Tag: ಬೆಂಗಳೂರು ಕರಗ

  • ಕರಗ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

    ಕರಗ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

    ಬೆಂಗಳೂರು: ಕೆಲವೇ ಗಂಟೆಗಳಲ್ಲಿ ಶುರುವಾಗಲಿರುವ ಕರಗ ಉತ್ಸವದಲ್ಲಿ (Bengaluru Karaga) ಸಿಎಂ ಸಿದ್ದರಾಮಯ್ಯ (Sidddaramaiah) ಭಾಗಿಯಾದರು. ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿ ಸಿಎಂ ವಿಶೇಷ ಪೂಜೆ ಸಲ್ಲಿಸಿದರು.

    ಈ ಬಾರಿಯ ಕರಗ ಉತ್ಸವವು ಒಂದು ಗಂಟೆ ತಡವಾಗಿ ಆರಂಭವಾಗಲಿದ್ದು, ಮಧ್ಯರಾತ್ರಿ 1:30ಕ್ಕೆ ಕರಗ ಆರಂಭವಾಗಲಿದೆ. ಬೆಳಗ್ಗೆ 7:30 ರಿಂದ 8 ಗಂಟೆಗೆ ಕರಗ ಮತ್ತೆ ದೇವಾಲಯ ತಲುಪಲಿದೆ. ಇದನ್ನೂ ಓದಿ: ಕರಗ ಶಕ್ತೋತ್ಸವಕ್ಕೆ ರಾತ್ರಿ 12:30ಕ್ಕೆ ಚಾಲನೆ, ಸಿಎಂ-ಡಿಸಿಎಂ ಬರ್ತಾರೆ: ರಾಮಲಿಂಗಾರೆಡ್ಡಿ


    ಬೆಂಗಳೂರು ಕರಗ ಉತ್ಸವ ಶಕ್ತೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ನಡೆದಿದೆ. ಈ ನಡುವೆ ವರುಣಾಗಮನವಾಗಿದ್ದು, ಮಳೆಯ ನಡುವೆಯೇ ರಥಕ್ಕೆ ಸಿಂಗಾರ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತಿದೆ.

  • ಕರಗ ಶಕ್ತೋತ್ಸವಕ್ಕೆ ರಾತ್ರಿ 12:30ಕ್ಕೆ ಚಾಲನೆ, ಸಿಎಂ-ಡಿಸಿಎಂ ಬರ್ತಾರೆ: ರಾಮಲಿಂಗಾರೆಡ್ಡಿ

    ಕರಗ ಶಕ್ತೋತ್ಸವಕ್ಕೆ ರಾತ್ರಿ 12:30ಕ್ಕೆ ಚಾಲನೆ, ಸಿಎಂ-ಡಿಸಿಎಂ ಬರ್ತಾರೆ: ರಾಮಲಿಂಗಾರೆಡ್ಡಿ

    – ಬೆಂಗಳೂರು ಕರಗಕ್ಕೆ ಹಣ ಬಿಡುಗಡೆ ಗೊಂದಲಕ್ಕೆ ತೆರೆ ಎಳೆದ ಸಚಿವ

    ಬೆಂಗಳೂರು: ಕರಗ (Bengaluru Karaga) ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ ಎಂದು ಗೊಂದಲಗಳಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತೆರೆ ಎಳೆದರು.

    ಬೆಂಗಳೂರು ಕರಗ ಉತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಕರಗ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಧರ್ಮರಾಯ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಇದನ್ನೂ ಓದಿ: ಕುಲಗೋಡ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಹ್ಲಾದ್ ಜೋಶಿ

    ಬಳಿಕ ಮಾತನಾಡಿದ ಅವರು, ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ. ನಾನೇ ಬಂದು ಎಲ್ಲ ವ್ಯವಸ್ಥೆ ನೋಡಿದ್ದೀನಿ. ಬಹಳ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಕೂಡ ಕರಗದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕರಗ ಅಂದ್ರೆ ಬಹಳ ಫೇಮಸ್. ಪುಟ್ಟ ನಗರವಾದಾಗಿನಿಂದಲೂ ಕರಗ ನಡೀತಾ ಬರ್ತಾ ಇದೆ. ಲಕ್ಷಾಂತರ ಜನರು ಕರಗ ನೋಡಲು ಬರ್ತಾರೆ. ಶಾಸಕರು, ಪೊಲೀಸ್, ಬಿಬಿಎಂಪಿ ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

