Tag: ಬೆಂಗಳೂರು ಮಳೆ

  • ರಾಜ್ಯದಲ್ಲಿ ಇನ್ನೂ 4‌ ದಿನ ಭಾರೀ ಮಳೆ – ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ರಾಜ್ಯದಲ್ಲಿ ಇನ್ನೂ 4‌ ದಿನ ಭಾರೀ ಮಳೆ – ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಮತ್ತೆ ಮುಂದುವರಿದಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನತೆಗೆ ಮಳೆರಾಯ ಕೊಂಚ ಬೇಸರ ತರಿಸಿದ್ದಾನೆ. ಈಗಾಗಲೇ ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಅಲ್ಲದೇ ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದಿನಿಂದ ಅಂದ್ರೆ ಅಕ್ಟೋಬರ್‌ 21 ರಿಂದ ಅ.29ರ ವರೆಗೆ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸಂಜೆ ನಂತರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕೆಲ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕರಾವಳಿ, ದಕ್ಷಿಣ ಒಳನಾಡು ಭಾಗದ ಕೆಲ ಜಿಲ್ಲೆಗಳು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಹಾಸನ, ಕೋಲಾರ, ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ.

  • ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಜಲಾವೃತ – ಗುಂಡಿಬಿದ್ದ ರಸ್ತೆಗಳಲ್ಲಿ ನಿಂತ ನೀರು, ಕೆಟ್ಟು ನಿಂತ ವಾಹನಗಳು

    ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಜಲಾವೃತ – ಗುಂಡಿಬಿದ್ದ ರಸ್ತೆಗಳಲ್ಲಿ ನಿಂತ ನೀರು, ಕೆಟ್ಟು ನಿಂತ ವಾಹನಗಳು

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಳೆ ಬಂತು ಅಂದ್ರೆ ವಾಹನ ಸವಾರರು ಈಜುವ ಕಲೆ ಕಲಿಯುವ ಅನಿವಾರ್ಯತೆ ಎದುರಾಗಿದೆ. ಒಂದು ದಿನದ ಹಿಂದಷ್ಟೇ 30 ನಿಮಿಷ ಸುರಿದಿದ್ದ ಮಳೆಯಿಂದಾಗಿ ಹಲವು ರಸ್ತೆಗಳು ರಸ್ತೆಗಳು ಜಲಾವೃತಗೊಂಡಿದ್ದವು. ಇಂದು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಳಿಕೆ ಹಲವು ರಸ್ತೆಗಳು ಜಲಾವೃತಗೊಂಡಿವೆ.

    ಗುಂಡಿ ಬಿದ್ದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಕಟ್ಟಿಕೊಂಡಿದ್ದು, ಅಲ್ಲಲ್ಲಿ ವಾಹನಗಳು ಕೆಟ್ಟುನಿಲ್ಲುವಂತಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪರೇಶನ್, ಲಾಲ್‌ಬಾಗ್ ಸೇರಿದಂತೆ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇತ್ತ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯಗಳಲ್ಲೂ ಮಳೆಯಾಗುತ್ತಿದೆ.

    ಗುಂಡಿಬಿದ್ದ ರಸ್ತೆಗಳಲ್ಲಿ ಕಟ್ಟಿಕೊಂಡ ನೀರು
    ಬೆಂಗಳೂರಿನ ಹೃದಯ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಯಾವುದು ಗುಂಡಿ, ಯಾವುದು ರಸ್ತೆ ಅನ್ನೋದೇ ತಿಳಿಯದಾಗಿದೆ. ಫುಟ್ಬಾತ್‌ಗಳ ಮೇಲೂ ನೀರು ತಂಬಿಕೊಂಡಿದೆ. ಹಲವೆಡೆ ಗುಡುಗು ಸಹಿ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಬೆಂಗಳೂರಲ್ಲಿ ಎಲ್ಲೆಲ್ಲಿ ಮಳೆ?
    ನಗರದ ಎಲೆಕ್ಟ್ರಾನಿಕ್‌ ಸಿಟಿ, ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತ, ಸರ್ಜಾಪುರ, ಮಹದೇವಪುರ, ಪೀಣ್ಯ, ದಾಸರಹಳ್ಳಿ, ಕೋರಮಂಗಲ, ಮಲ್ಲೇಶ್ವರ, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ವಿಪ್ರೋ ಗೇಟ್, ಸರ್ಜಾಪುರ, ಯಶವಂತಪುರ, ಕಾರ್ಪೋರೇಷನ್, ಬಿಟಿಎಂ ಲೇಔಟ್, ವರ್ತೂರು ಬಳಗೆರೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ವಾಹನ ಸವಾರರು ಪರದಾಡಿದ್ದಾರೆ. ಸರ್ಜಾಪುರದಲ್ಲಿ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಿಡೀ ಶಾಪ ಹಾಕಿದ್ದಾರೆ.

