Tag: ಬೆಂಗಾಲಿ

  • ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ವಿಧಿವಶ

    ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ ವಿಧಿವಶ

    ‘ಪಥೇರ್ ಪಾಂಚಾಲಿ’ ಚಿತ್ರದಲ್ಲಿ ದುರ್ಗಾ ಪಾತ್ರದಲ್ಲಿ ಮಿಂಚಿದ್ದ ಬೆಂಗಾಲಿ ನಟಿ ಉಮಾ ದಾಸ್‌ಗುಪ್ತಾ (Uma Dasgupta) ನಿಧನರಾಗಿದ್ದಾರೆ. ನಟಿಯ ನಿಧನಕ್ಕೆ ಚಿತ್ರರಂಗದ ನಟ, ನಟಿಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್‌ಗೆ ‘ಭಜರಂಗಿ’ ಹರ್ಷ ಆ್ಯಕ್ಷನ್ ಕಟ್- ಪೋಸ್ಟರ್ ಔಟ್

    ಉಮಾ ದಾಸ್‌ಗುಪ್ತಾ ಅವರು ಕಳೆದ ಕೆಲವು ವರ್ಷಗಳಿಂದ ಕಾನ್ಸರ್‌ನಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದರು. ಇದೀಗ ಚಿಕಿತ್ಸೆ ಫಲಿಸದೇ ಉಮಾ ನ.18ರ ಬೆಳಿಗ್ಗೆ 8 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

    ಅಂದಹಾಗೆ,’ಪಥೇರ್ ಪಾಂಚಾಲಿ’ ಹೆಸರಿನ ಬಂಗಾಲಿ ಕಾದಂಬರಿಯನ್ನೇ ನಿರ್ದೇಶಕ ಸತ್ಯಜಿತ್ ರೇ ಸಿನಿಮಾ ಮಾಡಿದ್ದರು. ಇದು ಅವರ ಚೊಚ್ಚಲ ಚಿತ್ರವಾಗಿತ್ತು. 1955ರಲ್ಲಿ ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಮೆಚ್ಚುಗೆಯನ್ನು ಪಡೆಯಿತು. ಈ ಚಿತ್ರವನ್ನು ಆಗಿನ ಪಶ್ಚಿಮ ಬಂಗಾಲ ಸರ್ಕಾರವೇ ನಿರ್ಮಾಣ ಮಾಡಿತ್ತು. ಉಮಾ ಅವರ ಜೊತೆಗೆ ಸುಬೀರ್ ಬ್ಯಾನರ್ಜಿ, ಕನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಪಿನಕಿ ಸೇನ್‌ಗುಪ್ತ ಮುಖ್ಯಭೂಮಿಕೆಯಲ್ಲಿದ್ದರು. ಇದರ ನಂತರ ಉಮಾ ಹಲವು ಸಿನಿಮಾಗಳಲ್ಲಿ ನಟಿಸಿದರು.

  • ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ

    ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ

    ಟಿ ಸ್ವಸ್ತಿಕಾ (Swastika) ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಆತನ ವಿರುದ್ಧ ದೂರು ಕೂಡ ನೀಡಿದ್ದಾರೆ. ಈ ದೂರು ಬೆಂಗಾಲಿ (Bengali) ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಿರ್ಮಾಪಕ ಸಂದೀಪ್ ಸರ್ಕಾರ್ (Sandeep) ಎನ್ನುವವರು ಯಾರು ಎಂಬುದು ಗೊತ್ತಿಲ್ಲದಿದ್ದರೂ, ಬೆದರಿಕೆಯ ಇ ಮೇಲ್ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಬೆಂಗಾಲಿ ನಟಿ ಸ್ವಸ್ತಿಕಾ ಇತ್ತೀಚೆಗಷ್ಟೇ ‘ಶಿಬ್ತುರ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ಮಾಪಕನೇ ಸಂದೀಪ್ ಸರ್ಕಾರ್. ಸಿನಿಮಾ ಮುಗಿಯುವತನಕ ಸಂದೀಪ್ ಒಂದು ಬಾರಿಯೂ ಆ ನಟಿಯೊಟ್ಟಿಗೆ ಮಾತನಾಡಿಲ್ಲವಂತೆ. ಮುಖ ಕೂಡ ನೋಡಿಲ್ಲವಂತೆ. ಸಿನಿಮಾ ಮುಗಿದ ನಂತರ ಇ ಮೇಲ್ ಮೂಲಕ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದಾರಂತೆ. ಅವರು ಅಮೆರಿಕಾದ ನಿವಾಸಿಯಾಗಿದ್ದು, ಅಲ್ಲಿಂದಲೇ ಹಲವು ಇಮೇಲ್ ಗಳನ್ನು ಬರೆದಿದ್ದಾರಂತೆ. ಇದನ್ನೂ ಓದಿ: ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ಸಿನಿಮಾ ಶೂಟಿಂಗ್ ಮುಗಿದ ನಂತರ ನನಗೆ ಇಮೇಲ್ ಮೂಲಕ ಸಂದೀಪ್ ಸಂಪರ್ಕಿಸಿದರು. ತಾವು ಅಮೆರಿಕಾ ನಿವಾಸಿಯಾಗಿದ್ದು, ತಮ್ಮೊಂದಿಗೆ ಸಹಕರಿಸಿದರೆ ಅಮೆರಿಕಾ ವೀಸಾ ಕೊಡಿಸುವೆ. ಅಲ್ಲದೇ, ತಮಗೆ ಪೊಲೀಸ್ ಅಧಿಕಾರಿಗಳು ಗೊತ್ತು, ಅವರಿಂದ ತೊಂದರೆ ಮಾಡಿಸುತ್ತೇನೆ. ಸಹಕರಿಸಿದರೆ ನಿಮಗೆ ಬೇಕಾದ ಸಹಾಯ ಮಾಡುವೆ ಎಂದು ಸಂದೀಪ್ ಆಮಿಷವೊಡ್ಡಿದ್ದಾನೆ ಎಂದು ನಟಿ ಹೇಳಿಕೊಂಡಿದ್ದಾರೆ.

