Tag: ಬೆಮೆಲ್ ಕಾಂತರಾಜು

  • ಹೊಸ ವರ್ಷಕ್ಕೆ ಜೆಡಿಎಸ್‌ಗೆ ಶಾಕ್ – ಪಕ್ಷ ತೊರೆಯಲಿದ್ದಾರೆ ಕಾಂತರಾಜು

    ಹೊಸ ವರ್ಷಕ್ಕೆ ಜೆಡಿಎಸ್‌ಗೆ ಶಾಕ್ – ಪಕ್ಷ ತೊರೆಯಲಿದ್ದಾರೆ ಕಾಂತರಾಜು

    ಬೆಂಗಳೂರು: ಜೆಡಿಎಸ್‌ನ್ನು ತೊರೆದು ಕಾಂಗ್ರೆಸ್‌ಗೆ ಸೇರುವ ಬಗ್ಗೆ ಎಂಎಲ್‌ಸಿ ಬಿಎಂಎಲ್ ಕಾಂತರಾಜು ಬಹುತೇಕ ಖಚಿತಪಡಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದಂತಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಇಂದು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಕಾಂತರಾಜು ಜೆಡಿಎಸ್‌ನಲ್ಲಿ ಬಾಗಿಲು ಮುಚ್ಚಿದೆ. ವರಿಷ್ಠರು ಮಾತನಾಡುವ ಯಾವುದೇ ಸೂಚನೆ ಇಲ್ಲ. ಈಗಾಗಲೇ ಬಾಗಿಲು ಮುಚ್ಚಿದ್ದಾರೆ ಎಂದು ಹೇಳಿದ ಅವರು, ಜೆಡಿಎಸ್ ತೊರೆಯುವುದಾಗಿ ಬಹುತೇಕ ಖಚಿತ ಪಡಿಸಿದ್ದಾರೆ. ಇದನ್ನೂ ಓದಿ: ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ

    ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ಸೇರುವ ಕುರಿತು ಮಾಹಿತಿ ನೀಡಿದ ಕಾಂತರಾಜು ಅವರು, ಇನ್ನೂ ಎರಡು, ಮೂರು ದಿನಗಳಲ್ಲಿ ನನ್ನ ನಿರ್ಧಾರ ಖಚಿತ ಪಡಿಸುತ್ತೇನೆ ಎಂದಿದ್ದಾರೆ. ಪ್ರಾಮಾಣಿಕವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡರ ಆಶೀರ್ವಾದದಿಂದ ತುಮಕೂರಿನಲ್ಲಿ ಗೆದ್ದಿದ್ದೇನೆ. ಆದರೆ ನಾನು ಕೂಡ ಅಷ್ಟೇ ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದೇನೆ. ಈಗ ನನ್ನ ಪ್ರಾಮಾಣಿಕ ಕೆಲಸದ ಮೇಲೆ ಅವರಿಗೆ ನಂಬಿಕೆ ಇಲ್ಲ. ಜೆಡಿಎಸ್ ಬಾಗಿಲು ಮುಚ್ಚಿರುವುದರಿಂದ ಬೇರೆ ಬಾಗಿಲು ತಟ್ಟಬೇಕಾಗಿದೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 10ಕ್ಕೂ ಹೆಚ್ಚು ಸಚಿವರು, 20ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ದೃಢ

  • ಜೆಡಿಎಸ್ ಬಾಗಿಲು ಮುಚ್ಚಿದ್ದು, ರಾಜಕೀಯ ಭವಿಷ್ಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಸಂಪರ್ಕದಲ್ಲಿದ್ದೇನೆ: ಬೆಮೆಲ್ ಕಾಂತರಾಜು

    ಜೆಡಿಎಸ್ ಬಾಗಿಲು ಮುಚ್ಚಿದ್ದು, ರಾಜಕೀಯ ಭವಿಷ್ಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಸಂಪರ್ಕದಲ್ಲಿದ್ದೇನೆ: ಬೆಮೆಲ್ ಕಾಂತರಾಜು

    ತುಮಕೂರು: ಜೆಡಿಎಸ್ ನಿಂದ ಬಾಗಿಲು ಮುಚ್ಚಿದೆ ಎಂದ ಮೇಲೆ ಬೇರೆ ಬಾಗಿಲು ತಟ್ಟಬೇಕಲ್ಲ. ಖಂಡಿತವಾಗಿ ಜೆಡಿಎಸ್ ಬಾಗಿಲು ಮುಚ್ಚಿದ್ದು, ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಸಂಪರ್ಕದಲ್ಲಿ ಇದ್ದೇನೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರುವೇಕೆರೆಯಲ್ಲಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು. ಕುಮಾರಸ್ವಾಮಿ ಎಮ್ ಟಿ ಕೃಷ್ಣಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಇಂಥಹ ಮಾತುಗಳು ನಾವು ಹಿಂದಿನಿಂದಲೂ ನೋಡುತಿದ್ದೇವೆ. ಅವರು ಒಂದೊಂದು ಸಾರಿ ಒಂದೊಂದು ಮಾತು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

    ಹೆಚ್‍ಡಿಕೆಗೆ ಈ ಮಾತುಗಳು ಎಷ್ಟು ಶೋಭೆ ತರುತ್ತದೆ ಅನ್ನೋದು ಅವರೇ ಯೋಚನೆ ಮಾಡಲಿ. ಒಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ನಾಯಕರನ್ನು ಬೆಳೆಸೋದು ಅವರಿಗೆ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಜನರ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಲಿ ಶಾಸಕನಿಗೆ ಬಾಗಿಲು ಮುಚ್ಚಿದ ಜೆಡಿಎಸ್ – ದೇವೇಗೌಡರಿಂದ್ಲೇ ಡೋರ್ ಕ್ಲೋಸ್ ಸಂದೇಶ

    ಇತ್ತ ಸ್ವಪಕ್ಷದ ವಿರುದ್ಧವೇ ಹೇಳಿಕೊಡುತ್ತಾ ತಮ್ಮ ನಾಯಕರ ವಿರುದ್ಧ ಆಗಾಗ ಗುಡುಗುತ್ತಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್‍ಗೆ ಇಂದಿನಿಂದ ಅಧಿಕೃತವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ. ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ನಾಯಕನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬಾಗಿಲು ಮುಚ್ಚಿದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ತೀರ್ಮಾನಕ್ಕೆ ವರಿಷ್ಠ ದೇವೇಗೌಡರು ಅಧಿಕೃತ ಮೊಹರು ಒತ್ತಿದ್ದಾರೆ. ಈ ನಡುವೆ ಶಾಸಕ ಶ್ರೀನಿವಾಸ್‍ಗೆ ಇತ್ತ ಜೆಡಿಎಸ್ ಇಲ್ಲದೇ, ಅತ್ತ ಕಾಂಗ್ರೆಸ್ ಅಲ್ಲದ ಅತಂತ್ರಭಾವ ಮೂಡಿದೆ.