Tag: ಬೆಂಗಳೂರು ಹೋಟೆಲ್

  • ಬೆಂಗ್ಳೂರಲ್ಲಿ 24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ – ಡಿಸಿಎಂ ಡಿಕೆಶಿಗೆ ಮನವಿ

    ಬೆಂಗ್ಳೂರಲ್ಲಿ 24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ – ಡಿಸಿಎಂ ಡಿಕೆಶಿಗೆ ಮನವಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ರಾಜ್ಯದ ಜನದಟ್ಟಣೆ ಪ್ರದೇಶವಾಗಿದೆ. ITBT ಕಂಪನಿಗಳ ಸಾಮ್ರಾಜ್ಯ, ಜನನಿಬಿಡ ಪ್ರದೇಶವೂ ಆಗಿರುವುದರಿಂದ ಇಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅವಕಾಶ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘ (Hotel Owners Association) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮನವಿ ಮಾಡಿದೆ.

    ಬ್ರ್ಯಾಂಡ್‌ ಬೆಂಗಳೂರು (Brand Bengaluru) ಅಭಿವೃದ್ಧಿಗೆ ಸಲಹೆ ನೀಡಲು ವೆಬ್‌ಪೋರ್ಟಲ್ ಆರಂಭಿಸಿದ ಬೆನ್ನಲ್ಲೇ ಹೋಟೆಲ್ ಮಾಲೀಕರ ನಿಯೋಗ ಡಿಕೆಶಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದೆ. 24 ಗಂಟೆಯೂ ಹೋಟೆಲ್ (Hotel) ತೆರೆಯಲು ಇರುವ ಸಮಸ್ಯೆಗಳನ್ನ ಇತ್ಯರ್ಥ ಮಾಡಿ, ರಾತ್ರಿ ವೇಳೆಯೂ ಹೋಟೆಲ್ ತೆರೆಯಲು ಅವಕಾಶ ನೀಡಬೇಕೆಂದು ಕೋರಿದೆ.

    ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು. 24 ಗಂಟೆಯೂ ಹೋಟೆಲ್ ತೆರಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಇದೆ. ಆದರೆ ಪೋಲಿಸ್ ಇಲಾಖೆ ಅವಕಾಶ ಕೊಡ್ತಿಲ್ಲ. ಪೋಲಿಸ್ ಇಲಾಖೆ ಕೇವಲ ರಾತ್ರಿ 1 ಗಂಟೆಯವರೆಗೆ ಮಾತ್ರ ಹೋಟೆಲ್ ತೆರೆಯಲು ಅವಕಾಶ ನೀಡಿದೆ. ಆದ್ದರಿಂದ ನಮಗೂ ಕೇರಳ, ದೆಹಲಿ, ತಮಿಳುನಾಡು, ಗುಜರಾತ್ ಮಾದರಿಯಲ್ಲಿ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶ ನೀಡಬೇಕು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    ಹಾಲು, ತರಕಾರಿ, ಹೂವು, ಹಣ್ಣು, ದಿನಪತ್ರಿಕೆ ಮಾರುವವರು, ಪೋಲಿಸ್, ವೈದ್ಯಕೀಯ ಸಿಬ್ಬಂದಿ, ಶಿಫ್ಟ್ ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ರಾತ್ರಿ ಆಹಾರ ಅಗತ್ಯವಿದೆ. ಜನರಿಗೆ ಕುಡಿಯುವ ನೀರು, ಶೌಚಾಲಯಗಳನ್ನು ಉಚಿತವಾಗಿ ಪೂರೈಸುತ್ತೇವೆ. ರಾತ್ರಿ ಹೋಟೆಲ್ ತೆರೆಯುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಆದ್ದರಿಂದ ಸರ್ಕಾರ 24 ಗಂಟೆ ಹೋಟೆಲ್ ತೆರೆಯಲು ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿರುವ ಡಿ.ಕೆ ಶಿವಕುಮಾರ್ ಅವರು, ಶೀಘ್ರದಲ್ಲೇ ಸಭೆ ಕರೆಯುತ್ತೇವೆಂದು ತಿಳಿಸಿರುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಗೆಲ್ಲಲು ವಿರೋಧ ಪಕ್ಷಗಳು ಸಜ್ಜು – ಬಿಜೆಪಿ ಸೋಲಿಸಲು ಇಂದು ಬಿಹಾರದಲ್ಲಿ ಹೈವೋಲ್ಟೇಜ್ ಸಭೆ

