Tag: ಬೆಂಗಳೂರು ಮಳೆ

  • ಹೊಸದಾಗಿ ಖರೀದಿಸಿದ್ದ ಮನೆ ನೋಡಲು ಹೊರಟವಳು ಸೇರಿದ್ದು ಮಸಣಕ್ಕೆ

    ಹೊಸದಾಗಿ ಖರೀದಿಸಿದ್ದ ಮನೆ ನೋಡಲು ಹೊರಟವಳು ಸೇರಿದ್ದು ಮಸಣಕ್ಕೆ

    ಬೆಂಗಳೂರು: ರಾಜಧಾನಿಯಲ್ಲಿ ಇಂದು ವರುಣನ ಆರ್ಭಟಕ್ಕೆ ಮಹಿಳೆಯೊಬ್ಬರು ಬಲಿಯಾದವರು. ಆಸ್ಪತ್ರೆಯಲ್ಲಿ ಮೃತ ಮಹಿಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟ ಮಹಿಳೆ ಸಾವಿನ ಹಿಂದಿನ ಸ್ಟೋರಿ ನಿಜಕ್ಕೂ ಮನಕಲಕುವಂತಿದೆ.

    ಏನದು ಸ್ಟೋರಿ?
    ಮೃತ ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿ ನಗರದಲ್ಲಿ ವಾಸವಾಗಿದ್ದರು. ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದವರಾದ ಇವರು, ಹೊಸದಾಗಿ ಪ್ರಗತಿ ನಗರದಲ್ಲಿ ಮನೆ ಖರೀದಿ ಮಾಡಿದ್ದರು. ಮನೆ ನೋಡಲು ಆಂಧ್ರ ಪ್ರದೇಶದಿಂದ ಭಾನುರೇಖಾ ಸಂಬಂಧಿಗಳು ಆಗಮಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಗೆ ಮಹಿಳೆ ಬಲಿ; ಆಂಧ್ರದಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರ ಆಕ್ರಂದನ

    ಈ ವೇಳೆ ಕ್ಯಾಬ್ ಬುಕ್ ಮಾಡಿ ಬೆಂಗಳೂರು ಸುತ್ತಾಟಕ್ಕೆ ಕುಟುಂಬ ಬಂದಿತ್ತು. ಇಸ್ಕಾನ್‌ಗೆ ಹೋಗಿ ವಾಪಸ್ ಕಬ್ಬನ್ ಪಾರ್ಕ್‌ಗೆ ಹೋಗುವ ವೇಳೆ ಕೆಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಭಾನುರೇಖಾ ಸಾವನ್ನಪ್ಪಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಬೆಂಗಳೂರಿನ ಕೆ.ಆರ್.ವೃತ್ತದ ಅಂಡರ್‌ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಅಸ್ವಸ್ಥಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಮರಣ ಮಳೆ; ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ

  • ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ; ಸುರಿಯುತ್ತಿರೋ ಮಳೆಯಲ್ಲೇ ಯುವಕರ ಹುಚ್ಚಾಟ; ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕುಟುಂಬ

    ಬೆಂಗಳೂರು: ನಗರದಲ್ಲಿ ಕಾರ್ಮೋಡ ಕವಿದು ಇಂದು ಆಲಿಕಲ್ಲು ಮಳೆಯಾಗಿದೆ. ಭಾರೀ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ.

    ಮಧ್ಯಾಹ್ನವೇ ಇಡೀ ಬೆಂಗಳೂರು (Bengaluru Rain) ಕತ್ತಲಿನಿಂದ ಆವೃತವಾಗಿತ್ತು. ಆಲಿಕಲ್ಲು ಮಳೆ, ಗಾಳಿಗೆ ಸಿಲುಕಿ ಸವಾರರ ತೊಂದರೆ ಅನುಭವಿಸಿದರು. ರಸ್ತೆಗಳ ಮೇಲೆ ಮಂಡಿಯುದ್ದದವರೆಗೆ ನೀರು ನಿಂತು ಹರಿಯಿತು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಳೆ ಆರ್ಭಟ – ಇಂದಿನ RCB ಮ್ಯಾಚ್ ರದ್ದಾಗುತ್ತಾ?

    ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಕಬ್ಬಿಣದ ಕಾಂಪೌಂಡ್ ನೆಲಕ್ಕುರುಳಿದೆ. ಕಟ್ಟಡ ನಿರ್ಮಾಣ ಜಾಗದಲ್ಲಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿತ್ತು. ಗಾಳಿ ಬೀಸಿದ ವೇಗಕ್ಕೆ ಕಬ್ಬಿಣ ತಗಡಗಳು ಬಿದ್ದಿವೆ. ಅದೇ ಜಾಗದಲ್ಲಿ ಕರೆಂಟ್ ಲೈನ್ ಮೇಲೆ ಬೃಹತ್ ಮರದ ಕೊಂಬೆ ಕೂಡ ಉರುಳಿ ಬಿದ್ದಿದೆ.

    ಚಾಲುಕ್ಯ ಸರ್ಕಲ್‌ನಿಂದ ಹೆಬ್ಬಾಳ ಮಾರ್ಗದ ರಸ್ತೆ ಸಂಪೂರ್ಣ ಜಾಮ್ ಆಗಿದೆ. ಬಾಲಬೃಹಿ ಗೆಸ್ಟ್‌ಹೌಸ್ ಬಳಿ ರಸ್ತೆ ಕೆರೆಯಂತಾಗಿದೆ. ಬಸವನಗುಡಿಯ ಬುಲ್ ಟೆಂಪಲ್ ರೋಡ್‌ನಲ್ಲಿ ಮಳೆಗೆ ಮರ ಧರೆಗುರುಳಿದೆ. ಬೆಂಗಳೂರು ಹೈಸ್ಕೂಲ್ ಬಸ್ ಸ್ಟಾಂಪ್‌ನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ವಾಹನ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ

    ಯಶವಂತಪುರ ಬಿಎಂಟಿಸಿ ಒಳಗೆ ಮಳೆ ನೀರು ನುಗ್ಗಿ ಹರಿಯುತ್ತಿದೆ. ಬಿಎಂಟಿಸಿ ಬಸ್‌ಸ್ಟ್ಯಾಂಡ್ ಮಳೆ ನೀರಿನಿಂದ ಆವೃತವಾಗಿದೆ. ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕುಟುಂಬ ಮುಳುಗಿ ನೆರವಿಗೆ ಕೂಗಿಕೊಂಡ ಘಟನೆ ನಡೆಯಿತು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.

  • ಮಳೆ ಅವಾಂತರದಿಂದ ಬೆಂಗಳೂರು ಬ್ರ್ಯಾಂಡ್ ಉಳಿಸಿಕೊಳ್ಳಲು ಸಿಎಂಗೆ ಪತ್ರ ಬರೆದ ಎಸ್ಎಂ ಕೃಷ್ಣ

    ಮಳೆ ಅವಾಂತರದಿಂದ ಬೆಂಗಳೂರು ಬ್ರ್ಯಾಂಡ್ ಉಳಿಸಿಕೊಳ್ಳಲು ಸಿಎಂಗೆ ಪತ್ರ ಬರೆದ ಎಸ್ಎಂ ಕೃಷ್ಣ

    ಬೆಂಗಳೂರು: ಬೆಂಗಳೂರಿನ ಹಲವೆಡೆ ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರು ಬೆಂಗಳೂರಿಗೆ ಇರುವ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ಕುರಿತು ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರ ಪೂರ್ವ ಮಳೆಯಗುತ್ತಿದ್ದು ಇದರಿಂದ ಹಲವು ಅವಾಂತರಗಳ‌ು ಘಟಿಸಿ‌ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ‌ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು ‘ಬ್ರಾಂಡ್ ಬೆಂಗಳೂರು’ ಹೆಸರಿಗೆ ಆತಂಕ ಸೃಷ್ಟಿಸಿದ್ದು, ಭವಿಷ್ಯತ್ತಿನಲ್ಲಿ ಇದರಿಂದ ಕೈಗಾರಿಕೆಗಳ ಸ್ತಾಪನೆ‌ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಟಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ

     

    ಪತ್ರದಲ್ಲಿ ಏನಿದೆ?
    ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ವಿಪುಲ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆದು ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಗರದ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಪಾಲಿಕೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗಿ ಬೆಂಗಳೂರು ಸುತ್ತಮುತ್ತಲಿನ ಹಲವು ಬಡಾವಣೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದರಿಂದ ಬೆಂಗಳೂರಿನ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿ ಅದು ಇಂದು ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟು ಭಾಗ ಬೆಂಗಳೂರು ನಗರದಿಂದ ಹರಿದು ಬರುವಂತಾಗಿದೆ.

