Tag: ಬೆಟಾಲಿಯನ್

  • ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    – ಪಾಕ್, ಬಾಂಗ್ಲಾ ಗಡಿಯಲ್ಲಿ ಪ್ರಾದೇಶಿಕ ಕಚೇರಿ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಇದೀಗ ಭಾರತದ ಗಡಿ ಭದ್ರತಾ ಪಡೆಗೆ (BSF) ಇನ್ನುಷ್ಟು ಬಲ ಬಂದಿದ್ದು, 16 ಹೊಸ ಬೆಟಾಲಿಯನ್‌ಗಳು (battalions) ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

    ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತಿದ್ದು, ಬಿಎಸ್‌ಎಫ್‌ಗೆ 16 ಹೊಸ ಬೆಟಾಲಿಯನ್‌ಗಳು ಮತ್ತು ಭಾರತ ಪಾಕ್ ಮತ್ತು ಭಾರತ ಬಾಂಗ್ಲಾ ಗಡಿಯಲ್ಲಿ ಒಂದೊಂದರಂತೆ ಎರಡು ಹೊಸ ಪ್ರಾದೇಶಿಕ ಪ್ರಧಾನ ಕಚೇರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಶೀಘ್ರವೇ ಅನುಮೋದನೆ ನೀಡಲಿದೆ. ಜೊತೆಗೆ ಬೆಟಾಲಿಯನ್‌ಗಳಲ್ಲಿ ಸುಮಾರು 17,000 ಹೊಸ ಸೈನಿಕರನ್ನು ನೇಮಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತು 2020-21ರಲ್ಲಿ ಬಿಎಸ್‌ಎಫ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಇದನ್ನೂ ಓದಿ: 30 ನಿಮಿಷ ಲೈಟ್ ಆಫ್ – ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್

    ಈ ಕುರಿತು ಭದ್ರತಾ ಪಡೆ ಮಾಹಿತಿ ನೀಡಿದ್ದು, ಪ್ರಸ್ತುತ ಈ ಅರೆಸೇನಾಪಡೆಯು 193 ಬೆಟಾಲಿಯನ್‌ಗಳನ್ನು ಹೊಂದಿದ್ದು, ಒಂದು ಬೆಟಾಲಿಯನ್ 1,000 ಮಂದಿಗೂ ಹೆಚ್ಚು ಯೋಧರನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ (Central Government) ಅನುಮೋದನೆ ನೀಡುತ್ತಿದ್ದಂತೆ ಬಿಎಸ್‌ಎಫ್ ಮಹಿಳಾ ಹಾಗೂ ಪುರುಷ ಸಿಬ್ಬಂದಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದೆ.

    ಕಳೆದ ವರ್ಷ ಬಾಂಗ್ಲಾದೇಶದಲ್ಲಿ (Bangladesh) ಶೇಖ್ ಹಸೀನಾ ಸರ್ಕಾರದ ಪತನ ಹಾಗೂ ಏ.22ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ಬಿಎಸ್‌ಎಫ್‌ಗೆ ಬಲ ಹೆಚ್ಚಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆ ಸೇರಿದಂತೆ ಕೆಲವು ಅಂತಿಮ ಅನುಮೋದನೆಗಳು ಬಾಕಿಯಿದ್ದು, ಶೀಘ್ರದಲ್ಲೇ ಮಂಜೂರಾಗುವ ನಿರೀಕ್ಷೆಯಿದೆ.

    ಜಮ್ಮು ಮತ್ತು ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಲು ಜಮ್ಮುವಿನಲ್ಲಿ ಒಂದು ವಲಯ ಹಾಗೂ ಬಾಂಗ್ಲಾದೇಶ ಗಡಿಯ ಉತ್ತಮ ಕಣ್ಗಾವಲುಗಾಗಿ ಎರಡನೇ ವಲಯ ಮಿಜೋರಾಂನಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತ: ತಸ್ಲಿಮಾ ನಸ್ರೀನ್‌

  • 2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    2 ತಿಂಗಳು ಸೇನಾ ತರಬೇತಿ ಪಡೆಯಲಿದ್ದಾರೆ ಧೋನಿ

    ನವದೆಹಲಿ: ವಿಶ್ವಕಪ್ ನಂತರ ಧೋನಿ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಭಾಗಿಯಾಗದ ಕಾರಣ ನಿವೃತ್ತಿ ಹೇಳುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಧೋನಿ ತನ್ನ ಆಸೆಯನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ ಕಾಶ್ಮೀರದಲ್ಲಿ ಸೇನಾ ತರಬೇತಿಗೆ ಹೋಗುತ್ತಿದ್ದಾರೆ. ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡವನ್ನು ಸೇರಿ ಕರ್ತವ್ಯ ನಿರ್ವಹಿಸಲು ಇಚ್ಛಿಸಿದ್ದರು. ಅದರಂತೆಯೇ ಧೋನಿ ಅವರು ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಅನ್ನು ಸೇರಿಕೊಂಡು ತರಬೇತಿಯಲ್ಲಿ ಭಾಗವಹಿಸಲು ಅನುಮತಿ ಕೇಳಿದ್ದರು. ಇದೀಗ ಧೋನಿ ಅವರ ಮನವಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪುರಸ್ಕರಿಸಿ ಆರ್ಮಿ ಬೆಟಾಲಿಯನ್ ತರಬೇತಿ ಪಡೆಯಲು ಧೋನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಧೋನಿ ಅವರು ಮುಂದಿನ ಎರಡು ತಿಂಗಳವರೆಗೂ ಪ್ಯಾರಾಚೂಟ್ ರೆಜಿಮೆಂಟ್ ಬೆಟಾಲಿಯನ್ ಜೊತೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆಯಲಿದ್ದಾರೆ. ಆದರೆ ಧೋನಿ ಅವರು ಯಾವುದೇ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

