ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಮೂಲ ಪತ್ತೆ ಹಚ್ಚಿದ್ದು, ಬಂಧಿಸಲು ಮುಂದಾಗಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ವ್ಯಕ್ತಿಯೋರ್ವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ದೂರು ನೀಡಲು ಹಿಂದೇಟು ಹಾಕಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡ ಮನೋಹರ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
– RSS ಸೋ ಕಾಲ್ಡ್ ಒಂದು ಸಂಸ್ಥೆ ಅಷ್ಟೇ – ಐ ಲವ್ RSS ಅನ್ನೋವ್ರು ದೇಶದ್ರೋಹಿಗಳು
ಬೆಂಗಳೂರು: ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದಾಗ ಕರೆಗಳು ಬಂದಿವೆ. ಗಾಂಧೀಜಿ, ಅಂಬೇಡ್ಕರ್‌ಗೆ ಬಿಟ್ಟಿಲ್ಲ, ಇನ್ನು ಇವರು ನಮ್ಮನ್ನು ಬಿಡುತ್ತಾರಾ? ಯಾವುದೇ ಕರೆ ಬಂದರೂ ಹೆದರುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.
ಬೆದರಿಕೆ ಕರೆ (Threat Call) ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿ, ಇಂಗ್ಲೀಷ್‌ನಲ್ಲಿ ಮಾತಾನಾಡುತ್ತಾರೆ. ನೋ ಕಾಲರ್ ಐಡಿ, ಅಂತರಾಷ್ಟ್ರೀಯ ನಂಬರ್ ಇದೆ. ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರಿಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಮಾತಾನಾಡುತ್ತಾರೆ. ಇದು ಸಹಜ, ವಿರೋಧ ಪಕ್ಷದಲ್ಲಿ ಇದ್ದಾಗಲೂ ಎರಡ್ಮೂರು ಬಾರಿ ದೂರು ಕೊಟ್ಟಿದ್ದೆ. ಬೊಮ್ಮಾಯಿ ಇದ್ರು, ತನಿಖೆ ಮಾಡಿಸಿದರು. ಆಗ ಇದು ಹೊರ ದೇಶದಿಂದ ಬರುತ್ತಿವೆ ಅಂದರು. ಈಗಲೂ ಅದೇ ನಡೆದಿದೆ ಎಂದರು. ಇದನ್ನೂ ಓದಿ: ನಂಜೇಗೌಡಗೆ ತಾತ್ಕಾಲಿಕ ರಿಲೀಫ್ – ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ತಡೆ
ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆದರಿಕೆ ಕರೆ ಬಂದಿತ್ತು, ಈಗಲೂ ದೂರು ಇದೆ. ಎಫ್‌ಐಆರ್ ರಿಜಿಸ್ಟರ್ ಮಾಡಬಹುದು, ಆದರೆ ಕಂಡು ಹಿಡಿಯೋದು ಕಷ್ಟ. ನಾವ್ಯಾಕೆ ಈ ಸಿದ್ಧಾಂತದಿಂದ ಹಿಂದೆ ಸರಿಯಲಿ? ಈ ತತ್ವದಿಂದ ಗಾಂಧೀಜಿ ಬಲಿ ತೆಗೆದುಕೊಂಡಿಲ್ವಾ? ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ. ಇದು ನನ್ನ ಸಿದ್ಧಾಂತ, ನಾನು ಮಾತನಾಡಿದ್ದೇನೆ. ಪಕ್ಷದಿಂದ ಸಪೋರ್ಟ್ ಇಲ್ಲ ಅಂತ ಯಾರು ಹೇಳಿದ್ದು? ಸಿಎಂ ಹಾದಿಯಾಗಿ ಎಲ್ಲರೂ ಸಪೋರ್ಟ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸಿದ್ದಕಟ್ಟೆ ಕೊಡಂಗೆ: ವೀರ ವಿಕ್ರಮ ಜೋಡುಕರೆ 2ನೇ ವರ್ಷದ ‘ರೋಟರಿ ಕಂಬಳ’ ಕ್ಕೆ ಚಾಲನೆ
