Tag: ಬೆಂಗಳೂರು. ಡಿ.ಕೆ ಶಿವಕುಮಾರ್

  • ಡಿ.ಕೆ ಶಿವಕುಮಾರ್‌ಗೆ ನೋವಾಗುವಂತೆ ಮಾತನಾಡಬಾರದು: ಕುಣಿಗಲ್ ಶಾಸಕ ರಂಗನಾಥ್

    ಡಿ.ಕೆ ಶಿವಕುಮಾರ್‌ಗೆ ನೋವಾಗುವಂತೆ ಮಾತನಾಡಬಾರದು: ಕುಣಿಗಲ್ ಶಾಸಕ ರಂಗನಾಥ್

    ಬೆಂಗಳೂರು: ಯಾರೇ ಆಗಲಿ ಕಷ್ಟ ಪಟ್ಟು ಪಕ್ಷ ಕಟ್ಟಿದ ಡಿ.ಕೆ ಶಿವಕುಮಾರ್‌(D K Shivakumar) ಅವರಿಗೆ ನೋವಾಗುವಂತೆ ಮಾತನಾಡಬಾರದು ಎಂದು ಕುಣಿಗಲ್(Kunigal) ಶಾಸಕ ರಂಗನಾಥ್(Ranganath) ಹೇಳಿದರು.

    ಬೆಂಗಳೂರಿನಲ್ಲಿ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಕಾರ್ಯಕರ್ತನಾಗಿ ಪಕ್ಷ ಕಟ್ಟಿದವರಿಗೆ ನೋವಾಗುವ ರೀತಿ ಮಾತಾಡಬಾರದು. ಡಿಕೆಶಿ ಅವರು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ. ಅವರಿಗೆ ನೋವಾಗುವ ರೀತಿ ಮಾತನಾಡುವುದು ತಪ್ಪು ಎಂದರು. ಇದನ್ನೂ ಓದಿ : ಪಿಜಿ ಮೆಡಿಕಲ್: ಸ್ಟ್ರೇ ವೇಕೆನ್ಸಿ ಸುತ್ತಿಗೆ ಅರ್ಜಿ ಸಲ್ಲಿಸಲು ಫೆ.19ರವರೆಗೆ ಅವಕಾಶ: ಕೆಇಎ

    ಮೊದಲು ಸರ್ಕಾರ ಬಂದ್ರೆ ಸಾಕಪ್ಪ ಅಂತ ನಮಗೆ ಇತ್ತು. ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆ ಮತ್ತು ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷ ಹಾಗೂ ಸರ್ಕಾರ ಎರಡು ಚೆನ್ನಾಗಿ ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಈ ಹೇಳಿಕೆ ತರವಲ್ಲ. ದಯವಿಟ್ಟು ಕಾರ್ಯಕರ್ತರಿಗೆ ನೋವಾಗುವ ಹೇಳಿಕೆ ಕೊಡಬಾರದು. ಎಷ್ಟೇ ದೊಡ್ಡವರಾದ್ರೂ ಪಕ್ಷಕ್ಕೆ ಹಾನಿ ಮಾಡಬಾರದು ಎಂದು ಡಿಕೆ ಶಿವಕುಮಾರ್ ಅವರು ಹೇಳಿಕೊಟ್ಟಿದ್ದಾರೆ. ರಾಜಣ್ಣ ಹೇಳಿಕೆಯನ್ನು ಎಐಸಿಸಿ ಅವರು ನೋಡ್ತಾರೆ ಎಂದು ಹೇಳಿದರು. ಇದನ್ನೂ ಓದಿ : ಅಟಲ್‌ಜೀ ಜನ್ಮ ಶತಾಬ್ಧಿ – ವಾಜಪೇಯಿ ಜತೆ ಕೆಲಸ ಮಾಡಿದ ಸಮಕಾಲೀನ ಕಾರ್ಯಕರ್ತರಿಗೆ ಬಿಜೆಪಿ ಗೌರವ

  • ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ತಾಯಿ, ಪತ್ನಿಯ ಭವಿಷ್ಯ ನಿರ್ಧಾರ

    ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ತಾಯಿ, ಪತ್ನಿಯ ಭವಿಷ್ಯ ನಿರ್ಧಾರ

    ಬೆಂಗಳೂರು: ಇಡಿ(ಜಾರಿ ನಿರ್ದೇಶನಾಲಯ) ನೀಡಿರುವ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಪತ್ನಿ ಉಷಾ, ತಾಯಿ ಗೌರಮ್ಮ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.

    ದೆಹಲಿ ಹೈ ಕೋರ್ಟಿನ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದ್ದು, ಡಿ.ಕೆ ಶಿವಕುಮಾರ್ ಆಪ್ತ ಸಹಾಯಕ ಆಂಜನೇಯ ಸಲ್ಲಿಸಿರುವ ಅರ್ಜಿಯನ್ನು ಈ ವೇಳೆ ಒಗ್ಗೂಡಿಸಿಕೊಳ್ಳಲಿದೆ. ಆಂಜನೇಯ ಅತ್ತೆ ಲಕ್ಷ್ಮಮ್ಮ, ಮಾವ ಹನುಮಂತಯ್ಯ ಸಂಬಂಧಿಗಳಾದ ಮೀನಾಕ್ಷಿ, ಜೈಶೀಲ ಅವರಿಗೂ ಇಡಿ ನೋಟಿಸ್ ನೀಡಿ ದೆಹಲಿ ಕಚೇರಿಗೆ ಬಂದು ಉತ್ತರಿಸುವಂತೆ ಸೂಚಿಸಿತ್ತು. ಈ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳಿಗೆ ಸೂಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.

    ಈಗಾಗಲೇ ಉಷಾ ಮತ್ತು ಗೌರಮ್ಮ ಪರ ವಕೀಲರ ವಾದ ಮಂಡನೆ ಮುಕ್ತಾಯವಾದ ಹಿನ್ನೆಲೆ ಇಂದು ಆಂಜನೇಯ ಅತ್ತೆ, ಮಾವನ ಪರ ವಕೀಲರು ವಾದ ಮಂಡಿಸಲಿದ್ದಾರೆ. ಬಳಿಕ ಇಡಿ ಪರ ವಕೀಲರು ವಾದ ಮಂಡಿಸಲಿದ್ದು, ಬೆಂಗಳೂರಿನಲ್ಲೆ ವಿಚಾರಣೆಗೆ ದೆಹಲಿ ಹೈಕೋರ್ಟ್ ಅವಕಾಶ ನೀಡುತ್ತಾ ಕಾದು ನೋಡಬೇಕು.