Tag: ಬೆಂಗಳೂರು ವಿವಿ

  • ಬಿಬಿಎಂಪಿಯ ಪಂಚ ಪಾಲಿಕೆಗೆ ಆಯುಕ್ತರ ನೇಮಕ – ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

    ಬಿಬಿಎಂಪಿಯ ಪಂಚ ಪಾಲಿಕೆಗೆ ಆಯುಕ್ತರ ನೇಮಕ – ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಅಂಗೀಕಾರ

    – ಬೆಂಗಳೂರು ವಿವಿಗೆ ಡಾ.ಮನಮೋಹನ್ ಸಿಂಗ್ ಹೆಸರು; ವಿಧೇಯಕ ಅಂಗೀಕಾರ

    ಬೆಂಗಳೂರು: ವಿಭಜಿತ ಬಿಬಿಎಂಪಿಯ (BBMP) ಪಂಚ ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಲು ಅವಕಾಶ ಕೊಡುವ ಗ್ರೇಟರ್ ಬೆಂಗಳೂರು (Greater Bengaluru) ಆಡಳಿತ ತಿದ್ದುಪಡಿ  ವಿಧೇಯಕಕ್ಕೆ (Governance Amnedment Bill 2025) ವಿಧಾನಸಭೆಯಲ್ಲಿ (Legislative Assembly) ವಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೂ ಅಂಗೀಕಾರ ಪಡೆದುಕೊಂಡಿತು.

    ವಿಧೇಯಕ ಬಗ್ಗೆ ಸದನದಲ್ಲಿ ವಿವರ ನೀಡಿದ ಡಿಸಿಎಂ ಡಿಕೆಶಿ, ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಿ ಸಮನ್ವಯ ಸಮಿತಿಯಂತೆ ಐದೂ ಪಾಲಿಕೆಗಳು ಕೆಲಸ ಮಾಡಲು ತಿದ್ದುಪಡಿ ತರಲಾಗಿದೆ. ಐದೂ ಪಾಲಿಕೆಗಳ ಆಡಳಿತಾತ್ಮಕ ಹಾಗೂ ನೇಮಕಾತಿ ನಿಯಮಗಳ ರಚನೆ, ನೌಕರರ ನೇಮಕಾತಿ ಹೊಣೆ ಜಿಬಿಎಗೆ ಕೊಡಲು ಅವಕಾಶ ಇದೆ ಎಂದರು. ಇದನ್ನೂ ಓದಿ: ಫೋಟೋದಲ್ಲಿರುವವಳೇ ನನ್ನ ಮಗಳು: ಸುಜಾತ ಭಟ್ ಪ್ರತಿಕ್ರಿಯೆ

    ಆದರೆ ಈ ವಿಧೇಯಕ್ಕೆ ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧಿಸಿದರು. ಶಾಸಕ ಅಶ್ವಥ್ ನಾರಾಯಣ್ ಮಾತಾಡಿ, ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ತಿದ್ದೀರಿ ಎಂದರು. ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ಗ್ರೇಟರ್ ಬೆಂಗಳೂರು ಹೆಸರನ್ನು ಕನ್ನಡದಲ್ಲಿಡುವಂತೆ ಆಗ್ರಹಿಸಿದರು. ಆದರೆ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಪರ ಬಿಜೆಪಿ ಉಚ್ಛಾಟಿತ ಶಾಸಕ ಎಸ್‌ಟಿ ಸೋಮಶೇಖರ್ ಬ್ಯಾಟಿಂಗ್ ನಡೆಸಿದರು. ಸದನದಲ್ಲೇ ಡಿಕೆಶಿಗೂ ಸೋಮಶೇಖರ್ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಷ್ಣು ಸಮಾಧಿ ತೆರವು; ಹೈಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಕೆ

    ಈ ಮಧ್ಯೆ, ಬೆಂಗಳೂರು ನಗರ ವಿವಿಗೆ ಡಾ. ಮನಮೋಹನ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳ್ಳಲಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಇಂದು ಬಿಜೆಪಿಯವರ ವಿರೋಧದ ಮಧ್ಯೆಯೂ ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆದುಕೊಂಡಿತು. ಇದನ್ನೂ ಓದಿ: ಸುಜಾತಾ ಭಟ್‌ಗೆ ಮಗಳೇ ಇರಲಿಲ್ಲ ಎಂದ ನೆರೆಹೊರೆಯವರು

