Tag: ಬೆಣ್ಣೆ ದೋಸೆ

  • ಒಂದ್ ಬೆಣ್ಣೆ, ಒಂದು ಖಾಲಿ ದೋಸೆ ತಿಂದ ರಮ್ಯಾ: ಮತ್ತೊಂದು ತಿನ್ನಲು ಡಯಟ್ ಅಡ್ಡಿ

    ಒಂದ್ ಬೆಣ್ಣೆ, ಒಂದು ಖಾಲಿ ದೋಸೆ ತಿಂದ ರಮ್ಯಾ: ಮತ್ತೊಂದು ತಿನ್ನಲು ಡಯಟ್ ಅಡ್ಡಿ

    ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿಯ ನೂರಾರು ಸಿನಿಮಾಗಳಲ್ಲಿ ಮಿಂಚಿ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ರಮ್ಯಾ (Ramya) ದಿಢೀರ್ ದಾವಣಗೆರೆಯಲ್ಲಿ ಕಾಣಿಸಿಕೊಂಡರು. ‘ಹೆಡ್ ಬುಷ್’ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್ ವುಡ್ ನ ಮೊಹಕ ತಾರೆ ರಮ್ಯಾ ದಾವಣಗೆರೆಗೆ ಭೇಟಿ ನೀಡಿ ಬೆಣ್ಣೆ ದೋಸೆ ಸವಿದರು.

    ದಾವಣಗೆರೆಯಲ್ಲಿ (Davangere) ಮೋಹಕತಾರೆ ರಮ್ಯಾ ದಿಢೀರ್ ಕಾಣಿಸಿಕೊಂಡರು, ವಿವಿಧ ಸಿನಿಮಾಗಳಲ್ಲಿ ನಟಿಸಿ ಪಡ್ಡೆಯುವಕರ ನಿದ್ದೆಗೆಡಿಸಿದ್ದ ನಟಿ ರಮ್ಯಾ ದಾವಣಗೆರೆಯ ಪ್ರಸಿದ್ದ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ (Butter Dosa) ಹೋಟೆಲ್ ನಲ್ಲಿ ಬೆಣ್ಣೆದೋಸೆ ಸವಿದರು.  ಕಳೆದ ದಿನ ದಾವಣಗೆರೆಯಲ್ಲಿ ನಡೆದ ನಟ ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush)ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೆರೆದಿದ್ದ ಅಭಿಮಾನಿಗಳ ಕಣ್ಣಿಗೆ ಕುಕ್ಕುವಂತೆ ಕಾಣಿಸಿಕೊಂಡರು. ಇನ್ನು ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ದಾವಣಗೆರೆಯ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡು ಬಳಿಕ ಬೆಳಗಿನ ಉಪಹಾರ ಸೇವಿಯಲು ಅಭಿಮಾನಿಗಳ ಸಲಹೆಯಂತೆ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ಗೆ ಭೇಟಿ ನೀಡಿ ಗರಿಗರಿ ಬೆಣ್ಣೆ ದೋಸೆ ಸವಿದರು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ಹಬ್ಬಿದಂತೆ ಅಭಿಮಾನಿಗಳು ಹಾಗೂ ಪಡ್ಡೆ ಯುವಕರು ಕಿಕ್ಕಿರಿದು ಸೇರಿದ್ದರು. ಇನ್ನು ಕೆಲ ಚಿರ ಯುವಕರು, ಹಾಗು ಕ್ಯೂಟ್ ಹುಡುಗಿಯರು ಸೆಲ್ಫಿಗೆ ಫೋಸ್ ನೀಡಿದರು. ಕೆಲವು ಅಭಿಮಾನಿಗಳು ಗುಂಪು ಗುಂಪಾಗಿ ಸೆಲ್ಫಿಗಾಗಿ ಮುಗಿ ಬಿದ್ದ ದೃಶ್ಯಗಳು ಕಂಡುಬಂದವು.  ಕೆಲವರು ಹರಸಾಹಸ ಪಟ್ಟು ಸೆಲ್ಫಿಗೆ ಪ್ರಯತ್ನಿಸಿ ಸೆಲ್ಫಿ ಸಿಗದೆ ನಿರಾಸೆಯಾದ್ರು,

     

