Tag: ಬೆರೂತ್

  • ಲೆಬನಾನ್ ರಾಜಧಾನಿ ಬೆರೂತ್‍ನಲ್ಲಿ 2 ಕಡೆ ಭಯಾನಕ ಸ್ಫೋಟ

    ಲೆಬನಾನ್ ರಾಜಧಾನಿ ಬೆರೂತ್‍ನಲ್ಲಿ 2 ಕಡೆ ಭಯಾನಕ ಸ್ಫೋಟ

    ಬೆರೂತ್: ಲೆಬನಾನ್ ರಾಜಧಾನಿ ಬೆರೂತ್ ನಲ್ಲಿ ಭಯಾನಕ ಸ್ಫೋಟವಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.

    ಸ್ಫೋಟಕ್ಕೂ ಮೊದಲು ಶ್ವೇತ ಬಣ್ಣದ ಬಲೂನ್ ರೀತಿಯಲ್ಲಿ ದೊಡ್ಡ ಗುಳ್ಳೆ ಕಾಣಿಸಿಕೊಂಡ ಕ್ಷಣ ಗಳಿಗೆಯಲ್ಲಿ ಸ್ಫೋಟವಾಗಿದೆ. ಸ್ಫೋಟದ ಬಳಿಕ ಬೆರೂತ್ ನಲ್ಲಿ ಹೊಗೆ ಆವರಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿನ ಬಹುತೇಕ ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    https://twitter.com/borzou/status/1290675854767513600

    15 ನಿಮಿಷದೊಳಗೆ ಬಂದರು ಮತ್ತು ಬೆರೂತ್ ನಗರದೊಳಗೆ ಸ್ಫೋಟಕ ವಸ್ತು ಸ್ಫೋಟಗೊಂಡಿದೆ. ಎರಡನೇ ಸ್ಫೋಟದ ತೀವ್ರತೆಗೆ ಇಡೀ ಬೆರೂತ್ ನಗರ ಹೊಗೆಮಯವಾಗಿದ್ದು, ಹೆಚ್ಚಿನ ಮನೆಗಳು ಸ್ಫೋಟಕ್ಕೆ ತುತ್ತಾಗಿವೆ. ಎರಡನೇ ಸ್ಫೋಟ ಮಾಜಿ ಪ್ರಧಾನಿ ರಫಿಕ್ ಹರಿರಿ ನಿವಾಸದ ಬಳಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.