    ಕರ್ನಲ್ ಗೌರವ ಹುದ್ದೆ
    ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. ಈ ಕರ್ನಲ್ ಗೌರವ ಹುದ್ದೆ ಟೆರಿಟೋರಿಯಲ್ ಆರ್ಮಿಯ 106ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್‍ಗೆ ಸೇರಿದ್ದಾಗಿತ್ತು. ಭಾರತೀಯ ಸೇನೆ ಹೊಂದಿರುವ ಎರಡು ಪ್ಯಾರಾಚೂಟ್ ರೆಜಿಮೆಂಟ್‍ಗಳು ಪೈಕಿ ಇನ್‍ಫ್ಯಾಂಟ್ರಿ ಬೆಟಾಲಿಯನ್ ಒಂದಾಗಿದೆ. ವಿಶೇಷವೆಂದರೆ ಈ ಹಿಂದೆ ಅಂದರೆ 2015ರಲ್ಲಿ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದುಕೊಂಡಿದ್ದರು.

    ವಿಶ್ವಕಪ್ ಕ್ರಿಕೆಟ್ ವೇಳೆ ಧೋನಿ ಕೀಪಿಂಗ್ ವೇಳೆ ಪ್ಯಾರಾಚೂಟ್ ರೆಜಿಮೆಂಟ್ ಬಲಿದಾನ್ ಬ್ಯಾಡ್ಜ್ ಧರಿಸಿ ಗೌರವ ಸೂಚಿಸಿದ್ದರು. ಭಾರತದವರು ಈ ಬ್ಯಾಡ್ಜ್ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಆದರೆ ಐಸಿಸಿ ಬಿಸಿಸಿಐಗೆ ಸೂಚನೆಯ ಹಿನ್ನೆಲೆಯಲ್ಲಿ ಧೋನಿ ನಂತರದ ಪಂದ್ಯಗಳಲ್ಲಿ ಬಲಿದಾನ್ ಬ್ಯಾಡ್ಜ್ ಇರುವ ಗ್ಲೌಸ್ ಧರಿಸಿರಲಿಲ್ಲ.

    ಧೋನಿ ಅವರು, ತಾವೂ ಎರಡು ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳ ಆಯ್ಕೆಗೆ ಲಭ್ಯವಿರುವುದಿಲ್ಲ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಧೋನಿ ಸೇನಾ ತರಬೇತಿಗೆ ಹೋಗಬೇಕೆಂದು ತೀರ್ಮಾನಿಸಿದ್ದರು. ಆದರೆ ಕೆಲ ಸರಣಿ, ಐಪಿಎಲ್ ಪಂದ್ಯಗಳಿಂದಾಗಿ ಧೋನಿ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕ್ರಿಕೆಟಿಗೆ 2 ತಿಂಗಳು ವಿರಾಮ ಘೋಷಿಸಿ ಧೋನಿ ಸೇನಾ ತರಬೇತಿ ಪಡೆಯಲು ತೆರಳುತ್ತಿದ್ದಾರೆ.

    ಆಗಸ್ಟ್ 3 ರಿಂದ ಹೋಗುವ ಭಾರತದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಧೋನಿ ಅವರನ್ನು ಆಯ್ಕೆ ಮಾಡಿಲ್ಲ. ಎಂಎಸ್‍ಕೆ ಪ್ರಸಾದ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಏಕದಿನ, ಟಿ20ಐ ಮತ್ತು ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಲು ಭಾನುವಾರ ಮುಂಬೈನಲ್ಲಿ ಸಭೆ ಸೇರಿತ್ತು.

    ಅಲ್ಲಿ ಎಂಎಸ್ ಧೋನಿ ಸೀಮಿತ ಓವರ್ ಗಳ ಸರಣಿಗೆ ಲಭ್ಯವಿರುವುದಿಲ್ಲ. ಅವರು ಕೂಡ ತಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ವಿಶ್ವಕಪ್ ನಂತರ ನಾವು ಕೆಲವು ಯೋಜನೆಗಳನ್ನು ಹಾಕಿದ್ದೇವೆ. ಜೊತೆಗೆ ರಿಷಬ್ ಪಂತ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಯೋಚಿಸಿದ್ದೇವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ತಿಳಿಸಿದ್ದರು.

    ನಾವು ಧೋನಿ ಅವರೊಂದಿಗೆ ಭವಿಷ್ಯದ ಚರ್ಚಿಸಿದ್ದೇವೆ. ನಿವೃತ್ತಿ ಅವರ ವೈಯಕ್ತಿಕವಾದ ವಿಚಾರವಾಗಿದೆ. ಧೋನಿಯಂತಹ ಮಹಾನ್ ಕ್ರಿಕೆಟಿಗರಿಗೆ ಯಾವಾಗ ನಿವೃತ್ತಿ ಹೊಂದಬೇಕೆಂದು ತಿಳಿದಿದೆ ಎಂದು ಅವರು ಹೇಳಿದರು.