    ಭವಿಷ್ಯದ ಬೆಂಗಳೂರು ಹಾಗೂ ರಾಜ್ಯದ ಅಭಿವೃದ್ಧಿ ಗಮನದಲ್ಲಿ ಇಟ್ಟಕೊಂಡು ದೂರಗಾಮಿ ದೃಷ್ಟಿಯಿಂದ ಶಾಶ್ವತ ಕಾರ್ಯ ಕ್ರಮಗಳನ್ನು ರೂಪಿಸಿ “ಬ್ರಾಂಡ್ ಬೆಂಗಳೂರು” ಹೆಸರನ್ನು ಉಳಿಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆಳಕಂಡ ಸಲಹೆಗಳನ್ನು ತಮ್ಮ ಅವಗಾಹನೆಗೆ ತರಬಯಸುತ್ತೇನೆ.

    1. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ರಚಿಸಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ವಿವಿಧ ವಿಭಾಗಗಳ ತಜ್ಞರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದು ದೂರಗಾಮಿ ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಗೆ ನೀಲಿನಕ್ಷೆ ತಯಾರಿಸುವುದು.

    2. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಿ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಜ್ಞ ಅಧಿಕಾರಿಗಳ ತಂಡ ರಚಿಸುವುದು ಹಾಗೂ ರಾಜಕಾಲುವೆಗಳ ನಿರ್ವಾಹಣೆಗೆ ಆದ್ಯತೆ ಮೇಲೆ ಕ್ರಮ ವಹಿಸಿ ಮುಂಗಾರ ಮಳೆಯ ಆಗಮನಕ್ಕೂ ಮುನ್ನ ಸಮರೋಪದಿಯ ಕಾರ್ಯ ಕೈಗೊಳ್ಳುವುದು.

    3. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ನೂತನ ಕೈಗಾರಿಕಾ ವಸಹಾತುಗಳ‌ ಸ್ಥಾಪನೆಗೆ ಅವಕಾಶ ಕಲ್ಪಿಸಿ ಬೆಂಗಳೂರಿ ನಗರದ ಮೇಲಿನ ಒತ್ತಡ ಕಡಿಮೆ ಮಾಡುವುದು. ನನ್ನ ಅಧಿಕಾರಾವಧಿಯಲ್ಲಿ ನಿರ್ಮಾಣಗೊಂಡಿದ್ದ ಮೈಸೂರು ಬೆಂಗಳೂರು ಹೆದ್ದಾರಿ ಇಂದು ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ‌ ಮೇಲ್ದರ್ಜೆಗೆ ಏರಿದ್ದು ಇದು ಮೈಸೂರು ನಗರ ಬೆಂಗಳೂರಿಗೆ ಪರ್ಯಾಯವಾಗಿ ಬೆಳವಣಿಗೆ ಹೊಂದಲು ಬಹಳ ಅವಕಾಶ ಕಲ್ಪಿಸುತ್ತದೆ.

    4. ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳ ಶಾಶ್ವತ ಪರಿಹಾರಕ್ಕೆ ಕಾಲ ಮೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ತಕ್ಕ ಅನುದಾನ ಒದಗಿಸುವುದು.

  • ಬೆಂಗಳೂರಿನಲ್ಲಿ ಭರ್ಜರಿ ಮಳೆ – ಕೆರೆಯಂತಾದ ಸಿಲಿಕಾನ್ ಸಿಟಿ ರಸ್ತೆಗಳು

    ಬೆಂಗಳೂರಿನಲ್ಲಿ ಭರ್ಜರಿ ಮಳೆ – ಕೆರೆಯಂತಾದ ಸಿಲಿಕಾನ್ ಸಿಟಿ ರಸ್ತೆಗಳು

    ಬೆಂಗಳೂರು: ವೀಕೆಂಡ್ ಕರ್ಫ್ಯೂ ಹೊತ್ತಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಮೆಜೆಸ್ಟಿಕ್, ಕಾರ್ಪೊರೇಷನ್, ಆರ್ ಟಿ ನಗರ, ಮೇಕ್ರಿ ಸರ್ಕಲ್, ಯಶವಂತಪುರ ಸುತ್ತಮತ್ತ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದೆ.