  • ಬೆಂಗಳೂರು ವಿವಿ ಆವರಣದಲ್ಲಿ ಇನ್ಮುಂದೆ ಕಸ ಹಾಕಿದ್ರೆ ಬೀಳುತ್ತೆ ದಂಡ

    ಬೆಂಗಳೂರು ವಿವಿ ಆವರಣದಲ್ಲಿ ಇನ್ಮುಂದೆ ಕಸ ಹಾಕಿದ್ರೆ ಬೀಳುತ್ತೆ ದಂಡ

    ಬೆಂಗಳೂರು: ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸನ್ನ ಸ್ವಚ್ಛವಾಗಿಡಲು ಬೆಂಗಳೂರು ವಿಶ್ವವಿದ್ಯಾಲಯ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ದಂಡ ಪ್ರಯೋಗಕ್ಕೆ ಮುಂದಾಗಿದೆ.

    ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣವನ್ನ ಈಗಾಗಲೇ ಕಸ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ವಿವಿ ಆವರಣದಲ್ಲಿ ಓಡಾಡುವ ಸಾರ್ವಜನಿಕರು ಮತ್ತು ವಾಹನ ಸವಾರರು ಕಸ ಹಾಕುವುದು, ಪ್ಲಾಸ್ಟಿಕ್ ಹಾಕುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಸ ಹಾಕೋ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸ್ಥಳದಲ್ಲಿ ದಂಡ ಹಾಕುವ ನಿರ್ಧಾರಕ್ಕೆ ವಿವಿ ಬಂದಿದೆ.

    ಕಸ ಹಾಕುವ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಇನ್ನು ಮುಂದೆ ಸ್ಥಳದಲ್ಲೆ ದಂಡ ಹಾಕಲಾಗುತ್ತದೆ. ಒಂದು ವೇಳೆ ದಂಡದ ನಂತರವೂ ಕಸ ಹಾಕೋದು ಮುಂದುವರೆಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ವಿಶ್ವವಿದ್ಯಾಲಯ ನೀಡಿದೆ.

  • ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ

    ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ

    ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ಗೆ (Gurukiran) ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ನಾಳೆ ನಡೆಯಲಿರೋ ಬೆಂಗಳೂರು ವಿವಿಯ 59ನೇ ಘಟಿಕೋತ್ಸವದಲ್ಲಿ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತದೆ ಅಂತ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್ ತಿಳಿಸಿದ್ದಾರೆ.

    ಘಟಿಕೋತ್ಸವದ ಹಿನ್ನಲೆಯಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲೆ, ಸಂಗೀತ ಕ್ಷೇತ್ರದ ಸಾಧನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕ್ರೀಡೆ, ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಕೆ.ಎಸ್.ರಾಜಣ್ಣ ರಾಜ್ಯ ಮಾಜಿ ಆಯುಕ್ತರು,ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ, ಕರ್ನಾಟಕ ಸರ್ಕಾರ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ ಅಂತ ತಿಳಿಸಿದರು. ಇದನ್ನೂ ಓದಿ:15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

    ಈ ಬಾರಿ 31382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗ್ತಿದೆ. 140 ಜನರಿಗೆ ಪಿಹೆಚ್‌ಡಿ ಪ್ರದಾನ ಮಾಡಲಾಗುತ್ತದೆ ಅಂತ ಮಾಹಿತಿ ನೀಡಿದ್ರು. ಕಾರಣಾಂತರಗಳಿಂದ ರಾಜ್ಯಪಾಲರು ನಾಳೆಯ ಘಟಿಕೋತ್ಸವಕ್ಕೆ ಗೈರಾಗಲಿದ್ದಾರೆ. ಯುಜಿಸಿಯ ವೈಸ್ ಚಾನ್ಸೆಲರ್ ಡಾ.ದೀಪಕ್ ಕುಮಾರ್ ಶ್ರೀವಾಸ್ತವ್ ಮುಖ್ಯ ಆತಿಥಿಗಳಾಗಿ ಭಾಗಿಯಾಗಲಿದ್ದಾರೆ ಅಂತ ಮಾಹಿತಿ ನೀಡಿದ್ರು.

