Tag: ಬೆಂಗಳೂರು ಮಹಿಳೆ

  • ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್‌

    ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್‌

    ಬೆಂಗಳೂರು: ಮಹಿಳೆಯರು ಸ್ನಾನ (Women Bath) ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ ವಿಕೃತ ಕಾಮುಕನನ್ನ ಕಾಡುಗೋಡಿ ಪೊಲೀಸರು (Kadugodi Police) ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

    ಹಾಜ ಮೊಯಿನುದ್ದಿನ್ ಬಂಧಿತ ಆರೋಪಿ. ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್, ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ (Mobile Video) ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದ. ಇದನ್ನೂ ಓದಿ: ಬೆಂಗಳೂರಲ್ಲಿ ಕಿಟ್ಟಿ ಪಾರ್ಟಿ ಆಯೋಜಿಸಿ 50 ಕೋಟಿ ವಂಚನೆ ಕೇಸ್ – ಲಾಯರ್ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದ ಮತ್ತೋರ್ವ ಅರೆಸ್ಟ್

    ಇದೇ ರೀತಿ ಕಳೆದ ಮಂಗಳವಾರ ಬೆಳಗ್ಗೆ 6:30ರ ಸುಮಾರಿಗೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ-ಮಗಳು ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದಾರೆ. ಇದನ್ನ ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಮಗಳು ವಿಡಿಯೋ ಮಾಡೋದನ್ನ ಗಮನಿಸಿದ್ದಾಳೆ. ಬಳಿಕ ಹೊರಗೆ ಬಂದು ತಂದೆಗೆ ಹೇಳಿದ್ದಾಳೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

    ಬಾಲಕಿ ತಂದೆ ಹೋಗಿ ನೋಡುವಷ್ಟರಲ್ಲಿ ಕಾಮುಕ ಅಲ್ಲಿಂದ ಎಸ್ಕೇಪ್‌ ಆಗಿದ್ದ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ವಿಡಿಯೋವನ್ನೂ ಡಿಲೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಬೌದ್ಧ ವಿಹಾರದ ಮೇಲೆ ವೈಮಾನಿಕ ದಾಳಿಗೆ 23 ಮಂದಿ ಬಲಿ

  • ಆನೇಕಲ್‌ | ಹಾಡಹಗಲೇ ಮೈಕೈ ಮುಟ್ಟಿ ಯುವತಿಗೆ ಲೈಂಗಿಕ ಕಿರುಕುಳ – ಐವರ ವಿರುದ್ಧ ದೂರು

    ಆನೇಕಲ್‌ | ಹಾಡಹಗಲೇ ಮೈಕೈ ಮುಟ್ಟಿ ಯುವತಿಗೆ ಲೈಂಗಿಕ ಕಿರುಕುಳ – ಐವರ ವಿರುದ್ಧ ದೂರು

    ಆನೇಕಲ್‌: ಅಂಗಡಿಗೆ ಹೊರಟಿದ್ದ ಯುವತಿಗೆ ಮೈ ಕೈ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ (Sexual harassment) ನೀಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲ್ಲೂಕಿನ ಮೈಲಸಂದ್ರ ಬಳಿಯಲ್ಲಿ ನಡೆದಿದೆ.

    ಭಾನುವಾರ (ನಿನ್ನೆ) ಸಂಜೆ 4 ಗಂಟೆ ಸುಮಾರಿಗೆ ಬನ್ನೇರುಘಟ್ಟ ಪೊಲೀಸ್ ಠಾಣಾ (Bannerghatta Police Station) ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಗಾಂಜಾ ನಶೆಯಲ್ಲಿದ್ದ ಐದಾರು ಮಂದಿ ಕೃತ್ಯ ಎಸಗಿದ್ದಾರೆ. ಅಲ್ಲದೇ ಪ್ರತಿರೋಧ ತೋರಿದ ಯುವತಿ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಸಾಂಬಾರ್ ಮಾಡುವ ವಿಚಾರಕ್ಕೆ‌ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಸಂತ್ರಸ್ತ ಯುವತಿ ದಿನಸಿ ತರಲು ಹೋಗಿದ್ದರು. ಈ ವೇಳೆ ಗಾಂಜಾ (Ganja) ನಶೆಯಲ್ಲಿದ್ದ ಕಿರಾತಕರು ಅಡ್ಡಗಟ್ಟಿ ಆಕೆಯ ಮೈಕೈ ಮುಟ್ಟಿ ಎಳೆದಾಡಿದ್ದಾರೆ. ಯುವತಿ ಪ್ರತಿರೋಧ ತೋರಿದ್ದಕ್ಕೆ ನಡುರಸ್ತೆಯಲ್ಲೇ ಹಲ್ಲೆ ಕೂಡ ಮಾಡಿದ್ದಾರೆ. ಹೇಗೋ ಆಕೆ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ಈ ವೇಳೆ ಸ್ಥಳೀಯರ ಮೇಲೂ ಹಲ್ಲೆ ನಡೆಸಿದ ಕಿಡಿಗೇಡಿಗಳು ಯುವತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

