Tag: ಬೆಂಗಳೂರು ನಗರ

  • ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಸಹಕಾರನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ ಜುಲೈ 21 (ಸೋಮವಾರ), ಜು.22 (ಮಂಗಳವಾರ) ಬೆಂಗಳೂರು ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ (Power Outage) ಆಗಲಿದೆ.

    ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ (Electricity) ಪೂರೈಕೆಯಲ್ಲಿ ವ್ಯತ್ತಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

    ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?
    ಬೆಂಗಳೂರು ನಗರದ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ-ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ್ಯೋನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್‌ಎಲ್‌ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು

  • New Year 2024 – ಪಾನಮತ್ತರಾಗಿ ಬಿದ್ದರೆ ನೇರ ಆಸ್ಪತ್ರೆಗೆ ಶಿಫ್ಟ್‌

    New Year 2024 – ಪಾನಮತ್ತರಾಗಿ ಬಿದ್ದರೆ ನೇರ ಆಸ್ಪತ್ರೆಗೆ ಶಿಫ್ಟ್‌

    ಬೆಂಗಳೂರು: ಸಂಜೆ ಆಗುತ್ತಿದ್ದಂತೆ ಬೆಂಗಳೂರು ನಗರ (Bengaluru City) ಹೊಸ ವರ್ಷವನ್ನು (New Year) ಸ್ವಾಗತಿಸಲು ಸಜ್ಜಾಗುತ್ತಿದೆ.

    ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ನಿಧಾನವಾಗಿ ಜನ ಸೇರುತ್ತಿದ್ದಾರೆ.

    ಕೋರಮಂಗಲದಲ್ಲಿ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ಪ್ರಜ್ಞೆ ತಪ್ಪುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಬೆಡ್ ಬುಕ್ಕಿಂಗ್ (Bed Booking) ಮಾಡಲಾಗಿದೆ. ಪಾನಮತ್ತರಾಗಿ ಬಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ (Ambulance) ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ, ಕಾಂಗ್ರೆಸ್‌ನವರ ರಕ್ತದ ಕಣಕಣದಲ್ಲೂ ಹಿಂದೂ ವಿರೋಧಿ ಭಾವನೆ: ಆರ್ ಅಶೋಕ್

     

    ಇಂದಿರಾನಗರದ 80 ಫೀಟ್, 100 ಫೀಟ್ ರಸ್ತೆಗಳು ಜಗಮಗವಾಗುತ್ತಿದ್ದು, ಪ್ರತಿ ರಸ್ತೆಯಲ್ಲೂ ಮಹಿಳಾ ಸುರಕ್ಷತಾ ತಾಣ ನಿರ್ಮಿಸಲಾಗಿದೆ.

    ಮಹಿಳಾ‌ ಸುರಕ್ಷತೆಗೆ ಈ ಬಾರಿ ಪೊಲೀಸ್ ಇಲಾಖೆ ಹೆಚ್ಚು ಒತ್ತು ನೀಡಿದೆ. ಮಹಿಳಾ ಸುರಕ್ಷತೆಗಾಗಿ ಐ ಲ್ಯಾಂಡ್ ಸ್ಥಾಪನೆ ಮಾಡಿ ಯಾವುದೇ ಅಹಿತಕರ ಘಟನೆ‌ ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಸ್ತೆಯ ಎರಡೂ ಕಡೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗಿದೆ.

     

  • ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬೆಂಗಳೂರು ನಗರ ಸೇರಿದಂತೆ ಕೆಲವೊಂದು ಸಿಟಿಗಳಲ್ಲಿ ಸ್ವಚ್ಚತೆ ಅನ್ನೋದು ಮರಿಚಿಕೆಯಾಗಿದೆ. ಅದರಲ್ಲೂ ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸ್ವಚ್ಛತೆ ಕಾಪಾಡಿ ಅಂತ ದೊಡ್ಡದಾಗಿ ಬರೆದ್ರೂ ಓದಿದವರಿಗೂ ಅದು ಕಾಣಿಸಲ್ಲ. ಕಾಪಾಡಬೇಕಾದವರೇ ಗಲೀಜು ಮಾಡಿ, ವಾತಾವರಣವನ್ನು ಕಲುಷಿತಗೊಳಿಸಿಬಿಡ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸೋದು ತುಂಬಾ ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಶರತ್.

    ಎಸ್, ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡಿ ನಟನೆಯಲ್ಲೂ ಮೊದಲ ಪ್ರಯೋಗದಲ್ಲೇ ಸೈ ಎನಿಸಿಕೊಂಡಿದ್ದಾರೆ ಶರತ್. G-Studios Media ಯೂಟ್ಯೂಬ್ ಚಾನೆಲ್ ನಲ್ಲಿ ‘ವೇಷ’ ಕಿರುಚಿತ್ರ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಖತ್ ವ್ಯೂವ್ ಪಡೆದಿದೆ.