    ಬೆಂಗಳೂರಲ್ಲಿ ಮುಂದಿನ 3 ಗಂಟೆ ಆರೇಂಜ್ ಅಲರ್ಟ್
    ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ 3 ಗಂಟೆ ಆರೇಂಜ್ ಅಲರ್ಟ್ ನೀಡಲಾಗಿದೆ. ರಾಜ್ಯ ಹವಾಮಾನ ಇಲಾಖೆಯಿಂದ ಮಳೆಯ‌ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

  • ಬೆಂಗಳೂರಲ್ಲಿ ಜಡಿಮಳೆ; ರಸ್ತೆಗಳು ಜಲಾವೃತ, ವಾಹನ ಸವಾರರು ಪರದಾಟ

    ಬೆಂಗಳೂರಲ್ಲಿ ಜಡಿಮಳೆ; ರಸ್ತೆಗಳು ಜಲಾವೃತ, ವಾಹನ ಸವಾರರು ಪರದಾಟ

    – ನಿನ್ನೆ ಸಂಜೆಯಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆ

    ಬೆಂಗಳೂರು: ಸಿಲಿಕಾನ್ ಸಿಟಿ ಮಳೆಯಿಂದ ತೊಯ್ತು ತೊಪ್ಪೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಗುರುವಾರ ಸಂಜೆಯಿಂದ ಶುರುವಾದ ಮಳೆ ಜಿಟಿಜಿಟಿ ಸುರಿಯುತ್ತಿದೆ.

    ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಮಾರ್ಕೆಟ್, ಯಲಹಂಕ, ಓಕಳಿಪುರ, ಸರ್ಜಾಪುರ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಳೆಯಿಂದ ತೊಂದರೆಯಾಗಿದೆ. ಹಲವು ಕಡೆ ಮರಗಳು ಧರೆಗುರುಳಿವೆ. ಚಾಮರಾಜಪೇಟೆಯ ಸಂಗಮ ಸರ್ಕಲ್ ಬಳಿ ಮರ ಧರೆಗುರುಳಿದೆ. ಹೊಸೂರು ರಸ್ತೆ, ಮೈಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ, ಓಕಳಿಪುರ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಕೆ.ಆರ್. ಸರ್ಕಲ್, ಬನ್ನೇರುಘಟ್ಟ ರಸ್ತೆ, ಕಸ್ತೂರಿ ನಗರ, ಹೆಬ್ಬಾಳ ಜಂಕ್ಷನ್ ಸೇರಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಪರಿಣಾಮ ವಾಹನ ಸವಾರರು ಸಂಚಾರಕ್ಕೆ ಪರದಾಡಿದರು.

    ಎಲ್ಲೆಲ್ಲಿ ಎಷ್ಟು ಮಳೆ?
    ಅರಕೆರೆ-33 ಮಿಮೀ, ಬೊಮ್ಮನಹಳ್ಳಿ-29 ಮಿಮೀ, HHRB ಲೇಔಟ್- 22 ಮಿಮೀ, ಕೋರಮಂಗಲ-22 ಮಿಮೀ, ನಾಯಂಡಹಳ್ಳಿ-21 ಮಿಮೀ, BTM ಲೇಔಟ್- 20 ಮಿಮೀ, ಸಂಪಂಗಿರಾಮನಗರ- 19 ಮಿಮೀ, ವಿದ್ಯಾಪೀಠ- 15 ಮಿಮೀ, ಚಾಮರಾಜಪೇಟೆ-11 ಮಿಮೀ ಮಳೆಯಾಗಿದೆ.

    ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 6 ಗಂಟೆವರೆಗೆ ಮಳೆ ಮುಂದುವರಿದೆ. ನಗರದಲ್ಲಿ 66.0 ಮಿಮೀ ಮಳೆ ದಾಖಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 130 ಮಿಮೀ ಹಾಗೂ ಬೀದರ್ ಜಿಲ್ಲೆಯಲ್ಲಿ 112 ಮಿಮೀ ಮಳೆ ಸುರಿದಿದೆ. ಸೆಪ್ಟೆಂಬರ್ 24 ರ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

  • ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್‌ ಕಂಬ

    ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್‌ ಕಂಬ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಧಾರಾಕಾರವಾಗಿ ಸುರಿದ ಮಳೆ ನಗರದ ಹಲವು ಕಡೆ ಅವಾಂತರ ಸೃಷ್ಟಿಸಿದೆ.

    ಲಾಲ್‌ ಬಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಜಯನಗರ, ಶಾಂತಿನಗರ, ಡಬ್ಬಲ್ ರೋಡ್ ಸೇರಿ ಸುತ್ತಮುತ್ತ ಸುರಿದ ಮಳೆಯಿಂದ ಮರಗಳು, ಕರೆಂಟ್ ಕಂಬಗಳು ಧರೆಗುರುಳಿವೆ. ಲಾಲ್ ಬಾಗ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದೆ. ಮರ ಬಿದ್ದಿರುವ ರಭಸಕ್ಕೆ ಪಕ್ಕದಲ್ಲಿದ್ದ ಕರೆಂಟ್ ಕಂಬ ಕೂಡ ಬಿದ್ದಿದೆ.

    ಪುಟ್‌ಪಾತ್ ಮೇಲೆ ಕರೆಂಟ್ ಕಂಬ ಬಿದ್ದಿದ್ದರೂ ಬೆಸ್ಕಾಂ ಅವರು ಕಂಬದಲ್ಲಿರುವ ಕರೆಂಟ್ ತೆಗೆದಿಲ್ಲ. ‌ಕಂಬ ಮರದ ಮರೆಯಲ್ಲಿ ಬಿದ್ದಿರುವ ಕಾರಣ ಪುಟ್ಪಾತ್ ಮೇಲೆ ಜನರು ನಡೆದುಕೊಂಡು ಹೋದರೆ ರಾತ್ರಿ ಸಮಯದಲ್ಲಿ ಅನಾಹುತ ಕಟ್ಟಿಟ್ಟಬುತ್ತಿ.

    ಮರ ಧರೆಗೆ ಉರುಳಿ ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು. ಮಳೆಯಿಂದ ಜನರು ಸಂಕಷ್ಟ ಅನುಭವಿಸಿದರು. ರಾತ್ರಿ ಸುಮಾರು 9 ಗಂಟೆಗೆ ಶುರುವಾದ ಮಳೆ ಎಡಬಿಡದೇ ಸುರಿಯಿತು.

  • ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ

    ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಂದು (Bengaluru) ಏಕಾಏಕಿ ಮಳೆ ಅಬ್ಬರಿಸಿದೆ. ಸಂಜೆ ಸುರಿದ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಇದೇ ವೇಳೆ ಮಣ್ಣು ಕುಸಿದು ಓರ್ವ ಕಟ್ಟಡ ಕಾರ್ಮಿಕ ಬಲಿಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕಟ್ಟಡ ನಿರ್ಮಾಣಕ್ಕಾಗಿ ಅಗೆಯುವಾಗ ಮಣ್ಣು ಕುಸಿದು ಎಂಬಾಸಿ ಗ್ರೂಪ್‌ಗೆ ಸೇರಿದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೆಂಗಳೂರು | ಸ್ವಚ್ಛತಾ ಕಾರ್ಮಿಕರಿಗೆ ʻಜಲಮಂಡಳಿ ಅನ್ನಪೂರ್ಣ ಯೋಜನೆʼ ಸ್ಮಾರ್ಟ್ ಕಾರ್ಡ್ ವಿತರಣೆ