    ಮಹಿಳೆ ಮತ್ತು ಸ್ಥಳೀಯರ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: Gadag | ಶಾಲಾ ಮೇಲ್ಛಾವಣಿ ಪದರ ಕುಸಿತ – ಓರ್ವ ಶಿಕ್ಷಕ, ಐವರು ವಿದ್ಯಾರ್ಥಿಗಳಿಗೆ ಗಾಯ

    ಸಂತ್ರಸ್ತ ಯುವತಿ ಒಂದು ವಾರದ ಹಿಂದೆಯಷ್ಟೇ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಬಾಡಿಗೆ ಮನೆಗೆ ಬಂದಿದ್ದಳು. ಅಣ್ಣ ವಾಸವಿದ್ದ ಮನೆ ಸಮೀಪದಲ್ಲೇ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದಳು. ನಿನ್ನೆ ಸಂಜೆ ಒಬ್ಬಂಟಿಯಾಗಿ ಸಾಗುವಾಗ ಕಿಡಿಗೇಡಿಗಳು ನೀಚ ಕೃತ್ಯ ಎಸಗಿದ್ದಾರೆ. ಈ ಸಂಬಂಧ ನಿನ್ನೆ ಸಂಜೆಯೇ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ, ಆರೋಪಿಗಳನ್ನು ವಶಕ್ಕೆ ಪಡೆಯುವ ಕೆಲಸವನ್ನೂ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕದನ ಭೂಮಿಯಿಂದ ಓಡಿಹೋಗಲ್ಲ, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ: ಬಿಆರ್ ಪಾಟೀಲ್

  • ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ನೀರು ಕುಡಿಯೋ ನೆಪದಲ್ಲಿ ಬಂದು ಎಳೆದಾಡಿದ – ಡೆಲಿವರಿ ಬಾಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ಬೆಂಗಳೂರು: ಫುಡ್ ಡೆಲಿವರಿ ಬಾಯ್‌ (Food Delivery Boy) ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದ್ದು, ಇಲ್ಲಿನ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ.

    ನಡೆದಿದ್ದೇನು?
    ಕಳೆದ ಮಾರ್ಚ್ 17ರಂದು (ಭಾನುವಾರ) ಸಂಜೆ 6:30ರ ವೇಳೆಗೆ ಹೆಚ್‌ಎಎಲ್ ಪೊಲೀಸ್ ಠಾಣಾ (HAL Police Station) ವ್ಯಾಪ್ತಿಯ ಮನೆಯೊಂದಕ್ಕೆ ಫುಡ್ ಡೆಲಿವರಿ ನೀಡಲು ಹೋಗಿದ್ದ. ಫುಡ್ ನೀಡಿದ ಬಳಿಕ ವಾಶ್‌ ರೂಂ ಉಪಯೋಗಿಸಲು ಮನವಿ ಮಾಡಿ, ಮನೆಯೊಳಕ್ಕೆ ಎಂಟ್ರಿಕೊಟ್ಟಿದ್ದಾನೆ. ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ – ಲವ್ ಜಿಹಾದ್‌ಗೆ ಮುಂದಾಗಿದ್ದ, ಮತಾಂತರಕ್ಕೆ ಯತ್ನಿಸಿದ್ದನಂತೆ ಯುವಕ

    ಬಳಿಕ ಯುವತಿಗೆ ಕುಡಿಯಲು ನೀರು ಕೊಡುವಂತೆ ಕೇಳಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ.