    ದಾವಣಗೆರೆಯ ಬೆಣ್ಣೆ ದೋಸೆ ಸವಿದ ಸ್ಯಾಂಡಲ್ ವುಡ್  ಕ್ವೀನ್ ರಮ್ಯಾ ಸಂತಸ ವ್ಯಕ್ತಪಡಿಸಿದರು. ದಾವಣಗೆರೆ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿದ ಬಳಿಕ ಮಾತನಾಡಿದ ಅವರು ನಿನ್ನೆ ಹೆಡ್ ಬುಷ್ ಸಿನಿಮ ಪ್ರೀ ರೀಲಿಸ್ ವೇದಿಕೆಯಲ್ಲಿ ಹೇಳಿದ್ದ. ವೇದಿಕೆಯಲ್ಲು ಜನ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿಯಿರಿ ಎಂದಿದ್ದರು. ಅದರಂತೆ ಬೆಣ್ಣೆ ದೋಸೆ ಸವಿದಿದ್ದೇನೆ. ಬೆಣ್ಣೆದೋಸೆ ತುಂಬಾ ಟೇಸ್ಟಿಯಾಗಿದೆ. ಇಲ್ಲಿ ಬಳಕೆ ಮಾಡುವ ಬೆಣ್ಣೆ‌ ಹಳ್ಳಿ ಬೆಣ್ಣೆ ಬಳಕೆ ಮಾಡ್ತಾರೆ. ಇನ್ನು ಬೆಣ್ಣೆ ದೋಸೆಯನ್ನು ಪಾರ್ಸಲ್ ತಿಂದ್ರೆ ಅಷ್ಟು ಚೆನ್ನಾಗಿರೋಲ್ಲ, ಸೋ ಅದಕ್ಕೆ ಹೋಟೆಲ್ ಗೆ ಬಂದು ಒಂದು ಬೆಣ್ಣೆ ಒಂದು ಖಾಲಿ ಎರಡು ದೋಸೆ ತಿಂದೆ, ತುಂಬಾ ರುಚಿಯಾಗಿದೆ  ಎಂದು ನಟಿ ರಮ್ಯಾ ದಾವಣಗೆರೆ ಜನತೆಗೆ ಧನ್ಯವಾದಗಳು ತಿಳಿಸಿದರು.

    ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್ ಗೆ ನಟಿ ರಮ್ಯಾ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಹೊಟೇಲ್ ಮುಂದೆ ಜಮಾಯಿಸಿದ್ದರಿಂದ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.‌ ಇದರಿಂದ ವಾಹನ ಸವಾರರಿಗೆ ಟ್ರಾಫಿಕ್‌ ಕಿರಿಕಿರಿ ಅನುಭವಿಸುವಂತಾಯಿತು. ಇನ್ನು ಟ್ರಾಫಿಕ್ ಜಾಮ್‌ ಕ್ಲಿಯರ್ ಮಾಡಲು ಸಂಚಾರಿ ಪೋಲಿಸರು ಹರಸಾಹಸ ಪಡುವಂತಾಯಿತು. ಇನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಭಾಗಿಯಾಗಿ ಅಪ್ಪು ಅಪ್ಪು ಎಂದು ಘೋಷಣೆ ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿದ ಯದುವೀರ್ ಒಡೆಯರ್

    ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿದ ಯದುವೀರ್ ಒಡೆಯರ್

    ದಾವಣಗೆರೆ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಅವರು ಗುರುವಾರ ದಾವಣಗೆರೆ ಬೆಣ್ಣೆ ರುಚಿ ಸವಿದಿದ್ದಾರೆ.

    ದಾವಣಗೆರೆ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಬೆಣ್ಣೆದೋಸೆ. ಹೀಗಾಗಿ ನಗರಕ್ಕೆ ಭೇಟಿ ನೀಡಿದ ಮಹಾರಾಜರು ವಿದ್ಯಾನಗರ ರಸ್ತೆಯ ಡೆಂಟಲ್ ಕಾಲೇಜ್ ಮುಂಭಾಗದ ಗುರುಕೊಟ್ಟುರೇಶ್ವರ ಹೋಟೆಲ್‍ನಲ್ಲಿ ಆಪ್ತರೊಂದಿಗೆ ಬೆಣ್ಣೆ ದೋಸೆ ಸೇವಿಸಿದರು. ಬಳಿಕ ಮಹಾರಾಜರ ಜೊತೆ ಸಾರ್ವಜನಿಕರು, ಪೊಲೀಸರು ಫೋಟೋ ಕ್ಲಿಕ್ಕಿಸಿಕೊಂಡರು.

    ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಒಡೆಯರ್ ಅವರನ್ನು ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದರು.

    ಹಂಪಿ ಪ್ರವಾಸದ ಬಳಿಕ ಯದುವೀರ್ ಒಡೆಯರ್ ಅವರು ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಂಜನೇಯ ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದರು. ಕೊಪ್ಪಳದಿಂದ ಮೈಸೂರಿಗೆ ಹಿಂತಿರುಗುವ ಮಾರ್ಗಮಧ್ಯೆ ದಾವಣಗೆರೆಗೆ ಆಗಮಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv