Tag: ಬೆಟಗೇರಿ

  • Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    Gadag | ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪತಹಶೀಲ್ದಾರ್ ಅಮಾನತು

    ಗದಗ: ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಕೇಳಲು ಹೋದ ಯುವಕನ ಮೇಲೆ ಹಲ್ಲೆ ಮಾಡಿದ ಉಪತಹಶೀಲ್ದಾರ್‌ರನ್ನ(Deputy Tahsildar) ಅಮಾನತು ಮಾಡಲಾಗಿದೆ.

    ಮೇ 17ರಂದು ರಾತ್ರಿ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ(D T Valmiki), ಕಾಂಗ್ರೆಸ್ ಮುಖಂಡ ವಿದ್ಯಾಧರ್ ದೊಡ್ಡಮನಿ ಹಾಗೂ ಸಹಚರರು ಒಟ್ಟಾಗಿ ಅಕ್ಷಯ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಅಕ್ಷಯ್ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಕಾರಿನಲ್ಲಿ ಬಂದ ಉಪತಹಶೀಲ್ದಾರ್ ಹಾಗೂ ಅವರ ಸಹಚರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿ ನ್ಯಾಯ ಕೇಳಲು ಹೋದ ಯುವಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಉಲ್ಟಾ ಹೊಡೆದ ಡಿಕೆಶಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗದ ಬೆಟಗೇರಿ ನಾಡಕಚೇರಿಯ ಉಪತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮ್ಯಾನೇಜರ್‌ ಕಿರುಕುಳ – ಕೆರೆಗೆ ಹಾರಿ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಕರ್ನಾಟಕ ನಾಗರಿಕ ಸೇವಾ 1957ರ ನಿಯಮದಡಿ ಕಲ್ಪಿಸಿರುವ ಅವಕಾಶಗಳ ಮೇರೆಗೆ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಿದ್ದು, ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

  • ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

    ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

    – ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಹೊಡೆತ

    ಗದಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ಬೆನ್ನಲ್ಲೇ, ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. 1 ಲಕ್ಷ ರೂ ಸಾಲದ ಬಡ್ಡಿ ನೀಡದ್ದಕ್ಕೆ ಮನಬಂದಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಗರದ ಬೆಟಗೇರಿಯಲ್ಲಿ (Gadag Betageri) ನಡೆದಿದೆ.

    ದಶರಥ ಬಳ್ಳಾರಿ ಮೇಲೆ ನಾಲ್ಕು ಜನ ಸೇರಿ ಮಾರಣಾಂತಿಕ ಮನಬಂದಂತೆ ಹಲ್ಲೆಮಾಡಿದ್ದಾರೆ. ಬೆಟಗೇರಿ ನಿವಾಸಿ ದಶರಥ ಅವರು ಮಂಜುನಾಥ ಹಂಸನೂರ ಎಂಬಾತನ ಬಳಿ ಎರಡು ವರ್ಷದ ಹಿಂದೆ 1 ಲಕ್ಷ ರೂ.ಹಣ ಪಡೆದಿದ್ದರು. ಈ ಸಾಲಕ್ಕೆ ಅವರಿಗೆ ಬಡ್ಡಿ ಸಹ ನೀಡುತ್ತಾ ಬಂದಿದ್ದರು.  ಇದನ್ನೂ ಓದಿ:ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು

    ಇತ್ತೀಚೆಗೆ ಕೆಲಸ ಇಲ್ಲದಕ್ಕೆ ಬಡ್ಡಿ ಹಣ ತುಂಬಲು ವಿಳಂಬ ಮಾಡಿದ್ದಾರೆ. ವಿಳಂಬ ಮಾಡಿದ್ದಕ್ಕೆ ಜ.21 ರಂದು ರಾತ್ರಿ ದಶರಥ ಅವರನ್ನು ಸೆಟಲ್ಮೆಂಟ್ ನಗರದ ಮನೆಯೊಂದರಲ್ಲಿ ಕರೆದೊಯ್ದ ಚಿತ್ರ ಹಿಂಸೆ ನೀಡಿದ್ದಾರೆ.

    ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು ಹಾಗೂ ಹನುಮಂತ ಕ್ರೌರ್ಯ ಮೆರೆದಿದ್ದಾರೆ. ದಶರಥ ಅವರನ್ನು ಕೂಡಿಹಾಕಿ ಬಟ್ಟೆ ಬಿಚ್ಚಿ, ಬಾಯಿ ಬಟ್ಟೆ ತುಂಬಿ ಕುಡಿಯುತ್ತಾ ರಾತ್ರಿ 10 ಗಂಟೆಗೆ ಹೊಡೆಯಲು ಆರಂಭಿಸಿದವರು ತಡರಾತ್ರಿ 3 ಗಂಟೆಯವರೆಗೆ ಹಲ್ಲೆ ಮಾಡಿದ್ದಾರೆ. ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಮೈ, ಕೈ, ಕಾಲು, ಬೆನ್ನು, ಮುಖ, ತಲೆ ಎಲ್ಲಾ ಬಾಸುಂಡೆ ಬರುವಂತೆ ಚಿತ್ರ ಹಿಂಸೆ ಕೊಟ್ಟಿದ್ದಾರೆ.

    ನಸುಕಿನ ಜಾವ 3 ಗಂಟೆ ನಂತರ ಅವರನ್ನು ತಳ್ಳಿ ಬಾಗಿಲು ಹಾಕಿಕೊಂಡು ದಶರಥ ಮನೆಗೆ ಬಂದಿದ್ದಾರೆ. ಈಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಜ.23 ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

    ಗದಗ| ನೀರಿನ ಪೈಪ್‌ಲೈನ್ ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

    ಗದಗ: ಜಿಲ್ಲೆಯಲ್ಲಿ ಅವಳಿ ನಗರದ 24 x 7 ಪೈಪ್‌ಲೈನ್ (Pipeline) ದುರಸ್ತಿ ವೇಳೆ ಮಣ್ಣು ಕುಸಿದು ಕಾರ್ಮಿಕರನೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡ ಘಟನೆ ನಗರದ ಕೋರ್ಟ್ ಸರ್ಕಲ್ ಬಳಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡಿದ್ದ ಕಾರ್ಮಿಕ ನಜೀರ್ ಸಾಬ್ (44) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮತ್ತೋರ್ವ ಕಾರ್ಮಿಕ ಮಂಜುನಾಥ್ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ದೆಹಲಿಯ CRPF ಶಾಲೆ ಬಳಿ ಭಾರೀ ಸ್ಫೋಟ

    ನಗರದ ಕೋರ್ಟ್ ಸರ್ಕಲ್ ಬಳಿ ಗ್ಯಾಸ್ ಪೈಪ್‌ಲೈನ್ ದುರಸ್ತಿ ವೇಳೆ, ಗದಗ-ಬೆಟಗೇರಿ ಅವಳಿ ನಗರದ 24 x 7 ಪೈಪ್‌ಲೈನ್ ಹಾನಿ ಆಗಿತ್ತು. ಶನಿವಾರ ರಾತ್ರಿ ಆ ನೀರಿನ ಪೈಪ್ ದುರಸ್ತಿ ಮಾಡಲು ಈ ಇಬ್ಬರು ಕಾರ್ಮಿಕರು ಮುಂದಾಗಿದ್ದರು. ಏಕಾಏಕಿ ಭೂಮಿ ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಸ್ಥಳೀಯರ ಕಾರ್ಯಾಚರಣೆ ಮೂಲಕ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ನಜೀರಸಾಬ್ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮಂಗಳೂರು| ಮನೆಯೊಳಗೆ ಏಕಾಏಕಿ ನುಗ್ಗಿದ ಚಿರತೆ