    ರಾಜಾಜಿನಗರದ ರಾಜ್‍ಕುಮಾರ್ ರೋಡ್ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಗಳಲ್ಲಿ ಮಂಡಿವರೆಗೆ ನೀರು ಬಂದಿದ್ದರಿಂದ ಎರಡು ಆಟೋಗಳು ಕೆಟ್ಟು ನಿಂತಿದ್ದವು. ವೀಕೆಂಡ್ ಕಫ್ರ್ಯೂ ಅಂತ ಮನೆಗೆ ಸೇರಲು ಹೊರಟಿದ್ದ ಸಾರ್ವಜನಿಕರು ಮಳೆಯಲ್ಲಿ ಸಿಲುಕಿ ಪರದಾಡಿದರು. ರಾಜಾಜಿನಗರ ರಾಜ್ ಕುಮಾರ್ ರೋಡ್ ಸಂಪೂರ್ಣ ಜಲಾವೃತವಾಗಿತ್ತು. ಎಂಜಿ ರೋಡ್ ಮತ್ತು ಟ್ರಿನಿಟಿ ಸರ್ಕಲ್ ನಡುವೆ ಸಮುದ್ರದ ಅಲೆಯಂತೆ ನೀರು ಬಂದು ಫುಟ್‍ಪಾತ್ ಗೆ ಅಪ್ಪಳಿಸುತ್ತಿತ್ತು.

    ಕೋಲಾರ ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಕೆಜಿಎಫ್‍ನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಮಳೆ-ಗಾಳಿಗೆ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಪ್ರಾಣಾಪಾಯದಿಂದ ಆಟೋಚಾಲಕ ಎಸ್ಕೇಪ್ ಆಗಿದ್ದಾನೆ. ಹುಬ್ಬಳ್ಳಿ, ಬೀದರ್, ಯಾದಗಿರಿಯಲ್ಲೂ ಕೂಡ ಮಳೆಯಾಗಿದೆ. ಇನ್ನೂ ಮೂರು ದಿನ ಮಳೆ ಆಗುವ ಸಾಧ್ಯತೆಗಳಿವೆ.

  • ಬೆಂಗಳೂರಿನಲ್ಲಿ ಮತ್ತೆ ಶುರುವಾದ ಮಳೆ- ಪ್ರವಾಹ ಸ್ಥಳಗಳ ಜನರಲ್ಲಿ ಆತಂಕ

    ಬೆಂಗಳೂರಿನಲ್ಲಿ ಮತ್ತೆ ಶುರುವಾದ ಮಳೆ- ಪ್ರವಾಹ ಸ್ಥಳಗಳ ಜನರಲ್ಲಿ ಆತಂಕ

    ಬೆಂಗಳೂರು: ರಾಜಧಾನಿಯಲ್ಲಿಂದು ಸಂಜೆ ಆಗುತ್ತಿದ್ದಂತೆ ಮಳೆರಾಯ ಎಂಟ್ರಿ ನೀಡಿದ್ದಾನೆ. ಶುಕ್ರವಾರ ಸುರಿದ ಮಳೆಗೆ ತತ್ತರಿಸಿರುವ ಜನರಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಮತ್ತೆ ನೀರು ಎಲ್ಲಿ ಮನೆಯೊಳಗೆ ಬರುತ್ತೆ ಭಯದಲ್ಲಿದ್ದಾರೆ. ನಗರದ ಯಶವಂತಪುರ, ಪೀಣ್ಯ, ಮಲ್ಲೇಶ್ವರಂ ಸೇರಿ ಹಲವೆಡೆ ಮಳೆ ಆಗುತ್ತಿದೆ.

    ಮಳೆಯಿಂದಾಗಿ ಜಲಾವೃತಗೊಂಡಿದ್ದ ಹೊಸಕೆರೆ ಹಳ್ಳಿಯ ಜನರ ಇಂದು ಕೆಸರಿನಲ್ಲಿ ಸಿಲುಕಿದ್ದ ವಾಹನಗಳನ್ನು ಸ್ವಚ್ಛಗೊಳಿಸಿದರು. ಹಬ್ಬದ ಸಂಭ್ರಮಕ್ಕೆ ಮಳೆರಾಯ ತಣ್ಣೀರು ಎರಚಿದ್ದರಿಂದ ಜನರು ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇವತ್ತು ಕುಮಾರಸ್ವಾಮಿ ಲೇಔಟ್, ದತ್ತಾತ್ರೇಯ ವಾರ್ಡ್, ಹೊಸಕೆರೆಹಳ್ಳಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಕಂದಾಯ ಸಚಿವ ಆರ್. ಅಶೋಕ್ ಪರಿಹಾರ ಚೆಕ್ ವಿತರಿಸಿದರು.

