Tag: ಬೆಲೆ

  • ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಕಾಸ್ಟ್ಲೀ ಆದ ಸಂಕ್ರಾಂತಿ – ಮಾರುಕಟ್ಟೆಗೆ ಹೋದ್ರೆ ಶಾಕ್ ಗ್ಯಾರಂಟಿ

    ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಭರ್ಜರಿಯಾಗಿ ಸಜ್ಜುಗೊಂಡಿದೆ. ನೀವೇನಾದರೂ ಹಬ್ಬವನ್ನು ಇನ್ನಷ್ಟು ಜೋಶ್ ಆಗಿ ಆಚರಿಸಬೇಕು ಅನ್ಕೊಂಡಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ.

    ಹಬ್ಬ ಜೋರಾಗಿ ಮಾಡೋಣವೆಂದು ಸಾಮಾನು ಖರೀದಿಸಲು ಮಾರುಕಟ್ಟೆಗೆ ಹೋದರೆ ನಿಮಗೆ ಶಾಕ್ ಆಗುತ್ತದೆ. ಯಾಕಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಮಾರುಕಟ್ಟೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಬೇಕಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಮಧ್ಯೆಯೇ ಗಾಂಧಿಬಜಾರ್, ಮಲ್ಲೇಶ್ವರಂ, ಯಶವಂತಪುರ ಹಾಗೂ ಕೆ.ಆರ್.ಮಾರ್ಕೆಟ್‍ನಲ್ಲಿ ಸಂಕ್ರಾಂತಿ ಹಬ್ಬದ ವ್ಯಾಪಾರ ಜೋರಾಗಿದೆ.

    ಹಬ್ಬದ ವಸ್ತುಗಳ ದರ:
    ಕೊಬ್ಬರಿ ಕೆ.ಜಿಗೆ ಬರೋಬ್ಬರಿ 500 ರೂ. ಆಗಿದೆ. ಇತ್ತ ಸಕ್ಕರೆ ಅಚ್ಚು ಕೂಡ 200 ರೂ. ಆಗಿದೆ. ಹಬ್ಬ ಅಂದರೆ ಎಳ್ಳು-ಬೆಲ್ಲ ಮಾಡಬೇಕು. ಆದರೆ ಮಿಕ್ಸೆಡ್ ಎಳ್ಳು ಕೆ.ಜಿಗೆ 240 ರೂ. ಏರಿಕೆ ಆಗಿದೆ. ಬರಿ ಎಳ್ಳುಗೆ 360 ರೂ., ಬೆಲ್ಲ ನೋಡುವುದಾದರೆ 140 ರೂ. ಹಾಗೂ ಜೋಡಿ ಕಬ್ಬು 150 ರಿಂದ 200 ರೂ. ದುಬಾರಿಯಾಗಿದೆ.

    ಹೂವುಗಳ ದರ:
    ಪ್ರತಿ ಹಬ್ಬಕ್ಕೂ ಮೆರುಗು ಕೊಡುವುದೇ ಹೂ, ಆದರೆ ಮಾರುಕಟ್ಟೆಯಲ್ಲಿ ಹೂಗಳ ದರ ಆಕಾಶದಷ್ಟು ಏರಿಕೆ ಆಗಿದೆ. ಒಂದು ಕೆ.ಜಿ ಗುಲಾಬಿಗೆ 350 ರೂ., ಮಲ್ಲಿಗೆ 320 ರೂ., ಸೇವಂತಿ 330 ರೂ. ಹಾಗೂ ಸುಗಂಧರಾಜ 300 ರೂ. ಆಗಿದೆ.

    ಹಣ್ಣುಗಳ ರೇಟ್:
    ಹಬ್ಬಕ್ಕೆ ಹಣ್ಣುಗಳು ಬೇಕೆಬೇಕು. ಆದರೆ ಕೆ.ಜಿ ಬಾಳೆಹಣ್ಣಿಗೆ 100 ರೂ., ದ್ರಾಕ್ಷಿ 250 ರೂ., ದಾಳಿಂಬೆ 220 ರೂ. ಮತ್ತು ಸೇಬು 200 ರೂ. ದುಬಾರಿ ಆಗಿದೆ.

    ಪ್ರತಿ ವರ್ಷವೂ ನಾವು ಹಬ್ಬವನ್ನು ಅದ್ಧೂರಿಯಾಗಿ ಮಾಡುತ್ತೇವೆ. ಹಬ್ಬಕ್ಕಾಗಿ ಬೇಕಾದ ಹಣ್ಣು, ಹೂ, ವಸ್ತುಗಳು ಎಲ್ಲವನ್ನು ಖರೀದಿಸಬೇಕು. ಇದ್ಯಾವುದೂ ಇಲ್ಲದೆ ಹಬ್ಬ ಮಾಡುವುದೇ ಕಷ್ಟವಾಗುತ್ತದೆ. ಇದು ವರ್ಷದಲ್ಲಿ ಮೊದಲ ಹಬ್ಬವಾಗಿದ್ದು, ಈ ಹಬ್ಬವನ್ನು ಸಂತೋಷದಿಂದ ಬರ ಮಾಡಿಕೊಳ್ಳೋಣ ಎಂದರೆ ಹಬ್ಬದ ವಸ್ತುಗಳೇ ಇಷ್ಟು ದುಬಾರಿಯಾದರೆ ನಾವು ಹಬ್ಬ ಮಾಡುವುದು ಹೇಗೆ ಎಂದು ಕಂಗಾಲಾಗಿರುವುದಾಗಿ ಗೃಹಿಣಿಯರು ಹೇಳುತ್ತಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿ ಎಫೆಕ್ಟ್‌ಗೆ  ದಿಢೀರ್ ಗಗನಕ್ಕೇರಿದೆ ಟೊಮೆಟೋ ಬೆಲೆ..!

