Tag: ಬೆಂಗಳೂರು ರೈಲ್ವೆ ನಿಲ್ದಾಣ

  • ಬೈಪಾಸ್ ಕಾಮಗಾರಿ – ಬೆಂಗಳೂರಿನಿಂದ ಸಂಚರಿಸುವ ಈ ರೈಲುಗಳ ಓಡಾಟ ರದ್ದು

    ಬೈಪಾಸ್ ಕಾಮಗಾರಿ – ಬೆಂಗಳೂರಿನಿಂದ ಸಂಚರಿಸುವ ಈ ರೈಲುಗಳ ಓಡಾಟ ರದ್ದು

    ಬೆಂಗಳೂರು: ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಪಾಪಟಪಲ್ಲಿ-ಡೋರ್ನಕಲ್ ಬೈಪಾಸ್ ನಿಲ್ದಾಣಗಳಲ್ಲಿ ಮೂರನೇ ಮಾರ್ಗದ (ಪ್ಯಾಚ್ ಟ್ರಿಪ್ಲಿಂಗ್) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ ಹೊರಡುವ ಈ ಕೆಳಗಿನ ರೈಲು ಸೇವೆಗಳನ್ನು (Train Service) ರದ್ದುಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಯಾವ್ಯಾವ ರೈಲುಗಳ ಸಂಚಾರ ರದ್ದು?
    * ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06509) ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಇದೇ ಅಕ್ಟೋಬರ್ 13ರಂದು ಸೇವೆ ಆರಂಭಿಸಬೇಕಿತ್ತು. ಅದರ ಸೇವೆ ಶುರುವಾಗುವ ಮೊಲದೇ ರೈಲು ಸಂಚಾರ ರದ್ದುಗೊಳಿಸಲಾಗಿದೆ.

    * ಅಕ್ಟೊಬರ್ 15 ರಂದು ಪ್ರಾರಂಭವಾಗಬೇಕಿದ್ದ ದಾನಾಪುರ ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06510) ರದ್ದುಗೊಳಿಸಲಾಗಿದೆ.

    * ಯಶವಂತಪುರ ತುಘಲಕಾಬಾದ್ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (00629) ಅ.12 ಮತ್ತು ಅ.15 ರಂದು ಪ್ರಾರಂಭವಾಗುವುದಿತ್ತು, ಅದ್ರೆ ರದ್ದುಗೊಳಿಸಲಾಗಿದೆ.

    * ಅಕ್ಟೊಬರ್ 12 ಮತ್ತು 16 ರಂದು ಪ್ರಾರಂಭವಾಗಲಿದ್ದ ತುಘಲಕಾಬಾದ್ -ಯಶವಂತಪುರ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 00630) ಪ್ರಯಾಣಗಳನ್ನು ರದ್ದುಗೊಳಿಸಲಾಗುತ್ತಿದೆ.

    * ರೈಲು ಸಂಖ್ಯೆ 03251 ದಾನಾಪುರ SMVT ಬೆಂಗಳೂರು ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ಅಕ್ಟೋಬರ್ 12 ಮತ್ತು 13 ರಂದು ಸಂಚರಿಸಬೇಕಿತ್ತು ಕಾಮಗಾರಿ ಹಿನ್ನೆಲೆ ಇದರ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ.

    * SMVT ಬೆಂಗಳೂರು ದಾನಾಪುರ ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ (03252) ಅಕ್ಟೋಬರ್‌ 14 ಮತ್ತು 15 ರಂದು ರದ್ದಾಗಿದೆ.

    * ದಾನಾಪುರ SMVT ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03259) ಸಂಚಾರ ಅಕ್ಟೋಬರ್‌ 14 ರಂದು ಸಂಚರಿಸುತ್ತಿಲ್ಲ. ಪ್ರಯಾಣಿಕರು ಗಮನಿಸಿ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಬೇಕು.

    * ಕೊನೆಯದಾಗಿ SMVT ಬೆಂಗಳೂರು ದಾನಾಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03260) ಅಕ್ಟೋಬರ್‌ 16 ರಂದು ಸೇವೆ ನೀಡದೇ ಸಂಚಾರ ಸ್ಥಗಿತಗೊಳಿಸಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮೆಜೆಸ್ಟಿಕ್ ರೈಲು ನಿಲ್ದಾಣಕ್ಕಿಂದು ಹುಟ್ಟುಹಬ್ಬದ ಸಂಭ್ರಮ – ಬೆಂಗ್ಳೂರಿಗೆ ಮೊದಲ ರೈಲು ಯಾವಾಗ ಬಂತು ಗೊತ್ತಾ?

