Tag: ಬೆಂಗಳೂರು. ಮೋದಿ

  • ಮೋದಿ ಬಿಜೆಪಿಯವರಿಗಷ್ಟೇ ಪ್ರಧಾನಿಯಲ್ಲ, ದೇಶದ ಪ್ರಧಾನಿ- ಕ್ಷಮೆಯಾಚಿಸಿದ ರೋಷನ್ ಬೇಗ್

    ಮೋದಿ ಬಿಜೆಪಿಯವರಿಗಷ್ಟೇ ಪ್ರಧಾನಿಯಲ್ಲ, ದೇಶದ ಪ್ರಧಾನಿ- ಕ್ಷಮೆಯಾಚಿಸಿದ ರೋಷನ್ ಬೇಗ್

    ಬೆಂಗಳೂರು: ಮೋದಿಯವರು ಬಿಜೆಪಿಯವರಿಗಷ್ಟೇ ಪ್ರಧಾನಿಯಲ್ಲ, ದೇಶದ ಪ್ರಧಾನಿ. ಪ್ರಧಾನಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ. ನನ್ನಿಂದ ಯಾರ ಭಾವನೆಗಾದ್ರೂ ಧಕ್ಕೆಯಾಗಿದ್ರೆ ಕ್ಷಮಿ ಯಾಚಿಸುತ್ತೇನೆ ಅಂತ ಮೂಲಸೌಕರ್ಯ, ಮಾಹಿತಿ ಮತ್ತು ಹಜ್ ಖಾತೆಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

    ಪುಲಿಕೇಶಿನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿಯನ್ನು ಕುರಿತು, ಸೂ.. ಬೋ..ಮಗ ಎಂದು ತಮಿಳಿನಲ್ಲಿ ಅವಾಚ್ಯವಾಗಿ ನಿಂದಿಸಿದ್ದು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ ಸಚಿವರು, ನಾನು 6 ಬಾರಿ ಶಾಸಕನಾಗಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಯಾರನ್ನೂ ಹೀಯಾಳಿಸಿಲ್ಲ. ನನಗೆ ಅಲ್ಪ ಸ್ವಲ್ಪ ತಮಿಳು ಬರುತ್ತದೆ. ತಮಿಳಿನಲ್ಲಿ ಪಾಂಡಿತ್ಯ ಇಲ್ಲದ ಕಾರಣ ಕೆಲವು ಪದಗಳನ್ನು ಅನುಚಿವಾಗಿ ಬಳಸಿರಬಹುದು ಅಂತ ಹೇಳಿದ್ದಾರೆ.

    ನನಗೆ ನಮ್ಮ ದೇಶದ ಪ್ರಧಾನಿ ಮೇಲೆ ಗೌರವವಿದೆ. ಹೀಗಾಗಿ ನಾನು ಯಾವತ್ತಿಗೂ ಅಂತಹ ಪದಗಳನ್ನು ಬಳಸಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿಬಿಡಿ. ನೋಟು ನಿಷೇಧ ಹಾಗೂ ಜಿಎಸ್‍ಟಿ ಬಳಿಕ ಬಿಜೆಪಿ ಬೆಂಬಲಿಗರು ಹಾಗೂ ವ್ಯಾಪಾರಿಗಳು ಏನು ಹೇಳುತ್ತಿದ್ದಾರೆ ಎಂಬುವುದನ್ನು ನಾನು ಅಲ್ಲಿ ಹೇಳಿದ್ದೇನೆ. ಬಿಜೆಪಿಯವರು ತೋರಿಸಿಕೊಳ್ಳುವಂತಹ ಕಾರ್ಯಗಳನ್ನೇನೂ ಮಾಡಿಲ್ಲ. ಯಾವತ್ತೂ ಕಾಂಗ್ರೆಸ್ ವಿರುದ್ಧದ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಅಲ್ಲದೇ ಅವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

    ಇದನ್ನೂ ಓದಿ: ಮೋದಿಯನ್ನು ‘ಸೂ.. ಬೋ..’ ಎಂದು ತಮಿಳಲ್ಲಿ ಅವಾಚ್ಯವಾಗಿ ನಿಂದಿಸಿದ ಸಚಿವ ರೋಷನ್ ಬೇಗ್!

    ಸಚಿವ ರೋಷನ್ ಬೇಗ್ ಮೋದಿಯನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಬಗ್ಗೆ ಬಿಜೆಪಿ ವೀಡಿಯೋ ಬಿಡುಗಡೆ ಮಾಡಿತ್ತು. ಈ ವಿಡಿಯೋ ಶುಕ್ರವಾರದಂದು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಬೇಗ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ತಮಿಳಿನಲ್ಲಿ ಭಾಷಣ ಮಾಡಿರೋ ರೋಷನ್ ಬೇಗ್, ಮೋದಿ 1000, 500 ರೂ. ನೋಟ್ ಬ್ಯಾನ್ ಮಾಡಿದ್ರು. ಅದರಿಂದೇನಾಯ್ತು? ಮೋದಿ ಸೂ…, ಇದರಿಂದ ಯಾರು ಉದ್ಧಾರ ಆದ್ರು? ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದರು. ಕಾಂಗ್ರೆಸ್ ಇಂದು ನಿನ್ನೆಯದಲ್ಲ. ನೂರಾರು ವರ್ಷದ ಇತಿಹಾಸ ಹೊಂದಿರೋ ಪಕ್ಷ. ನಮ್ ಸಿದ್ದರಾಮಯ್ಯ 5 ರೂ.ಗೆ ತಿಂಡಿ, 10 ರೂ.ಗೆ ಊಟ ಕೊಡ್ತಾರೆ. ಯಡಿಯೂರಪ್ಪ ಕೇವಲ ಶೋಭಾ ಎದುರು ಮುಖ ನೋಡಿಕೊಂಡು ನಿಂತಿದ್ರು. ಇದನ್ನ ಬಿಟ್ರೆ ಯಡಿಯೂರಪ್ಪ ಬೇರೆ ಏನನ್ನೂ ಮಾಡಲಿಲ್ಲ. ಯಡಿಯೂರಪ್ಪ ಯಾಕೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲಿಲ್ಲ ಎಂದು ನೇರವಾಗಿ ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.