Tag: ಬೆಂಗಳೂರು ಟೆಕ್ಕಿ

  • 1.85 ಲಕ್ಷ ರೂ. ಫೋನ್‌ ಬುಕ್‌ ಮಾಡಿದ್ದ ಟೆಕ್ಕಿಗೆ ಶಾಕ್‌ – ಡೆಲಿವರಿ ಬಾಕ್ಸಲ್ಲಿ ಟೈಲ್ಸ್‌ ಪೀಸ್‌ ಇಟ್ಟು ವಂಚನೆ

    1.85 ಲಕ್ಷ ರೂ. ಫೋನ್‌ ಬುಕ್‌ ಮಾಡಿದ್ದ ಟೆಕ್ಕಿಗೆ ಶಾಕ್‌ – ಡೆಲಿವರಿ ಬಾಕ್ಸಲ್ಲಿ ಟೈಲ್ಸ್‌ ಪೀಸ್‌ ಇಟ್ಟು ವಂಚನೆ

    ಬೆಂಗಳೂರು: ಆನ್‌ಲೈನ್‌ನಲ್ಲಿ 1.85 ಲಕ್ಷ ರೂ. ಮೌಲ್ಯದ ಸ್ಯಾಮ್‌ಸಂಗ್‌ ಫೋನ್‌ ಬುಕ್‌ ಮಾಡಿದ್ದ ಟೆಕ್ಕಿಗೆ ಡೆಲಿವರಿ ಬಾಕ್ಸ್‌ನಲ್ಲಿ ಕಲ್ಲಿಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಾಫ್ಟ್‌ವೇರ್‌ ಎಂಜಿನಿಯರ್ ಪ್ರೇಮಾನಂದ್‌‌ ವಂಚನೆಗೆ ಒಳಗಾದ ವ್ಯಕ್ತಿ. ಇವರು 1.85 ಲಕ್ಷ ರೂ. ಮೌಲ್ಯದ ಫೋನ್‌ ಅನ್ನು ಅಮೆಜಾನ್‌ ಆ್ಯಪ್‌ನಲ್ಲಿ ಬುಕ್‌ ಮಾಡಿದ್ದರು. ನಿಗದಿ ದಿನಾಂಕದಂತೆ ಆರ್ಡರ್‌ ಡೆಲಿವರಿಯಾಗಿತ್ತು. ಇದನ್ನೂ ಓದಿ: ರಸ್ತೆಗೆ ತ್ಯಾಜ್ಯ ಎಸೆದವರಿಗೆ ತಕ್ಕ ಪಾಠ – ಹಾಕಿದವ್ರ ಮನೆ ಮುಂದೆಯೇ ಕಸ ವಾಪಸ್ ಸುರಿದ BSWML ಸಿಬ್ಬಂದಿ

    ಬಾಕ್ಸ್‌ ಓಪನ್‌ ಮಾಡಿ ನೋಡಿದ ಟೆಕ್ಕಿಗೆ ಶಾಕ್‌ ಆಗಿದೆ. ಮೊಬೈಲ್‌ ಬಾಕ್ಸ್‌ನಲ್ಲಿ ಚೌಕಾಕಾರದ ಕಲ್ಲನ್ನು ಇಟ್ಟು ವಂಚಿಸಲಾಗಿದೆ. ಫೋನ್‌ಗಾಗಿ ಟೆಕ್ಕಿ ಸಂಪೂರ್ಣ ಹಣ ಪಾವತಿ ಮಾಡಿದ್ದರು. ಡೆಲಿವರಿ ಬಾಯ್‌ಗೆ ಕರೆ ಮಾಡಿದರೆ ರೆಸ್ಪಾನ್ಸ್‌ ಸಿಕ್ಕಿಲ್ಲ. ಕೊನೆಗೆ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿದೆ.

