Tag: ಬೆಂಗಳೂರು ಕರ್ನಾಟಕ

  • ದುಬೈನಿಂದ ಬಂದ ದಂಪತಿಗೆ ಕೊರೊನಾ – ಕರ್ನಾಟಕದಲ್ಲಿ 146ಕ್ಕೆ ಏರಿಕೆ

    ದುಬೈನಿಂದ ಬಂದ ದಂಪತಿಗೆ ಕೊರೊನಾ – ಕರ್ನಾಟಕದಲ್ಲಿ 146ಕ್ಕೆ ಏರಿಕೆ

    ಬೆಂಗಳೂರು: ಶನಿವಾರ ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗಿನ ಅವಧಿಯಲ್ಲಿ ಒಟ್ಟು 2 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ.

    ದಂಪತಿ ಹಿರಿಯ ನಾಗರಿಕರಾಗಿದ್ದು ಮಾರ್ಚ್ 22 ರಂದು ದುಬೈನಿಂದ ಭಾರತಕ್ಕೆ ಆಗಮಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.

    ರೋಗಿ 145 – 68 ವರ್ಷದ ಬೆಂಗಳೂರು ಮೂಲದ ವ್ಯಕ್ತಿ ಮಾರ್ಚ್ 22 ರಂದು ಭಾರತಕ್ಕೆ ಮರಳಿದ್ದರು.

    ರೋಗಿ 146 – 62 ವರ್ಷದ ಮಹಿಳೆ ಬೆಂಗಳೂರು ಮೂಲದವರಾಗಿದ್ದು ರೋಗಿ 145ರ ಪತ್ನಿಯಾಗಿದ್ದಾರೆ. ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಕರ್ನಾಟಕದಲ್ಲಿ ಒಟ್ಟು 11 ಮಂದಿ ಡಿಸ್ಚಾರ್ಜ್ ಆಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಈಗ ಬೆಳಗಿನ ವರದಿ ಮಾತ್ರ ಬಂದಿದ್ದು ಪ್ರತಿದಿನ ಸಂಜೆ ಮತ್ತೊಂದು ವರದಿ ಬಿಡುಗಡೆಯಾಗುತ್ತದೆ.

    ಕೋವಿಡ್19ಇಂಡಿಯಾ ವೆಬ್‍ಸೈಟ್ ಪ್ರಕಾರ ದೇಶದಲ್ಲಿ ಒಟ್ಟು 3,770 ಕೊರೊನಾ ಪಾಸಿಟಿವ್ ಪ್ರಕರಣ ಬಂದಿದ್ದು, 104 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 294 ಮಂದಿ ಗುಣಮುಖರಾಗಿದ್ದು, 3,332 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಾರಾಷ್ಟ್ರದಲ್ಲಿ 635, ತಮಿಳುನಾಡು 485, ದೆಹಲಿ 445, ಕೇರಳ 306, ತೆಲಂಗಾಣ 272, ಉತ್ತರ ಪ್ರದೇಶ 234, ಆಂಧ್ರಪ್ರದೇಶ 226, ರಾಜಸ್ಥಾನ 210, ಮಧ್ಯಪ್ರದೇಶ 179, ಕರ್ನಾಟಕ 144 ಮಂದಿಗೆ ಕೊರೊನಾ ಬಂದಿದೆ.