    ಮಳೆ ನೀರು ಜಾಸ್ತಿ ಹರಿದ ಪರಿಣಾಮ ಮಣ್ಣು ಕುಸಿದಿದೆ, ಈ ವೇಳೆ ಮಣ್ಣಿನಡಿ ಸಿಲುಕಿ ಆಂಧ್ರ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನೂ ಮತ್ತೋರ್ವನ ಸ್ಥಿತಿಯೂ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಇದನ್ನೂ ಓದಿ: ರಾಷ್ಟ್ರಪತಿಗೆ ಕನ್ನಡ ಬರುತ್ತಾ ಅಂತ ಕೇಳಿದ ಸಿಎಂ – ಸ್ವಲ್ಪ ಸ್ವಲ್ಪ ಬರುತ್ತೆ; ಮುರ್ಮು ಉತ್ತರ

    ಸಂಜೆ ಮಳೆಗೆ ಭಾರಿ ಅವಾಂತರ
    ಕಳೆದ 2-3 ದಿನಗಳಿಂದ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿತ್ತು. ಆದ್ರೆ ಸೆಪ್ಟೆಂಬರ್ ಮೊದಲ ದಿನವೇ ಜೋರು ಮಳೆ ಸುರಿದಿದೆ. ಮಳೆಗಾಲದ ದಿನಗಳಿಗೆ ಹೋಲಿಸಿದ್ರೆ ಸೋಮವಾರ ಸಂಜೆ ಸುರಿದ ಮಳೆ ಬಿರುಸಾಗಿತ್ತು. ರಸ್ತೆಯಲ್ಲಿ ಜನ, ವಾಹನ ಸಂಚಾರ ಸಾಧ್ಯವಾಗದಷ್ಟು ಜೋರಿತ್ತು. ಮಿಂಚು ಗುಡುಗು ಕೂಡ ಇದ್ದು ಜನ ಭಯ ಭೀತರಾದರು. ವಾಹನ ಸವಾರರು ಮಳೆಯಲ್ಲಿ ಸಂಚಾರ ಮಾಡುವ ಧೈರ್ಯ ಮಾಡದೇ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮರ, ಕಟ್ಟಡಗಳ ಬಳಿ ಆಶ್ರಯ ಪಡೆದಿದ್ದರು. ಇನ್ನೂ ಅಲ್ಲಲ್ಲಿ ಟ್ರಾಫಿಕ್ ದಟ್ಟಣೆ ಕೂಡ ಉಂಟಾಗಿತ್ತು.

    ಎಲ್ಲೆಲ್ಲಿ ಮಳೆಯ ಆರ್ಭಟ ಜೋರು?
    ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ, ಮಲ್ಲೇಶ್ವರಂ ರಸ್ತೆ, ಮಂತ್ರಿ ಮಾಲ್ ಯಲ್ಲಿ ಜೋರು ಮಳೆ ಉಂಟಾಗಿತ್ತು. ಅಲ್ಲದೇ ಬಿಬಿಎಂಪಿ ವಲಯ ಕಚೇರಿ ಮುಂದಿನ ರಸ್ತೆಯೇ ತುಂಬಿ ಹರಿಯುತ್ತಿದ್ದ ದೃಶ್ಯವೂ ಕಂಡುಬಂದಿತು. ಅಲ್ಲದೇ ಕೆ.ಆರ್ ಮಾರ್ಕೆಟ್, ಶಾಂತಿನಗರದಲ್ಲೂ ಜೋರು ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದವು.

    ಇನ್ನೂ ಏಕಾಏಕಿ ಸುರಿದ ಮಳೆಯಿಂದಾಗಿ ಕೆಲ ಸಮಯದ ರಸ್ತೆಯಲ್ಲಿ 2 ರಿಂದ 3 ಅಡಿಯಷ್ಟು ನೀರು ಆವೃತವಾಗಿತ್ತು. ಅಲ್ಲಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದು ವಾಹನ ಸವಾರರನ್ನೂ ಹೈರಾಣಾಗುವಂತೆ ಮಾಡಿತ್ತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು. ಇದನ್ನೂ ಓದಿ: Bengaluru | ಗೋವಿಂದರಾಜನಗರದಲ್ಲಿ ಬ್ರಾಹ್ಮಣ ಭವನ ಉದ್ಘಾಟನೆ

