Tag: ಬೆಂಗಳೂರು-ಮೈಸೂರು ಹೆದ್ದಾರಿ

  • ಮಂಡ್ಯ | ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

    ಮಂಡ್ಯ | ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

    – ಸರ್ಕಾರ ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ವಿದ್ಯಾರ್ಥಿಗಳ ಆಕ್ರೋಶ

    ಮಂಡ್ಯ: ನಿಂತಿದ್ದ ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದ್ದು, 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಾಂಜೋ ಆಸ್ಪತ್ರೆ (Sanjo Hospital) ಬಳಿ ನಡೆದಿದೆ.

    ಬೆಂಗಳೂರು-ಮೈಸೂರು (Bengaluru-Mysuru) ದಶಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಬೆಂಗಳೂರು ಕಡೆಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಎಕ್ಸ್‌ಪ್ರೆಸ್‌ ವೇ ನಿಂದ ಸರ್ವಿಸ್ ರಸ್ತೆಗೆ ಬರುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ.ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವು

    ಬೆಳಿಗ್ಗೆ 9:50ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಬಸ್‌ನಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಪ್ರಯಾಣ ಮಾಡುತ್ತಿದ್ದರು. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳ ಪೈಕಿ ವಿದ್ಯಾರ್ಥಿಗಳೇ ಹೆಚ್ಚು ಗಾಯಗೊಂಡಿದ್ದು, ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ (MIMS Hospital) ರವಾನಿಸಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

    ಬಸ್ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿ ಅನುಷಾ ಮಾತನಾಡಿ, ಮೊದಲು ಫ್ರೀ ಬಸ್ ಯೋಜನೆ ನಿಲ್ಲಿಸಿ. ಶಕ್ತಿ ಯೋಜನೆಯಿಂದ ಬಸ್‌ಗಳು ಸಿಕ್ಕಾಪಟ್ಟೆ ರಶ್ ಆಗುತ್ತಿವೆ. ಇವತ್ತು ಕೂಡ ಬಸ್‌ನಲ್ಲಿ 60-70 ಪ್ರಯಾಣಿಕರಿದ್ದರು. ಬಸ್ ಓವರ್ ಸ್ಪೀಡ್‌ನಲ್ಲಿದ್ದ ಕಾರಣ ನಿಯಂತ್ರಣ ಸಿಗದೇ ಪಲ್ಟಿಯಾಯಿತು. ಬಸ್ ಒಳಗಿದ್ದ ನಾವೆಲ್ಲರು ಗಾಬರಿಯಾಗಿದ್ದೆವು. ಕಿಟಕಿ ಗಾಜು ಒಡೆದು ಯುವಕರು ಹೊರಬಂದಿದ್ದು, ಸ್ಥಳೀಯರು ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಸರ್ಕಾರ ಮೊದಲು ಶಕ್ತಿ ಯೋಜನೆ ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,

    ಬಸ್ ಪಲ್ಟಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅತಿವೇಗದ ಹಿನ್ನೆಲೆ ತಿರುವು ಇದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಇದೇ ವೇಳೆ ಎದುರಿಗೆ ಬರುತ್ತಿದ್ದ ಬೈಕ್ ಸವಾರ ಕ್ಷಣಾರ್ಧದಲ್ಲಿ ಪಾರಾಗಿದ್ದಾನೆ.

    ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.ಇದನ್ನೂ ಓದಿ: ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕರು – ಓರ್ವನ ಶವ ಪತ್ತೆ

  • Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

    Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

    ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru-Mysuru-Expressway) ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರಿದಾಗ ಸಂಚಾರ ಮಾಡಿದಾಗ ಪೊಲೀಸರು ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಮಂಡ್ಯ (Mandya) ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಸುಮಾರು 7 ಲಕ್ಷ ರೂ.ಗಳನ್ನು ಪೊಲೀಸರು  (Police) ವಸೂಲಿ ಮಾಡಿದ್ದಾರೆ.

    ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಾವಿರಕ್ಕೂ ಅಧಿಕ ಅಪಘಾತಗಳು ನಡೆದಿವೆ. ಈ ಪೈಕಿ 140ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಈ ಅಪಘಾತಗಳಲ್ಲಿ ಹಲವು ಮಂದಿ ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಪಘಾತಗಳನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿ ಮಾಡಿತ್ತು. ಎಕ್ಸ್‍ಪ್ರೆಸ್‍ವೇನಲ್ಲಿ 100 ಕಿಮೀಗೂ ಅಧಿಕ ವೇಗದಲ್ಲಿ ವಾಹನಗಳು ಚಲಿಸದಂತೆ, ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದಲ್ಲದೇ ಟ್ರಕ್‍ಗಳು ಎಡಬದಿಯ ವೇನಲ್ಲಿ ಸಂಚಾರ ಮಾಡಬೇಕೆಂದು ನಿಯಮ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅರಾವಳಿ ಬೆಟ್ಟದಲ್ಲಿ ಅಡಗಿಕುಳಿತ ಜನ – ಹರಿಯಾಣ ಗಲಭೆ ದಂಗೆಕೋರರ ಸುಳಿವು ಪತ್ತೆ!

    ಇಷ್ಟಾದರೂ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ದಂಡ ವಿಧಿಸಲು ತೀರ್ಮಾನ ಮಾಡಿದ್ದರು. ಇದರಿಂದಾಗಿ ಕಳೆದ ಒಂದು ವಾರದದಿಂದ ಇಲ್ಲಿಯವರೆಗೆ 7 ಲಕ್ಷ ರೂ. ದಂಡ ವಸೂಲಿಯಾಗಿದೆ. ಅತಿಯಾದ ವೇಗದ ಚಾಲನೆಗೆ 500 ರೂ., ಲೈನ್ ಡಿಸಿಪ್ಲೀನ್ ಉಲ್ಲಂಘನೆಗೆ 250 ರೂ., ನಿರ್ಬಂಧ ವಿಧಿಸಿದ ವಾಹನಗಳ ಸಂಚಾರಕ್ಕೆ 100 ಮಂದಿ ಚಾಲಕರಿಗೆ ಇದುವರೆಗೆ ದಂಡ ಹಾಕಲಾಗಿದೆ.

    ಹೆದ್ದಾರಿ ಪ್ರಾಧಿಕಾರ ಅಳಡಿಸಿರುವ ಎಇ ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಗಣಂಗೂರು ಟೋಲ್ ಪ್ಲಾಜಾಕ್ಕೂ ಮೊದಲ 2 ಕಿಮೀ ದೂರದಲ್ಲಿ ಪೊಲೀಸರು ಸ್ಪೀಡ್ ಹಂಟರ್ ಮೂಲಕ ವಾಹನಗಳ ವೇಗದ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಅತೀಯಾಗಿ ವಾಹನ ಚಲಾಯಿಸಿದರೆ ಚಾಲಕರಿಗೆ ಟೋಲ್‍ನಲ್ಲಿ ಪೊಲೀಸರೇ ದಂಡ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್

    ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್, ಆಟೋ ನಿಷೇಧ – ಮೊದಲ ದಿನವೇ 137 ಕೇಸ್

    ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ಬೈಕ್ (Bike), ಆಟೋ ಹಾಗೂ ಟ್ರ್ಯಾಕ್ಟರ್ ಸೇರಿ ಇತರ ವಾಹನಗಳಿಗೆ ಆ.1ರಿಂದ ನಿಷೇಧ ಹೇರಲಾಗಿದೆ. ಆದರೂ ಜನ ಇದನ್ನು ಲೆಕ್ಕಿಸದೇ ಈ ವಾಹನಗಳನ್ನು ಎಕ್ಸ್‌ಪ್ರೆಸ್‌ವೇಗೆ ಇಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು (Police) ತೀವ್ರ ತಪಾಸಣೆ ನಡೆಸಿ ಮೊದಲ ದಿನವೇ 137 ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಂಡು 68,500 ರೂ. ದಂಡ ವಸೂಲಿ ಮಾಡಿದ್ದಾರೆ.

    ರಾಮನಗರದ 9 ಎಂಟ್ರಿ ಹಾಗೂ ಎಕ್ಸಿಟ್‍ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಹೆದ್ದಾರಿಯಲ್ಲಿ ಬಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಬಳಿಕ ದಂಡ ಕಟ್ಟಿದ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ಇಂದು ಸಹ ಪೊಲೀಸರು ಹೆದ್ದಾರಿಯಲ್ಲಿ ನಿಗಾ ವಹಿಸಲಿದ್ದಾರೆ. ಇದನ್ನೂ ಓದಿ: ಗ್ರಾಹಕರೇ ಎಚ್ಚರ – ಮನೆ ಮನೆಗೆ ವಿತರಣೆಯಾಗುವ ಗ್ಯಾಸ್ ಸಿಲಿಂಡರ್‌ನಲ್ಲಿ ಭಾರೀ ವಂಚನೆ

    ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಹಲವಾರು ಅಪಘಾತಗಳು ನಡೆದಿದ್ದವು. ಈ ಅಪಘಾತದಲ್ಲಿ ಜೀವ ಹಾನಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯಲು ಬೈಕ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿಷೇಧಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಮಾನವ ಹಕ್ಕುಗಳ ಹೆಸರಲ್ಲಿ ಮಹಿಳೆಯರಿಗೆ ವಂಚನೆ – ನಾಲ್ವರನ್ನು ಮದುವೆಯಾದವನಿಗೆ ಬಿತ್ತು ಬೀದಿಯಲ್ಲಿ ಗೂಸಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು

    ಬುರುಡೆ, ಬೊಗಳೆ ಬಿಟ್ಕೊಂಡು ಓಡಾಡಿದವರಿಗೆ ಚಾಮುಂಡೇಶ್ವರಿ ಜನ ಪಾಠ ಕಲಿಸಿದ್ದಾರೆ: ಸಿದ್ದುಗೆ ಸಿಂಹ ತಿರುಗೇಟು

    ಮಂಡ್ಯ: ಮೈಸೂರಿನಿಂದ (Mysuru) ಪಲಾಯನ ಮಾಡಿಕೊಂಡು ಬಾದಾಮಿಗೆ (Badami) ಹೋಗಬೇಕಾದ ದುಸ್ಥಿತಿ ಬಂದದ್ದು ಬುರುಡೆ ಬಿಡುವ ಸಿದ್ದರಾಮಯ್ಯನವರಿಗೆ (Siddaramaiah) ಹೊರತು ನನಗಲ್ಲ ಎಂದು ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.

    ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದಲ್ಲಿ ಪ್ರತಾಪ್ ಸಿಂಹ ಬುರುಡೆ ಬಿಡುತ್ತಾನೆ ಎಂಬ ವಿಚಾರವಾಗಿ ಮಂಡ್ಯದ (Mandya) ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಅಶೋಕ್ ಜೊತೆ ಮುನಿಸು – ಅರ್ಧದಲ್ಲೇ ಇಳಿದ ಸೋಮಣ್ಣ

    ಮೈಸೂರಲ್ಲಿ ಯಾರು ಬುರುಡೆ, ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ ಅವರಿಗೆ ಜನ ಬುದ್ದಿ ಕಲಿಸಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ, ಟಿ.ನರಸಿಪುರದಲ್ಲಿ ಮಹದೇವಪ್ಪನವರಿಗೆ (H.C.Mahadevappa) ಸರಿಯಾದ ಪಾಠ ಕಲಿಸಿದ್ದಾರೆ ಎಂದು ಟಾಂಗ್ ನೀಡಿದರು.

    ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಾನು ಮೈಸೂರಿನಲ್ಲಿ ಗೆದ್ದಿದ್ದೇನೆ. 2018ರಲ್ಲಿ ನಾನು ದಾಖಲೆಯ ಅಂತರದಲ್ಲಿ ಗೆದ್ದಿದ್ದೇನೆ. ಯಾರು ಬುರುಡೆ ಬಿಡುತ್ತಿದ್ದಾರೆ ಎಂದು ಜನ ತೀರ್ಪು ನೀಡಿದ್ದಾರೆ. ಡಾ.ಮಹದೇವಪ್ಪನವರಿಂದ ನಾನು ಏನು ಕಲಿಯುವ ಅಗತ್ಯವಿಲ್ಲ. ಮಹದೇವಪ್ಪನವರು ಅಭಿವೃದ್ಧಿಯ ವಿರೋಧಿ. ಮೈಸೂರಿನ ಜಲದರ್ಶಿನಿಯಿಂದ ಪಡುವಾರಹಳ್ಳಿಯವರೆಗೆ 6 ಲೇನ್ ಮಾಡುತ್ತೇನೆ ಎಂದು ದುಡ್ಡು ತಂದು ಮಾಡಲಿಲ್ಲ. ನ್ಯಾಷನಲ್ ಹೈವೇ (National Highway) ಯಾವ ರೀತಿ ಆಗುತ್ತದೆ ಎನ್ನುವ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಹಾಗೂ ಮಹದೇವಪ್ಪನವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

    ಪಿಡಬ್ಲೂಡಿಯಲ್ಲಿರುವ ನ್ಯಾಷನಲ್ ಹೈವೇ ವಿಂಗ್ ಅವರು ಇದನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ. 2014ರ ಸೆಪ್ಟೆಂಬರ್‌ನಲ್ಲಿ ಇದರ ಡಿಪಿಆರ್ ಆಗುತ್ತದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ಈ ಯೋಜನೆಯನ್ನು ತೆಗೆದುಕೊಳ್ಳುತ್ತದೆ. 2018 ಫೆಬ್ರವರಿ 19ರಂದು ಮೋದಿ (Narendra Modi) ಅವರು ಇದರ ಬಗ್ಗೆ ಮೈಸೂರಿನಲ್ಲಿ ಘೋಷಣೆ ಮಾಡುತ್ತಾರೆ. ಫೆಬ್ರವರಿ 20ರಂದು ಕ್ಯಾಬಿನೆಟ್ ಕಮಿಟಿ ಪ್ರಧಾನಮಂತ್ರಿಗಳು ಇದಕ್ಕೆ ಅಪ್ರೂವಲ್ ಕೊಡುತ್ತಾರೆ. ಮಾರ್ಚ್ 24ರಂದು ಇದರ ಭೂಮಿ ಪೂಜೆ ನಡೆಯುತ್ತದೆ. ಇದು ಮೋದಿ ಕನಸಿನ ಕೂಸು ಹೊರತು ಬೇರೆಯವರ ಕೂಸು ಅಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: Exclusive:`ಯುವ’ ರಾಜ್‌ಕುಮಾರ್- ಸಪ್ತಮಿ ಗೌಡ ಫೋಟೋಶೂಟ್

    ಸಿದ್ದರಾಮಯ್ಯ, ಮಹದೇವಪ್ಪನವರು ಎಷ್ಟೇ ಮೈ ಪರಚಿಕೊಂಡರೂ ಅವರಿಗೆ ಏನೂ ಗಿಟ್ಟುವುದಿಲ್ಲ. ಸಿದ್ದರಾಮಯ್ಯನವರು ಹೈವೇ ಪರಿಶೀಲನೆ ಮಾಡಬಾರದು ಎಂದು ನಮ್ಮ ತಕರಾರು ಇಲ್ಲ. ಸಿದ್ದರಾಮಯ್ಯನವರೇ 2 ತಿಂಗಳು ಕಾಯಿರಿ, ಜನ ಹೇಗಿದ್ದರೂ ನಿಮಗೆ ನಿವೃತ್ತಿ ಕೊಡುತ್ತಾರೆ. ಆಗ ಮೊಮ್ಮಕ್ಕಳು ಎಲ್ಲರ ಜೊತೆ ಸೇರಿ ಬೆಂಗಳೂರು-ಮೈಸೂರಿಗೆ ಜಾಲಿ ರೈಡ್ ಮಾಡಬಹುದು. ಈಗ ಪರಿಶೀಲನೆ, ರಿವ್ಯೂ ಮಾಡುವುದಕ್ಕೆ ಏನು ಉಳಿದಿಲ್ಲ. ಜಾಲಿ ರೈಡ್ ಮಾಡುವುದಕ್ಕೆ ಒಂದು ಹೈವೇ ಮಾಡಿದ್ದೇವೆ. ಅದು 12ಕ್ಕೆ ಉದ್ಘಾಟನೆ ಆಗುತ್ತದೆ. ಕುಟುಂಬ ಸಮೇತ ಬಂದು ಎಷ್ಟು ಒಳ್ಳೆ ರಸ್ತೆ ಮಾಡಿದ್ದಾರೆ, ಇಂತಹ ರಸ್ತೆ ನಮ್ಮ ಕೈಯಲ್ಲಿ ಮಾಡುವುದಕ್ಕೆ ಆಗಲಿಲ್ಲ ಎಂದು ಪಶ್ಚಾತ್ತಾಪ ಪಡಿ. ನಮ್ಮ ಮಕ್ಕಳಿಗಾದರೂ ಮೋದಿಜೀ ಒಳ್ಳೆಯ ರಸ್ತೆ ಮಾಡಿಕೊಟ್ಟಿದ್ದಾರೆ ಎಂದು ಖುಷಿಯಿಂದ ನಿಮ್ಮ ಹತ್ತಿರ ಇರುವ ಒಳ್ಳೆಯ ಕಾರ್‌ನಲ್ಲಿ ಓಡಾಡಿ ಎಂದು ಅಣಕಿಸಿದರು. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

    ಮೈಸೂರಿನ ಜನಕ್ಕೆ ಸಿದ್ದರಾಮಯ್ಯನವರು ಏನೆಂದು ಗೊತ್ತಾಗಿದೆ. ಎಲ್ಲಿಂದಲೋ ಬಂದು ನನ್ನನ್ನು ಮೈಸೂರಿನ ಜನ ಗೆಲ್ಲಿಸುತ್ತಾರೆ ಎಂದರು. ಅವರ ಬಂಡವಾಳ ಗೊತ್ತಾಗಿ ಸಿದ್ದರಾಮಯ್ಯ ಅವರನ್ನು ಜನ ಮೈಸೂರಿನಿಂದ ಖಾಲಿ ಮಾಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು. ಇದನ್ನೂ ಓದಿ: ಮೆಂಟಲ್ ಕೇಸ್ ಬಗ್ಗೆ ನಮ್ಮನ್ನು ಕೇಳಬೇಡಿ: ರಮೇಶ್ ಜಾರಕಿಹೊಳಿ‌ಗೆ ಡಿಕೆಶಿ ತಿರುಗೇಟು

  • ಫೆ.28 ರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ – ಯಾವ ವಾಹನಕ್ಕೆ ಎಷ್ಟು ದರ?

    ಫೆ.28 ರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ – ಯಾವ ವಾಹನಕ್ಕೆ ಎಷ್ಟು ದರ?

    ರಾಮನಗರ: ಫೆ.28ರಿಂದ ಮೈಸೂರು-ಬೆಂಗಳೂರು (Bengaluru-Mysuru Expressway) ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ. ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಮಂಗಳವಾರದಿಂದ ಶುರುವಾಗಲಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ.

    ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು‌ ಪಥಗಳಿಗೆ ಶುಲ್ಕ ನಿಗದಿ ಮಾಡಿದೆ. ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಚಾರ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ನೂತನ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಮುಂದಾಗಿತ್ತು. ಎರಡು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ಹೆದ್ದಾರಿಯ ಮೊದಲ ಹಂತದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಎರಡನೆ ಹಂತದ ಕಾಮಗಾರಿಯು ಚಾಲ್ತಿಯಲ್ಲಿದ್ದು, ಮುಕ್ತಾಯದ ಹಂತ ತಲುಪಿದೆ. ಎರಡು ಹಂತದ ಕಾಮಗಾರಿ ಮುಗಿಯುವ ಮುನ್ನವೇ ಸರ್ಕಾರ ಮೊದಲ ಹಂತದ ಸಂಚಾರಕ್ಕೆ ಟೋಲ್ ದರ ನಿಗದಿ ಪಡಿಸಿದೆ. ಫೆ.28ರ ಮಂಗಳವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ

    ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 11ರಂದು ನೂತನ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾಗಿ ಈ ವೇಳೆಯೇ ಎರಡನೇ ಹಂತದ ಕಾಮಗಾರಿಯು ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ.

    ಹೀಗಿರಲಿದೆ ಟೋಲ್ ದರ!
    ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಿಗೆ ಶುಲ್ಕ ಅನ್ವಯವಾಗಲಿದೆ. ಇದನ್ನೂ ಓದಿ: ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

    ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ನಿಗದಿ ಪಡಿಸಲಾಗಿದೆ. ಅದೇ ದಿನ ಮರು ಸಂಚಾರಕ್ಕೆ 205 ರೂ., ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಬಾರಿ ಏಕಮುಖ ಸಂಚಾರದ ಪಾಸ್‌ಗೆ 4,525 ರೂ. ದರ ನಿಗದಿ ಮಾಡಲಾಗಿದೆ.

    ಲಘು ವಾಣಿಜ್ಯ ವಾಹನಗಳು ಮತ್ತು ಲಘು ಸರಕು ವಾಹನಗಳ ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ನಿಗದಿ ಪಡಿಸಲಾಗಿದ್ದು, ಅದೇ ದಿನ ಮರು ಸಂಚಾರಕ್ಕೆ 320 ರೂ., ಸ್ಥಳೀಯ ವಾಹನಗಳಿಗೆ 110 ರೂ. ಹಾಗೂ ಒಂದು ತಿಂಗಳ 50 ಬಾರಿ ಏಕಮುಖ ಸಂಚಾರದ ಪಾಸ್‌ಗೆ 7,315 ರೂ. ದರ ನಿಗದಿ. ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) ಏಕಮುಖ ಸಂಚಾರಕ್ಕೆ 720 ರೂ. ನಿಗದಿ ಮಾಡಲಾಗಿದೆ. ಜೊತೆಗೆ ಅದೇ ದಿನ ಮರು ಸಂಚಾರಕ್ಕೆ 1,080 ರೂ. ಸ್ಥಳೀಯ ವಾಹನಗಳಿಗೆ 360ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರೂ. ದರ ನಿಗದಿಗೊಳಿಸಲಾಗಿದೆ.

    ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್) ಏಕಮುಖ ಸಂಚಾರಕ್ಕೆ 880 ರೂ. ಅದೇ ದಿನ ಮರು ಸಂಚಾರಕ್ಕೆ 1,315 ರೂ., ಸ್ಥಳೀಯ ವಾಹನಗಳಿಗೆ 440 ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29255ರೂ ದರ ನಿಗದಿ ಮಾಡಲಾಗಿದೆ. ಸರ್ಕಾರ ನಿಗದಿ ಪಡಿಸಿರುವ ಟೋಲ್ ದರಕ್ಕೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ದಶಪಥ ರಸ್ತೆಯ ಸಂಚಾರವೂ ದುಬಾರಿಯಾಗಿರುವ ಕುರಿತು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಗದಿ ಮಾಡಿರುವ ಟೋಲ್ ದರ ಕಡಿಮೆ ಮಾಡಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಸಿಎಂ ಮದುವೆಯಾಗಿದ್ರೆ ಬೆಲೆ ಏರಿಕೆ ಆಗುತ್ತಿರಲಿಲ್ಲ – ಯೋಗಿ ಆದಿತ್ಯನಾಥ್ ವಿರುದ್ಧ ಇಬ್ರಾಹಿಂ ವ್ಯಂಗ್ಯ

  • ದಶಪಥದಲ್ಲಿ ಬೈಕ್‌ಗಳ ಓಡಾಟಕ್ಕೆ ಅನುಮತಿ ಇಲ್ಲ- ಪ್ರತಾಪ್ ಸಿಂಹ

    ದಶಪಥದಲ್ಲಿ ಬೈಕ್‌ಗಳ ಓಡಾಟಕ್ಕೆ ಅನುಮತಿ ಇಲ್ಲ- ಪ್ರತಾಪ್ ಸಿಂಹ

    ಮೈಸೂರು: ಬೆಂಗಳೂರು – ಮೈಸೂರು ನಡುವಿನ ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಗೊಳಿಸಲಾಗುತ್ತದೆ ಎಂಬ ಸಿಹಿ ಸುದ್ದಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ನಿನ್ನೆಯಷ್ಟೇ ನೀಡಿದ್ರು. ಇದೀಗ, ದ್ವಿಚಕ್ರ-ತ್ರಿಚಕ್ರ ವಾಹನಗಳಿಗೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ (Bengaluru Mysuru Expressway) ಸಂಚರಿಸಲು ಅವಕಾಶವಿರಲ್ಲ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಮಾಹಿತಿ ನೀಡಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ವಿಸ್ ರಸ್ತೆ ನಿರ್ಮಾಣವಾದ ಮೇಲೆ ದ್ವಿಚಕ್ರ ಹಾಗೂ ಮೂರು ಚಕ್ರ ವಾಹನಗಳಿಗೆ ಹೈವೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರಲ್ಲ. ಅಪಘಾತ ಮುಕ್ತ ಎಕ್ಸ್‌ಪ್ರೆಸ್‌ ವೇ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಸುಬ್ರಹ್ಮಣ್ಯದಲ್ಲಿ ಥಳಿತ

    ಇನ್ನೂ ಹೈವೇಗೆ ಏಕೆ `ಕಾವೇರಿ ಎಕ್ಸ್‌ಪ್ರೆಸ್‌ ವೇ’ (Cauvery Expressway SM Krishna) ಎಂದು ಹೆಸರಿಡೋಕೆ ಹೇಳಿದೆ ಎಂಬ ಬಗ್ಗೆ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ

    ಉತ್ತರಪ್ರದೇಶದಲ್ಲಿ (UttarPradesh) ನದಿಗಳ (Rivers) ಹೆಸರನ್ನು ಹೆದ್ದಾರಿಗೆ ಇಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ. ಕಾವೇರಿ ಜೀವನದಿ, ಪವಿತ್ರವಾದ ನದಿ. ಬಹಳ ಭಕ್ತಿಯಿಂದ ಪೂಜಿಸುವ ನದಿ ಕಾವೇರಿ. ಬೆಂಗಳೂರು ಉದ್ಧಾರವಾಗಿದ್ದೇ ಕಾವೇರಿ ನದಿಯಿಂದ. ರಾಜಕಾರಣಿಗಳು ಒಂದೊಂದು ಹೆಸರು ಹೇಳುತ್ತಿದ್ದಾರೆ. ಕಾವೇರಿ ನದಿ ಇಲ್ಲದೇ ಇದ್ದಿದ್ದರೆ ನಾವು ಯಾವ ನೀರು ಕುಡಿಯಬೇಕಿತ್ತು? ಕಾವೇರಿ ನದಿ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ? ನಾಲ್ವಡಿ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದೇವೆ. ಆದ್ದರಿಂದ ಇಲ್ಲಿಗೆ ಕಾವೇರಿ ಹೆಸರು ಸೂಕ್ತ ಎಂದು ಪುನರುಚ್ಚರಿಸಿದ್ದಾರೆ.

    ದಶಪಥ ರಸ್ತೆಗೆ ಹೆಚ್.ಡಿ ದೇವೇಗೌಡರ ಹೆಸರು ಇಡುವಂತೆಯೂ ಒತ್ತಾಯ ಕೇಳಿ ಬಂದಿದೆ. ದೇಶದಲ್ಲಿ ಎಲ್ಲೂ ಹೈವೆಗೆ ವ್ಯಕ್ತಿಯ ಹೆಸರು ಇಟ್ಟಿಲ್ಲ. ಎಸ್.ಎಂ. ಕೃಷ್ಣ ಅವರ ಬಗ್ಗೆ ಗೌರವವಿದೆ. ಅವರನ್ನು ಕೇಳುತ್ತೇವೆ. ಎಲ್ಲರೂ ಸೇರಿ ಕಾವೇರಿ ನದಿ ಹೆಸರು ಇಡಲು ಸಿಎಂಗೆ ಮನವಿ ಮಾಡೋಣ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ – ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಶ್

    ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ – ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಶ್

    ನವದೆಹಲಿ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ (Mysuru-Bengaluru Highway) ಅವೈಜ್ಞಾನಿಕವಾಗಿದ್ದು ಇದರಿಂದ ರೈತರು (Farmers) ಹಾಗೂ ಜನರಿಗೆ ಸಮಸ್ಯೆಗಳು ಎದುರಾಗುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ದೆಹಲಿಯಲ್ಲಿ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದಾರೆ.

    ನಿನ್ನೆ ಸಂಸತ್‍ನಲ್ಲಿಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಕುರಿತು ಮಾತನಾಡಿದ್ದ ಸುಮಲತಾ ಅಂಬರೀಶ್, ಇಂದು ಖುದ್ದು ನಿತಿನ್ ಗಡ್ಕರಿಯರನ್ನು ಭೇಟಿ ಮಾಡಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ನೈಜ ತಾಂತ್ರಿಕ ಹಾಗೂ ವಿನ್ಯಾಸದ ಲೋಪದೋಷಗಳಾದ ಅವೈಜ್ಞಾನಿಕ ಚರಂಡಿ, ಸರ್ವಿಸ್ ರಸ್ತೆ ವಿನ್ಯಾಸ, ವಿವಿಧ ಭಾಗಗಳಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕೆಳಸೇತುವೆಗಳ ನಿರ್ಮಾಣ ಹಾಗೂ ರೈತರು ಕೃಷಿ ಕಾರ್ಯಗಳಿಗೆ ಉಪಯೋಗಿಸುವ ನೀರು ಹರಿವಿಕೆಗೆ ಚರಂಡಿಗಳ ನಿರ್ಮಾಣದ ಬದಲಾಗಿ ಕಾಂಕ್ರೀಟ್ ಪೈಪ್‍ಗಳನ್ನು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಲಾಗಿದೆ ಎಂದು ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಎಸಿ ಇರುವ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸಲಹೆ : ಸುಧಾಕರ್‌

    ಅಲ್ಲದೇ ಈಗಾಗಲೇ ನೂತನವಾಗಿ ನಿರ್ಮಾಣವಾಗಿರುವ ಸೇತುವೆಗಳು ಬಿರುಕು ಬಿಟ್ಟಿರುವುದು ಸಹ ನಾನು ಪರಿವೀಕ್ಷಣೆ ಮಾಡಿದ ಸಂದರ್ಭದಲ್ಲಿ ಕಂಡುಬಂದಿದೆ. ಈ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಆದಷ್ಟು ಬೇಗ ಸರಿಪಡಿಸಬೇಕು ಜೊತೆಗೆ ಈ ಬಾರಿಯ ಮಳೆಯಿಂದ ರೈತರಿಗೆ ಹಾಗೂ ಹೆದ್ದಾರಿ ಬಳಕೆದಾರರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಈ ಬಗ್ಗೆ ಗಮನವರಿಸಿ ತಿಳಿಸಿದ್ದಾರೆ. ಇದನ್ನೂ ಓದಿ: ನಟಿ ಜಯಪ್ರದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ರಾಂಪೂರ್ ಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆ ಜನರಿಗೆ ಅನ್ಯಾಯ – ಶಾಸಕ ದಿನೇಶ್‌ ಗೂಳಿಗೌಡ ಅಸಮಾಧಾನ

    ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆ ಜನರಿಗೆ ಅನ್ಯಾಯ – ಶಾಸಕ ದಿನೇಶ್‌ ಗೂಳಿಗೌಡ ಅಸಮಾಧಾನ

    – ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದ ಶಾಸಕರು
    – ಚನ್ನಪಟ್ಟಣ ತಾಲೂಕಿನ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶಕ್ಕೆ ಅವಕಾಶ ನೀಡಿದ್ದಕ್ಕೆ ಬೇಸರ
    – ಬಹಿರಂಗ ಚರ್ಚೆಗೆ ಶಾಸಕ ದಿನೇಶ್‌ ಗೂಳಿಗೌಡ ಆಗ್ರಹ

    ಬೆಳಗಾವಿ: ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Highway) ಯೋಜನೆಯಲ್ಲಿ ಮಂಡ್ಯ ಜಿಲ್ಲೆ ಜನರಿಗೆ ಅನ್ಯಾಯವಾಗಿದೆ ಎಂದು ಶಾಸಕ ದಿನೇಶ್‌ ಗೂಳಿಗೌಡ (Dinesh Guligowda) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ-275, 6 ಪಥದ ಬೆಂಗಳೂರು-ಮೈಸೂರು ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕ ವ್ಯವಸ್ಥೆಯಲ್ಲಿ ಸಮರ್ಪಕ ಕ್ರಮವಾಗಿಲ್ಲ. ಮದ್ದೂರು ಪಟ್ಟಣಕ್ಕೆ ಚನ್ನಪಟ್ಟಣ ತಾಲ್ಲೂಕಿನ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ. ಇದು ಸರ್ಕಾರದ ಸರಿಯಾದ ಕ್ರಮವಲ್ಲ. ಕೂಡಲೇ ಇದರ ಬಗ್ಗೆ ಬಹಿರಂಗ ಚರ್ಚೆ ಆಗಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ರೆ, ಅಷ್ಟೂ ಆಸ್ತಿ ದಾನ ಮಾಡ್ತೀನಿ – ಸಿ.ಟಿ ರವಿ

    ರಸ್ತೆಯ ಅಭಿವೃದ್ಧಿ ಹಾಗೂ ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕ ವ್ಯವಸ್ಥೆ ಬಗ್ಗೆ ಶಾಸಕರು ಕೇಳಿದ್ದ ಪ್ರಶ್ನೆಗೆ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಸದನದಲ್ಲಿ ಉತ್ತರ ನೀಡಿದ್ದಾರೆ. ಆದರೆ ಈಗ ಸರ್ಕಾರ ಕೈಗೊಂಡಿರುವ ನಿರ್ಧಾರ ಜನಸ್ನೇಹಿಯಾಗಿಲ್ಲ, ಜನವಿರೋಧಿ ಕ್ರಮವಾಗಿದೆ. ಈ ಸಂಬಂಧ ಉದ್ಘಾಟನೆಗೆ ಮೊದಲು ಚರ್ಚೆ ಆಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಸಂಸತ್ ಸದಸ್ಯರು ಹಾಗೂ ನಾನು ಮಂಡ್ಯ ಜಿಲ್ಲೆಯ ಗಡಿ ಭಾಗವಾದ ನಿಡಘಟ್ಟದ ಬಳಿ ಹೆದ್ದಾರಿಗೆ ಆಗಮನ-ನಿರ್ಗಮನ ಸಂಪರ್ಕವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಪ್ರಾಜೆಕ್ಟ್ ಡೈರೆಕ್ಟರ್ ಜೊತೆಗೂಡಿ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಗಡಿ ವ್ಯಾಪ್ತಿಯಲ್ಲಿ ಆಗಮನ-ನಿರ್ಗಮನವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತೇವೆಂದು ಉಸ್ತುವಾರಿ ಸಚಿವರಿಗೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಇಂದು ಸರ್ಕಾರ ಕೊಟ್ಟಿರುವ ಉತ್ತರದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣಕ್ಕೆ ಚನ್ನಪಟ್ಟಣ ತಾಲ್ಲೂಕಿನ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ದಿನೇಶ್‌ ಗೂಳಿಗೌಡ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕುಂದಾ, ಗೋಕಾಕ್ ಕರದಂಟು ಖರೀದಿಸಿದ ಬೊಮ್ಮಾಯಿ

    ಮದ್ದೂರು ಮಾರ್ಗವಾಗಿ ಕೆಸ್ತೂರು-ಕುಣಿಗಲ್-ಕೆ.ಎಂ.ದೊಡ್ಡಿ-ಮಳವಳ್ಳಿ-ಬೆಸಗರಹಳ್ಳಿ-ಕೊಪ್ಪಕ್ಕೆ ಹೋಗುವ ಪ್ರಯಾಣಿಕರಿಗೆ ಇದರಿಂದ ಅನಾನುಕೂಲವಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಗಡಿ ಭಾಗದ ಒಳಗಡೆ ನಿರ್ಗಮನ-ಆಗಮನವನ್ನು ನೀಡುತ್ತೇವೆಂದು ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಪ್ರವೇಶವನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕಲ್ಪಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅನೇಕ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಡನೆ ಸ್ಥಳ ಪರಿಶೀಲನೆ ನಡೆಸಿ ಎಷ್ಟೇ ತಿಳಿ ಹೇಳಿದ್ದರೂ ಸಹ ಸರ್ಕಾರ ತಪ್ಪು ಉತ್ತರವನ್ನೇ ನೀಡುತ್ತಿದೆ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

    ಈ ಬಗ್ಗೆ ಈ ಭಾಗದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು, ಹೆದ್ದಾರಿ ಉದ್ಘಾಟನೆಯಾಗುವ ಮುನ್ನ ಆಗಮನ-ನಿರ್ಗಮನ ಸ್ಥಳಗಳು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲೇ ಇರಬೇಕಾ ಅಥವಾ ಮಂಡ್ಯ ಜಿಲ್ಲೆ ಗಡಿ ಪ್ರಾರಂಭದಿಂದ ಇರಬೇಕಾ ಎಂಬುದರ ಬಗ್ಗೆ ಬಹಿರಂಗ ಚರ್ಚೆಯಾಗಿ ಬೆಳಕು ಚೆಲ್ಲಬೇಕೆಂದು ಶಾಸಕ ದಿನೇಶ್‌ ಗೂಳಿಗೌಡ ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ರಾಮನಗರದಲ್ಲಿ ಕಂಡು ಕೇಳರಿಯದ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ರಾಮನಗರ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ರಾಮನಗರ ಹಾಗೂ ಚನ್ನಪಟ್ಟಣ ತಾಲೂಕಿನ ಶಾಲಾ ಕಾಲೇಜುಗಳಿಗೆ ಇಂದು ಒಂದೇ ದಿನ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ರಜೆ ಘೋಷಿಸಿದ್ದಾರೆ. ಇಂದು ನಡೆಯ ಬೇಕಿದ್ದ ತರಗತಿಯನ್ನ ಶನಿವಾರ ಪೂರ್ಣ ದಿನ ನಡೆಸುವುದಾಗಿ ತಿಳಿಸಿದ್ದಾರೆ.

