Tag: ಬೆಂಗಳೂರು ನಗರ ಪೊಲೀಸ್‌

  • ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

    ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

    ಬೆಂಗಳೂರು: ಸ್ವಂತ ಚಿಕ್ಕಪ್ಪನೇ ಅಣ್ಣನ ಮಕ್ಕಳನ್ನು ಕ್ರೂರವಾಗಿ ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ (Hebbagodi Police Station) ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ.

    ಖಾಸೀಂ (35) ಮಕ್ಕಳನ್ನು ಕೊಲೆ ಆರೋಪಿ. ಮಹಮ್ಮದ್ ಇಶಾಕ್ (9) ಮಹಮ್ಮದ್ ಜುನೇದ್ (7) ಹಲ್ಲೆಯಿಂದ ಮೃಪಟ್ಟ ಮಕ್ಕಳು. ಆರೋಪಿ ಸ್ವಂತ ಅಣ್ಣನ ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರು ಸಾವನ್ನಪ್ಪಿದ್ರೆ, 5‌ ವರ್ಷದ ಮಗು (ಮಹಮದ್ ರೋಹನ್) ಆಸ್ಪತ್ರೆಯಲ್ಲಿ (Hospital) ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.

    ಮನೆಯಲ್ಲಿ ಮಕ್ಕಳನ್ನ ಅಜ್ಜಿಯೊಂದಿಗೆ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಅಜ್ಜಿ ತರಕಾರಿ ತರಲು ಮಾರ್ಕೆಟ್‌ಗೆ ಹೋಗಿದ್ದ ವೇಳೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿರುವ ಖಾಸೀಂ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮೂರು ಮಕ್ಕಳ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಮೃತ ಮಕ್ಕಳ ತಂದೆ ಚಾಂದ್‌ ಪಾಷ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು, ಆದ್ರೆ ಇದ್ದಕ್ಕಿಂತೆ ಏನಾಯ್ತೋ ಗೊತ್ತಿಲ್ಲ, ಇಷ್ಟೊಂದು ಕ್ರೂರವಾಗಿ ಹಲ್ಲೆ ಮಾಡಿ, ನಮ್ಮ ಮಕ್ಕಳನ್ನ ಕೊಂದಿದ್ದಾನೆಂದು ಚಾಂದ್ ಪಾಷ ಹೇಳಿದ್ದಾರೆ.

    ಇನ್ನೂ ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಚಾಂದ್‌ ಪಾಷ 5 ವರ್ಷಗಳ ಹಿಂದೆ ಯಾದಗಿರಿಯಿಂದ ಹೆಬ್ಬಗೋಡಿಗೆ ಬಂದು ನೆಲೆಸಿದ್ದ. ಮಡದಿ ಮೂವರು ಮಕ್ಕಳು, ತಾಯಿ ತಮ್ಮನ ಜೊತೆ ವಾಸ ಮಾಡಿಕೊಂಡಿದ್ದ. ಚಾಂದ್‌ ಪಾಷ ಗಾರೆಕೆಲಸ, ಪತ್ನಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ತಮ್ಮ ಖಾಸೀಂ ಮನೆಯಲ್ಲೇ ಇರುತ್ತಿದ್ದ. ಮಾನಸಿಕ ಅಸ್ವಸ್ಥನಂತೆ ಇದ್ದು, ತಿಂಗಳ ಹಿಂದೆ ಕಾಣೆಯಾಗಿದ್ದ. ಅಣ್ಣ ಚಾಂದ್ ಪಾಷ ಹುಡುಕಿ ಮನೆಗೆ ಕರೆತಂದಿದ್ದ. ಆದ್ರೆ ಇಂದು ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ವಿಚಾರಣೆ ನಡೆಸುತ್ತಿದ್ದು, ಭಿನ್ನ ಭಿನ್ನ ಹೇಳಿಕೆ ಕೊಡುತ್ತಿದ್ದಾನೆ ಅಂತ ವಿವರಿಸಿದ್ದಾರೆ.

  • ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್

    ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್

    ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು (CCB Police) ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ (Children’s Sale) ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ದುರುಳರು ಸುಮಾರು 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರೋದಾಗಿ ವಿಚಾರಣೆ ವೇಳೆ ದಂಧೆಕೋರರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಕಳೆದ ಎಂಟತ್ತು ವರ್ಷಗಳಿಂದ ಮಕ್ಕಳ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ದಂಧೆ ವಿಸ್ತರಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

    ಆರೋಪಿ ಏಜೆಂಟ್‌ಗಳು ನೀಡಿದ ಮಾಹಿತಿ ಮೇರೆಗೆ ಈವರೆಗೆ ಮಾರಾಟವಾಗಿರೋ 10 ಮಕ್ಕಳ ವಿಳಾಸವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ವಿಎಫ್, ಸೆರೊಗೆಸಿ ಮೂಲಕ ತಾಯಂದಿರಿಂದ ಮಕ್ಕಳನ್ನ ಪಡೆದು ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

    ಕೇವಲ 10, 20 ದಿನದ ಎಳೆ ಕಂದಮ್ಮಗಳನ್ನ ಈ ಗ್ಯಾಂಗ್ ಮಾರಾಟ ಮಾಡುತ್ತಿತ್ತು. ಅಲ್ಲದೇ 1 ಮಗುವಿಗೆ 3 ಲಕ್ಷ ಹಣ ಕೊಡುವುದಾಗಿ ತಾಯಂದಿರಿಗೆ ಆಸೆ ತೋರಿಸಿಸುತ್ತಿದ್ದರು. ಅವುಗಳನ್ನು ಖರೀದಿಸಿ ಮಕ್ಕಳಿಲ್ಲದ ದಂಪತಿಗಳಿಗೆ 8 ಲಕ್ಷಕ್ಕೆ ಮಾರಾಟ ಮಾಡಿ, ಮಧ್ಯವರ್ತಿಗಳು ತಾವು 5 ಲಕ್ಷ ಹಣವನ್ನ ಲಪಟಾಯಿಸುತ್ತಿದ್ದರು. ಗರ್ಭಿಣಿಯಾಗಿದ್ದು, ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಮಹಿಳೆಯರು, 2-3 ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರು, ಕೂಲಿ ಮಾಡುವ ಮಹಿಳೆಯರನ್ನೇ ಹೆಚ್ಚಾಗಿ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಬಾರ್ಷನ್‌ಗೆ ಬರುವ ಸ್ತ್ರೀಯರನ್ನ ಪತ್ತೆ ಹಚ್ಚಿ ಮಗು ಕೊಟ್ಟರೆ ಹಣ ಕೊಡುವ ಆಮಿಷ ಒಡ್ಡುತ್ತಿದ್ದರು. ಈ ವೇಳೆ ಕೆಲವು ಐವಿಎಫ್ ಕೇಂದ್ರಗಳು, ರಕ್ತ ಪರೀಕ್ಷೆ ಕೇಂದ್ರಗಳ ಜೊತೆ ಆರೋಪಿಗಳ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಸಿಎಂ ಜನತಾ ದರ್ಶನಕ್ಕೆ ಭರ್ಜರಿ ಪ್ರತಿಕ್ರಿಯೆ – ದಿನವಿಡೀ ದೂರು ದುಮ್ಮಾನ ಆಲಿಸಿದ ಸಿದ್ದರಾಮಯ್ಯ

    ಇನ್ನೂ ಮಕ್ಕಳ ಮಾರಾಟ ಜಾಲವನ್ನ ಪತ್ತೆ ಹಚ್ಚಲು ಸಿಸಿಬಿ ಅಧಿಕಾರಿಗಳ ತಂಡ 1 ತಿಂಗಳು ಮಾರುವೇಷದಲ್ಲಿ ಕಾರ್ಯಚರಣೆ ನಡೆಸಿತ್ತು. ಮಗುವನ್ನು ಕೊಳ್ಳುವವರಂತೆ ರಾಜರಾಜೇಶ್ವರಿ ನಗರದಲ್ಲಿ ಮಗು ಮಾರಾಟ ಜಾಲಕ್ಕೆ ಖೆಡ್ಡಾ ತೋಡಿದ್ದರು. ಮಾರಾಟ ಜಾಲದಲ್ಲಿ ಮಹಾಲಕ್ಷ್ಮಿ ಎಂಬಾಕೆಯೇ ಕರ್ನಾಟಕದ ಕಿಂಗ್‌ಪಿನ್ ಆಗಿದ್ದು, ರಾಜ್ಯದಲ್ಲಿ ಹಲವರಿಗೆ ಮಗು ಮಾರಾಟ ಮಾಡುತ್ತಿದ್ದಳು ಅನ್ನೋದು ತಿಳಿದುಬಂದಿದೆ.