    ಘಟನೆ ಸಂಬಂಧ ಯುವತಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

  • ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ

    ನಮ್ಮ ಮೆಟ್ರೋದಲ್ಲಿ ಕಾಮುಕನ ಚೇಷ್ಟೆ – ಖಾಸಗಿ ಅಂಗ ಸ್ಪರ್ಶಿಸಿ ಯುವತಿಗೆ ಕಿರುಕುಳ

    – ಯುವಕನಿಗೆ ಹಿಗ್ಗಾಮುಗ್ಗ ತರಾಟೆ, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆಸಾಮಿ

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಯುವತಿಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಜನವರಿ 1 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವಕನೋರ್ವ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಮೆಟ್ರೋದಿಂದ ಇಳಿಯುತ್ತಿದ್ದಂತೆ ಯುವತಿ (Bengaluru Woman), ಯುವಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾಳೆ.

    ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾಳೆ. ಬಳಿಕ ನೀನು ಇಲ್ಲಿಂದ ಹೋಗೋಹಾಗಿಲ್ಲ, ನಿನಗೆ ಶಿಕ್ಷೆ ಆಗಲೇಬೇಕು, ಮಾತನಾಡದಿದ್ರೆ ನಮಗೆ ನ್ಯಾಯ ಸಿಗಲ್ಲ ಎಂದು ಪಟ್ಟು ಹಿಡಿದು ಕ್ರಮಕ್ಕೆ ಒತ್ತಾಯಿಸಿದ್ದಾಳೆ. ಬಳಿಕ ವಿಚಾರಣೆ ನಡೆಸಿ ಮೆಟ್ರೊ ಅಧಿಕಾರಿಗಳು ಯುವಕನನ್ನ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಯುವಕ ತಪ್ಪೊಪ್ಪಿಕೊಂಡ ಬಳಿಕ ಇನ್ನೊಮ್ಮೆ ಹೀಗೆ ಮಾಡದಂತೆ ಕ್ಷಮೆ ಕೇಳಿಸಿ ಕಳುಹಿಸಿದ್ದಾರೆ.

    ಘಟನೆ ನಡೆದ ಒಂದು ವಾರದ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿದ್ದ ಯುವಕ ಮೂಲತಃ ಉತ್ತರ ಭಾರತದ ನಿವಾಸಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನವೇ ನಮಗೆ ಹೆರಿಗೆಯಾಗಲಿ: ವೈದ್ಯರ ಬಳಿ ಗರ್ಭಿಣಿಯರ ಮನವಿ

    ಮೆಟ್ರೋದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ?
    ಮೆಟ್ರೋದಲ್ಲಿ ಯುವತಿಯೊಂದಿಗಿನ ಅಸಭ್ಯ ವರ್ತನೆ ಕಂಡುಬಂದ ಬಳಿಕ ಮಹಿಳೆಯರಿಗೆ ಮೆಟ್ರೋದಲ್ಲಿ ರಕ್ಷಣೆ ಇಲ್ವಾ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಬಿಎಂಟಿಸಿ ಸಾರಿಗೆ ಇಲಾಖೆಯು ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್‌ಗಳನ್ನ ಅಳವಡಿಸಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಮಹಿಳಾ ಸುರಕ್ಷತೆಗೆ ಹೆಚ್ಚುವರಿ ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಅಫ್ಘಾನ್‌ ವಿರುದ್ಧ T20 ಸರಣಿಗೆ‌ ಬಲಿಷ್ಠ ತಂಡ ಪ್ರಕಟ – ಟೀಂ ಇಂಡಿಯಾಕ್ಕೆ ರೋಹಿತ್‌ ಸಾರಥಿ, ಕೊಹ್ಲಿ ಕಂಬ್ಯಾಕ್‌

  • 41,000 ರೂ.ಗೆ ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಬೆಂಗ್ಳೂರು ಮಹಿಳೆ ಯತ್ನ – ರೇಟ್‌ ನೋಡಿ ನೆಟ್ಟಿಗರು ಶಾಕ್‌!

    41,000 ರೂ.ಗೆ ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಬೆಂಗ್ಳೂರು ಮಹಿಳೆ ಯತ್ನ – ರೇಟ್‌ ನೋಡಿ ನೆಟ್ಟಿಗರು ಶಾಕ್‌!

    ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಮಹಿಳೆಯೊಬ್ಬರು (Bengaluru Women) ವಾಟರ್‌ ಡಿಸ್ಪೆನ್ಸರ್‌ ಅನ್ನು ನೂರು, ಇನ್ನೂರಲ್ಲ ಬರೋಬ್ಬರಿ 41,000 ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮಹಿಳೆ ಹೇಳಿದ ದರ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

    ಫೇಸ್ಬುಕ್ ಬಳಕೆದಾರರಾದ ಮೇಘನಾ ಅಲ್ಲಾ ಅವರು ಒಂದು ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ನಲ್ಲಿ, 2 ನೀರಿನ ಕ್ಯಾನ್‌ ಜೊತೆಗೆ ವಾಟರ್‌ ಡಿಸ್ಪೆನ್ಸರ್‌ (Water Dispenser) ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಬೆಲೆ 500 ಡಾಲರ್‌ (ಅಂದಾಜು 41,000 ರೂಪಾಯಿ). ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವುದರಿಂದ ಇದನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್‌ ನಿಷೇಧ ವಾಪಸ್‌: ಸಿಎಂ ಸಿದ್ದರಾಮಯ್ಯ ಘೋಷಣೆ

    ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಅವರು ವಿಧಿಸಿರುವ ರೇಟ್‌ ಕೇಳಿ ಜನ ಬೆಚ್ಚಿಬಿದ್ದಿದ್ದಾರೆ. ಬರೋಬ್ಬರಿ 41,000 ರೂ. ಇದನ್ನು ಕೆಲವರು ಗೇಲಿ ಮಾಡಿದ್ದಾರೆ. ಮಹಿಳೆಯ ಪೋಸ್ಟ್‌ಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.

    ಮಹಿಳೆಯ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್‌ ಮಾಡುತ್ತಿದ್ದಾರೆ. ‘ಇದು ಸಾರಿಗೆ ವೆಚ್ಚವನ್ನೂ ಒಳಗೊಂಡಿದೆಯೇ’ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿ ಕಾಮೆಂಟ್‌ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಏಪ್ರಿಲ್ 20, 21 ರಂದು ಸಿಇಟಿ ಪರೀಕ್ಷೆ – ಜನವರಿ 10 ರಿಂದ ಅರ್ಜಿ ಸಲ್ಲಿಕೆ ಆರಂಭ: ಕೆಇಎ

    ‘ವಾಟರ್‌ ಡಿಸ್ಪೆನ್ಸರ್‌ಗೆ 500 ಡಾಲರ್‌ ದರ ಸ್ವಲ್ಪ ದುಬಾರಿಯಾಯಿತು’ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್‌ ಮಾಡಿದ್ದಾರೆ. ‘ನೀರನ್ನೂ ಸೇರಿಸಿ ರೇಟ್‌ ಹಾಕಿದ್ದೀರಾ’ ಎಂದು ಇನ್ನೊಬ್ಬರು ಗೇಲಿ ಮಾಡಿ ಪ್ರಶ್ನಿಸಿದ್ದಾರೆ. ‘ಈ ರೀತಿಯ ಪೋಸ್ಟ್‌ ಮೂಲಕ ಏನು ಹೇಳಲು ಹೊರಟಿದ್ದೀರಿ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

  • ಬೆಂಗ್ಳೂರು ಮಾಲ್‌ನಲ್ಲಿ ಸೆಕ್ಯುರಿಟಿ ಮೇಲೆ ಹಲ್ಲೆ, ಪೊಲೀಸ್‌ ಕೈಗೆ ಕಚ್ಚಿದ ಮಹಿಳೆ ಬಂಧನ

    ಬೆಂಗ್ಳೂರು ಮಾಲ್‌ನಲ್ಲಿ ಸೆಕ್ಯುರಿಟಿ ಮೇಲೆ ಹಲ್ಲೆ, ಪೊಲೀಸ್‌ ಕೈಗೆ ಕಚ್ಚಿದ ಮಹಿಳೆ ಬಂಧನ

    ಬೆಂಗಳೂರು: ರಾಜಧಾನಿಯ ಜನಪ್ರಿಯ ಮಾಲ್‌ವೊಂದರಲ್ಲಿ (Bengaluru Mall) ಪೊಲೀಸ್‌ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