    ಚಳಿ ಎಫೆಕ್ಟ್‌ಗೆ ದಿಢೀರ್ ಗಗನಕ್ಕೇರಿದೆ ಟೊಮೆಟೋ ಬೆಲೆ..!

    ಬೆಂಗಳೂರು: ಗ್ಯಾಸ್ ಇಳಿಕೆಯಾದ ಖುಷಿಯಲ್ಲಿದ್ದ ಗೃಹಿಣಿಯರಿಗೆ ಟೊಮೆಟೋ ಹುಳಿ ಶಾಕ್ ನೀಡಿದೆ. ಕೆಜಿಗೆ 10 ರೂಪಾಯಿ 20 ರೂಪಾಯಿ ಇದ್ದ ಟಮ್ಯಾಟೋ ದರ ಏಕಾಏಕಿ 70 ರೂಪಾಯಿಗೆ ಏರಿಕೆಯಾಗಿದೆ.

    ಹೌದು, ಈ ಬಾರಿ ಚಳಿಗಾಲ ರೈತ ಮೊಗದಲ್ಲಿ ಮಂದಹಾಸ ತಂದಿದೆ. ಚಳಿ ಹೊಡೆತಕ್ಕೆ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೊ ಇಳುವರಿ ಶೇ.60 ರಷ್ಟು ಇಳಿಕೆಯಾಗಿದೆ. ಅಯ್ಯೋ ಬೆಳೆ ಇಲ್ಲದೆ ಹೇಗಪ್ಪ ಜೀವನ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತರ ಮುಖದಲ್ಲಿ ಈಗ ಖುಷಿ ಮೂಡಿದೆ. ಇಳುವರಿ ಕಡಿಮೆಯಾದ ಬೆನ್ನಲ್ಲೇ ಟೊಮೆಟೋ ಬೆಲೆ ಏರಿಕೆಯಾಗಿದೆ. ಆದರಿಂದ 10-20 ರೂ. ಗೆ ಸಿಗುತ್ತಿದ್ದ ಟೊಮೆಟೋ ಏಕಾಏಕಿ 70 ರೂ.ಗೆ ಜಿಗಿದಿದೆ. ಇನ್ನು 1 ರಿಂದ 2 ತಿಂಗಳ ಕಾಲ ಟೊಮೆಟೋ ದುಬಾರಿಯಾಗಲಿದ್ದು, ಟೊಮೆಟೋ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡಿದಂತೆ ಆಗಿದ್ದರೇ, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

    ಗ್ಯಾಸ್ ಬೆಲೆ ಇಳಿಕೆಯಾದ ಖುಷಿಯಲ್ಲಿದ್ದ ಗೃಹಿಣಿಯರಿಗೆ ಟೊಮೆಟೋ ಶಾಕ್ ನೀಡಿದೆ. ಎಲ್ಲೆಡೆ ದಾಖಲೆ ಪ್ರಮಾಣದ ಚಳಿ ಹಿನ್ನೆಲೆ ಟೊಮೆಟೋ ಕಾಯಿ ಕಟ್ಟದೇ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನು ಮುಂದಿನ 1 ರಿಂದ 2 ತಿಂಗಳ ಕಾಲ ಟೊಮೆಟೋ ಹೀಗೇ ಗಗನ ಕುಸುಮವಾಗೇ ಇರುತ್ತೆ ಎನ್ನಲಾಗುತ್ತಿದೆ. ಸದ್ಯ ಗೃಹಿಣಿಯರು ಯಾಕ್ ಹಿಂಗಾಯ್ತು ಅಂತ ಬೇಸರದಲ್ಲಿದ್ದರೆ. ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಸಂತಸದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೃಹಬಳಕೆ ಸಿಲಿಂಡರ್ ಬೆಲೆ ದಿಢೀರ್ ಇಳಿಕೆ – ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ಗೃಹಬಳಕೆ ಸಿಲಿಂಡರ್ ಬೆಲೆ ದಿಢೀರ್ ಇಳಿಕೆ – ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗುತ್ತಿದ್ದಂತೆ ಗೃಹಬಳಕೆಯ ಸಬ್ಸಿಡಿ ಸಹಿತ ಸಿಲಿಂಡರಿನ ದರ 6.52 ರೂಪಾಯಿಯಷ್ಟು ಇಳಿಕೆಯಾಗಿದೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಗೃಹಬಳಕೆಯ ಸಿಲಿಂಡರಿನ ದರವನ್ನು ಕಡಿತಗೊಳಿಸಿದೆ. ಪರಿಷ್ಕೃತ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

