Tag: ‘ಬೆಂಗಳೂರು ಟೆಕ್ ಸಮ್ಮಿಟ್ 2021’

  • ನಮಸ್ತೇ ಸದಾ ವತ್ಸಲೇ ಎಂದು ಆರ್‌ಎಸ್‌ಎಸ್ ಗೀತೆ ಹಾಡಿದ ಡಿಕೆಶಿ – ಕಾಲೆಳೆದ ಬಿಜೆಪಿ ನಾಯಕರು

    ನಮಸ್ತೇ ಸದಾ ವತ್ಸಲೇ ಎಂದು ಆರ್‌ಎಸ್‌ಎಸ್ ಗೀತೆ ಹಾಡಿದ ಡಿಕೆಶಿ – ಕಾಲೆಳೆದ ಬಿಜೆಪಿ ನಾಯಕರು

    ಬೆಂಗಳೂರು: ವಿಧಾನಸಭೆಯಲ್ಲಿ ಡಿಕೆಶಿ (DK Shivakumar) ಆರ್‌ಎಸ್‌ಎಸ್ (RSS) ಗೀತೆ ಹಾಡಿದ್ದೇ ಬಿಜೆಪಿಗೆ ಬ್ರಹ್ಮಾಸ್ತ್ರ. ರಾಹುಲ್ ಗಾಂಧಿ ಬಿಟ್ಟು ಎಲ್ಲರೂ ಆರ್‌ಎಸ್‌ಎಸ್ ಗೌರವಿಸುತ್ತಾರೆ ಎಂದು ಬಿಜೆಪಿ ಟಕ್ಕರ್ ಕೊಟ್ಟಿದೆ. ಇದಕ್ಕೆ, ನಾನು ಕಮ್ಯುನಿಸ್ಟ್, ಆರ್‌ಎಸ್‌ಎಸ್ ಎಲ್ಲ ಸ್ಟಡಿ ಮಾಡಿದ್ದೇನೆ ಎಂದು ಡಿಕೆಶಿ (DK Shivakumar) ತಿರುಗೇಟು ನೀಡಿದ್ದಾರೆ.

    ಗುರುವಾರ (ಆ.21) ರಾತ್ರಿ ವಿಧಾನಸಭೆಯಲ್ಲಿ ಡಿಕೆಶಿ ಆರ್‌ಎಸ್‌ಎಸ್ ಗೀತೆಯ ಸಾಲುಗಳನ್ನು ಹಾಡಿದರು. ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ರಾಹುಲ್ ವಿರುದ್ಧ ಬಳಸುವ ಬ್ರಹ್ಮಾಸ್ತ್ರವಾಗಿ ಬಿಟ್ಟಿದೆ, ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಪರಮೇಶ್ವರ್ ಉತ್ತರ ಕೊಡುತ್ತಿದ್ದ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರ ಬಗ್ಗೆ ಸ್ಪಷ್ಟನೆ ಕೊಡುವಾಗ ಡಿಕೆಶಿ ಬಾಯಲ್ಲಿ ಆರ್‌ಎಸ್‌ಎಸ್ ಗೀತೆ ಸಾಲುಗಳು ಬಂತು. ನನ್ನ ಹತ್ರನೂ ವಿದ್ಯೆಗಳಿವೆ ಉತ್ತರ ಕೊಡ್ತೇನೆ, ನಾನು ನಿಮ್ಮ ಗರಡಿಯಲ್ಲಿ ಬೆಳೆಯದೇ ಇರಬಹುದು, ಆದ್ರೆ ಪರಮೇಶ್ವರ್ ಗರಡಿಯಲ್ಲಿ ಸ್ವಲ್ಪ ಬೆಳೆದಿದ್ದೇನೆ ಎಂದು ಹೇಳಿದರು. ಆಗ ಆರ್.ಅಶೋಕ್ ಮಧ್ಯಪ್ರವೇಶ ಮಾಡಿ, ನೀವು ಒಂದು ಸಾರಿ ಆರ್‌ಎಸ್‌ಎಸ್ ಚಡ್ಡಿ ಹಾಕಿದ್ದೆ ಅಂದಿದ್ರಿ ಎಂದು ತಿರುಗೇಟು ನೀಡಿದರು. ಆಗ ಡಿಕೆಶಿ, ನಮಸ್ತೇ ಸದಾ ವತ್ಸಲೇ ಮಾತೃಭೂಮೇ ತ್ವಯಾ ಹಿಂದುಭೂಮೇ ಸುಖಂ ಎಂದು ಹಾಡಿ, ಈಗ ಅದೆಲ್ಲ ಚರ್ಚೆ ಬೇಡ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ:9ನೇ ಕ್ಲಾಸ್‌ನಲ್ಲಿದ್ದಾಗಲೇ ಸುಜಾತ ಬಸುರಿಯಾಗಿದ್ದಳು, ತಂದೆ ಅಬಾರ್ಷನ್ ಮಾಡಿಸಿದ್ದರು: ಸಹೋದರ ಸ್ಫೋಟಕ ಹೇಳಿಕೆ

