Tag: ಬೆಲೆ

  • ಭತ್ತದ ಬೆಲೆ ಕುಸಿತ: ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ

    ಭತ್ತದ ಬೆಲೆ ಕುಸಿತ: ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ

    ಕೊಪ್ಪಳ: ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯ ನಿರ್ಮಾಣದ ಬಳಿಕ ಆ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆದು ಕಾರಟಗಿ, ಗಂಗಾವತಿ ಮಾರುಕಟ್ಟೆಗೆ ಬರುತ್ತಿರುವೆ. ಇತ್ತ ತುಂಗಾಭದ್ರ ಜಲಾಶಯ ಪಾತ್ರದ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದರಿಂದ ಬೆಲೆ ಕುಸಿದಿದೆ. ಹೀಗಾಗಿ ರೈತರು ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯಿಸುತ್ತಿದ್ದಾರೆ.

    ಮುಂಗಾರು ಮಳೆ ತಡವಾಗಿ ಆರಂಭವಾಗಿ ಮೂರೇ ದಿನದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಎಡ ಮತ್ತು ಬಲದಂಡೆ ಕಾಲುವೆಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲಾಗಿತ್ತು. ರೈತರು ಮೊದಲ ಬೆಳೆಯನ್ನು ಬೆಳೆದಿದ್ದು, ಈಗ ಕಟಾವಿಗೆ ಬಂದಿದೆ. ವ್ಯಾಪಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದ್ದರಿಂದ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ. ಇದು ಭತ್ತ ಬೆಳೆಗಾರರನ್ನು ಕಂಗೆಡಿಸಿದೆ.

    ಕಳೆದ ಕೆಲವು ವರ್ಷಗಳಿಂದ ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಂಠಿತಗೊಂಡಿತ್ತು. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೆಚ್ಚು ಇಳುವರಿ ಬಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು ರೈತರು ಆತಂಕ ಪಡುವಂತಾಗಿದೆ.

    ಮಾರುಕಟ್ಟೆಯಲ್ಲಿ ಪ್ರತಿ 75 ಕೆಜಿ ಭತ್ತದ ಚೀಲಕ್ಕೆ ಸರ್ಕಾರ 1380 ರೂ. ದರ ನಿಗದಿ ಮಾಡಿದೆ. ಆದರೆ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು 1200 ರೂ. ನೀಡಿ ಖರೀದಿಸುತ್ತಿದ್ದಾರೆ. ಗುಣಮಟ್ಟ ಮತ್ತು ವಿವಿಧ ಕಾರಣಗಳನ್ನು ನೀಡಿ ಇನ್ನೂ ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ರೈತರ ಸಂಕಷ್ಟ ತೀವ್ರವಾಗಿದೆ. ಅಷ್ಟೇ ಅಲ್ಲದೆ ಯಾದಗಿರಿ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚು ಪ್ರಮಾಣದಲ್ಲಿ ಭತ್ತ ಆವಕವಾಗುತ್ತಿದೆ. ಇದರಿಂದ ಭತ್ತಕ್ಕೆ ಬೆಲೆ ಕಡಿಮೆಯಾಗಿದ್ದು, ರೈತರು ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿ ಮತ್ತು ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಭತ್ತದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿರುವ ಗಂಗಾವತಿ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಅಕ್ಕಿ ಮಿಲ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಭಾಗದಿಂದ ಭತ್ತ ಮಾರಾಟಕ್ಕೆ ರೈತರು ಇಲ್ಲಿಗೆ ಬರುತ್ತಿದ್ದಾರೆ. ಇದರಿಂದ ತೀವ್ರ ಪೈಪೋಟಿ ಎದುರಾಗಿದ್ದು, ಬೆಲೆ ಕಡಿಮೆಯಾಗಿದೆ.

  • ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬಾಡೂಟದ ಭರಾಟೆಗೆ ಬಿತ್ತು ಕೊಕ್ಕೆ – ಎಲೆಕ್ಷನ್ ಸಮಯದಲ್ಲಿ ಮಾಂಸದ ದರ ಭಾರೀ ಏರಿಕೆ

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ರಾಜಕೀಯ ಬಾಡೂಟ ಹಾಕಿಸುತ್ತಾರೆ. ಆದರೆ ಈ ಬಾರಿ ಬಾಡೂಟನೇ ರಾಜಕೀಯ ನಾಯಕರುಗಳ ಕೈ ಸುಡುತ್ತಿದೆ.