    14.2 ಕೆಜಿ ಸಿಲಿಂಡರಿನ ಬೆಲೆ 507.42 ರೂಪಾಯಿ ಆಗಿದ್ದು, ದರ ಇಳಿಕೆಯಿಂದ 500.90 ರೂಪಾಯಿ ಆಗಿದೆ. ಸಬ್ಸಿಡಿ ಸಿಲಿಂಡರಿನ ದರಗಳು ಏರಿಳಿಕೆ ಕಾಣುತ್ತಲೇ ಇರುತ್ತವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲೂ 133 ರೂಪಾಯಿ ಇಳಿಕೆಯಾಗಿದೆ. ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿ ಮಾರುಕಟ್ಟೆಗೆ ಈ ಮೊದಲು 942.50 ರೂಪಾಯಿ ಇತ್ತು. ನೂತನ ದರ ಪರಿಷ್ಕರಣೆಯಿಂದಾಗಿ 809.50 ರೂಪಾಯಿಗೆ ಇಳಿದಿದೆ.

    ಸಬ್ಸಿಡಿ ಸಹಿತ ಸಿಲಿಂಡರ್ ಪಡೆದ ಗ್ರಾಹಕರ ಖಾತೆಗೆ ಡಿಸೆಂಬರ್ ತಿಂಗಳಿನಲ್ಲಿ 308.60 ರೂ. ಜಮೆ ಆಗಲಿದ್ದರೆ, ನವೆಂಬರ್ ನಲ್ಲಿ 433.66 ರೂ. ಜಮೆ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಹನ ಸವಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್

    ವಾಹನ ಸವಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್

    ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸುಸ್ತಾಗಿರುವ ವಾಹನ ಸವಾರರಿಗೆ ಬೆಸ್ಕಾಂ ಗುಡ್ ನ್ಯೂಸ್ ಕೊಡುತ್ತಿದೆ.

    ಹೌದು. ವಾಹನ ಸವಾರರಿಗೆ ಬೆಸ್ಕಾಂ ಸಂಜೀವಿನಿ ನೀಡಿದೆ. ಕಡಿಮೆ ದರದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮಾಡುವ ಕೇಂದ್ರಗಳಿಗೆ ಚಾಲನೆ ನೀಡಿದೆ. ನೂತನ ಚಾರ್ಜಿಂಗ್ ಕೇಂದ್ರಗಳಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.

    ಬೈಕ್ ಮತ್ತು ಕಾರ್ ಗಳಿಗೆ ಚಾರ್ಜಿಂಗ್ ಕೇಂದ್ರದ ಮೂಲಕ ಚಾರ್ಜ್ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 14 ಕಡೆ ಚಾರ್ಜಿಂಗ್ ಸ್ಟೇಷನ್‍ ಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಕೇಂದ್ರ ಕಚೇರಿ, ವಿಧಾನಸೌಧ ಹಾಗೂ ಕೆಇಆರ್ ಸಿ ಕಚೇರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ಯೂನಿಟ್ ಚಾರ್ಜ್ ಗೆ 4 ರೂಪಾಯಿ 85 ಪೈಸೆ ನಿಗದಿ ಪಡಿಸಿದ್ದು, ಕಿಲೋ ವ್ಯಾಟ್ ಗೆ 50 ರೂಪಾಯಿ ಆಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಹೇಳಿದ್ದಾರೆ.

    ಚಾರ್ಜಿಂಗ್ ಹೇಗೆ..?
    * ಎರಡು ಹಂತದಲ್ಲಿ ಚಾರ್ಜಿಂಗ್ ವ್ಯವಸ್ಥೆ
    1- ಡಿಸಿ ಫಾಸ್ಟ್ ಚಾರ್ಜಿಂಗ್
    2- ಎಸಿ ಸ್ಲೋ ಚಾರ್ಜಿಂಗ್
    * ಪೂರ್ತಿ ಚಾರ್ಜ್ ಆಗಲು 90 ನಿಮಿಷ ಬೇಕಾಗಿದ್ದು 15 ಕಿಲೋ ವ್ಯಾಟ್ ವಿದ್ಯುತ್.
    * ಪೂರ್ತಿ ಚಾರ್ಜ್ ಗೆ 6-7 ಗಂಟೆ. 3.3 ಕಿಲೋ ವ್ಯಾಟ್ ವಿದ್ಯುತ್.
    * ಎಸಿ ರಹಿತ ವಾಹನ 120 ಕಿಲೋ ಮೀಟರ್ ಬಳಸಬಹುದು.
    * ಎಸಿ ಸಹಿತ 100 ಕಿಲೋಮೀಟರ್ ದೂರ ಬಳಸಬಹುದು.

    ಹೀಗಾಗಿ ಜನರು ವಿದ್ಯುತ್ ಚಾರ್ಜಿಂಗ್ ವಾಹನ ಬಳಕೆ ಮಾಡಿದರೆ ಹಣವನ್ನು ಉಳಿಸಬಹುದು ಜೊತೆಗೆ ಮಾಲಿನ್ಯವನ್ನ ತಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿದ ಡೀಸೆಲ್!

    ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿದ ಡೀಸೆಲ್!

    ಭುವನೇಶ್ವರ: ದೇಶದಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ ಪೆಟ್ರೋಲ್ ಬೆಲೆಯನ್ನೂ ಮೀರಿಸಿದ್ದು, ಒಡಿಶಾದ ಭುವನೇಶ್ವರದಲ್ಲಿ ಭಾನುವಾರ ಡೀಸೆಲ್ ಬೆಲೆ ಪ್ರತಿ ಲೀಟರ್ 80.69 ರೂ.ಗೆ ಆಗಿದ್ದರೆ ಪೆಟ್ರೋಲ್ ಬೆಲೆ 80.57 ರೂ.ಗೆ ಮಾರಾಟ ಮಾಡಲಾಗಿದೆ.

    ಕಳೆದ ಎರಡು ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೂ ಡೀಸೆಲ್ 80.69 ರೂ. ಗೆ ಮಾರಾಟವಾಗಿದ್ದು, ಪೆಟ್ರೋಲ್ ಗಿಂತ 12 ಪೈಸೆ ಹೆಚ್ಚಳವಾಗಿತ್ತು.

    ಒಡಿಶಾದಲ್ಲಿ ಜಾಸ್ತಿ ಯಾಕೆ?
    ಕೆಲ ತಿಂಗಳುಗಳಿಂದ ಸತತವಾಗಿ ತೈಲ ಬೆಲೆಯಲ್ಲಿ ಏರಿಕೆ ಆಗಿದ್ದು, ಡೀಸೆಲ್‍ನ ಮೂಲ ಬೆಲೆಯಲ್ಲಿ 5 ರೂ. ಹಾಗೂ ಪೆಟ್ರೋಲ್ ಬೆಲೆಯಲ್ಲಿ 8 ರೂ. ಹೆಚ್ಚಳವಾಗಿದೆ. ಪ್ರಮುಖವಾಗಿ ರಾಜ್ಯಗಳು ಬೇರೆ ಬೇರೆ ಪ್ರಮಾಣದಲ್ಲಿ ವ್ಯಾಟ್ ಅನ್ನು ತೈಲದ ಮೇಲೆ ವಿಧಿಸುತ್ತಿದೆ.

    ಒಡಿಶಾ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇ.26 ರಷ್ಟು ವ್ಯಾಟ್ ವಿಧಿಸುತ್ತಿದೆ. ಇದುವೇ ಡೀಸೆಲ್ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಾಗಲು ಕಾರಣವಾಗಿದೆ ಎಂದು ಅಲ್ಲಿನ ಪೆಟ್ರೋಲಿಯಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂಜಯ್ ಲಾತ್ ತಿಳಿಸಿದ್ದಾರೆ. ಅಲ್ಲದೇ ಒಡಿಶಾ ಸಾರ್ವಜನಿಕರು ಅಧಿಕ ಪ್ರಮಾಣದ ಬೆಲೆಯ ಕಾರಣ ಡೀಸೆಲ್ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇತ್ತ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಟ್ ಕಡಿತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಮತ್ತೊಮ್ಮ ಮನವಿ ಮಾಡಿದ್ದಾರೆ. ಅಲ್ಲದೇ ಕೇಂದ್ರ ಕರೆಗೆ ಸ್ಪಂಧಿಸಿರುವ 13 ರಾಜ್ಯಗಳು ಈಗಾಗಲೇ ವ್ಯಾಟ್ ಕಡಿತಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೆಟ್ರೋಲ್, ಡೀಸೆಲ್ ಆಯ್ತು-ಈಗ ಹೆಚ್ಚಾಯ್ತು ಹೋಟೆಲ್ ಫುಡ್ ದರ

    ಪೆಟ್ರೋಲ್, ಡೀಸೆಲ್ ಆಯ್ತು-ಈಗ ಹೆಚ್ಚಾಯ್ತು ಹೋಟೆಲ್ ಫುಡ್ ದರ

    ಬೆಂಗಳೂರು: ಡೀಸೆಲ್ ರೇಟ್ ಜಾಸ್ತಿ ಆಯ್ತು. ಪೆಟ್ರೋಲ್ ಕೂಡ ದಿನನಿತ್ಯ ದರ ಹೆಚ್ಚಾಗುತ್ತಾನೆ ಇದೆ. ಇದರ ಜೊತೆ ಗ್ಯಾಸ್ ಸಿಲಿಂಡರ್ ದರ ಕೂಡ ಜಾಸ್ತಿ ಆಗಿದೆ. ಮನೆಯಲ್ಲಿ ಯಾರ್ ಅಡುಗೆ ಮಾಡಿ ಊಟ ಮಾಡ್ತಾರೆ ಅಂತ ಹೋಟೆಲ್‍ಗೆ ಹೋದ್ರೆ ಅಲ್ಲೂ ನಿಮ್ಮ ನಾಲಿಗೆ ಸುಡೋದು ಗ್ಯಾರಂಟಿ.

