Tag: ಬೆಂಗಳೂರು ಬಾಂಬ್‌ ಸ್ಫೋಟ

  • ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಆರೋಪಿಯ ಸುಳಿವು ಸಿಕ್ಕಿದೆ – ಪರಮೇಶ್ವರ್ ಸ್ಫೋಟಕ ಮಾಹಿತಿ

    ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಆರೋಪಿಯ ಸುಳಿವು ಸಿಕ್ಕಿದೆ – ಪರಮೇಶ್ವರ್ ಸ್ಫೋಟಕ ಮಾಹಿತಿ

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ (Rameshwaram Cafe Blast) ಆರೋಪಿಯ ಸುಳಿವು ಸಿಕ್ಕಿದೆ. ‌ಆದಷ್ಟು ಬೇಗ ಆರೋಪಿಯನ್ನ ಬಂಧನ ಮಾಡ್ತೀವಿ ಅಂತ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 8 ವಿಶೇಷ ತಂಡಗಳನ್ನು ರಚನೆ ಮಾಡಿ. ‌ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಕೆಲವು ಮಾಹಿತಿಗಳು ನಮಗೆ ಲಭ್ಯವಾಗಿವೆ. ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ಆಗ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದವರು (FSL) ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡಿ ತಾಂತ್ರಿಕ ಮಾಹಿತಿ ಕಲೆ ಹಾಕ್ತಿದ್ದಾರೆ. ಬಾಂಬ್‌ ಸ್ಫೋಟಿಸಿದ ಆರೋಪಿ ಬಹುತೇಕ ಮಾಹಿತಿ ಸಿಕ್ಕಿದೆ. ಒಂದೆರಡು ದಿನಗಳಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ

    ಎಲ್ಲಾ ಆಯಾಮಗಳಲ್ಲೂ ಕಟ್ಟು ನಿಟ್ಟಿನ ತನಿಖೆ:
    ಆರೋಪಿ ಯಾವುದಾದರೂ ಸಂಘಟನೆಗೆ ಸೇರಿದ್ದರೆ ಅಥವಾ ಬೇರೆ ಕಾರಣಗಳಿದ್ದರೆ ಆ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ರಾಮೇಶ್ವರಂ ಕೆಫೆಗೆ ಹೋಗಿ ವಿಚಾರಿಸಿದ್ದೇನೆ. ಹೊಟೇಲ್‌ನವರು (Rameshwaram Cafe) ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ. 11 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. 12ನೇ ಕಡೆ ಓಪನ್ ಮಾಡುತ್ತಿದ್ದರು, ಇದನ್ನ ಸಹಿಸಲಾರದವರು ಈ ರೀತಿ ಮಾಡಿರಬಹುದು ಅಂತ ಅಲ್ಲಿನ ಜನ ಹೇಳ್ತಿದ್ದಾರೆ. ಇದಲ್ಲದೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರಿನ್ನ ಅನ್ ಸೇಫ್ ನಗರ ಮಾಡಬೇಕು ಅಂತ ಹೀಗೆ ಮಾಡಿದ್ರಾ ಅನ್ನೋ ಆಯಾಮಗಳಲ್ಲೂ ಕಟ್ಟುನಿಟ್ಟಾಗಿ ತನಿಖೆ ಮಾಡ್ತಿದ್ದೇವೆ ಎಂದು ವಿವರಿಸಿದ್ದಾರೆ.

    ಬೆಂಗಳೂರಿಗೆ ಹೂಡಿಕೆದಾರರು ಬರ್ತಿದ್ದಾರೆ. ಈ ಸಮಯದಲ್ಲಿ ಹೀಗೆ ಮಾಡಿದ್ರೆ ಬಂಡವಾಳ ಹಾಕೋರು ಬರಲ್ಲ ಅಂತ ಹೀಗೆ ಮಾಡಿರಬಹುದು. ಅಥವಾ ಯಾವುದೋ ಬೇರೆ ಕಾರಣ ಇರಬಹುದು, ತನಿಖೆ ಅಗ್ತಿದೆ. ಎಷ್ಟೇ ಕಷ್ಟ ಆದರೂ ಕೇಸ್ ಭೇದಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಕೃತ್ಯ – ತಾಯಿಯಿಂದಲೇ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ

    ನಾನು, ಸಿಎಂ ಹೇಳಿದ್ರೆ ಮಾತ್ರ ಅಧಿಕೃತ
    ಈ ಬ್ಲಾಸ್ಟ್‌ ಪ್ರಕರಣ, ಬೇರೆ ಪ್ರಕರಣಗಳೊಂದಿಗೆ ಸಾಮ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ಗೂ ಈ ಪ್ರಕಣಕ್ಕೂ ತಾಂತ್ರಿಕವಾಗಿ ಹೋಲಿಕೆಯಾಗುತ್ತಿದೆ. ಹಾಗಂತ ಅವರೇ ಮಾಡಿದ್ದಾರೆ ಅಂಥ ಅರ್ಥವಲ್ಲ. ಟೆಕ್ನಿಕಲ್‌ ಬ್ಯಾಟರಿ ಯೂಸ್‌ ಮಾಡಿರೋದು, ಮೊಳೆ, ಟೈಮರ್‌ ಎಲ್ಲಾ ನೋಡಿದ್ರೆ ಸಾಮ್ಯತೆ ಕಂಡುಬರುತ್ತಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಇದನ್ನ ಇನ್ನೂ ಹೆಚ್ಚಿನ ತನಿಖೆ ಮಾಡಬೇಕು. ನಾನು ಎಲ್ಲರಿಗೂ ವಿನಂತಿ ಮಾಡ್ತೀನಿ, ಸಿಎಂ ಅಥವಾ ನಾನು ಹೇಳಿದ್ರೆ ಮಾತ್ರ ಅಧಿಕೃತ ಹೇಳಿಕೆ ಅಂತ ಪರಿಗಣಸಿಬೇಕು. ಬಹಳ ಜನ ಏನೇನೋ ಮಾತಾಡ್ತಿದ್ದಾರೆ. ನಮಗೂ ಅದು ಇಕ್ಕಟ್ಟು ಆಗುತ್ತೆ. ನಾನು,‌ ಸಿಎಂ, ಗೃಹ ಇಲಾಖೆ ಮಾತಾಡಿದ್ರೆ ಮಾತ್ರ ಅಧಿಕೃತ ಅದಕ್ಕೆ ಅರ್ಥ ಇರುತ್ತೆ ಎಂದು ಖಡಕ್ಕಾಗಿ ಹೇಳಿದ್ದಾರೆ.