ಪತ್ರ ಬರೆದು 48 ತಾಸು ಅಷ್ಟೇ ಆಗಿರೋದು. ಇಲ್ಲಿ ಆರ್‌ಎಸ್‌ಎಸ್ (RSS) ಮಾತನಾಡುತ್ತಿಲ್ಲ, ಬಿಜೆಪಿ ಮಾತನಾಡುತ್ತಿದೆ. ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ಮಾತಾಡಿದರೆ ಇಡೀ ಸದನ ಮುಗಿಸುತ್ತಾರೆ. ಆರ್‌ಎಸ್‌ಎಸ್ ಸೋ ಕಾಲ್ಡ್ ಒಂದು ಸಂಸ್ಥೆ ಅಷ್ಟೇ. ರಿಜಿಸ್ಟಾರ್ ಆಗದಿರೋ ಸಂಸ್ಥೆ ಅಷ್ಟೇ ಇದು. ಎಲ್ಲೇ ಕಾರ್ಯಕ್ರಮ ಮಾಡಿದರೂ ಪರ್ಮಿಷನ್ ತೆಗದುಕೊಳ್ಳಲೇಬೇಕು. ಇವರು ಯಾಕೆ ಪರ್ಮಿಷನ್ ತೆಗೆದುಕೊಂಡಿಲ್ಲ? ಇದು ನನ್ನ ಡಿಮ್ಯಾಂಡ್ ಅಲ್ಲ ಇದು ನನ್ನ ಸಲಹೆ. ನಾನು ಒಂದು ಕರೆ ಕೊಟ್ಟು ಅಂಬೇಡ್ಕರ್ ಕಾರ್ಯಕ್ರಮ ಮಾಡೋಣ ಅಂದರೆ ಬಿಡುತ್ತೀರಾ? ನಮ್ಮ ಸರ್ಕಾರ ಇರೋದಕ್ಕೆ ನಾನು ಸಲಹೆ ನೀಡಿದ್ದು. ಬಳಿಕ ಬೇರೆ ಸರ್ಕಾರಕ್ಕೆ ನಂತರ ಪತ್ರ ಬರೆಯೋಣ ಎಂದು ಹೇಳಿದರು. ಇದನ್ನೂ ಓದಿ: GBA ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿ: ಅರ್ಜಿದಾರರಿಗೆ ಸುಪ್ರೀಂ ನಿರ್ದೇಶನ
ನಮ್ಮ ಆಚರಣೆ ಬಗ್ಗೆ ತಂದೆ ತಾಯಿ ಕಲಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಹೋಗುವವರು ಬಡ ಮಕ್ಕಳು. ಅಲ್ಲಿ ಹೋಗಿ ದೊಣ್ಣೆ ಬೀಸೋದು, ಆ ಮಕ್ಕಳಿಗೆ ಕಲಿಸೋದು ಎಷ್ಟು ಸರಿ? ಇದಕ್ಕೆ ನಮ್ಮ ಮಕ್ಕಳು ಯಾಕೆ ಬಲಿಯಾಗಬೇಕು? ಮೊದಲು ಮನೆ ಮಕ್ಕಳಿಗೆ ಇದನ್ನ ಹೇಳಿಕೊಡಿ. ಬಿಜೆಪಿ ನಾಯಕರ ಮಕ್ಕಳಿಗೆ ದೊಣ್ಣೆ ಕೊಟ್ಟು ಕಲಿಸಲಿ. ಅವರ ಮನೆ ಮಕ್ಕಳು ಯಾವಾಗ ಧರ್ಮ ರಕ್ಷಣೆಗೆ, ಗೋ ರಕ್ಷಣೆಗೆ ಇಳೀತಾರೆ ಹೇಳಲಿ. ಐ ಲವ್ ಆರ್‌ಎಸ್‌ಎಸ್ ಅನ್ನೋವ್ರು ದೇಶ ದ್ರೋಹಿಗಳು. ಇದು ಬೆದರಿಕೆ ಅಲ್ಲ, ಬೆದರಿಕೆ ಕರೆ ಅಷ್ಟೆ. ಜನ ಇದ್ದಾರೆ, ಸರ್ಕಾರ ನಮ್ಮ ಪರ ಇದೆ, ಅಷ್ಟು ಸಾಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿಎಂ, ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಅಲರ್ಟ್ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ
ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistan Terrorists) ಗುರ್ಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಭಾರತೀಯ ಸಂಸತ್ತಿನ (Parliament) ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿರುವ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ.
