Tag: ಬೆನ್ ಸ್ಟೋಕ್ಸ್

  • India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    India vs England Test; ನಿರ್ಣಾಯಕ ಪಂದ್ಯದಿಂದ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಔಟ್‌

    ಬ್ರಿಟನ್‌: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿವೆ. ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಮತ್ತು ಭಾರತದ ವೇಗಿ ಜಸ್ಪ್ರಿತ್‌ ಬುಮ್ರಾ (Jasprit Bumrah) ಇಬ್ಬರೂ ಓವಲ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.

    ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜದ ಗಾಯದಿಂದಾಗಿ ಸ್ಟೋಕ್ಸ್ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ. ಉಪನಾಯಕ ಓಲಿ ಪೋಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಇದನ್ನೂ ಓದಿ: ವಾಂಖೆಡೆಯಲ್ಲಿ 6.5 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿ ಕಳವು – ಸೆಕ್ಯುರಿಟಿ ಗಾರ್ಡ್ ಅರೆಸ್ಟ್

    ಇಂಗ್ಲೆಂಡ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.

    ಭಾರತ ಕೂಡ ಬೌಲಿಂಗ್ ಮುಂಚೂಣಿಯಲ್ಲಿಲ್ಲ. ಜಸ್ಪ್ರಿತ್‌ ಬುಮ್ರಾ ಅವರ ಬೆನ್ನಿನ ನೋವು ಸಮಸ್ಯೆ ಕಾಣಿಸಿಕೊಳ್ಳದಂತೆ ಮುನ್ನೆಚ್ಚರಿಕೆಯಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಗಾಯದಿಂದಾಗಿ ಅವರು ಹಲವು ತಿಂಗಳು ತಂಡದಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

    ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾ ಮತ್ತು ತಂಡದ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ, ಸರಣಿಯನ್ನು 2-2 ಸಮಬಲಗೊಳಿಸುವ ಅವಕಾಶವಿದೆ. ಇದನ್ನೂ ಓದಿ: Explained| ಬದಲಾದ ಮಾಲ್ಡೀವ್ಸ್‌ – ಇಂಡಿಯಾ ಔಟ್‌ ಹೇಳಿ ಈಗ ಮೋದಿಯನ್ನು ಆಹ್ವಾನಿಸಿದ್ದು ಯಾಕೆ?

  • ವಿಕೆಟ್‌ ಪಡೆಯಲು ಪರದಾಡಿದ ಬೌಲರ್‌ಗಳು – ಭರ್ಜರಿ 186 ರನ್‌ ಮುನ್ನಡೆಯಲ್ಲಿ ಇಂಗ್ಲೆಂಡ್‌

    ವಿಕೆಟ್‌ ಪಡೆಯಲು ಪರದಾಡಿದ ಬೌಲರ್‌ಗಳು – ಭರ್ಜರಿ 186 ರನ್‌ ಮುನ್ನಡೆಯಲ್ಲಿ ಇಂಗ್ಲೆಂಡ್‌

    ಮ್ಯಾಚೆಂಸ್ಟರ್‌: ಜೋ ರೂಟ್‌ (Joe Root) ಅವರ ಶತಕ, ಬೆನ್‌ ಸ್ಟೋಕ್ಸ್‌ ಮತ್ತು ಓಲಿ ಪೋಪ್‌ ಅವರ ಅರ್ಧಶತಕದ ನೆರವಿನಿಂದ ಭಾರತದ (India) ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್‌ ಕ್ರಿಕೆಟ್‌ನ ಮೂರನೇ ದಿನ ಇಂಗ್ಲೆಂಡ್‌ (England) 186 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

    ಭಾರತದ 358 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್‌ 135 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 544 ರನ್‌ ಹೊಡೆದಿದೆ. ಎರಡನೇ ದಿನ 2 ವಿಕೆಟ್‌ ನಷ್ಟಕ್ಕೆ 225 ರನ್‌ ಹೊಡೆದಿದ್ದ ಇಂಗ್ಲೆಂಡ್‌ ಇಂದು 5 ವಿಕೆಟ್‌ಗಳ ಸಹಾಯದಿಂದ 319 ರನ್‌ ಹೊಡೆಯಿತು. ಇಂದು 89 ಓವರ್‌ ಎಸೆದ ಭಾರತ ಬೌಲರ್‌ಗಳಿಗೆ ದಕ್ಕಿದ್ದು ಕೇವಲ 5 ವಿಕೆಟ್‌ಗಳು ಮಾತ್ರ.

