Tag: ಬೆಂಗಳೂರು. ಆರ್ ಅಶೋಕ್

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಛತ್ರಗಳ ಮುಂಗಡ ಹಣ ವಾಪಸ್ಸಿಗೆ ಆದೇಶ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಛತ್ರಗಳ ಮುಂಗಡ ಹಣ ವಾಪಸ್ಸಿಗೆ ಆದೇಶ

    ಬೆಂಗಳೂರು: ಕಲ್ಯಾಣ ಮಂಟಪಕ್ಕೆ ನೀಡಲಾಗಿದ್ದ ಹಣವನ್ನು ವಾಪಸ್ ಹಿಂದಿರುಗಿಸುವಂತೆ ಮಾಲೀಕರಿಗೆ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.

    ಹೌದು. ಲಾಕ್‍ಡೌನ್ ಹೊತ್ತಲ್ಲಿ ಮದುವೆ ಸೇರಿ ಅನೇಕ ಶುಭ ಕಾರ್ಯಗಳು ರದ್ದಾಗಿದ್ದವು. ಆದರೆ ಕಲ್ಯಾಣ ಮಂಟಪಗಳಿಗೆ ನೀಡಿದ್ದ ಅಡ್ವಾನ್ಸ್ ಹಣ ವಾಪಸ್ ಆಗಿರಲಿಲ್ಲ. ಈ ಬಗ್ಗೆ ಅನೇಕ ಮಂದಿ, ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ಸಮಸ್ಯೆ ಹೇಳಿಕೊಂಡಿದ್ದರು.

    ಸಾಲ-ಸೋಲ ಮಾಡಿ ನೀಡಿದ್ದ ಮುಂಗಡ ಹಣವನ್ನು ದಯಮಾಡಿ ಕಲ್ಯಾಣ ಮಂಟಪಗಳ ಮಾಲೀಕರಿಂದ ವಾಪಸ್ ಕೊಡಿಸಿ ಎಂದು ಮನವಿ ಮಾಡಿದ್ರು. ಇದನ್ನು ನಿಮ್ಮ ಪಬ್ಲಿಕ್ ಟಿವಿ ಸರ್ಕಾರಕ್ಕೆ ಗಮನಕ್ಕೆ ತಂದಿತ್ತು. ಇದಕ್ಕೆ ಇಂದು ಸ್ಪಂದಿಸಿದ ಸಚಿವ ಆರ್ ಅಶೋಕ್, ತೆರಿಗೆ ಮುರಿದುಕೊಂಡು ಉಳಿದ ಮುಂಗಡ ಹಣ ವಾಪಸ್ ಮಾಡುವಂತೆ ಮದುವೆ ಛತ್ರದ ಮಾಲೀಕರಿಗೆ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದ್ದಾರೆ.