Tag: ಬೆಂಗಳೂರು ಸಂಚಾರಿ ಪೊಲೀಸರು

  • ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ

    ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ

    ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟಲು 50% ರಿಯಾಯಿತಿ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಈಗಾಗಲೇ 35.72 ಕೋಟಿ ರೂ. ದಂಡ ಪಾವತಿಯಾಗಿದೆ.

    ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿತ್ತು. ಅದರ ಬೆನ್ನಲ್ಲೇ ಬಾಕಿಯಿದ್ದ 12,70,950 ಕೇಸ್‌ಗಳ ದಂಡ ಪಾವತಿಯಾಗಿದ್ದು. ಈವರೆಗೂ 35.72 ಕೋಟಿ ರೂ. ಸಂಗ್ರಹವಾಗಿದೆ.ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್

    ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

    ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಭಾರೀ ಮೊತ್ತದ ದಂಡ ಸಂಗ್ರಹಿಸಿತ್ತು.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

  • Bengaluru | ಫೆ.10ರಿಂದ ಏರ್ ಶೋ – ರಸ್ತೆಗಳಲ್ಲಿ ಸಂಚಾರ ಮಾರ್ಪಾಡು

    Bengaluru | ಫೆ.10ರಿಂದ ಏರ್ ಶೋ – ರಸ್ತೆಗಳಲ್ಲಿ ಸಂಚಾರ ಮಾರ್ಪಾಡು

    ಬೆಂಗಳೂರು: ನಗರದಲ್ಲಿ ಫೆ.10ರಿಂದ ಏರ್ ಶೋ ಹಿನ್ನೆಲೆ ಏರ್ ಪೋರ್ಟ್ ರಸ್ತೆ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

    ಯಾವ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು:
    ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ ಹಾಗೂ ಬಾಗಲೂರು ಮುಖ್ಯ ರಸ್ತೆಯನ್ನು ಏಕಮುಖ ರಸ್ತೆಯಾಗಿ ಮಾರ್ಪಾಡು ಮಾಡಲಾಗಿದ್ದು, ಜಿಕೆವಿಕೆ ಕ್ಯಾಂಪಸ್‌ನಲ್ಲಿ ಸಾರ್ವಜನಿಕರಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಇದನ್ನೂ ಓದಿ: ‘ಛಾವಾ’ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ರಶ್ಮಿಕಾ ಮಂದಣ್ಣ

    ಏರ್ ಶೋಗೆ ವಾಹನ ಸವಾರರು ಬರುವ ಮಾರ್ಗ:
    ಬೆಂಗಳೂರು ಪೂರ್ವದಿಂದ ಬರುವ ವಾಹನಗಳು: ಕೆ.ಆರ್. ಪುರ- ಬಾಗಲೂರು- ಹೆಣ್ಣೂರು ಕ್ರಾಸ್ – ಕೊತ್ತನೂರು – ಗುಬ್ಬಿ ಕ್ಲಾಸ್ – ಕಣ್ಣೂರು ಆಕ್ ಪಾಳ್ಯ – ವಿದ್ಯಾನಗರ ಕ್ರಾಸ್- ಹುಣಸಮಾರನಹಳ್ಳಿ.

    ಪಶ್ಚಿಮದಿಂದ ಬರುವ ವಾಹನಗಳು:
    ಗೊರಗುಂಟೆಪಾಳ್ಯ- ಉನ್ನಿಕೃಷ್ಣನ್ ರಸ್ತೆ- ಬಿಇಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ- ದೊಡ್ಡಬಳ್ಳಾಪುರ ರಸ್ತೆ- ನಾಗೇನಹಳ್ಳಿ ಗೇಟ್- ಗಂಟಿಗಾನಹಳ್ಳಿ ಸರ್ಕಲ್.

    ದಕ್ಷಿಣದಿಂದ ಬರುವ ವಾಹನಗಳು:
    ಮೈಸೂರು ರಸ್ತೆ- ನಾಯಂಡನಹಳ್ಳಿ- ಚಂದ್ರಾಲೇಔಟ್-ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ- ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್- ಮದರ್ ಡೈರಿ ಜಂಕ್ಷನ್ – ಉನ್ನಿ ಕೃಷ್ಣನ್ ಜಂಕ್ಷನ್ -ದೊಡ್ಡಬಳ್ಳಾಪುರ ಮುಖ್ಯ ರಸ್ತೆ ನಾಗೇನಹಳ್ಳಿ ಗೇಟ್.

    ಲಾರಿ, ಟ್ರಕ್, ಬಸ್ ಹಾಗೂ ಸರಕು ಸಾಗಾಣಿಕೆ ವಾಹನಗಳಿಗೆ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಂಗಳೂರು-ಬಳ್ಳಾರಿ ರಸ್ತೆ, ಮೇಖ್ರಿ ವೃತ್ತದಿಂದ-ಎಂವಿಐಟಿ ಕ್ರಾಸ್‌ವರೆಗೆ, ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ, ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್‌ವರೆಗೆ, ಹಾಗೂ ಹೆಸರಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ನಿಷೇಧಿಸಲಾಗಿದೆ.ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