    ಔಟಾಗದೇ ಉಳಿದಿದ್ದ ಜೋ ರೂಟ್‌ 150 ರನ್‌(248 ಎಸೆತ, 14 ಬೌಂಡರಿ ಹೊಡೆದು ಔಟಾದರೆ, ಓಲಿ ಪೋಪ್‌ 71 ರನ್‌(128 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಇವರಿಬ್ಬರು ಮೂರನೇ ವಿಕೆಟಿಗೆ 231 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟಿನಲ್ಲಿ ಎರಡನೇ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಜೋ ರೂಟ್‌ ಪಾತ್ರರಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ

    ನಾಯಕ ಬೆನ್‌ ಸ್ಟೋಕ್ಸ್‌ (Ben Stokes) 77 ರನ್‌ (134 ಎಸೆತ, 6 ಬೌಂಡರಿ) ಲಿಯಾಮ್ ಡಾಸನ್ 21 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಶನಿವಾರ ಭಾರತದ ಬೌಲರ್‌ಗಳು ಉತ್ತಮವಾಗಿ ಆಡಿ ಬೇಗನೇ ವಿಕೆಟ್‌ ತೆಗೆದು ನಂತರ ಭಾರತ ಔಟಾಗದೇ ದಿನಪೂರ್ತಿ ಆಡಿದರೆ ಪಂದ್ಯಕ್ಕೆ ರೋಚಕ ತಿರುವು ಸಿಗಬಹುದು. ಹೀಗಾಗಿ 4ನೇ ದಿನದಲ್ಲಿ ಭಾರತದ ಆಟ ಯಾವ ರೀತಿ ಇರಲಿದೆ ಎನ್ನುವುದರ ಪಂದ್ಯ ಡ್ರಾ/ ಜಯದ ಬಗ್ಗೆ ಲೆಕ್ಕಾಚಾರ ಹಾಕಬಹುದು.

    ಭಾರತದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ತಲಾ ಎರಡು ವಿಕೆಟ್‌ ಪಡೆದರೆ ಬುಮ್ರಾ, ಸಿರಾಜ್‌, ಕಾಂಬೋಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್‌, ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್‌ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್‌ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್‌ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ.

    ಇಲ್ಲಿನ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕ್‌ (Pakistan) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 43.3 ಓವರ್‌ಗಳಲ್ಲಿ 244 ರನ್‌ಗಳಿಸಿ ಸರ್ವಪತನ ಕಂಡಿತು.

    2021ರ ವಿಶ್ವಕಪ್‌ ಟೂರ್ನಿ ಹಾಗೂ 2023ರ ಏಷ್ಯಾಕಪ್‌ ಟೂರ್ನಿಯಲ್ಲೂ ಪಾಕ್‌ ತಂಡ ನಾಕೌಟ್‌ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು. ಆದ್ರೆ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವುದು ಪಾಕ್‌ಗೆ ತೀವ್ರ ಮುಖಬಂಗವಾಗಿದೆ.

    ಸೆಮಿಸ್‌ ಕನಸು ಕಂಡಿದ್ದ ಪಾಕ್‌ ಆರಂಭದಲ್ಲೇ ಆಘಾತ ಅನುಭವಿಸಿತು. 10 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಬಾಬರ್‌ ಆಜಂ (Babar Azam) ಮತ್ತು ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಜೋಡಿ 68 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ ಔಟಾಗುತ್ತಿದ್ದಂತೆ ತಂಡದ ಪತನ ಆರಂಭವಾಯಿತು. ಕಳಪೆ ಬೌಲಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದ ಪಾಕ್‌ ಹೀನಾಯ ಸೋಲನುಭವಿಸಿತು.

    ಪಾಕ್‌ ಪರ ಅಬ್ದುಲ್ಲಾ ಶಫೀಕ್‌ ಶೂನ್ಯ ಸುತ್ತಿದ್ದರೆ, ಆಘಾ ಸಲ್ಮಾನ್ 51 ರನ್‌ (45 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಫಖರ್‌ ಝಮಾನ್‌ 1 ರನ್‌, ಬಾಬರ್‌ ಆಜಂ 38 ರನ್‌ (45 ಎಸೆತ, 6 ಬೌಂಡರಿ), ಮೊಹಮ್ಮದ್‌ ರಿಜ್ವಾನ್‌ 36 (51 ರನ್‌, 2 ಬೌಂಡರಿ), ಸೌದ್‌ ಶಕೀಲ್‌ 29 ರನ್‌, ಇಫ್ತಿಕಾರ್‌ ಅಹ್ಮದ್‌ 3 ರನ್‌, ಶಾದಾಬ್‌ ಖಾನ್‌ 3 ರನ್‌, ಶಾಹೀನ್‌ ಶಾ ಅಫ್ರಿದಿ 25 ರನ್‌ ಗಳಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಹ್ಯಾರಿಸ್‌ ರೌಫ್‌ 23 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದ್ರೆ, ಮೊಹಮ್ಮದ್‌ ವಸೀಮ್‌ 16 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಕೊನೆಯ ಪಂದ್ಯದಲ್ಲಿ ಸ್ಪೋಟಕ ಇನ್ನಿಂಗ್ಸ್‌ ಆರಂಭಿಸಿತ್ತು. ಮೊದಲ ವಿಕೆಟ್‌ಗೆ ಡೇವಿಡ್‌ ಮಲಾನ್‌ ಹಾಗೂ ಜಾನಿ ಬೈರ್ಸ್ಟೋವ್‌ ಜೋಡಿ 13.3 ಓವರ್‌ಗಳಲ್ಲಿ 82 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ 3ನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್‌ ಮತ್ತು ಜೋ ರೂಟ್‌ 131 ಎಸೆತಗಳಲ್ಲಿ 132 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದರು. ಇದರಿಂದ ತಂಡದ ಮೊತ್ತ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತು.

    ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ 31 ರನ್‌, ಜಾನಿ ಬೈರ್ಸ್ಟೋವ್ 59 ರನ್‌ (61 ಎಸೆತ, 81 ರನ್‌, 7 ಬೌಂಡರಿ, 1 ಸಿಕ್ಸರ್‌), ಜೋ ರೂಟ್‌ 60 ರನ್‌ (72 ಎಸೆತ, 4 ಬೌಂಡರಿ), ಬೆನ್‌ ಸ್ಟೋಕ್ಸ್‌ (Ben Stokes) 84 ರನ್‌ (76 ರನ್‌, 11 ಬೌಂಡರಿ, 2 ಸಿಕ್ಸರ್‌), ಜೋಸ್‌ ಬಟ್ಲರ್‌ (Jos Buttler) 27 ರನ್‌, ಹ್ಯಾರಿ ಬ್ರೂಕ್‌ 30 ರನ್‌ (17 ಎಸೆತ, 2 ಸಿಕ್ಸರ್‌, 2 ಬೌಂಡರಿ, ಮೊಯಿನ್‌ ಅಲಿ 8 ರನ್‌, ಡೇವಿಡ್‌ ವಿಲ್ಲಿ 15 ರನ್‌ ಬಾರಿಸಿದ್ರೆ, ಗಸ್ ಅಟ್ಕಿನ್ಸನ್ ಶೂನ್ಯ ಸುತ್ತಿದ್ದರು. ಕ್ರಿಸ್‌ವೋಕ್ಸ್‌ 4 ರನ್‌ ಮತ್ತು ಆದಿಕ್‌ ರಶೀದ್‌ ಯಾವುದೇ ರನ್‌ ಗಳಿಸಿದೇ ಅಜೇಯಾಗುಳಿದರು.

    ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 3 ವಿಕೆಟ್‌, ಶಾಹೀನ್‌ ಶಾ ಅಫ್ರಿದಿ ಮತ್ತು ಮೊಹಮ್ಮದ್‌ ವಸೀಮ್‌ ತಲಾ 2 ವಿಕೆಟ್‌, ಇಫ್ತಿಕಾರ್‌ ಅಹ್ಮದ್‌ 1 ವಿಕೆಟ್‌ ಪಡೆದರು.

  • ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ನವದೆಹಲಿ: ಭಾನುವಾರ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ ಭಾರತ (India) ತಂಡದ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಡಕೌಟ್‌ ಆಗಿದ್ದನ್ನು ಲೇವಡಿ ಮಾಡಲು ಹೋಗಿ ಇಂಗ್ಲೆಂಡ್‌ ಅಭಿಮಾನಿಗಳು ಪೇಚಿಗೆ ಸಿಲುಕಿದ್ದಾರೆ. ಇಂಗ್ಲೆಂಡ್‌ ಅಭಿಮಾನಿಗಳಿಗೆ ಎರಡು ಡಕ್‌ (ಬಾತುಕೋಳಿ)ಗಳನ್ನ ಗಿಫ್ಟ್‌ ನೀಡಿ ಭಾರತದ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?

