ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ರೋಚಕ ಕಾದಾಟದಲ್ಲಿ ಕಡೆಯ ನಿಮಿಷ ಬೆಂಗಳೂರಿನ ನಾಯಕ ಪವನ್ ಶೆರವತ್, ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಅವರನ್ನು ಹಿಡಿಯುವ ಮೂಲಕ ಪಂದ್ಯವನ್ನು 34-34 ಅಂಕಗಳಿಂದ ಟೈ ಗೊಳಿಸಲು ಯಶಸ್ವಿಯಾದರು.
ಎರಡು ತಂಡಗಳು ಕೂಡ ಆರಂಭದಿಂದಲೂ ಸಮಬಲದ ಹೋರಾಟ ಸಾಧಿಸುತ್ತ ಮುನ್ನುಗ್ಗಿದವು. ಒಂದು ಹಂತದಲ್ಲಿ ಬೆಂಗಳೂರು ಮುನ್ನಡೆ ಕಾಯ್ದುಕೊಂಡಿದ್ದರೂ ಕೂಡ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮ 3 ನಿಮಿಷದ ಆಟದಲ್ಲಿ ಟೈಟಾನ್ಸ್ ಮುನ್ನಡೆ ಸಾಧಿಸಿತು. ಆದರೆ ಕಡೆಯ 1 ನಿಮಿಷದಲ್ಲಿ ಪಂದ್ಯ ರೋಚಕ ಹಂತಕ್ಕೆ ಸಾಗಿ ಅಂತಿಮವಾಗಿ 34-34 ಅಂಗಳಿಂದ ಸಮಬಲ ಸಾಧಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು
ಬೆಂಗಳೂರು ಪರ ಚಂದ್ರನ್ ರಂಜಿತ್ 3 ರೈಡ್, 6 ಬೋನಸ್ ಪಾಯಿಂಟ್ ಸೇರಿ ಒಟ್ಟು 9 ಅಂಕಗಳಿಸಿದರೆ, ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 10 ರೈಡ್ ಪಾಯಿಂಟ್ ಗಳಿಸಿ ಮಿಂಚಿದರು. ಆದರೆ ಜಿದ್ದಾಜಿದ್ದಿನ ಕಾದಾಟ ಕೊನೆಗೆ ಸಮಬಲ ಸಾಧಿಸಿ ಅಭಿಮಾನಿಗಳಿಗೆ ಕಬಡ್ಡಿ ರಸದೌತಣವನ್ನು ಉಣಬಡಿಸಿತು. ಈ ಮೂಲಕ ದಿನದ ಎರಡು ಪಂದ್ಯಗಳು ಟೈನಲ್ಲಿ ಅಂತ್ಯವಾಯಿತು. ಈ ಮೊದಲು ಯುಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯ ಕೂಡ 28-28 ಅಂಕಗಳಿಂದ ಟೈ ಆಗಿತ್ತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ ದಂಪತಿ
ಬೆಂಗಳೂರು ತಂಡ 21 ರೈಡ್, 13 ಟೇಕಲ್ ಪಾಯಿಂಟ್‍ಗಳಿಂದ 34 ಅಂಕ ಗಳಿಸಿದರೆ, ಟೈಟಾನ್ಸ್ 19 ರೈಡ್, 1 ಸೂಪರ್ ರೈಡ್, 11 ಟೇಕಲ್ ಮತ್ತು 4 ಆಲ್‍ಔಟ್ ಪಾಯಿಂಟ್‍ನಿಂದ ಒಟ್ಟು 34 ಅಂಕ ಗಳಿಸಿತು.
ಬೆಂಗಳೂರು: ಬೆಂಗಳೂರು ಬುಲ್ಸ್ ನಾಯಕ ಪವನ್ ಶೆರವತ್ ಭರ್ಜರಿ ಪ್ರದರ್ಶನ ಮುಂದುವರಿಸಿದ ಪರಿಣಾಮ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-42 ಅಂಕಗಳಲ್ಲಿ ಜಯ ಸಾಧಿಸಿದೆ.