    ಮೊಬೈಲ್‌ ಭಾರ ಇರುವಷ್ಟೇ ತೂಕದ ಚೌಕಾಕಾರದ ಕಲ್ಲನ್ನು ಬಾಕ್ಸ್‌ನಲ್ಲಿಟ್ಟು ಟೆಕ್ಕಿಗೆ ವಂಚಿಸಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ನೇರಳೆ ಮಾರ್ಗ ಮಧ್ಯೆಯೇ ನಿಂತ ನಮ್ಮ ಮೆಟ್ರೋ ರೈಲು – ಒಂದು ಗಂಟೆ ಕಾಲ ಪರದಾಡಿದ ಪ್ರಯಾಣಿಕರು

  • ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

    ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

    – ಬೆಂಗಳೂರು ಟೆಕ್ಕಿಯ ಪತ್ನಿ, ಅತ್ತೆ, ಬಾಮೈದಗೆ 14 ದಿನಗಳ ನ್ಯಾಯಾಂಗ ಬಂಧನ

    ಲಕ್ನೋ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಟೆಕ್ಕಿ ಅತುಲ್‌ ಸುಭಾಷ್‌ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಅತುಲ್‌ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್‌ ಸಿಂಘಾನಿಯಾ ಅರೆಸ್ಟ್‌ ಆಗಿದ್ದರು. ಈಗ ಹರಿಯಾಣದ ಗುರುಗ್ರಾಮದಲ್ಲಿ ಅತುಲ್‌ ಪತ್ನಿ ನಿಖಿತಾ ಪೊಲೀಸರಿಗೆ ಲಾಕ್‌ ಆಗಿದ್ದಾಳೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದನ್ನೂ ಓದಿ: ಸಾಯುವುದಕ್ಕೆ 2 ನಿಮಿಷ ಮುಂಚೆ ರಾಷ್ಟ್ರಪತಿಗಳಿಗೆ ಇ-ಮೇಲ್‌ ಕಳುಹಿಸಿದ್ದ ಟೆಕ್ಕಿ ಅತುಲ್‌!

    ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

  • ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಬೆಂಗಳೂರಿನಲ್ಲಿ ಟೆಕ್ಕಿ ಅತುಲ್‌ ಆತ್ಮಹತ್ಯೆ ಕೇಸ್‌ – ಅತ್ತೆ, ಬಾಮೈದ ಪೊಲೀಸರ ವಶಕ್ಕೆ

    ಬೆಂಗಳೂರು: ಟೆಕ್ಕಿ ಅತುಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಾರತ್‌ ಹಳ್ಳಿ ಪೊಲೀಸರು ಅತುಲ್ ಅತ್ತೆ ನಿಶಾ ಸಿಂಘನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯಾನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಉತ್ತರ ಪ್ರದೇಶದ ಜೌನ್ಪುರ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ಅತುಲ್ ಪತ್ನಿ ನಿಖಿತಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಇಬ್ಬರನ್ನು ನಾಳೆ‌ ಕೋರ್ಟ್ ಅನುಮತಿ ಪಡೆದು ಬೆಂಗಳೂರಿಗೆ ಪೊಲೀಸರು ಕರೆತರಲಿದ್ದಾರೆ.

  • Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    Turkey, Syria Earthquakeː ಮೈಕ್ರೋಫೋನ್, ಡ್ರೋನ್, ರೊಬೋಟ್ ತಂತ್ರಜ್ಞಾನ ಬಳಸಿ ಜನರ ರಕ್ಷಣೆ

    ಅಂಕಾರಾ/ನವದೆಹಲಿ: ಸರಣಿ ಭೂಕಂಪಗಳಿಂದ (Earthquake) ತತ್ತರಿಸುತ್ತಿರುವ ಟರ್ಕಿಯಲ್ಲಿ (Turkey) ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ಅಮೆರಿಕ (USA), ರಷ್ಯಾ (Russia), ಚೀನಾ (China) ಭಾರತದ ರಕ್ಷಣಾ ತಂಡಗಳು ಭಾಗಿಯಾಗಿವೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.

    ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ (Microphone) ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು (Drone Camera) ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ (Oxygen Pipe) ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಕೊಳ್ಳಲಾಗುತ್ತಿದೆ. ಗುರುವಾರ 44 ಗಂಟೆಗಳಿಂದ ಕಟ್ಟಡದ ಅವಶೇಷಗಳ ಅಡಿಯಲ್ಲಿದ್ದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

    ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದರ ಸಂಖ್ಯೆ 16,000ಕ್ಕೆ ಏರಿದೆ. ಟರ್ಕಿಯಲ್ಲಿ ಕನಿಷ್ಠ 12,873 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,142 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ಹೇಳಿದೆ. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಟರ್ಕಿ ತಲುಪಿದ ಭಾರತದ 6ನೇ ವಿಮಾನ: ಟರ್ಕಿಗೆ ಭಾರತದ ನೆರವು ಮುಂದುವರಿದಿದೆ. ಗುರುವಾರ ವಾಯುಸೇನೆಯ 6ನೇ ವಿಮಾನ ಹೆಚ್ಚುವರಿ ವೈದ್ಯಕೀಯ ಸಾಮಾಗ್ರಿಗಳು ಹೊತ್ತು ತೆರಳಿದೆ. ಇದರಲ್ಲಿ 44 ಮಂದಿ ತಂತ್ರಜ್ಞರಿದ್ದು ಟರ್ಕಿಯಲ್ಲಿ ವೈದ್ಯಕೀಯ ನೆರವು ನೀಡಲಿದ್ದಾರೆ. ಇದಕ್ಕೂ ಮುನ್ನ ಎನ್‌ಡಿಆರ್‌ಎಫ್ (NDRF) ತಂಡಗಳು ಹಾಗೂ ವೈದ್ಯರನ್ನ ಭಾರತ ಕಳುಹಿಸಿತ್ತು. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

    ಬೆಂಗಳೂರು ಮೂಲದ ಟೆಕ್ಕಿ ಸುಳಿವಿಲ್ಲ: ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಸುಳಿವು ಸಿಕ್ಕಿಲ್ಲ. ಮಾಹಿತಿಗಳ ಪ್ರಕಾರ ಡೆಹ್ರಾಡೂನ್ ಮೂಲದ ವಿಜಯಕುಮಾರ್ ಎಂದು ತಿಳಿದುಬಂದಿದೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಪ್ಲ್ಯಾನೆಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್, ಕಳೆದವಾರ ಟರ್ಕಿಯ ಪ್ರಮುಖ ಕೈಗಾರಿಕಾ ಅನಿಲ ಪೂರೈಕೆ ಕಂಪನಿಯಾದ ಕುಲ್ಕು ಗಾಜ್ ಎಂಬ ಕಂಪನಿಗೆ ಕರಗಿದ ಅಸಿಟಿಲೀನ್ ಗ್ಯಾಸ್ ಪ್ಲಾಂಟ್‌ನ ನಿರ್ಮಾಣ ಮತ್ತು ಕಾರ್ಯಾರಂಭ ಹಿನ್ನೆಲೆ ಟರ್ಕಿಗೆ ತೆರಳಿದ್ದರು. ಸದ್ಯ ಅವರ ಹುಡುಕಾಟವೂ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಅಂಕಾರ/ಬೆಂಗಳೂರು: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆಯಾದೆ. ಈ ನಡುವೆ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ (Government Of Karnataka) ಮುಂದಾಗಿದೆ.

    ಟರ್ಕಿ, ಸಿರಿಯಾ ಅವಘಡದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಟರ್ಕಿ, ಸಿರಿಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕಿಸಿ ಕನ್ನಡಿಗರ ಮಾಹಿತಿ ಪಡೆಯಲು ಸರ್ಕಾರದಿಂದ ಸೂಚನೆ ನೀಡಿದೆ.

    ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಟರ್ಕಿ ಮಾರಣಾಂತಿಕ ಭೂಕಂಪ – ಬೆಂಗಳೂರಿನ ಕಂಪನಿಯ ಉದ್ಯೋಗಿ ನಾಪತ್ತೆ

    ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟಿಕ್ಕಿಯಲ್ಲ: ಟರ್ಕಿಯಲ್ಲಿ ಸಿಲುದ್ದಾರೆ ಎನ್ನಲಾದ ಟೆಕ್ಕಿ ಬೆಂಗಳೂರಿನ (Bengaluru Techie) ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್‌ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ.

