Tag: ಬೆಂಗಳೂರು ಟಿಟಿಡಿ ದೇವಸ್ಥಾನ

  • ತಿರುಪತಿಯಲ್ಲಿ ಕಾಲ್ತುಳಿತ ದುರಂತ – ಬೆಂಗಳೂರಿನ ಟಿಟಿಡಿ ದೇವಸ್ಥಾನದ ಭದ್ರತೆ ಪರಿಶೀಲಿಸಿದ ಪೊಲೀಸರು

    ತಿರುಪತಿಯಲ್ಲಿ ಕಾಲ್ತುಳಿತ ದುರಂತ – ಬೆಂಗಳೂರಿನ ಟಿಟಿಡಿ ದೇವಸ್ಥಾನದ ಭದ್ರತೆ ಪರಿಶೀಲಿಸಿದ ಪೊಲೀಸರು

    – ದೇವಸ್ಥಾನದಲ್ಲಿ ಪಾಸ್ ಕೊಡಿ ಎಂದು ಸ್ಥಳೀಯರ ಗಲಾಟೆ

    ಬೆಂಗಳೂರು: ತಿರುಪತಿ ಕಾಲ್ತುಳಿತ (Tirupati Stampede) ದುರಂತ ಪ್ರಕರಣದ ಬೆನ್ನಲ್ಲೇ ಬೆಂಗಳೂರಿನ ಟಿಟಿಡಿ ದೇವಸ್ಥಾನದ (TTD Temple) ಭದ್ರತೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ.

    ನಾಳೆ ವೈಕುಂಠ ಏಕಾದಶಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಾಳೆ ಭಕ್ತರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಯ ಪರಿಶೀಲಿಸಿದ್ದಾರೆ. ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳ ಅಳವಡಿಕೆ ಮಾಡಲಾಗಿದೆ. ದೇವಸ್ಥಾನದ ಅಕ್ಕಪಕ್ಕ ರಸ್ತೆಯ ವಾಹನಗಳನ್ನು ತೆರವು ಮಾಡಿದ್ದಾರೆ. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

    ಟಿಟಿಡಿ ದೇವಸ್ಥಾನದ ಅಧೀಕ್ಷಕಿ ಜಯಂತಿ ಮಾತನಾಡಿ, ತಿರುಪತಿ ಪ್ರಕರಣದ ಬಳಿಕ ಈಗ ಪೊಲೀಸರು ಬಂದು ಪರಿಶೀಲನೆ ಮಾಡಿದರು. ಕ್ಯೂ ಸಿಸ್ಟಮ್ ಹೆಚ್ಚಳಕ್ಕೆ ಹೇಳಿದ್ದಾರೆ. ಕ್ಯೂ ಸಿಸ್ಟಮ್ ಇನ್ನೂ ಹೆಚ್ಚು ಮಾಡ್ತೀವಿ. ಬ್ಯಾರಿಕೇಡ್ ಹೆಚ್ಚು ಹಾಕೋಕೆ ಹೇಳಿದ್ದಾರೆ. ಅದರ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಹೆಚ್ಚು ಜನ ಸಿಬ್ಬಂದಿ ನೇಮಕ ಮಾಡುವಂತೆ ಸೂಚಿಸಿದ್ದಾರೆ. ಅದನ್ನು ಕೂಡ ಮಾಡಿಕೊಳ್ತಾ ಇದ್ದೇವೆ. ಯಾವುದೇ ತೊಂದರೆಯಾಗದAತೆ ಕ್ರಮ. ತಿರುಪತಿಯಿಂದ ಲಡ್ಡು ಕೂಡ ಸಂಜೆ ಬರುವ ನಿರೀಕ್ಷೆ ಇದೆ.

    ಟಿಟಿಡಿ ದೇವಸ್ಥಾನದಲ್ಲಿ ಪಾಸ್ ಕೊಡಿ ಎಂದು ಸ್ಥಳೀಯರು ಗಲಾಟೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಪಾಸ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಈ ಬಾರಿ ವಿಐಪಿ ಪಾಸ್ ನೀಡಲ್ಲ ಅಂತಾ ಅಧೀಕ್ಷಕಿ ಮಾಹಿತಿ ನೀಡಿದ್ದಾರೆ. ಕನಿಷ್ಟ ಪಕ್ಷ ಆಮಂತ್ರಣ ಪತ್ರಿಕೆಯನ್ನಾದ್ರೂ ನೀಡಿ ಎಂದು ಸ್ಥಳೀಯರು ಕೇಳಿದ್ದಾರೆ. ಹೀಗಾಗಿ, ದೇಗುಲದ ಅವರಣದಲ್ಲಿ ಗಲಾಟೆ ನಡೆಯಿತು. ತಿರುಪತಿ ಪ್ರಕರಣದ ಬಳಿಕ ಪಾಸ್ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ದೇವಸ್ಥಾನ ತಿಳಿಸಿದೆ. ಇದನ್ನೂ ಓದಿ: ಶತ್ರು ಸಂಹಾರಕ್ಕೆ ಜನಿಸಿದ ಉಗ್ರ ಸ್ವರೂಪಿಣಿ ʻಪ್ರತ್ಯಂಗಿರಾ ದೇವಿʼ ದರ್ಶನ ಪಡೆದ ಡಿಕೆಶಿ