ಕಳೆದ ಮೂರು ಪಂದ್ಯಗಳಿಂದ ದಾಳಿಯಲ್ಲಿ ಉತ್ತಮ ಲಯದಲ್ಲಿರುವ ಪವನ್ ಇಂದು ಕೂಡ ಬೆಂಗಳೂರು ಬುಲ್ಸ್ ಪರ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ತಂಡಕ್ಕೆ 15 ರೈಡ್, 2 ಟೇಕಲ್, 5 ಬೋನಸ್ ಅಂಕ ಸಹಿತ 22 ಅಂಕ ಗಳಿಸಿ ಬುಲ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ಕೂಟದಲ್ಲಿ ಸತತ ಮೂರನೇ ಜಯ ಸಾಧಿಸಿತು. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಬೆಂಗಳೂರು ತಂಡ 20 ರೈಡ್, 18 ಟೇಕಲ್, 4 ಆಲ್‍ಔಟ್ ಪಾಯಿಂಟ್ ಸೇರಿ 42 ಅಂಕ ದಾಖಲಿಸಿತು. ಹರಿಯಾಣ ಸ್ಟೀಲರ್ಸ್ 19 ರೈಡ್, 9 ಟೇಕಲ್ ಸಹಿತ 28 ಅಂಕಗಳಿಸಿತು. ಇದರೊಂದಿಗೆ ಬೆಂಗಳೂರು ತಂಡ 14 ಅಂಕಗಳ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 2 ಸ್ಥಾನಕ್ಕೆ ಏರಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಅಥ್ಲೀಟ್ ಪೂವಮ್ಮ
ಬೆಂಗಳೂರು: ಅಂತಿಮ ಕ್ಷಣದಲ್ಲಿ ಭರ್ಜರಿ ಆಟವಾಡಿದ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕಗಳ ರೋಚಕ ಜಯ ಸಾಧಿಸಿದೆ.
ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ಕೊನೆಯ ವರೆಗೆ ಎರಡು ತಂಡಗಳು ಕೂಡ ಗೆಲುವಿಗಾಗಿ ಹೋರಾಡಿದವು. ಆದರೆ ಅಂತಿಮ ಕ್ಷಣದಲ್ಲಿ ಬುಲ್ಸ್ ಪರ ಲೀಡಾಂಗ್ ಜಿಯಾನ್ ಎರಡು ಅಂಕ ರೈಡಿಂಗ್ ಮೂಲಕ ದಾಖಲಿಸಿ ತಂಡಕ್ಕೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು. ಅಂತಿಮವಾಗಿ ಬೆಂಗಳೂರು ಬುಲ್ಸ್ 36 – 35 ಅಂತರದ ಗೆಲುವು ದಾಖಲಿಸಿತು. ಇದು ಬುಲ್ಸ್ ಕೂಟದಲ್ಲಿ ದಾಖಲಿಸಿದ ಎರಡನೇ ಗೆಲುವಾಗಿದೆ. ಇದನ್ನೂ ಓದಿ: ರಾಹುಲ್ ಶತಕದಾಟ – ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಭವ
ಬುಲ್ಸ್ ಪರ ಪವನ್ ಶೆರಾವತ್ ರೈಡಿಂಗ್‍ನಲ್ಲಿ 15 ಪಾಯಿಂಟ್ ಗಳಿಸಿದರೆ, ಎದುರಾಳಿ ತಂಡ ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ 17 ರೈಡಿಂಗ್ ಪಾಯಿಂಟ್ ಗಳಿಸಿ ಮಿಂಚಿದರು. ಬೆಂಗಳೂರು ಬುಲ್ಸ್ 23 ರೈಡಿಂಗ್, 6 ಟೇಕಲ್, 4 ಆಲ್‍ಔಟ್, 1 ಸೂಪರ್ ರೈಡ್ ಮತ್ತು 3 ಇತರ ಅಂಕ ಸಂಪಾದಿಸಿದರೆ, ಬೆಂಗಾಲ್ ವಾರಿಯರ್ಸ್ 22 ರೈಡಿಂಗ್, 9 ಟೇಕಲ್, 4 ಆಲ್‍ಔಟ್, 1 ಸೂಪರ್ ರೈಡ್ ಸಹಿತ 22 ರನ್ ಗಳಿಸಿ 1 ಅಂಕಗಳ ಸೋಲು ಕಂಡಿತು. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು – ಡಿ.26ಕ್ಕೆ ಆರಂಭವಾಗುವುದರ ಮಹತ್ವವೇನು?
ಬೆಂಗಳೂರು: ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ಟೂರ್ನಿಯ ಮೊದಲ ಜಯ ಸಾಧಿಸಿದೆ.
ರೈಡಿಂಗ್ ಮತ್ತು ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ತಂಡ 38 – 30 ಅಂಕಗಳ ಅಂತರದಲ್ಲಿ ಜಯಗಳಿಸಿತು. ಬೆಂಗಳೂರು ಪರ ರೈಡಿಂಗ್‍ನಲ್ಲಿ ನಾಯಕ ಪವನ್ ಕುಮಾರ್ ಶೆರಾವತ್ 9 ಅಂಕಗಳನ್ನು ಸಂಪಾದಿಸಿ ಮಿಂಚಿದರೆ, ಡಿಫೆನ್ಸ್ ವಿಭಾಗದಲ್ಲಿ ಸೌರಭ ನಂದಾಲ್ 5 ಅಂಕ ಸಂಪಾದಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್
ಮೊದಲಾರ್ಧದ ಮುಕ್ತಾಯದ ವೇಳೆಗೆ ತಮಿಳ್ 13 – 19 ಬೆಂಗಳೂರು ಮುನ್ನಡೆ ಸಂಪಾದಿಸಿಕೊಂಡಿತ್ತು. ಆ ಬಳಿಕ ತೀವ್ರ ಜಿದ್ದಾಜಿದ್ದಿನಿಂದ ನಡೆದ ಕಾದಾಟದಲ್ಲಿ ಬೆಂಗಳೂರು ಗೆದ್ದು ಬೀಗಿದೆ. ಬೆಂಗಳೂರು ಬುಲ್ಸ್ ರೈಡಿಂಗ್‍ನಲ್ಲಿ 19, ಟೇಕಲ್ 14, ಆಲ್‍ಔಟ್‍ನಲ್ಲಿ 4 ಮತ್ತು ಇತರೆ 1 ಪಾಯಿಂಟ್‍ನೊಂದಿಗೆ ಒಟ್ಟು 38 ಅಂಕ ಗಳಿಸಿತ್ತು. ತಮಿಳ್ ತಲೈವಾಸ್ ರೈಡಿಂಗ್‍ನಲ್ಲಿ 15, ಟೇಕಲ್ 12, ಆಲ್‍ಔಟ್ 2 ಮತ್ತು ಇತರೆ 1 ಪಾಯಿಂಟ್‍ನೊಂದಿಗೆ 30 ಅಂಕಗಳಿಸಿ 8 ಅಂಕಗಳ ಅಂತರದ ಸೋಲು ಕಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?
ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯ ಪ್ರಥಮ ಪಂದ್ಯದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 30-46 ಅಂಕಗಳ ಅಂತರದಲ್ಲಿ ಪರಾಭವಗೊಂಡಿದೆ.
ಯು ಮುಂಬಾ ಪರ ರೈಡಿಂಗ್‍ನಲ್ಲಿ ಮಿಂಚಿದ ಅಭಿಷೇಕ್ ಸಿಂಗ್ 19 ರೈಡ್ ಪಾಯಿಂಟ್‍ನೊಂದಿಗೆ ಮಿಂಚಿ ಯು ಮುಂಬಾ ತಂಡಕ್ಕೆ ಮೊದಲ ಜಯ ತಂದುಕೊಟ್ಟರು. ಬೆಂಗಳೂರು ಪರ ನಾಯಕ ಪವನ್ ಶೆರಾವತ್ 12 ರೈಡ್ ಪಾಯಿಂಟ್‍ಗಳಿಸಿದರೂ ಕೂಡ ಅಂತಿಮವಾಗಿ 16 ಅಂಕಗಳಿಂದ ಸೋಲು ಕಂಡಿದೆ. ಇದನ್ನೂ ಓದಿ: ಬೆಂಗಳೂರು ಬುಲ್ಸ್‌ನಲ್ಲಿಲ್ಲ ಕನ್ನಡಿಗರು – 9 ತಂಡದಲ್ಲಿ 15 ಕನ್ನಡಿಗರ ಕಮಾಲ್
ಬೆಂಗಳೂರು: ಕಬಡ್ಡಿ ಹಬ್ಬಕ್ಕೆ ವೇದಿಕೆ ಸಿದ್ಧವಾಗಿದೆ. ವಿವೋ ಪ್ರೋ ಕಬಡ್ಡಿ ಲೀಗ್ ಎರಡು ವರ್ಷಗಳ ನಂತರ ಮತ್ತೆ ರಂಜಿಸಲು ಬಂದಿದೆ. ಬೆಂಗಳೂರು ಬುಲ್ಸ್ ತಂಡ ಸಹ ಪ್ರಶಸ್ತಿ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದೆ .
ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಾ ಕಟ್ಟುನಿಟ್ಟಾದ ಬಯೋ ಬಬಲ್ ವ್ಯವಸ್ಥೆಯಲ್ಲಿ ತಂಡಗಳು ಕಣಕ್ಕೆ ಇಳಿಯಲಿವೆ.
ಡಿಸೆಂಬರ್ 22 ರಂದು ರಾತ್ರಿ 7:30 ಗಂಟೆಗೆ ಯು ಮುಂಬಾ ತಂಡದೊಂದಿಗೆ ಬೆಂಗಳೂರು ಬುಲ್ಸ್ ಸೆಣೆಸಾಡಲಿದ್ದು ಪಂದ್ಯಾವಳಿಗೆ ಆರಂಭ ಸಿಗಲಿದೆ. ಎಲ್ಲ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿವೆ.
ಆಯೋಜಕರು ಪಂದ್ಯಾವಳಿಯ ಮೊದಲ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ನಲ್ಲಿ 4 ಮತ್ತು ಜನವರಿಯಲ್ಲಿ 7 ಪಂದ್ಯಗಳು ಸೇರಿ ಮೊದಲಾರ್ಧದಲ್ಲಿ ಬುಲ್ಸ್ 11 ಪಂದ್ಯಗಳನ್ನು ಆಡಲಿದೆ.
ಬೆಂಗಳೂರು ಬುಲ್ಸ್ ಶಕ್ತಿ: ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸದಾ ಫೇವರೇಟ್ ತಂಡ. ಜನವರಿ 2019 ರಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಸೀಸನ್ 6 ರಲ್ಲಿ ಚಾಂಪಿಯನ್ ಆಗಿತ್ತು. ಎರಡನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದರೆ ಸೀಸನ್ 1 ಮತ್ತು 7 ರಲ್ಲಿ, ಸೆಮಿಫೈನಲ್ ಪ್ರವೇಶ ಮಾಡಿತ್ತು.
ಈ ಬಾರಿ ಬೆಸ್ಟ್ ತಂಡ: ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಸೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ.
ಮೂರನೇ ಸೀಸನ್ ನಿಂದ ಪವನ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಪ್ರೋ ಕಬಡ್ಡಿ ಸೀಸನ್ 6 ಮತ್ತು 7 ರಲ್ಲಿ ಕ್ರಮವಾಗಿ “ಅತ್ಯಂತ ಮೌಲ್ಯಯುತ ಆಟಗಾರ” ಮತ್ತು “ಅತ್ಯುತ್ತಮ ರೈಡರ್” ಪುರಸ್ಕಾರಕ್ಕೆ ಪಾತ್ರವಾಗಿದ್ದರು.
ಪ್ರೋ ಕಬಡ್ಡಿಯ ಅತ್ಯುತ್ತಮ ರೈಡರ್ ಗಳಲ್ಲಿ ಪವನ್ ಗೆ ಅಗ್ರಸ್ಥಾನವಿದೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ. ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಅವರಿಂದ “ಬುಲ್ಡೋಜರ್” ಎಂದೇ ಕರೆಸಿಕೊಳ್ಳುತ್ತಾರೆ.
ಅರ್ಜುನ ಪ್ರಶಸ್ತಿ ವಿಜೇತ ರಣಧೀರ್ ಲೀಗ್ ಆರಂಭದಿಂದಲೂ ಬುಲ್ಸ್ ತರಬೇತುದಾರರಾಗಿದ್ದವರು. ಅನೇಕ ಯುವ ಆಟಗಾರರನ್ನು ತಮ್ಮ ಗರಡಿಯಲ್ಲಿ ಪಳಗಿಸಿ ಪರಿಚಯಿಸಿದ್ದಾರೆ. ಈ ಬಾರಿ ಬುಲ್ಸ್ ಗೆ ಅತ್ಯುತ್ತಮ ನಾಯಕ ಮತ್ತು ಅತ್ಯುತ್ತಮ ಕೋಚ್ ಸಂಯೋಜನೆ ಇದೆ. 2014 ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಹೊಸ ಜನರನ್ನು ತನ್ನ ಕಡೆ ಸೆಳೆದುಕೊಂಡಿತು. ಕಬಡ್ಡಿ ಆಸ್ವಾದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು.
ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಬುಲ್ಸ್, ಪ್ರೊ ಕಬಡ್ಡಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದೆ. ಈಗ ಮತ್ತೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ
ಸುದೀಪ್ ಕೊಂಡಾಡಿದ ತಂಡ: ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಂಡವನ್ನು ಹುರಿದುಂಬಿಸಿದ್ದಾರೆ. ‘ನಮ್ಮ ಊರು, ನಮ್ಮ ಆಟ, ನಮ್ಮ ಹುಡುಗರು, ನಮ್ಮ ಬುಲ್ಸ್’ ಎನ್ನುತ್ತ ಎಲ್ಲರೂ ಬೆಂಬಲ ನೀಡಲು ಕೇಳಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಡುವ ಕಿಚ್ಚ, ಸಖತ್ ಡೈಲಾಗ್ ಹೊಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಸುದೀಪ್ ಟ್ವಿಟ್ಟರ್ ನಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ ಬೆಂಗಳೂರು ಬುಲ್ಸ್ ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಸುದೀಪ್ ಹೇಳಿದ್ದಾರೆ.
ಬುಲ್ಸ್ ಟೈಟಲ್ ಪ್ರಾಯೋಜಕರಾಗಿ 1xnews ಜವಾಬ್ದಾರಿ ತೆಗೆದುಕೊಂಡಿದ್ದರೆ, ಹರ್ಬಲೈಫ್ ನ್ಯೂಟ್ರೇಶನ್ ಜವಾಬ್ದಾರಿ ಹೊತ್ತುಕೊಂಡಿದೆ . ನಿಪ್ಪಾನ್ ಪೇಂಟ್, ಬಿಗ್ ಎಫ್‌ಎಂ ಮತ್ತು ಪಿಕೆ ಕಾನ್ಷಿಯಸ್‌ನೆಸ್ ಕೂಡ ಬುಲ್ಸ್ ನೊಂದಿಗೆ ಬಾಂಧ್ಯವ್ಯ ಬೆಸೆದುಕೊಂಡಿವೆ. ಕೊರೊನಾ ಕಾರಣಕ್ಕೆ ಪಂದ್ಯಾವಳಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಇರುವಿದಿಲ್ಲ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು
ಬೆಂಗಳೂರು ಬುಲ್ಸ್ ತಂಡದ ಮೊದಲಾರ್ಧದ ವೇಳಾಪಟ್ಟಿ
1. ಯು ಮುಂಬಾ ಡಿ. 22 ಬುಧವಾರ ಸಂಜೆ 7:30
2. ತಮಿಳ್ ತಲೈವಾಸ್ ಡಿ. 24 ಶುಕ್ರವಾರ ರಾತ್ರಿ 8:30
3. ಬಂಗಾಲ್ ವಾರಿಯರ್ಸ್ ಡಿ. 26 ಭಾನುವಾರ ರಾತ್ರಿ 8:30
4. ಹರ್ಯಾಣ ಸ್ಟೀಲರ್ಸ್ ಡಿ. 30 ಗುರುವಾರ ರಾತ್ರಿ 8:30
5. ತೆಲುಗು ಟೈಟಾನ್ಸ್ ಜ. 1 ಶನಿವಾರ ರಾತ್ರಿ 8:30
6. ಪುಣೇರಿ ಪಲ್ಟಾನ್ ಜ. 2 ಭಾನುವಾರ ರಾತ್ರಿ 8:30
7 ಜೈಪುರ್ ಪಿಂಕ್ ಪ್ಯಾಂಥರ್ಸ್ ಜ. 6 ಗುರುವಾರ ರಾತ್ರಿ 8:30
8. ಯುಪಿ ಯೋದ್ಧಾ ಜ. 9 ಭಾನುವಾರ ರಾತ್ರಿ 8:30
9. ದಬಾಂಗ್ ಡೆಲ್ಲಿ ಜ. 12 ಬುಧವಾರ ರಾತ್ರಿ 8:30
10. ಗುಜರಾತ್ ಜೈಂಟ್ಸ್ ಜ. 14 ಶುಕ್ರವಾರ ರಾತ್ರಿ 8:30
11. ಪಾಟ್ನಾ ಪೈರೇಟ್ಸ್ ಜ. 16 ಭಾನುವಾರ ರಾತ್ರಿ 8:30
ಬೆಂಗಳೂರು: ಕಳೆದ 2 ವರ್ಷ ಕೊರೊನಾ ಕಾಟದಿಂದಾಗಿ ರದ್ದಾಗಿದ್ದ ಪ್ರೊ ಕಬಡ್ಡಿ ಇದೀಗ ಮತ್ತೆ ಆರಂಭಗೊಳ್ಳುತ್ತಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಡಿ.22 ರಿಂದ ಮೊದಲ ಚರಣದ ಪಂದ್ಯಗಳು ಆರಂಭಗೊಳ್ಳಲಿದೆ.
ಮಶಾಲ್ ಸ್ಟೋಟ್ರ್ಸ್ ಆಯೋಜಕತ್ವದ ವಿವೋ ಪ್ರೊ ಕಬಡ್ಡಿ 8ನೇ ಆವೃತ್ತಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಹಾಗೂ ಕನ್ವೆಷನ್ ಸೆಂಟರ್‍ನಲ್ಲಿ ಇಡೀ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 3 ತಿಂಗಳುಗಳ ಕಾಲ ಟೂರ್ನಿ ನಡೆಯಲಿದೆ. ಟೂರ್ನಿಯ ಮೊದಲ ಚರಣದ ಪಂದ್ಯಗಳಿಗೆ ಡಿಸೆಂಬರ್ 22ರಂದು ಅಧಿಕೃತ ಚಾಲನೆ ಸಿಗಲಿದೆ. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ
ಕಠಿಣ ಬಯೋ ಬಬಲ್‍ನಲ್ಲಿ ಟೂರ್ನಿ ನಡೆಯುತ್ತಿದ್ದು ಆಟಗಾರರು 3 ತಿಂಗಳ ಕಾಲ ಹೋಟೆಲ್ ಬಿಟ್ಟು ಹೊರ ಹೋಗುವಂತಿಲ್ಲ ಮತ್ತು ಹೊರಗಡೆಯಿಂದ ಯಾರನ್ನೂ ಕೂಡ ಒಳಬಿಡುತ್ತಿಲ್ಲ. ಜೊತೆಗೆ ಟೂರ್ನಿಗೆ ಪ್ರೇಕ್ಷಕರನ್ನೂ ಕೂಡ ನಿಷೇಧಿಸಲಾಗಿದೆ. ಆಟಗಾರರಿಗೆ 3 ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆ ಕೂಡ ಮಾಡಲಾಗುತ್ತಿದೆ. ಆಟದ ಸಮಯ ಹೊರತು ಪಡಿಸಿ ಮಾಸ್ಕ್ ಧರಿಸುವುದನ್ನು ಕೂಡ ಆಟಗಾರರಿಗೆ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ಜೈಪುರ್ ಪಿಂಕ್ ಫ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ, ಯೂಪಿ ಯೋಧಾ, ತಮಿಳ್ ತಲೈವಾಸ್, ಹರಿಯಾಣ ಸ್ಟೀಲರ್ಸ್, ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್, ಗುಜಾರಾತ್ ಫಾರ್ಚೂನ್‍ಜೈಂಟ್ಸ್ ಒಟ್ಟು 12 ತಂಡಗಳು ಸೆಣಸಾಡಲಿದ್ದು, ಬೆಂಗಳೂರು ಬುಲ್ಸ್ ತವರು ಅಂಗಳದಲ್ಲಿ ಸೆಣಸಾಡಲಿದೆ. ಎಲ್ಲಾ ತಂಡಗಳಲ್ಲೂ ಕೂಡ ಸ್ಟಾರ್ ಆಟಗಾರರ ದಂಡೇ ಇದ್ದು, ಮುಂದಿನ ಮೂರು ತಿಂಗಳುಗಳ ಕಾಲ ಕಬಡ್ಡಿ ಕಲರವ ನಡೆಯಲಿದೆ. ಇದನ್ನೂ ಓದಿ: ಐಪಿಎಲ್‍ನ ನೂತನ ಫ್ರಾಂಚೈಸ್ ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ
ಬೆಂಗಳೂರು: ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ಕ್ಷೇತ್ರದಂತೆ, ಕ್ರೀಡಾ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಐಪಿಎಲ್‍ನಲ್ಲಿ ಕರ್ನಾಟಕ ತಂಡವಾಗಿದ್ದ ಆರ್ಸಿಬಿ, ಪ್ರೋ ಕಬಡ್ಡಿ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸಿ ಹುರಿದುಂಬಿಸುತ್ತಿದ್ದ ಅಪ್ಪು ಅಗಲಿಕೆಯ ನೋವು ಕ್ರೀಡಾ ಕ್ಷೇತ್ರಕ್ಕೂ ತಟ್ಟಿದೆ.
ಪುನೀತ್ ರಾಜ್‍ಕುಮಾರ್(46) ಹೃದಯಾಘಾತದಿಂದ ಅಕ್ಟೋಬರ್ 29ರಂದು ಕೊನೆಯುಸಿರೆಳೆದಿದ್ದಾರೆ. ಕನ್ನಡಿಗರ ಪಾಲಿನ ನೆಚ್ಚಿನ ಅಪ್ಪು, ಕ್ರೀಡಾಪಟುಗಳಂತೆ ತಮ್ಮ ದೇಹವನ್ನು ಅಚ್ಚುಕಟ್ಟಾಗಿ ಫಿಟ್ ಆಗಿ ಬೆಳೆಸಿದ್ದರು. ಜೊತೆಗೆ ಕ್ರಿಕೆಟ್, ಕಬಡ್ಡಿ, ಫುಟ್‍ಬಾಲ್ ಕ್ರೀಡೆಗಳಲ್ಲಿ ಕರ್ನಾಟಕ ರಾಜ್ಯ ತಂಡಗಳಿಗೆ ಯಾವತ್ತು ಬೆಂಬಲವಾಗಿದ್ದರು. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್
ಪುನೀತ್ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದು, ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್‍ನಲ್ಲಿ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಪ್ರೊ ಕಬಡ್ಡಿಯ ಲೀಗ್‍ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿ ತಂಡಕ್ಕೆ ಪವರ್ ಹೆಚ್ಚಿಸಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪುನೀತ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಕೂತು ವೀಕ್ಷಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದರು.
