Tag: ಬೆಂಗಳೂರು ಬುಲ್ಸ್

  • ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ

    ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ

    ಬೆಂಗಳೂರು: ಪ್ರೊ ಕಬಡ್ಡಿ 9ನೇ ಸೀಸನ್‍ನಲ್ಲಿ (Pro Kabaddi Season 9)  ಅತಿಥೇಯ ಬೆಂಗಳೂರು ಬುಲ್ಸ್ (Bengaluru Bulls)  ತಂಡ ತೆಲುಗು ತೈಟಾನ್ಸ್ (Telugu Titans) ವಿರುದ್ಧ 34-29 ಅಂಕಗಳ ಅಂತರದಿಂದ ಗೆದ್ದು ಶುಭಾರಂಭ ಕಂಡಿದೆ.

    ರೈಡ್ ಮತ್ತು ಟೇಕಲ್‍ಗಳ ಮೂಲಕ ಮಿಂಚಿದ ಬೆಂಗಳೂರು ಬುಲ್ಸ್ ಆಟಗಾರರು ಅಂತಿಮವಾಗಿ 5 ಅಂಕಗಳ ಜಯ ಸಾಧಿಸಿದರು. ಮೊದಲಾರ್ಧದಲ್ಲಿ 17-17 ಅಂಕಗಳ ಸಮಬಲ ಸಾಧಿಸಿದ ಎರಡು ತಂಡಗಳು, ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ ನಡೆಸಿದವು. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಬೆಂಗಳೂರು ಬುಲ್ಸ್ ಒಟ್ಟು 15 ರೈಡ್, 12 ಟೇಕಲ್, 4 ಅಲೌಟ್ ಮತ್ತು ಇತರ 3 ಅಂಕಗಳಿಂದ 34 ಅಂಕ ಗಳಿಸಿತು. ಅತ್ತ ಉತ್ತಮ ಹೋರಾಟ ನೀಡಿದ ತೆಲುಗು ಟೈಟಾನ್ಸ್ 18 ರೈಡ್, 7 ಟೇಕಲ್, 2 ಅಲೌಟ್, 2 ಇತರ ಅಂಕ ಸಹಿತ 29 ಅಂಕ ಕಲೆ ಹಾಕಿ 5 ಅಂಕಗಳಿಂದ ಸೋಲುಂಡಿತು. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ಬೆಂಗಳೂರು ಪರ ನೀರಜ್ ನರ್ವಾಲ್ 7 ಮತ್ತು ಭರತ್ ಮತ್ತು ವಿಕಾಸ್ ಖಂಡೋಲ ತಲಾ 5 ಅಂಕ ಕಲೆಹಾಕಿ ಗೆಲುವಿನ ರೂವಾರಿಯಾದರು. ಟೈಟಾನ್ಸ್ ಪರ ರಜನೀಶ್ ಮತ್ತು ವಿನಯ್ ತಲಾ 7 ಅಂಕ ಕಲೆ ಹಾಕಿ ಮಿಂಚಿದರು.

    Live Tv
    [brid partner=56869869 player=32851 video=960834 autoplay=true]

  • ಡೆಲ್ಲಿ ದರ್ಬಾರ್‌ಗೆ ಬುಲ್ಸ್ ಪಲ್ಟಿ- ಫೈನಲ್‍ನಲ್ಲಿ ಡೆಲ್ಲಿ Vs ಪಾಟ್ನಾ ಫೈಟ್

    ಡೆಲ್ಲಿ ದರ್ಬಾರ್‌ಗೆ ಬುಲ್ಸ್ ಪಲ್ಟಿ- ಫೈನಲ್‍ನಲ್ಲಿ ಡೆಲ್ಲಿ Vs ಪಾಟ್ನಾ ಫೈಟ್

    ಬೆಂಗಳೂರು: ಸೆಮಿಫೈನಲ್ ಕಾದಾಟದಲ್ಲಿ ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ 40-35, 5 ಅಂಕಗಳ ಅಂತರದ ಜಯ ಗಳಿಸಿ ಫೈನಲ್‍ಗೆ ಲಗ್ಗೆ ಇಟ್ಟಿದೆ.