    ಚಾರ್ಟರ್ಡ್‌ ಅಕೌಂಟೆಂಟ್‌ (Chartered Accountant) ಉದ್ಯೋಗಿ 28 ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲ್‌ ಮುಚ್ಚುವ ಸಮಯದಲ್ಲಿ ಹೊರಗಡೆ ಹೋಗುವಂತೆ ಹೇಳಿದ್ದಾರೆ. ಈ ವೇಳೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೇಲೆಯೇ ಮಹಿಳೆ ಹಲ್ಲೆ ನಡೆಸಿದ್ದಾಳೆ.

    ಮಹಿಳೆ ಅ.11 ರ ರಾತ್ರಿ 10:30 ಕ್ಕೆ ಚಲನಚಿತ್ರ ವೀಕ್ಷಣೆಗೆ ಬಂದಿದ್ದರು. ಆದರೆ ಪ್ರದರ್ಶನ ಮುಗಿದ ನಂತರ ಗಂಟೆಗಟ್ಟಲೆ ಅಲ್ಲೇ ಇದ್ದರು. ಮಹಿಳೆ ಮಾಲ್ ಆವರಣದಲ್ಲಿ ಮಧ್ಯರಾತ್ರಿ 2:30 ರ ವರೆಗೂ ಅಲ್ಲೇ ಇದ್ದರು. ಇದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಮಾಲ್‌ ಒಳಗಡೆ ತಿರುಗಾಡುತ್ತಿದ್ದ ಮಹಿಳೆಯನ್ನು ಹೊರಗಡೆ ಹೋಗುವಂತೆ ಹೇಳಿದ್ದಾರೆ. ಆದರೆ ಮಹಿಳೆಯು ಸಿಬ್ಬಂದಿ ಹಾಗೂ ಮಾಲ್‌ ಮ್ಯಾನೇಜರ್‌ ಅವರನ್ನು ನಿಂದಿಸಿದ್ದಾಳೆ. ಅಲ್ಲದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಬೆಳ್ಳೂರು ಪೊಲೀಸರು ತಿಳಿಸಿದ್ದಾರೆ.

    ಮಾಲ್‌ ಮ್ಯಾನೇಜರ್‌, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಕರೆಗೆ ಪ್ರತಿಕ್ರಿಯಿಸಿ, ನಂತರ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಆದರೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆ, ಎಸ್‌ಐನ ಕೈಗೂ ಕಚ್ಚಿದ್ದಾಳೆ. ಅಲ್ಲದೇ ತನ್ನ ಶೂ ತೆಗೆದು ASI ಮೇಲೆ ಎಸೆದಿದ್ದಾಳೆ.

    ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353, 323, 324 ಮತ್ತು 504 ರ ಅಡಿಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆಕೆಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಮಹಿಳೆ ಮಾಲ್‌ಗೆ ಹೋದಾಗ ಯಾವುದಾದರು ಸಮಸ್ಯೆ ಎದುರಿಸಿದ್ದಾರೆಯೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ…

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಪತಿ ಹೆಸರನ್ನ ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಬೆಂಗ್ಳೂರು ಮಹಿಳೆ – ಓವರ್ ಆಕ್ಷನ್ ಅಂತಾ ನೆಟ್ಟಿಗರಿಂದ ತರಾಟೆ

    ಬೆಂಗಳೂರು: ದಿನವಿಡೀ ಫೋನ್‌ನಲ್ಲಿ ಮಾತಾಡುವುದಷ್ಟೇ ಪ್ರೀತಿಯಲ್ಲ. ಪೊಳ್ಳು ಮಾತಿನ ಮೆಸೇಜ್‌ನಲ್ಲಿಯೇ ಮುಳುಗಿರುವುದೂ ಪ್ರೀತಿಯಲ್ಲ. ಕಾಲ್ ಮಾಡಲಿಲ್ಲ, ಮೆಸೇಜ್‌ಗೆ ಸರಿಯಾಗಿ ರಿಪ್ಲೆ, ಕೊಡಲಿಲ್ಲ ಅಂದಮಾತ್ರಕ್ಕೆ ಪ್ರೀತಿ ಕಡಿಮೆಯಾಯ್ತು ಅಂತಾ ಅರ್ಥವಲ್ಲ. ನೀನು ಚಂದವಳ್ಳಿಯ ತೋಟದಲ್ಲಿ ಅರಳಿರುವ ಹೂವು ಅಂತಾ ಬಣ್ಣದ ಮಾತುಗಳನ್ನಾಡಿದರೆ ಅದು ಎದ್ವಾತದ್ವಾ ಪ್ರೀತಿ ಇದೆ ಅಂತಲ್ಲ. ಈ ಡೈಲಾಗ್‌ಗಳನ್ನ ನಿತ್ಯ ಪ್ರೇಮಿಗಳಿಂದ ಕೇಳುತ್ತಲೇ ಇರುತ್ತೇವೆ.

