Tag: ಬೆಲಾರಸ್

  • ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

    – ಹಿರೋಷಿಮಾ, ನಾಗಸಾಕಿ ಅಣ್ವಸ್ತ್ರಕ್ಕಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿ ರಷ್ಯಾದ ಅಣ್ವಸ್ತ್ರ

    ಮಾಸ್ಕೋ: ಉಕ್ರೇನ್ (Ukranine) ಮೇಲೆ ವರ್ಷದಿಂದ ಯುದ್ಧ ಮಾಡುತ್ತಿರುವ ರಷ್ಯಾ (Russia) ಇದೀಗ ತನ್ನ ಮೊದಲ ಬ್ಯಾಚ್‌ನ ಪರಮಾಣು ಶಸ್ತ್ರಾಸ್ತ್ರವನ್ನು (Nuclear Weapons) ಬೆಲಾರಸ್‌ಗೆ (Belarus) ಕಳುಹಿಸಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶುಕ್ರವಾರ ತಿಳಿಸಿದ್ದಾರೆ. ಈ ವಿಚಾರ ದೃಢವಾಗುತ್ತಲೇ ಇಡೀ ಜಗತ್ತಿಗೆ ಭೀತಿ ಉಂಟಾಗಿದೆ.

    ಸೆಂಟ್ ಪೀಟರ್ಸ್ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿರುವ ಪುಟಿನ್, ಈ ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಶಸ್ತ್ರಾಸ್ತ್ರಗಳನ್ನು ತಲುಪಿಸುವ ಗುರಿಯಿದೆ. ಇದು ರಷ್ಯಾ ಹಾಗೂ ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುತ್ತಿರೋ ಎಲ್ಲಾ ವಿರೋಧಿಗಳಿಗೂ ತಿರುಗೇಟಿನ ಕ್ರಮವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರದ ಬಳಕೆ ಮಾಡುತ್ತದೋ ಎಂಬ ಪ್ರಶ್ನೆಗೆ ಕಾರಣವಾಗಿದೆ ಮಾತ್ರವಲ್ಲದೇ ಜಗತ್ತಿನ ನಿದ್ದೆಗೆಡಿಸಿದಂತಾಗಿದೆ.

    ಈ ವಾರ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು, ನಾವು ರಷ್ಯಾದಿಂದ ಬಾಂಬ್‌ಗಳು ಹಾಗೂ ಕ್ಷಿಪಣಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾಂಬ್‌ಗಳು ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬಳಸಲಾಗಿದ್ದ ಅಣ್ವಸ್ತ್ರಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್‌ ರಾಜಕಾಲುವೆ

    ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧ ಆರಂಭವಾಗಿ ವರ್ಷವೇ ಕಳೆದಿದೆ. ಯುದ್ಧ ಇನ್ನೇನು 500ನೇ ದಿನ ಪೂರೈಸಲಿದೆ. ಅಮೆರಿಕ ಈ ಯುದ್ಧದ ಬಗ್ಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಇದೀಗ ರಷ್ಯಾ ನೇರವಾಗಿ ಅಣ್ವಸ್ತ್ರವನ್ನೇ ತನ್ನ ಮಿತ್ರ ರಾಷ್ಟ್ರ ಬೆಲಾರಸ್‌ಗೆ ಕಳುಹಿಸಿ ಕೊಟ್ಟಿದೆ. ಬೆಲಾರಸ್‌ನ ಗಡಿಯಿಂದ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಕೇವಲ 200 ಕಿ.ಮೀ ದೂರವಿದೆ. ಇದೀಗ ರಷ್ಯಾ ನೇರವಾಗಿ ಕೀವ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಚಿಪ್ಸ್ ಕರೆಯುವ ಎಣ್ಣೆ ಬಾಣಲೆಗೆ ಬಿದ್ದಿದ್ದ 25 ರ ಯುವಕ ಸಾವು

  • ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು

    ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು

    ಮಿನ್ಸ್ಕ್: ಬೆಲಾರಸ್‌ನ (Belarus) ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ನೊಬೆಲ್ ಶಾಂತಿ ವಿಜೇತ (Nobel Peace Prize) ಅಲೆಸ್ ಬಿಲಿಯಾಟ್ಸ್ಕಿಗೆ (Ales Bialiatski) ಬೆಲರಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಬಿಲಿಯಾಟ್ಸ್ಕಿ ಅವರು 2020ರ ಚುನಾವಣೆಯ ಸಂದರ್ಭ ಬೃಹತ್ ಪ್ರತಿಭಟನೆ ನಡೆಸಿದ್ದು, ಅವರ ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿತ್ತು. ಪ್ರತಿಭಟನೆ ಹಾಗೂ ಇತರ ಅಪರಾಧಗಳಿಗೆ ಹಣಕಾಸು ಒದಗಿಸಿರುವುದಕ್ಕೆ 60 ವರ್ಷದ ಬಿಲಿಯಾಟ್ಸ್ಕಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ:  ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮೇಲಿನ ಕೆಲಸಕ್ಕಾಗಿ ಬಿಲಿಯಾಟ್ಸ್ಕಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ನೋಬೆಲ್ ಪ್ರಶಸ್ತಿ ಪಡೆಯುವ ಸಂದರ್ಭವೂ ಬಿಲಿಯಾಟ್ಸ್ಕಿ ಜೈಲಿನಲ್ಲೇ ಇದ್ದಿದ್ದು, ಅವರ ಪರವಾಗಿ ಪ್ರಶಸ್ತಿಯನ್ನು ಅವರ ಪತ್ನಿ ಸ್ವೀಕರಿಸಿದ್ದರು. ಇದನ್ನೂ ಓದಿ: ಮಾಡಾಳ್ ಲಂಚ ಕೇಸ್‌- ಟೆಂಡರ್‌ನಲ್ಲಿ ಗೋಲ್ಮಾಲ್‌ ಹೇಗೆ? ಎಷ್ಟು ದುಬಾರಿ ದರ?