Tag: ಬೆಂಗಳೂರು ನಗರ ಪೊಲೀಸ್ ಆಯುಕ್ತ

  • ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ

    ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ

    ಬೆಂಗಳೂರು: ಪೊಲೀಸ್ ಸೋಷಿಯಲ್ ಮೀಡಿಯಾ ಖಾತೆಗೆ ಹೊಸ ಛಾಪು ಮೂಡಿಸಿದ್ದ ಬೆಂಗಳೂರಿನ (Bengaluru) ಕಾನ್ಸ್‌ಟೇಬಲ್ ಎಚ್.ಎಂ ಲೋಕೇಶ್, ಮೆಕ್ಸಿಕೋ (Mexico) ಭಾರತೀಯ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.

    ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ (Police Commissioner Office)ಸೋಷಿಯಲ್ ಮೀಡಿಯಾ (Social media) ವಿಭಾಗದಲ್ಲಿ ಲೋಕೇಶ್ ಕೆಲಸ ಮಾಡುತ್ತಿದ್ದರು. ಸಂವಹನ, ಇಂಗ್ಲೀಷ್ ಹಾಗೂ ಕಂಪ್ಯೂಟರ್ ಕೌಶಲ್ಯ ಹೊಂದಿದ್ದ ಅವರು ಕೊರೊನಾ (COVID-19) ಸಮಯದಲ್ಲಿ ನಾಗರಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಜನರ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದನ್ನೂ ಓದಿ: ಐದನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಓರ್ವ ಬಂಧನ

    ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದರು. ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗಾಗಿ ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿದ್ದರು. ಇದನ್ನೂ ಓದಿ: 4 ವರ್ಷಗಳ ಬಳಿಕ ಬೇಗನೆ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ

  • ಲಾಕ್‍ಡೌನ್ ಸೀಜ್- ಬೆಂಗ್ಳೂರು ವಾಹನ ಸವಾರರಿಗೆ ಗುಡ್‍ನ್ಯೂಸ್

    ಲಾಕ್‍ಡೌನ್ ಸೀಜ್- ಬೆಂಗ್ಳೂರು ವಾಹನ ಸವಾರರಿಗೆ ಗುಡ್‍ನ್ಯೂಸ್

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಸೀಜ್ ಅದ ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್‍ನ್ಯೂಸ್ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದರು.

    ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಬೆಂಗ್ಳೂರು ನಗರ ಆಯುಕ್ತರಿಂದ ಪೊಲೀಸರಿಗೆ ಹುಟ್ಟು ಹಬ್ಬದ ಗಿಫ್ಟ್

    ಬೆಂಗ್ಳೂರು ನಗರ ಆಯುಕ್ತರಿಂದ ಪೊಲೀಸರಿಗೆ ಹುಟ್ಟು ಹಬ್ಬದ ಗಿಫ್ಟ್

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಿಬ್ಬಂದಿಯ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ್ದಾರೆ.

    ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟು ಹಬ್ಬಕ್ಕೆ ರಜೆ ನೀಡಬೇಕು. ಜೊತೆಗೆ ಅವರಿಗೆ ಗ್ರೀಟಿಂಗ್ ಕಳಿಸುವಂತೆ ವಿಶೇಷ ಆದೇಶವೊಂದನ್ನು ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹುಟ್ಟು ಹಬ್ಬದ ದಿನದಂದು ಯಾವುದೇ ಕೆಲಸದ ಒತ್ತಡವಿದ್ದರೂ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

    ಆದೇಶದ ಪತ್ರದಲ್ಲಿ ಏನಿದೆ?:
    ಹುಟ್ಟು ಹಬ್ಬದ ಗ್ರೀಟಿಂಗ್ ಕಾರ್ಡ್ ಗಳನ್ನು ಆಯಾ ಠಾಣೆಯ ಹಿರಿಯ/ಮೇಲುಸ್ತುವಾರಿ ಅಧಿಕಾರಿಗಳು ಖುದ್ದಾಗಿ ಠಾಣಾ/ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿ ಶುಭ ಕೋರಬೇಕು. ನಗರ ಪೊಲೀಸ್ ಘಟಕದ ಎಲ್ಲಾ ಸಿಬ್ಬಂದಿ ಕರ್ತವ್ಯದ ಒತ್ತಡದಿಂದ ಹೊರ ಬರಲು ಹಾಗೂ ಅವರ ಹುಟ್ಟು ಹಬ್ಬದ ದಿನದಂದು ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ರಜೆ ಕೊಡಬೇಕು. ಎಎಸ್‍ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿ ರಜೆಯೊಂದನ್ನು ಅವರ ಹುಟ್ಟು ಹಬ್ಬದ ದಿನದಂದು ನೀಡುವಂತೆ ಸೂಚಿಸಲಾಗಿದೆ.