    ಪಂದ್ಯದ ಆರಂಭದಿಂದಲೂ ಬೆಂಗಳೂರು ಮೇಲೆ ಸವಾರಿ ಮಾಡಿದ ಡೆಲ್ಲಿ ತಂಡದ ಕ್ಯಾಪ್ಟನ್ ನವೀನ್ ಕುಮಾರ್ ಸೂಪರ್ 10 ಅಂಕಗಳಿಸಿ ಗೆಲುವಿನ ರೂವಾರಿಯಾದರು. ಬುಲ್ಸ್ ಪರ ಗೆಲುವಿಗಾಗಿ ಹೋರಾಡಿದ ಪವನ್ ಕುಮಾರ್ ಹೋರಾಟ ವ್ಯರ್ಥವಾಯಿತು. ಮೊದಲಾರ್ಧದಲ್ಲಿ ಡೆಲ್ಲಿ 16 – ಬೆಂಗಳೂರು 17 ಪಾಯಿಂಟ್‍ಗಳೊಂದಿಗೆ ಬೆಂಗಳೂರು ಒಂದಂಕ್ಕದ ಮುನ್ನಡೆ ಪಡೆದುಕೊಂಡಿತು. ಬಳಿಕ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಬುಲ್ಸ್ ಬೆವರಿಳಿಸಿತು. ಇದನ್ನೂ ಓದಿ: ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

    ಬೆಂಗಳೂರು ಬುಲ್ಸ್ 24 ರೈಡ್, 9 ಟೇಕಲ್, 2 ಇತರ ಅಂಕ ಸಹಿತ ಒಟ್ಟು 35 ಅಂಕ ಕಲೆ ಹಾಕಿತು. ಡೆಲ್ಲಿ 23 ರೈಡ್, 2 ಸೂಪರ್ ರೈಡ್, 11 ಟೇಕಲ್, 4 ಆಲೌಟ್ ಮತ್ತು 2 ಇತರ ಅಂಕ ಸಹಿತ 40 ಅಂಕ ಸಂಪಾದಿಸಿ 5 ಅಂಕಗಳ ಜಯ ಸಾಧಿಸಿತು. ರೈಡಿಂಗ್‍ನಲ್ಲಿ ಡೆಲ್ಲಿ ಪರ ನವೀನ್ ಕುಮಾರ್ 13 ರೈಡ್, 1 ಬೋನಸ್ ಸಹಿತ 14 ಪಾಯಿಂಟ್ ತಂಡಕ್ಕೆ ಕೊಡುಗೆ ನೀಡಿದರು. ಇತ್ತ ಬೆಂಗಳೂರು ಪರ ಪವನ್ ಕುಮಾರ್ 14 ರೈಡ್, 4 ಬೋನಸ್ ಸಹಿತ 18 ಅಂಕ ಕಲೆ ಹಾಕಿದರೂ ಹೋರಾಟ ವ್ಯರ್ಥ ಆಯಿತು. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್

    ಈ ಮೊದಲು ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಯಪಿ ಯೋಧ ವಿರುದ್ಧ ಪಾಟ್ನಾ ಪೈರೇಟ್ಸ್ 38-27 ಅಂಕಗಳೊಂದಿಗೆ ಒಟ್ಟು 11 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಫೆ.25 ರಂದು ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ಫೈನಲ್ ಪಂದ್ಯದಲ್ಲಿ ಹೋರಾಡಲಿದೆ.

  • ಬುಲ್ಸ್ ವಿರುದ್ಧ ಗೆಲುವಿನ ನಗೆ ಬೀರಿದ ಜೈಂಟ್ಸ್

    ಬುಲ್ಸ್ ವಿರುದ್ಧ ಗೆಲುವಿನ ನಗೆ ಬೀರಿದ ಜೈಂಟ್ಸ್

    ಬೆಂಗಳೂರು: ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಸೂಪರ್ ಜೈಂಟ್ಸ್ 40-36 ಅಂತರದಿಂದ ಗೆದ್ದಿದೆ.