    ಚುನಾವಣೆ ಬರುತ್ತಿದ್ದಂತೆ ರಾಜಕೀಯ ನಾಯಕರು ಮತದಾರರನ್ನು ಸೆಳೆಯುವುದಕ್ಕೆ ಮೊದಲ ಪ್ರಯತ್ನನೇ ಬಾಡೂಟ ಹಾಕಿಸುವುದು. ಹೀಗಾಗಿ ಎಲ್ಲೆಡೆ ಬಾಡೂಟದ ಭರಾಟೆ ಕೂಡ ಜೋರಾಗಿದೆ. ಬಾಡೂಟದಲ್ಲಿ ಚೀಪ್ ರೇಟ್‍ನ ಚಿಕನ್ ಮತ್ತು ಮಟನ್ ನೀಡಿ ಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇದೇ ಬಾಡೂಟ ರಾಜಕೀಯ ನಾಯಕರ ಕೈ ಸುಡುತ್ತಿದ್ದು, ಚಿಕನ್ ಹಾಗೂ ಮಟನ್ ರೇಟ್ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಮಾಂಸದ ದರ ಏರಿಕೆ ಆಗಿದೆ.

    ಕಳೆದ ತಿಂಗಳು ಕೆ.ಜಿಗೆ 113 ರೂ. ಇದ್ದ ಚಿಕನ್ ದರ 180 ರೂ. ಆಗಿದೆ. ಹಾಗೆಯೇ ಮಟನ್ 520 ರೂ. ಯಿಂದ 560 ರೂ. ಜಿಗಿದಿದೆ. ಅಂತೆಯೇ ಒಂದು ಮೊಟ್ಟೆ 4 ರೂ.ಯಿಂದ 6 ರೂ.ಗೆ ಏರಿಕೆಯಾಗಿದೆ. ಮಟನ್ ನಲ್ಲಿ ಅಷ್ಟೇನೂ ಹೆಚ್ಚಳವಾಗದಿದ್ರೂ, ಚಿಕನ್ ನಲ್ಲಿ 80 ರೂ. ಹೆಚ್ಚಾಗಿದ್ದು, ನಾನ್ ವೆಜ್ ಪ್ರಿಯರ ನಿದ್ದೆಗೆಡಿಸಿದೆ. ಈ ವಾರದಲ್ಲೇ ಚಿಕನ್ 200 ರೂ. ಹಾಗೂ ಮಟನ್ 600 ರೂ. ಗಡಿ ದಾಟುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ದಿನವೊಂದಕ್ಕೆ 90 ಟನ್‍ಗಿಂತ ಹೆಚ್ಚು ಕೋಳಿ ಮಾರಾಟವಾಗುತ್ತಿದೆ. ಆದರೆ ಚುನಾವಣೆ ಎಲೆಕ್ಷನ್ ಹೊತ್ತಿನಲ್ಲಿ, ದಿನವೊಂದಕ್ಕೆ 150 ಟನ್‍ಗಿಂತಲೂ ಹೆಚ್ಚು ಮಾರಾಟವಾಗುತ್ತದೆ. ಬೆಲೆ ಎಷ್ಟಾದರೂ ಚಿಕನ್ ಬೇಕೇ ಬೇಕು ಎಂದು ನಾನ್ ವೆಜ್ ಪ್ರಿಯರು ಹೇಳುತ್ತಿದ್ದಾರೆ.

    ಬೆಲೆ ಏರಿಕೆ ಯಾಕೆ?
    ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅನೇಕ ಕೋಳಿಫಾರಂಗಳು ಜಲಾವೃತವಾಗಿದ್ದು, ಬೇಡಿಕೆಯಷ್ಟು ಪೂರೈಕೆ ಇಲ್ಲ.
    ಕ್ರಿಸ್‍ಮಸ್ ಹಾಗೂ ಹೊಸ ವರ್ಷದಲ್ಲಿ ಕೇಕ್ ಬಳಕೆ ಹೆಚ್ಚಾಗಿದ್ದು, ಮೊಟ್ಟೆಯ ಬೇಡಿಕೆ ಹೆಚ್ಚಾಗಿದೆ.
    ಈಗ ಚಿಕ್ಕ ಚಿಕ್ಕ ಕೋಳಿಗಳಿದ್ದು, ಬಲಿಷ್ಟವಾಗಲೂ ಒಂದು ತಿಂಗಳಾದರೂ ಬೇಕು.