    ನಮ್ಮ ಬೆಂಗಳೂರು ಮಂದಿ ವೀಕೆಂಡ್ ಬಂದರೆ ಮನೆಯಲ್ಲಿ ಗ್ಯಾಸ್ ಹಚ್ಚೋದು ಬಹುತೇಕ ಕಡಿಮೆ. ಬೆಳ್ಳಂಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡೋದ್ಯಾರು ಅಂತ ಹೋಟೆಲ್ ಕಡೆ ಹೋಗೋರೆ ಜಾಸ್ತಿ. ಇಂತವರು ಇನ್ಮುಂದೆ ಜೇಬಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಇಟ್ಕೊಂಡು ಹೋಗಿ, ಯಾಕಂದ್ರೆ ಬೆಂಗಳೂರಿನ ಶೇ. 50 ರಷ್ಟು ಹೋಟೆಲ್‍ಗಳಲ್ಲಿ ಊಟ ತಿಂಡಿ ಬೆಲೆ ಸೈಲೆಂಟಾಗಿ ಐದು ರೂಪಾಯಿವರೆಗೆ ದರ ಹೆಚ್ಚಳ ಮಾಡಲಾಗಿದೆ.

    ಎಷ್ಟು ಹೆಚ್ಚಳವಾಗಿದೆ?
    ಈ ಮೊದಲು ಒಂದು ಪ್ಲೇಟ್ ಇಡ್ಲಿಗೆ 20 ರೂ. ಇತ್ತು. ಈಗ ಒಂದು ಪ್ಲೇಟ್ ಇಡ್ಲಿ 25 ರೂ.ಗೆ ಸಿಗುತ್ತದೆ. ಅಂತೆಯೇ ಉದ್ದಿನ ವಡೆ 20 ರೂ. ದಿಂದ 25 ರೂ, ರೈಸ್ ಬಾತ್ 30 ರಿಂದ 35ಕ್ಕೆ ಮತ್ತು 50 ರಿಂದ 55 ರೂ.ಗೆ ಏರಿಕೆ ಕಂಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷರು, ನಮ್ಮ ಸಂಘದ ಕಡೆಯಿಂದ ಯಾರಿಗೂ ದರ ಹೆಚ್ಚಳ ಮಾಡಿ ಅಂತ ಆದೇಶಿಸಿಲ್ಲ. ಆದರೆ ಅವರವರ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗಾಗಳೇ ದರ ಹೆಚ್ಚಳ ಮಾಡಿಕೊಂಡಿದ್ದಾರೆ. ಅಲ್ಲದೇ ಸದ್ಯದ ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳ ಆಗ್ತಿರೋದ್ರಿಂದ ಊಟ ತಿಂಡಿ ದರ ಹೆಚ್ಚಳ ಅನಿವಾರ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ವಾಣಿಜ್ಯ ಬಳಕೆ ಗ್ಯಾಸ್ ದರ 500 ರಿಂದ 800 ರೂಪಾಯಿ ವರೆಗೆ ಹೆಚ್ಚಳವಾಗಿದೆ. ದಿನವೊಂದಕ್ಕೆ ಹತ್ತು ಸಿಲಿಂಡರ್ ಬಳಸುವ ಹೋಟೆಲ್‍ಗಳಿಗೆ ಏನಿಲ್ಲವೆಂದ್ರು ತಿಂಗಳಿಗೆ ಒಂದೂವರೆ ಲಕ್ಷ ದಷ್ಟು ಹೊರೆಯಾಗತ್ತೆ. ಇದನ್ನ ಗ್ರಾಹಕರ ಮೇಲೆ ಹೋಟೆಲ್ ಮಾಲೀಕರು ವಿಧಿಸುತ್ತಿದ್ದಾರೆ. ಈ ಬಗ್ಗೆ ಗ್ರಾಹಕರು ಅಸಹಾಯಕತೆ ವ್ಯಕ್ತಪಡಿಸ್ತಿದ್ದಾರೆ. ವಾರದಲ್ಲಿ ಒಂದಿನ ಫ್ಯಾಮಿಲಿ ಜೊತೆ ಹೊರಗೆ ಹೋಗಿ ಊಟ ಮಾಡೋಣ ಅಂದರೆ ಕಷ್ಟವಾಗುತ್ತಿದೆ ಅಂತಿದ್ದಾರೆ.

    ಯಾವ ವಸ್ತುಗಳ ಬೆಲೆ ಹೆಚ್ಚಳವಾಗಲೀ ಅದರ ನೇರ ಎಫೆಕ್ಟ್ ತಟ್ಟೋದು ಜನಸಾಮಾನ್ಯರಿಗೆ ಅನ್ನೋದಂತೂ ಸತ್ಯ. ಸೋ ಜೇಬಲ್ಲಿ ಕಾಸು ಜಾಸ್ತಿ ಇದ್ದರೆ ಹೋಟೆಲ್ ಗೆ ಹೋಗಿ, ಇಲ್ಲ ಅಂದ್ರೆ ಮನೆಯಲ್ಲೆ ಅಡುಗೆ ಮಾಡಿಕೊಂಡು ಫ್ಯಾಮಿಲಿ ಜೊತೆ ಕೂತು ನೆಮ್ಮದಿ ಇಂದ ಊಟ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೆಟ್ರೋಲ್ ದರ 99.99 ರೂ.ಗಿಂತ ಜಾಸ್ತಿ ಆಗಲ್ಲ!