    ಕೊನೆಯ ನಿಮಿಷಗಳಲ್ಲಿ ರೈಡಿಂಗ್‍ನಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ಸೂಪರ್ ಜೈಂಟ್ಸ್ ಬುಲ್ಸ್ ವಿರುದ್ಧ 4 ಅಂಕಗಳ ಅಂತರದಿಂದ ಜಯ ಸಾಧಿಸಿದೆ. ಇದನ್ನೂ ಓದಿ: 1000ನೇ ಏಕದಿನ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡ ಭಾರತ – ವಿಂಡೀಸ್‍ಗೆ ಹೀನಾಯ ಸೋಲು

    ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಗುಜರಾತ್ ಪರ ಪ್ರದೀಪ್ ಕುಮಾರ್ 12 ರೈಡ್, 2 ಬೋನಸ್ ಸಹಿತ ಒಟ್ಟು 14 ಅಂಕ ಸಂಪಾದಿಸಿದರೆ, ಬುಲ್ಸ್ ಪರ ಪವನ್ ಶೆರವತ್ 10 ರೈಡ್, 2 ಬೋನಸ್ ಸಹಿತ 12 ಅಂಕ ಮತ್ತು ಭರತ್ 10 ರೈಡ್, 1 ಬೋನಸ್ ಸಹಿತ 11 ಅಂಕ ಕಲೆಹಾಕಿ ಮಿಂಚಿದರು. ಇದನ್ನೂ ಓದಿ: U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?

    https://twitter.com/ProKabaddi/status/1490356834208989184

    ಬೆಂಗಳೂರು 24 ರೈಡ್, 1 ಸೂಪರ್ ರೈಡ್, 8 ಟೇಕಲ್, 2 ಆಲೌಟ್, 2 ಇತರೆ ಅಂಕ ಸಹಿತ ಒಟ್ಟು 36 ಪಾಯಿಂಟ್ ಪಡೆದರೆ, ಗುಜರಾತ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಆಲೌಟ್, 4 ಇತರೆ ಸಹಿತ ಒಟ್ಟು 40 ಪಾಯಿಂಟ್ ಸಂಪಾದಿಸಿ 4 ಅಂಕಗಳ ಅಂತರದ ಜಯ ಸಾಧಿಸಿದೆ.

  • ಬೆಂಗಳೂರು vs ಡೆಲ್ಲಿ ರೋಚಕ ಕಾದಾಟ – ಪಂದ್ಯ ‘ಟೈ’ನಲ್ಲಿ ಅಂತ್ಯ

    ಬೆಂಗಳೂರು vs ಡೆಲ್ಲಿ ರೋಚಕ ಕಾದಾಟ – ಪಂದ್ಯ ‘ಟೈ’ನಲ್ಲಿ ಅಂತ್ಯ

    ಬೆಂಗಳೂರು: ಕೊನೆಯ ಸೆಕೆಂಡ್‌ವರೆಗೆ ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.

    ಕಡೆಯ 1 ನಿಮಿಷಗಳಲ್ಲಿ ಎರಡು ತಂಡದ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ರಂಗೇರಿತ್ತು. ಬೆಂಗಳೂರು ಬುಲ್ಸ್ ಪರ ಕೊನೆಯ ರೈಡ್ ಮಾಡಿದ ಪವನ್ ಶೆರವತ್ ಅವರನ್ನು ಡೆಲ್ಲಿ ತಂಡದ ಮಂಜಿತ್ ಚಿಲ್ಲರ್ ಬೇಟೆಯಾಡಿ ಒಂದಂಕ್ಕದ ಮುನ್ನಡೆಯಲ್ಲಿದ್ದ ಪಂದ್ಯವನ್ನು ಸಮಬಲಗೊಳಿಸಿದರು. ಅಂತಿಮವಾಗಿ 4 ಸೆಕೆಂಡ್‍ನ ಆಟ ಬಾಕಿ ಇತ್ತು ಡೆಲ್ಲಿ ಪರ ಕೊನೆಯ ರೈಡ್ ಮಾಡಿದ ನವೀನ್ ಕುಮಾರ್ ಯಾವುದೇ ಅಂಕ ಗಳಿಸದೆ ಹಿಂದಿರುಗಿ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಂಡರು. ಇದನ್ನೂ ಓದಿ: Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ

    ಬೆಂಗಳೂರು ಪರ ಪವನ್ ಶೆರವತ್ 11 ರೈಡ್, 1 ಟೇಕಲ್ ಮತ್ತು 5 ಬೋನಸ್ ಸಹಿತ 17 ಪಾಯಿಂಟ್ ಗಳಿಸಿದರೆ, ಡೆಲ್ಲಿ ಪರ ನವೀನ್ ಕುಮಾರ್ 11 ರೈಡ್, 2 ಬೋನಸ್ ಸಹಿತ 13 ಅಂಕ ಕಲೆಹಾಕಿದರು. ಇವರಿಬ್ಬರೂ ಕೂಡ ಸೂಪರ್‌ 10 ಸಾಧಿಸಿದರು. ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಡೆಲ್ಲಿ 21 ರೈಡ್, 11 ಟೇಕಲ್, 4 ಆಲೌಟ್ ಅಂಕ ಸಹಿತ ಒಟ್ಟು 36 ಪಾಯಿಂಟ್ ಗಳಿಸಿದರೆ, ಬೆಂಗಳೂರು, 21 ರೈಡ್, 9 ಟೇಕಲ್, 4 ಆಲೌಟ್ ಮತ್ತು 2 ಇತರೆ ಅಂಕ ಸಹಿತ 36 ಅಂಕ ಕಲೆಹಾಕಿ ಸಮಬಲ ಸಾಧಿಸಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!

  • ಯುಪಿ ಯೋಧರ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಜಯ

    ಯುಪಿ ಯೋಧರ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಜಯ

    ಬೆಂಗಳೂರು: ಯುಪಿ ಯೋಧರ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಮತ್ತೆ ಗೆಲುವಿನ ಹಳಿಗೆ ಮರಳಿದೆ.

    ಎರಡು ತಂಡಗಳ ಬಲಿಷ್ಠ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 31-26 ಅಂಕಗಳಿಂದ ಪಂದ್ಯವನ್ನು 5 ಅಂಕಗಳ ಅಂತರದಿಂದ ಗೆದ್ದಿದೆ. ಎರಡೂ ತಂಡಗಳು ಕೂಡ ರೈಡಿಂಗ್ ಮತ್ತು ಟೇಕಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದವು, ಅಂತಿಮವಾಗಿ ಬುಲ್ಸ್ ಮೇಲುಗೈ ಸಾಧಿಸಿತು. ಇದೀಗ ಅಂಕಪಟ್ಟಿಯಲ್ಲಿ ಒಟ್ಟು 16 ಪಂದ್ಯಗಳಿಂದ 46 ಪಾಯಿಂಟ್‌ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಪಿಎಲ್ ಹರಾಜು – 590 ಆಟಗಾರರಿಗೆ ಫೈನಲ್‌ ಪಟ್ಟಿಯಲ್ಲಿ ಸ್ಥಾನ

    ಬೆಂಗಳೂರು ಬುಲ್ಸ್ ಪರ ಪವನ್ ಶೆರವತ್ 6 ರೈಡ್, 3 ಬೋನಸ್ ಅಂಕ ಸಹಿತ 9 ಪಾಯಿಂಟ್ ಸಂಪಾದಿಸಿದರೆ, ಯುಪಿ ಯೋಧ ಪರ ನಿತೇಶ್ ಕುಮಾರ್ 6 ಟೇಕಲ್ ಅಂಕ ಪಡೆದು ಮಿಂಚಿದರು. ಬೆಂಗಳೂರು ಬುಲ್ಸ್ 14 ರೈಡ್, 15 ಟೇಕಲ್ ಮತ್ತು 2 ಆಲೌಟ್ ಸಹಿತ ಒಟ್ಟು 31 ಪಾಯಿಂಟ್ ಒಟ್ಟುಗೂಡಿಸಿದರೆ, ಯುಪಿ ಯೋಧ 13 ರೈಡ್, 13 ಟೇಕಲ್ ಸಹಿತ 26 ಅಂಕ ಗಳಿಸಿ 5 ಪಾಯಿಂಟ್‍ನಿಂದ ಸೋಲು ಕಂಡಿತು. ಇದನ್ನೂ ಓದಿ: ಧೋನಿ, ವಿಕ್ರಮ್ ಫೋಟೋ ವೈರಲ್

  • ಬುಲ್ಸ್‌ಗಳನ್ನು ಪಲ್ಟಿ ಹೊಡೆಸಿದ ಪುನೇರಿ ಪಲ್ಟನ್

    ಬುಲ್ಸ್‌ಗಳನ್ನು ಪಲ್ಟಿ ಹೊಡೆಸಿದ ಪುನೇರಿ ಪಲ್ಟನ್

    ಬೆಂಗಳೂರು: ಪುನೇರಿ ಪಲ್ಟನ್ ವಿರುದ್ಧದ ಪಂದ್ಯದಲ್ಲಿ ಕಡೆಯ 40 ಸೆಕೆಂಡ್‍ಗಳಲ್ಲಿ ಮಾಡಿದ ತಪ್ಪಿಗೆ ಬೆಂಗಳೂರು ಬುಲ್ಸ್ 35-37 ಪಾಯಿಂಟ್‍ಗಳಿಂದ ಸೋಲು ಕಂಡಿದೆ.

    ಅರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿದ ಕಾದಾಟ ಕಡೆಯ ನಿಮಿಷದ ವರೆಗೂ ಮುಂದುವರಿಯಿತು. ಕೊನೆಯ 40 ಸೆಕೆಂಡ್ ಇದ್ದಂತಹ ವೇಳೆ ಪವನ್ ಶೆರವತ್ ಮಾಡಿದ ಅನಗತ್ಯ ಡ್ಯಾಶ್‍ನಿಂದ ಅಂಕ ಪಡೆದ ಪುನೇರಿ ಪಲ್ಟನ್ 2 ಅಂಕಗಳ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಆವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

    ಬುಲ್ಸ್ ಪರ 5 ರೈಡ್, 5 ಬೋನಸ್ ಅಂಕ ಸಹಿತ ಸೂಪರ್ 10 ಪಾಯಿಂಟ್ ಪಡೆದ ಪವನ್ ಕೊನೆಯ ಗಳಿಗೆಯಲ್ಲಿ ಎಡವಿದರು. ಅತ್ತ ಎದುರಾಳಿ ತಂಡದ ಮೋಹಿತ್ ಗೋಯಟ್ 10 ರೈಡ್, 3 ಟೇಕಲ್ ಸಹಿತ 13 ಅಂಕ ಸಂಪಾದಿಸಿ ಪಲ್ಟನ್ ಗೆಲುವಿನ ರೂವಾರಿಯಾದರು. ಬೆಂಗಳೂರು 24 ರೈಡ್, 8 ಟೇಕಲ್, 3 ಇತರೆ ಸಹಿತ 35 ಅಂಕ ಪಡೆದರೆ, ಪಲ್ಟನ್ 20 ರೈಡ್, 13 ಟೇಕಲ್, 4 ಆಲೌಟ್ ಸಹಿತ 37 ಪಾಯಿಂಟ್ ಪಡೆದು 2 ಅಂಕಗಳ ಜಯ ಸಾಧಿಸಿತು. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

  • ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್

    ಒಂದೇ ರೈಡ್‍ನಲ್ಲಿ 8 ಅಂಕ – ವಿವಾದಾತ್ಮಕ ತೀರ್ಪು, ಸೋತ ಬುಲ್ಸ್

    ಬೆಂಗಳೂರು: ಕ್ರಿಕೆಟ್‌ನಲ್ಲಿ ವಿವಾದಾತ್ಮಕ ತೀರ್ಪು ಆಯ್ತು ಈಗ ಪ್ರೊ ಕಬಡ್ಡಿಯಲ್ಲೂ ವಿವಾದಾತ್ಮಕ ತೀರ್ಪು ಪ್ರಕಟಗೊಂಡಿದ್ದು, ಬೆಂಗಳೂರು ಬುಲ್ಸ್‌ 1 ಅಂಕಗಳಿಂದ ವಿರೋಚಿತ ಸೋಲನ್ನು ಅನುಭವಿಸಿದೆ.