  • Bengaluru Rains | ಕೆಲವೇ ನಿಮಿಷದ ಮಳೆಗೆ ಬೆಂಗಳೂರಲ್ಲಿ ಭಾರಿ ಅವಾಂತರ – ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    Bengaluru Rains | ಕೆಲವೇ ನಿಮಿಷದ ಮಳೆಗೆ ಬೆಂಗಳೂರಲ್ಲಿ ಭಾರಿ ಅವಾಂತರ – ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    – ಬಿಬಿಎಂಪಿ ವಲಯ ಕಚೇರಿ ರಸ್ತೆಯಲ್ಲೇ ತುಂಬಿ ಹರಿದ ಮಳೆ ನೀರು

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಂದು (Bengaluru Rains) ಸಂಜೆ ಏಕಾಏಕಿ ಮಳೆ ಅಬ್ಬರಿಸಿದೆ. ಬೆಳಗ್ಗೆಯಿಂದ ಕಾಣಿಸಿಕೊಳ್ಳದ ಮಳೆರಾಯ ಸಂಜೆ ಏಕಾಏಕಿ ಅಪ್ಪಳಿಸಿದೆ. ಕೆಲವೇ ನಿಮಿಷ ಸುರಿದ ಮಳೆಗೆ ಹಲವೆಡೆ ಅವಾಂತರ ಉಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಪರದಾಟುವಂತಾಗಿದೆ.

    ಕಳೆದ 2-3 ದಿನಗಳಿಂದ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿತ್ತು. ಆದ್ರೆ ಸೆಪ್ಟೆಂಬರ್‌ ಮೊದಲ ದಿನವೇ ಜೋರು ಮಳೆ ಸುರಿದಿದೆ. ಮಳೆಗಾಲದ ದಿನಗಳಿಗೆ ಹೋಲಿಸಿದ್ರೆ ಸೋಮವಾರ ಸಂಜೆ ಸುರಿದ ಮಳೆ ಬಿರುಸಾಗಿತ್ತು. ರಸ್ತೆಯಲ್ಲಿ ಜನ, ವಾಹನ ಸಂಚಾರ ಸಾಧ್ಯವಾಗದಷ್ಟು ಜೋರಿತ್ತು. ಮಿಂಚು ಗುಡುಗು ಕೂಡ ಇದ್ದು ಜನ ಭಯ ಭೀತರಾದರು. ವಾಹನ ಸವಾರರು ಮಳೆಯಲ್ಲಿ ಸಂಚಾರ ಮಾಡುವ ಧೈರ್ಯ ಮಾಡದೇ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮರ, ಕಟ್ಟಡಗಳ ಬಳಿ ಆಶ್ರಯ ಪಡೆದಿದ್ದರು. ಇನ್ನೂ ಅಲ್ಲಲ್ಲಿ ಟ್ರಾಫಿಕ್‌ ದಟ್ಟಣೆ ಕೂಡ ಉಂಟಾಗಿತ್ತು. ಇದನ್ನೂ  ಓದಿ: Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್

    ಎಲ್ಲೆಲ್ಲಿ ಮಳೆಯ ಆರ್ಭಟ ಜೋರು?
    ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ, ಮಲ್ಲೇಶ್ವರಂ ರಸ್ತೆ, ಮಂತ್ರಿ ಮಾಲ್ ಯಲ್ಲಿ ಜೋರು ಮಳೆ ಉಂಟಾಗಿತ್ತು. ಅಲ್ಲದೇ ಬಿಬಿಎಂಪಿ ವಲಯ ಕಚೇರಿ ಮುಂದಿನ ರಸ್ತೆಯೇ ತುಂಬಿ ಹರಿಯುತ್ತಿದ್ದ ದೃಶ್ಯವೂ ಕಂಡುಬಂದಿತು. ಅಲ್ಲದೇ ಕೆ.ಆರ್ ಮಾರ್ಕೆಟ್, ಶಾಂತಿನಗರದಲ್ಲೂ ಜೋರು ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದವು. ಇದನ್ನೂ  ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್‌