  • ಚಿಕನ್‍ಗೆ ಸ್ಪರ್ಧೆ ನೀಡುತ್ತಿದೆ ನುಗ್ಗೆಕಾಯಿ- 1 ಕೆಜಿಗೆ 349 ರೂ.

    ಚಿಕನ್‍ಗೆ ಸ್ಪರ್ಧೆ ನೀಡುತ್ತಿದೆ ನುಗ್ಗೆಕಾಯಿ- 1 ಕೆಜಿಗೆ 349 ರೂ.

    ಬೆಂಗಳೂರು: ಪ್ರವಾಹ, ಅತಿವೃಷ್ಟಿ ಪರಿಣಾಮ ನುಗ್ಗೆಕಾಯಿ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 300 ರೂ. ಗಡಿದಾಟಿದೆ.

    ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಹೀಗಾಗಿ ಹೆಚ್ಚಿನ ಗ್ರಾಹಕರು ನುಗ್ಗೆಕಾಯಿ ಖರೀದಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನುಗ್ಗೆಕಾಯಿ ಸೇರಿದಂತೆ ಸೊಪ್ಪು, ತರಕಾರಿ ಬೆಲೆ ನಾಶವಾಗಿವೆ. ಪರಿಣಾಮ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ನುಗ್ಗೆಕಾಯಿ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆಯಾಗುತ್ತಿದೆ.

    ಕಳೆದ 10 ದಿನಗಳಲ್ಲಿ ಕಡಿಮೆ ಇದ್ದ ನುಗ್ಗೆಕಾಯಿ ಬೆಲೆ ದರ 200 ರೂ. ಗಡಿದಾಟಿದೆ. ಶುಕ್ರವಾರ ಒಂದು ಕೆಜಿ ನುಗ್ಗೆಕಾಯಿ 312 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದು ಹಾಪ್ ಕಾಮ್ಸ್ ಗಳಲ್ಲಿ ಒಂದು ಕೆ.ಜಿ ನುಗ್ಗೆಕಾಯಿಯು 349 ರೂಪಾಯಿಗೆ ಮಾರಾಟವಾಗುತ್ತಿದೆ. ಈ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಹೊಂದಿದೆ. ಇದು ಆರೋಗ್ಯವರ್ಧಕ ತರಕಾರಿ. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.

    ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು. 100 ಗ್ರಾಂ ನುಗ್ಗೆಯಲ್ಲಿ 9.4 ಗ್ರಾಂ ಪ್ರೋಟೀನ್, ಶೇ. 151 ವಿಟಮಿನ್ ಎ, ಶೇ.86 ವಿಟಮಿನ್ ಸಿ, ಶೇ. 18 ಕ್ಯಾಲ್ಸಿಯಮ್ ಹಾಗೂ ಶೇ.22 ರಷ್ಟು ಕಬ್ಬಿನ ಅಂಶ ಇರುತ್ತದೆ. ನುಗ್ಗೆಕಾಯಿ ರಫ್ತಿನಲ್ಲಿ ಭಾರತವು ವಿಶ್ವದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ. ಭಾರತವು ಶೇ.80ರಷ್ಟು ನುಗ್ಗೆ ರಫ್ತು ಮಾಡಿದರೆ, ಏಷಿಯಾ ಪೆಸಿಫಿಕ್ ಶೇ. 9ರಷ್ಟು ರಫ್ತು ಮಾಡುತ್ತದೆ. ಉಳಿದಂತೆ ಆಫ್ರಿಕಾ ಶೇ. 8 ಹಾಗೂ ಅಮೆರಿಕ ಶೇ.3 ರಷ್ಟು ರಫ್ತು ಮಾಡುತ್ತವೆ.

  • ಈರುಳ್ಳಿ ಬೆಲೆ ದಿಢೀರ್ ಕುಸಿತ- ರೊಚ್ಚಿಗೆದ್ದ ರೈತರಿಂದ APMC ಕುರ್ಚಿ ಪೀಸ್ ಪೀಸ್

    ಈರುಳ್ಳಿ ಬೆಲೆ ದಿಢೀರ್ ಕುಸಿತ- ರೊಚ್ಚಿಗೆದ್ದ ರೈತರಿಂದ APMC ಕುರ್ಚಿ ಪೀಸ್ ಪೀಸ್

    ಗದಗ: ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದರಿಂದ ರೊಚ್ಚಿಗೆದ್ದ ರೈತರು ಭಾರೀ ಗಲಾಟೆ ಎಬ್ಬಿಸಿದ ಘಟನೆ ಗದಗದಲ್ಲಿ ನಡೆದಿದೆ.