    ಬಾಂಬ್ ಸಿಡಿದಾಗ ಮೊಳೆಗಳು ಮೇಲೆ ಹೋಗಿವೆ:
    ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ‌ ದೊಡ್ಡ ಅನಾಹುತ ಆಗಿಲ್ಲ. ಕ್ವಾಂಟಿಟಿ ಕಡಿಮೆ ಇರಬಹುದು. ಹೆಚ್ಚು ಕ್ವಾಂಟಿಟಿ ಯೂಸ್ ಮಾಡಿದ್ರೆ ಇಂಪ್ಯಾಕ್ಟ್ ಜಾಸ್ತಿ ಆಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನೆಟ್‌ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೇ ಸೈಡಿಗೆ ಸಿಡಿದಿದ್ದರೆ ಬಹಳ‌ ಜನರಿಗೆ ಪ್ರಾಣಾಪಾಯ ಆಗ್ತಿತ್ತು. ಅದೃಷ್ಟವಶಾತ್ ಮೊಳೆಗಳು ಮೇಲೆ ಹೋಗಿವೆ. ಇದು ವ್ಯಾವಹಾರಿಕಾ ಉದ್ದೇಶದಿಂದಲೇ ಆಗಿದೆ ಅಂತಾ ಜನ ಮಾತಾಡ್ತಿದ್ದಾರೆ. ನಾವು ಹಾಗೆ ಹೇಳುತ್ತಿಲ್ಲ. ಆದರೂ ಅದೊಂದು ಅಂಶ ಪರಿಗಣಿಸಿ ತನಿಖೆ ಮಾಡ್ತಿದ್ದೇವೆ. NIA, NSG ಇಬ್ಬರು ಬಂದು ತನಿಖೆ ಮಾಡ್ತಿದ್ದಾರೆ. ರಾಷ್ಟ್ರೀಯ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗಿವೆಯಾ? ಭಾಗಿಯಾಗಿದ್ದರೆ ಯಾವ ಸಂಘಟನೆ? ಎಂಬುದರ ಬಗ್ಗೆಯೂ ತನಿಖೆಗೆ ಸೂಚನೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಬೆಂಗಳೂರು ಸೇಫ್‌ ಆಗಿದೆ:
    ಬೆಂಗಳೂರು ಸೇಫ್ ಸಿಟಿ ಮಾಡೋಕೆ ನಾವು ಕೆಲಸ‌ ಮಾಡ್ತಿದ್ದೇವೆ. ನಮ್ಮ ಸರ್ಕಾರ ಸೇಫ್ ಸಿಟಿ ಮಾಡಲು ಬಹಳ ಹಣ ಖರ್ಚು ಮಾಡಿ, ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಿದೆ. ಕಮಾಂಡ್ ಸೆಂಟರ್ ಮಾಡಿ ಎಲ್ಲವನ್ನೂ ಮಾನಿಟರ್ ಮಾಡ್ತಿದ್ದೇವೆ. ಬೆಂಗಳೂರು ಈಗ ಸೇಫ್ ನಲ್ಲಿ ಎಷ್ಟೋ ಉತ್ತಮವಾಗಿದೆ. ಹೊಯ್ಸಳ ಕೂಡಾ 7-8 ನಿಮಿಷಗಳಿಗೆ ಸ್ಥಳಕ್ಕೆ ಬರ್ತಿದೆ. 40-50 ಕ್ಯಾಮೆರಾ ಪರಿಶೀಲನೆ ಮಾಡ್ತಿದ್ದೇವೆ. ಶಂಕಿತ ವ್ಯಕ್ತಿ ಬಿಎಂಟಿಸಿಯಲ್ಲಿ ಓಡಾಡಿದ್ದ ಅಂತ ಮಾಹಿತಿ ಇತ್ತು. ಬ್ಲಾಸ್ಟ್‌ ಸಮಯದಲ್ಲಿ 26 ಬಸ್‌ಗಳು ಓಡಾಟ ನಡೆಸಿವೆ, 26 ಬಸ್ ಕ್ಯಾಮೆರಾ ಪರಿಶೀಲನೆ ಮಾಡಿದ್ದೇವೆ. ಒಂದು ಕ್ಯಾಮರದಲ್ಲಿ ಹೋಗಿದ್ದು ಬಂದಿದ್ದು ಸಿಕ್ಕಿದೆ. ಅದರಲ್ಲಿ ಆತ ಮಾಸ್ಕ್, ಕ್ಯಾಪ್, ಗ್ಲಾಸ್ ಎಲ್ಲಾ ಹಾಕಿದ್ದಾನೆ. ಅಲ್ಲೂ ಕೂಡಾ ಆತನ ಚಹರೆ ಅಷ್ಟು ಸ್ಪಷ್ಟವಾಗಿಲ್ಲ. ಹೆಚ್ಚು ತಾಂತ್ರಿಕ ವಿಚಾರ ಹೇಳೋಕೆ ಆಗಲ್ಲ. ಆತ ಸಿಗೋವರೆಗೂ ಮಾಹಿತಿ ಕೊಡೋಕೆ ಆಗೋದಿಲ್ಲ ಎಂದು ವಿವರಿಸಿದ್ದಾರೆ.