  • ಸಿಸಿ ಕ್ಯಾಮೆರಾ ಚೆಕ್ ಮಾಡಿ- ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

    ಸಿಸಿ ಕ್ಯಾಮೆರಾ ಚೆಕ್ ಮಾಡಿ- ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

    ಬೆಂಗಳೂರು: ಉಗ್ರರ ದಾಳಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

    ಯಾವುದೇ ಕ್ಷಣದಲ್ಲಿ ಉಗ್ರರರು ದಾಳಿ ಮಾಡಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಭದ್ರತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

    ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ಒದಗಿಸಬೇಕು. ಪ್ರತಿಯೊಂದು ಜಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪ್ರಮುಖ ಸ್ಥಳಗಳಲ್ಲಿ ಖುದ್ದು ಇದ್ದು ಭದ್ರತೆ ನೋಡಿಕೊಳ್ಳಬೇಕು. ನಗರದಲ್ಲಿ ಅನುಮಾನಾಸ್ಪದ ರೀತಿಯ ವ್ಯಕ್ತಿ, ವಾಹನ, ಬ್ಯಾಗ್‍ಗಳನ್ನು ತಪಾಸಣೆ ಮಾಡಿ ಎಂದು ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    ಪ್ರೈವೆಟ್ ಸೆಕ್ಯೂರಿಟಿ ಗಾರ್ಡ್ ಗಳನ್ನು ಭದ್ರತೆಗೆ ಬಳಸಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ರೌಂಡ್ಸ್ ನಲ್ಲಿ ಇರಬೇಕು. ತಮ್ಮ ವ್ಯಾಪ್ತಿಯ ಆಯಕಟ್ಟಿನ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳು ಮೊಕಾಂ ಹುಡಬೇಕು. ನೈಟ್ ರೌಂಡ್ಸ್ ಇರುವ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಹಾಗೂ ವಾಹನ ಕಂಡು ಬಂದರೆ ವಶಕ್ಕೆ ಪಡೆಯಬೇಕು. ಪಿಜಿ, ಹಾಸ್ಟೆಲ್,ಅಪಾಟ್ರ್ಮೆಂಟ್, ಮಸೀದಿ, ದೇವಸ್ಥಾನಗಳ ಬಳಿ ಪೊಲೀಸರು ತಪಾಸಣೆ ನಡೆಸಬೇಕು ಎಂದು ಆದೇಶ ನೀಡಿದ್ದಾರೆ.

    ತಮ್ಮ ತಮ್ಮ ಪ್ರದೇಶದ ಬಿಟ್ ಪೊಲೀಸರು ಅಲರ್ಟ್ ಆಗಿರಬೇಕು. ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಸಂಪೂರ್ಣ ತಪಾಸಣೆ ಮಾಡಬೇಕು. ಚೆಕ್ ಪೋಸ್ಟ್ ಗಳು, ನಗರದ ಒಳಗೆ ಹೊರಗೆ ಹೋಗುವ ವಾಹನಗಳ ತಪಾಸಣೆಯಾಗಬೇಕು. ವಿಧಾನಸೌಧ, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಮಾಲ್, ಮಾರ್ಕೆಟ್ ಸುತ್ತಮುತ್ತ ಹೈ ಅಲರ್ಟ್ ಆಗಿರಿ. ಎಲ್ಲಾ ಕಡೆ ಕೆಎಸ್‍ಆರ್ ಪಿ ನಿಯೋಜನೆ ಮಾಡಬೇಕು ಎಂದು ಸೂಚಿಸಿದ್ದಾರೆ.