    ಭಾನುವಾರ ಲಕ್ನೋದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಿತು. ಪಂದ್ಯದಲ್ಲಿ ಟಾಸ್‌ ಸೋತು ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ಭರವಸೆ ಆಟಗಾರನಾದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 9 ಬಾಲ್‌ಗಳನ್ನು ಆಡಿದ ಕೊಹ್ಲಿ ಒಂದು ರನ್‌ ಕೂಡ ಕಲೆಹಾಕಲಾಗದೇ ಶೂನ್ಯಕ್ಕೆ ಔಟ್‌ ಆಗಿ ನಿರ್ಗಮಿಸಿದರು. ಕೊಹ್ಲಿ ಡಕೌಟ್‌ ಅನ್ನು ಇಂಗ್ಲೆಂಡ್‌ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಇಂಗ್ಲೆಂಡ್ಸ್‌ ಬರ್ಮಿ ಆರ್ಮಿ ತನ್ನ ಎಕ್ಸ್‌ ಖಾತೆಯಲ್ಲಿ, ನೀರಿನಲ್ಲಿ ಈಜುತ್ತಿದ್ದ ಎರಡು ಬಾತುಕೋಳಿಗಳ ಪೈಕಿ ಒಂದರ ತಲೆಗೆ ವಿರಾಟ್‌ ಕೊಹ್ಲಿ ಚಿತ್ರವನ್ನು ಹಾಕಿದ್ದ ಎಡಿಟ್‌ ಫೋಟೊ ಹಾಕಿ ಪೋಸ್ಟ್‌ ಮಾಡಿತ್ತು. ಆ ಫೋಟೊಗೆ ‘ಬೆಳಗ್ಗೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಭಾರತದ ಫ್ಯಾನ್ಸ್‌, ಇಂಗ್ಲೆಂಡ್‌ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ್ದಾರೆ.

    ಅದೇ ಬಾತುಕೋಳಿಗಳ ಫೋಟೊಗೆ ಇಂಗ್ಲೆಂಡ್‌ ಆಟಗಾರರಾದ ಜೋ ರೂಟ್‌ (Joe Root) ಮತ್ತು ಬೆನ್‌ ಸ್ಟೋಕ್ಸ್‌ (Ben Stokes) ತಲೆ ಸೇರಿಸಿ ಇಂಗ್ಲೆಂಡ್‌ ಫ್ಯಾನ್ಸ್‌ಗೆ ದಿ ಭಾರತ್‌ ಆರ್ಮಿ ಕೌಂಟರ್‌ ಕೊಟ್ಟಿದೆ. ಜೋ ರೂಟ್‌ ಇರುವ ಫೋಟೊಗೆ ‘ಸಂಜೆ ವೇಳೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ಕೊಟ್ಟಿದೆ. ಅಲ್ಲದೇ ಬೆನ್‌ ಸ್ಟೋಕ್ಸ್‌ ಇರುವ ಫೋಟೊಗೆ ‘ಎಡಿಟ್‌ ಮಾಡಲು ನಮಗೆ ಸ್ವಲ್ಪ ಸಮಯ ಕೊಡಿ’ ಎಂದು ಶೀರ್ಷಿಕೆ ಕೊಟ್ಟು ಠಕ್ಕರ್‌ ಕೊಟ್ಟಿದೆ.

    ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ ಜೋ ರೂಟ್‌ ಮತ್ತು ಬೆನ್‌ ಸ್ಟೋಕ್ಸ್‌ ಕೂಡ ಶೂನ್ಯಕ್ಕೆ ಔಟ್‌ ಆಗಿ ನಿರ್ಗಮಿಸಿದ್ದರು. ಹೀಗಾಗಿ ಇಂಗ್ಲೆಂಡ್‌ನ ಒಂದು ಕೌಂಟರ್‌ಗೆ ಭಾರತದ ಫ್ಯಾನ್ಸ್‌ ಎರಡು ಠಕ್ಕರ್‌ ಕೊಟ್ಟಿದ್ದಾರೆ. ಇದನ್ನೂ ಓದಿ: World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತ 9 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಅವರು ತಂಡದ ಪರ 87 ರನ್‌ ಗಳಿಸಿದ್ದರು. 230 ರನ್‌ಗಳ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ 129 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    – 10 ರನ್‌ಗಳ ಅಂತರದಲ್ಲೇ 4 ವಿಕೆಟ್‌ ಉಡೀಸ್‌

    ಲಕ್ನೋ: ಮೊಹಮ್ಮದ್‌ ಶಮಿ (Mohammed Shami), ಜಸ್ಪ್ರೀತ್‌ ಬುಮ್ರಾ (Jasprit Bumrah) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಟೀಂ ಇಂಡಿಯಾ‌, ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ನಂತ್ರ ವಿಶ್ವಕಪ್‌ ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಹಾಕಿಕೊಂಡಿದೆ. ಜೊತೆಗೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್‌ (England) ಎದುರು ವಿರೋಚಿತ ಸೋಲನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ (India) ಗೆಲುವು ಸಿಕ್ಕಿರಲಿಲ್ಲ. ಇಂದು 100 ರನ್‌ಗಳ ಭರ್ಜರಿ ಜಯದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.

    ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಮೊದಲ ನಾಲ್ಕು ಓವರ್‌ಗಳಲ್ಲೇ 26 ರನ್‌ ಬಾರಿಸಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 5ನೇ ಓವರ್‌ನಲ್ಲಿ ಬುಮ್ರಾ ಮಾರಕ ದಾಳಿಯಿಂದ ಎರಡು ವಿಕೆಟ್‌ ಕಿತ್ತರು. ಈ ಬೆನ್ನಲ್ಲೇ ಶಮಿ ಕೂಡ ಮಾರಕದಾಳಿ ಮುಂದುವರಿಸಿದ್ದರಿಂದ ಇಂಗ್ಲೆಂಡ್‌ 10 ರನ್‌ಗಳ ಅಂತರದಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದು ತಂಡಕ್ಕೆ ಸೋಲಿನ ಮುನ್ಸೂಚನೆ ನೀಡಿತು. ಸತತ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್‌ 25 ಓವರ್‌ಗಳಲ್ಲಿ 6 ವಿಕೆಟ್‌ಗೆ ಕೇವಲ 84 ರನ್‌ ಗಳಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಇಂಗ್ಲೆಂಡ್‌ ಅಂತಿಮವಾಗಿ 129 ರನ್‌ಗಳಿಗೆ ಸರ್ವಪತನ ಕಂಡಿತು.

    ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 14 ರನ್‌, ಡೇವಿಡ್‌ ಮಲಾನ್‌ 16 ರನ್‌ ಗಳಿಸಿದ್ರೆ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೋಸ್‌ ಬಟ್ಲರ್‌ (Jos Buttler) 10 ರನ್‌, ಮೊಯಿನ್‌ ಅಲಿ 15 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 27 ರನ್‌, ಕ್ರಿಸ್‌ವೋಕ್ಸ್‌ 10 ರನ್‌ ಗಳಿಸಿದ್ರೆ, ಕೊನೆಯಲ್ಲಿ ಆದಿಲ್‌ ರಶೀದ್‌ 13 ರನ್‌ ಗಳಿಸಿದ್ರೆ, ಮಾರ್ಕ್‌ವುಡ್‌ ಶೂನ್ಯಕ್ಕೆ ಔಟಾದರು. ಡೇವಿಡ್‌ ವಿಲ್ಲಿ (David Willey) 13 ರನ್‌ ಗಳಿಸಿ ಅಜೇಯರಾಗುಳಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ (Team India), ಇಂಗ್ಲೆಂಡ್‌ ತಂಡಕ್ಕೆ 230 ರನ್‌ಗಳ ಗುರಿ ನೀಡಿತ್ತು. ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿದ್ದ ಭಾರತಕ್ಕೆ ಆರಂಭದಲ್ಲೇ ನಿರಾಸೆಯಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

    ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    ಲಕ್ನೋ: ಮಾರಕ ಬೌಲಿಂಗ್‌ ದಾಳಿ ನಡುವೆಯೂ ಸವಾಲಿನ ಮೊತ್ತ ಕಲೆಹಾಕಿರುವ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿ ಎದುರಾಳಿ ಇಂಗ್ಲೆಂಡ್‌ (England) ತಂಡಕ್ಕೆ 230 ರನ್‌ಗಳ ಗುರಿ ನೀಡಿದೆ.

    ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಫಾರ್ಮ್‌ ಹೊಂದಿರುವ ಟೀಂ ಇಂಡಿಯಾ ಸ್ಪಿನ್‌ ಪಿಚ್‌ನಲ್ಲಿ ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿತ್ತು. ಆದ್ರೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ (KL Rahul) 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

    ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ (David Willey) 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IPL 2023: ಧೋನಿಗೆ ಮೊಣಕಾಲು ಗಾಯ – ಆರಂಭಿಕ ಪಂದ್ಯ ಆಡುವುದು ಡೌಟ್‌

    IPL 2023: ಧೋನಿಗೆ ಮೊಣಕಾಲು ಗಾಯ – ಆರಂಭಿಕ ಪಂದ್ಯ ಆಡುವುದು ಡೌಟ್‌

    ಅಹಮದಾಬಾದ್‌: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಎಡಗಾಲಿನ ಮೊಣಕಾಲಿಗೆ ಗಾಯವಾಗಿದ್ದು, ಶುಕ್ರವಾರ ಗುಜರಾತ್ ಟೈಟಾನ್ಸ್ (GT) ವಿರುದ್ಧ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆಡುತ್ತಾರೆಯೇ ಎನ್ನುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.

    ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆಯಲಿರುವ 2023ರ ಐಪಿಎಲ್‌ನ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಧೋನಿ ಕಾಲಿಗೆ ಪೆಟ್ಟಾಗಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಈ ಬಾರಿ ಐಪಿಎಲ್‌ ಆವೃತ್ತಿ ಮಾಹಿ ವೃತ್ತಿ ಬದುಕಿನ ಕೊನೆಯ ಟೂರ್ನಿಯಾಗಿದ್ದು, ಸಿಎಸ್‌ಕೆ ಕಪ್‌ ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ. ಇದನ್ನೂ ಓದಿ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

    41 ವರ್ಷದ ಟೀಂ ಇಂಡಿಯಾ ಮಾಜಿ ನಾಯಕ ಚೆನ್ನೈನಲ್ಲಿ ತರಬೇತಿ ವೇಳೆ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಗುರುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದಲ್ಲೂ ಅವರು ಪಾಲ್ಗೊಂಡಿಲ್ಲ. ಒಂದು ವೇಳೆ ಮೊದಲ ಪಂದ್ಯಕ್ಕೆ ಧೋನಿ ಗೈರಾದರೆ, ಯಾರ ಹೆಗಲಿಗೆ ನಾಯಕತ್ವ ಬೀಳಲಿದೆ ಅನ್ನೋದು ಕುತೂಹಲವಾಗಿದೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ಈಗಾಗಲೇ ಇಂಗ್ಲೆಂಡ್‌ ತಂಡದಲ್ಲಿ ಯಶಸ್ವಿ ಆಟಗಾರನಾಗಿ ಗುರುತಿಸಿಕೊಂಡಿರುವ ಆಲ್‌ರೌಂಡರ್‌ ಬೆನ್‌ಸ್ಟೋಕ್ಸ್‌ (Ben Stokes), ಟೀಂ ಇಂಡಿಯಾ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಹಾಗೂ ಸಿಎಸ್‌ಕೆ ತಂಡದ ಆರಂಭಿಕ ಆಟಗಾರ ಋತುರಾಜ್‌ ಗಾಯಕ್ವಾಡ್‌ ನಡುವೆ ಪೈಪೋಟಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಇನ್ನೂ ಡಿವೊನ್ ಕಾನ್ವೇ ಅಥವಾ ಅಂಬಟಿ ರಾಯುಡು ಅವರಲ್ಲಿ ಒಬ್ಬರು ವಿಕೆಟ್ ಕೀಪರ್‌ ಆಗಬಹುದು ಎನ್ನಲಾಗಿದೆ. ಆದರೆ, ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌, ನನ್ನ ಪ್ರಕಾರ ಧೋನಿ ಆಡುವುದು ಶೇ 100 ರಷ್ಟು ಖಚಿತ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ತಿಳಿದಿಲ್ಲ’ ಎಂದಿದ್ದಾರೆ.

  • IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಬೆಂಗಳೂರು: ಮಾರ್ಚ್ 31 ರಿಂದ 16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭವಾಗುತ್ತಿದ್ದು, ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿವೆ.

    ಐಪಿಎಲ್ ಆರಂಭಕ್ಕೆ ದಿನಗಣನೆ ಬಾಕಿಯಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (BCB) ತಂಡಗಳು ಬಲಿಷ್ಠ ತಂಡದ ಪಟ್ಟಿಯನ್ನ ಬಿಡುಗಡೆ ಮಾಡಿವೆ. ಇದನ್ನೂ ಓದಿ: IPL 2023: ಈ ಬಾರಿ ಸಿಎಸ್‌ಕೆ ಕಪ್ ಗೆಲ್ಲಲ್ಲ, ಆರ್‌ಸಿಬಿ ಗೆದ್ದರೆ ಖುಷಿ – ಭಾರತದ ಮಾಜಿ ಕ್ರಿಕೆಟಿಗ ಭವಿಷ್ಯ

    ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯವರ (Virat Kohli) ಅದ್ಭುತ ಫಾರ್ಮ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ. ಇಲ್ಲಿಯವರೆಗೂ ಬೆಂಗಳೂರು ಮೂಲದ ತಂಡ ಐಪಿಎಲ್ ಟೂರ್ನಿಯಲ್ಲಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆದ್ದರಿಂದ ಈ ಬಾರಿ ತನ್ನ ಪ್ರಶಸ್ತಿ ಗೆಲುವಿನ ಬರ ನೀಗಿಸಿಕೊಳ್ಳಲಿದೆಯೇ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    2022ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಆರ್‌ಸಿಬಿ ಪ್ಲೇ ಆಫ್‌ಗೆ ಪ್ರವೇಶಿತ್ತು. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ವಿರುದ್ಧ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಸೋತು ನಿರಾಶೆ ಅನುಭವಿಸಿತ್ತು.

    ಕಳೆದ ಬಾರಿ ಪ್ಲೆ ಆಫ್‌ನಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಲವು ಆಟಗಾರರ ಬದಲಾವಣೆಯೊಂದಿಗೆ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. 16.25 ಕೋಟಿ ರೂ. ದುಬಾರಿ ಬೆಲೆಗೆ ಬಿಕರಿಯಾದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಸಹ ಸಿಎಸ್‌ಕೆ ತಂಡಲ್ಲಿದ್ದು, ಆನೆಬಲ ಬಂದಂತಾಗಿದೆ.

    ಅಲ್ಲದೇ ಈಗಾಗಲೇ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ಗಳಲ್ಲಿ ನಿವೃತ್ತಿಯಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) ಈ ಬಾರಿ ಕೊನೆಯ ಐಪಿಎಲ್ ಆಡಲಿದ್ದಾರೆ. ಆದ್ದರಿಂದ ಚೆನ್ನೈ ತಂಡ ಮಾಹಿಗೆ ಗೆಲುವಿನ ವಿದಾಯ ನೀಡಲು ಕಪ್ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿದೆ.

    ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ -11:
    ಫಾಫ್ ಡು ಪ್ಲೆಸಿಸ್ (ನಾಯಕ, ಓಪನರ್) ವಿರಾಟ್ ಕೊಹ್ಲಿ (ಓಪನರ್), ರಜತ್ ಪಾಟಿದಾರ್ (ಬ್ಯಾಟ್ಸ್ಮನ್), ಗ್ಲೆನ್ ಮ್ಯಾಕ್ಸ್ವೆಲ್ (ಆಲ್‌ರೌಂಡರ್), ಮಹಿಪಾಲ್ ಲೊಮ್ರೋರ್ (ಬ್ಯಾಟ್ಸ್ಮನ್), ದಿನೇಶ್ ಕಾರ್ತಿಕ್ (ವಿ.ಕೀ), ಶಹಬಾಝ್ ಅಹ್ಮದ್ (ಆಲ್‌ರೌಂಡರ್), ವಾನಿಂದು ಹಸರಂಗ (ಆಲ್‌ರೌಂಡರ್), ಹರ್ಷಲ್ ಪಟೇಲ್ (ವೇಗದ ಬೌಲರ್), ಜೋಶ್ ಹೇಝಲ್‌ವುಡ್ (ವೇಗದ ಬೌಲರ್), ಮೊಹಮ್ಮದ್ ಸಿರಾಜ್ (ವೇಗದ ಬೌಲರ್).

    ಟೂರ್ನಿಗೆ ಆರ್‌ಸಿಬಿ ತಂಡ:
    ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್(ವಿ.ಕೀ), ಅನುಜ್ ರಾವತ್, ಫಿನ್ ಆಲೆನ್, ಗ್ಲೆನ್ ಮ್ಯಾಕ್ಸ್ವೆಲ್, ವಾನಿಂದು ಹಸರಂಗ, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲೀ, ಕರಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜಾಶ್ ಹೇಝಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ಮೈಕಲ್ ಬ್ರೇಸ್‌ವೆಲ್, ಮನೋಜ್ ಭಾಂಡಗಿ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

    ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಪ್ಲೇಯಿಂಗ್-11:
    ಎಂ.ಎಸ್.ಧೋನಿ (ನಾಯಕ), ಡಿವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಮ್ ದುಬೆ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮಹೇಶ್ ತೀಕ್ಷಣ ಹಾಗೂ ಮುಖೇಶ್ ಛೌಧರಿ.

    ಟೂರ್ನಿಗೆ ಸಿಎಸ್‌ಕೆ ತಂಡ:
    ಎಂ.ಎಸ್ ಧೋನಿ (ನಾಯಕ), ಡಿವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಮುಖರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, ತುಷಾರ್ ದೇಶ್‌ಗಾವ್, , ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಶೇಕ್ ರಶೀದ್, ನಿಶಾಂತ್ ಸಿಧು, ಅಜಯ್ ಮಂಡಲ್, ಸಿಸಂದ ಮಗಳ.

  • ಏಕದಿನ ಕ್ರಿಕೆಟ್‌ಗೆ ಬೆನ್‌ ಸ್ಟೋಕ್ಸ್‌ ನಿವೃತ್ತಿ ಘೋಷಣೆ

    ಲಂಡನ್: ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದ್ದು, ಇದು ನನ್ನ ಕೊನೆಯ ಪಂದ್ಯ ಎಂದು ತಿಳಿಸಿದ್ದಾರೆ.