    ಪೆಟ್ರೋಲ್ ದರ 99.99 ರೂ.ಗಿಂತ ಜಾಸ್ತಿ ಆಗಲ್ಲ!

    ನವದೆಹಲಿ: ಕಳೆದ ಕೆಲ ವಾರಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಪೆಟ್ರೋಲ್ ಬೆಲೆ 99.99ರೂಪಾಯಿಗಿಂತ ಒಂದು ಪೈಸೆಯೂ ಜಾಸ್ತಿಯಾಗಲ್ಲ ಅಂತ ವರದಿಯಾಗಿದೆ.

    ಕಾರಣವೇನು?
    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‍ಪಿಸಿಎಲ್) ಕಂಪೆನಿ `ಪವರ್ 99′ ರ ಅಡಿಯಲ್ಲಿ 19 ಒಕ್ಟೇನ್ ಗುಣಮಟ್ಟದಲ್ಲಿ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿದೆ. ಈ ಪೆಟ್ರೋಲ್ ನ ಮೂಲ ಬೆಲೆ 20 ರೂ ಆಗಿರುತ್ತದೆ. ಆದ್ದರಿಂದ ಈಗಿರುವ ಮೆಷಿನ್ ನಲ್ಲಿ ಪೆಟ್ರೋಲ್ ದರ 99.99 ರೂ. ಗಿಂತ ಹೆಚ್ಚು ತೋರಿಸುವ ಸಂಖ್ಯೆ ಇಲ್ಲ. ಹೀಗಾಗಿ ಪೆಟ್ರೋಲ್ ದರ ತೋರಿಸುವ ತೋರಿಸುವ ಪಟ್ಟಿಯಲ್ಲಿ ಬದಲಾಯಿಸಬೇಕಾಗಿದೆ. ಅದಕ್ಕಾಗಿ ಪೆಟ್ರೋಲ್ ಪಂಪ್ ಸರ್ವಿಸ್ ಸ್ಥಗಿತಗೊಳಿಸಿ, ನುರಿತ ತಂತ್ರಜ್ಞರಲ್ಲಿ ಮೆಷಿನ್ ದರ ಪಟ್ಟಿ ಬದಲಾವಣೆ ಮಾಡಬೇಕಿದೆ. ಈ ಬದಲಾವಣೆಗೆ ಕೆಲ ಸಮಯಗಳೇ ಬೇಕಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.63 ರೂಪಾಯಿ ಆಗಿದ್ದು, ಮುಂಬೈನಲ್ಲಿ 89.01 ರೂಪಾಯಿಯಾಗಿದೆ. ಹೀಗಾಗಿ ಪೆಟ್ರೋಲ್ ದರ 100 ರೂ.ರ ಗಡಿ ದಾಟುತ್ತಾ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ರು ರಮ್ಯಾ

    ಅಮೀರ್ ಖಾನ್ ಫೋಟೋ ಹಾಕಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ರು ರಮ್ಯಾ

    ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ದಂಗಲ್’ ಸಿನಿಮಾದ ಅಮೀರ್ ಖಾನ್ ಫೋಟೋ ಹಾಕಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದರಿಂದ ಸೋಮವಾರ ‘ಭಾರತ್ ಬಂದ್’ಗೆ ಕಾಂಗ್ರೆಸ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ಕ್ರಿಕೆಟ್ ತಂಡದ ಆಟಗಾರರು ಗಳಿಸುವ ರನ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಈಗ `ದಂಗಲ್’ ಸಿನಿಮಾದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಫೋಟೋವನ್ನು ಹಾಕಿ ಟೀಕಿಸಿದ್ದಾರೆ.

    ರಮ್ಯಾ ಟ್ವೀಟ್:
    `ದಂಗಲ್’ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಎರಡು ಶೇಡ್‍ನಲ್ಲಿ ಅಭಿನಯಿಸಿದ್ದರು. ಒಂದು ಫಿಟ್ ಆಗಿರುವ ಯುವಕನ ಪಾತ್ರ, ಮತ್ತೊಂದು ಅಪ್ಪನ ಪಾತ್ರವನ್ನು ಮಾಡಿದ್ದರು. ಈಗ ಅದೇ ಸಿನಿಮಾದ ಎರಡು ಫೋಟೋವನ್ನು ಪೋಸ್ಟ್ ಮಾಡಿ ಯುಪಿಎ ಮತ್ತು ಎನ್‍ಡಿಎ ಸರ್ಕಾರಕ್ಕೆ ಹೋಲಿಸಿ ಟೀಕಿಸಿದ್ದಾರೆ.

    ಒಂದು ಕಡೆ ಅಮೀರ್ ಖಾನ್ ಯುವಕನಾಗಿ ಫಿಟ್ ಆಗಿರುವ ಫೋಟೋ ಹಾಕಿದ್ದು, ಅದರ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ ಫಿಟ್ ಆಗಿ ಇತ್ತು ಎಂದು ಹೋಲಿಸಿದ್ದಾರೆ. ಅದೇ ರೀತಿ ಅಮೀರ್ ಖಾನ್ ನ ವಯಸ್ಸಾದ ಫೋಟೋ ಹಾಕಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಈ ರೀತಿ ಇದೇ ಎಂದು ಹೋಲಿಕೆ ಮಾಡಿ ಟೀಕಿಸಿದ್ದಾರೆ.

    ಈ ಹಿಂದೆ ರಮ್ಯಾ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ  ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದರು.

    ರಮ್ಯಾ ಅವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು, ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 8.90 ಕೋಟಿಗೆ ಮಾರಾಟವಾಯ್ತು ಹಳೆಯ ವೇರ್ ಹೌಸ್

    8.90 ಕೋಟಿಗೆ ಮಾರಾಟವಾಯ್ತು ಹಳೆಯ ವೇರ್ ಹೌಸ್

    ಕ್ಯಾನ್‍ಬೆರಾ: ಹಳೆಯ ವೇರ್ ಹೌಸ್ ಬರೋಬ್ಬರಿ 8.88 ಕೋಟಿ ರೂ. ಮಾರಾಟವಾಗಿದೆ. ರಸ್ತೆ ಬದಿಯಲ್ಲಿರುವ ವೇರ್ ಹೌಸ್ ನೋಡಿದ ಜನ ಇದಕ್ಕೆ ಇಷ್ಟು ಬೆಲೆ ಕೊಡೋದಾ ಅಂತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಆಸ್ಟ್ರೇಲಿಯಾದ ಬ್ರಿಸ್‍ಬೆನ್ ಎಂಬಲ್ಲಿ ಈ ವಿಶೇಷ ವೇರ್ ಹೌಸ್ ನೋಡಲು ಸಿಗುತ್ತದೆ. ಈ ವೇರ್ ಹೌಸ್ ನ್ನು ಹೊರಗಡೆಯಿಂದ ನೋಡಿದಾಗ ಅದರಲ್ಲಿರುವ ವಿಶೇಷತೆ ತಿಳಿಯುವುದಿಲ್ಲ. ವೇರ್ ಹೌಸ್ ಒಳಗೆ ಪ್ರವೇಶಿಸಿದ್ರೆ ಸುಂದರ ಲೋಕದ ದರ್ಶನ ನಿಮಗೆ ಸಿಗಲಿದೆ. ಒಳಗಡೆ ಸುಸಜ್ಜಿತವಾದ ದೊಡ್ಡ ವರಾಂಡವುಳ್ಳ ಮನೆ ಇದಾಗಿದ್ರೂ, ಹೊರಗಿನಿಂದ ವೇರ್ ಹೌಸ್ ರೀತಿಯಲ್ಲಿ ಕಾಣುತ್ತದೆ.

    ಮನೆಯಲ್ಲಿ ಏನಿದೆ..? ದೊಡ್ಡ ವರಾಂಡವುಳ್ಳ ಮನೆಯಲ್ಲಿ ಹವಾನಿಯಂತ್ರಿತ ಎರಡು ಐಷಾರಾಮಿ ಬೆಡ್ ರೂಮ್‍ಗಳನ್ನು ಹೊಂದಿದೆ. ಆಧುನಿಕ ಶೈಲಿಯಲ್ಲಿ ನಿರ್ಮಿತ ಅಡುಗೆ ಮನೆ, ಸ್ಟೈಲಿಶ್ ಬಾತ್ ರೂಮ್ ಹೊಂದಿದೆ. ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಈ ಮನೆಯನ್ನು ಕೊಳ್ಳಲು ಹಲವು ಜನರು ಮುಂದೆ ಬಂದಿದ್ದರು. ಕೊನೆಗೆ ಈ ಮನೆ ಬರೋಬ್ಬರಿ 8.90 ಕೋಟಿಗೆ ಬಿಕರಿಯಾಗಿದೆ ಎಂದು ಏಜೆಂಟ್ ಜ್ಯಾಕ್ ಟುಲ್ಲಿ ಹೇಳಿದ್ದಾರೆ.

    ಒಂದೇ ಒಂದು ದೊಡ್ಡ ವರಾಂಡದಲ್ಲಿ ಮನೆಯನ್ನು ವಿಂಗಡಿಸಲಾಗಿದೆ. ಆರಂಭದಲ್ಲಿ ಕುಳಿತುಕೊಳ್ಳಲು ಸೋಫಾ ವ್ಯವಸ್ಥೆ, ಅಡುಗೆ ಮನೆ, ಡೈನಿಂಗ್ ಟೇಬಲ್ ಎಲ್ಲವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡಲಾಗಿದೆ. ವಿಭಿನ್ನ ಮತ್ತು ಕಲಾತ್ಮಕ ಮನೆಗಳನ್ನು ಇಷ್ಟಪಡುವವರು ಈ ವೇರ್ ಹೌಸ್ ಇಷ್ಟಪಡುತ್ತಾರೆ. ಮನೆಯಲ್ಲಿಯ ಪ್ರತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ. ಮನೆಯ ಯಾವುದೇ ಭಾಗದಲ್ಲಿಯೂ ಭಿನ್ನ ಬಣ್ಣಗಳು, ಕರಕುಶಲ ಸಾಮಾಗ್ರಿಗಳಿಂದ ಸರಳವಾಗಿ ಅಲಂಕರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೈಲ ಬೆಲೆ ಮತ್ತೆ ಏರಿಕೆ: ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್‌ನಲ್ಲಿ  ಯಾರ ಪಾಲು ಎಷ್ಟು?