    ಸ್ವಸ್ತಿಕಾಗೆ ಮಾತ್ರವಲ್ಲ ಅವರ ಮ್ಯಾನೇಜರ್ ಗೂ ಸಂದೀಪ್ ಬೆದರಿಕೆಯ  ಇ ಮೇಲ್ ಕಳುಹಿಸಿದ್ದಾನೆ ಎಂದು ದೆಹಲಿ (Delhi) ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಸ್ತಿಕಾ ತಿಳಿಸಿದ್ದಾರೆ. ನನ್ನ ಫೋಟೋ ಎಡಿಟ್ ಮಾಡಿ, ಇ ಮೇಲ್ ಹ್ಯಾಕ್ ಮಾಡುವುದಾಗಿಯೂ ಸಂದೀಪ್ ಬೆದರಿಸಿದ್ದಾನಂತೆ. ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

  • ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು

    ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾವನ್ನು ಜಗತ್ತೇ ಹಾಡಿ ಹೊಗಳುತ್ತಿರುವ ಸಂದರ್ಭದಲ್ಲಿ ಬಂಗಾಲಿ (Bengali) ಸಿನಿಮಾ ನಿರ್ದೇಶಕ ಅಭಿರೂಪ್ ಬಸು (Abhiroop Basu) ಹಾಸ್ಯಾಸ್ಪದವಾಗಿ ಟೀಕೆ ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಿನಿಮಾವಾಗಿದ್ದು, ಅತ್ಯಂತ ಕಳಪೆ ರೀತಿಯ ಕಥೆಯನ್ನು ಹೊಂದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ, ಅಪ್ರಮಾಣಿಕವಾಗಿ ಕಥೆಯನ್ನು ಹೆಣೆಯಲಾಗಿದೆ ಎಂದೂ ಅವರು ಬರೆದಿದ್ದಾರೆ.

    ಜಗತ್ತಿನ ಜನರು ಬುದ್ದಿವಂತರು. ಅವರ ಬುದ್ದಿವಂತಿಕೆಯನ್ನೇ ಈ ಸಿನಿಮಾ ಅನುಮಾನಿಸುತ್ತದೆ ಮತ್ತು ಅಣಕಿಸುತ್ತದೆ ಎಂದಿರುವ ಅವರು, ಕಥೆಯಲ್ಲಿ ಪ್ರಾಮಾಣಿಕತೆಗಿಂತ ಗಿಮಿಕ್ ಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಎಲ್ಲರೂ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡುತ್ತಾರೆ. ನನಗೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಅಥವಾ ಆಸಕ್ತಿ ಉಳಿಯಲೇ ಇಲ್ಲವೆಂದು ಅವರು ದೀರ್ಘವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಅಭಿರೂಪ್ ಬಸು ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಜನರು ವಿರೋಧ ವ್ಯಕ್ತ ಪಡಿಸಿದ್ದಾರೆ. ಅತ್ಯಂತ ಪ್ರತಿಭಾವಂತ ಹಿರಿಯ ನಟರು, ನಿರ್ದೇಶಕರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿರುವಾಗ ನಿಮ್ಮ ಕೊಳಕು ಮನಸ್ಸಿನಿಂದ ಆಚೆ ಬನ್ನಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಸಿನಿಮಾ ಗೆಲುವನ್ನು ನಿಮ್ಮಿಂದ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ.

