Tag: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ಹೈವೇ

  • ಜುಲೈ 1 ರಿಂದ ಎಕ್ಸ್‌ಪ್ರೆಸ್‌ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?

    ಜುಲೈ 1 ರಿಂದ ಎಕ್ಸ್‌ಪ್ರೆಸ್‌ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?

    ಮಂಡ್ಯ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಷ್ಟು ದಿನ ಒಂದು ಟೋಲ್‌ನ (Toll) ದರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಜನರಿಗೆ ಮತ್ತೊಂದು ಟೋಲ್ ದರ ಗಾಯದ ಮೇಲೆ ಬರೆ ಎಳೆದಂತೆ ಆಗುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ.

    ಬೆಂಗಳೂರಿನಂತೆ ಮೈಸೂರು ನಗರವನ್ನು ಉದ್ಯಮದಲ್ಲಿ ಅಭಿವೃದ್ಧಿ ಮಾಡಬೇಕೆಂದು ಮತ್ತು ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ 9,000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಾಮನಗರ (Ramanagara) ಜಿಲ್ಲೆಯ ಕಣಮಿಣಕಿ (Kanaminaki) ಟೋಲ್ ಸಂಗ್ರಹ ಆರಂಭವಾಗಿದ್ದು, ಒಂದು ಕಾರಿಗೆ ಏಕಮುಖ ಸಂಚಾರಕ್ಕೆ 165 ರೂ. ಅನ್ನು ವಸೂಲಿ ಮಾಡಲಾಗುತ್ತಿದೆ. ಈ ಹೊತ್ತಿನಲ್ಲಿಯೇ ಹೆದ್ದಾರಿ ಪ್ರಾಧಿಕಾರ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಟೋಲ್ ಅನ್ನು ಜುಲೈ 1ರಿಂದ ಆರಂಭಿಸಲಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು (Ganangooru) ಟೋಲ್ ಪ್ಲಾಜಾದಲ್ಲಿ ವಾಹನ ಸವಾರರು ಟೋಲ್ ಹಣ ನೀಡಬೇಕಿದೆ. ಇದನ್ನೂ ಓದಿ: 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ಸರ್ಕಾರ ನಿರ್ಧಾರ

    ಜನರು ಇಷ್ಟು ದಿನ ಯಾವುದಾದರೂ ಒಂದು ಟೋಲ್‌ನಲ್ಲಿ ಹಣ ಕಟ್ಟಿದರೆ ಆಯಿತು ಎಂದುಕೊಂಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರ ಎರಡು ಟೋಲ್‌ಗಳಿಗೂ ಪ್ರತ್ಯೇಕ ಟೋಲ್ ದರವನ್ನು ನಿಗದಿ ಮಾಡಿದೆ. ಉದಾಹಾರಣೆಗೆ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವವರು ಮೊದಲಿಗೆ ಗಣಂಗೂರು ಟೋಲ್‌ನಲ್ಲಿ 155 ರೂ. ಕಟ್ಟಬೇಕು. ಇದಾದ ಬಳಿಕ ಕಣಮಿಣಕಿ ಟೋಲ್‌ನಲ್ಲಿ 165 ರೂ. ಅನ್ನು ಪಾವತಿ ಮಾಡಬೇಕಾಗಿದೆ. ಏಕಮುಖ ಸಂಚಾರಕ್ಕೆ 320 ರೂ. ಟೋಲ್ ದರ ಇರುತ್ತದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲವೆಂದರೆ ಈ ಹಣ ದುಪ್ಪಟ್ಟು ಆಗಲಿದೆ. ಮಂಡ್ಯದಿಂದ ಬೆಂಗಳೂರಿಗೆ ಕಾರಿನಲ್ಲಿ ಹೋಗುವವರಿಗೆ ಏಕಮುಖ ಸಂಚಾರಕ್ಕೆ 165 ರೂ. ವೆಚ್ಚ ತಗುಲಲಿದ್ದು, ಮಂಡ್ಯದಿಂದ ಮೈಸೂರಿಗೆ ಹೋದರೆ 155 ರೂ. ಟೋಲ್ ಹಣ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಭಾರತ ದೇಶದ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ: ಹೆಚ್‌ಡಿಕೆ

    ಯಾವ ವಾಹನಗಳಿಗೆ ಎಷ್ಟು ಟೋಲ್ ?

    ಏಕಮುಖ ಸಂಚಾರ:
    *ಕಾರು, ಜೀಪು, ವ್ಯಾನು – 155 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 525 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 575 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 825 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1005 ರೂ.

    ಅದೇ ದಿನ ವಾಪಸ್:
    *ಕಾರು, ಜೀಪು, ವ್ಯಾನು – 235 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 790 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 860 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಲೆಕ್ಸ್ಗಳದ್ದು) – 1240 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1510 ರೂ.

    ಮಂಡ್ಯ ಜಿಲ್ಲೆಯ ಒಳಗೆ:
    *ಕಾರು, ಜೀಪು, ವ್ಯಾನು – 80 ರೂ.
    *ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂ.
    *ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) – 265 ರೂ.
    *ಮೂರು ಆಕ್ಸೆಲ್ ವಾಣಿಜ್ಯ ವಾಹನ – 285 ರೂ.
    *ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 415 ರೂ.
    *ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 505 ರೂ. ಇದನ್ನೂ ಓದಿ: Gruha Lakshmi Scheme: ಪ್ರತ್ಯೇಕ ಆಪ್‍ಗೆ ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೋಲ್ ತಕರಾರು ಜನಸಾಮಾನ್ಯರದ್ದಲ್ಲ, ಅದು ಡಿಕೆಶಿ ರಾಜಕಾರಣ: ಬೊಮ್ಮಾಯಿ

    ಟೋಲ್ ತಕರಾರು ಜನಸಾಮಾನ್ಯರದ್ದಲ್ಲ, ಅದು ಡಿಕೆಶಿ ರಾಜಕಾರಣ: ಬೊಮ್ಮಾಯಿ

    ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ (Bengaluru Mysuru Expressway) ಟೋಲ್ (Toll) ಸಂಗ್ರಹದ ಬಗ್ಗೆ ತಕರಾರು ಜನಸಾಮಾನ್ಯರದ್ದಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ರಾಜಕಾರಣ ಮಾಡುತ್ತಿದ್ದಾರೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai) ಕಿಡಿಕಾರಿದ್ದಾರೆ‌.

    ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಟೋಲ್ ಸಂಗ್ರಹದ ಬಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಬಳಸುವ ಭಾಷೆ, ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದ್ದಲ್ಲ ಎಂದು ಗುಡುಗಿದರು. ಇದನ್ನೂ ಓದಿ: KPTCL ನೌಕರರಿಗೆ ಶೇ. 20ರಷ್ಟು ವೇತನ ಪರಿಷ್ಕರಣೆ

    ರಾಷ್ಟ್ರೀಯ ಹೆದ್ದಾರಿ ಬರುವ ಮುನ್ನವೂ ಟೋಲ್ ಸಂಗ್ರಹವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟು ಸೇವೆಗಳು ಸರ್ವಿಸ್ ರಸ್ತೆಯಲ್ಲಿಯೇ ಇದೆ. ಅಲ್ಲೆಲ್ಲೂ ಟೋಲ್ ಇಲ್ಲ. ವಿನಾಃಕಾರಣ ರಾಜಕಾರಣವಾಗುತ್ತಿದೆ ಎಂದರು. ಇದನ್ನೂ ಓದಿ: ಗಡಿ ಕನ್ನಡಿಗರಿಗೆ ಮಹಾರಾಷ್ಟ್ರದ ಆರೋಗ್ಯ ವಿಮೆ – ಬೊಮ್ಮಾಯಿ ತೀವ್ರ ಖಂಡನೆ

  • ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೈಟೆಕ್ ಟಚ್: ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್

    ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೈಟೆಕ್ ಟಚ್: ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್

    ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ (Bengaluru Mysuru Expressway) ಅಪಘಾತ ನಿಯಂತ್ರಣಕ್ಕೆ ಹೆದ್ದಾರಿ ಪ್ರಾಧಿಕಾರ ಹೈಟೆಕ್‌ ಟಚ್‌ ನೀಡಿದ್ದು, ಹೈವೇ ಸ್ಪೀಡ್ ಲಿಮಿಟ್‌ ಅನ್ನು ಮೀರಿದರೇ, ಗಾಡಿ ಫೋಟೋ ಸಮೇತ ಮನೆಗೆ ನೋಟಿಸ್ ಬರುವುದರ ಜೊತೆಗೆ ಕೇಸ್ ಕೂಡ ದಾಖಲು ಮಾಡುವ ವ್ಯವಸ್ಥೆ ಮಾಡಿದೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು – ಮೈಸೂರು ನಡುವೆ ನೂತನವಾಗಿ ಉದ್ಘಾಟನೆಯಾಗಿರುವ ಎಕ್ಸ್‌ಪ್ರೆಸ್‌ ವೇಯಲ್ಲಿನ ಅಪಘಾತ ಪ್ರಕರಣ ತಗ್ಗಿಸಲು ಮುಂದಾಗಿದೆ. ಹೆದ್ದಾರಿಯಲ್ಲಿ ಹೈಟೆಕ್ ಕ್ಯಾಮೆರಾಗಳ (Camera) ಅಳವಡಿಕೆ ಮಾಡುವುದರ ಮೂಲಕ ಸವಾರರ ಸ್ಪೀಡ್ ಮೇಲೆ ಕಣ್ಣಿಡಲು ಮುಂದಾಗಿದೆ. ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುವು ಸಿಕ್ಕ ಬಳಿಕ ಮಾರ್ಗದಲ್ಲಿ ಬರೊಬ್ಬರಿ 335ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸಿವೆ. ಸುಮಾರು 85ಕ್ಕೂ ಹೆಚ್ಚು ಸವಾರರು ಪ್ರಾಣ ಬಿಟ್ಟಿದ್ದಾರೆ.

    ರಸ್ತೆ ಕ್ಲಿಯರ್ ಇದೆ ಎಂಬ ಕಾರಣಕ್ಕೆ ಅತಿ ವೇಗದ ಚಾಲನೆಯಿಂದಲೇ ಅಪಘಾತ (Accident) ಪ್ರಕರಣ ಹೆಚ್ಚಾದದ್ದನ್ನು ಅರಿತ ಹೈವೇ ಪ್ರಾಧಿಕಾರ, ಸದ್ಯ ಸ್ಪೀಡ್ ಲಿಮಿಟ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿದೆ. ಸಂಪೂರ್ಣ ಮಾರ್ಗದಲ್ಲಿ ಪ್ರತಿ 800 ಮೀ.ಗೊಂದು ಹೈಟೆಕ್‌ ಟೆಕ್ನಾಲಜಿಯ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ. ಈ ಕ್ಯಾಮೆರಾಗೆ ಆರ್ಟಿಫಿಷಿಯಲ್ ಪ್ರೋಗ್ರಾಮಿಂಗ್ ಅಳವಡಿಕೆ ಮಾಡಲಾಗಿದ್ದು, ವಾಹನ ಸವಾರರು ಹೈವೇಯ ಸ್ಪೀಡ್ ಲಿಮಿಟ್‌ ಅನ್ನು ಮೀರಿದರೆ, ಅವರ ಮನೆಗೆ ಅತಿವೇಗದ ಚಾಲನೆ ಅಡಿ ಪ್ರಕರಣ ದಾಖಲಾಗಿ ನೋಟಿಸ್ ಕೈ ಸೇರಲಿದೆ. ಇದನ್ನೂ ಓದಿ: ಅನುಕಂಪದ ಅಲೆಯ ಅಬ್ಬರ – ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ

    ಈ ಕ್ಯಾಮೆರಾ ಕೇವಲ ಸ್ಪೀಡ್ ಕಂಟ್ರೋಲ್‌ಗೆ ಸಹಕಾರಿ ಅಷ್ಟೇ ಅಲ್ಲದೆ, ಇತ್ತೀಚೆಗೆ ಹೈವೇಯಲ್ಲಿ ಹೆಚ್ಚಾಗಿರುವ ಕಳ್ಳತನ ಪ್ರಕರಣಗಳನ್ನು ಕೂಡ ತಡೆಯಲು ಸಹಕಾರಿಯಾಗಲಿವೆ. ಅಲ್ಲದೆ ಮಾರ್ಗ ಮಧ್ಯ ಯಾವುದಾದರೂ ಅಪಘಾತ ಸಂಭವಿಸಿದರೇ ಹತ್ತಿರದಲ್ಲಿರುವ ಅಂಬುಲೆನ್ಸ್ ಸರ್ವೀಸ್, ಹೆದ್ದಾರಿ ಪೊಲೀಸರು, ಹೆದ್ದಾರಿ ಅಧಿಕಾರಿಗಳಿಗೂ ಮಾಹಿತಿ ರವಾನಿಸುವ ಟೆಕ್ನಾಲಜಿ ಹೊಂದಿರಲಿದೆ. ಸದ್ಯ ಈ ಎಲ್ಲ ಟೆಕ್ನಾಲಜಿ ಅಳವಡಿಕೆಗೆ ಡಿಪಿಆರ್ ಸಲ್ಲಿಕೆಯಾಗಿದ್ದು, ಮುಂದಿನ 6, 7ತಿಂಗಳಲ್ಲಿ ಸಂಪೂರ್ಣ ಅಳವಡಿಕೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ – ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ಗಡ್ಕರಿ

    ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ – ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ಗಡ್ಕರಿ

    ಬೆಂಗಳೂರು: ಬೆಂಗಳೂರಿನಿಂದ (Bengaluru) ಮೈಸೂರಿಗೆ (Mysuru) ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದಾದ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bengaluru-Mysuru Expressway) ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಇಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ವೈಮಾನಿಕ ಸಮೀಕ್ಷೆ  ನಡೆಸಿದ್ದಾರೆ.

    ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಭಾಗಶಃ ಪೂರ್ಣ ಹಿನ್ನೆಲೆ ಇಂದು ನಿತಿನ್ ಗಡ್ಕರಿ ಹೆದ್ದಾರಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ-ಶ್ರೀರಂಗಪಟ್ಟಣದವರೆಗೆ ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಈ ವೇಳೆ ನಿತಿನ್ ಗಡ್ಕರಿಗೆ ಸಂಸದ ಬಿ.ಎನ್.ಬಚ್ಚೇಗೌಡ, ಸಚಿವರಾದ ಸಿ.ಸಿ ಪಾಟೀಲ್ ಸೇರಿದಂತೆ ಕೆಲ ಸಚಿವರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: 40% ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಕೇಂದ್ರ ಸಚಿವರಿಗೆ ಸ್ವಾಗತ – ಬಿಜೆಪಿ ವಿರುದ್ಧ ಜೆಡಿಎಸ್ ಟ್ವೀಟ್ ಬಾಣ

    ರಾಜ್ಯ ರಾಜಧಾನಿ ಹಾಗೂ ಸಾಂಸ್ಕೃತಿಕ ನಗರಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಇನ್ನೆನ್ನು ಪೂರ್ಣಗೊಳ್ಳುವ ಹಂತ ತಲುಪಿದೆ. ಒಟ್ಟು 118 ಕಿ.ಮೀ ಉದ್ದದ್ದ ಎಕ್ಸ್‌ಪ್ರೆಸ್‌ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದೇ ಫೆಬ್ರವರಿ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಒಟ್ಟು 9,551 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ದಶಪಥ ಹೆದ್ದಾರಿ 9 ಬೃಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ ಹೊಂದಿದೆ. 4 ರೈಲ್ವೆ ಮೇಲ್ಸೇತುವೆ, 28 ವೆಹಿಕಲ್ ಅಂಡರ್‍ಪಾಸ್, 13 ಪಾದಚಾರಿಗಳ ಅಂಡರ್ ಪಾಸ್‍ಗಳನ್ನ ಒಳಗೊಂಡಿದೆ. ಈ ಯೋಜನೆ ಪೂರ್ಣಗೊಂಡರೆ ಮೈಸೂರು-ಬೆಂಗಳೂರು ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆಯಾಗಲಿದೆ. ಜೊತೆಗೆ ಮಧ್ಯೆ ಸಿಗುವ ಹಲವು ಪಟ್ಟಣಗಳಿಗೆ ಬೈಪಾಸ್ ವ್ಯವಸ್ಥೆ ಕಲ್ಪಿಸಿ ಎಂಟ್ರಿ ಹಾಗೂ ಎಕ್ಸಿಟ್‍ಗಳನ್ನು ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k