    ಸಿಸಿಬಿ ಪೊಲೀಸರು ಮಹಾಲಕ್ಷ್ಮಿ ಸೇರಿ ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯಳನ್ನ ಮಗು ಮಾರಾಟ ಮಾಡುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ತೀವ್ರ ವಿಚಾರಣೆ ಬಳಿಕ ದಂಧೆಯಲ್ಲಿ ತೊಡಗಿದ್ದ ಗೋಮತಿ, ರಾಧಾಮಣಿ ಹಾಗೂ ಸುಹಾಸಿಣಿಯನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

  • ಬೆಂಗಳೂರು ಬಂದ್‌ ವೇಳೆ ಕಾನೂನು ಉಲ್ಲಂಘನೆ – 13 ಕೇಸ್‌, 12 ಮಂದಿ ಅರೆಸ್ಟ್‌

    ಬೆಂಗಳೂರು ಬಂದ್‌ ವೇಳೆ ಕಾನೂನು ಉಲ್ಲಂಘನೆ – 13 ಕೇಸ್‌, 12 ಮಂದಿ ಅರೆಸ್ಟ್‌

    ಬೆಂಗಳೂರು: ಖಾಸಗಿ ಬಸ್‌ಗಳನ್ನ (Private Bus) ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು, 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರೂ. ನೀಡಬೇಕು, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನ ಆಗ್ರಹಿಸಿ ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದ್ದ ಖಾಸಗಿ ಸಾರಿಗೆ ಒಕ್ಕೂಟ ಮಧ್ಯಾಹ್ನದ ವೇಳೆಗೆಲ್ಲಾ ಬಂದ್ ವಾಪಸ್ ಪಡೆದಿದೆ.

    ಇಂದಿನ ಪ್ರತಿಭಟನೆಯಲ್ಲಿ ಪೊಲೀಸರು ಒಟ್ಟು 13 ಪ್ರಕರಣಗಳನ್ನ ದಾಖಲಿಸಿದ್ದಾರೆ. 13 ಕೇಸ್‌ ದಾಖಲಿಸಿ ಕಾನೂನು ಉಲ್ಲಂಘನೆ ಮಾಡಿದ 12 ಮಂದಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ – ಬೆಂಗಳೂರು ಬಂದ್ ವಾಪಸ್

    ಕೇಂದ್ರ ವಿಭಾಗದಲ್ಲಿ 1 ಕೇಸ್, ಆಗ್ನೇಯ ವಿಭಾಗದಲ್ಲಿ 1 ಕೇಸ್, ಉತ್ತರ ವಿಭಾಗದಲ್ಲಿ 2 ಕೇಸ್, ಈಶಾನ್ಯ ವಿಭಾಗದಲ್ಲಿ 2 ಕೇಸ್, ಹಾಗೂ ಪಶ್ಚಿಮ ವಿಭಾಗದಲ್ಲಿ 7 ಪ್ರಕರಣಗಳು ದಾಖಲಾಗಿವೆ. ಒಟ್ಟು 13 ಕೇಸ್‌ನಲ್ಲಿ 12 ಜನರನ್ನ ಅರೆಸ್ಟ್ ಮಾಡಿರುವ ನಗರ ಪೊಲೀಸರು (Bengaluru City Police) ವಿಚಾರಣೆಗೊಳಪಡಿಸಿದ್ದಾರೆ. ಇದನ್ನ ಹೊರತುಪಡಿಸಿದ್ರೆ ಬಹುತೇಕ ಬಂದ್ ಶಾಂತಿಯುತವಾಗಿ ನಡೆದಿದ್ದು, ಖಾಸಗಿ ಸಾರಿಗೆಗಳು ತಮ್ಮ ಬೇಡಿಕೆಯನ್ನ ಸರ್ಕಾರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಿದ್ದಾರೆ.

    ಸೋಮವಾರ ಮಧ್ಯಾಹ್ನ ಸಚಿವ ರಾಮಲಿಂಗಾರೆಡ್ಡಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟ ತಿಳಿಸಿದೆ. ಇದನ್ನೂ ಓದಿ: ಫುಡ್‌ ಡೆಲಿವರಿ ಬಾಯ್ಸ್‌ ಸೇರಿದಂತೆ ಎಲ್ಲಾ ಗಿಗ್‌ ಕಾರ್ಮಿಕರಿಗೆ 4 ಲಕ್ಷ ವಿಮೆ ಘೋಷಣೆ

    ಪ್ರಮುಖ ಬೇಡಿಕೆ ಏನಿತ್ತು?
    – ಖಾಸಗಿ ಬಸ್‌ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು
    – 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ನೀಡಬೇಕು
    – ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು
    – 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ ತರಬೇಕು
    – ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು
    – ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
    – ಚಾಲಕರಿಗೆ ವಸತಿ ಯೋಜನೆ ನೀಡಬೇಕು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]