  • ತಿರುಪತಿ ಲಡ್ಡು ವಿವಾದ – ಬೆಂಗಳೂರಿನ ದೇವಸ್ಥಾನದಲ್ಲಿ ಆಗಮಶಾಸ್ತ್ರದಂತೆ ಶುದ್ಧಿಕಾರ್ಯ

    ತಿರುಪತಿ ಲಡ್ಡು ವಿವಾದ – ಬೆಂಗಳೂರಿನ ದೇವಸ್ಥಾನದಲ್ಲಿ ಆಗಮಶಾಸ್ತ್ರದಂತೆ ಶುದ್ಧಿಕಾರ್ಯ

    ಬೆಂಗಳೂರು: ತಿರುಪತಿ ಲಡ್ಡು (Tirupati Laddu) ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅರ್ಚಕರು ಸಂಪ್ರೋಕ್ಷಣೆ ಮಾಡಿ ಶುದ್ಧೀಕರಣ ಮಾಡಿದರು. ಆಗಮಶಾಸ್ತ್ರದಂತೆ ಶುದ್ಧಿಕಾರ್ಯ (Ritualistic Cleansing) ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ಬೆಳಗ್ಗೆ 10:30 ರಿಂದ ಆರಂಭವಾಗಿರುವ ಶುದ್ಧಿಕಾರ್ಯ ಸಂಜೆ 4:30ರ ವೇಳೆಗೆ ಮುಕ್ತಾಯಗೊಳ್ಳಲಿದೆ. ಸಂಜೆ 6:30ರ ಬಳಿಕ ಭಕ್ತರು ಎಂದಿನಂತೆ ದೇವರ ದರ್ಶನ ಪಡೆಯಬಹುದಾಗಿದೆ. ಲಡ್ಡು ಕೌಂಟರ್‌ ಸಹ 6 ಗಂಟೆಯ ನಂತರ ಓಪನ್‌ ಇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

    ಒಂದು ದಿನದ ಹಿಂದೆಯಷ್ಟೇ ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿದ್ದರು. ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನಲ್ಲೂ ಶುದ್ಧೀಕರಣ ಕಾರ್ಯ ನಡೆದಿದೆ.

    ಈ ಕುರಿತು ಮಾತನಾಡಿರುವ ಟಿಟಿಡಿ ಸಿಬ್ಬಂದಿ, ಈ ಹಿಂದೆ ಕಡಿಮೆ ಲಡ್ಡು ಸೇಲ್ ಆಗ್ತಿತ್ತು. ಇದೀಗ ಹೆಚ್ಚು ಲಡ್ಡನ್ನು ಭಕ್ತರು ತೆಗೆದುಕೊಂಡು ಹೋಗ್ತಿದ್ದಾರೆ. ಯಾರು ತಿರುಪತಿಯಲ್ಲಿ ಆದ ಘಟನೆ ಬಗ್ಗೆ ಕೇಳ್ತಿಲ್ಲ. ಲಡ್ಡು ತೆಗೆದುಕೊಂಡು ಹೋಗ್ತಿದ್ದಾರೆ. ಪ್ರತಿನಿತ್ಯ ಒಂದು ಸಾವಿರ ಲಡ್ಡು ಮಾರಾಟವಾಗ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ ಡಿಸಿಎಂ – 14,307 ರಸ್ತೆಗುಂಡಿಗಳಿಗೆ ಮುಕ್ತಿ

    ಅಕ್ರಮಗಳ ತನಿಖೆಗೆ SIT ರಚನೆ:
    ವೈಎಸ್‍ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ (Tirupati) ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ (Tirupati Laddu Row) ಎಂಬ ವಿವಾದದ ಬೆನ್ನಲ್ಲೇ ದೇವಾಲಯದ ಅವ್ಯವಹಾರಗಳ ತನಿಖೆಗೆ ಸಿಎಂ ಎನ್.ಚಂದ್ರಬಾಬು ನಾಯ್ಡು (Chandrababu Naidu) ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇದನ್ನೂ ಓದಿ: ಸಿಎಂ ಪಾಲಿಗೆ ಇಂದು ಬಿಗ್ ಡೇ – ಮುಡಾ ಕೇಸಲ್ಲಿ ತನಿಖೆಯೋ? ಸೇಫೋ?; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ..!

    ಈ ಹಿಂದೆ ಆಡಳಿತಾರೂಢ ತೆಲುಗು ದೇಶಂ ಪಕ್ಷವು (TDP), ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್‌ನ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಕಳೆದ ಐದು ವರ್ಷಗಳಿಂದ ದೇವಾಲಯದ ನಿರ್ವಹಣೆಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿತ್ತು. ಈ ಎಲ್ಲಾ ಪ್ರಕರಣವನ್ನೂ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿದೆ.