Tag: ಬೆಂಜ್ ಕಾರು

  • ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಜ್ ಕಾರು – ಚಾಲಕ ಸಾವು

    ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೆಂಜ್ ಕಾರು – ಚಾಲಕ ಸಾವು

    ಮಂಗಳೂರು: ನಿಯಂತ್ರಣ ಕಳೆದುಕೊಂಡ ಬೆಂಜ್ ಕಾರೊಂದು (Benz Car) ಅಪಘಾತಕ್ಕೀಡಾಗಿ ಚಾಲಕ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿ (Ujire)ನಡೆದಿದೆ.

    ಅಪಘಾತದಲ್ಲಿ ಕಾರು ಚಾಲಕ ಉಜಿರೆ ನಿವಾಸಿ ಪ್ರಜ್ವಲ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಉರುಳಿ ಬಿದ್ದಿತ್ತು. ಅಪಘಾತದ ತೀವ್ರತೆಗೆ ಐಷಾರಾಮಿ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಚೀನಾ ಗಡಿ ಭಾಗದಲ್ಲಿ ನದಿ ದಾಟುವಾಗ ಟ್ಯಾಂಕ್‌ ಅಪಘಾತ – ಐವರು ಭಾರತೀಯ ಯೋಧರು ಹುತಾತ್ಮ

    ತಕ್ಷಣ ಸ್ಥಳೀಯರು ಪ್ರಜ್ವಲ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 13ನೇ ವಯಸ್ಸಿಗೆ ಬಾಲಕಿ ಗರ್ಭಿಣಿ – ಹೊಟ್ಟೆನೋವಿನಿಂದ ಸಾವು

  • ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ

    ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ

    ಬೆಂಗಳೂರು: ಬೆಂಜ್ ಗುದ್ದಿದ ರಭಸಕ್ಕೆ 4 ವಾಹನಗಳು ಜಖಂಗೊಂಡು ಓರ್ವ ಸಾವನ್ನಪ್ಪಿದ ಘಟನೆ ಬೆಂಗಳೂರಿನ ತಿಪ್ಪಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಆಲ್ಟೋ ಕಾರಿನಲ್ಲಿದ್ದ ಹರಿ ಮಂಹತ್ ಮೃತರಾಗಿದ್ದಾರೆ. ವೇಗವಾಗಿ ಬಂದ ಬೆಂಜ್ ಮೊದಲಿಗೆ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಎರಡು ಬೈಕ್‍ಗಳಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಆಲ್ಟೊ ಕಾರು ನುಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಹಿನ್ನೆಲೆ ಸಣ್ಣಪುಟ್ಟ ಗಾಯಗಳೊಂದಿಗೆ ಬೆಂಜ್ ಕಾರ್‌ನಲ್ಲಿದ್ದವರು ಪಾರಾಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

    ನಂದಿತಾ ಚೌಂದ್ರಿ ಅವರಿಗೆ ಈ ಬೆಂಜ್ ಕಾರು ಸೇರಿದೆ. ಬೆಂಜ್ ಕಾರಿನ ಚಾಲಕನ ಅತಿ ವೇಗದಿಂದಲೇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ಇಂದಿರಾ ನಗರ ಪೊಲೀಸರು ದೌಡಾಯಿಸಿ ರಕ್ತ ಸಿಕ್ತವಾಗಿರೋ ಚಾಲಕರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    ಬೆಂಜ್ ಕಾರು ಗುದ್ದಿದ ರಭಸಕ್ಕೆ ಮುಂದೆ ಇದ್ದ  ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿವೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

  • ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್

    ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್

    ಬೆಂಗಳೂರು: ಡಿಸೆಂಬರ್ 9ಕ್ಕೆ ಯಶ್-ರಾಧಿಕಾ ದಂಪತಿಗೆ ಮೊದಲ ಮದುವೆ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ನಟ ಯಶ್ ಮೂರು ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ.

    ಬೆಂಗಳೂರಿನ ಶೋರೂಂಗೆ ಬುಧವಾರದಂದು ಭೇಟಿ ನೀಡಿದ ಯಶ್ ಮೂರು ಟಾಪ್ ಎಂಡ್ ಮಾಡಲ್ ಕಾರು ಖರೀದಿ ಮಾಡಿದ್ದಾರೆ. ಬೆಂಜ್ ಜಿಎಲ್‍ಸಿ, ಬೆಂಜ್ ಇ ಕ್ಲಾಸ್, ಬೆಂಜ್ ಬಿಎಲ್‍ಸಿ ಎಎಂಜಿ ಕಾರುಗಳನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಬೆಂಜ್ ಇ ಕ್ಲಾಸ್ ಕಾರು ಅಪ್ಪ-ಅಮ್ಮನಿಗೆ, ಬೆಂಜ್ ಜಿಎಲ್‍ಸಿ ಪತ್ನಿ ರಾಧಿಕಾಗೆ ಹಾಗೂ ಬೆಂಜ್ ಬಿಎಲ್‍ಸಿ ಎಎಂಜಿ ಕಾರನ್ನು ತಮಗಾಗಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದಾರೆ.

    ಒಂದೇ ಶೋರೂಮಿನಲ್ಲಿ ಮೂರು ಕಾರ್ ಖರೀದಿಸಿದ ಮೊದಲಿಗರು ಯಶ್ ಆಗಿದ್ದಾರೆ. ಕಾರುಗಳಿಗೆ ನಿರ್ದಿಷ್ಟವಾಗಿ ಎಷ್ಟು ಖರ್ಚಾಗಿದೆ ಎಂದು ತಿಳಿದುಬಂದಿಲ್ಲ. ಆದ್ರೆ ಮಾರುಕಟ್ಟೆ ಮೌಲ್ಯದ ಪ್ರಕಾರ ಬೆಂಜ್ ಇ ಕ್ಲಾಸ್ ಕಾರು 77 ಲಕ್ಷ ರೂ., ಬೆಂಜ್ ಜಿಎಲ್‍ಎಸ್ ಕಾರು 1.10 ಕೋಟಿ ರೂ. ಹಾಗೂ ಬೆಂಜ್ ಜಿಎಸ್‍ಸಿ ಎಎಮ್‍ಜಿ ಕಾರು 92 ಲಕ್ಷ ರೂ. ಬೆಲೆಯದ್ದಾಗಿದೆ.

    ಮೊದಲ ವಾರ್ಷಿಕೋತ್ಸವ ಆಚರಿಸಲು ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಪ್ರತಿದಿನ ಗುಡ್ ನ್ಯೂಸ್ ಕೊಡಲು ಆರಂಭಿಸಿದ್ದಾರೆ. ಗುಡ್‍ನ್ಯೂಸ್ ಎಂದರೆ ಹೊಸ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಯಾವುದೇ ಮಾಹಿತಿ ತಿಳಿಸುತ್ತಿಲ್ಲ. ಬದಲಾಗಿ ಮದುವೆಯ ತಯಾರಿ, ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ ಮತ್ತು ಸಣ್ಣ ವಿಡಿಯೋಗಳನ್ನು ಫೇಸ್‍ಬುಕ್ ನಲ್ಲಿ ಶೇರ್ ಮಾಡುತ್ತಿದ್ದಾರೆ.

    ಕಳೆದ ಡಿಸೆಂಬರ್ ಡಿಸೆಂಬರ್ 9 ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ರವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.