    ಚೆಕ್ ವಿತರಣೆ ಬಳಿಕ ಮಾತನಾಡಿದ ಆರ್.ಅಶೋಕ್, ಒಟ್ಟು 600ಕ್ಕೂ ಹೆಚ್ಚು ಸಂತ್ರಸ್ತರಿಗೆ 25 ಸಾವಿರ ರೂ. ಪರಿಹಾರ ಚೆಕ್ ವಿತರಿಸ್ತಿದ್ದೇವೆ. ನೆಲಮಹಡಿಯಲ್ಲಿ ಇರೋರಿಗೆ ಮಾತ್ರ ಪರಿಹಾರ, ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರ್ ನಲ್ಲಿ ಇರೋರಿಗೆ ಪರಿಹಾರ ಇಲ್ಲ. ಈ ಮಧ್ಯೆ ಬೆಂಗಳೂರಿಗೆ ಮಳೆ ವಕ್ಕರಿಸಿದೆ. ಇದೇ ರೀತಿ ರಾತ್ರಿಯಿಡಿ ಮಳೆ ಆದಲ್ಲಿ, ಮೊನ್ನೆಯಂತೆ ಬೆಂಗಳೂರು ಆಗುತ್ತಾ ಅನ್ನೋ ಆತಂಕ ಎದುರಾಗಿದೆ.

  • ಬೆಂಗಳೂರಿನಲ್ಲಿ ರಣಮಳೆ – ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

    ಬೆಂಗಳೂರಿನಲ್ಲಿ ರಣಮಳೆ – ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

    ಬೆಂಗಳೂರು: ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಚಿತ್ತಾ ಮಳೆ ತನ್ನ ಕುರುಡಾಟ ಪ್ರದರ್ಶಿಸುತ್ತಿದೆ. ಯಾವಾಗಂದ್ರೆ ಆಗ ಮಳೆ ಸುರಿದು ನಾನಾ ಅವಾಂತರ ಸೃಷ್ಟಿ ಮಾಡುತ್ತಿದೆ.

    ಕುರುಡ ಚಿತ್ತನ ಆಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಬೆಳಗ್ಗೆಯಿಂದ ಸೂರ್ಯ ದರ್ಶನ ಆಗಿರಲಿಲ್ಲ. ಮಧ್ಯಾಹ್ನದವರೆಗೂ ನಗರದಲ್ಲಿ ಮೋಡಗಳ ಆಟ ಜೋರಿತ್ತು. ಆದರೆ ಆ ಬಳಿಕ ನಗರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಿತು. ಅದ್ರಲ್ಲೂ ಸಂಜೆ ಮಳೆಗೆ ಬೆಂಗಳೂರಿನ ದಕ್ಷಿಣ ಭಾಗದ ಪರಿಸ್ಥಿತಿ ಭೀಕರವಾಗಿದೆ.


    ಹೊಸಕೆರೆಹಳ್ಳಿ, ಬಸವನಗುಡಿ, ಕೆಂಗೇರಿ ಸೇರಿ ಹಲವು ಪ್ರದೇಶಗಳು ಹೈದರಾಬಾದ್‍ನ ಪ್ರವಾಹವನ್ನು ನೆನಪಿಸುತ್ತಿವೆ. ಬೋಟ್‍ಗಳಲ್ಲಿ ರಕ್ಷಣಾ ಕಾರ್ಯ ನಡೆದಿದೆ. ನೂರಾರು ವಾಹನಗಳು ಆಟಿಕೆಗಳ ರೀತಿಯಲ್ಲಿ ಕೊಚ್ಚಿ ಹೋಗಿವೆ. ವಾಹನ ಸವಾರರು ದಿಕ್ಕೆಟ್ಟಿದ್ದಾರೆ. ನೂರಾರು ಮನೆಗಳು ಮುಳುಗಡೆ ಆಗಿವೆ. ಸಾವಿರಾರು ಜನ ಜಲ ದಿಗ್ಬಂಧನದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ನಾಳೆಯೂ ಬೆಂಗಳೂರಿನಲ್ಲಿ ಮಹಾಮಳೆ – ಯೆಲ್ಲೋ ಅಲರ್ಟ್ ಘೋಷಣೆ

    ಸದ್ಯ ಕರೆಂಟ್ ಇಲ್ಲದೇ, ಜನ ಕತ್ತಲೆಯಲ್ಲಿ ಕಳೆಯುವಂತಾಗಿದೆ. ನೀರು ತುಂಬಿದ ಸ್ಥಳಗಳಿಗೆ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರವೂ ಬೆಂಗಳೂರಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಎಲ್ಲೆಲ್ಲಿ ಎಷ್ಟು ಮಳೆ?
    ಕೆಂಗೇರಿ – 103 ಮಿ.ಮೀ
    ಆರ್‍ಆರ್ ನಗರ – 102 ಮಿ.ಮೀ
    ವಿದ್ಯಾಪೀಠ – 95 ಮಿ.ಮೀ
    ಉತ್ತರಹಳ್ಳಿ – 87 ಮಿ.ಮೀ
    ಕೋಣಕುಂಟೆ – 83 ಮಿ.ಮೀ
    ಬಸವನಗುಡಿ – 81 ಮಿ.ಮೀ
    ಕುಮಾರಸ್ವಾಮಿ ಲೇಔಟ್ – 79 ಮಿ.ಮೀ
    ವಿವಿ ಪುರ – 71 ಮಿ.ಮೀ

  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮಳೆ ಆಗಿದೆ. ಇಂದು ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕೋಡಿ, ಕಲಬುರಗಿ, ಬಾಗಲಕೋಟೆ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ಒಟ್ಟು 9 ಮಂದಿ ಬಲಿ ಆಗಿದ್ದಾರೆ.

    ಸಂಜೆ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ಶಾಂತಿನಗರ, ಜಯನಗರ, ಟೌನ್ ಹಾಲ್, ಮಾರ್ಕೆಟ್, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಜೋರು ಮಳೆಯಾಗಿದೆ. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಹೈರಾಣಾದ್ರು. ಇಂದು ಬೆಳಗ್ಗೆ ಸಹ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಸಂಜೆ ಮಳೆಗೆ ವಾಹನ ಸವಾರರು ಫ್ಲೈಓವರ್ ಕೆಳಗೆ ರಕ್ಷಣೆ ಪಡೆದಿರುವ ದೃಶ್ಯಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು.

    ಹಾವೇರಿ ರಾಣೆಬೆನ್ನೂರಿನಲ್ಲಿ ಮತ್ತು ಬಳ್ಳಾರಿಯ ಬೈರಾಪುರದಲ್ಲಿ ಸಿಡಿಲಿಗೆ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಕೊಪ್ಪಳದ ಗೆದಗೇರಿ ತಾಂಡಾದಲ್ಲಿ, ವಿಜಯಪುರದ ಹತ್ತಳ್ಳಿಯಲ್ಲಿ, ಬೆಳಗಾವಿಯ ಅಷ್ಟಗಾದಲ್ಲಿ ತಲಾ ಒಬ್ರು ಸಿಡಿಲಿಗೆ ಬಲಿಯಾಗಿದ್ದಾರೆ. ಬೆಳಗಾವಿಯ ಚಿಕ್ಕ ಉಳ್ಳಿಗೇರಿಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಗಣೇಶ ನಗರ ಸಂಪೂರ್ಣ ಜಲಾವೃತವಾಗಿದೆ. ಮೊಣಕಾಲೆತ್ತರ ನೀರು ನಿಂತಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜರ ಪರದಾಡಿದ್ದಾರೆ.

    ಬೆಳಗಾವಿಯ ಬೈಲಹೊಂಗಲ-ಮುನವಳ್ಳಿ, ಸವದತ್ತಿ-ಬೈಲಹೊಂಗಲ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ. ಚಿಕ್ಕೋಡಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದು, ಬೆಳೆ ಹಾಳಾಗಿದೆ. ಜಾತವಾರ-ಹೊಸಹಳ್ಳಿ ಬಳಿಯ ರೈಲ್ವೇ ಅಂಡರ್ ಪಾಸಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ರು. ಬಾಗಲಕೋಟೆಯ ತೇರದಾಳದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