    ಹಣ ಬಿಡುಗಡೆ ಗೊಂದಲ ವಿಚಾರವಾಗಿ ಮಾತನಾಡಿ, ಸಮಿತಿ ಅವಧಿ ಮುಗಿದಿದೆ. ಸಮಿತಿ ಅಧ್ಯಕ್ಷರು ಕೋರ್ಟ್‌ಗೆ ಹೋಗಿ ಪರ್ಮಿಷನ್ ತಂದಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಅವರಿಗೆ ಹಣ ಕಳಿಸುವಂತಿರಲಿಲ್ಲ. ಹೀಗಾಗಿ, ಎಡಿಸಿ ಜಗದೀಶ್ ನಾಯ್ಕ್ಗೆ ಖಾತೆಗೆ ಹಣ ಹಾಕಿದ್ದೀವಿ. ಕೋರ್ಟ್ ಆದೇಶದ ಪ್ರಕಾರವೇ ಮಾಡಿದ್ದೇವೆ. ಎ ಗ್ರೇಡ್ ದೇವಾಸ್ಥಾನದ ಉಸ್ತುವಾರಿ ನಾನು ನೋಡ್ಕೋತೀನಿ. ಈ ದೇವಸ್ಥಾನ ಬಿ ಗ್ರೂಪ್‌ಗೆ ಬರುತ್ತಾರೆ. ಹೀಗಾಗಿ ಬಿ ಗ್ರೇಡ್ ದೇವಸ್ಥಾನದ ಉಸ್ತುವಾರಿ ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ. ಈಗ ಎಲ್ಲ ಗೊಂದಲ ಬಗೆಹರಿದಿದೆ. ಎಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ ಎಂದರು. ಇದನ್ನೂ ಓದಿ: ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಅಂದ್ರೆ ತುಂಬಾನೇ ಇಷ್ಟ: ಶಿವಣ್ಣ

  • ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ

    ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ

    ಬೆಂಗಳೂರು: ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ (Bengaluru Karaga) ಉತ್ಸವ ನಾಳೆಯಿಂದ ಜರುಗಲಿದೆ. ಧರ್ಮರಾಯ ದೇವಸ್ಥಾನದಲ್ಲಿ ಏ.14ರ ವರೆಗೂ ಕರಗ ಉತ್ಸವ ನಡೆಯಲಿದೆ.

    ನಾಳೆ ರಾತ್ರಿ 10 ಗಂಟೆಗೆ ಕರಗ ಆಚರಣೆಗಳು ಶುರುವಾಗಲಿವೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಕರಗ ಹೊರುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಯಡವಟ್ಟು – ಕರಗ ಸಂಭ್ರಮಕ್ಕೆ ಅಡ್ಡಿ!

    ಈ ಬಾರಿ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಏಪ್ರಿಲ್ 4 ರಂದು ರಥೋತ್ಸವ ಮತ್ತು ಧ್ವಜಾರೋಹಣ ನಡೆಯಲಿದೆ. ಏ.5 ರಿಂದ ಏ.8 ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಇರಲಿದೆ. ಏ.9 ರಂದು ಆರತಿ ದೀಪಗಳು, ಏ.10 ರ ಗುರುವಾರ ಹಸಿ ಕರಗ, ಏ.11 ರಂದು ಹೊಂಗಲು ಸೇವೆ, ಏ.12 ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ, ಏ.13 ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ, ಏ.14 ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ಇರಲಿದೆ.

    ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆಯಿಂದಲೇ ದೇವಾಲಯದ ಸ್ವಚ್ಛತಾ ಕಾರ್ಯ ನಡೆದಿದೆ. ಸಿಬ್ಬಂದಿಯು ದೇವಾಲಯ, ರಥ ಸೇರಿದಂತೆ ಸಂಪೂರ್ಣ ಶುಚಿಗೊಳಿಸುತ್ತಿದ್ದಾರೆ. ಕರಗ ಆಚರಣೆಗಳು ನಾಳೆ ರಾತ್ರಿ 10 ಗಂಟೆಗೆ ಶುರುವಾಗಲಿವೆ. ಹೀಗಾಗಿ ರಸ್ತೆ ತುಂಬೆಲ್ಲಾ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

  • ಬಿಬಿಎಂಪಿ ಯಡವಟ್ಟು – ಕರಗ ಸಂಭ್ರಮಕ್ಕೆ ಅಡ್ಡಿ!