    ರಜನಿಕಾಂತ್, ಕಂಗನಾ ರಣಾವತ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕರು ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಅದ್ಭುತ ಸಿನಿಮಾ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ರಿಷಬ್ ಶೆಟ್ಟಿಯನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಗೌರವಿಸಿದ್ದಾರೆ ರಜನಿಕಾಂತ್ ಈ ಹೊತ್ತಿನಲ್ಲಿ ಬಂಗಾಲದ ಸಿನಿಮಾ ನಿರ್ದೇಶಕ ಅಭಿರೂಪ್ ಬಸು, ನೆಗೆಟಿವ್ ಕಾಮೆಂಟ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

    ಹಿರಿಯನಟ ರೈ ಮೋಹನ್ ಶವವಾಗಿ ಮನೆಯಲ್ಲಿ ಪತ್ತೆ

    ಮೊನ್ನೆಯಷ್ಟೇ ಒಡಿಶಾದ ಯುವ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಾವಿನ ಸುದ್ದಿ ಇನ್ನೂ ಮಾಸುವ ಮುನ್ನವೇ ಹಿರಿಯ ಒಡಿಯಾ ನಟ ರೈ ಮೋಹನ್ ಪರಿದಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭುವನೇಶ್ವರದಲ್ಲಿರುವ ಅವರ ಮನೆಯಲ್ಲಿ ಇಂದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಒಡಿಯಾ ಸಿನಿಮಾ ರಂಗದಲ್ಲಿ ಖಳನಟನಾಗಿ ಫೇಮಸ್ ಆಗಿರುವ ರೈಮೋಹನ್ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡಿದ ಬಹುತೇಕ ಪಾತ್ರಗಳ ವಿಲನ್ ಆಗಿದ್ದರೂ, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ ಇವರಾಗಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲವಾದರೂ, ತನಿಖೆ ನಡೆಯುತ್ತಿದೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಬೆಂಗಾಲಿ, ಒಡಿಯಾ ಸಿನಿಮಾಗಳಲ್ಲಿ ನಟಿಸಿರುವ ಇವರು, ನಟನೆಗಾಗಿ ಒಡಿಶಾ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ‘ಹೇ ಅನನಿ’ ಡೈಲಾಗ್ ಮೂಲಕ ಇವರನ್ನು ಅಭಿಮಾನಿಗಳು ಗುರುತಿಸುತ್ತಿದ್ದು, ಪ್ರಾಚಿ ಬಿಹಾರದ ಉದಯ್ ಪುರ ಅಪಾರ್ಟ್ಮೆಂಟ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

    Live Tv

  • ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ದುವೆ ಮನೆಯ ಊಟ ಎಂದರೆ ಎಲ್ಲರಿಗೂ ಇಷ್ಟ. ತರಹೇವಾರಿ ಸಿಹಿತಿಂಡಿಗಳು ಸವಿಯಲು ಸಿಗುತ್ತವೆ. ಇತ್ತೀಚೆಗೆ ಮದುವೆಯನ್ನು ವಿಶೇಷವಾಗಿ ಮಾಡಬೇಕು, ವಿಶೇಷವಾಗಿ ಕಾಣಿಸಿಕೊಳ್ಳಬೇಕು ಎಂದು ವಧು, ವರರು ಪ್ರಯತ್ನಿಸುತ್ತಾರೆ. ಇಲ್ಲೊಂದು ಕುಟುಂಬ ಮರದ ಸ್ಕೇಲ್‍ನಲ್ಲಿ ಮದುವೆಯ ಊಟದ ಮೆನು ಬರೆಸಿರುವುದು ಸಖತ್ ವೈರಲ್ ಆಗಿದೆ.

    2013ರಲ್ಲಿ ನಡೆದ ಬೆಂಗಾಲಿ ಮದುವೆಯೊಂದರ ಊಟದ ಮೆನು ಕಾರ್ಡ್ ಇದಾಗಿದೆ.  ಸುಶ್ಮಿತಾ ಹಾಗೂ ಅನಿಮೇಶ್ ಅವರ ಮದುವೆಯಲ್ಲಿ ಈ ರೀತಿ ಮೆನು ಕಾರ್ಡ್ ತಯಾರಿಸಲಾಗಿದೆ. ಇದನ್ನೂ ಓದಿ: ಹಸುಗೂಸನ್ನು ಹೊತ್ತೊಯ್ದು ವಾಟರ್ ಟ್ಯಾಂಕ್‍ಗೆ ಹಾಕಿದ ಖತರ್ನಾಕ್ ಕೋತಿಗಳು