    ಸ್ನಾತಕೋತ್ತರ ವಿಭಾಗದಲ್ಲಿ ಅನ್ನಪೂರ್ಣ. ಎಸ್ ರಸಾಯನಶಾಸ್ತ್ರ ವಿಭಾಗ ಬೆಂಗಳೂರು ವಿವಿ 9 ಚಿನ್ನದ ಪದಕ,ವಿಶಾಲಾಕ್ಷಿ ವೈ.ಬಿ.- ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ 6 ಚಿನ್ನದ ಪದಕ ಮತ್ತು ರಂಜಿತಾ.ಎಸ್- ಹಿಂದಿ ವಿಭಾಗ, ಬೆಂಗಳೂರು ವಿವಿ 5 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕ ವಿಭಾಗದಲ್ಲಿ ಅನುರಾಧ ಬಿಎಸ್ಸಿ ಜಿಂದಾಲ್ ಪದವಿ ಮಹಿಳಾ ಕಾಲೇಜು 9 ಚಿನ್ನದ ಪದಕ. ರಂಜಿತ.ವಿ,ಬಿಕಾಂ,ತ್ರಿವೇಣಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ 6 ಚಿನ್ನದ ಪದಕ ಮತ್ತು ಮಾಧವ ಆರ್. ಕಾಮತ್ ಟೆಕ್ನಾಲಜಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ವಿವಿ 6 ಚಿನ್ನದ ಪದಕ ಪಡೆದಿದ್ದಾರೆ ಅಂತ ಮಾಹಿತಿ ನೀಡಿದರು.

  • ಮದುವೆ ದಿನವೇ ಪರೀಕ್ಷೆ ಬರೆದ ಮಧುಮಗಳು – ಉದಾರತೆ ಮೆರೆದ ಕುಲಸಚಿವರು

    ಮದುವೆ ದಿನವೇ ಪರೀಕ್ಷೆ ಬರೆದ ಮಧುಮಗಳು – ಉದಾರತೆ ಮೆರೆದ ಕುಲಸಚಿವರು

    ಬೆಂಗಳೂರು: ಮದುವೆ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಗೆ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ ಶಿವರಾಜುರವರು ಧೈರ್ಯ ತುಂಬಿ ಪರೀಕ್ಷೆ ಮುಗಿಯುವರೆಗೂ ಸ್ಥಳದಲ್ಲೇ ಇದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ವಿ.ವಿ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರ ಏಮ್ಸ್ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಜ.30 ರಂದು ಪರೀಕ್ಷೆ ದಿನವೇ ವಿದ್ಯಾರ್ಥಿನಿಯೋರ್ವಳ ಮದುವೆ ಸಹ ನಡೆದಿತ್ತು. ಮದುವೆಯ ಮುಹೂರ್ತ ಕಾರ್ಯ ಮುಗಿಯುತ್ತಿದ್ದಂತೆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಬಂದಿದ್ದಾರೆ. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಮದುಮಗಳಿಗೆ ಸ್ವತಃ ಕುಲಸಚಿವರೇ ಧೈರ್ಯ ತುಂಬಿ ಆಕೆಯ ಆತಂಕವನ್ನು ದೂರವಾಗಿಸಿ ಪರೀಕ್ಷೆ ಮುಗಿಯುವವರೆಗೆ ಅಲ್ಲಿಯೇ ಹಾಜರಿದ್ದು ಉದಾರತೆ ಮೆರೆದಿದ್ದಾರೆ.

    ಪರೀಕ್ಷೆ ಬರೆಯುತ್ತಿದ್ದ ನವವಧುವಿನ ಪತಿಯೂ ಸಹ ಆಕೆ ಪರೀಕ್ಷೆ ಬರೆದು ಮುಗಿಯುವವರೆಗೂ ಸಹ ಕಾಲೇಜಿನ ಹೊರಗೆ ಕುಳಿತು ಆಕೆಯ ಶೈಕ್ಷಣಿಕ ಪರೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರು ವಿವಿಯ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರೋ. ಶಿವರಾಜುರವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

  • ಕ್ಯಾಂಪಸ್‍ನಲ್ಲಿ ಕಾಫಿ, ಟೀ ಬ್ಯಾನ್‍ಗೆ ಮುಂದಾದ ಬೆಂಗ್ಳೂರು ವಿವಿ

    ಕ್ಯಾಂಪಸ್‍ನಲ್ಲಿ ಕಾಫಿ, ಟೀ ಬ್ಯಾನ್‍ಗೆ ಮುಂದಾದ ಬೆಂಗ್ಳೂರು ವಿವಿ

    ಬೆಂಗಳೂರು: ಕಾಲೇಜು, ವಿಶ್ವವಿದ್ಯಾನಿಲಯದಲ್ಲಿ ಮೊಬೈಲ್, ಸಿಗರೇಟ್, ಡ್ರಗ್ಸ್‌ಗಳಿಗೆ ನಿಷೇಧ ಹೇರಿರುವುದನ್ನ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಬೆಂಗಳೂರು ವಿವಿ ಕಾಫಿ, ಟೀಯನ್ನೇ ಬ್ಯಾನ್ ಮಾಡಲು ಮುಂದಾಗಿದೆ.