    ಬಿಬಿಎಂಪಿ ಯಡವಟ್ಟು – ಕರಗ ಸಂಭ್ರಮಕ್ಕೆ ಅಡ್ಡಿ!

    – ಕರಗ ಸಾಗುವ ದಾರಿಯಲ್ಲಿ ಕಾಮಗಾರಿ
    – ಕರಗ ಸಮಿತಿಗೆ 800 ವರ್ಷಗಳ ಇತಿಹಾಸ ಮುರಿಯುವ ಭೀತಿ

    ಬೆಂಗಳೂರು: ಬೆಂಗಳೂರು ಇತಿಹಾಸದಲ್ಲಿ ಕರಗಕ್ಕೆ ತನ್ನದೇ ಆದ ಮಹತ್ವ ಇದೆ. ಪ್ರತಿ ವರ್ಷ ಕೂಡ ಕರಗ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಸಾಂಪ್ರದಾಯಿಕ ಆಚರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿಯ ಬಿಬಿಎಂಪಿ (BBMP) ಯಡವಟ್ಟಿನಿಂದ ಕರಗ ಇತಿಹಾಸದ ಕೆಲ ಸಂಪ್ರದಾಯವನ್ನ ಮುರಿಯುವ ಸ್ಥಿತಿ ಎದುರಾಗಿದೆ. ಕರಗ ಸಮಿತಿ ಟೆನ್ಷನ್ ಹೆಚ್ಚು ಮಾಡಿದೆ.

    ಬೆಂಗಳೂರು ಕರಗ (Bengaluru Karaga) ನಗರದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತನ್ನದೇ ಭಕ್ತರು, ಪ್ರಸಿದ್ಧಿಯನ್ನ ಹೊಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಅದ್ದೂರಿಯಾಗಿ ನೆರವೇರುತ್ತಾ ಬರುತ್ತಲೇ ಇದೆ. ಆದರೆ ಈ ಬಾರಿ ವಿಶ್ವವಿಖ್ಯಾತ ಕರಗಕ್ಕೆ ಬಿಬಿಎಂಪಿಯೇ ಅಡಚಣೆ ಮಾಡಿದಂತಿದೆ. ನೂರಾರು ವರ್ಷಗಳಿಂದ ನಡೆದು ಬಂದಿರುವ ಕೆಲವೊಂದು ಸಂಪ್ರದಾಯಗಳನ್ನ ಬದಲಾವಣೆ ಮಾಡಬೇಕಾದ ಗೊಂದಲಕ್ಕೆ ಕರಗ ಸಮಿತಿ ಸಿಲುಕಿದೆ. ಇದನ್ನೂ ಓದಿ: ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    ಎಸ್.ಪಿ ರೋಡ್, ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಕಳೆದ ಮೂರು ತಿಂಗಳಿನಿಂದ ಒಳಚರಂಡಿ, ರಸ್ತೆ ಕಾಮಗಾರಿ ಆರಂಭಿಸಿದ ಬಿಬಿಎಂಪಿ ಇನ್ನೂ ಕೂಡ 10% ನಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕರಗ ಆರಂಭವಾಗೋಕೆ ಕೇವಲ 25 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ 3 ತಿಂಗಳಲ್ಲಿ ಮುಗಿಯದ ಕೆಲಸ 25 ದಿನದಲ್ಲಿ ಆಗೋಕೆ ಸಾಧ್ಯನಾ ಎನ್ನುವ ಪ್ರಶ್ನೆ ಮೂಡಿದೆ.