    ಗದಗ ಜಿಲ್ಲೆಯ ಹಲವೆಡೆ ತಡರಾತ್ರಿ ಹಾಗೂ ಬೆಳಗಿನ ಜಾವ ಬಾರಿ ಮಳೆಯಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಪಟ್ಟಣದ ಹಳೆ ಬಸ್‍ನಿಲ್ದಾಣ ಬಳಿ, ಸೋಮೇಶ್ವರ ಟೆಂಪಲ್, ಹಳೆ ಸ್ಟೇಷನ್, ದೂದಪೀರ್ ನಾನಾ ದರ್ಗಾ ಭಾಗದ ರಸ್ತೆಗಳ ತುಂಬೆಲ್ಲಾ ಮಳೆನೀರು ನದಿಗಳಂತೆ ಹರಿದಿದೆ. ಸಾರ್ವಜನಿಕರು, ವಾಹನ ಸವಾರರು ಸಾಕಷ್ಟು ಪರದಾಡಿದ್ದಾರೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬಾರಿ ಮಳೆಯಿಂದ ಮಣ್ಣಿನ ಮನೆಗಳ ಕೆಲವು ಕುಟುಂಬಗಳು ಜಾಗರಣೆ ಮಾಡುವಂತಾಗಿತ್ತು.

  • ರಾಜಧಾನಿಯಲ್ಲಿ ವರುಣನ ಆರ್ಭಟ- ಕೆರೆಯಂತಾದ ರಸ್ತೆಗಳು

    ರಾಜಧಾನಿಯಲ್ಲಿ ವರುಣನ ಆರ್ಭಟ- ಕೆರೆಯಂತಾದ ರಸ್ತೆಗಳು

    -ರಾಜ್ಯದ ಹಲವೆಡೆ ಮಳೆ

    ಬೆಂಗಳೂರು: ಇಂದು ಸಂಜೆಯಿಂದಲೇ ರಾಜಧಾನಿಯಲ್ಲಿ ವರುಣದೇವ ಅಬ್ಬರಿಸುತ್ತಿದ್ದು, ನಗರದ ರಸ್ತೆಗಳು ಕೆರೆಯಂತಾಗಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಇಂದು ಸಂಜೆಯಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.

    ಬೆಂಗಳೂರಿನ ಮಲ್ಲೇಶ್ವರಂ, ಶೇಷಾದ್ರಿಪುರಂ, ಸದಶಿವನಗರ, ರಾಜಾಜಿನಗರ, ಯಶವಂತಪುರ, ವಸಂತನಗರ, ಶಿವಾಜಿನಗರ ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆ ಆಗುತ್ತಿದೆ. ಶಿವನಾಂದ ಸರ್ಕಲ್ ಬಳಿ ರಸ್ತೆಗಳು ಕರೆಯಾಗಿ ಬದಲಾಗಿದ್ದು, ವಾಹನ ಸವಾರರು ಎತ್ತ ಹೋಗಬೇಕೆಂದು ಚಿಂತೆಯಲ್ಲಿ ಮುಳುಗಿದ್ದಾರೆ. ಶಿವಾನಂದ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ 2 ಅಡಿಯಷ್ಟು ನೀರು ನಿಂತಿದೆ. ವಿಧಾನ ಸೌದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ.

    ಬನ್ನೇರುಘಟ್ಟದಲ್ಲಿ ಗೋಡೆಯೊಂದು ಕುಸಿದಿದ್ದು ಭಾರೀ ನೀರು ನುಗ್ಗಿದೆ. ಪ್ರಾಣಿಗಳು ಪರದಾಡಿವೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ವಿವಿಧೆಡೆ 3 ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ಗದಗದ ನರಗುಂದ ಬಳಿ ಮನೆಗಳಿಗೆ ಅಪಾರ ನೀರು ನುಗ್ಗಿದ್ದು, 2 ದಿನದ ಬಾಣಂತಿ, ಹಸುಗೂಸು ನರಳಾಡಿದ್ದಾರೆ. ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯ ಮಹಾವೀರ ಸರ್ಕಲ್ ಸಂಪೂರ್ಣ ಜಲಾವೃತವಾಗಿದೆ.

    ಚಿಕ್ಕಬಳ್ಳಾಪುರ ನಗರದಲ್ಲಿ ರಸ್ತೆಗಳ ಮೇಲೆ ನೀರೋ ನೀರು. ಚಿತ್ರದುರ್ಗದಲ್ಲಿ ರಾತ್ರಿ ಇಡೀ ಸುರಿದ ಮಳೆಗೆ ಮಲ್ಲಾಪುರ ಕೆರೆ ಸತತ 6ನೇ ಬಾರಿಗೆ ಕೋಡಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‍ಗೆ ನೀರು ನುಗ್ಗಿ ಭಾರೀ ಅವಾಂತರವಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ತಾಯಿ-ಮಗಳು ಸಿಡಲು ತಾಗಿ ಸಾವನ್ನಪ್ಪಿದ್ದಾರೆ.

  • ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಭಾರೀ ಮಳೆ ಆಗ್ತಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.

    ಶಿವನಾಂದ ವೃತ್ತದ ರೈಲ್ವೇ ಅಂಡರ್ ಪಾಸ್‍ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಬೈಕ್ ಸವಾರರೊಬ್ರು ದಾರಿ ಗೊತ್ತಾಗದೇ ಕೆಳಗೆ ಬಿದ್ದರು. ಆಟೋವೊಂದು ಕೆಟ್ಟು, ಚಾಲಕ ತಳ್ಳಿಕೊಂಡು ಹೋದರು. ಮಧ್ಯಾಹ್ನದ ಮೂರು ಗಂಟೆಯ ಬಳಿಕ ಬಿಡುವು ನೀಡಿದ ವರುಣರಾಯ ರಾತ್ರಿ ಮತ್ತೆ ಸುರಿಯಲಾರಂಭಿಸಿದನು. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು.

    ಮಲ್ಲೇಶ್ವರಂ, ಯಶವಂತಪುರ ಶೇಷಾದ್ರಿಪುರಂ, ಗೋರಗುಂಟೆಪಾಳ್ಯ, ರಾಜಾಜಿನಗರ ಮತ್ತಿಕೆರೆ, ಬಿಇಎಲ್ ಸರ್ಕಲ್, ಸದಶಿವನಗರ, ಸಂಜಯ್ ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕೋಡಿಯ ಮಾಂಜರಿ ಗ್ರಾಮದ ನೆರೆ ಸಂತ್ರಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ರು. 527 ಫಲಾನುಭವಿಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ರು. ತಹಶೀಲ್ದಾರ್ ಸುಭಾಷ್ ಮನವೊಲಿಕೆಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.

  • ಬೆಂಗಳೂರಿನಲ್ಲಿ ಮುಂದುವರಿದ ರೋಹಿಣಿ ಮಳೆಯ ಅಬ್ಬರ

    ಬೆಂಗಳೂರಿನಲ್ಲಿ ಮುಂದುವರಿದ ರೋಹಿಣಿ ಮಳೆಯ ಅಬ್ಬರ

    ಬೆಂಗಳೂರು: ಇಂದು ಸಹ ಸಿಲಿಕಾನ್ ಸಿಟಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಮಂಗಳವಾರ ಮತ್ತು ಭಾನುವಾರ ವಾಯುದೇವನ ಜೊತೆ ವರುಣದೇವ ಅಬ್ಬರಿಸಿದ್ದನು.

    ಬೆಳಗ್ಗೆ 10 ಗಂಟೆಯಿಂದಲೇ ಚುರುಕ್ ಅನ್ನೋ ರೀತಿಯಲ್ಲಿ ಬಿಸಿಲು ಇತ್ತು. ಮಧ್ಯಾಹ್ನ ಮೂರು ಗಂಟೆಯ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ನಾಲ್ಕು ಗಂಟೆ ಸುಮಾರಿಗೆ ಮಳೆ ಸುರಿಯಲಾರಂಭಿಸಿತ್ತು. ಮೆಜೆಸ್ಟಿಕ್, ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ಹೆಬ್ಬಾಳ, ಯಲಹಂಕ, ಸಂಪಿಗೆಹಳ್ಳಿ, ಬ್ಯಾಟರಾಯನಪುರ, ಮಾನ್ಯತಾ ಟೆಕ್ ಪಾರ್ಕ್, ಥಣಿಸಂದ್ರ, ರಾಮಮೂರ್ತಿ ನಗರ, ಬಿಇಎಲ್, ಸೋಲದೇವನಹಳ್ಳಿ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ.

    ಮಲ್ಲೇಶ್ವರಂ ಪಿಯು ಬೋರ್ಡ್ ಮುಂಭಾಗದಲ್ಲಿ ನಾಲ್ಕು ಕಡೆ ಮರಗಳು ಧರೆಗುರುಳಿವೆ. ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಸರ್ಕಲ್ ಮಾರಮ್ಮ ದೇಗುಲ ಬಳಿ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.