    ಹೌದು, ಇದೇನಪ್ಪ ಕಾಫಿ-ಟೀ ಯಾಕೆ ಬೆಂಗಳೂರು ವಿವಿ ಬ್ಯಾನ್ ಮಾಡಲು ಯೋಚಿಸುತ್ತಿದೆ ಎಂಬ ಪ್ರಶ್ನೆ ಹುಟ್ಟೋದು ಸಾಮಾನ್ಯ. ಹಲವರು ಬೆಳಗಾದರೆ ಸಾಕು, ದೊಡ್ಡ ದೊಡ್ಡ ಗ್ಲಾಸ್‍ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ಕೆಲವೊಮ್ಮೆ ಟೀ,ಕಾಫಿ ಕುಡಿಲಿಲ್ಲ ಅಂದರೆ ಈ ದಿನವೇ ವೇಸ್ಟ್ ಅಂತನೂ ಅನಿಸುತ್ತೆ. ಅಷ್ಟೇ ಏಕೆ ಕಾಲೇಜುಗಳಲ್ಲಿ ಕ್ಲಾಸ್ ಬಂಕ್ ಮಾಡಿ ಅಥವಾ ಬ್ರೇಕ್ ಟೈಮ್‍ನಲ್ಲಿ ಸ್ಟ್ರಾಂಗ್ ಟೀ ಕುಡಿದರೆ ಫ್ರೆಶ್ ಆಗುತ್ತೇವೆ. ಅಷ್ಟರಮಟ್ಟಿಗೆ ಟೀ, ಕಾಫಿಗೆ ಅಡಿಕ್ಟ್ ಆಗಿರುತ್ತಾರೆ. ಆದರೆ ಅದೇ ಟೀ, ಕಾಫಿಯನ್ನ ಬೆಂಗಳೂರು ವಿವಿ ಕ್ಯಾಂಪಸ್‍ನಲ್ಲಿ ಮಾರಾಟ ಮಾಡೋದನ್ನ ಬ್ಯಾನ್ ಮಾಡಲು ಚಿಂತನೆ ನಡೆಸಲಾಗಿದೆ.

    ಟೀ ಮತ್ತು ಕಾಫಿಯಿಂದ ಅಸಿಡಿಟಿ ಬರುತ್ತೆ. ಆರೋಗ್ಯದ ದೃಷ್ಟಿಯಿಂದ ಕ್ರಮೇಣವಾಗಿ ನಿಷೇಧಿಸಲಾಗುವುದು. ಜೊತೆಗೆ ಕೆಎಂಎಫ್ ನಂದಿನಿ ಹಾಲನ್ನು ಮಾರಾಟ ಮಾಡಲಾಗುವುದೆಂದು ಬೆಂಗಳೂರು ವಿವಿ ಉಪಕುಲಪತಿ ವೇಣು ಗೋಪಾಲ್ ತಿಳಿಸಿದ್ದಾರೆ.

    ಉಪಕುಲಪತಿಗಳ ಹೊಸ ಪ್ಲಾನ್‍ಗೆ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದೊಂದು ಹಾಸ್ಯಾಸ್ಪದ ನಿರ್ಧಾರ. ಅವರಿಗೆ ಅಸಿಡಿಟಿ ಬಂದರೆ ನಾವೇನು ಮಾಡಬೇಕು? ಇದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ನಮಗೆ ಮೈಂಡ್ ಫ್ರೆಶ್ ಆಗೋಕೆ ಟೀ, ಕಾಫಿ ಬೇಕೇ ಬೇಕು ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

    ಸದಾ ವಿವಾದಗಳಿಂದಲೇ ಸುದ್ದಿ ಆಗೋ ಬೆಂಗಳೂರು ವಿವಿ ಈಗ ಟೀ, ಕಾಫಿ ವಿಷಯದಲ್ಲೂ ಸುದ್ದಿ ಆಗ್ತಿರೋದು ವಿಪರ್ಯಾಸವಾಗಿದೆ.