    ಗದಗ ಎಪಿಎಂಸಿನಲ್ಲಿ ಈರುಳ್ಳಿ ಬೆಳೆಯುವ ರೈತರು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಕುರ್ಚಿ, ಅಂಗಡಿ ಗ್ಲಾಸ್ ಒಡೆದು, ದಲ್ಲಾಳಿಗಳಿಗೆ ಗೂಸಾ ನೀಡಿದ್ದಾರೆ. ರೈತರ ಆಕ್ರೋಶಕ್ಕೆ ದಲ್ಲಾಳಿ ಹಾಗೂ ವರ್ತಕರು ಕಂಗಾಲಾಗಿದ್ದಾರೆ.

    ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ನೂರಾರು ರೈತರು ಗಲಾಟೆ ಮಾಡಿದ್ದಾರೆ. ಈ ಹಿಂದೆ ಈರುಳ್ಳಿ ಬೆಲೆ ಒಂದು ಕ್ವಿಂಟಾಲ್ ಗೆ 2 ಸಾವಿರದಿಂದ 3 ಸಾವಿರದವರೆಗೆ ಇತ್ತು. ಆದರೆ ಇಂದು ದಿಢೀರ್ ಅಂತ 200ರೂ. ಗೆ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಕಂಗಾಲಾದ ರೈತರು ಸಿಟ್ಟಿಗೆದ್ದಿದ್ದಾರೆ.

  • ಆರು ವರ್ಷದಲ್ಲಿ ದಾಖಲೆ ಬರೆದ ಬಂಗಾರ

    ಆರು ವರ್ಷದಲ್ಲಿ ದಾಖಲೆ ಬರೆದ ಬಂಗಾರ

    ಬೆಂಗಳೂರು: ಕಳೆದ ಆರು ವರ್ಷದಲ್ಲಿ ಬಂಗಾರ ದಾಖಲೆ ಬರೆದಿದ್ದು, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

    ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಏರಿಕೆ ಕಂಡ ಬೆಲೆಯಾಗಿದೆ. ಕಳೆದ ತಿಂಗಳಿಗೂ, ಈ ತಿಂಗಳಿಗೂ ಚಿನ್ನದ ದರದ ವ್ಯತ್ಯಾಸ ನೋಡುವುದಾದರೆ, ಕಳೆದ ತಿಂಗಳು 22 ಕ್ಯಾರೆಟ್ ಚಿನ್ನದ ಬೆಲೆ-30,190 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 33,290 ರೂ. ಇತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ – 31,980 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 34,200 ರೂ.ಗೆ ಏರಿಕೆಯಾಗಿದೆ.

    ಒಂದು ತಿಂಗಳಲ್ಲಿ ಒಡವೆ ಚಿನ್ನ 10 ಗ್ರಾಂಗೆ 800 ರೂಪಾಯಿಯಷ್ಟು ಏರಿಕೆಯಾಗಿರೋದಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎಂದು ಚಿನ್ನದ ವ್ಯಾಪಾರಸ್ಥರು ಹೇಳುತ್ತಾರೆ. ಸದ್ಯ ಆಷಾಢ ಬಂದರೆ ಚಿನ್ನದ ಬೆಲೆ ಕಡಿಮೆಯಾಗುತ್ತೆ ಎನ್ನುವ ಮಾತು ಈ ಬಾರಿ ಸುಳ್ಳಾಗಿದೆ.

    ಬಂಗಾರದ ದರ ಬೆಲೆ ಹೆಚ್ಚಳಕ್ಕೆ ಕಾರಣವೆನೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ಹಾಗೂ ಇರಾನ್ ನಡುವಿನ ವ್ಯಾಪಾರ ಪೈಪೋಟಿಯಾಗಿದೆ. ಇತ್ತ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಿರುವ ಪರಿಣಾಮ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

  • ಮಳೆ ಇಲ್ಲದೆ ರಾಯಚೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

    ಮಳೆ ಇಲ್ಲದೆ ರಾಯಚೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

    ರಾಯಚೂರು: ಬರಗಾಲದ ಎಫೆಕ್ಟ್ ರಾಯಚೂರಿನಲ್ಲಿ ನೆಮ್ಮದಿಯಿಂದ ಅಡುಗೆ ಮಾಡಿಕೊಂಡು ತಿನ್ನಲು ಆಗದ ಪರಸ್ಥಿತಿಯನ್ನು ತಂದೊಡ್ಡಿದೆ.