ಪನ್ನುನ್ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ 2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಕಂಡುಬಂದಿದೆ. ಅದರಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ (ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ) ಎಂಬ ಶೀರ್ಷಿಯನ್ನೂ ನೀಡಲಾಗಿದೆ. ವೀಡಿಯೋದಲ್ಲಿ ಪನ್ನುನ್, ಭಾರತ ತನ್ನನ್ನು ಕೊಲ್ಲಲು ನಡೆಸಿದ ಸಂಚು ವಿಫಲವಾಗಿದೆ. ಅಲ್ಲದೇ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿ ಡಿಸೆಂಬರ್ 13ಕ್ಕೆ 22 ವರ್ಷಗಳಾಗುತ್ತದೆ. ಇದೇ ದಿನ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು. ಇಲ್ಲವೇ ಅದಕ್ಕೂ ಮೊದಲೇ ದಾಳಿ ನಡೆಸುವುದಾಗಿ ಹೇಳಿಕೆ ನೀಡಿದ್ದಾನೆ.
ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನ ಕೆ-2 (ಕಾಶ್ಮೀರ-ಖಾಲಿಸ್ತಾನ್) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ನಿರ್ದೇಶನಗಳನ್ನು ನೀಡಿದೆ ಎಂದು ಹೇಳಿದೆ.
ಬೆಳಗಾವಿ: ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿಪಿ ಶೇಷ ಅವರಿಗೆ ಅನಾಮಧೇಯ ಬೆದರಿಕೆ ಕರೆ ಬಂದಿದ್ದು ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ.
ಬೆಂಗಳೂರು ಕಾರಾಗೃಹ, ಬೆಳಗಾವಿ (Belagavi) ಹಿಂಡಲಗಾ ಕೇಂದ್ರ ಕಾರಾಗೃಹ (Hindalaga Jail) ಸ್ಫೋಟಿಸಲಾಗುವುದು. ಅಲ್ಲದೇ ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ (Bomb) ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ (Threat Call) ಬಂದಿದೆ.
ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಬೆದರಿಕೆ ಕರೆ ಮಾಡಿ, ಜೈಲಿನಲ್ಲಿ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹಿಂಡಲಗಾ ಜೈಲಿನ ಹೆಡ್ ವಾಡರ್‌ಗಳಾದ ಜಗದೀಶ್ ಗಸ್ತಿ, ಎಸ್‌ಎಂ ಗೋಟೆ ಪರಿಚಯಸ್ಥನೆಂದು ಹೇಳಿದ್ದಾನೆ. ಅಲ್ಲದೇ ಫೋನ್ ಕರೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಹೆಸರೂ ಉಲ್ಲೇಖ ಮಾಡಿ ತಾನು ಜೈಲಿನಲ್ಲಿದ್ದಾಗ ಬನ್ನಂಜೆ ರಾಜಾಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ
ಈ ಅನಾಮಧೇಯ ವ್ಯಕ್ತಿಯಿಂದ ಕಾರಾಗೃಹ ಆಡಳಿತಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಮಧೇಯ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಬಂಧಿಖಾನೆ ಇಲಾಖೆಯ ಡಿಐಜಿಪಿ ಟಿಪಿ ಶೇಷ ಪ್ರಕರಣ ದಾಖಲಿಸಿದ್ದಾರೆ. ಇದೀಗ ಬಾಂಬ್ ಬೆದರಿಕೆ ಕರೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?