    ಕರಗ ಶಕ್ತ್ಯೋತ್ಸವ ದಿನ ರಥೋತ್ಸವ, ಕರಗ ಶಕ್ತ್ಯೋತ್ಸವ ಕೂಡ ಇದೇ ಮಾರ್ಗದಲ್ಲಿ ಸಾಗಬೇಕು. ಆದರೆ ಇಡೀ ರಸ್ತೆಯನ್ನ ಸಂಪೂರ್ಣ ಅಗೆದು ಕಾಮಗಾರಿ ಶುರು ಮಾಡಿರುವ ಕಾರಣ ಸಾಗಿಹೋಗೋದು ಸಾಧ್ಯವೇ ಇಲ್ಲ. ಇದರಿಂದ ಬೇರೆ ಮಾರ್ಗಗಳಲ್ಲಿ ಸಾಗಬೇಕಾದರೆ, ಇತಿಹಾಸವನ್ನ ಮುರಿದಂತಾಗಲಿದೆ. ಇದೇ ದಾರಿಯಲ್ಲಿ ಹೋಗುವುದು ಅಸಾಧ್ಯ. ಹೀಗಾಗಿ, ಮುಂದ್ಹೇಗೆ ಎನ್ನುವ ಚಿಂತೆ ಸಮಿತಿಗೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ಲಕ್ಷಾಂತರ ಜನ ಸಂಭ್ರಮದಲ್ಲಿ ಸೇರುವ ಕಾರಣ ಸಾಕಷ್ಟು ಅಪಾಯಗಳು ಈ ಮಾರ್ಗದಲ್ಲಿವೆ. ಅನೇಕ ಕಡೆ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳನ್ನ ಅಗೆದಿರುವ ಕಾರಣ ಬರುವವರು ಕತ್ತಲೆಯಲ್ಲಿ ಕೊಂಚ ಯಾಮಾರಿದರೂ ಅಪಾಯದ ಸಾಧ್ಯತೆ ಇದೆ.

  • ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    ಏ.4ರಿಂದ 14ರವರೆಗೆ ಬೆಂಗಳೂರು ಕರಗ – 20 ಲಕ್ಷ ಜನ ಭಾಗಿ ನಿರೀಕ್ಷೆ

    – 15ನೇ ಬಾರಿಗೆ ಕರಗ ಹೊರಲಿರುವ ಎ.ಜ್ಞಾನೇಂದ್ರ

    ಬೆಂಗಳೂರು: ಏ.4ರಿಂದ ಏ.14ರವರೆಗೆ ಬೆಂಗಳೂರಿನ ಐತಿಹಾಸಿಕ ಕರಗ (Bengaluru Karaga) ಮಹೋತ್ಸವ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ (A Jnanendra) ಕರಗ ಹೊರಲಿದ್ದಾರೆ.

    ಸತತ 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿರುವ ಎ.ಜ್ಞಾನೇಂದ್ರ, ಈ ಸಲ 15ನೇ ಬಾರಿಗೆ ಕರಗ ಹೊರಲಿದ್ದಾರೆ. ಈ ಬಾರಿ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ. ಏ.4ರಂದು ರಥೋತ್ಸವ ಹಾಗೂ ಧ್ವಜಾರೋಹಣ ನಡೆಯಲಿದ್ದು, ಏ.5ರಿಂದ ಏ.8ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಇದನ್ನೂ ಓದಿ: Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

    ಏ.9ರಂದು ಆರತಿ ದೀಪಗಳು, ಏ.10ರ ಗುರುವಾರ ಹಸೀ ಕರಗ, ಏ.11ರಂದು ಹೊಂಗಲು ಸೇವೆ, ಏ.12ರ ಶನಿವಾರದಂದು ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವ, ಏ.13ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ ಮತ್ತು ಏ.14ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ನೆರವೇರಲಿದೆ. ಇದನ್ನೂ ಓದಿ: ಮಾ.11ರಿಂದ ರಾಜ್ಯದಲ್ಲಿ 4 ದಿನ ಗುಡುಗು ಸಹಿತ ಮಳೆ ಸಾಧ್ಯತೆ

  • ಏ.4ರಿಂದ 14ರವರೆಗೆ ಬೆಂಗಳೂರು ಕರಗ ಮಹೋತ್ಸವ

    ಏ.4ರಿಂದ 14ರವರೆಗೆ ಬೆಂಗಳೂರು ಕರಗ ಮಹೋತ್ಸವ

    – ಏ.12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ

    ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga Mahotsav) ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್ 4 ರಿಂದ 14ರವರೆಗೆ ದ್ರೌಪತಮ್ಮ ಶಕ್ತ್ಯೋತ್ಸವ ಹನ್ನೊಂದು ದಿನಗಳ ಕಾಲ ನಡೆಯಲಿದೆ.