Shocked and deeply saddened on the passing of #PuneethRajkumar the film industry has lost a gem. One of the finest human being I’ve met. So vibrant and humble.Gone too soon. Condolences to his family, friends and innumerable fans. 🙏🏽
ಪ್ರೀಮಿಯರ್ ಫುಟ್‍ಬಾಲ್ ಲೀಗ್ ಆರಂಭಗೊಂಡಾಗ ಪುನೀತ್ ರಾಜ್‍ಕುಮಾರ್ ಬೆಂಗಳೂರು ಎಫ್‍ಸಿ ತಂಡದೊಂದಿಗೂ ಕೈ ಜೋಡಿಸಿದ್ದರು. ಜೊತೆಗೆ ಪಂದ್ಯಗಳ ವೀಕ್ಷಣೆಗಳಿಗಾಗಿ ಅಂಕಣಕ್ಕೆ ಬಂದು ನಗು ಮೊಗದಿಂದ ಆಟಗಾರರಿಗೆ ಹುರಿದುಂಬಿಸುತ್ತಿದ್ದ ಅಪ್ಪು ಇನ್ನೂ ನೆನಪು ಮಾತ್ರ. ಇದನ್ನೂ ಓದಿ: T20 ವಿಶ್ವಕಪ್ – ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ
Gone too soon! 💔 Shocked and deeply saddened by the passing away of one of the most loved actors in the cinema industry, Puneeth Rajkumar.
Condolences to Puneeth’s family, friends and countless fans.
ಮುಂಬೈ: ಐಪಿಎಲ್ ಪಂದ್ಯಾವಳಿ ವೇಳೆ ಹೇಳುತ್ತಿದ್ದ ಘೋಷವಾಕ್ಯ ‘ಈ ಸಲ ಕಪ್ ನಮ್ದೇ’ ಅನ್ನೋದನ್ನು ನೀವೀಗ ಅಭಿಮಾನದಿಂದ ಹೇಳಬಹುದು. ಯಾಕೆಂದರೆ ಈ ಸಲ ಕಪ್ ನಮ್ದೇ.. ಆದರೆ ಇದು ಐಪಿಎಲ್‍ನಲ್ಲ. ಬದಲಿಗೆ ಕಬಡ್ಡಿ ಪಂದ್ಯವಾಳಿಯಲ್ಲಿ. ವಿವೊ ಪ್ರೊಕಬಡ್ಡಿ ಲೀಗ್ 6ನೇ ಆವೃತ್ತಿಯ ಫೈನಲ್ ನಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ವಿರುದ್ಧ ಗೆಲುವು ಸಾಧಿಸಿದೆ.
ಶನಿವಾರ ಎನ್‍ಎಸ್‍ಸಿಐ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 38-33 ಅಂಕಗಳ ಮೂಲಕ 5 ಪಾಯಿಂಟ್ ಗಳ ಗೆಲುವು ಸಾಧಿಸಿತು. ಬೆಂಗಳೂರು ಬುಲ್ಸ್ ತಂಡದ ಪವನ್ ಸೆಹ್ರಾವತ್ 33 ಅಂಕಗಳಲ್ಲಿ 22 ಅಂಕಗಳನ್ನು ತಾವೇ ಗಳಿಸಿದ್ದರು. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಆಟವಾಡಿದ್ದ ಬೆಂಗಳೂರು ಬುಲ್ಸ್ ತಂಡವು 22ರಲ್ಲಿ 13 ಗೆಲುವು ಸಾಧಿಸಿತ್ತು. ಬೆಂಗಳೂರು ತಂಡ ಗೆಲುವು ಸಾಧಿಸುತ್ತಿದ್ದಂತೆ ಕೋಚ್ ರಮೇಶ್ ಸೇರಿದಂತೆ ಎಲ್ಲಾ ಆಟಗಾರರು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕೊಚ್ಚಿಯ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 41-29 ಅಂತರದಿಂದ ಗೆಲುವು ಸಾಧಿಸಿತ್ತು ಫೈನಲ್‍ಗೆ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿತ್ತು.