    ಈ ಘಟನೆಗೆ ನಗರಸಭೆ ಅಧಿಕಾರಿಗಳು, ನಗರಸಭೆ ಇಂಜಿನಿಯರ್ ಬಂಡಿವಡ್ಡರ್ ಹಾಗೂ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಂಪನಿ ಕಾರಣ ಎಂಬುದು ಮೃತನ ಕುಟುಂಬಸ್ಥರ ಆರೋಪವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆದಷ್ಟು ಬೇಗ ಡಿಕೆಶಿ ಸಿಎಂ ಆಗಲಿದ್ದಾರೆ- ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಫೋಟಕ ಹೇಳಿಕೆ

  • ನಗರಸಭೆ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿದ ಸದಸ್ಯರು

    ನಗರಸಭೆ ಕಚೇರಿಯಲ್ಲೇ ಕೈ ಕೈ ಮಿಲಾಯಿಸಿದ ಸದಸ್ಯರು

    ಗದಗ: ನಗರಸಭೆ ಕಚೇರಿಯಲ್ಲೇ (Municipal Office) ಸದಸ್ಯರು ಕೈ ಕೈ ಮಿಲಾಯಿಸಿರುವ ಘಟನೆ ಗದಗ (Gadag) ಜಿಲ್ಲೆಯ ಬೆಟಗೇರಿ (Betageri) ನಗರ ಸಭೆಯಲ್ಲಿ ನಡೆದಿದೆ.

    ಕಾಂಗ್ರೆಸ್ ಸದಸ್ಯ ಜೈನುಲಾದ್ದಿನ್ ನಮಾಜಿ ಹಾಗೂ ಬಿಜೆಪಿ ಸದಸ್ಯೆ ವಿಜಯಲಕ್ಷ್ಮಿ ದಿಂಡೂರ ಪತಿ ಶಶಿಧರ್ ನಡುವೆ ಜಗಳ ಏರ್ಪಟ್ಟಿದೆ. ಶಶಿಧರ್ ಅವರು ಸಚಿವ ಹೆಚ್‌ಕೆ ಪಾಟೀಲ್‌ಗೆ ಏಕವಚನದಲ್ಲಿ ಮಾತನಾಡಿದ್ದಾಗಿ ಆರೋಪಿಸಲಾಗಿದ್ದು, ಈ ಹಿನ್ನೆಲೆ ಜಗಳ ಪ್ರಾರಂಭವಾಗಿದೆ. ಇದನ್ನೂ ಓದಿ: ಅಘೋಷಿತ ಲೋಡ್ ಶೆಡ್ಡಿಂಗ್, ಅಕ್ಕಪಕ್ಕದ ರಾಜ್ಯದಿಂದ ವಿದ್ಯುತ್ ಖರೀದಿಸಿ ಕೊಡಲಿ: ಬಿವೈ ರಾಘವೇಂದ್ರ ಒತ್ತಾಯ

    ಗದಗ ನಗರಸಭೆ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕರ ಎದುರಲ್ಲೇ ಸದಸ್ಯರು ಜಗಳವಾಡಿದ್ದು, ಅಲ್ಲೇ ಇದ್ದ ಅಧಿಕಾರಿಗಳು ಹಾಗೂ ಇತರ ಸದಸ್ಯರು ಜಗಳ ಬಿಡಿಸಿ ಸಮಾಧಾನ ಮಾಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: Emergency Alert Test- ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

    ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣ ಕೊಲೆಯಾದ

    ಗದಗ: ತಂಗಿಯನ್ನು ಭೇಟಿಯಾಗಲು ಬಂದಿದ್ದ ಅಣ್ಣನನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಗದಗನ ಬೆಟಗೇರಿಯ ಶರಣ ಬಸವೇಶ್ವರ ನಗರದಲ್ಲಿ ನಡೆದಿದೆ.