    ತೈಲ ಬೆಲೆ ಮತ್ತೆ ಏರಿಕೆ: ಕರ್ನಾಟಕದಲ್ಲಿ 1 ಲೀಟರ್ ಪೆಟ್ರೋಲ್‌ನಲ್ಲಿ ಯಾರ ಪಾಲು ಎಷ್ಟು?

    ಬೆಂಗಳೂರು: ಈ ತಿಂಗಳಲ್ಲಿ ಸತತ 12ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಂತೂ 80 ರೂಪಾಯಿ ದಾಟುವ ಮೂಲಕ ಸಾರ್ವತ್ರಿಕ ದಾಖಲೆ ಸೃಷ್ಠಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದರಿಂದ, ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇನ್ನು, ತೈಲ ಬೆಲೆ ಏರಿಕೆಯಾಗಿರೋದ್ರಿಂದ ತೈಲ ಉತ್ಪನ್ನಗಳ ಮೇಲೆ ಹಾಕಿರುವ ಸೆಸ್ ಇಳಿಕೆಬೇಕೆಂದು ರಾಜ್ಯ ಸರ್ಕಾರವನ್ನು ವಾಹನ ಸವಾರರು ಒತ್ತಾಯಿಸಿದ್ದಾರೆ.

    ಪೆಟ್ರೋಲ್ ದರ ಎಲ್ಲಿ ಎಷ್ಟು?
    ದೆಹಲಿಯಲ್ಲಿ 78.05 ರೂ, ಮುಂಬೈ 85.38 ರೂ. ಚೆನ್ನೈ 80.99 ರೂ, ಕೋಲ್ಕತ್ತಾ 80.89 ರೂ., ಬೆಂಗಳೂರು 80.76

    ಡೀಸೆಲ್ ದರ ಎಲ್ಲಿ ಎಷ್ಟು?
    ದೆಹಲಿಯಲ್ಲಿ 69.61 ರೂ., ಮುಂಬೈ 73.79 ರೂ., ಚೆನ್ನೈ 75.43 ರೂ., ಕೋಲ್ಕತ್ತಾ 72.35 ರೂ., ಬೆಂಗಳೂರು 71.98 ರೂ.

    ಕರ್ನಾಟಕದಲ್ಲಿ ಹೇಗಿದೆ ಪೆಟ್ರೋಲ್ ತೆರಿಗೆ?
    * ಮೂಲದರ- 58.55 ರೂ. (ಲೀಟರ್‌ಗೆ) ( ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
    * ಕರ್ನಾಟಕದಲ್ಲಿ ತೆರಿಗೆ- 22.21 ರೂ. (ಲೀಟರ್‌ಗೆ)
    * ಶೇ.32ರಷ್ಟು ಸೆಸ್ ಅಂದರೆ 18.74 ರೂಪಾಯಿ ಆಗುತ್ತೆ
    * ಎಲ್‍ಎಫ್‍ಆರ್ – 47 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
    * ಡೀಲರ್‍ಗಳಿಗೆ ಕಮಿಷನ್- 3.00 ರೂ.
    * ತೆರಿಗೆ ನಂತರ- 80.76 ರೂ.

    ಕರ್ನಾಟಕದಲ್ಲಿ ಹೇಗಿದೆ ಡೀಸೆಲ್ ತೆರಿಗೆ?
    * ಮೂಲದರ – 57.59 ರೂ. (ಲೀಟರ್‌ಗೆ) (ಕೇಂದ್ರ ತೆರಿಗೆ, ಸಾರಿಗೆ ವೆಚ್ಚ ಸೇರಿ)
    * ಕರ್ನಾಟಕದಲ್ಲಿ ತೆರಿಗೆ- 14.39 ರೂ. (ಲೀಟರ್‌ಗೆ)
    * ಶೇ.21ರಷ್ಟು ಸೆಸ್ ಅಂದರೆ 12 ರೂಪಾಯಿ ಆಗುತ್ತೆ
    * ಎಲ್‍ಎಫ್‍ಆರ್ – 37 ಪೈಸೆ (ಲೈಸನ್ಸ್ ಫೀ ರಿಕವರಿ – ಬಂಕ್ ನಿರ್ವಹಣೆ, ಸ್ಟೋರೇಜ್‍ಗೆ ವಿಧಿಸೋ ಮೊತ್ತ)
    * ಡೀಲರ್‍ಗಳಿಗೆ ಕಮಿಷನ್- 2.00 ರೂ (ಲೀಟರ್‌ಗೆ)
    * ತೆರಿಗೆ ನಂತರ- 71.98 ರೂ. (ಲೀಟರ್‌ಗೆ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv