೆ.

    ಚರ್ಮದ ಸಿದ್ಧ ಉತ್ಪನ್ನಗಳು, ಟೈಲರಿಂಗ್, ಜವಳಿ ಸೇವೆಗಳು, ಅಂಚೆ ಇಲಾಖೆ ಬುಕ್‌ಪೋಸ್ಟ್ 10 ಗ್ರಾಂಗಿಂತ ಕಡಿಮೆ ಇರುವ ಲಕೋಟಿ, ಚೆಕ್‍ಬುಕ್‍ಗಳ ಬೆಲೆ ಕೂಡ ಏರಿಕೆಯಾಗಲಿದೆ. ನಿತ್ಯ 5,000ರೂ.ಗಿಂತ ಹೆಚ್ಚಿನ ಶುಲ್ಕವಿರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‍ಗೆ ಶೇ.5ರಷ್ಟು ಜಿಎಸ್‍ಟಿ ಜಾರಿಯಾಗುವ ಕಾರಣ ಇದು ಕೂಡ ದುಬಾರಿಯಾಗಲಿದೆ. ಅಂಚೆ ಇಲಾಖೆಯ ಕೆಲವು ಸೇವೆಗಳು ಸಹ ದುಬಾರಿಯಾಗಲಿದೆ. ಇದನ್ನೂ ಓದಿ: ಚಾಕು ಹಾಕಿದವರಿಗೆ ಪರಿಹಾರ ಕೊಡೋಕೆ ಹೋಗ್ತೀವಾ: ಯತ್ನಾಳ್‌ ಪ್ರಶ್ನೆ

    ಪ್ಯಾಕ್ ಮಾಡಿದ ಬ್ರ್ಯಾಡೆಂಡ್ ಭೂ ಪಟ, ಚಾರ್ಟ್, ಅಟ್ಲಾಸ್, ಸೋಲಾರ್ ವಾಟರ್ ಹೀಟರ್, ಮುದ್ರಣ, ಬರಹ/ಚಿತ್ರಕಲೆಯ ಇಂಕ್, ಎಲ್‍ಇಡಿ ಬಲ್ಬ್, ಎಲ್‍ಇಡಿ ಲ್ಯಾಂಪ್ ಬೆಲೆ ಕೂಡ ಹೆಚ್ಚಾಗಲಿದೆ. ಇನ್ನೂ ಬ್ಲಡ್ ಬ್ಯಾಂಕ್‍ಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿ ರದ್ದುಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದು ವಾರದೊಳಗೆ ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ

    ಒಂದು ವಾರದೊಳಗೆ ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಸೂಚನೆ

    ನವದೆಹಲಿ: ಅಡುಗೆ ಎಣ್ಣೆಯ ಬೆಲೆಯು ಒಂದು ವಾರದಲ್ಲಿ ಪ್ರತಿ ಲೀಟರ್‌ಗೆ 10 ರಿಂದ 15 ರೂಪಾಯಿವರೆಗೆ ಇಳಿಕೆಯಾಗಲಿದೆ. ಒಂದು ವಾರದಲ್ಲಿ ಎಂಆರ್‌ಪಿಯನ್ನು ಇಳಿಸುವಂತೆ ಅಡುಗೆ ಎಣ್ಣೆ ತಯಾರಿಕ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

    ದೇಶಕ್ಕೆ ಅಗತ್ಯವಿರುವ ಅಡುಗೆ ಎಣ್ಣೆಯಲ್ಲಿ ಶೇ 60ರಷ್ಟು ವಿದೇಶಗಳಿಂದ ಆಮದಾಗುತ್ತದೆ. ಅಡುಗೆ ಎಣ್ಣೆ ತಯಾರಕ ಕಂಪನಿಗಳು ಹಿಂದಿನ ತಿಂಗಳು ಎಂಆರ್‌ಪಿಯನ್ನು ಲೀಟರ್‌ಗೆ 10 ರಿಂದ 15ರವರೆಗೆ ತಗ್ಗಿಸಿದ್ದವು. ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯು ಇನ್ನಷ್ಟು ಕಡಿಮೆಯಾಗಿರುವ ಹಿನ್ನೆಲೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಪ್ರಮುಖ ಕಂಪನಿಗಳು, ತಯಾರಕರೊಂದಿಗೆ ಈ ವಿಚಾರವಾಗಿ ಸಭೆ ನಡೆಸಿದ್ದಾರೆ.  ಇದನ್ನೂ ಓದಿ: ಹಾವೇರಿಯಲ್ಲಿ ನಿರಂತರ ಮಳೆ – ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸಂಪರ್ಕ ಕಡಿತ

    ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಗಳ ಬೆಲೆ ಒಂದು ವಾರದಲ್ಲಿ ಶೇಕಡ 10ರಷ್ಟು ಇಳಿದಿದೆ. ಹೀಗಾಗಿ ಎಂಆರ್‌ಪಿಯನ್ನು ಇಳಿಸಬೇಕು ಎಂದು ಹೇಳಿದ್ದೇವೆ. ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಎಂಆರ್‌ಪಿಯನ್ನು ಮುಂದಿನ ವಾರದೊಳಗೆ ಲೀಟರಿಗೆ 10ರೂ. ರವರೆಗೆ ಇಳಿಸುವುದಾಗಿ ಪ್ರಮುಖ ತಯಾರಕರು ಭರವಸೆ ನೀಡಿದ್ದಾರೆ. ಈ ಎಣ್ಣೆಗಳ ಬೆಲೆ ಇಳಿಕೆಯಾದ ನಂತರ, ಇತರ ಅಡುಗೆ ಎಣ್ಣೆಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ ಎಂದು ತಿಳಿಸಿದ್ದಾರೆ.

    ಒಂದೇ ಬ್ರ್ಯಾಂಡ್‍ನ ಎಣ್ಣೆಗಳ ಬೆಲೆಯು ದೇಶದಾದ್ಯಂತ ಏಕರೂಪತೆ ಇರಬೇಕು ಎಂದು ತಯಾರಕರಿಗೆ ಹೇಳಲಾಗಿದೆ. ಇದಕ್ಕೆ ಕಂಪನಿಗಳು ಒಪ್ಪಿಗೆ ಸೂಚಿಸಿವೆ ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ನುಸುಳಿದ ಪಾಕಿಸ್ತಾನಿ ಮೀನುಗಾರರು- ನಾಲ್ವರ ಬಂಧನ

    Live Tv
    [brid partner=56869869 player=32851 video=960834 autoplay=true]

  • ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್ – ಇದರ ವಿಶೇಷತೆ ಏನು ಗೊತ್ತಾ?

    ನವದೆಹಲಿ: ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ತೋತಪುರಿ, ರಸಪುರಿ, ಸೇಂದೂರ, ಬದಾಮಿ, ಇತರೆ ತಳಿಯ ಮಾವಿನ ಹಣ್ಣುಗಳನ್ನು ನೀವು ಕೇಳಿರಬಹುದು. ಆದರೆ ಇದೀಗ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹೌದು ಜಪಾನ್‍ನಲ್ಲಿ ಮಿಯಾಜಾಕಿ ಎಂಬ ಮಾವಿನ ತಳಿಯನ್ನು ಬೆಳೆಸಲಾಗುತ್ತದೆ. ಭಾರತದಲ್ಲಿ ಈ ಮಾವಿನ ಹಣ್ಣನ್ನು ಬೆಳೆಯುವುದು ಬಹಳ ಅಪರೂಪವಾಗಿದೆ. ಹಾಗಾಗಿ ಈ ಮಾವಿನ ಹಣ್ಣಿನ ಬೆಳೆಯನ್ನು ಹೆಚ್ಚಿಸಬೇಕು ಎಂದು ಹರ್ಷ್ ಗೋಯೆಂಕಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ಟಿಲಿನಿಂದ ಎಡವಿ ಬಿದ್ದ ಲಾಲೂ ಪ್ರಸಾದ್ ಯಾದವ್ – ಭುಜದ ಮೂಳೆ ಮುರಿತ

    ರುಬಿ ಬಣ್ಣದ ಜಪಾನ್ ಮಿಯಾಜಾಕಿ ತಳಿಯ ಈ ಮಾವು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಹೇಳಲಾಗುತ್ತದೆ. ಈ ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ 2.70 ಲಕ್ಷ ರೂ. ಆಗಿದೆ. ಮಧ್ಯಪ್ರದೇಶದ ಜಬಲ್‍ಪುರದ ರೈತ ಪರಿಹಾರ್ ಅವರು ಮಿಯಾಜಾಕಿ ತಳಿಯ ಎರಡು ಮಾವಿನ ಮರಗಳನ್ನು ಬೆಳೆಸಿದ್ದು, ಈ ಮಾವನ್ನು ರಕ್ಷಿಸಲು ಮೂರು ಭದ್ರತಾ ಸಿಬ್ಬಂದಿ ಮತ್ತು 6 ನಾಯಿಗಳನ್ನು ಸಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ

    ಇದು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದಾಗಿದೆ. ಕಳೆದ ವರ್ಷವೂ ಈ ಹಣ್ಣಿನ ಬೆಲೆ ಕಿಲೋಗ್ರಾಂಗೆ 2.70 ಲಕ್ಷಕ್ಕೆ ಮಾರಾಟವಾಗಿತ್ತು.

    Live Tv
    [brid partner=56869869 player=32851 video=960834 autoplay=true]