    ಇನ್ನು ಈ ಬಾರಿಯೂ ಕರಗದ ಪೂಜಾರಿ ಎ.ಜ್ಞಾನೇಂದ್ರ (A Jnanendra) ಕರಗವನ್ನು ಹೊರಲಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಬೆಂಗಳೂರು ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಹೊರುತ್ತಿದ್ದಾರೆ. ಈ ಬಾರಿ ಕರಗ ಹೊತ್ತರೇ 15ನೇ ಬಾರಿ ಕರಗ ಹೊತ್ತಂತೆ ಆಗುತ್ತದೆ. ಜ.27ರಂದು ರಾತ್ರಿ ನಡೆದ ಸಭೆಯಲ್ಲಿ ಜ್ಞಾನೇಂದ್ರ ಸ್ವಾಮಿಯನ್ನು ಮತ್ತೆ ಕರಗ ಹೊರಲು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಅಕ್ರಮ ಮತಾಂತರವು ಡಕಾಯಿತಿ, ಅತ್ಯಾಚಾರ, ಕೊಲೆಯಷ್ಟು ಗಂಭೀರ ಅಪರಾಧವಲ್ಲ: ಸುಪ್ರೀಂಕೋರ್ಟ್

    ಸಭೆಯಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಣಾಧಿಕಾರಿ ನವೀನ್, ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್, ಖಜಾಂಚಿ ಜಿ.ಬಾಲಕೃಷ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಮರನಾರಾಯಣ್ ಸಭೆ ನಡೆಸಿ ದಿನಾಂಕ ಹಾಗೂ ಕರಗ ಹೊರುವವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಸತತ 15ನೇ ಬಾರಿ ಕರಗ ಹೊರುತ್ತಿರುವ ಕರಗದ ಪೂಜಾರಿ ಎ. ಜ್ಞಾನೇಂದ್ರರಿಗೆ ಇದು ಕೊನೆಯ ಕರಗ ಶಕ್ತ್ಯೋತ್ಸವ ಆಗಿದೆ. ಇದನ್ನೂ ಓದಿ: Uttar Pradesh| ಧಾರ್ಮಿಕ ಉತ್ಸವದಲ್ಲಿ ವೇದಿಕೆ ಕುಸಿದು ಐವರು ಸಾವು – 40 ಮಂದಿಗೆ ಗಾಯ

  • ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ಆರತಿ ವಿವಾದ – ಸಂಧ್ಯಾರತಿ ಎಂದು ಕರೆಯುವಂತೆ ಪಟ್ಟು

    ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ಆರತಿ ವಿವಾದ – ಸಂಧ್ಯಾರತಿ ಎಂದು ಕರೆಯುವಂತೆ ಪಟ್ಟು

    ಮಂಡ್ಯ/ಬೆಂಗಳೂರು: ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ಆರತಿ ಕೂಡ ವಿವಾದದ ವಸ್ತುವಾಗಿ ಮಾರ್ಪಟ್ಟಿದೆ. ಸಲಾಂ ಆರತಿ ಎಂದು ಕರೆಯುವ ಬದಲು ಸಂಧ್ಯಾರತಿ ಎಂದು ಕರೆಯುವಂತೆ ಮಂಡ್ಯ ಜಿಲ್ಲಾ ಧಾರ್ಮಿಕ ಪರಿಷತ್ ಒತ್ತಾಯಿಸಿದೆ.

    ಈ ಬೆನ್ನಲ್ಲೇ, ದೀವಟಿಗೆ ಸಲಾಂ ವಿಚಾರವಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಜಿಲ್ಲಾಡಳಿತ ವರದಿ ಕೇಳಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಮನವಿಯನ್ನು ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಿದೆ. ಈ ಸಂಬಂಧ ಸಭೆ ನಡೆಸಿದ ದೇಗುಲದ ಸ್ಥಾನಿಕರು, ಸಂಜೆ ವೇಳೆ ನಡೆಯುತ್ತಿದ್ದ ದೀವಟಿಗೆ ಸಲಾಂ ಆರತಿ ಕೈಬಿಟ್ಟು, ಅದರ ಬದಲುಸಂಧ್ಯಾರತಿ ಎಂದು ಹೆಸರಿಡಬಹುದು ಎಂದು ಲಿಖಿತ ರೂಪದಲ್ಲಿ ವರದಿ ನೀಡಿದ್ದಾರೆ. ನಮ್ಮ ಅಭಿಪ್ರಾಯವನ್ನು ಸರ್ಕಾರ ಪರಿಗಣಿಸುವ ವಿಶ್ವಾಸವಿದೆ ಎಂದು ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇಗುಲದ ಸ್ಥಾನಿಕರಾದ ಶ್ರೀನಿವಾಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