ಮುಂಬೈ: ತಾಜ್ ಹೋಟೆಲ್ (Taj Hotel) ಅನ್ನು ಸ್ಫೋಟಿಸಲು ಇಬ್ಬರು ಪಾಕಿಸ್ತಾನಿಗಳು ನಗರಕ್ಕೆ ಬರಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ (Mumnai Police) ಗುರುವಾರ ಬೆದರಿಕೆ ಕರೆ (Threatening Call) ಬಂದಿದೆ.
ಮುಂಬೈ ಪೊಲೀಸ್‌ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂದಿದೆ. ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತ ಭೂಪ್ರದೇಶ ಪ್ರವೇಶಿಸಿ ನಗರದ ಸುಪ್ರಸಿದ್ಧ ಹೋಟೆಲ್ ಅನ್ನು ಸ್ಫೋಟಿಸಲಿದ್ದಾರೆ ಎಂದು ಬೆದರಿಕೆ ಕರೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಖೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆತನ ನಿಜ ಹೆಸರು ಜಗದಂಬ ಪ್ರಸಾಸ್ ಸಿಂಗ್ ಆಗಿದ್ದು, ಆತ ಉತ್ತರ ಪ್ರದೇಶದ ಗೊಂಡಾ ಮೂಲದ ವ್ಯಕ್ತಿಯಾಗಿದ್ದಾನೆ. ಪ್ರಸ್ತುತ ಆತ ಸಾಂತಾಕ್ರೂಜ್‌ನಲ್ಲಿ ವಾಸವಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್- ಇಂದಿನಿಂದ ಹೆಚ್ಚುವರಿ ಸರ್ವಿಸ್
ಬೆದರಿಕೆ ಕರೆ ಬಳಿಕ ನಗರ ಪೊಲೀಸರು ಎಚ್ಚರವಾಗಿದ್ದು, ತನಿಖೆ ಆರಂಭಿಸಿದ್ದಾರೆ. ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ 2008ರಲ್ಲಿ ನಗರದಲ್ಲಿ ನಡೆದ ಉಗ್ರರ ದಾಳಿಗೆ ಗುರಿಯಾಗಿತ್ತು. ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿವೆ. ಇದನ್ನೂ ಓದಿ: ಇಂದಿನಿಂದ ಟೋಲ್ ದರ ಏರಿಕೆ ಬಿಸಿ- ವಾಹನ ಸವಾರರ ಆಕ್ರೋಶ
ಮುಂಬೈ: ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈನಲ್ಲಿ (Mumbai) ಮತ್ತೊಮ್ಮೆ ಭೀತಿ ಹುಟ್ಟಿಸುವಂತಹ ಬೆದರಿಕೆ (Threat) ಪೊಲೀಸರಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಶೀಘ್ರವೇ ಮುಂಬೈ ಅನ್ನು ಬ್ಲಾಸ್ಟ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯವರೆಗೆ ಪೊಲೀಸರಿಗೆ ಬೆದರಿಕೆ ಕರೆಗಳು ಫೋನ್ ಕರೆ ಇಲ್ಲವೇ ಇ-ಮೇಲ್‌ಗಳ ಮೂಲಕ ಬರುತ್ತಿದ್ದವು. ಇದೀಗ ಕಿಡಿಗೇಡಿಯೊಬ್ಬ ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಪೊಲೀಸರ (Mumbai Police) ಟ್ವಿಟ್ಟರ್ ಖಾತೆಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಇದನ್ನೂ ಓದಿ: ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ
ಸಂದೇಶದಲ್ಲೇನಿದೆ?