    ಮಳೆಯಿಲ್ಲದೆ ತರಕಾರಿ ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರು ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ. ಮೊದಲೆಲ್ಲಾ 40 ರೂಪಾಯಿಗೆ ಕೆ.ಜಿ ಇದ್ದ ಬೀನ್ಸ್ ಈಗ 150 ರೂಪಾಯಿಗೆ ಕೆ.ಜಿ ಆಗಿದೆ. ಬೆಂಡೆಕಾಯಿ, ಸವತೆಕಾಯಿ, ಬದನೆಕಾಯಿ 40 ರಿಂದ 60 ರೂಪಾಯಿ ಆಗಿವೆ. ಕ್ಯಾರೆಟ್, ಹೀರೇಕಾಯಿ 70 ರೂಪಾಯಿಗೆ ಕೆ.ಜಿ ಆಗಿದೆ.

    ಎಲ್ಲಾ ತರಕಾರಿಗಳ ಬೆಲೆ ಕನಿಷ್ಠ ಅಂದ್ರೂ 20 ರಿಂದ 40 ರೂಪಾಯಿ ಏರಿಕೆಯಾಗಿದೆ. ಜಿಲ್ಲೆಯಲ್ಲಿ ತರಕಾರಿ ಕೊರತೆ ಎದುರಾಗಿರುವುದರಿಂದ ಬೇರೆ ಜಿಲ್ಲೆಗಳಿಂದ ತರಿಸಲಾಗುತ್ತಿದೆ. ಹೀಗಾಗಿ ಬೆಲೆಗಳು ಗಗನಕ್ಕೇರಿವೆ. ಆದರೆ ತರಕಾರಿ ಬೆಳೆದ ರೈತನಿಗೆ ಲಾಭ ಎಷ್ಟರ ಮಟ್ಟಿಗೆ ಸಿಗುತ್ತಿದೆಯೋ ಇಲ್ಲವೋ ಸಾರ್ವಜನಿಕರಂತೂ ಊಟ ಮಾಡಲು ಸಹ ಯೋಚಿಸುವಂತಾಗಿದೆ.

  • ಮೇ 19ರ ನಂತ್ರ ಕಾದಿದೆ ಶಾಕ್ – ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ಮೇ 19ರ ನಂತ್ರ ಕಾದಿದೆ ಶಾಕ್ – ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

    ಮಾರ್ಚ್ 11 ರಿಂದ ಈವರೆಗೆ ಕೇವಲ ಶೇ.1 ರಷ್ಟು ಮಾತ್ರ ಪೆಟ್ರೋಲ್ ದರ ಏರಿಕೆಯಾಗಿದೆ. ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಮಾರ್ಚ್ 10ಕ್ಕೂ ಹಿಂದಿನ ಎರಡು ತಿಂಗಳ ಅವಧಿಯಲ್ಲಿ ಪೆಟ್ರೋಲ್ ದರವು ಶೇ. 3.5 ರಷ್ಟು ಏರಿಕೆಯಾಗಿತ್ತು.

    ಕಚ್ಚಾ ತೈಲದ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದ್ದರೂ ಅದರ ಹೊರೆಯನ್ನು ತೈಲ ಕಂಪನಿಗಳೇ ಭರಿಸುತ್ತಿವೆ. ಆದರೆ ಮೇ19 ರ ಬಳಿಕ ತೈಲ ಕಂಪನಿಗಳು ತಮ್ಮ ನಷ್ಟದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿವೆ ಎಂದು ತಿಳಿದು ಬಂದಿದೆ.

    ಒಂದು ತಿಂಗಳ ಅವಧಿಯಲ್ಲಿ ಕಚ್ಚಾ ತೈಲದ ದರ ಶೇ.10 ರಷ್ಟು ಏರಿಕೆಯಾಗಿದ್ದು, ಅದರನ್ವಯ ಪೆಟ್ರೋಲ್, ಡೀಸೆಲ್ ದರಗಳು 6-7 ರೂಪಾಯಿ ಏರಿಸಬೇಕಾಗುತ್ತದೆ. ಸರ್ಕಾರ ಅಬಕಾರಿ ಸುಂಕವನ್ನು ಇಳಿಸಿದರೆ ಬೆಲೆ ಏರಿಕೆ ಪ್ರಮಾಣ ಸ್ವಲ್ಪ ತಗ್ಗಬಹುದು. ಹೀಗಾಗಿ ಮೇ 19 ರ ಬಳಿಕ ನಿರಂತರ ತೈಲದರದಲ್ಲಿ ಏರುವುದು ಖಚಿತವಾಗಿದೆ.

    ಜನವರಿಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲಕ್ಕೆ 52.40 ಡಾಲರ್ ಇದ್ದರೆ ಈಗ 70 ಡಾಲರ್‍ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು 80 ಡಾಲರ್‌ಗೆ ಏರಿಕೆಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

    ಭಾರತಕ್ಕೆ ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಮೇ 2ರಿಂದಲೇ ನಿರ್ಬಂಧಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇರಾನ್‍ನಿಂದ ಸರಬರಾಜಾಗುತ್ತಿದ್ದ ತೈಲವು ಇಳಿಕೆಯಾದರೆ, ಕಚ್ಚಾ ತೈಲದ ದರ ಏರುವುದು ಸಹಜ. ಭಾರತ ಇರಾನ್ ದೇಶದಿಂದ ಅಗ್ಗದ ದರದಲ್ಲಿ ತೈಲವನ್ನು ಪಡೆಯತಿತ್ತು. ಈಗ ಅಮೆರಿಕದ ನಿರ್ಧಾರದಿಂದ ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.

  • ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಧರಿಸಿದ ಗೌನ್ ಬೆಲೆ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನಿನ ಬೆಲೆ ರಿವೀಲ್ ಆಗಿದೆ. ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ. ವೆಚ್ಚದ ಗೌನ್ ಧರಿಸಿದ್ದಾರೆ.

    ಪ್ರಿಯಾಂಕಾ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಡಿಯೋರ್ ವಿನ್ಯಾಸದ ಡ್ರಾಮಾಟಿಕ್ ಡಿಯೋರ್ ಗೌನ್ ಧರಿಸಿ ಅದಕ್ಕೆ ಬಿಳಿ ಬಣ್ಣದ ಐಬ್ರೋ ಹಾಗೂ ಐಲ್ಯಾಶಸ್ ಮಾಡಿಸಿದ್ದರು.

    ಪ್ರಿಯಾಂಕಾ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 45 ಲಕ್ಷ ರೂ.ಯ ಗೌನ್ ಧರಿಸಿದ್ದರು. 1500 ಗಂಟೆಗಳ ಕಾಲ ಶ್ರಮವಹಿಸಿ ಈ ಗೌನ್‍ನನ್ನು ಟುಲೆಯಿಂದ ತಯಾರಿಸಲಾಗಿದೆ. ಆ ಗೌನ್‍ಗೆ ಪ್ರಿಯಾಂಕಾ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರದ ಇಯರಿಂಗ್ ಹಾಕಿದ್ದರು.

    ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮೆಟ್ ಗಾಲಾ ಲುಕ್ ನೋಡಿ ಅಭಿಮಾನಿಗಳು ಅವರನ್ನು ಸಾಕಷ್ಟು ಟ್ರೋಲ್ ಹಾಗೂ ಹಲವಾರು ಮಿಮ್ಸ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಆದರೆ ಈಗ ಪ್ರಿಯಾಂಕ ಲುಕ್ ಬಗ್ಗೆ ಸ್ವತಃ ಅವರ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಲುಕ್ ಬಗ್ಗೆ ಅವರ ತಾಯಿ ಮಧು ಚೋಪ್ರಾ ಬಳಿ ಕೇಳಿದ್ದಕ್ಕೆ, “ಇಷ್ಟು ದೂರದಿಂದ ನಾನು ಏನೆಂದು ಪ್ರತಿಕ್ರಿಯಿಸಲಿ. ಪ್ರಿಯಾಂಕಾ ನನ್ನ ಮುಂದೆ ಇದ್ದಿದ್ದರೆ ನಾನು ಅವಳನ್ನು ತಬ್ಬಿಕೊಳ್ಳುತ್ತಿದೆ. ಏಕೆಂದರೆ ಅವಳು ಅಷ್ಟು ಸುಂದರವಾಗಿ ಹಾಗೂ ಸ್ಪೆಷಲ್ ಆಗಿ ಕಾಣಿಸುತ್ತಿದ್ದಳು” ಎಂದು ಹೇಳಿದ್ದಾರೆ.

    ಮೆಟ್ ಗಾಲಾ ಕಾರ್ಯಕ್ರಮಕ್ಕೆ ಪ್ರಿಯಾಂಕ ಪತಿ, ಅಮೆರಿಕದ ಗಾಯಕ ನಿಕ್ ಜೋನಸ್ ಪ್ರಿಸ್ಟಿನ್ ಬಿಳಿ ಬಣ್ಣದ ಸೂಟ್ ಧರಿಸಿ ಪತ್ನಿ ಜೊತೆ ಆಗಮಿಸಿದ್ದರು. ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ 400 ಕಸೂತಿ ತುಣುಕುಗಳೊಂದಿಗೆ ಅಲಂಕರಿಸಲ್ಪಟ್ಟ, ಝಾಕ ಪೊಸೆನ್ ವಿನ್ಯಾಸದ ಗುಲಾಬಿ ಬಣ್ಣದ ಲೋರೆಕ್ಸ್ ಜಾಕ್ವಾರ್ಡ್ ಗೌನ್ ಧರಿಸಿದ್ದರು.

  • ಅಕಾಲಿಕ ಮಳೆ, ಬಿಸಿಲಿನ ಎಫೆಕ್ಟ್ – ಗಗನಕ್ಕೇರಿದ ತರಕಾರಿ ದರ

    ಅಕಾಲಿಕ ಮಳೆ, ಬಿಸಿಲಿನ ಎಫೆಕ್ಟ್ – ಗಗನಕ್ಕೇರಿದ ತರಕಾರಿ ದರ

    ಬೆಂಗಳೂರು: ಅಕಾಲಿಕ ಮಳೆ, ಬಿರುಬಿಸಿಲಿನ ಪರಿಣಾಮ ಮಾರುಕಟ್ಟೆಗೆ ತರಕಾರಿ ಸರಿಯಾಗಿ ಬರುತ್ತಿಲ್ಲ. ಇದರಿಂದ ಸೊಪ್ಪು-ತರಕಾರಿ ಬೆಲೆ ಗಗನಕ್ಕೇರಿದೆ.

    ಹೌದು..ರಾಜ್ಯದಲ್ಲಿ ಅನೇಕ ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮ ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಇದೀಗ ತರಕಾರಿಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಟೊಮೆಟೋ ದರವಂತೂ ಕೇಳೋದೆ ಬೇಡ. ನಗರದ ಹಾಪ್ ಕಾಮ್ಸ್ ಮಾರುಕಟ್ಟೆಯಲ್ಲಿ ತರಕಾರಿಗಳ ದರವನ್ನು ನೋಡೋದಾದರೆ…

    ತರಕಾರಿ                         ಹಿಂದಿನ ದರ                       ಇವತ್ತಿನ ದರ (ಕೆ.ಜಿಗೆ)
    ಟೊಮೆಟೊ –                          25 ರೂ.                                   40 ರೂ.
    ಬೀನ್ಸ್ –                                 40 ರೂ.                                   100 ರೂ.
    ಬದನೆಕಾಯಿ –                        40 ರೂ.                                   60 ರೂ.
    ಹೀರೆಕಾಯಿ-                          40 ರೂ.                                   62 ರೂ.
    ಬೆಂಡೇಕಾಯಿ-                        30 ರೂ.                                 35 ರೂ.
    ಹಾಗಲಕಾಯಿ –                       40 ರೂ.                                 60 ರೂ.

    ಟೊಮೆಟೋ ದರ 25 ರೂ.ನಿಂದ 40 ರೂ.ಗೆ ಏರಿಕೆಯಾದರೆ. ಬೀನ್ಸ್ 40 ರೂ.ನಿಂದ 100ರೂ.ಗೆ ಜಂಪ್ ಆಗಿದೆ. ಇನ್ನೂ ಬದನೆಕಾಯಿ 40 ರಿಂದ 60 ರೂಗೆ ಏರಿಕೆಯಾದರೇ, ಹೀರೆಕಾಯಿ 40 ರೂ.ನಿಂದ 62 ರೂ, ಬೆಂಡೆಕಾಯಿ 30 ರೂ.ನಿಂದ 35 ರೂ ಮತ್ತು ಹಾಗಲಕಾಯಿ 40 ರೂನಿಂದ 60 ರೂಗೆ ಏರಿಕೆ ಕಂಡಿದೆ ಎಂದು ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲಗೌಡ ತಿಳಿಸಿದ್ದಾರೆ.