    ಮೆಜೆಸ್ಟಿಕ್ ರೈಲು ನಿಲ್ದಾಣಕ್ಕಿಂದು ಹುಟ್ಟುಹಬ್ಬದ ಸಂಭ್ರಮ – ಬೆಂಗ್ಳೂರಿಗೆ ಮೊದಲ ರೈಲು ಯಾವಾಗ ಬಂತು ಗೊತ್ತಾ?

    ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣಕ್ಕೆ (KSR Bengaluru City Junction) ಇಂದಿಗೆ 153 ವರ್ಷಗಳ ಇತಿಹಾಸ. ರೈಲ್ವೆ ವಿಭಾಗದ ಅಧಿಕಾರಿಗಳು ಹಾಗೂ ನಿವೃತ್ತ ರೈಲ್ವೆ ಅಧಿಕಾರಿಗಳು ಕೇಕ್ ಕಟ್ ಮಾಡಿ, ಸಂಭ್ರಮಾಚರಣೆ ನಡೆಸಿದರು. ಬೆಂಗಳೂರಿನಲ್ಲಿ (Bengaluru) ರೈಲ್ವೆ ವೈಭವದ 153 ವರ್ಷಗಳ ಇತಿಹಾಸವನ್ನ ಸಾರ್ವಜನಿಕರಿಗೆ ತಿಳಿಸಲು ನೈರುತ್ಯ ರೈಲ್ವೆಯಿಂದ, ರೈಲು ನಿಲ್ದಾಣ ಮಹೋತ್ಸವ ಆಚರಿಸಲಾಯಿತು.

    KSR ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ರು. ಹಲವು ವರ್ಷಗಳಿಂದ KSR ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ನೌಕರರು ಕೂಡ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಇದನ್ನೂ ಓದಿ: 600 ಕೋಟಿ ರೂ. ಭ್ರಷ್ಟಾಚಾರ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಬೆಂಗಳೂರಿಗೆ ಆಗಸ್ಟ್ 1, 1864 ರಲ್ಲಿ ಬಂದ ಮೊದಲ ರೈಲಿನಿಂದ ಹಿಡಿದು, ನಗರದಿಂದ ಯಾವೆಲ್ಲ ಪ್ರದೇಶಗಳಿಗೆ ರೈಲು ಮಾರ್ಗ ವಿಸ್ತರಿಸಿತು, ನಗರದ ಪ್ರಗತಿಗೆ ರೈಲು ಸೇವೆ ಹೇಗೆ ಸಹಾಯವಾಯ್ತು ಹಾಗೂ ಹಂತ ಹಂತವಾಗಿ  ಬೆಳವಣಿಗೆಯ ಮೈಲಿಗಲ್ಲಿನ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ಇದನ್ನೂ ಓದಿ: ಶಾಸಕಾಂಗ ಸಭೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ- ಸಭೆ ಬಹಿಷ್ಕರಿಸಿದ ಇಬ್ಬರು ಶಾಸಕರು

    ಬೆಂಗಳೂರಿಗೆ ಮೊದಲ ರೈಲು ಯಾವಾಗ ಬಂತು? – ಇದರ ಇತಿಹಾಸ ಹೇಗಿದೆ ಗೊತ್ತಾ?