    ಈ ಕಿರುಚಿತ್ರದಲ್ಲಿರುವ ವಿಷಯ ತುಂಬಾ ಸಿಂಪಲ್. ನಮ್ಮ ಸುತ್ತಮುತ್ತಲಿನಲ್ಲಿರುವ ಸಮಸ್ಯೆಯನ್ನೇ ಕಥೆಯನ್ನಾಗಿ ಎಣೆದಿದ್ದಾರೆ. ನೋಡಿದವರಿಗೆ ವಾವ್ ಈ ಸಮಸ್ಯೆಯನ್ನ ಈ ರೀತಿಯೂ ಸಾಲ್ವ್ ಮಾಡಬಹುದಾ ಎಂಬ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಭಿಕ್ಷೆಗೆ ಮತ್ತೊಂದಕ್ಕೆ ಮಾತ್ರ ಸೀಮಿತರಾಗಿರುವ, ಸಮಾಜದಲ್ಲಿ ಎಲ್ಲರಿಂದ ದೂರ ನಿಂತಿರುವ ಮಂಗಳ ಮುಖಿಯರಿಂದ ಇಂಥ ಕೆಲಸವೂ ಸಾಧ್ಯ ಎಂಬುದನ್ನು ಈ ಕಿರು ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಹಾಕುವ ಒಂದೇ ಶಾಪಕ್ಕೆ ಹೆದರಿ ಹಣ ಕೊಡುವವರು ಅವರ ಮಾತಿಗೆ ಹೇಗೆ ಸ್ವಚ್ಛತೆಗೆ ಇಳಿಯುತ್ತಾರೆ ಎಂಬುದನ್ನು ಶರತ್ ಪ್ರೂವ್ ಮಾಡಿದ್ದಾರೆ. ಆ ಅದ್ಭುತ ನಿರೂಪಣೆಯನ್ನ ಕಿರುಚಿತ್ರದಲ್ಲೇ ನೋಡಿದರೆ ಖುಷಿ ಕೊಡುತ್ತೆ.

    ನಟನಾಗಿ ಅನುಭವ ಇರುವ ಶರತ್, ಕಿರುಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಮೊದಲ ಕಿರುಚಿತ್ರದಲ್ಲೇ ಒಬ್ಬ ಒಳ್ಳೆ ಡೈರೆಕ್ಟರ್ ಸಾಮಾಥ್ರ್ಯವಿರುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲ್ಲ. ಸಮಾಜದಲ್ಲಿ ಇರುವ ಕೆಲವೊಂದು ಸಮಸ್ಯೆಗಳನ್ನು ಇಟ್ಟುಕೊಂಡು ಜನರಿಗೆ ಇಷ್ಟವಾಗುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. 10 ನಿಮಿಷ 40 ಸೆಕೆಂಡ್ ಈ ಕಿರುಚಿತ್ರ ಇದೆ. ಶರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೋಪಿ ಸ್ನೇಹಿತ ಪಾತ್ರದಲ್ಲಿ ಅಭಿನಯಿಸಿದ್ದು, ಸರಳ ಸೇರಿದಂತೆ ಅನೇಕ ಮಂಗಳಮುಖಿಯರು ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿರುವಂತೆ ಕ್ವಾಲಿಟಿ ಇದ್ದು ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ ಅಂತಾರೆ ನಿರ್ದೇಶಕ ಕಂ ನಟ ಶರತ್.

    ಒಟ್ಟಾರೆ ಸಮಸಾಜಕ್ಕೆ ಬೇಕಾದ ಒಂದೊಳ್ಳೆ ಮೆಸೇಜ್ ಈ ಕಿರುಚಿತ್ರದಲ್ಲಿದ್ದು, ಆ ಸಣ್ಣ ತಪ್ಪನ್ನ ಮಾಡುವಾಗ ಮನದ ಮೂಲೆಯಲ್ಲಿ ಅರಿವು ಮೂಡಿಸುವಂತ ಕೆಲಸ ಮಾಡುತ್ತೆ ‘ವೇಷ’ ಸಿನಿಮಾ. ಜೊತೆಗೆ ಕೊನೆಯಲ್ಲಿ ಬರುವ ದೇಶಕ್ಕಾಗಿ ಯಾವ ‘ವೇಷ’ ಬೇಕಾದ್ರೂ ಹಾಕ್ತಿನೋ ಅನ್ನೋ ಮಾತು ಎಲ್ಲರನ್ನು ಎಚ್ಚರಗೊಳಿಸುವಂತೆ ಮಾಡಿದೆ.