    ಸದ್ಯ ಭಾರತ ಸರ್ಕಾರ (Government Of India) ಈ ವ್ಯಕ್ತಿ ಪತ್ತೆಗೆ ಮುಂದಾಗಿದೆ. ಇಲ್ಲಿ ತನಕ ವ್ಯಕ್ತಿ ನಾಪತ್ತೆ ಬಗ್ಗೆ ವಿಪತ್ತು ನಿರ್ವಹಣಾ ಸಹಾಯವಾಣಿಗೆ ಯಾವುದೇ ಕರೆಗಳು ಬಂದಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್‌, ಕಾರು – 30 ಮಂದಿ ದುರ್ಮರಣ

    ಇದೇ ತಿಂಗಳ ಫೆಬ್ರವರಿ 6ರ ನಸುಕಿನ ಜಾವದಲ್ಲಿ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ 5 ಬಾರಿ ಸತತವಾಗಿ ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 15 ಸಾವಿರಕ್ಕೆ ತಲುಪಿದೆ. ಈಗಾಗಲೇ ವಿಶ್ವಸಂಸ್ಥೆ ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?

    ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?

    ಬೆಂಗಳೂರು: ತೆಲಂಗಾಣ ಆರೋಗ್ಯ ಇಲಾಖೆ ಬೆಂಗಳೂರು ಟೆಕ್ಕಿ ಕೊರೋನಾ ವೈರಸ್ ತುತ್ತಾಗಿರೋದನ್ನು ಖಚಿತ ಪಡಿಸಿದೆ. ಟೆಕ್ಕಿಯನ್ನು ಹೈದರಾಬಾದ್ ನಗರದ ಗಾಂಧಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್ ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

    ಟೆಕ್ಕಿ ಕಚೇರಿಯ ಕೆಲಸಕ್ಕಾಗಿ ಫೆಬ್ರವರಿ 17ರಂದು ದುಬೈಗೆ ತೆರಳಿದ್ದರು. ದುಬೈನಿಂದ ಫೆಬ್ರವರಿ 20ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು. ಎರಡು ದಿನ ಕೆಲಸಕ್ಕೆ ಹಾಜರಾಗಿದ್ದ ಟೆಕ್ಕಿ ಹೈದರಾಬಾದ್ ನಲ್ಲಿರುವ ಊರಿಗೆ ತೆರಳಿದ್ದರು. ಮನೆಗೆ ಬರುವಾಗಲೇ ಟೆಕ್ಕಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಕುರಿತು ಕುಟುಂಬಕ್ಕೂ ಮಾಹಿತಿ ನೀಡಿದ್ದರು. ತದನಂತರ ಸಿಕಂದರಾಬಾದ್ ನಲ್ಲಿರು ಅಪೋಲೋ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದರು. ಜ್ವರ ಕಡಿಮೆಯಾಗದಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.

    ಟೆಕ್ಕಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರೊಜೆಕ್ಟ್ ವರ್ಕ್ ಸಂಬಂಧಿಸಿದಂತೆ ದುಬೈಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಟೆಕ್ಕಿ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದರು ಕುರಿತು ತಿಳಿದು ಬಂದಿದೆ.

    ಮಾರ್ಚ್ 1ರಂದು ಜ್ವರ ಹಾಗೂ ಕಫ ಕಡಿಮೆಯಾಗದಿದ್ದಾಗ ಟೆಕ್ಕಿಯ ರಕ್ತದ ಮಾದರಿಯನ್ನು ತಪಾಸಣೆಗಾಗಿ ಗಾಂಧಿ ಆಸ್ಪತ್ರೆಗೆ ಕಳಿಸಿದಾಗ ಮಾರ್ಚ್ 2ರಂದು ಕೊರೋನಾ ಸೋಂಕು ಇರೋದು ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನಿಸಿತ್ತು. ಪುಣೆಯ ಲ್ಯಾಬ್ ನಿಂದಲೂ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ.

