Tag: ಬೆಲೆ

  • ನೋಕಿಯಾದ 6.1 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ನೋಕಿಯಾದ 6.1 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ: ನೋಕಿಯಾ 6.1 ಸ್ಮಾರ್ಟ್ ಫೋನಿನ ಬೆಲೆ 1,500 ರೂ. ಇಳಿಕೆಯಾಗಿದೆ. 6.1 ಪ್ಲಸ್ ಮಾದರಿಯ ಫೋನ್ ಭಾರತದಲ್ಲಿ ಈ ತಿಂಗಳು ಬಿಡುಗಡೆಯಾಗುವ ಬೆನ್ನಲ್ಲೇ 6.1 ಫೋನಿನ ಬೆಲೆ ದಿಢೀರ್ ಇಳಿಕೆಯಾಗಿದೆ.

    ನೋಕಿಯಾ 3.1 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಫುಲ್ ಹೆಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16 ಎಂಪಿ ಕ್ಯಾಮೆರಾ ಇದೆ. ಬ್ಲ್ಯಾಕ್ ಕಾಪರ್, ವೈಟ್ ಐರನ್ ಹಾಗೂ ಬ್ಲೂ ಗೋಲ್ಡ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ.

    ಬೆಲೆ ಎಷ್ಟು?
    ಈ ಮೊದಲು 3ಜಿಬಿ ರ‍್ಯಾಮ್​/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 16,999 ರೂ. ಬೆಲೆ ನಿಗದಿಯಾಗಿತ್ತು, ಸದ್ಯ ಈಗ 15,599 ರೂಪಾಯಿ ಬೆಲೆ ನಿಗದಿಪಡಿಸಿದೆ. ಹಾಗೆಯೇ 4 ಜಿಬಿ ರ‍್ಯಾಮ್​/ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಈ ಮೊದಲು 18,999 ರೂ. ಆಗಿದ್ದರೆ ಈಗ 17,499 ರೂ. ನಿಗದಿಪಡಿಸಿದೆ. ನೋಕಿಯಾ ಸ್ಟೋರ್, ಫ್ಲಿಪ್‍ಕಾರ್ಟ್ ಹಾಗೂ ಅಮೇಜಾನ್ ಶಾಪಿಂಗ್ ತಾಣದಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

    ನೋಕಿಯಾ 6.1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 148.8 x 75.8 x 8.2 ಮಿ.ಮೀ., 172 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.5 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (1080X1920 ಪಿಕ್ಸೆಲ್, 16:9 ಅನುಪಾತ 403 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 630, ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 508, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3ಜಿಬಿ ರ‍್ಯಾಮ್​/32 ಜಿಬಿ ಆಂತರಿಕ ಮೆಮೊರಿ ಹಾಗೂ 4ಜಿಬಿ ರ‍್ಯಾಮ್​/ 64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, ಫಿಂಗರ್ ಪ್ರಿಂಟ್ ಸೆನ್ಸರ್, 3,000 ಎಂಎಎಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವದಲ್ಲೇ ಫಸ್ಟ್..ಚೆಂದುಳ್ಳಿ ಚೆಲುವೆಯರ ಗುಪ್ತಾಂಗದಿಂದ ಬಿಯರ್ ತಯಾರಿ!

    ವಿಶ್ವದಲ್ಲೇ ಫಸ್ಟ್..ಚೆಂದುಳ್ಳಿ ಚೆಲುವೆಯರ ಗುಪ್ತಾಂಗದಿಂದ ಬಿಯರ್ ತಯಾರಿ!

    ಪೋಲಂಡ್ : ಬೀರ್ ಪ್ರಿಯರು ಪ್ರತಿಬಾರಿ ಕುಡಿಯುವಾಗ ಹೊಸ ಬ್ರ್ಯಾಂಡ್ ಹುಡುಕುತ್ತಿರುತ್ತಾರೆ. ಕೆಲ ಪಡ್ಡೆ ಹುಡುಗರು ಮೊದಲ ಪೆಗ್‍ನಲ್ಲಿಯೇ ಕಿಕ್ ಸಿಗಬೇಕೆಂಬ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ಪೋಲಂಡ್ ದೇಶದ ಪೊಲೀಶ್ ಎಂಬ ಕಂಪೆನಿ ವಿಶ್ವದಲ್ಲೇ ಮೊದಲ ಬಾರಿಗೆ ಚೆಂದುಳ್ಳಿ ಚೆಲುವೆಯರ ಗುಪ್ತಾಂಗ(ಯೋನಿ)ದಿಂದ ಹೊಸ ಮಾದರಿಯ ಬಿಯರ್ ತಯಾರಿಸಿದೆ. ಜುಲೈ 28 ರಂದು ಬಿಯರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕೆಲ ದಿನಗಳಿಂದ ಭಾರತದಲ್ಲಿಯೂ ಭಾರೀ ಚರ್ಚೆಯ ವಿಷಯವಾಗಿದೆ.