    ಮೆನು ಕಾರ್ಡ್‍ನಲ್ಲಿ ಏನಿದೆ?: 30 ಸೆಂ ಮೀ ಉದ್ದದ ಸ್ಕೇಲ್‍ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್ ರೈಸ್, ಮಟನ್ ಮಸಾಲಾ, ಫಿಶ್ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ. ಸ್ಟೀರಿಯೋ ಟೈಪ್‍ರೈಟರ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಸ್ಕೆಲ್ ಮೆನುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಹಾರ ತಿಂದಿದ್ದಕ್ಕೆ ಇದೇ ಸ್ಕೇಲಿನಿಂದ ತಿರುಗಿಸಿ ಹೊಡೆಯಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

  • ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಫೇಸ್‍ಬುಕ್ ಲೈವ್ ವೇಳೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟ

    ಚೆನ್ನೈ: ಮಹಾಮಾರಿ ಕೊರೊನಾ ದೇಶವನ್ನು ವಕ್ಕರಿಸಿದ ಬಳಿಕ ಅನೇಕರು ಕೋವಿಡ್ ಗೆ ಬಲಿಯಾದ್ರೆ ಇನ್ನೂ ಕೆಲವರು ಬದುಕುವ ದಾರಿ ಕಾಣದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಬೆಂಗಾಲಿ ಕಿರುತೆರೆ ನಟರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ನಟನನ್ನು ಸುವೋ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ಗೆ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಡಿಕ್ಕಿ – ತುಂಬು ಗರ್ಭಿಣಿ ಸಹಿತ ಮೂವರ ದುರ್ಮರಣ

    ಜೀವನದಲ್ಲಿ ಜಿಗುಪ್ಸೆಗೊಂಡು ನಟ ಫೇಸ್ ಬುಕ್ ಲೈವ್ ನಲ್ಲಿದ್ದಾಗಲೇ ನಿದ್ದೆ ಮಾತ್ರೆ ತೆಗೆದುಕೊಂಡು ಸಾವಿನ ದಾರಿ ಹಿಡಿಯಲು ಮುಂದಾಗಿದ್ದಾರೆ. ಲೈವ್ ನಲ್ಲಿ ನಟ, ಯಾಕೋ ಗೊತ್ತಿಲ್ಲ ನನಗೆ ಕಟ್ಟಡದಿಂದ ಹಾರಿ, ಕೈ ಕಟ್ ಮಾಡಿಕೊಂಡು ಹಿಂಸಾತ್ಮಕವಾಗಿ ಸಾಯಲು ಮನಸ್ಸಿಲ್ಲ. ಇದು ನನಗೆ ಇಷ್ಟನೂ ಇಲ್ಲ. ನನಗೆ ಕೊನೆಯ ಆಯ್ಕೆ ಸಿಕ್ಕಿದ್ದು ನಿದ್ದೆ ಮಾತ್ರೆ. ಹೀಗಾಗಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಯಾರಿಗೆ ಅತೀ ಹೆಚ್ಚು ಬಿಪಿ ಇದೆಯೋ ಅವರು ಹೃದಯಾಘಾತವಾಗಿ ಸಾಯುತ್ತಾರೆ ಎಂದೆಲ್ಲ ಹೇಳಿದ್ದಾರೆ.

    ನಟನ ಮಾತುಗಳನ್ನು ಕೇಳಿದ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಅಲ್ಲದೆ ಅನುಮಾನಗೊಂಡು ಕೂಡಲೇ ಸ್ಥಳೀಯ ಪೊಲಿಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಇತ್ತ ನಟನ ಆತ್ಮಹತ್ಯೆಯ ಯತ್ನದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೀವ ಕಾಪಾಡಿದ್ದಾರೆ. ಸದ್ಯ ನಟನ ಆರೋಗ್ಯ ಸ್ಥಿತಿ ಸುಧಾರಿಸಿದೆ.

    ತನಿಖೆಯ ವೇಳೆ ಕಳೆದ ಆಗಸ್ಟ್ ತಿಂಗಳಿನಿಂದ ಯಾವುದೇ ಅವಕಾಶಗಳು ಸಿಗದೆ ನೊಂದಿರುವುದಾಗಿ ಪೊಲೀಸರ ಮುಂದೆ ನಟ ತಿಳಿಸಿದ್ದಾರೆ. ಮಂಗಳ್ ಚಂಡಿ, ಮಾನಸ ಹೀಗೆ ಹಲವಾರು ಸಿರಿಯಲ್ ಗಳಲ್ಲಿ ಸುವೋ ನಟಿಸಿ ಮನೆ ಮಾತಾಗಿದ್ದಾರೆ.