Tag: ಬೆಂಗಳೂರು ಅಪರಾಧ

  • ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

    ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಮೂವರ ನಡುವೆ ಜಗಳ ಶುರುವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಉಪ್ಪಾರಪೇಟೆಯಲ್ಲಿ ನಡೆದಿದೆ.

    ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್ (33), ಗಣೇಶ್ ಹಾಗೂ ಮತ್ತೋರ್ವ ಮೂವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಪ್ರತಿದಿನ ಬೆಂಗಳೂರಿನ ಬೇರೆ ಬೇರೆ ಕಡೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಉಪ್ಪಾರಪೇಟೆಯ ಭಾಗ್ಯ ವಿನಾಯಕ ದೇವಸ್ಥಾನದ ಪಕ್ಕದಲ್ಲಿ ಬಂದು ಮೂವರು ಕೂತಿದ್ದಾರೆ. ಹೀಗೆ ಕುಳಿತಿದ್ದವರ ಮಧ್ಯೆ ಸಿಗರೇಟ್ ವಿಚಾರಕ್ಕೆ ಕಿರಿಕ್ ಆಗಿದೆ. ನೋಡ ನೋಡ್ತಿದ್ದಂತೆ ಆರೋಪಿ ಗಣೇಶ್, ಮಲ್ಲಿನಾಥ್ ಬಿರಾದರ್ ಮತ್ತು ಮತ್ತೋರ್ವನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಗಣೇಶ್‌ಗೂ ಗಾಯವಾಗಿದ್ದು, ಸ್ಥಳೀಯರ ಸಹಾಯದಿಂದ ಮೂವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಮಲ್ಲಿನಾಥ್ ಬಿರಾದರ್ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಮರ್ಮಾಂಗಕ್ಕೆ ಚಾಕು ಇರಿತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆರೋಪಿ ಗಣೇಶ್‌ಗೂ ಗಾಯಗಳಾಗಿವೆ. ಮೇಲ್ನೋಟಕ್ಕೆ ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆ ಎನ್ನಲಾಗುತ್ತಿದೆ. ಸದ್ಯ ಯಾರು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.

    ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಸಿಧು ಪತ್ನಿಗೆ ಸ್ತನ ಕ್ಯಾನ್ಸರ್- ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಭಾವುಕ ಪತ್ರ