    ಇನ್ನೂ ಏಕಾಏಕಿ ಸುರಿದ ಮಳೆಯಿಂದಾಗಿ ಕೆಲ ಸಮಯದ ರಸ್ತೆಯಲ್ಲಿ 2 ರಿಂದ 3 ಅಡಿಯಷ್ಟು ನೀರು ಆವೃತವಾಗಿತ್ತು. ಅಲ್ಲಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದು ವಾಹನ ಸವಾರರನ್ನೂ ಹೈರಾಣಾಗುವಂತೆ ಮಾಡಿತ್ತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು. ಇದನ್ನೂ  ಓದಿ: ಭಾರೀ ಭ್ರಷ್ಟಾಚಾರ ಆರೋಪ – ಆನೇಕಲ್‌ ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

  • ಬೆಂಗಳೂರಲ್ಲಿ ಮಳೆ ಅವಾಂತರ – ಕಾರಿನ ಮೇಲೆ ಬಿದ್ದ ಬೃಹತ್‌ ಮರ, ಚಾಲಕ ಗ್ರೇಟ್‌ ಎಸ್ಕೇಪ್‌

    ಬೆಂಗಳೂರಲ್ಲಿ ಮಳೆ ಅವಾಂತರ – ಕಾರಿನ ಮೇಲೆ ಬಿದ್ದ ಬೃಹತ್‌ ಮರ, ಚಾಲಕ ಗ್ರೇಟ್‌ ಎಸ್ಕೇಪ್‌

    – ಮುಂದಿನ 4 ದಿನ ರಾಜ್ಯದಲ್ಲಿ ಭಾರೀ ಮಳೆ

    ಬೆಂಗಳೂರು: ನಗರದ ಹಲವೆಡೆ ತಡರಾತ್ರಿ ಭಾರೀ ಮಳೆ (Bengaluru Rain) ಸುರಿದು, ಪ್ರಮುಖ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿವಿಧ ಪ್ರದೇಶಗಳಲ್ಲಿ 3.2 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ತಿಳಿದುಬಂದಿದೆ.

    ಮಳೆಯೊಂದಿಗೆ ಭಾರೀ ಗಾಳಿಗೆ ಅಲ್ಲಲ್ಲಿ ಅವಾಂತರಗಳೂ ಸಂಭವಿಸಿವೆ. ಬೃಹತ್‌ ಮರಗಳು, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಈ ನಡುವೆ ನಿನ್ನೆ ರಾತ್ರಿ ಬಿದ್ದ ಮರಗಳನ್ನ ಈವರೆಗೂ ತೆರವು ಮಾಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ. ಇದನ್ನೂ ಓದಿ: Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    ಕಾರಿನ ಮೇಲೆ ಬಿದ್ದ ಬೃಹತ್ ಮರ; ಚಾಲಕ ಗ್ರೇಟ್ ಎಸ್ಕೇಪ್
    ಇನ್ನೂ ನಿನ್ನೆ ಸಂಜೆ 6:10ರ ಸುಮಾರಿಗೆ ಮಳೆ ಸಂದರ್ಭದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ 3 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಆದ್ರೆ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನ ಈವರೆಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಎಂಜಿ ರೋಡ್ ಬಳಿಯ ಶಾಂತಲಾ ರಸ್ತೆಯಲ್ಲಿ ಮುಖ್ಯರಸ್ತೆಯಲ್ಲೂ ಬೃಹತ್‌ ಗಾತ್ರದ ಮರ ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇದನ್ನೂ ಓದಿ: ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್‌

    ಮುಂದಿನ 4 ದಿನ ಭಾರೀ ಮಳೆ ಎಚ್ಚೆರಿಕೆ
    ಇನ್ನೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳ ಕಾಲ ಅಂದ್ರೆ ಜುಲೈ 15ರ ವರೆಗೆ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನೈಋತ್ಯ ಮುಂಗಾರು ತೀವ್ರತೆ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

  • ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣ ಭರ್ತಿ: ಪ್ರೀತಿ ಗೆಹ್ಲೋಟ್

    ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣ ಭರ್ತಿ: ಪ್ರೀತಿ ಗೆಹ್ಲೋಟ್

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದೆ. ಇದರಲ್ಲಿ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್(Preeti Gehlot) ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ(Lakes) ಒಟ್ಟು ಸಂಗ್ರಹಣಾ ಸಾಮರ್ಥ್ಯವು 32,514 ದಶಲಕ್ಷ ಲೀಟರ್‌ಗಳಾಗಿದೆ. 2025ರ ಏಪ್ರಿಲ್‌ನಲ್ಲಿ ಕೆರೆಗಳ ಒಟ್ಟು ನೀರಿನ ಸಂಗ್ರಹಣೆಯ ಪ್ರಮಾಣವು 10,595 ದಶಲಕ್ಷ ಲೀಟರ್‌ಗಳಿಗೆ ಕುಸಿದು ಕೇವಲ 3 ಕೆರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು. ಸುಮಾರು 63 ಕೆರೆಗಳಲ್ಲಿ ನೀರಿಲ್ಲದೆ ಒಣಗುವ ಹಂತದಲ್ಲಿತ್ತು ಎಂದಿದ್ದಾರೆ. ಇದನ್ನೂ ಓದಿ: ಇಡಿ ತನಿಖೆಗೆ ಸಂಪೂರ್ಣ ಸಹಕಾರ – ದಾಳಿ ಉದ್ದೇಶ ಗೊತ್ತಿಲ್ಲ, ನಾನೇನೂ ಮುಚ್ಚಿಟ್ಟಿಲ್ಲ ಅಂದ ಪರಂ

    ಇದೀಗ ನಗರದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಒಟ್ಟು 26,056 ದಶಲಕ್ಷ ಲೀಟರ್‌ನಷ್ಟು ನೀರು ಕೆರೆಗಳಲ್ಲಿ ಸಂಗ್ರಹವಾಗಿದ್ದು, ಕಳೆದ ಏಪ್ರಿಲ್‌ಗೆ ಹೋಲಿಸಿದರೆ ನೀರಿನ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಇದೀಗ ಪಾಲಿಕೆ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪರಮೇಶ್ವರ್‌ ಬೆನ್ನಿಗೆ ನಿಂತ ಸಿಎಂ, ಸಚಿವರು – ನಾವಿದ್ದೇವೆ ಎಂದ ಹೈಕಮಾಂಡ್

    ತುಂಬಿರುವ ಎಲ್ಲಾ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಕೆರೆಗಳು ನೀರು ಹೋಗುವ ಕಾಲುವೆಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ತೆರವುಗೊಳಿಸಲು ಸಿಬ್ಬಂದಿಯನ್ನ ನಿಯೋಜಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

    ಬೆಂಗ್ಳೂರು ರಸ್ತೆಗೆ ಟೈಟಾನಿಕ್ ಬೋಟ್ ಇಳಿಸಿದ ಊಬರ್!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಬೆಂಗಳೂರಿನ ಈ ಪರಿಸ್ಥಿತಿಯನ್ನು ಊಬರ್ ಕಂಪನಿ(Ubar)  ವ್ಯಂಗ್ಯ ಮಾಡಿದೆ.

     

    View this post on Instagram

     

    A post shared by Uber India (@uber_india)

    ಹೌದು, ಬೆಂಗಳೂರಿಗೆ(Bengaluru) ಟೈಟಾನಿಕ್(Titanic Boat) ಬೋಟ್‌ನ ವ್ಯವಸ್ಥೆಯಿದೆ ಎನ್ನುವ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಂ ಹಂಚಿಕೊಂಡಿದೆ. ಈ ರೀತಿಯಾಗಿ ಬೆಂಗಳೂರಿನ ತುಂಬೆಲ್ಲಾ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದನ್ನು ಊಬರ್ ಕಂಪನಿಯು ಲೇವಡಿ ಮಾಡಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್‌ – ಪೇಜ್‌ ವಿರುದ್ಧ ಎಫ್‌ಐಆರ್‌