    ಫಸ್ಟ್ ಆಫ್‍ನಲ್ಲಿ 13 – 14 ಪಾಯಿಂಟ್‍ಗಳಿಂದ 1 ಅಂಕಗಳ ಮುನ್ನಡೆಯನ್ನು ಬೆಂಗಾಲ್ ಪಡೆದುಕೊಂಡಿತ್ತು. ಬಳಿಕ ಸೆಕೆಂಡ್ ಆಫ್‍ನಲ್ಲಿ ತೀವ್ರ ಕುತೂಹಲ ಮೂಡಿಸಿದ ಕಾಳಗದಲ್ಲಿ ಒಂದು ಹಂತದಲ್ಲಿ ಬೆಂಗಾಲ್ ಇನ್ನೇನು ಆಲೌಟ್ ಆಗುವ ಸನ್ನಿವೇಶದಲ್ಲಿತ್ತು. ಈ ವೇಳೆ ಕೊನೆಯವರಾಗಿ ರೈಡ್ ಮಾಡಿದ ನಬಿಬಕ್ಷ್ ಒಂದೇ ರೈಡ್‍ನಲ್ಲಿ 8 ಅಂಕಗಳನ್ನು ಪಡೆದ ಪರಿಣಾಮ ತಿರುವು ಪಡೆದ ಪಂದ್ಯ ಅಂತಿಮ ಹಂತದ ವರೆಗೂ ರೋಚಕತೆ ಮೂಡಿಸಿ ಅಂತಿಮವಾಗಿ ಬುಲ್ಸ್ ವಿರುದ್ಧ ಬೆಂಗಾಲ್ 1 ಅಂಕಗಳ ಜಯ ಸಾಧಿಸಿತು. ಬೆಂಗಾಲ್‌ ಜಯ ಸಾಧಿಸುತ್ತಿದ್ದಂತೆ ಅಂಪೈರ್‌ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದ ಬಳಿಕ ಅಜ್ಜನ ಭರ್ಜರಿ ಬ್ಯಾಟಿಂಗ್ – ವೀಡಿಯೋ ವೈರಲ್

    ಬೆಂಗಳೂರು 25 ರೈಡ್, 10 ಟೇಕಲ್, 2 ಆಲೌಟ್, 2 ಇತರೆ ಅಂಕ ಸೇರಿ ಒಟ್ಟು 39 ಅಂಕ ಗಳಿಸಿದರೆ, ಬೆಂಗಾಲ್ 20 ರೈಡ್, 10 ಟೇಕಲ್, 2 ಆಲೌಟ್, 8 ಇತರೆ ಅಂಕ ಸಹಿತ 40 ಅಂಕ ಸಂಪಾದಿಸಿ 1 ಅಂಕಗಳಿಂದ ಗೆದ್ದು ಬೀಗಿತು. ಬೆಂಗಳೂರು ಪರ ಪವನ್ ಶೆರವತ್ 10 ರೈಡ್, 3 ಬೋನಸ್ ಸಹಿತ 13 ಅಂಕ ಸಂಪಾದಿಸಿದರೆ, ಬೆಂಗಾಲ್ ಪರ ಮನಿಂದರ್ ಸಿಂಗ್ 4 ರೈಡ್, 1 ಟೇಕಲ್, 4 ಬೋನಸ್ ಸಹಿತ 9 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಐಸಿಸಿ ವರ್ಷದ ಟಿ20, ಏಕದಿನ ತಂಡದಲ್ಲಿಲ್ಲ ಭಾರತೀಯರು – ಪಾಕ್‌ ಆಟಗಾರರ ಮೇಲುಗೈ

  • ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಪಟಾಕಿ ಸಿಡಿಸಿದ ಪಾಟ್ನಾ

    ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಪಟಾಕಿ ಸಿಡಿಸಿದ ಪಾಟ್ನಾ

    ಬೆಂಗಳೂರು: ಕನ್ನಡಿಗ ಪ್ರಶಾಂತ್ ರೈ ನಾಯಕತ್ವದ ಪಾಟ್ನಾ ಪೈರೇಟ್ಸ್ ತಂಡ ಬೆಂಗಳೂರಿಗೆ ಸೋಲಿನ ರುಚಿ ತೋರಿಸಿದೆ. ಬುಲ್ಸ್ ವಿರುದ್ಧ ಪಾಟ್ನಾ 7 ಅಂಕಗಳ ಜಯ ದಾಖಲಿಸಿದೆ.