  • ಸ್ಮೋಕಿಂಗ್ ಝೋನ್ ನಿರ್ಮಿಸದ ಬೆಂಗ್ಳೂರಿನ 378 ಹೋಟೆಲ್‌ಗಳಿಗೆ BBMP ನೋಟಿಸ್‌

    ಸ್ಮೋಕಿಂಗ್ ಝೋನ್ ನಿರ್ಮಿಸದ ಬೆಂಗ್ಳೂರಿನ 378 ಹೋಟೆಲ್‌ಗಳಿಗೆ BBMP ನೋಟಿಸ್‌

    ಬೆಂಗಳೂರು: 30ಕ್ಕೂ ಹೆಚ್ಚು ಹಾಸನಗಳಿರುವ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್ (Smoking Zone) ನಿರ್ಮಿಸದೇ ನಿಯಮ ಉಲ್ಲಂಘನೆ ಮಾಡಿರುವ ನಗರದ 378 ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (BBMP) ನೋಟಿಸ್ ಜಾರಿಗೊಳಿಸಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಡೆಗಟ್ಟಲು ಅದರಲ್ಲೂ ಹೋಟೆಲ್ (Hotel) ಮತ್ತು ರೆಸ್ಟೋರೆಂಟ್ ಗಳಲ್ಲಿ ಧೂಮಪಾನ ನಿಯಂತ್ರಣಕ್ಕೆ ತರಲು ಬಿಬಿಎಂಪಿ ಸ್ಮೋಕಿಂಗ್ ಝೂನ್ ನಿಯಮ ಜಾರಿಗೆ ತಂದಿತು. ಇದನ್ನೂ ಓದಿ: ಸಿಲಿಂಡರ್‌ ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

    ಈ ನಿಯಮದ ಅನ್ವಯ 30ಕ್ಕಿಂತ ಹೆಚ್ಚು ಹಾಸನಗಳಿರುವ ಹೋಟೆಲ್ ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಸ್ಮೋಕಿಂಗ್ ಝೂನ್ ನಿರ್ಮಾಣ ಮಾಡಲೇಬೇಕು. ಗ್ರಾಹಕರು ಧೂಮಪಾನ ಮಾಡಬೇಕಿದ್ರೆ ಅಲ್ಲಿಯೇ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂಬ ನಿಯಮ ಜಾರಿ ಮಾಡಿತು. ಆದ್ರೆ ಹೋಟೆಲ್ ಗಳು ನಿಯಮವನ್ನು ಕಡೆಗಣಿಸಿವೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲನೆ ಮಾಡದ 378 ಹೋಟೆಲ್‌ಗಳಿಗೆ ನೋಟೀಸ್ ಜಾರಿಗೊಳಿಸಿದೆ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

    ನಿಯಮ ಉಲ್ಲಂಘಿಸಿದ 400ಕ್ಕೂ ಹೆಚ್ಚು ಹೋಟೆಲ್ ಗಳಿಗೆ ಈಗಾಗಲೇ 1,10,680 ರೂ. ದಂಡ ವಿಧಿಸಲಾಗಿದೆ. ಹುಕ್ಕಾ ಬಾರ್‌ಗಳು ಕೂಡ ಕಡ್ಡಾಯವಾಗಿ ನಿಯಮ ಪಾಲನೆ ಮಾಡಲೇಬೇಕು. ಅನಧಿಕೃತ ಚಟುವಟಿಕೆ ನಡೆಸಬಾರದು ಮತ್ತು ಹುಕ್ಕಾಬಾರ್ ಗಳನ್ನ ನಿಷೇಧ ಮಾಡೋದರ ಬಗ್ಗೆ ಚರ್ಚೆ ಆಗ್ತಾ ಇದ್ದು ಖ್ಯಾತ ವೈದ್ಯರು. ಪರಿಸರ ತಙ್ಞರ ಅಭಿಪ್ರಾಯ ಸಂಗ್ರಹ ಮಾಡ್ತಾ ಇದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

    ಒಟ್ಟಾರೆ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಸ್ಮೋಕಿಂಗ್ ಝೂನ್ ನಿಯಮ ಜಾರಿ ಮಾಡಿದೆ. ಸದ್ಯ ನಿಯಮ ಪಾಲನೆ ಮಾಡದ ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ. ಇದು ಹೀಗೆ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k