    ಊಬರ್ ಸರ್ವಿಸ್ ಲಿಸ್ಟ್ನಲ್ಲಿ ಈ ಫೋಟೋ ಹಾಕಿದ್ದು, ಒಂದು ನಿಮಿಷದಲ್ಲಿ ವೇಗವಾಗಿ ಟೈಟಾನಿಕ್ ಬೋಟ್ ಸೇವೆ ಸಿಗಲಿದೆ. ಕೇವಲ 149 ರೂ. ಹಣಕ್ಕೆ ಈ ಸೇವೆ ಒದಗಿಸಲಾಗುವುದು ಎಂದು ಬೆಂಗಳೂರಿನ ಸ್ಥಿತಿಯನ್ನ ಆಡಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹೈವೇಯಲ್ಲಿ ನಿಂತ ಬಸ್ಸನ್ನು ತಳ್ಳಿದ ಮಹಿಳೆಯರು

    ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಇನ್ನು ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು. ಇದೀಗ ಬೆಂಗಳೂರಿನ ಈ ಸ್ಥಿತಿಯನ್ನು ಊಬರ್ ಕಂಪನಿ ಟ್ರೋಲ್ ಮಾಡಿದೆ.

  • ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ನಿರ್ಮಾಣಕ್ಕೆ ಅವಕಾಶವಿಲ್ಲ – ಹೊಸ ಕಾನೂನು ತರುತ್ತೇನೆ ಎಂದ ಡಿಕೆಶಿ

    ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ನಿರ್ಮಾಣಕ್ಕೆ ಅವಕಾಶವಿಲ್ಲ – ಹೊಸ ಕಾನೂನು ತರುತ್ತೇನೆ ಎಂದ ಡಿಕೆಶಿ

    ನೆಲಮಹಡಿಯಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಿ; ಡಿಸಿಎಂ

    ಬೆಂಗಳೂರು: ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ (ಅಂಡರ್ ಗ್ರೌಂಡ್) ನಿರ್ಮಾಣ ಮಾಡಿ ವಾಹನ ಪಾರ್ಕಿಂಗ್‌ಗೆ (Basement Parking) ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಇದಕ್ಕೆ ಹೊಸ ಕಾನೂನು ತರುತ್ತೇನೆ. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿಟಿಎಂ 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್ ಪಾಳ್ಯದಲ್ಲಿ ಮನಮೋಹನ್ ಕಾಮತ್ ಹಾಗೂ ದಿನೇಶ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳ ಜೊತೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ಹೊರತು ಪಡಿಸಿ ನೆಲ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿ ಯೋಜನೆ ರೂಪಿಸುವ ಆಲೋಚನೆಯಿದೆ. ಅದರಂತೆ ಜನರು ವಾಸಕ್ಕೆ ಮನೆ ನಿರ್ಮಾಣ‌ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಕನ್ನಡ ಮಾತಾಡಿ ಅಂದಿದ್ದಕ್ಕೆ SBI ಬ್ಯಾಂಕ್ ಮ್ಯಾನೇಜರ್ ಕಿರಿಕ್ – ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ!

    ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸ್ ಹಾಗೂ ಸಹಾಯ ಮಾಡಲು ಬಂದ ವ್ಯಕ್ತಿಗಳಿಗೂ ವಿದ್ಯುತ್‌ ಶಾಕ್‌ ತಗುಲಿದೆ. ವೇಳೆ ಮೃತಪಟ್ಟ ನಾಗರಿಕರಿಗೆ ಪರಿಹಾರ ನೀಡಲಾಗುವುದು. ಮಳೆಯ ಅವಘಡದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳು ಸಹ ಮೃತಪಟ್ಟಿದ್ದು ಇದಕ್ಕೂ ಪರಿಹಾರ ನೀಡಲಾಗುವುದು. ನಮ್ಮ ಅಧಿಕಾರಿಗಳಿಗೆ ದಿನಪೂರ್ತಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಬಿಬಿಎಂಪಿ ಹಾಗೂ ಜಲಮಂಡಳಿಯವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿನ ಬಗ್ಗೆ ಕೇಳಿದಾಗ, ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ವಾರ್ ರೂಮಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ಮಾಧ್ಯಮಗಳೇ ಒಮ್ಮೆ ಬಂದು ನೋಡಿ. ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್

    ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ವಿವರಿಸಿದರು.