    ಪಾಟ್ನಾದ ಬಲಿಷ್ಠ ಡಿಫೆನ್ಸ್‌ನಲ್ಲಿ ಒದ್ದಾಡಿದ ಬುಲ್ಸ್ ಸೋಲಿನ ಹಾದಿ ಹಿಡಿಯಿತು. ಪ್ರತಿ ಪಂದ್ಯದಲ್ಲೂ ರೈಡಿಂಗ್‍ನಲ್ಲಿ ಮಿಂಚುತ್ತಿದ್ದ ಪವನ್ ಶೆರವತ್ ಇಂದು ಪಾಟ್ನಾ ಕೋಟೆಯಲ್ಲಿ ಹಲವು ಬಾರಿ ಬಂಧಿಯಾದರು. ಪವನ್ 5 ರೈಡ್, 5 ಬೋನಸ್ ಸಹಿತ 10 ಅಂಕ ಸಂಪಾದಿಸಿದರೆ, ಪಾಟ್ನಾ ಪರ ಸುನಿಲ್ ತಮ್ಮ ಬಲಿಷ್ಠ ಬಾಹುಗಳಿಂದ ಬುಲ್ಸ್ ರೈಡರ್‌ಗಳನ್ನು ಹೆಡೆಮುರಿ ಕಟ್ಟಿ 9 ಟೇಕಲ್ ಪಾಯಿಂಟ್‍ಗಳನ್ನು ತನ್ನದಾಗಿಸಿ ಪಾಟ್ನಾಗೆ ಗೆಲುವಿನ ಮಾಲೆ ತೊಡಿಸಿದರು. ಇದನ್ನೂ ಓದಿ: ಕೊಹ್ಲಿ ನಾಯಕತ್ವ ತ್ಯಜಿಸಲು ಇದೇ ಕಾರಣ!

    ಪಾಟ್ನಾ 16 ರೈಡ್, 17 ಟೇಕಲ್, 4 ಆಲೌಟ್, 1 ಇತರೆ ಪಾಯಿಂಟ್ ಸಹಿತ 38 ಅಂಕ ಗಳಿಸಿತು. ಇತ್ತ ಬುಲ್ಸ್ 17 ರೈಡ್, 13 ಟೇಕಲ್, 1 ಇತರೆ ಸಹಿತ 31 ಅಂಕ ಪಡೆಯಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆದರೂ ಅಂಕಪಟ್ಟಿಯಲ್ಲಿ ಬುಲ್ಸ್ ಒಟ್ಟು 38 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಪಾಟ್ನಾ ಒಟ್ಟು 34 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ಕ್ಯಾಪ್ಟನ್ ಕಿಂಗ್ ಕೊಹ್ಲಿ ಯುಗಾಂತ್ಯ – ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು

  • ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬುಲ್ಸ್ ಎದುರು ಡಲ್ ಹೊಡೆದ ದಬಾಂಗ್ ಡೆಲ್ಲಿ

    ಬೆಂಗಳೂರು: ದಬಾಂಗ್ ಡೆಲ್ಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 61 – 22 ಪಾಯಿಂಟ್‍ಗಳೊಂದಿಗೆ 39 ಅಂಕಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಟ್ಟು 28 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ.

    ಏಕಮುಖಿಯಾಗಿ ಸಾಗಿದ ಪಂದ್ಯದಲ್ಲಿ ಪವನ್ ಶೆರವತ್ ಡೆಲ್ಲಿ ವಿರುದ್ಧ ರೈಡಿಂಗ್‍ನಲ್ಲಿ ಸವಾರಿ ಮಾಡಿದರು. ಒಟ್ಟು 22 ರೈಡ್ ಮತ್ತು 5 ಬೋನಸ್ ಪಾಯಿಂಟ್‍ನೊಂದಿಗೆ ಒಟ್ಟು 27 ಅಂಕಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಭರತ್ 3 ರೈಡ್, 2 ಟೇಕಲ್ ಮತ್ತು 2 ಬೋನಸ್ ಪಾಯಿಂಟ್ ಸೇರಿ ಒಟ್ಟು 7 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಯಾದವ್ ಬೌಲಿಂಗ್‍ಗೆ ಕೇಶವ್ ಕ್ಲೀನ್ ಬೌಲ್ಡ್ – ಎಗರಿ ಮಾರುದ್ದ ಬಿದ್ದ ಮಿಡಲ್ ಸ್ಟಂಪ್

    ಮೊದಲಾರ್ಧದಿಂದಲೇ ಭಾರೀ ಮುನ್ನಡೆ ಪಡೆದುಕೊಂಡ ಬೆಂಗಳೂರು 27 – 11 ಅಂಕಗಳಿಂದ ಡೆಲ್ಲಿಗೆ ಟಕ್ಕರ್ ಕೊಟ್ಟಿತು. ನಂತರ ದ್ವಿತೀಯಾರ್ಧದಲ್ಲಿ ಪಾಯಿಂಟ್ ಹೆಚ್ಚಿಸಿದ ಬೆಂಗಳೂರು ತಂಡ ಒಟ್ಟು 35 ರೈಡಿಂಗ್, 1 ಸೂಪರ್ ರೈಡ್, 15 ಟೇಕಲ್, 10 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 61 ಪಾಯಿಂಟ್ ಕಲೆ ಹಾಕಿತು. ಇತ್ತ ಡೆಲ್ಲಿ 16 ರೈಡಿಂಗ್, 4 ಟೇಕಲ್, 2 ಇತರೆ ಅಂಕಗಳಿಂದ 22 ಪಾಯಿಂಟ್ ಗಳಿಸಿ 39 ಅಂಕಗಳ ಅಂತರದ ದೊಡ್ಡ ಸೋಲು ಕಂಡಿತು. ಇದನ್ನೂ ಓದಿ: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ – ಜಯಂತ್ ಯಾದವ್‌ಗೆ ಒಲಿದ ಅದೃಷ್ಟ

  • ಬೆಂಗಳೂರು ಬುಲ್ಸ್ ಎದುರು ಪಲ್ಟಿ ಹೊಡೆದ ಪುನೇರಿ ಪಲ್ಟನ್

    ಬೆಂಗಳೂರು ಬುಲ್ಸ್ ಎದುರು ಪಲ್ಟಿ ಹೊಡೆದ ಪುನೇರಿ ಪಲ್ಟನ್

    ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ಪುನೇರಿ ಪಲ್ಟನ್ ನಡುವಿನ ಪಂದ್ಯ ಏಕಮುಖಿಯಾಗಿ ಸಾಗಿ ಬೆಂಗಳೂರು ಬುಲ್ಸ್ 40-29 ಅಂಕಗಳಿಂದ ಗೆದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

    ಆರಂಭದಿಂದಲೇ ಬುಲ್ಸ್, ಪುನೇರಿ ಪಲ್ಟನ್ ಮೇಲೆ ಸವಾರಿ ಮಾಡಿತು. ಬುಲ್ಸ್ ನಾಯಕ ಪವನ್ ಶೆರವತ್ ಮಿಂಚಿನ ರೈಡಿಂಗ್ ಮತ್ತೊಮ್ಮೆ ಗಮನಸೆಳೆದರು. ಒಟ್ಟು 9 ರೈಡ್, 2 ಬೋನಸ್ ಅಂಕಗಳೊಂದಿಗೆ 11 ಪಾಯಿಂಟ್ ಸಂಪಾದಿಸಿ ಗೆಲುವಿನ ರೂವಾರಿಯಾದರು. ಬೆಂಗಳೂರಿನ ಬಲಿಷ್ಠ ಡಿಫೆನ್ಸ್ ಮತ್ತು ರೈಡಿಂಗ್ ಮುಂದೆ ಮಂಕಾದ ಪುನೇರಿ 29-40 ಅಂತರದಿಂದ ಬೆಂಗಳೂರಿಗೆ ಶರಣಾಯಿತು. ಇದನ್ನೂ ಓದಿ: ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಪುನೇರಿ ಪಲ್ಟನ್ 17 ರೈಡ್, 10 ಟೇಕಲ್, 2 ಆಲ್‍ಔಟ್ ಪಾಯಿಂಟ್ ಸೇರಿ ಒಟ್ಟು 29 ಅಂಕ ಪಡೆದರೆ, ಬೆಂಗಳೂರು ಬುಲ್ಸ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 4 ಆಲ್‍ಔಟ್, 2 ಇತರೆ ಅಂಕದೊಂದಿಗೆ ಒಟ್ಟು 40 ಅಂಕ ಸಂಪಾದಿಸಿ 11 ಅಂಕಗಳ ಅಂತರದ ಜಯ ಸಾಧಿಸಿದೆ.  ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