    ಇನ್ನು ಡಿಕೆಶಿ ಹೇಳಿಕೆಯನ್ನ ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿಯತ್ತ ಟೀಕೆಗೆ ಬಳಸಿಕೊಳ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಬಂಡಾರಿ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್‌ನ ಗಾಂಧಿ ಕುಟುಂಬ ಬಿಟ್ಟು ಪ್ರತಿಯೊಬ್ಬ ನಾಯಕರು ಆರ್‌ಎಸ್‌ಎಸ್ ಅನ್ನು ಗೌರವಿಸುತ್ತಾರೆ. ಆರ್‌ಎಸ್‌ಎಸ್ ಸಮಾಜಮುಖ ಕೆಲಸ ಗೊತ್ತಿದೆ. ಹೀಗಾಗಿ ಅವರು ಕೂಡ ಆರ್‌ಎಸ್‌ಎಸ್‌ನ್ನು ಗೌರವಿಸುತ್ತಾರೆ. ರಾಹುಲ್ ಗಾಂಧಿಯನ್ನು ಯಾರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಡಿಕೆಶಿ ಕೂಡಾ ತಮಾಷೆಯಾಗಿ ಹೇಳಿರಬಹುದು. ಕಾಂಗ್ರೆಸ್‌ನಲ್ಲಿ ಮುಂದುವರಿಬೇಕಿರುವ ಕಾರಣ ಅವರು ಉದ್ದೇಶಪೂರ್ವಕವಾಗಿ ತಮಾಷೆಯಾಗಿ ಹೇಳಿರಬಹುದು ಎಂದು ಟಾಂಗ್ ಕೊಟ್ಟರು. ಆದರೆ ಬಿಜೆಪಿ ಅಸ್ತ್ರಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದು, ನಾನು ಕಮ್ಯುನಿಸ್ಟ್, ಆರ್‌ಎಸ್‌ಎಸ್ ಅಧ್ಯಯನ ಮಾಡಿದ್ದೇನೆ, ಕೆಲವರ ವಿಚಾರಗಳನ್ನ ಗ್ರ‍್ಯಾಬ್ ಮಾಡಲು ರಿಸರ್ಚ್ ಮಾಡ್ತೀನಿ ಅಂತಾ ಸಮರ್ಥಿಸಿಕೊಂಡರು.

    ಒಟ್ಟಿನಲ್ಲಿ ಆರ್‌ಎಸ್‌ಎಸ್ ನಾಯಕರು, ಅವರ ಸಿದ್ಧಾಂತದ ಬಗ್ಗೆ ರಾಹುಲ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿರುವಾಗಲೇ ಡಿಕೆಶಿ ಹೇಳಿಕೆಯನ್ನ ಬಿಜೆಪಿ ಗುರಾಣಿಯಾಗಿಸಿಕೊಂಡಿದೆ. ಡಿಕೆಶಿ ಫ್ಲೋನಲ್ಲಿ ಹೇಳಿ ವ್ಯಂಗ್ಯ ಮಾಡಿದ್ರೂ ಆರ್‌ಎಸ್‌ಎಸ್ ಬಗ್ಗೆ ಇರುವ ಗೌರವ ಎಂದು ತಿರುಗುಬಾಣವಾಗಿಸಿ ಬಿಜೆಪಿ ಕ್ಯಾಂಪೇನ್ ಮಾಡುತ್ತಿದ್ದರೆ, ಡಿಕೆಶಿ ಎಂದಿನಂತೆ ಅರಗಿಸಿಕೊಂಡು ಡೋಂಟ್ ಕೇರ್ ಎಂಬ ರೀತಿ ರಿಯಾಕ್ಟ್ ಮಾಡಿರುವುದು ಅಷ್ಟೇ ಚರ್ಚೆಗೆ ಗ್ರಾಸವಾಗಿದೆ.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತದಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟ ಘಟನೆ – ಸಿಎಂ ಭಾವುಕ

  • ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ

    ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನ

    ಬೆಂಗಳೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಇಂದು ಸಂಜೆ ಬೆಂಗಳೂರಿನ ಎಚ್‍ಎಎಲ್ ಏರ್‍ಪೋರ್ಟ್‍ಗೆ ಆಗಮಿಸಲಿರುವ ವೆಂಕಯ್ಯ ನಾಯ್ಡು ಅವರು, 4 ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಸೋಮವಾರ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಬುಧವಾರ ನಡೆಯಲಿರುವ ಕರ್ನಾಟಕ ಹಾಗೂ ದೇಶದ ಮಹತ್ವದ ಕಾರ್ಯಕ್ರಮವಾದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಬುಧವಾರ ಸಂಜೆಯೇ ಹೈದರಾಬಾದ್‍ಗೆ ತೆರಳಲಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ತೆರಳ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪಿನಿಂದ ಕಲ್ಲುತೂರಾಟ

    ‘ಬೆಂಗಳೂರು ಟೆಕ್ ಸಮ್ಮಿಟ್ 2021’ ಕಾರ್ಯಕ್ರಮದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ದಾವೋಸ್ ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಸಮ್ಮಿಟ್ ನಿಂದಾಗಿ ತಂತ್ರಜ್ಞಾನ ಕ್ಷೇತ್ರ ಇನ್ನಷ್ಟು ವಿಸ್ತರಣೆ ಆಗಲಿದೆ ಮತ್ತು ಉದ್ಯೋಗವಕಾಶಗಳೂ ಕೂಡ ಹೆಚ್ಚಲಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಮೊಬೈಲ್ ಜಪ್ತಿ – ಫೋನ್ ನೋಡಿ ಪೋಷಕರು ಶಾಕ್