    ಕೊರೋನಾ ವೈರಸ್ ಗೆ ತುತ್ತಾಗಿರುವ ಟೆಕ್ಕಿಯನ್ನು ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಟೆಕ್ಕಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದನು. ಹಾಗಾಗಿ ಟೆಕ್ಕಿ ಪ್ರಯಾಣ ಬೆಳೆಸಿದ ಬಸ್ ನಲ್ಲಿಯ ಪ್ರಯಾಣಿಕರ ಮಾಹಿತಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

    ಕಳೆದ ಎರಡು ದಿನಗಳಿಂದ ಟೆಕ್ಕಿ ಸುಮಾರು 80 ಜನರೊಂದಿಗೆ ಸಂಪರ್ಕದಲ್ಲಿದ್ದನು. ಬಸ್ ನಲ್ಲಿ ಸಹ ಪ್ರಯಾಣಿಕರು, ಕುಟುಂಬಸ್ಥರು, ವೈದ್ಯರು ಮತ್ತು ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದನು. ಎಲ್ಲರ ಮೇಲೆ ನಿಗಾ ಇರಿಸಲಾಗಿದೆ. ಈ ಸಂಬಂಧ ಟೆಕ್ಕಿ ಕೆಲಸ ಮಾಡುತ್ತಿರುವ ಕಂಪನಿ ಮತ್ತು ಆತ ಪ್ರಯಾಣ ಬೆಳೆಸಿದ ಬಸ್ ಮಾಲೀಕರಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ರಾಜೇಂದ್ರ ಹೇಳಿದ್ದಾರೆ.

  • 24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್

    24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್

    -ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ ಟೆಕ್ಕಿ
    -ಸಹ ಪ್ರಯಾಣಿಕರ ಮಾಹಿತಿ ಸಂಗ್ರಹಕ್ಕೆ ಮುಂದಾದ ಸರ್ಕಾರ

    ಹೈದರಾಬಾದ್: ತೆಲಂಗಾಣದ ಇಬ್ಬರಲ್ಲಿ ಬೆಂಗಳೂರು ಮೂಲದ ಟೆಕ್ಕಿ ಕೊರೋನಾ ವೈರಸ್‍ಗೆ ತುತ್ತಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಟೆಕ್ಕಿಗೆ ಕೊರೋನಾ ವೈರಸ್‍ಗೆ ಒಳಗಾಗಿರೋದು ದೃಢಪಟ್ಟಿದೆ.

    ಕೊರೋನಾ ವೈರಸ್ ಗೆ ತುತ್ತಾಗಿರುವ ಟೆಕ್ಕಿಯನ್ನು ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಟೆಕ್ಕಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದನು. ಹಾಗಾಗಿ ಟೆಕ್ಕಿ ಪ್ರಯಾಣ ಬೆಳೆಸಿದ ಬಸ್ ನಲ್ಲಿಯ ಪ್ರಯಾಣಿಕರ ಮಾಹಿತಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

    ಹೈದರಾಬಾದ್ ನಗರದ ಮಹೀಂದ್ರ ಹಿಲ್ಸ್ ನಲ್ಲಿ ವಾಸವಾಗಿದ್ದ ಟೆಕ್ಕಿಗೆ ಮೊದಲು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ರೆಫೆರ್ ಮಾಡಲಾಗಿತ್ತು. ಪುಣೆ ಲ್ಯಾಬ್ ನಿಂದ ಬಂದ ವರದಿಯಲ್ಲಿಯೂ ಟೆಕ್ಕಿ ಕೊರೋನ ವೈರಸ್ ಗೆ ತುತ್ತಾಗಿರುವುದು ಖಚಿತವಾಗಿದೆ.

    ಕಳೆದ ಎರಡು ದಿನಗಳಿಂದ ಟೆಕ್ಕಿ ಸುಮಾರು 80 ಜನರೊಂದಿಗೆ ಸಂಪರ್ಕದಲ್ಲಿದ್ದನು. ಬಸ್ ನಲ್ಲಿ ಸಹ ಪ್ರಯಾಣಿಕರು, ಕುಟುಂಬಸ್ಥರು, ವೈದ್ಯರು ಮತ್ತು ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದನು. ಎಲ್ಲರ ಮೇಲೆ ನಿಗಾ ಇರಿಸಲಾಗಿದೆ. ಈ ಸಂಬಂಧ ಟೆಕ್ಕಿ ಕೆಲಸ ಮಾಡುತ್ತಿರುವ ಕಂಪನಿ ಮತ್ತು ಆತ ಪ್ರಯಾಣ ಬೆಳೆಸಿದ ಬಸ್ ಮಾಲೀಕರಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ರಾಜೇಂದ್ರ ಹೇಳಿದ್ದಾರೆ.