    ಗದಗ ತಾಲೂಕಿನ ಹರ್ತಿ ಗ್ರಾಮದ 42 ವರ್ಷದ ಆನಂದ ಭಜಂತ್ರಿ ಕೊಲೆಯಾದ ವ್ಯಕ್ತಿ. ಆನಂದ್ ಎರಡು ದಿನಗಳ ಹಿಂದೆ ತಂಗಿಯನ್ನು ಭೇಟಿಯಾಗಲು ಬೆಟಗೇರಿಗೆ ಬಂದಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮನೆಯ ಹತ್ತಿರದ ಖಾಲಿಯಿರುವ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಲಗಿದ್ದರು. ಆನಂದ್ ನಿದ್ರೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ತಲೆ, ಮುಖದ ಭಾಗದ ಜಜ್ಜಿ ಕೊಲೆಮಾಡಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಬೆಟಗೇರಿ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಬೆಟಗೇರಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದ ಗೋವುಗಳು- ಸ್ಥಳೀಯರಿಂದ ರಕ್ಷಣೆ

    ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದ ಗೋವುಗಳು- ಸ್ಥಳೀಯರಿಂದ ರಕ್ಷಣೆ

    ಗದಗ: ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆಂದು ತೆಗೆದ ಆಳವಾದ ಗುಂಡಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೋವುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ಬೆಟಗೇರಿಯಲ್ಲಿ ನಡೆದಿದೆ.

    ಮಾರುಕಟ್ಟೆಯ ಆವರಣದಲ್ಲಿ ಕಾಲಮ್ ನಿರ್ಮಾಣಕ್ಕಾಗಿ 15 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಈ ಗುಂಡಿಯಲ್ಲಿ ಬೆಳಗಿನ ಜಾವ ಎರಡು ಆಕಳು ಬಿದ್ದು ಒದ್ದಾಡುತ್ತಿದ್ದವು. ಕೊನೆಗೆ ಸ್ಥಳೀಯರು ಗುಂಡಿಯಲ್ಲಿ ಇಳಿದು ಗೋವುಗಳ ಕಾಲಿಗೆ ಹಗ್ಗ ಕಟ್ಟಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

    ಮಾರ್ಚ್ 1 ರಂದು ಎರಡು ಆಕಳುಗಳು ಇದೇ ಗುಂಡಿಯಲ್ಲಿ ಬಿದ್ದಿದ್ದವು. ಅಂದು ಕೂಡ ಸ್ಥಳೀಯರೇ ರಕ್ಷಿಸಿದ್ದರು. ಎರಡು ಗಂಟೆಗಳಿಂದ ಮೂಕ ಪ್ರಾಣಿಗಳು ನರಳಾಡಿದ್ರೂ ರಕ್ಷಣೆಗೆ ಬಾರದ ನಗರಸಭೆ ಸಿಬ್ಬಂದಿ ಹಾಗೂ ಗುತ್ತಿಗೆದಾರರ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

    ಸಾಕಷ್ಟು ಬಾರಿ ಆಕಳು ಹಾಗೂ ನಾಯಿ ಹೀಗೆ ಅನೇಕ ಪ್ರಾಣಿಗಳು ಗುಂಡಿಯಲ್ಲಿ ಬೀಳುತ್ತಿವೆ. ಅಧಿಕಾರಿಗಳು ಮಾತ್ರ ಇದರತ್ತ ಗಮನ ಹರಿಸದೇ ಇರುವುದು ಬೇಸರದ ಸಂಗತಿ. ಮಾರುಕಟ್ಟೆಗೆ ಬರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಗುಂಡಿಯಲ್ಲಿ ಬಿದ್ದರೆ ಯಾರು ಹೊಣೆ? ಕೂಡಲೇ ಕಾಮಗಾರಿ ಪ್ರಾರಂಭ ಮಾಡಬೇಕು. ಇಲ್ಲವಾದ್ರೆ ಮುಂದಾಗುವ ಅನಾಹುತಗಳಿಗೆ ನಗರಸಭೆ ಹಾಗೂ ಗುತ್ತಿಗೆದಾರರೇ ಕಾರಣವಾಗಬೇಕಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.