Tag: ಬೆದರಿಕೆ ಕರೆ

  • ಸುಮಲತಾ ಬೆಂಬಲಿಗರಿಗೆ ಬೆದರಿಕೆ ಕರೆ- ಬಿಜೆಪಿಯಿಂದ ಬೆಂಬಲ ಪಡೆಯಲು ಮುಂದಾದ ಮಂಡ್ಯ ಗೌಡ್ತಿ

    ಸುಮಲತಾ ಬೆಂಬಲಿಗರಿಗೆ ಬೆದರಿಕೆ ಕರೆ- ಬಿಜೆಪಿಯಿಂದ ಬೆಂಬಲ ಪಡೆಯಲು ಮುಂದಾದ ಮಂಡ್ಯ ಗೌಡ್ತಿ

    ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿರುವ ಹಿನ್ನೆಲೆ ಅವರ ಬೆಂಬಲಿಗರಿಗೆ ನಿತ್ಯವೂ ಬೆದರಿಕೆ ಕರೆ ಬರುತ್ತಿದೆ. ಅಲ್ಲದೇ ತಮ್ಮ ಒಂಟಿ ಹೋರಾಟಕ್ಕೆ ಬೆಂಬಲಬೇಕು ಅಂತ ಬಿಜೆಪಿ ನಾಯಕರ ಬೆಂಬಲ ಕೇಳಲು ಸುಮಲತಾ ಮುಂದಾಗಿದ್ದಾರೆ.

    ಇಂದು ನಗರದ ಭಾರತಿನಗರ ವ್ಯಾಪ್ತಿಯಲ್ಲಿ ಮತಯಾಚಿಸುವಾಗ ಸುಮಲತಾ ಈ ಹೇಳಿಕೆಯನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಟ್ರೈಟ್ ಫಾರ್ವಡ್ ಫೈಟ್ ಆದ್ರೆ ಯಾವ ಭಯವಿಲ್ಲ. ಅದನ್ನ ನಾನು ಗೆಲ್ಲಬಹುದು ಅನ್ನೋ ನಂಬಿಕೆಯಿದೆ. ಆದ್ರೆ ಹಿಂದಿನಿಂದ ಚುಚ್ಚುವ ಪ್ರಯತ್ನ ಆಗುತ್ತಿದೆ. ಯುದ್ಧದಲ್ಲೂ ಒಂದು ಧರ್ಮವಿದೆ. ಧರ್ಮ ಪಾಲನೆ ಬಿಟ್ಟು ಬೆನ್ನಿಗೆ ಚೂರಿ ಹಾಕ್ತಿದ್ದಾರೆ ಅನಿಸುತ್ತಿದೆ. ನನಗಿರುವ ಜನ ಬೆಂಬಲ ನೋಡಿ, ಕೆಬಲ್, ಕರೆಂಟ್ ಕಡಿತ ಮಾಡ್ತಾರೆ. ಇದು ಸರಿನಾ? ನೀವು ಜನರನ್ನ ಸೇರಿಸಿ, ನೀವು ಪ್ರಚಾರ ಮಾಡಿ. ಅದನ್ನ ತಡೆಯೋಲ್ಲ. ನಾವು ಖುಷಿಪಡುತ್ತೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    ಅಷ್ಟೇ ಅಲ್ಲದೆ, ನನ್ನ ಒಂಟಿ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕು. ಈ ಬಗ್ಗೆ ಬಿಜೆಪಿ ನಾಯಕರ ಬೆಂಬಲ ಕೇಳುತ್ತೇನೆ. ಬಿಜೆಪಿ ಬೆಂಬಲ ಕೊಟ್ಟರೆ ಮತ್ತಷ್ಟು ಧೈರ್ಯ ಸಿಗುತ್ತೆ. ಹೀಗಾಗಿ ನಾನು ಬಿಜೆಪಿ ನಾಯಕರನ್ನ ಭೇಟಿ ಮಾಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.

    ದಿನ ಕಳೆದಂತೆ ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದರೆ, ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಕಣಕಿಳಿದಿದ್ದಾರೆ. ಇಬ್ಬರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಸುಮಲತಾ ಪರ ನಿಂತ ಕೆಲವು ಕಾಂಗ್ರೆಸ್ ನಾಯಕರನ್ನು ಪಕ್ಷ ಉಚ್ಚಾಟನೆ ಮಾಡಿದೆ.