    ಬೆಂಗಳೂರಿನ ಮಹಿಳೆಯೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ಪತಿಯ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, `ಮುಂದಿನ ರೀಲ್‌ನಲ್ಲಿ ಅಂತಿಮ ಪ್ರೀತಿ’ ಎಂದೂ ಬರೆದುಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮಹಿಳೆಯ ಫೋಟೋ ಹಂಚಿಕೊಳ್ಳಲಾಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫೋಟೋದಲ್ಲಿನ ಮಹಿಳೆ ತನ್ನ ಪತಿ ಸತೀಶ್ ಹೆಸರನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾಳೆ. 2.68 ಲಕ್ಷಕ್ಕೂ ಅಧಿಕ ಮಂದಿ ಫೋಟೋವನ್ನ ಲೈಕ್ ಮಾಡಿದ್ದಾರೆ.

    ಮಹಿಳೆಯ ಫೋಟೋವನ್ನು ನೋಡಿ ಕೆಲವರು ಇದು ಪಕ್ಕಾ ಟ್ರೂ ಲವ್ ಅಂತಾ ಹೊಗಳಿದರೆ, ಇನ್ನೂ ಕೆಲವರು ಇದು ಓವರ್ ಆಕ್ಷನ್, ನಾನು ನನ್ನ ಲೈಕ್ ಅನ್ನು ಕ್ಯಾನ್ಸಲ್ ಮಾಡ್ತೀನಿ. ಇದು ಮೂರ್ಖತನ, ನಿಜವಾದ ಪ್ರೀತಿಯನ್ನ ಈ ರೀತಿ ಸಾಬೀತು ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

  • ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    ಯುಎಇಯಲ್ಲಿ ಬೆಂಗ್ಳೂರು ಮಹಿಳೆಗೆ ಪತಿಯಿಂದ ಕಿರುಕುಳ- ತಾಯ್ನಾಡಿಗೆ ಕರೆದೊಯ್ಯುವಂತೆ ಮನವಿ

    – ರಕ್ಷಣೆ ಕೋರಿದ ವಿಡಿಯೋ ವೈರಲ್
    – ಭಾರತದ ರಾಯಭಾರಿಯಿಂದ ಮಹಿಳೆಯ ರಕ್ಷಣೆ

    ದುಬೈ: ಯುಎಇಯ ಶಾರ್ಜಾದಲ್ಲಿ ಪತಿ ಕಿರುಕುಳ ಕೊಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ರಕ್ಷಣೆ ಕೋರಿ ವಿಡಿಯೋ ಟ್ವೀಟ್ ಮಾಡಿದ್ದರು. ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

    ಬೆಂಗಳೂರು ಮೂಲದ ಜಸ್ಮಿನ್ ಸುಲ್ತಾನಾ ಅವರನ್ನು ಮೊಹಮದ್ ಕಿಝಾರುಲ್ಲಾ ಮದುವೆಯಾಗಿದ್ದನು. ಬಳಿಕ ಪತ್ನಿಯನ್ನು ಯುಎಇಯ ಶಾರ್ಜಾಗೆ ಮೊಹಮದ್ ಕರೆದೊಯ್ದಿದ್ದನು. ಅಲ್ಲಿ ಮಹಿಳೆಗೆ ಪತಿ ನಿರಂತರ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮಾನಸಿಕ ಹಾಗೂ ದೈಹಿಕವಾಗಿ ತನಗೆ ಕೊಡುತ್ತಿದ್ದ ಕಿರುಕುಳವನ್ನು ಸಹಿಸಲಾಗದೆ ಮಹಿಳೆ ರಕ್ಷಣೆ ಕೋರಿ ವಿಡಿಯೋ ಮಾಡಿ ಟ್ವೀಟ್ ಮಾಡಿದ್ದರು. ವಿಡಿಯೋದಲ್ಲಿ ನನಗೆ ಪತಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ನನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನನ್ನು ಹಾಗೂ ಮಕ್ಕಳನ್ನು ರಕ್ಷಿಸಿ. ಭಾರತಕ್ಕೆ ನಾನು ವಾಪಸ್ ಹೋಗಲು ಸಹಾಯ ಮಾಡಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದರು.