    ಜುಲೈ 28 ಪೊಲಿಶ್ ಸಿಟಿಯ ಮಾರುಕಟ್ಟೆಯಲ್ಲಿ ವಗಿನಾ ಬಿಯರ್ ಲಭ್ಯವಿದ್ದು, ಕಂಪೆನಿ ತನ್ನ ಮದ್ಯದ ಬಾಟಲಿಗೆ ‘ದ ಆರ್ಡರ್ ಆಫ್ ಯೋನಿ’ (The Order of Yoni) ಎಂಬ ಸಂಸ್ಕೃತ ಹೆಸರನ್ನಿಟ್ಟು ಮಾರುಕಟ್ಟೆಗೆ ಪರಿಚಯಿಸಿದೆ. ಮಹಿಳೆಯರ ಗುಪ್ತಾಂಗದಿಂದ ತಯಾರಿಸಿದ ಈ ಮದ್ಯದ ಬಾಟಲ್‍ಗಳಲ್ಲಿ ಎರಡು ಮಾದರಿ ಇದ್ದು, ಒಂದು ಬಾಟಲ್ ಆಫ್ ಲಸ್ಟ್ ಮತ್ತೊಂದು ಬಾಟಲ್ ಆಫ್ ಪ್ಯಾಶನ್ ಎರಡೂ ಬಾಟಲ್‍ಗಳು ಶೇ. 8ರಷ್ಟು ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುತ್ತವೆ. ಸದ್ಯ ಈ ಮದ್ಯದ ಪೊಲಿಶ್ ಸಿಟಿಯಲ್ಲಿ ಮಾತ್ರ ಲಭ್ಯವಿದ್ದು, ಒಂದು ಬಾಟಲ್ ಗೆ 25 ಜೊಲ್ಟಿ (466 ರೂ.) ಬೆಲೆ ನಿಗದಿ ಮಾಡಿದೆ.

    ಹೇಗೆ ತಯಾರುಗುತ್ತೆ?
    ಮೊದಲಿಗೆ ಚಲುವೆಯರ ಯೋನಿಯಿಂದ Gynaelogical Stick ಬಳಸಿ ಆಮ್ಲವನ್ನು ಹೊರ ತೆಗೆಯಲಾಗುತ್ತದೆ. ಹೊರ ಬಂದ ಆಮ್ಲದಿಂದ ಅದರಲ್ಲಿ ಸ್ತ್ರಿತನ (lactic acid bacteria) ವನ್ನು ಬೇರ್ಪಡಿಸಿ ಹಲವು ಹಂತಗಳಲ್ಲಿ ಶುದ್ಧೀಕರಿಸಲಾಗುತ್ತದೆ. ಶುದ್ಧೀಕರಿಸಿದ ಆಮ್ಲದಲ್ಲಿ ನೀರು ಸೇರಿದಂತೆ ಮದ್ಯ ತಯಾರಿಕೆಯಲ್ಲಿ ಬಳಸುವ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತದೆ. ಕೊನೆಗೆ ಅಲ್ಲಿ ತಯಾರದ ಮದ್ಯವನ್ನು Poznan lab ಗೆ ಕಲಸಿ ಗುಣಮಟ್ಟತೆಯನ್ನು ಖಾತ್ರಿ ಮಾಡಿಕೊಂಡ ನಂತರವೇ ಬಾಟಲ್ ಸೀಲ್ ಆಗುತ್ತದೆ.

    2016ರಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದ ಕಂಪೆನಿ 2018ರಲ್ಲಿ ಪೂರ್ಣಗೊಳಿಸಿದೆ. ತಾನು ಯಾವ ಚೆಲುವೆಯ ಯೋನಿಯಿಂದ ತಯಾರಿಸಿದ ಮದ್ಯವನ್ನು ಕುಡಿಯುತ್ತಿದ್ದೇನೆ ಎಂಬುವುದು ಆ ಗ್ರಾಹಕನಿಗೆ ತಿಳಿಯಲು ಬಾಟಲಿಯಲ್ಲಿ ಚೆಲುವೆಯ ಫೋಟೋವನ್ನು ಮುದ್ರಿಸಲಾಗಿದೆ. ಬಾಟಲ್ ಮೇಲೆ ಮದ್ಯ ಸೇವಿಸುವಾಗ ಯಾವ ರೀತಿಯ ಫೀಲ್ ಮಾಡಬೇಕೆಂಬುದುನ್ನು ಸಹ ರೊಮ್ಯಾಂಟಿಕ್ ಸಾಲುಗಳನ್ನು ಕಂಪೆನಿ ತನ್ನ ವೆಬ್‍ಸೈಟ್ ನಲ್ಲಿ ತಿಳಿಸಿದೆ.

    ಕೆಲ ಮಹಿಳೆಯರು ಮದ್ಯದ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಇದು ಸ್ತ್ರೀತನಕ್ಕೆ (Sick And Misogynistic) ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಕೆಲವರು ಈ ಮದ್ಯದ ಸೇವನೆಯಿಂದ ಪುರುಷರ ಆರೋಗ್ಯದಲ್ಲಿ ಏರಳಿತ ಉಂಟಾಗುವ ಸಾಧ್ಯತೆಗಳಿರಬಹುದು ಎಂದು ಭಯವನ್ನು ವ್ಯಕ್ತಪಡಿಸಿದ್ದಾರೆ.