    ರಾಮನಗರ ಜಿಲ್ಲೆಯಾದ್ಯಂತ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಮನಗರ ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದು, ರೈಲ್ವೆ ಪ್ಲಾಟ್ ಫಾಂ ತುಂಬಾ ಮಳೆ ನೀರು ತುಂಬಿ ಹರಿಯುತ್ತಿದೆ. ರೈಲು ಬರಲು ಹಳಿ ಕಾಣದಂತೆ ನೀರು ತುಂಬಿರುವ ಹಿನ್ನೆಲೆ ಪ್ರತಿನಿತ್ಯ ಬೆಂಗಳೂರು ಮೈಸೂರಿಗೆ ಓಡಾಡುವ ನೂರಾರು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಅಪ್ಪು ಅಗಲಿ ಹತ್ತು ತಿಂಗಳು: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

    ಭಾರೀ ಮಳೆಯಿಂದಾಗಿ ರಾಮನಗರದಲ್ಲಿರುವ ಆರ್ಕೇಶ್ವರ ಕಾಲೋನಿ ಸಂಪೂರ್ಣ ಜಲಾವೃತವಾಗಿದ್ದು, ಕಾಲೋನಿಯಲ್ಲಿರುವ ಮುಕ್ಕಾಲು ಭಾಗ ಮಳೆಯಿಂದ ಮುಳುಗಡೆಯಾಗಿದೆ. ಮನೆಯಲ್ಲಿದ್ದ ದಿನ ಬಳಕೆ ವಸ್ತು, ಬೈಕ್, ಕಾರು ಸಂಪೂರ್ಣ ಜಲಾವೃತವಾಗಿದೆ. ಇದರಿಂದಾಗಿ ಅಲ್ಲಿನ ಜನರಲ್ಲಿ ಆತಂಕ ಮೂಡಿದೆ. ವರುಣನ ಆರ್ಭಟಕ್ಕೆ ಕನಕಪುರ ರಸ್ತೆಯಲ್ಲಿನ ಗೌಡಯನದೊಡ್ಡಿ ಬಳಿ ಇರುವ ಅರ್ಕಾವತಿ ನದಿಯಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಹಸುವೊಂದು ಕೊಚ್ಚಿ ಹೋಗಿದೆ.

    ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ರಾಮಕೃಷ್ಣ ಆಸ್ಪತ್ರೆಯ ನೆಲಮಹಡಿ ಸಂಪೂರ್ಣ ಜಲಾವೃತವಾಗಿದ್ದು, ಹೊರರೋಗಿಗಳ ವಿಭಾಗ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ವೈದ್ಯಕೀಯ ಉಪಕರಣಗಳು ಸಂಪೂರ್ಣ ಹಾನಿಯಾಗಿದ್ದು, ಸದ್ಯ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ಸಲಕರಣೆಗಳನ್ನ ನೀರಿನಿಂದ ಹೊರತೆಗೆಯುತ್ತಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧ: ಅರ್ಜಿದಾರರ ವಿರುದ್ಧ ಸುಪ್ರೀಂಕೋರ್ಟ್ ಗರಂ – ರಾಜ್ಯ ಸರ್ಕಾರ, ಅರ್ಜಿದಾರರಿಗೆ ನೋಟಿಸ್

    ಮತ್ತೊಂದೆಡೆ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ ನಡಸುತ್ತಿದ್ದು, ಕೆಲ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದೆ. ಅಲ್ಲದೇ ರಾಮನಗರ ಸಮೀಪದ ಸಂಗಬಸವನ ದೊಡ್ಡಿ ಬಳಿ ವಾಹನ ಮುಳುಗಡೆಯಾಗಿರುವ ಹಿನ್ನೆಲೆ ಹೆದ್ದಾರಿಯಲ್ಲಿ ಸಾಲುಗಟ್ಟಿ ವಾಹನಗಳು ನಿಂತಿದ್ದು, ಟ್ರಾಫಿಕ್ ಜಾಂ ಸಮಸ್ಯೆ ಎದುರಾಗಿದೆ.

    ಧಾರಾಕಾರ ಮಳೆಗೆ ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ನೀರು ತುಂಬಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ, ಸಹಾಯವಾಣಿಯನ್ನೂ ತೆರೆದಿಲ್ಲ ಎಂದು ಕಿಡಿಕಾರಿದ್ದಾರೆ. ಸದ್ಯ ಜೆಸಿಬಿ ಮೂಲಕ ರಸ್ತೆ ಸರಿಪಡಿಸಿ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿದ್ದಾರೆ.

    ರಾಮನಗರ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಚನ್ನಪ್ಪಟ್ಟಣದ ರೇಷ್ಮೆ ಮಾರುಕಟ್ಟೆಯ ಮುಂಭಾಗದ ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ನೀರು ನುಗ್ಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚನ್ನಪಟ್ಟಣದ ತಟ್ಟಿಗೆರೆ ಬಡಾವಣೆಗೆ ನೀರು ನುಗ್ಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡದ ಕಾರಣ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮಳೆಗೆ ಕೊಚ್ಚಿ ಹೋಯ್ತು ಬೆಂಗಳೂರು -ಮೈಸೂರು ಹೆದ್ದಾರಿ – ಟ್ರಾಫಿಕ್ ಜ್ಯಾಮ್

    ಭಾರೀ ಮಳೆಗೆ ಕೊಚ್ಚಿ ಹೋಯ್ತು ಬೆಂಗಳೂರು -ಮೈಸೂರು ಹೆದ್ದಾರಿ – ಟ್ರಾಫಿಕ್ ಜ್ಯಾಮ್

    ಮಂಡ್ಯ: ಧಾರಾಕಾರ ಮಳೆಗೆ ಮಂಡ್ಯದಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಇದೀಗ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ.

    ಮಂಡ್ಯದ ಇಂಡುವಾಳು ಬಳಿ ಹೆದ್ದಾರಿ ಕೊಚ್ಚಿ ಹೋಗಿದೆ. ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದ ಕಾರಣ ಸೇತುವೆಯ ಪೈಪ್‍ಗಳು ಕೊಚ್ಚಿ ಬಂದಿವೆ. ಸದ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    ಈ ಪರಿಣಾಮ ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುವ ವಾಹನ ಸವಾರು ಟ್ರಾಫಿಕ್ ಜಾಮ್‍ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮಳೆ ಇನ್ನೂ ಹೆಚ್ಚಾದ್ರೆ ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ಶುರುವಾಗಿದೆ.