    ಇತ್ತ ಬೆಂಗಳೂರಿನಲ್ಲಿ ವಿಶ್ವಪ್ರಸಿದ್ಧ ಬೆಂಗಳೂರು ಕರಗ ಉತ್ಸವ ಮೂರ್ತಿಯನ್ನು ದರ್ಗಾಗೆ ಕೊಂಡೊಯ್ಯುವುದನ್ನು ಕೆಲ ಹಿಂದೂ ಸಂಘಟನೆಗಳು ವಿರೋಧ ಮಾಡಿವೆ. ಆದ್ರೇ, ಇದಕ್ಕೆ ಕರಗ ಉತ್ಸವ ಸಮಿತಿ ಡೋಂಟ್ ಕೇರ್ ಎಂದಿದೆ. ನಾವು ನಮ್ಮ ಸಂಪ್ರದಾಯವನ್ನು ಮುಂದುವರೆಸುತ್ತೇವೆ. ಇದುವರೆಗೂ ಯಾರು ಬಂದು ನಮ್ಮನ್ನು ಭೇಟಿ ಮಾಡಿಲ್ಲ. ಈಗಾಗಲೇ ಮೌಲ್ವಿಗಳು ಬಂದು ಆಹ್ವಾನ ನೀಡಿ ಹೋಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಸ್ತಾನ್ ಸಾಬ್ ದರ್ಗಾಗೆ ಕರಗ ಉತ್ಸವ ಮೂರ್ತಿ ತೆರಳಲಿದೆ. ಇದು ಸಾಮರಸ್ಯದ ಸಂಕೇತ ಎಂದು ಕರಗ ಉತ್ಸವ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಂಧ್ರ ಸರ್ಕಾರದಿಂದ ವಿಶೇಷ ಆದ್ಯತೆ

  • ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು: ಕೊರೊನಾ ಭೀತಿ ನಡುವೆಯೂ ನಿಗದಿಯಂತೆ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಟೂರ್ನಿ ನಡೆಯುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಕೊರೊನಾ ದೇಶದಲ್ಲಿ ಹಬ್ಬುತ್ತಿರುವ ಪರಿ ನೋಡಿದರೆ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಶುರುವಾಗಿದೆ.

    ಉದ್ಯಾನಗರಿಯಲ್ಲಿ ನಾಲ್ಕು ಪಾಸಿಟೀವ್ ಕೇಸ್‍ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಬೆಂಗಳೂರು ಸಿದ್ಧವಿಲ್ಲ. ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ರ ಬರೆದಿದ್ದಾರೆ.

    ಮಾರ್ಚ್ 29ರಿಂದ ಆರಂಭವಾಗಬೇಕಿರುವ ಐಪಿಎಲ್‍ನಲ್ಲಿ ಆರ್‌ಸಿಬಿಯ 7 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಬೇಕಿದೆ. ಐಪಿಎಲ್ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿರುವ ಪ್ರಸಿದ್ಧ ಕರಗ ಮಹೋತ್ಸವವನ್ನು ಮುಂದೂಡಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

  • ವೈಭವಪೂರ್ಣವಾಗಿ ನಡೆಯಿತು ಬೆಂಗಳೂರಿನ ಕರಗ ಮಹೋತ್ಸವ

    ವೈಭವಪೂರ್ಣವಾಗಿ ನಡೆಯಿತು ಬೆಂಗಳೂರಿನ ಕರಗ ಮಹೋತ್ಸವ

    ಬೆಂಗಳೂರು: ಚೈತ್ರ ಪೂರ್ಣಿಮೆಯ ದಿನವಾದ ಶುಕ್ರವಾರ ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಂಗಳೂರು ಕರಗ ಮಹೋತ್ಸವ ವೈಭವಪೂರ್ಣವಾಗಿ ನಡೆಯಿತು.

    ಕರಗ ಹೊತ್ತಿದ್ದ ಅರ್ಚಕ ಎನ್. ಮನು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದರು.

    ಅವೆನ್ಯೂ ರಸ್ತೆಯಿಂದ ಆರಂಭವಾದ ಕರಗದ ಮೆರವಣಿಗೆ, ಕಬ್ಬನ್ ಪಾರ್ಕ್ ಆಂಜನೇಯ ದೇವಾಲಯ, ಸಿದ್ದಣ್ಣ ಗಲ್ಲಿಯಿಂದ ಅವೆನ್ಯೂ ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆ ಮೂಲಕ ಬೆಳಗಿನ ಜಾವ 6 ಗಂಟೆಗೆ ಮತ್ತೆ ದೇವಾಲಯ ತಲುಪಿತು. ಈ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು.

  • ಸಿಲಿಕಾನ್ ಸಿಟಿಲಿ ಮರುಕಳಿಸಲಿದೆ ಇತಿಹಾಸ – ಮಧ್ಯರಾತ್ರಿಯಿಂದ ಹೂವಿನ ಕರಗ

    ಸಿಲಿಕಾನ್ ಸಿಟಿಲಿ ಮರುಕಳಿಸಲಿದೆ ಇತಿಹಾಸ – ಮಧ್ಯರಾತ್ರಿಯಿಂದ ಹೂವಿನ ಕರಗ

    – ಧರ್ಮರಾಯ ದೇಗಲದ ಬಳಿ ಭಕ್ತರ ದಂಡು

    ಬೆಂಗಳೂರು: ಬೆಂಗಳೂರಿನಲ್ಲಿ ಈಗ ಕರಗದ ಸಂಭ್ರಮ. ಸಿಲಿಕಾನ್ ಸಿಟಿ ವಿಶ್ವದ ಹೈ-ಫೈ ಸಿಟಿಯಲ್ಲಿ ಒಂದೆನಿಸಿಕೊಂಡಿದ್ದರು ನಮ್ಮ ಸಂಸ್ಕøತಿಯ ತಾಯಿ ಬೇರನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ.

    ಗಾರ್ಡನ್ ಸಿಟಿಯ ಐತಿಹಾಸಿಕ ಉತ್ಸವಗಳಲ್ಲಿ ಕರಗ ಸಹ ಒಂದಾಗಿದೆ. ಈ ದಿನ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ದ್ರೌಪದಿಯೇ ಧರೆಗಿಳಿಯುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೌದು, ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಕೌಂಟ್ ಡೌನ್ ಶುರುವಾಗಿದೆ. ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯ ನವವಧುವಿನಂತೆ ಸಿಂಗಾರಗೊಂಡಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ.

    ಬೆಳ್ಳಿಗ್ಗೆಯಿಂದಲೇ ಪೂಜೆಯಲ್ಲಿ ನಿರತರಾಗಿರುವ ಅರ್ಚಕ ಮನು ನಾಗರಾಜ್, ಇಂದು ಮಧ್ಯರಾತ್ರಿ 12:30ಕ್ಕೆ ಹೂವಿನ ಕರಗ ಹೊತ್ತು ದೇವಾಲಯದಿಂದ ಹೊರಡಲಿದ್ದಾರೆ. ಅವೆನ್ಯೂ ರಸ್ತೆಯಿಂದ ಆರಂಭವಾಗಲಿರುವ ಕರಗದ ಮೆರವಣಿಗೆ, ಕಬ್ಬನ್ ಪಾರ್ಕ್‍ನ ಆಂಜನೇಯ ದೇವಾಲಯ, ಸಿದ್ದಣ್ಣ ಗಲ್ಲಿಯಿಂದ ಅವೆನ್ಯು ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆ ಮೂಲಕ ಬೆಳಗಿನ ಜಾವ 6 ಗಂಟೆಗೆ ಮತ್ತೆ ದೇವಾಲಯ ತಲುಪಲಿದೆ. ಈ ಬಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಟನ್‍ಪೇಟೆ ಬದಲು ಅಕ್ಕಿಪೇಟೆ ಮಾರ್ಗವಾಗಿ ಹೂವಿನ ಕರಗ ತೆರಳಲಿದೆ. ಈ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಲಿದ್ದಾರೆ.