  • ಮುಸ್ಲಿಮರ ಬಗ್ಗೆ ಮಾತಾಡಿದ್ರೆ ಎತ್ತಿಬಿಡ್ತೀವಿ- ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಬೆದರಿಕೆ

    ಮುಸ್ಲಿಮರ ಬಗ್ಗೆ ಮಾತಾಡಿದ್ರೆ ಎತ್ತಿಬಿಡ್ತೀವಿ- ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಬೆದರಿಕೆ

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆಯವರಿಗೆ ಇಂದು ಜೀವ ಬೆದರಿಕೆ ಕರೆಯೊಂದು ಬಂದಿದೆ.

    ಇಂದು ಮುಂಜಾನೆ 1:45ಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಮನೆಯ ಸ್ಥಿರ ದೂರವಾಣಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅನಂತ್ ಕುಮಾರ್ ಹೆಗ್ಡೆ ಪತ್ನಿ ರೂಪ ಹೆಗ್ಡೆ ಅವರು ಕರೆ ಸ್ವೀಕರಿಸಿದ್ದಾರೆ.

    ಈ ವೇಳೆ ಮಾತನಾಡಿದ ಅನಾಮಿಕ, ಮುಸಲ್ಮಾನರ ಬಗ್ಗೆ ಮಾತನಾಡಿದರೆ ಚೆನ್ನಾಗಿರುವುದಿಲ್ಲ, ನಿಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತೇವೆ. ಅನಂತ್ ಕುಮಾರ್ ಹಾಗೂ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ. ನಮಗೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿದ್ದಾನೆ.

    ಅಲ್ಲದೆ ಅಯೋಧ್ಯೆ ವಿಷಯ ನಿಮಗೆ ಬೇಕಾ? ಅಯೋಧ್ಯೆಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿ ಎಂದು ಬೆದರಿಕೆ ಹಾಕಲಾಗಿದೆ. ಘಟನೆ ಸಂಬಂಧ ಹೆಗ್ಡೆಯವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಇಂದು ಶಿರಸಿಯ ಹೊಸಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿತ್ರರಂಗದ ಮೀಟೂ ಸತ್ಯ ಬಯಲು ಮಾಡಿದ್ದೇ ತಪ್ಪಾಯ್ತು!

    ಚಿತ್ರರಂಗದ ಮೀಟೂ ಸತ್ಯ ಬಯಲು ಮಾಡಿದ್ದೇ ತಪ್ಪಾಯ್ತು!

    ಬೆಂಗಳೂರು: ಮೀಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಈಗ ಬೆದರಿಕೆ ಕರೆಗಳು ಬರಲು ಆರಂಭವಾಗಿದೆ.

    ಮೀಟೂ ಬೆಳವಣಿಗೆಯಲ್ಲಿ ಹರ್ಷಿಕಾ ಪೂಣಚ್ಚ ಅವರು ಮೀಟೂ ಆರೋಪ ಮಾಡಿದವರಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಆದ್ದರಿಂದ ಅವರಿಗೆ ವಾಟ್ಸಪ್ ಮೂಲಕ ಕಳೆದ 2 ದಿನಗಳಿಂದ ನಿರಂತರ ಬೆದರಿಕೆ ಕರೆಗಳನ್ನು ಮಾಡುತ್ತಿದ್ದು, ಜೊತೆಗೆ ಮೆಸೇಜ್ ಕೂಡ ಮಾಡುತ್ತಿದ್ದಾರೆ. ಇದನ್ನೂ ಓದಿ:ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಬಾಯಿ ಮುಚ್ಚಿಕೊಂಡು ಇರಿ ಎಂದು ವಾಟ್ಸಪ್ ಗೆ ಮೆಸೇಜ್ ಕಳುಹಿಸಿದ್ದಾರೆ. 555ನಿಂದ ಕೊನೆಗೊಳ್ಳುವ ಮೊಬೈಲ್ ನಂಬರ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿದ್ದಾರೆ. ಆದರೆ ಹರ್ಷಿಕಾ ಪೂಣಚ್ಚಗೆ ಬೆದರಿಕೆ ಹಾಕುತ್ತಿರುವ ಆ ಖ್ಯಾತನಾಮರು ಯಾರು ಎನ್ನುವ ಪ್ರಶ್ನೆ ಮೂಡಿದೆ.

    ಹರ್ಷಿಕಾ ಪೂಣಚ್ಚ ಅವರು, ಕಳೆದ ಎರಡು ದಿನಗಳಿಂದ ಕೆಲವು ಹೆಸರಾಂತ ವ್ಯಕ್ತಿಗಳಿಂದ ನನಗೆ ಬೆದರಿಕೆ ಕರೆ ಹಾಗೂ ಮೆಸೆಜ್‍ಗಳು ಬರುತ್ತಿವೆ. ಕೆಲವರು ನನ್ನ ಬಾಯಿ ಮುಚ್ಚಿಸಲು ಹಣದ ಆಮಿಷವನ್ನು ಒಡ್ಡಿದರು. ಹೀಗೆ ಮುಂದುವರಿದಲ್ಲಿ ನಾನು ಪೊಲೀಸ್ ಕಂಪ್ಲೇಂಟ್ ಕೊಡಲು ಸಿದ್ಧಳಾಗಬೇಕಾಗುತ್ತದೆ. ಸತ್ಯವನ್ನು ಮುಚ್ಚುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಕೆಚ್ಚೆದೆಯ ಕನ್ನಡತಿಯಾದ ನಾನು ಸದಾ ಸತ್ಯದ ಪರ” ಎಂದು ಮೆಸೇಜ್ ಮಾಡಿದ್ದಾರೆ.

    https://twitter.com/actressharshika/status/1055764584018014208

    ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಹರ್ಷಿಕಾ ಪೂಣಚ್ಚ, ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದರು.

    ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iCz49tD85ZI

  • ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತುಮಕೂರು: ಕೆಲವು ದಿನಗಳ ಹಿಂದೆ ಸಚಿವ ತನ್ವೀರ್ ಸೇಠ್‍ಗೆ 10 ಕೋಟಿ ರೂ. ನೀಡುವಂತೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದ. ಇದೀಗ ತುಮಕೂರಿನ ಚಿಕ್ಕನಾಯಕಹಳ್ಳಿ ಶಾಸಕ ಸುರೇಶ್ ಬಾಬುಗೆ ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

    ಕೂಡಲೇ 10 ಕೋಟಿ ರೂ. ಕೊಡಬೇಕು. ಇಲ್ಲದಿದ್ರೆ ನಿನ್ನ ಪ್ರಾಣಕ್ಕೆ ಅಪಾಯ ಅಂತಾ ಜೀವ ಬೆದರಿಕೆ ಹಾಕಿದ್ದಾನೆ. ಸುರೇಶ್ ಬಾಬು ಜೊತೆ ಹಿಂದಿಯಲ್ಲಿ ಮಾತನಾಡಿರುವ ರವಿಪೂಜಾರಿ, ಕರೆ ಬಳಿಕ ಮೆಸೇಜ್ ಕೂಡ ಮಾಡಿ ಬೆದರಿಕೆ ಹಾಕಿದ್ದಾನೆ. ಶಾಸಕರು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿತ್ತು. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಚಿವ ಸೇಠ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದರು. ಇದನ್ನೂ ಓದಿ: ತೀರ್ಥಹಳ್ಳಿಯ ಚಿನ್ನ-ಬೆಳ್ಳಿ ವರ್ತಕನಿಗೆ ರವಿ ಪೂಜಾರಿ ಬೆದರಿಕೆ- ಅಬ್ಬಾ ಇಷ್ಟು ಹಣಕ್ಕೆ ಬೇಡಿಕೆ!

    https://www.youtube.com/watch?v=CVoLaIKwhk0

  • ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಮಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಹಾಕಿದ್ದು ನಾನೇ ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಸದ್ಯ ರವಿ ಪೂಜಾರಿ ತಾನೇ ಸಚಿವರಿಗೆ ಬೆದರಿಕೆ ಹಾಕಿದ್ದು ಅಂತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾನೆ.

    ಆಡಿಯೋದಲ್ಲಿ ಏನಿದೆ?: ತನ್ವೀರ್ ಸೇಠ್ ಹೆಸರಿಗಸ್ಟೇ ಶಿಕ್ಷಣ ಸಚಿವ. ಅವರಿಂದ ಬಡವರಿಗೆ ತೊಂದರೆಗಳಾಗುತ್ತಿದೆ. ಅವರು ಶ್ರೀಮಂತರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಡವರ ಪರವಾದ ಯಾವ ಕೆಲಸಗಳನ್ನೂ ಮಾಡ್ತಿಲ್ಲ. ಈ ಬಗ್ಗೆ ಬಡವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಶ್ರೀಮಂತರಿಂದ ಸಂಗ್ರಹಿಸಿದ ಹಣ ಸಚಿವರ ಹತ್ರ ಬೇಕಾದಷ್ಟು ಇದೆ. ಅದರಲ್ಲಿ ಹತ್ತು ಕೋಟಿ ನನಗೆ ಕೊಡಲೇಬೇಕು ಅಂತಾ ಹೇಳಿದ್ದೇನೆ.