    ಇನ್ನೂ ಅಗ್ಗವಾಗಿದ್ದ ತರಕಾರಿಗಳ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದರೆ,
    * ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವುದು.
    * ಮಳೆ ಇಲ್ಲದೆ ಇಳುವರಿ ಕುಂಠಿತವಾಗಿರೋದು.
    * ತರಕಾರಿಗಳ ಸರಬರಾಜು ವ್ಯವಸ್ಥೆಯಲ್ಲಿ ವ್ಯತಯ.

  • ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    ಬೆಂಗಳೂರು: ಮದುವೆ ಸೀಜನ್ ಆರಂಭವಾಗುತ್ತಿದೆ. ಆದ್ರೆ ಮದುವೆಗೆ ಈ ಕಾಸ್ಟ್ಲೀ ದುನಿಯಾದಲ್ಲಿ ಹೇಂಗಪ್ಪಾ ಚಿನ್ನ ತಗೊಳ್ಳೋದು ಎಂದು ಯೋಚನೆ ಮಾಡ್ತಿದ್ದೀರಾ. ಡೋಂಟ್ ವರಿ, ನಿಮಗಾಗಿಯೇ ಸಿಹಿ ಸುದ್ದಿಯೊಂದು ಇಲ್ಲಿದೆ.

    ಹೌದು. ಈ ಬಾರಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆ ಕುಸಿಯುತ್ತಾ ಬಂದಿದೆ. ಬರೋಬ್ಬರಿ ಒಂದೇ ತಿಂಗಳಲ್ಲಿ 1 ರಿಂದ ಒಂದೂವರೆ ಸಾವಿರದಷ್ಟು ಬೆಲೆ ಇಳಿಕೆ ಕಂಡಿದೆ.

    ಒಂದು ತಿಂಗಳ ಬೆಲೆಯ ವ್ಯತ್ಯಾಸ?:
    ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 31 ಸಾವಿರ ರೂ. ಇದ್ರೆ. 24 ಕ್ಯಾರೆಟ್ ಚಿನ್ನದ ಬೆಲೆ 33, 336 ರೂ ಇತ್ತು. ಆದ್ರೆ ಇಂದು  22 ಕ್ಯಾರೆಟ್ ಚಿನ್ನದ ಬೆಲೆ 29,560 ರೂ ಆಗಿದ್ರೆ, 24 ಕ್ಯಾರೆಟ್ ಚಿನ್ನದ ಬೆಲೆ 32,459 ರೂಗೆ ಇಳಿದಿದೆ.

    ಅಂತರಾಷ್ಟೀಯ ಮಟ್ಟದಲ್ಲಿ ಚಿನ್ನದ ದರ ಕಡಿಮೆ ಆಗಿರೋದೇ ಚಿನ್ನದ ಬೆಲೆ ಇಳಿಕೆಗೆ ಕಾರಣ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ತಗೊಳ್ಳೋರು ಈಗ್ಲೇ ಬುಕ್ ಮಾಡೋದು ಬೆಸ್ಟ್ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಿದ್ದಾರೆ.

    ಚಿನ್ನ ಅಂದ್ರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಮದುವೆಯಲ್ಲಂತೂ ಚಿನ್ನದ್ದೇ ಕಾರುಬಾರು. ಇದೀಗ ಬಂಗಾರದ ಬೆಲೆ ಕಡಿಮೆಯಾಗಿರೋದ್ರಿಂದ ಮದುವೆಗೆ ಹಾಗೂ ಅಕ್ಷಯ ತೃತೀಯಕ್ಕೆ ಜನ ಚಿನ್ನವನ್ನು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ ಎಂದು ಗ್ರಾಹಕಿ ಶಕುಂತಲಾ ಹೇಳಿದ್ದಾರೆ.

    ಒಟ್ಟಿನಲ್ಲಿ ವೆಡ್ಡಿಂಗ್ ಸೀಜನ್ ಹಾಗೂ ಅಕ್ಷಯ ತೃತೀಯ ಸಮಯದಲ್ಲೇ ಚಿನ್ನದ ಬೆಲೆ ಕಡಿಮೆ ಆಗಿರೋದರಿಂದ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.