    ಮದ್ಯ ತಯಾರಿಸುವಾಗ ಹಲವು ಹಂತಗಳಲ್ಲಿ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ (lactic acid bacteria) ನ್ನು ಬೇರ್ಪಡಿಸಲಾಗುತ್ತದೆ. ಬ್ಯಾಕ್ಟಿರಿಯಾ ಬೇರ್ಪಡಿಸಿದ ಬಳಿಕ ಮದ್ಯವನ್ನು ಪೂಜ್ನಾನ್ ಪ್ರಯೋಗಾಲಯದಲ್ಲಿ ಎರಡು ಬಾರಿ ಪರೀಕ್ಷಿಸಲಾಗುತ್ತದೆ. ಪ್ರಯೋಗಾಲಯದಿಂದ ಬಾಟಲ್‍ಗಳು ಕಂಪೆನಿ ಸೇರಿದಾಗ ಅದರ ದಿನಾಂಕ ಮತ್ತಿತರ ಲೇಬಲ್ ಹಾಕಲಾಗುವುದು. ಹೀಗೆ ಹತ್ತು ಹಲವು ವಿವಿಧ ಮಾರ್ಗಗಳಲ್ಲಿ ನಾವು ಪರಿಶೀಲಿಸುತ್ತೇವೆ ಎಂದು ಕಂಪೆನಿ ಜಾಹೀರಾತಿನಲ್ಲಿ ಹೇಳಿ ತನ್ನ ಉತ್ಪನ್ನದ ವಿರುದ್ಧ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ರೇಷ್ಮೆಗೆ ಬೆಂಬಲ ಬೆಲೆ ಬಗ್ಗೆ ಎಚ್‍ಡಿಕೆ ಚರ್ಚೆಯ ಬೆನ್ನಲ್ಲೇ ರೈತ ಆತ್ಮಹತ್ಯೆ!

    ರೇಷ್ಮೆಗೆ ಬೆಂಬಲ ಬೆಲೆ ಬಗ್ಗೆ ಎಚ್‍ಡಿಕೆ ಚರ್ಚೆಯ ಬೆನ್ನಲ್ಲೇ ರೈತ ಆತ್ಮಹತ್ಯೆ!

    ರಾಮನಗರ: ರೇಷ್ಮೆ ಬೆಳೆ ಬೆಲೆ ಕುಸಿತ ಹಿನ್ನೆಲೆಯಲ್ಲಿ ರೈತನೋರ್ವ ಕ್ರಿಮಿನಾಶಕ ಸೇವಿಸಿ, ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ಕಟಮಾನದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಕಟುಮಾನದೊಡ್ಡಿಯ ನಿವಾಸಿ ರೇಷ್ಮೆ ಬೆಳೆಗಾರ ಕೆಂಪಯ್ಯ ಮೃತ ದುರ್ದೈವಿ. ವಿವಿಧ ಬ್ಯಾಂಕ್ ಗಳಲ್ಲಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಕೆಂಪಯ್ಯ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಸೋಮವಾರ ರೇಷ್ಮೆ ಬೆಳೆಯ ಬೆಂಬಲ ಬೆಲೆಯ ಬಗ್ಗೆ ರಾಮನಗರದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಭೆ ನಡೆಸಿ ಚರ್ಚೆ ನಡೆಸಲಾಗಿತ್ತು. ಇಂದು ಮತ್ತೆ ಬೆಂಗಳೂರಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ರೈತರ ಜೊತೆ ಚರ್ಚೆ ನಡೆಸಲು ಮುಂದಾಗಿರುವ ಬೆನ್ನಲ್ಲೇ ರೈತ ಸಾವನ್ನಪ್ಪಿದ್ದಾರೆ.

    ಮೃತ ರೈತ ಕೆಂಪಯ್ಯ ನಿನ್ನೆ ತನ್ನ ಪತ್ನಿಯ ಬಳಿ ರೇಷ್ಮೆಗೂಡಿನ ಬೆಲೆ ಹೆಚ್ಚಳವಾಗುತ್ತೆ ಎಂದು ಹೇಳಿದ್ದರು. ಆದ್ರೆ ಬೆಲೆ ಹೆಚ್ಚಳ, ಬೆಂಬಲ ಬೆಲೆ ಯಾವುದು ಆಗಿರಲಿಲ್ಲ. 125 ಮೊಟ್ಟೆಯ ರೇಷ್ಮೆ ಬೆಳೆ ಬೆಳೆದಿರುವ ಮೃತ ಕೆಂಪಯ್ಯ ಇಂದು ರೇಷ್ಮೆಹುಳುಗಳನ್ನು ಚಂದ್ರಿಕೆಗೆ ಬಿಟ್ಟು ಗೂಡು ಮಾಡಿ ಮಾರಾಟಕ್ಕೆ ಮುಂದಾಗಬೇಕಿತ್ತು. ಆದ್ರೆ ರೇಷ್ಮೆ ಬೆಳೆಗೆ ಬೆಲೆ ನಿಗದಿ, ಬೆಂಬಲ ಬೆಲೆ ಘೋಷಣೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಅಡುಗೆ ಎಣ್ಣೆ ಹೈಕ್ – ಗೃಹಿಣಿಯರಿಗೆ ಶಾಕ್ ಕೊಟ್ಟ ಸರ್ಕಾರ

    ಅಡುಗೆ ಎಣ್ಣೆ ಹೈಕ್ – ಗೃಹಿಣಿಯರಿಗೆ ಶಾಕ್ ಕೊಟ್ಟ ಸರ್ಕಾರ

    ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಕ್ಕಿ ಮತ್ತು ವಿದ್ಯುತ್ ದರ ಏರಿಸಿ ಸರ್ಕಾರ ಶಾಕ್ ಕೊಟ್ಟಿದ್ದು ಆಯ್ತು. ಇದೀಗ ಅಡುಗೆ ಎಣ್ಣೆಯ ಬೆಲೆ ಹೆಚ್ಚು ಮಾಡಿದ್ದಾರೆ.

    ಪ್ರತಿದಿನ ದರ ಏರಿಕೆ ಭಯದಲ್ಲಿ ಜೀವನ ನಡೆಸುತ್ತಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಅಡುಗೆ ಎಣ್ಣೆ ದರ ಏರಿಕೆ ಮಾಡಿ ಶಾಕ್ ನೀಡಿದೆ. ಎಣ್ಣೆ ಇಲ್ಲದೆ ಒಗ್ಗರಣೆ ಸಹ ಹಾಕೋದಕ್ಕೆ ಆಗೋದಿಲ್ಲ. ಅಂತದ್ರಲ್ಲಿ ಅಡುಗೆ ಮನೆಯಲ್ಲಿ ಅತೀ ಹೆಚ್ಚು ಬಳಕೆಯಾಗುವ ಸನ್ ಫ್ಯೂರ್, ಜೆಮಿನಿ, ಗೋಲ್ಡ್ ವಿನ್ನರ್ ಸೇರಿದಂತೆ ದೀಪಕ್ಕೆ ಬಳಸುವ ಎಣ್ಣೆ ಬೆಲೆ ಸಹ ಒಂದೇ ವಾರದಲ್ಲಿ 10 ರಿಂದ 12 ರೂಪಾಯಿ ಹೆಚ್ಚಳವಾಗಿದೆ. ಅಡುಗೆ ತೈಲದ ಮೇಲೆ ಆಮದು ಸುಂಕ ಹೆಚ್ಚಾಗಿರುವುದೆ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

    ಯಾವ ಯಾವ ಎಣ್ಣೆ, ದರ ಎಷ್ಟು?

    ಅಡುಗೆ ಎಣ್ಣೆ                               ಹಳೆ ದರ                          ಹೊಸ ದರ
    ಸನ್‍ಫ್ಯೂರ್                                 88ರೂ.                           98ರೂ.
    ಗೋಲ್ಡ್ ವಿನರ್                            89ರೂ.                           100ರೂ.
    ಜೆಮಿನಿ                                       88ರೂ.                           100ರೂ.
    ಹಿಮಾಮಿ ಹೆಲ್ತಿ ಅಂಡ್ ಟೇಸ್ಟೀ         85ರೂ.                           95ರೂ.
    ಕಡಲೆಕಾಯಿ ಎಣ್ಣೆ                         84ರೂ.                           95ರೂ.
    ದೀಪದ ಎಣ್ಣೆ                               72ರೂ.                            85ರೂ.

    ಅಡಿಗೆ ಎಣ್ಣೆ ರೇಟ್ ಹೈಕ್‍ನಿಂದ ಎಣ್ಣೆ ಕೊಳ್ಳುವುದಕ್ಕೆ ಬಂದ ಗೃಹಿಣಿಯರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪೆಟ್ರೋಲ್ ರೇಟ್ ಹೈಕ್ ಆದರೆ ಪ್ರೊಟೆಸ್ಟ್ ಮಾಡುತ್ತಾರೆ ನಮ್ಮ ಕಷ್ಟ ಕೇಳುವವರು ಯಾರು ಅಂತ ಗೃಹಿಣಿಯರು ಪ್ರಶ್ನೆ ಮಾಡುತ್ತಾ ಇದ್ದಾರೆ.

    ರೀಟೈಲ್ ನಲ್ಲಿ ಈ ದರವಿದ್ದು, ಮಾಲ್ ಗಳಲ್ಲಿ ಅಡುಗೆ ತೈಲದ ರೇಟ್ 100ರ ಗಡಿ ದಾಟಿದೆ.

  • ದಿನಬಳಕೆ ವಸ್ತುಗಳು ಇಂದಿನಿಂದ ದುಬಾರಿ – ಸಾಲದ ಹೊರೆ ಇಳಿಸಲು ಜನರಿಗೆ ಗುನ್ನಾ

    ದಿನಬಳಕೆ ವಸ್ತುಗಳು ಇಂದಿನಿಂದ ದುಬಾರಿ – ಸಾಲದ ಹೊರೆ ಇಳಿಸಲು ಜನರಿಗೆ ಗುನ್ನಾ

    ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ. ವಾಹನ ಸವಾರರ ಜೇಬಿಗೆ ಬರೆ ಇಡಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಿದ್ಧವಾಗಿದೆ.

    ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಬಜೆಟ್ ಸಂದರ್ಭದಲ್ಲಿ ಏರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಳವಾಗುತ್ತಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದೆ.

    ಒಂದು ವಾರದಿಂದ ನಿರಂತರ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದ್ದು, ಈಗ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸೆಸ್ ವಿಧಿಸೋದ್ರಿಂದ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಇನ್ನೂ ಈ ಭಾರಿ 1.14 ಪೆಟ್ರೋಲ್ ಹಾಗೂ 1.12 ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು, ವಾಹನ ಸವಾರರ ಜೇಬನ್ನು ಸುಡಲಿದೆ.

    ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 2 ರೂ.ಗಳಷ್ಟು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಉಭಯ ಸದನಗಳಲ್ಲಿ ಬಜೆಟ್ ಅನುಮೋದನೆಯಾಗಿದ್ದು, ಮಧ್ಯರಾತ್ರಿಯಿಂದಲೇ ಕೆಲ ವಸ್ತುಗಳ ಮೇಲಿನ ಪರಿಷ್ಕೃತ ತೆರಿಗೆ ಅನ್ವಯವಾಗಿದೆ. ಪರಿಣಾಮ ಪೆಟ್ರೋಲ್, ಡೀಸೆಲ್, ವಿದ್ಯುತ್, ತರಕಾರಿ, ಹಾಲು, ಬಸ್ ಟಿಕೆಟ್ ದರ, ಮದ್ಯ, ಹೀಗೆ ಹಲವು ಬೆಲೆಗಳು ಏರಿಕೆ ಆಗಲಿವೆ.

    ದಿನಾಂಕ 13/07/18
    ಪೆಟ್ರೋಲ್ ದರ – 78.01 ರೂಪಾಯಿ
    ಡೀಸೆಲ್ ದರ – 69.49 ರೂಪಾಯಿ
    ಎಕ್ಸ್ ಟ್ರಾ ಪ್ರೀಮಿಯಂ ಪೆಟ್ರೋಲ್ – 80.76 ರೂಪಾಯಿ

    ದಿನಾಂಕ 14/07/18
    ಪೆಟ್ರೋಲ್ ದರ – 79.36 ರೂಪಾಯಿ
    ಡೀಸೆಲ್ ದರ – 70.74 ರೂಪಾಯಿ
    ಎಕ್ಸ್ ಟ್ರಾ ಪ್ರೀಮಿಯಂ ಪೆಟ್ರೋಲ್ – 82.16 ರೂಪಾಯಿ
    ಪ್ರೀಪಿಯಂ ಪೆಟ್ರೋಲ್- 1.40 ರೂಪಾಯಿ ಹೆಚ್ಚಳ

    * ವಿದ್ಯುತ್
    ವಿದ್ಯುತ್ ತೆರಿಗೆ ದರ ಪ್ರತಿ ಯೂನಿಟ್‍ಗೆ ಶೇ.3 ರಷ್ಟು ಹೆಚ್ಚಳ

    * ಹಾಲು, ತರಕಾರಿ, ಬಸ್ ಟಿಕೆಟ್ ದರ
    ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಾಗಿರೋದ್ರಿಂದ ಸರಕು ಸಾಗಾಣೆ ವೆಚ್ಚ ಹೆಚ್ಚಾಗಲಿದೆ. ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ

    * ಮದ್ಯ
    ಮದ್ಯದ ಮೇಲೆ ಶೇ.4 ರಷ್ಟು ಅಬಕಾರಿ ಸುಂಕ

    * ಖಾಸಗಿ ವಾಹನ ಸೇವೆ
    ಖಾಸಗಿ ವಾಹನ ಸೇವಾ ತೆರಿಗೆ ಶೇ.21 ರಷ್ಟು ಹೆಚ್ಚಳ
    ( ಇದು ಆಗಸ್ಟ್ ನಿಂದ ಜಾರಿಗೆ ಬರಲಿದೆ )

  • ಇಂದು ಮಾವಿನ ತವರು ಶ್ರೀನಿವಾಸಪುರ ತಾಲೂಕು ಬಂದ್!

    ಇಂದು ಮಾವಿನ ತವರು ಶ್ರೀನಿವಾಸಪುರ ತಾಲೂಕು ಬಂದ್!

    – ಲೋಡುಗಟ್ಟಲೆ ಮಾವು ರಸ್ತೆಗೆ ಸುರಿದು ಪ್ರತಿಭಟನೆ

    ಕೋಲಾರ: ಮಾವು ಬೆಲೆ ತೀವ್ರ ಕುಸಿತ ಹಿನ್ನೆಲೆ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ.

    ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಬಂದ್ ಗೆ ಕರೆ ನೀಡಲಾಗಿದೆ. ಒಂದು ಟನ್ ಮಾವಿಗೆ ಮಾರುಕಟ್ಟೆಯಲ್ಲಿ 3000-4000 ರೂಪಾಯಿಗೆ ಕುಸಿತವಾಗಿದೆ. ಒಂದು ಟನ್ ಮಾವಿಗೆ ಕನಿಷ್ಠ 5 ಸಾವಿರ ಬೆಂಬಲ ಬೆಲೆ ನೀಡಿ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

    ಜಿಲ್ಲೆಯ ಸಾವಿರಾರು ಮಾವು ಬೆಳೆಗಾರರು ಬಂದ್ ನಲ್ಲಿ ಭಾಗಿಯಾಗಿದ್ದು, ಬಂದ್ ಹಿನ್ನೆಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್, ಬಸ್ ಸಂಚಾರ ಸ್ಥಗಿತವಾಗಿದೆ.

    ಶ್ರೀನಿವಾಸಪುರ ಹಳೇ ಬಸ್ ನಿಲ್ದಾಣದಲ್ಲಿ ಮಾವು ಬೆಳೆಗಾರರ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಗೆ ಲೋಡುಗಟ್ಟಲೆ ಮಾವು ಸುರಿದು ಪ್ರತಿಭಟನೆ ಕೈಗೊಂಡಿದ್ದಾರೆ. ಮಾವು ಬೆಳೆಗಾರರಿಗೆ ರೈತ ಸಂಘದ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಮಾವಿಗೆ ಬೆಂಬಲ ಬೆಲೆ ಘೋಷಿಸಿ ಇಲ್ಲವೇ ಫಲ್ಪ್ ಪ್ಯಾಕ್ಟರಿ ತೆರೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

  • ಮೈತ್ರಿ ಬಜೆಟ್ ಎಫೆಕ್ಟ್: ಹೆಚ್ಚಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

    ಮೈತ್ರಿ ಬಜೆಟ್ ಎಫೆಕ್ಟ್: ಹೆಚ್ಚಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ

    ಬೆಂಗಳೂರು: ಬಹು ನಿರೀಕ್ಷಿತ ಸಮ್ಮಿಶ್ರ ಸರ್ಕಾರದ ಬಜೆಟ್ ನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಿದರು. 34 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು, ಒಂದೆಡೆ ಕೆಲವರಿಗೆ ಖುಷಿಯನ್ನು ತಂದಿದ್ರೆ, ಒಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿದ ಪರಿಣಾಮ ಅವುಗಳ ಬೆಲೆ ಏರಿಕೆಯಾಗಲಿದೆ.

    1. ಪೆಟ್ರೋಲ್ ಮತ್ತು ಡಿಸೇಲ್:
    ಇತ್ತ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲಗಳ ಕ್ರೋಡಿಕರಣಕ್ಕಾಗಿ ಪಟ್ರೋಲ್, ಡೀಸೆಲ್, ಮದ್ಯ, ಸಾರಿಗೆ ತೆರಿಗೆ ಮತ್ತು ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರಸ್ತುತ ಶೇ.30 ರಿಂದ ಶೇ.32 ಮತ್ತು ಡೀಸೆಲ್ ತೆರಿಗೆ ದರವನ್ನು ಪ್ರಸ್ತುತ ಶೇ.19ರಿಂದ 21ಕ್ಕೆ ಏರಿಗೆ ಮಾಡಲಾಗಿದೆ. ಒಟ್ಟಾರೆಯಾಗಿ ಲೀಟರ್ ಒಂದಕ್ಕೆ ಪೆಟ್ರೋಲ್ ಮೇಲಿನ ಬೆಲೆಯಲ್ಲಿ 1.14 ರೂ. ಮತ್ತು ಡೀಸೆಲ್ ಮೇಲಿನ ಬೆಲೆಯಲ್ಲಿ ರೂ.1.12 ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

    2. ಅಬಕಾರಿ:
    ಮದ್ಯ ಎಲ್ಲಾ 18 ಫೋಷಿತ ಬೆಲೆ ಸ್ಲಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಅನುಬಂಧ-ಅರಲ್ಲಿರುವಂತೆ ಹಾಲಿ ಇರುವ ದರಗಳ ಮೇಲೆ ಶೇಕಡ 4ರಷು ಹೆಚ್ಚಿಸಲಾಗಿದೆ.

    3. ಸಾರಿಗೆ:
    ಮೋಟಾರು ವಾಹನ ತೆರಿಗೆಯನ್ನು ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಳದ ಪ್ರಸ್ತಾವನೆಯನ್ನು ಉಲ್ಲೇಖಿಸಲಾಗಿದೆ. ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್ ಗೆ ಶೇ.50ರಂತೆ ಹೆಚ್ಚಳ. ಅಂದರೆ ಈಗಿರುವ ರೂ.1,100, 1,200, 1,300 ಮತ್ತು 1,500ಗಳನ್ನು ಕ್ರಮವಾಗಿ ರೂ. 1650, 1800, 1950 ಮತ್ತು 2250 ಗಳಿಗೆ ಏರಿಕೆ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.

    4. ವಿದ್ಯುತ್:
    ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಚಾಲ್ತಿಯಲ್ಲಿರುವ ಶೇ.6 ರಿಂದ ಶೇ.9ಕ್ಕೆ ಹೆಚ್ಚಿಸಲಾಗಿದೆ. ಸ್ವಂತ ಬಳಕೆಯ ವಿದ್ಯುತ್ (Taxation On Captive Consumption) ಮೇಲಿನ ತೆರಿಗೆ ದರವನ್ನು ಪ್ರತಿ ಯೂನಿಟ್ ದರ 10 ಪೈಸೆಯಿಂದ 20 ಪೈಸೆಗೆ ಏರಿಕೆ ಮಾಡಲಾಗಿದೆ.

  • ಮಲ್ಲಿಗೆ ಬೆಲೆಯಲ್ಲಿ ಭಾರೀ ಕುಸಿತ- ಬೆಳೆಗಾರರು ಕಂಗಾಲು

    ಮಲ್ಲಿಗೆ ಬೆಲೆಯಲ್ಲಿ ಭಾರೀ ಕುಸಿತ- ಬೆಳೆಗಾರರು ಕಂಗಾಲು

    ಬಳ್ಳಾರಿ: ಮಲ್ಲಿಗೆ ಅಂದ್ರೆ ಸುವಾಸನೆ ಭರಿತ ವಾಸನೆ ಅಂತಾರೆ. ಆದೆ ಘಮ ಘಮ ಅನ್ನೋ ಮಲ್ಲಿಗೆ ಬೆಳೆದ ರೈತರ ಬಾಳಲ್ಲಿ ಸುವಾಸನೆ ಇಲ್ಲದಾಗಿದೆ.

    ಹೌದು. ಕಷ್ಟಪಟ್ಟು ಮಲ್ಲಿಗೆ ಬೆಳೆದ ರೈತರಿಗೆ ಸರಿಯಾದ ಪ್ರತಿಫಲ ಸಿಗ್ತಿಲ್ಲ. ಹೂ ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಕೆ.ಜಿಗೆ 200 ರೂಪಾಯಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವಿನ ಬೆಲೆ ಇದೀಗ ಅಕ್ಷರಶ ಪಾತಾಳಕ್ಕೆ ಕುಸಿದಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಿಸಿಲು ಇದ್ರೂ ಬಳ್ಳಾರಿ ತಾಲೂಕಿನ ವೈ ಕಗ್ಗಲ್ ಗ್ರಾಮದ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಮಲ್ಲಿಗೆ ಬೆಳೆಯನ್ನ ಬೆಳೆಯುತ್ತಾರೆ. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ರೀತಿಯ ಸುವಾಸನೆ ಭರಿತ ಮಲ್ಲಿಗೆ ಹೂಗಳನ್ನು ಬೆಳೆಯುತ್ತಾರೆ.

    ಇದೂವರೆಗೂ ಮಲ್ಲಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತಿದ್ದ ಪರಿಣಾಮ ರೈತರು ಲಾಭ ಗಳಿಸುತ್ತಿದ್ದರು. ಆದ್ರೆ ಈ ಬಾರಿ ಮಲ್ಲಿಗೆ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಕೆ.ಜಿ ಮಲ್ಲಿಗೆಗೆ ಕೇವಲ 15-30 ರೂಪಾಯಿ ಬೆಲೆ ಸಿಗುತ್ತಿರುವುದರಿಂದ ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಇದೀಗ ಅಕ್ಷರಶಃ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

    ಒಟ್ಟಿನಲ್ಲಿ ಬಳ್ಳಾರಿಯ ವೈ ಕಗ್ಗಲ್ ಗ್ರಾಮದ ರೈತರು ಬೆಳೆದ ಮಲ್ಲಿಗೆ ಬೆಳೆ ಎಲ್ಲರ ತೋಟಗಳಲ್ಲಿ ಅರಳಿದ್ರೂ, ರೈತರ ಬದುಕು ಮಾತ್ರ ಅರಳದಂತಾಗಿದೆ. ರೈತರು ಯಾಕಪ್ಪ ಮಲ್ಲಿಗೆ ಹೂ ಬೆಳೆದೆ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಆದ್ರೂ ತೋಟಗಾರಿಕೆ ಇಲಾಖೆ ಮಾತ್ರ ಮಲ್ಲಿಗೆ ಬೆಳೆಗೆ ಬೆಲೆ ಕುಸಿತವಾದ್ರೂ ರೈತರ ನೆರವಿಗೆ ಧಾವಿಸದಿರುವುದು ರೈತರನ್ನು ಮತ್ತಷ್ಟೂ ಕಂಗಾಲು ಮಾಡಿದೆ.

  • ಸದ್ಯದಲ್ಲೇ ಏರಿಕೆಯಾಗಲಿದೆ ಬಸ್ ಟಿಕೆಟ್ ದರ: ಎಷ್ಟು ಏರಿಕೆ ಆಗುತ್ತೆ?

    ಸದ್ಯದಲ್ಲೇ ಏರಿಕೆಯಾಗಲಿದೆ ಬಸ್ ಟಿಕೆಟ್ ದರ: ಎಷ್ಟು ಏರಿಕೆ ಆಗುತ್ತೆ?

    ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನವಾಣೆಯ ಬಳಿಕ ಡೀಸೆಲ್ ಬೆಲೆ ಏರುತ್ತಿದ್ದಂತೆ ಈಗ ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.

    ಹೌದು. ತೈಲ ಬೆಲೆ ಏರಿಕೆಯಾಗುತ್ತಿದ್ದಂತೆ ಸಾರಿಗೆ ಇಲಾಖೆ ಬಸ್ ಟಿಕೆಟ್ ದರವನ್ನು ಸದ್ಯದಲ್ಲೇ ಏರಿಸಲಿದೆ. ಈಗಾಗಲೇ ನಾಲ್ಕು ನಿಗಮಗಳ ದರ ಏರಿಕೆಗೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

    ಸಾರಿಗೆ ಇಲಾಖೆ ಮೂರುವರೆ ವರ್ಷಗಳ ಹಿಂದೆ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿತ್ತು. ಈಗ ಸಾರಿಗೆ ಇಲಾಖೆ 65 ರೂಪಾಯಿಗೆ ಹೋಲ್ ಸೇಲ್ ದರದಲ್ಲಿ ಪ್ರತಿ ಲೀಟರ್ ಡೀಸೆಲ್ ಪಡೆಯುತ್ತಿದೆ. ಆಗುತ್ತಿರುವ ನಷ್ಟವನ್ನು ಸರಿದೂಗಿಸಲು 8% ದಿಂದ 10% ದರ ಏರಿಸಲು ಸಾರಿಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

    ನೂತನ ಸಾರಿಗೆ ಸಚಿವರು ನೇಮಕವಾದ ಬಳಿಕ ಅವರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧಾರ ಮಾಡಿದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಕೆಲ ತಿಂಗಳಿಂದ ಡೀಸೆಲ್ ದರ ಹೆಚ್ಚಾಗುತ್ತಿದೆ. ಏಪ್ರಿಲ್ ನಲ್ಲಿ ಲೀಟರ್ ಗೆ 61.02 ರೂ. ಇತ್ತು. ಆದರೆ ಮೇ ತಿಂಗಳಲ್ಲಿ 70.25 ರೂ. ಗೆ ಏರಿಕೆ ಆಗಿದೆ.

    ಡೀಸೆಲ್ ಏರಿಕೆಯಿಂದ ದಿನಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಉಪಯೋಗಿಸುವ ಸಾರಿಗೆ ನಿಗಮಗಳು ಈಗ ಡೀಸೆಲ್ ಗಾಗಿ ಅಧಿಕ ಹಣ ಪಾವತಿಸುತ್ತಿದೆ. ಮೊದಲೇ ಸಾರಿಗೆ ನಿಮಗ ನಷ್ಟದಲ್ಲಿರುವುದರಿಂದ ಈಗ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವಾಗಿದೆ.

    ಅಷ್ಟೇ ಅಲ್ಲದೆ ತೈಲ ಕಂಪೆನಿಗಳು ಸಗಟು ಡೀಸೆಲ್ ಬೆರೆಯನ್ನು ಏರಿಕೆ ಮಾಡಿವೆ. ಆದ್ದರಿಂದ ಸಾರಿಗೆ ನಿಗಮಗಳಿಗೆ ಪ್ರತಿದಿನ 30.97 ಲಕ್ಷ ರೂ. ಅಧಿಕವಾಗಿ ಆರ್ಥಿಕ ಹೊರೆ ಬೀಳುತ್ತಿದ್ದು, ತಿಂಗಳಿಗೆ 9.29 ಕೋಟಿ ರೂ. ಅಧಿಕ ವೆಚ್ಚವಾಗುತ್ತಿದೆ.

  • ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ – ನಾಲ್ಕು ವರ್ಷಗಳಲ್ಲೇ ಹೆಚ್ಚು

    ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ – ನಾಲ್ಕು ವರ್ಷಗಳಲ್ಲೇ ಹೆಚ್ಚು

    ನವದೆಹಲಿ: ನಿತ್ಯ ತೈಲ ಬೆಲೆ ಪರಿಷ್ಕರಣೆ ನೀತಿ ಜಾರಿಯಾದ ಬಳಿಕ, ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 73.83 ರೂ. ಮತ್ತು ಡೀಸೆಲ್ ಬೆಲೆ 64.69 ರೂ. ತಲುಪಿದೆ

    ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವುದರಿಂದ ಸರ್ಕಾರ ವಿಧಿಸುವ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ.

    ಕಳೆದ ಜುಲೈನಿಂದ ಪ್ರತಿ ನಿತ್ಯ ಪೆಟ್ರೋಲ್ ಬೆಲೆ ಪರಿಷ್ಕರಣೆ ಮಾಡುವ ನೀತಿಯನ್ನು ಜಾರಿ ಮಾಡಲಾಗಿದ್ದು, ಭಾರತದ ತೈಲ ಕಂಪನಿಗಳ ಒಕ್ಕೂಟ ಸೋಮವಾರ ಪೆಟ್ರೋಲ್ ಮೇಲೆ 10 ಪೈಸೆ, ಡೀಸೆಲ್ ಮೇಲೆ 11 ಪೈಸೆ ಹೆಚ್ಚಳ ಮಾಡಿದೆ. ಇದರೊಂದಿಗೆ 2017 ಸೆಪ್ಟೆಂಬರ್ 4 ರಲ್ಲಿ 76.06 ರೂ. ಇದ್ದ ಪೆಟ್ರೋಲ್ ಬೆಲೆ ಗರಿಷ್ಠ ಪ್ರಮಾಣ ತಲುಪಿದೆ. ಡೀಸೆಲ್ ಬೆಲೆಯೂ ಲೀಟರ್ ಗೆ 64.69 ರೂ. ತಲುಪಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಅದೇ ರೀತಿ ಡೀಸೆಲ್ ಬೆಲೆ ಲೀಟರ್ ಗೆ 64.22 ರೂ. ಗೆ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಲು ಕಾರಣ ಎಂದು ಕೆಲ ವರದಿಗಳು ಸ್ಪಷ್ಟ ಪಡಿಸಿವೆ. ಕಳೆದ ಜನವರಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ದೇಶದಲ್ಲೇ ಹೆಚ್ಚು ತೈಲ ಬೆಲೆ ಹೊಂದಿದ್ದು, ಪತ್ರಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಟ 81.69 ರೂ. ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 67.43 ರೂ ತಲುಪಿದೆ.

    2017 ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ತೈಲಗಳ ಮೇಲೆ 2 ರೂ. ಅಬಕಾರಿ ಸುಂಕ ಕಡಿತಗೊಳಿತ್ತು. ಈ ವೇಳೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.88 ರೂ., ಡೀಸೆಲ್ ಲೀಟರ್ 59.1 ರೂ. ಹೊಂದಿತ್ತು. ಅಬಕಾರಿ ಸುಂಕದ ಕಡಿತದಿಂದ ಸರ್ಕಾರ ವಾರ್ಷಿಕ ಆದಾಯದಲ್ಲಿ 26 ಸಾವಿರ ಕೋಟಿ ರೂ. ಹೊರೆಯಾಗಿತ್ತು. ಪ್ರಸ್ತುತ ವರ್ಷದಲ್ಲಿ ಇದುವರೆಗೆ 17 ಸಾವಿರ ಕೋಟಿ ರೂ. ಹೊರೆಯಾಗಿದೆ.

    ಬೆಂಗಳೂರಿನಲ್ಲಿ ಎಷ್ಟಿದೆ?
    ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂ. ಇದ್ದರೆ, ಡೀಸೆಲ್ ಬೆಲೆ 65.78 ರೂ. ಇದೆ.

    ಯಾವ ನಗರದಲ್ಲಿ ಎಷ್ಟಿದೆ?

    ಪೆಟ್ರೋಲ್:
    ಕೋಲ್ಕತ್ತಾ -76.54 ರೂ.
    ಮುಂಬೈ -81.69 ರೂ.
    ಚೆನ್ನೈ -76.59 ರೂ.

    ಡೀಸೆಲ್:
    ಕೋಲ್ಕತ್ತಾ – 67.38 ರೂ.
    ಮುಂಬೈ -68.89 ರೂ.
    ಚೆನ್ನೈ – 68.24 ರೂ.