    • ಬೆಂಗಳೂರಿಗೆ ಮೊದಲ ರೈಲುಬಂಡಿ ಪ್ರವೇಶಿಸಿ  153 ವರ್ಷಗಳು ಕಳೆದಿದೆ.
    • ಆಗಸ್ಟ್ 1 , 1864 ರಂದು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೋಲಾರ್ಪೆಟ್ಟೈ ಗೆ ಮೊದಲ ಉಗಿ ಇಂಜಿನ್ ಗೆ ಚಾಲನೆ
    • ಮದ್ರಾಸ್ ರೈಲ್ವೆ ಕಂಪನಿಯು ನಗರದ ಮೊದಲ ರೈಲು, ಬೆಂಗಳೂರು ಮೇಲ್ ಗೆ ಚಾಲನೆ
    • 1882 ರಲ್ಲಿ ಬೆಂಗಳೂರು ಸಿಟಿ ನಿಲ್ದಾಣಕ್ಕೆ ಮಾರ್ಗ ವಿಸ್ತರಣೆ. ಅಲ್ಲಿಂದ ಗುಂತಕಲ್, ಮೈಸೂರು, ತುಮಕೂರು ಕಡೆಗೆ ಮಾರ್ಗ ಆರಂಭ
    • ಜೂನ್ 14, 1959ರಲ್ಲಿ ಭಾರತದ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಬೆಂಗಳೂರಿಗೆ ಭೇಟಿ. ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಅವರನ್ನ ಬರಮಾಡಿಕೊಳ್ಳಲಾಯ್ತು
    • ಜೂನ್ 8, 1976 ರಲ್ಲಿ ಡಬಲ್ ಡೆಕ್ಕರ್ ರೈಲು ಕೋಚ್‌ನ ಪ್ರಾಯೋಗಿಕ ಚಾಲನೆಯನ್ನ ಪ್ರಾರಂಭಿಸಲಾಯ್ತು. ಮದ್ರಾಸ್- ಬೆಂಗಳೂರು ಬೃಂದಾವನ ಎಕ್ಸ್ ಪ್ರೆಸ್ ನಲ್ಲಿ ಕೋಚ್ ಗಳನ್ನ ಪರಿಚಯಿಸಲಾಗಿದೆ.
    • ದಕ್ಷಿಣ ರೈಲ್ವೆಯು 14-04-1951 ರಂದು ಮದ್ರಾಸ್ ಮತ್ತು ದಕ್ಷಿಣ ಮಹತ್ತರ ರೈಲ್ವೆ, ದಕ್ಷಿಣ ಭಾರತೀಯ ರೈಲ್ವೆ ಮತ್ತು ಮೈಸೂರು ರಾಜ್ಯ ರೈಲ್ವೆಯನ್ನ ವಿಲೀನಗೊಳಿಸುವ ಮೂಲಕ ಅಸ್ತಿತ್ವಕ್ಕೆ ಬಂದಿತು
    • ಸಮಗ್ರ ದಕ್ಷಿಣ ರೈಲ್ವೆಯಲ್ಲಿ, ಮೈಸೂರು ವಿಭಾಗವು 31-10-1956 ರಂದು ಅಸ್ತಿತ್ವಕ್ಕೆ ಬಂತು
    • ಮದ್ರಾಸ್ ವಿಭಾಗವು 31-08-1956 ರಂದು ಅಸ್ತಿತ್ವಕ್ಕೆ ಬಂದಿತು.
    • 1981ರಲ್ಲಿ ಮೈಸೂರು ವಿಭಾಗವನ್ನ ಎರಡು ವಿಭಾಗಗಳಾಗಿ ವಿಭಜಿಸಲಾಯ್ತು. ಮೈಸೂರು ವಿಭಾಗ ಮತ್ತು ಬೆಂಗಳೂರು ವಿಭಾಗ
    • 27-7-1981 ರಂದು ಬೆಂಗಳೂರು ವಿಭಾಗ ಸ್ಥಾಪನೆ.
    • ಬೆಂಗಳೂರು ವಿಭಾಗವನ್ನ ನೈರುತ್ಯ ರೈಲ್ವೆಯೊಂದಿಗೆ, ಹುಬ್ಬಳ್ಳಿಯಲ್ಲಿ ಅದರ ಪ್ರಧಾನ ಕಚೇರಿಯೊಂದಿಗೆ ಏಪ್ರಿಲ್ 1, 2003ರಲ್ಲಿ ವಿಲಿನಗೊಳಿಸಲಾಯ್ತು.
    • ಬೆಂಗಳೂರು ವಿಭಾಗ ಸದ್ಯ 3 ರಾಜ್ಯಗಳ, 14 ಜಿಲ್ಲೆಗಳನ್ನ ಒಳಗೊಂಡೊಂಡಿದೆ
    • ಸದ್ಯ KSR ರೈಲ್ವೆ ನಿಲ್ದಾಣ ಡಿಜಿಟಲೈಜೆಷನ್ ಆಗಿದ್ದು, ವೇಟಿಂಗ್ ಹಾಲ್, ಫ್ಲಾಟ್ ಫಾರಂ, ಡಿಸ್ಲೈ, ರೈಲು ಲೊಕೇಷನ್ ಆ್ಯಪ್ ಗಳು, ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ರೈಲು ನಿಲ್ದಾಣದ ಸುತ್ತಮುತ್ತಲು ಸ್ವಚ್ಛತೆ ಹಾಗೂ ನಿಲ್ದಾಣದ ಆವರಣದಲ್ಲಿ ಉಚಿತ ವೈಫೈ ವ್ಯವಸ್ಥೆಯೊಂದಿಗೆ ಸಾವಿರಾರು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.