Tag: ಬೆಡ್ ರೂಮ್

  • ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡ ಕಂಟೆಸ್ಟೆಂಟ್: ವಿಡಿಯೋ ವೈರಲ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ಏನೆಲ್ಲ ಆಗುತ್ತವೆ. ಆದರೆ, ಇದೇ ಮೊದಲ ಬಾರಿಗೆ ಜೋಡಿಯೊಂದು ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿದ್ದಾರೆ. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದಾರೆ. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಕುರಿತಂತೆ ಹಲವು ರೀತಿಯ ಚರ್ಚೆಗೂ ಕಾರಣವಾಗಿದೆ.

    ಅಷ್ಟಕ್ಕೂ ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿದ್ದು ಬೇರೆ ಯಾರೂ ಅಲ್ಲ. ವಿಕ್ಕಿ ಜೈನ್ (Vicky Jain) ಮತ್ತು ಅಂಕಿತಾ ಲೋಖಂಡೆ (Ankita Lokhande) ದಂಪತಿ. ಬಿಗ್ ಬಾಸ್ ಮನೆಗೆ ಇವರು ಸ್ಪರ್ಧಿಗಳು. ಆದರೆ, ಗಂಡ ಹೆಂಡತಿ ರೀತಿಯಲ್ಲಿ ನಡೆದುಕೊಂಡಿದ್ದಕ್ಕೆ ನಾನಾ ರೀತಿಯ ಕಮೆಂಟ್ ಗಳು ಹರಿದಾಡುತ್ತಿವೆ. ಜೊತೆಗೆ ಅವರ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ.

    ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ  ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು.  ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.

    ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ. ಆದರೆ, ಇವತ್ತು ಒಂದೇ ಬ್ಲ್ಯಾಂಕೆಟ್ ಅಡಿಯಲ್ಲಿ ಮಲಗಿ ಮತ್ತೊಂದು ಶಾಕ್ ನೀಡಿದ್ದಾರೆ. ಅದಕ್ಕೆ ಹೇಳೋದು ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತ.

  • ACಯ ವಿಷಾನಿಲ ಸೋರಿಕೆ- ಒಂದೇ ಕುಟುಂಬದ ನಾಲ್ವರು ಸಾವು

    ACಯ ವಿಷಾನಿಲ ಸೋರಿಕೆ- ಒಂದೇ ಕುಟುಂಬದ ನಾಲ್ವರು ಸಾವು

    ಬಳ್ಳಾರಿ: ಎಸಿಯ ವಿಷಾನಿಲ ಸೋರಿಕೆಯಾಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಘನ ಘೋರ ದುರಂತವೊಂದು ನಡೆದುಹೋಗಿದೆ.

    ವೆಂಕಟ್ ಪ್ರಶಾಂತ್ (42), ಪತ್ನಿ ಚಂದ್ರಕಲಾ (38), ಮಕ್ಕಳಾದ ಅದ್ವಿಕ್ (16) ಪ್ರೇರಣಾ (8) ಮೃತರಾಗಿದ್ದಾರೆ. ಎಸಿಯ ವಿಷಾನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೆಡ್‌ರೂಮ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತ ರಾಘವೇಂದ್ರ ಶೆಟ್ಟಿ ಬಾಗಿಲು ತೆರೆಯಲು ಹರಸಾಹಸಪಟ್ಟರು. ಅಷ್ಟೊತ್ತಲ್ಲೇ ಮಗ ಹಾಗೂ ಮೊಮ್ಮಕ್ಕಳು ಮಲಗಿದ್ದ ಬೆಡ್ ರೂಂಗೆ ದಟ್ಟ ಹೊಗೆ ಆವರಿಸಿತ್ತು. ಮನೆ ಬಹುತೇಕ ಸುಟ್ಟು ಹೋಗಿದೆ. ಮರಿಯಮ್ಮನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.

  • ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ಬೆಳಗಾವಿ: ಪತಿ ಮತ್ತು ಪತ್ನಿ ಇಬ್ಬರು ಬೆಡ್ ರೂಮ್ ನಲ್ಲಿ ಇರುವ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ನಡೆದಿದೆ.

    ಪೀರನವಾಡಿಯ ಬಾಡಿಗೆ ಮನೆಯಲ್ಲಿ ಸಿಂಧೆ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನಿಲ್ ವಡ್ಡರ ಈ ರೀತಿಯ ನೀಚ ಕೃತ್ಯವನ್ನು ಎಸಗಿದ್ದಾನೆ.

    ಆರೋಪಿ ಯುವಕ ಮನೆಯ ಕಿಟಕಿಯಲ್ಲಿ ತನ್ನ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದನು. ಮೊಬೈಲ್ ಗೆ ತಂತಿ ಕಟ್ಟಿ ಕಿಟಕಿಯಲ್ಲಿ ಇಡುತ್ತಿದ್ದನು. ಕೆಲವು ದಿನಗಳಿಂದ ಈ ರೀತಿಯ ಕೃತ್ಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಶನಿವಾರ ಮೊಬೈಲ್ ಇಡುವಾಗ ಸಪ್ಪಳವಾಗಿದೆ. ಆಗ ದಂಪತಿ ಗಮನಿಸಿ ನೋಡಿದ್ದಾರೆ. ಈ ವೇಳೆ ಮೊಬೈಲ್ ಇಟ್ಟಿರುವುದು ತಿಳಿದಿದೆ. ನಂತರ ಮೊಬೈಲ್ ತೆಗೆದು ನೋಡಿದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.

    ಆರೋಪಿ ಸುನಿಲ್ ತನ್ನ ಮೊಬೈಲ್ ನೀಡುವಂತೆ ದಂಪತಿಗೆ ಕೇಳಿದ್ದಾನೆ. ಆದರ ಪತಿ ಸಂಶಯಗೊಂಡು ಸುನಿಲ್ ಗೆ ಮೊಬೈಲ್ ಮರಳಿ ನೀಡಿಲಿಲ್ಲ. ಬಳಿಕ ದಂಪತಿ ಮೊಬೈಲ್ ಸಮೇತ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಸದ್ಯಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಸುನಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.