ನಾನು ಮುಂಬೈಯನ್ನು ಅತಿ ಶೀಘ್ರದಲ್ಲಿ ಸ್ಫೋಟಿಸಲಿದ್ದೇನೆ ಎಂದು ದುಷ್ಕರ್ಮಿ ಬರೆದಿದ್ದು, ಅದನ್ನು ಮುಂಬೈ ಪೊಲೀಸರ ಟ್ವಿಟ್ಟರ್ ಖಾತೆಗೆ ಕಳುಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಜೀವ ಬೆದರಿಕೆ ಕರೆ (Threat Call) ಬಂದಿದೆ. ಟೋಲ್ ಫ್ರೀ ಸಂಖ್ಯೆ 112ಕ್ಕೆ ಸಂದೇಶ ಕಳುಹಿಸಿ ಕೊಲೆ ಬೆದರಿಕೆ ಹಾಕಲಾಗಿದೆ.
ಉತ್ತರ ಪ್ರದೇಶದ 112 ವಾಟ್ಸಾಪ್ ಗ್ರೂಪ್‌ನಲ್ಲಿ ಜೀವ ಬೆದರಿಕೆಯ ಸಂದೇಶ ರವಾನೆಯಾಗಿದ್ದು, ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಸಂದೇಶದಲ್ಲಿ ಆರೋಪಿ ಮುಖ್ಯಮಂತ್ರಿ ಯೋಗಿಯನ್ನು ಕೊಲ್ಲುವುದಾಗಿ ಬರೆದಿದ್ದಾನೆ. ಸಂದೇಶವನ್ನು ಸ್ವೀಕರಿಸಿದ ತಕ್ಷಣ ಪೊಲೀಸರು ಎಡಿಜಿ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಗುಪ್ತಚರ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನನ್ನ ರೋಡ್ ಶೋ ಮುಂದೆ ಬಿಜೆಪಿ, ಕಾಂಗ್ರೆಸ್‌ನದ್ದು ಏನೇನು ಅಲ್ಲ: ಹೆಚ್‌ಡಿಕೆ ವ್ಯಂಗ್ಯ
ಚಿಕ್ಕೋಡಿ: ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ (Pramod Muthalik) ಅವರಿಗೆ ಜೀವ ಬೆದರಿಕೆ ಕರೆಗಳು (Threatening Call) ಬರುತ್ತಿರುವ ಕುರಿತು ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ನನಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇನೆ ಬೋ… ಮಗನೇ ಎಂದು ಹೀನಾಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ
ನನಗೆ 4-5 ಕಾಲ್‌ಗಳ ಮೂಲಕ ಬೆದರಿಕೆ ಕರೆಗಳು ಬಂದಿವೆ. ಉರ್ದು ಮಿಶ್ರಿತ ಮಂಗಳೂರು ಕನ್ನಡ ಭಾಷೆಯಲ್ಲಿ ಅತ್ಯಂತ ಕೆಟ್ಟದಾಗಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ನಂಬರ್‌ಗಳನ್ನು ಹುಕ್ಕೇರಿ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಿದ್ದೇನೆ. ಸೂಕ್ತ ರೀತಿಯಲ್ಲಿ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇಂತಹ ಬೆದರಿಕೆ ಕರೆಗಳು ನನಗೆ ಬಂದಿರುವುದು ಮೊದಲೇನಲ್ಲ. ಈ ರೀತಿ ಬೆದರಿಕೆ ಹಾಕುವುದನ್ನು ಬಿಡಿ, ನಾನು ಇದಕ್ಕೆಲ್ಲ ಹೆದರುವುದಿಲ್ಲ. 10-15 ವರ್ಷಗಳಿಂದ ಬೆದರಿಕೆ ಕರೆಗಳನ್ನು ಸ್ವೀಕಾರ ಮಾಡಿಕೊಂಡು ಸಂಘಟನೆಯನ್ನು ಮುನ್ನಡೆಸಿದ್ದೇನೆ. ಇಂತಹ ಕುಕೃತ್ಯವನ್ನು ಬಿಟ್ಟು ನ್ಯಾಯಯುತವಾಗಿ ಬದುಕುವುದನ್ನು ಕಲಿಯಿರಿ ಎಂದಿದ್ದಾರೆ. ಇದನ್ನೂ ಓದಿ: ಸಬ್ ರಿಜಿಸ್ಟರ್ ಕಚೇರಿ ಮೇಲೆ ಲೋಕಾ ದಾಳಿ – 7 ಗಂಟೆಗಳ ನಂತರ ಕಾರ್ಯಾಚರಣೆ ಅಂತ್ಯ
Live Tv
[brid partner=56869869 player=32851 video=960834 autoplay=true]
ಮುಂಬೈ: ಮುಂಬೈನಲ್ಲಿರುವ (Mumbai) ಸರ್ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬಾಂಬ್ ಹಾಕುವುದಾಗಿ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು, ಮುಖೇಶ್ ಅಂಬಾನಿ (Mukesh Ambani), ನೀತಾ ಅಂಬಾಣಿ (Nita Ambani) ಮತ್ತು ಕುಟುಂಬದ ಕೆಲ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಬುಧವಾರ ಮಧ್ಯಾಹ್ನ 12:57ರ ಸುಮಾರಿಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ (Reliance hospital) ದೂರಾವಾಣಿ ಸಂಖ್ಯೆಗೆ ಕರೆ ಬಂದಿದ್ದು, ನಂತರ ಈ ಬಗ್ಗೆ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ: ನಳೀನ್ ಕುಮಾರ್ ಕಟೀಲ್
ಇದೀಗ ಮತ್ತೆ, ಸರ್ ಎಚ್‍ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಲ್ಯಾಂಡ್‍ಲೈನ್ ಸಂಖ್ಯೆಗೆ ಇಂದು ಮಧ್ಯಾಹ್ನ ಅನಾಮಧೇಯ ವ್ಯಕ್ತಿ ಕರೆ ಮಾಡಿ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅಂಬಾನಿ ಮತ್ತು ಅವರ ಪತ್ನಿ ಕೆಲ ಕುಟುಂಬಸ್ಥರನ್ನು ಸಹ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
Live Tv
[brid partner=56869869 player=32851 video=960834 autoplay=true]
ಚಂಡೀಗಢ: 5 ಸ್ಟಾರ್ ಹೋಟೆಲ್(5 Star Hotel) ಒಂದಕ್ಕೆ ಬಾಂಬ್ ಬೆದರಿಕೆ(Bomb threat) ಬಂದಿರುವ ಘಟನೆ ಹರಿಯಾಣ(Haryana)ದ ಗುರುಗ್ರಾಮ(Gurugram)ದರಲ್ಲಿ ನಡೆದಿದೆ. ಬೆದರಿಕೆ ಹಿನ್ನೆಲೆ ಪೊಲೀಸರು ಹೋಟೆಲ್‌ನಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಗುರುಗ್ರಾಮದ ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್‌ನಲ್ಲಿರುವ ಲೀಲಾ ಹೋಟೆಲ್‌ಗೆ ಬೆಳಗ್ಗೆ 11:35ಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಕರೆಯನ್ನು ಸ್ವೀಕರಿಸುತ್ತಲೇ ಹೋಟೆಲ್‌ನಲ್ಲಿದ್ದವರು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿದೆ. ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಾರ್ಜ್‍ಗೆ ಹಾಕಿದ್ದ ಮೊಬೈಲ್ ಬ್ಯಾಟರಿ ಸ್ಫೋಟ – 8 ತಿಂಗಳ ಮಗು ಸಾವು
ಇದೀಗ ಬೆದರಿಕೆ ಬಂದಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಘಟನೆ ಬಗ್ಗೆ ಶೋಧಕಾರ್ಯ ನಡೆಯುತ್ತಿದ್ದು, ಬೆದರಿಕೆ ಕರೆ ನೀಡಿದವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ
Live Tv
[brid partner=56869869 player=32851 video=960834 autoplay=true]