    ತನ್ವೀರ್ ಸೇಠ್ ನೀಡಿದ ಪೊಲೀಸ್ ಕೇಸ್‍ಗೆ ತಲೆಕೆಡಿಸಿಕೊಳ್ಳಲ್ಲ. ದೂರು ಕೊಟ್ರೆ ಕೊಡಲಿ, ನಾನೇನು ತಲೆಕೆಡಿಸಿಕೊಳ್ಳಲ್ಲ ಅಂತಾ ರವಿ ಪೂಜಾರಿ ಹೇಳಿದ್ದಾನೆ.

    ಬೆದರಿಕೆ ಕರೆ ಬಂದ ಬಳಿಕ ತನ್ವೀರ್ ಸೇಠ್ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ.

    https://youtu.be/CVoLaIKwhk0

  • 10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಭೂಗತ ಪಾತಕಿಯಿಂದ ಬೆದರಿಕೆ ಸಂದೇಶ ಬಂದಿದೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿದೆ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿದೆ.

     

    ಈ ಬಗ್ಗೆ ಸಚಿವ ಸೇಠ್ ಕೊಟ್ಟಿರುವ ದೂರು ಇದೀಗ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆ ಆಗಿದೆ. ಇಂಟರ್‍ನ್ಯಾಷನಲ್ ನಂಬರ್‍ನಿಂದ ಬೆದರಿಕೆ ಬಂದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ನನಗೂ ಬೆದರಿಕೆ ಕರೆಗಳು ಬರುತ್ತಿವೆ, ನಾನು ಹೆದರಲ್ಲ: ಕುಂ.ವೀರಭದ್ರಪ್ಪ

    ನನಗೂ ಬೆದರಿಕೆ ಕರೆಗಳು ಬರುತ್ತಿವೆ, ನಾನು ಹೆದರಲ್ಲ: ಕುಂ.ವೀರಭದ್ರಪ್ಪ

    ರಾಯಚೂರು: ನನಗೂ ಬೆದರಿಕೆ ಕರೆಗಳು ಬರುತ್ತಿದ್ದು ಅದಕ್ಕೆ ನಾನು ಹೆದರುವುದಿಲ್ಲ. ಹೆದರಿ ನಾನು ಯಾರನ್ನೂ ರಕ್ಷಣೆ ಕೇಳಿಲ್ಲ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಾನು ಎಂದೂ ನಡೆದುಕೊಳ್ಳುವುದಿಲ್ಲ. ಎಡಪಂಥಿಯ ವಿಚಾರಧಾರೆಯೇ ಗೌರಿ ಲಂಕೇಶ್ ಹತ್ಯೆಗೆ ಕಾರಣ. ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲಗೊಳಿಸುವ ಮುನ್ಸೂಚನೆಯಿದು ಎಂದು ಹೇಳಿದರು.

    ರಾಜಕಾರಣಿಗಳು, ಸಾಕ್ಷಿ ಮಹಾರಾಜ್ ರಂತ ಸಂತರು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಹಿಂಸಾತ್ಮಕ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಇಂಥ ಕೊಲೆಗಳಿಗೆ ಪ್ರಚೋದಕ ಹೇಳಿಕೆಗಳೆ ಕಾರಣವಾಗುತ್ತಿವೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬೇಗ ಮುಗಿಯಲಿ. ಒಂದು ಹತ್ಯೆ ಇನ್ನೊಂದು ಹತ್ಯೆಗೆ ದಾರಿ ಮಾಡಿಕೊಡಬಾರದು ಎಂದು ಅವರು ಅಭಿಪ್ರಾಯಪಟ್ಟರು.

    ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಚುನಾವಣೆ ಬಳಿಕವೂ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ. ಶೋಷಿತ ಒಕ್ಕೂಟಗಳ ಸಮುದಾಯವೇ ಲಿಂಗಾಯತ ಸಮಾಜ. ವೀರಶೈವ ಹಾಗೂ ಲಿಂಗಾಯತ ಬೇರೆ ಬೇರೆ. ವೀರಶೈವದಲ್ಲಿ ಪಾದ ಪೂಜೆ, ಸತ್ತವರ ತಲೆ ಮೇಲೆ ಕಾಲಿಡುವ ಪದ್ದತಿಗಳಿವೆ. ಇದು ಸ್ಥಾವರದ ಸಂಕೇತ. ವೀರಶೈವ ಸ್ಥಗಿತವಾದ ಧರ್ಮ ಹೀಗಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕು ಎಂದು ಅವರು ಆಗ್ರಹಿಸಿದರು.