  • ರ‍್ಯಾಂಕ್ ವಿಜೇತರಿಗಿಲ್ಲ ಗೋಲ್ಡ್ ಮೆಡಲ್-ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳಿಗೆ ನಿರಾಸೆ

    ರ‍್ಯಾಂಕ್ ವಿಜೇತರಿಗಿಲ್ಲ ಗೋಲ್ಡ್ ಮೆಡಲ್-ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳಿಗೆ ನಿರಾಸೆ

    ಬೆಂಗಳೂರು: ಈ ಬಾರಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಕಂಡ ಚಿನ್ನದ ಕನಸಿಗೆ ನೀರು ಎರಚಲಾಗಿದೆ. ಬಡ್ಡಿ ಹಣ ಕಡಿಮೆ ಬರ್ತಿದೆ ಅಂತಾ ಗೋಲ್ಡ್ ಮೆಡಲ್ ನೀಡೋದನ್ನೇ ಬಂದ್ ಮಾಡಲಾಗುತ್ತಿದೆ.

    ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ, ನೀವು ಹಗಲಿರುಳು ಓದಿ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಚಿನ್ನದ ಪದಕಕ್ಕೆ ಅರ್ಹರಾಗಿದ್ದರೂ ಅದು ನಿಮಗೆ ದಕ್ಕುವುದಿಲ್ಲ. ಯಾಕಂದ್ರೆ ಗೋಲ್ಡ್ ಮೆಡಲ್ ಖರೀದಿಸುವ ಶಕ್ತಿ ವಿವಿಗೆ ಇಲ್ಲವಾದ ಕಾರಣ ಈ ಬಾರಿ ಸ್ಟೂಡೆಂಟ್ಸ್ ಗೆ ಗೋಲ್ಡ್ ಮೆಡಲ್ ಬದಲಿ 500 ರೂ. ಚೆಕ್ ನೀಡಲು ವಿವಿ ತೀರ್ಮಾನಿಸಿದೆ.

    ಪ್ರತಿ ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ನಡೆಸುವ ಘಟಿಕೋತ್ಸವದಲ್ಲಿ ಸಾಧನೆ ಮಾಡಿದ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿವಿ ಗೋಲ್ಡ್ ಮೆಡಲ್ ನೀಡಿ ಗೌರವಿಸುತ್ತದೆ. ಈ ಗೋಲ್ಡ್ ಮೆಡಲ್ ಪಡೆಯೋಕ್ಕೆ ಅಂತಾನೇ ಅದೆಷ್ಟೋ ಜನ ವಿದ್ಯಾರ್ಥಿಗಳು ಹಗಲು ರಾತ್ರಿ ಅಂತಾ ಓದುತ್ತಾರೆ. ಇದು ವಿದ್ಯಾರ್ಥಿ ಜೀವನ ಮಟ್ಟದಲ್ಲಿ ಕಾಣುವ ದೊಡ್ಡ ಕನಸು ಆಗಿರುತ್ತದೆ. ವಿವಿ ವಿದ್ಯಾರ್ಥಿಗಳಿಗೆ ಕೆ.ಜಿ ಲೆಕ್ಕದಲ್ಲಿ ಗೋಲ್ಡ್ ಕೊಡಲ್ಲ. ಕೊಡುವುದು 1.3 ಗ್ರಾಂ ಚಿನ್ನ ಲೇಪಿತ ಮೆಡಲ್. ಆದರೆ ಈ ಬಾರಿ ಈ ಚಿನ್ನದ ಲೇಪಿತ ಮೆಡಲ್ ಖರೀದಿಸುವ ಶಕ್ತಿ ವಿವಿ ಬಳಿ ಇಲ್ಲವಾಗಿದೆ.

    ಪ್ರತಿ ವರ್ಷ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡೋಕ್ಕೆ ಅಂತಾನೇ ದಾನಿಗಳು ಹಣ ಠೇವಣಿ ಇಟ್ಟಿರುತ್ತಾರೆ. ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿಗಳ ಏಳಿಗೆಗೆ ಬಳಸಬಹುದಾಗಿದೆ. ಅದೇ ಠೇವಣಿ ಇಟ್ಟ ಹಣದಿಂದ ಬರುವ ಬಡ್ಡಿ ಹಣದಿಂದಲ್ಲೇ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಠೇವಣಿಯಿಂದ ಬರುವ ಬಡ್ಡಿ ಹಣ ಕಡಿಮೆ ಆಗ್ತಿದ್ದು, ಗೋಲ್ಡ್ ಮೆಡಲ್ ಖರೀದಿಸುವ ಮೊತ್ತ ಹೆಚ್ಚಾಗುತ್ತಿದೆ. ಆದರಿಂದ ಈ ಬಾರಿಯ 53 ನೇ ಘಟಿಕೋತ್ಸವದ ದಿನ ಗೋಲ್ಡ್ ಮೆಡಲ್ ಗೆ ಆಯ್ಕೆಯಾಗಿರುವ 179 ಜನರ ಪೈಕಿ 79 ಜನ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ಬದಲು 500 ರೂ ಚೆಕ್ ನೀಡಲು ವಿವಿ ನೀಡುತ್ತಿದೆ.

    ವಿವಿಯಲ್ಲಿ ಚಿನ್ನದ ಪದಕ ಪಡೆಯಬೇಕು ಎಂಬ ಕನಸಿಗೆ ವಿವಿ ತಣ್ಣೀರು ಹಾಕಿದೆ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಉತ್ಸಾಹ ಮೂಡಿಸುವ ಮಾರ್ಗ ಅಂದ್ರೆ ಅದು ಗೋಲ್ಡ್ ಮೆಡಲ್ ಪುರಸ್ಕಾರ ಈಗ ಅದು ಕೂಡಾ ಬಂದ್ ಆಗುತ್ತಿದೆ.

  • ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

    ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

    -ಶ್ರೀನಿವಾಸ್ ರಾವ್ ದಳವೆ
    ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್.

    ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಗಿದಿದೆ. ಈ ಹುದ್ದೆಗೆ ಈಗ ಹತ್ತಲ್ಲ ಇಪ್ಪತ್ತಲ್ಲ, ಬರೋಬ್ಬರಿ 150 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.

    ಯಾಕಿಷ್ಟು ಅರ್ಜಿ ಸಲ್ಲಿಕೆ?: ಕಳೆದ ಜನವರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ, ಖಾಲಿಯಾಗಲಿರುವ ಬೆಂಗಳೂರು ಹಾಗೂ ಮೈಸೂರು ವಿವಿಗಳ ಕುಲಪತಿ ಹುದ್ದೆಗಾಗಿ ಜಾಹೀರಾತು ನೀಡಿತ್ತು. ಹೀಗಾಗಿ ಇಷ್ಟೊಂದು ಅರ್ಜಿಗಳು ಸಲ್ಲಿಕೆಯಾಗಿವೆ.

    ಯಾಕಿಷ್ಟು ಡಿಮ್ಯಾಂಡ್!: ಬೆಂಗಳೂರು ಹೇಳಿ ಕೇಳಿ ಹೈಟೆಕ್ ಸಿಟಿ, ಯಾವುದಕ್ಕೂ ಕೊರತೆ ಇಲ್ಲ. ಹೀಗಾಗಿ ಹೆಚ್ಚು ಜನ ಇಲ್ಲೆ ಕುಲಪತಿ ಆಗಬೇಕು ಅಂತ ಇಚ್ಛಿಸುತ್ತಾರೆ. ಇದಲ್ಲದೆ ಅತೀ ಹೆಚ್ಚು ಕಾಲೇಜುಗಳು ಬೆಂಗಳೂರು ವಿವಿ ಕೆಳಗೆ ಬರುತ್ತವೆ. ಮಾತ್ರವಲ್ಲ ಸರ್ಕಾರದಿಂದ ಹೆಚ್ಚು ಅನುದಾನ ಬರುತ್ತೆ. ಇಷ್ಟೆಲ್ಲದರ ಜೊತೆ ನೆಮ್ಮದಿಯ ಜೀವನ ಸಿಗುತ್ತೆ. ಹೀಗಾಗಿ ಎಲ್ರಿಗೂ ಬೆಂಗಳೂರು ವಿವಿನೇ ಬೇಕು.

    ಆಯ್ಕೆ ಹೇಗೆ?: ಸದ್ಯ ಆಕಾಂಕ್ಷಿಗಳು ಏನೋ ಅರ್ಜಿ ಸಲ್ಲಿಸಿದ್ದಾರೆ. ವಿಸಿ ನೇಮಕ ಸಂಬಂಧ ಸರ್ಚ್ ಕಮಿಟಿಯನ್ನು ರಚಿಸಲಾಗಿದೆ. ಈ ಕಮಿಟಿ ಸದಸ್ಯರು 150 ಆಕಾಂಕ್ಷಿಗಳ ವಿವರ ನೋಡಿ ಅಂತಿಮವಾಗಿ ಮೂವರ ಹೆಸರು ಫೈನಲ್ ಮಾಡಬೇಕು.