    ಈ ವಿಡಿಯೋ ಟ್ವೀಟ್‍ಗೆ ಪ್ರಧಾನಿ ನರೇಂದ್ರ ಮೋದಿ, ದುಬೈ ಪೊಲೀಸ್ ಹಾಗೂ ಭಾರತೀಯ ರಾಯಭಾರಿಯ ಹ್ಯಾಶ್ ಟ್ಯಾಗ್ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಕ್ರಮ ತೆಗೆದುಕೊಂಡು, ಶಾರ್ಜಾ ಪೊಲೀಸರ ಸಹಾಯದಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ.

    ಈ ಬಗ್ಗೆ ಶಾರ್ಜಾ ಪೊಲೀಸರು ಟ್ವೀಟ್ ಮಾಡಿ, ಭಾರತೀಯ ಮಹಿಳೆಯೊಬ್ಬರಿಗೆ ಆಕೆಯ ಪತಿ ಕಿರುಕುಳ ನೀಡುತ್ತಿರುವ ಬಗ್ಗೆ ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಈಗಾಗಲೇ ಈ ಸಂಬಂಧ ಮಹಿಳೆಯ ದೂರು ಪಡೆದು ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಮಹಿಳೆಯನ್ನು ನಾವು ಭೇಟಿ ಮಾಡಿದ್ದೇವೆ. ಸದ್ಯ ಅವರು ಸುರಕ್ಷಿತವಾಗಿದ್ದಾರೆ. ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಸ್ಥಳೀಯ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಾವು ಕೂಡ ಆರೋಪಿಯನ್ನು ವಿಚಾರಣೆ ನಡೆಸಲಿದ್ದೇವೆ. ಮಹಿಳೆಗೆ ತಮ್ಮಿಂದ ಆಗುವ ಎಲ್ಲಾ ಸಹಾಯವನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದೆ.

    ಅಧಿಕಾರಿಗಳು ರಕ್ಷಿಸಿದ ಬಳಿಕ ಮಹಿಳೆ ಪ್ರತಿಕ್ರಿಯಿಸಿ, ಟ್ವಿಟ್ಟರ್ ಹಾಗೂ ನನ್ನ ಸಹಾಯಕ್ಕೆ ಬಂದ ಎಲ್ಲರಿಗೂ ಧನ್ಯವಾದ. ನನಗೆ ಮೆಸೇಜ್ ಮಾಡಿ ಬೆಂಬಲಕ್ಕೆ ನಿಂತು, ನನ್ನ ನೋವಿಗೆ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈಗ ಪತಿಯ ಕಿರುಕುಳದಿಂದ ಮುಕ್ತಿ ಪಡೆದಿದ್ದೇನೆ. ಈಗಾಗಲೇ ನನ್ನ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ವರ್ಷ ನಾನು ದಾಂಪತ್ಯ ಜೀವನದಲ್ಲಿ ಅನುಭವಿಸಿದ ನೋವು, ಕಿರುಕುಳಕ್ಕೆ ಮುಕ್ತಿ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಮಹಿಳೆಯ ಟ್ವೀಟ್‍ಗೆ ಬೆಂಗಳೂರು ಪೊಲೀಸರು ರೀ-ಟ್ವೀಟ್ ಮಾಡಿ, ದಯವಿಟ್ಟು ಬೆಂಗಳೂರಿನ ನಿಮ್ಮ ವಿಳಾಸವನ್ನು ನಮಗೆ ಮೆಸೇಜ್ ಮಾಡಿ ಎಂದು ಹೇಳಿದ್ದಾರೆ.