    https://youtu.be/9HkIMBshyw8

    https://www.youtube.com/watch?v=xUHQ0QzTWJo

    https://www.youtube.com/watch?v=5W9fExnZhM4

    https://www.youtube.com/watch?v=9i4m_pe6Ir4

    https://www.youtube.com/watch?v=JatNCXlFzmo

    https://www.youtube.com/watch?v=E-2vEpV_WFE

     

  • ಸಂಸದ ಡಿಕೆ ಸುರೇಶ್‍ಗೆ ಅಂಡರ್ ವರ್ಲ್ಡ್ ನಿಂದ ಬೆದರಿಕೆ-ಯಾರವನು ಡಾನ್?

    ಸಂಸದ ಡಿಕೆ ಸುರೇಶ್‍ಗೆ ಅಂಡರ್ ವರ್ಲ್ಡ್ ನಿಂದ ಬೆದರಿಕೆ-ಯಾರವನು ಡಾನ್?

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸಂಸದ ಡಿಕೆ ಸುರೇಶ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

    ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಒಂದು ವಾರದ ಬಳಿಕ ಅಂದ್ರೆ ಆಗಸ್ಟ್ 5ರಂದು ಈ ಬೆದರಿಕೆ ಕರೆ ಬಂದಿದೆ.

    ಲ್ಯಾಂಡ್ ಲೈನ್ ಗೆ ಕರೆ ಮಾಡಿದ ವ್ಯಕ್ತಿ ಇಂಗ್ಲೀಷ್ ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದು, ಡಿಕೆ ಸುರೇಶ್ ಜೊತೆ ಮಾತನಾಡ್ಬೇಕು ಅಂತ ಹೇಳಿದ್ದ. ಫೋನ್ ರಿಸೀವ್ ಮಾಡಿದ್ದ ವ್ಯಕ್ತಿ ಡಿ.ಕೆ ಸುರೇಶ್ ಡ್ರೈವರ್ ದೇವ್ ಮೊಬೈಲ್ ನಂಬರ್ ಕೊಟ್ಟಿದ್ರು. ಬಳಿಕ ದೇವ್ ಮೊಬೈಲ್ ನಂಬರ್‍ಗೆ ಫೋನ್ ಮಾಡಿದ ರವಿ ಪೂಜಾರಿ, ಸುರೇಶ್ ಜೊತೆ ಮಾತನಾಡ್ಬೇಕು ಅಂತ ಹೇಳಿದ್ದ.

    ಡಿಕೆ ಸುರೇಶ್ ಮಾತ್ರ ಫೋನ್ ತೆಗೆದುಕೊಂಡು ಭೂಗತ ಪಾತಕಿ ಜೊತೆ ಮಾತನಾಡಿರಲಿಲ್ಲ. ನಿಮ್ಮ ಬಾಸ್ ಬಳಿ ಬೇಕಾದಷ್ಟು ಬೇನಾಮಿ ಆಸ್ತಿ ಇದೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ಐಟಿ ದಾಳಿ ಮುಗಿದ ಮೇಲೆ ನನಗೆ ಹಣ ಕೊಡೋದಿಕ್ಕೆ ಹೇಳು. ಇಲ್ಲ ಅಂದ್ರೆ ಪರಿಣಾಮ ನೆಟ್ಟಗೆ ಇರಲ್ಲ ಎಂದಿದ್ದಾನೆ.

    ರವಿ ಪೂಜಾರಿ ಫೋನ್ ಮಾಡ್ತಿದ್ದಂತೆ ಡಿಕೆಶಿ ಮನೆಯಿಂದ ಹೊರಹೋಗಿದ್ದ ಸುರೇಶ್, ಮನೆಗೆ ಮತ್ತೆ ಓಡಿ ಬಂದು ದೇವ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ರವಿ ಪೂಜಾರಿ ಹೆಸರಿನಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಅಂತ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನಲ್ಲಿ 14 ಡಿಜಿಟ್ ನಂಬರ್ ನಿಂದ ಕರೆ ಬಂದಿತ್ತು. ಮತ್ತೆ unknown ಹೆಸರಲ್ಲಿ ಕರೆಬಂದಿತ್ತು ಎಂದು ಉಲ್ಲೇಖಿಸಲಾಗಿದೆ.