    ಸ್ಟೋಕ್ಸ್ 104 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ತವರು ಮೈದಾನವಾದ ಸೀಟ್ ಯೂನಿಕ್ ರಿವರ್‌ಸೈಡ್‌ನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಕೊನೆಗೊಳಿಸಲು ಸ್ಟೋಕ್ಸ್‌ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಪಂತ್, ಪಾಂಡ್ಯ ಪರಾಕ್ರಮ ಭಾರತಕ್ಕೆ ಏಕದಿನ ಸರಣಿ – ಇಂಗ್ಲೆಂಡ್‍ಗೆ ತವರಿನಲ್ಲಿ ಮುಖಭಂಗ

    ಡರ್ಹಾಮ್‌ನಲ್ಲಿ ಮಂಗಳವಾರ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ. ಆ ಮೂಲಕ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ. ನಾನು ಇಂಗ್ಲೆಂಡ್‌ಗಾಗಿ ನನ್ನ ಸಹ ಆಟಗಾರರೊಂದಿಗೆ ಆಡಿದ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ ಎಂದು ಟ್ವೀಟ್‌ ಮಾಡಿ ಸ್ಟೋಕ್ಸ್‌ ತಿಳಿಸಿದ್ದಾರೆ.

    ನಾನು ಇಲ್ಲಿಯವರೆಗೆ ಆಡಿದ ಎಲ್ಲಾ 104 ಪಂದ್ಯಗಳನ್ನು ಆನಂದಿಸಿದ್ದೇನೆ. ನನಗೆ ಇನ್ನೊಂದು ಪಂದ್ಯ ಸಿಕ್ಕಿದೆ. ಡೆರ್ಹಾಮ್‌ನಲ್ಲಿರುವ ನನ್ನ ತವರು ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡುತ್ತಿರುವುದು ಸ್ಮರಣೀಯವಾಗಿದೆ. ಎಂದಿನಂತೆ ಇಂಗ್ಲೆಂಡ್ ಅಭಿಮಾನಿಗಳು ಸದಾ ನನ್ನೊಂದಿಗೆ ಇದ್ದಾರೆ, ಮುಂದೆಯೂ ಇರುತ್ತಾರೆ. ಮಂಗಳವಾರ ಪಂದ್ಯವನ್ನು ಗೆಲ್ಲುತ್ತೇವೆಂಬ ಭರವಸೆ ಎಂದು ಹೇಳಿದ್ದಾರೆ.

    2011ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಟೋಕ್ಸ್ ಮೂರು ಶತಕ ಸೇರಿದಂತೆ 2,919 ರನ್ ಗಳಿಸಿ 74 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

    ಕಳೆದ ಬೇಸಿಗೆಯಲ್ಲಿ ಪಾಕಿಸ್ತಾನದ ವಿರುದ್ಧ 3-0 ಅಂತರದ ವಿಜಯದ ಸಂದರ್ಭದಲ್ಲಿ ಅವರು ಏಕದಿನ ಕ್ರೆಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಸ್ಪೂರ್ತಿದಾಯಕ ನಾಯಕರಾಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ತೊರೆದ ಜೋ ರೂಟ್ ಬಳಿಕ ಇದೀಗ ನೂತನ ನಾಯಕನ್ನಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಆಯ್ಕೆ ಮಾಡಿದೆ.

    ಜೋ ರೂಟ್ ಬಳಿಕ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡುತ್ತಿತ್ತು. ಇದೀಗ ಅಧಿಕೃತವಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಾಯಕನ್ನಾಗಿ ಸ್ಟೋಕ್ಸ್ ನೇಮಕವಾಗಿದೆ ಎಂಬುದನ್ನು ಖಚಿತ ಪಡಿಸಿದೆ.

    ಈ ಮೂಲಕ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ 81ನೇ ನಾಯಕನಾಗಿ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಜೋ ರೂಟ್‍ರಂತೆ ಎಲ್ಲಾ ಮಾದರಿ ಕ್ರಿಕೆಟ್‍ನಲ್ಲೂ ಇಂಗ್ಲೆಂಡ್ ತಂಡಕ್ಕೆ ನೆರವಾಗುವ ಮ್ಯಾಚ್ ವಿನ್ನರ್ ಆಗಿರುವ ಸ್ಟೋಕ್ಸ್‌ಗೆ ಟೆಸ್ಟ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಜೋ ರೂಟ್ ಬಳಿಕ ಸ್ಟೋಕ್ಸ್ ನಾಯಕತ್ವಕ್ಕೆ ಸಮರ್ಥ ಆಟಗಾರ ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು.

    ಸ್ಟೋಕ್ಸ್ ಇಂಗ್ಲೆಂಡ್ ತಂಡದ ಪರ ಈಗಾಗಲೇ 79 ಟೆಸ್ಟ್ ಪಂದ್ಯಗಳಿಂದ 26 ಅರ್ಧಶತಕ, 11 ಶತಕ, 1 ದ್ವಿಶತಕ ಸಹಿತ 5,061 ರನ್ ಮತ್ತು 174 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದೀಗ ನಾಯಕನ ಜವಾಬ್ದಾರಿ ಮೂಲಕ ಸ್ಟೋಕ್ಸ್ ತಂಡವನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯವ ಸವಾಲು ಹೊಂದಿದ್ದಾರೆ.