Tag: ಬೆಂಗಲೂರು

  • ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದರೆ ಪ್ರೀತಿಯ ಅಪ್ಪ, ಅಮ್ಮಗೆ ಮಗಳು ಸಾನ್ವಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.

    sudeep priya

    ಸುದೀಪ್ ಹಾಗೂ ಪ್ರಿಯಾ 2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2004ರಲ್ಲಿ ಈ ದಂಪತಿಗೆ ಸಾನ್ವಿ ಜನಿಸಿದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 20 ವರ್ಷ ಕಳೆದಿದ್ದು, ಈ ಹಿನ್ನೆಲೆ ಸಾನ್ವಿ ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಹಾಗೂ ಪ್ರಿಯಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:  ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

    ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನ್ವಿ ಅಪ್ಪ, ಅಮ್ಮನ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕಿಚ್ಚ ದಂಪತಿಗೆ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೂ ಓದಿ:  ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?

     

    View this post on Instagram

     

    A post shared by Only Sudeepism (@only_sudeepism)

    ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಮನೆಯಲ್ಲಿಯೇ ಸರಳವಾಗಿ ಸುದೀಪ್ ದಂಪತಿ ಕೇಕ್ ಕಟ್ ಮಾಡಿದ್ದು, ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಶುಭಾ ಪೂಂಜಾಗೆ ಹುಟ್ಟುಹಬ್ಬದ ಸಂಭ್ರಮ – ಚಿನ್ನಿಬಾಂಬ್ ಜೊತೆ ಫೋಟೋ ಶೇರ್

    ಶುಭಾ ಪೂಂಜಾಗೆ ಹುಟ್ಟುಹಬ್ಬದ ಸಂಭ್ರಮ – ಚಿನ್ನಿಬಾಂಬ್ ಜೊತೆ ಫೋಟೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಿಗ್‍ಬಾಸ್ ಮನೆಯಿಂದ ಕಳೆದ ವಾರವಷ್ಟೇ ಎಲಿಮಿನೇಟ್ ಆದ ಶುಭಾ ಪೂಂಜಾ ತಮ್ಮ ಭಾವಿ ಪತಿ ಜೊತೆ ಟ್ರಿಪ್‍ಗೆ ಹಾರಿದ್ದಾರೆ.

     

    ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಜಾಲಿ ಮೂಡ್‍ನಲ್ಲಿ ತಮ್ಮ ಭಾವಿ ಪತಿ ಜೊತೆ ಪ್ರವಾಸ ಬೆಳೆಸಿದ್ದು, ಸುಮಂತ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಬೀಚ್ ಬಳಿ ಶುಭಾ ಹಾಗೂ ಸುಮಂತ್ ಕಾಣಿಸಿಕೊಂಡಿದ್ದು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಿಮ್ಮೆಲ್ಲರ ಬರ್ತ್‍ಡೇ ವಿಶಸ್‍ಗೆ ತುಂಬಾನೇ ಥ್ಯಾಂಕ್ಯು. ನಿಮ್ಮೆಲ್ಲರ ಶುಭಾಶಯಗಳನ್ನು ಓದುತ್ತಿದ್ದೇನೆ. ಎಲ್ಲರಿಗೂ ತುಂಬಾ ಧನ್ಯವಾದ. ಅದರಲ್ಲಿಯೂ ಮುದ್ದಾದ ವೀಡಿಯೋಗಳನ್ನು ಮಾಡಿದ ನನ್ನ ಎಲ್ಲಾ ಮುದ್ದಾದ ಅಭಿಮಾನಿಗಳಿಗೆ ವಿಶೇಷವಾದ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಕಳೆದ ವಾರವಷ್ಟೇ ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಜಾಗೆ ವಾಟ್ ನೆಕ್ಷ್ಟ್ ಎಂದು ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶುಭಾ ಈ ವಾರ ನನ್ನ ಬರ್ತ್‍ಡೇ ಇದೆ. ಹಾಗಾಗಿ ನನ್ನ ಫ್ರೆಂಡ್ಸ್ ಜೊತೆ ಔಟ್ ಆಫ್ ಸ್ಟೇಷನ್‍ಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದೇನೆ ಎಂದಿದ್ದರು. ಆಗ ಸುದೀಪ್ ಬರ್ತ್‍ಡೇಯನ್ನು ಸೆಲೆಬ್ರೆಟ್ ಮಾಡಿ ಆದರೆ ಏನಾದರೂ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ ಫಿನಾಲೆಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

    ನಂತರ 6 ತಿಂಗಳು ಫಿಯಾನ್ಸೆ ನನಗೆ ಸಪೋರ್ಟ್ ಮಾಡಿ ಬಿಗ್‍ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್‍ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಸದ್ಯ ಇದೀಗ ಮದುವೆಯಾಗುವುದಾಗಿ ಬಹಿರಂಗ ಪಡೆಸಿದ್ದರು. ಇದನ್ನೂ ಓದಿ:ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

     

    View this post on Instagram

     

    A post shared by shubha Poonja . (@shubhapoonja)

  • ಶೂಟಿಂಗ್ ವೇಳೆ ಜಾರಿ ಬಿದ್ದು ಶಾನ್ವಿಗೆ ಗಾಯ

    ಶೂಟಿಂಗ್ ವೇಳೆ ಜಾರಿ ಬಿದ್ದು ಶಾನ್ವಿಗೆ ಗಾಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರೀಕರಣದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

    shanvi srivastava

    ಬ್ಯಾಂಗ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಗ್ಯಾಂಗ್‍ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರ ಆ್ಯಕ್ಷನ್ ದೃಶ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದರು. ಹೀಗಿದ್ದರೂ ಚಿತ್ರೀಕರಣದ ವೇಳೆ ಮಳೆಯ ಎಫೆಕ್ಟ್ ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಶ್ರೀವಾಸ್ತವ್ ಕಾಲು ಜಾರಿ ಬಿದ್ದು ಕೈಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    shanvi srivastava

    ಸದ್ಯ ಈ ಕುರಿತಂತೆ ಚಿತ್ರತಂಡ, ಬ್ಯಾಂಗ್ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ನನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ 9 ರಿಂದ 10 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತಿತ್ತು. ಆಗ ಶಾನ್ವಿ ಕಾಲು ಜಾರಿ ಕೆಳಗೆ ಬಿದ್ದು, ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಸದ್ಯ ಶಾನ್ವಿ ಚೇರಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

    shanvi srivastava

    ಈ ಚಿತ್ರಕ್ಕೆ ಶ್ರೀ ಗಣೇಶ್ ಪರಶುರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸದಾ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಾನ್ವಿ ಇದೇ ಮೊದಲ ಬಾರಿಗೆ ಗ್ಯಾಂಗ್ ಸ್ಟಾರ್ ಆಗಿ ಕಾಣಿಸಿಕೊಳ್ಳಿದ್ದಾರೆ. ಅಲ್ಲದೇ ಸ್ಟಂಟ್ ಮಾಸ್ಟರ್ ಆಗಿ ಚೇತನ್ ಫೈಟಿಂಗ್ ಹೇಳಿಕೊಡುತ್ತಿದ್ದಾರೆ. ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?

  • ಮಾನವೀಯತೆಗೆ ಸಾಕ್ಷಿ – ಕಳೆದುಕೊಂಡಿದ್ದ 50 ಸಾವಿರ ಮರಳಿ ಪಡೆದ ಮಹಿಳೆ

    ಮಾನವೀಯತೆಗೆ ಸಾಕ್ಷಿ – ಕಳೆದುಕೊಂಡಿದ್ದ 50 ಸಾವಿರ ಮರಳಿ ಪಡೆದ ಮಹಿಳೆ

    – ಆಟೋ ಚಾಲಕರು, ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಮಾನವೀಯತೆ

    ಬೆಂಗಳೂರು: ಮಹಿಳೆಯೊಬ್ಬರು ಕಳೆದುಕೊಂಡಿದ್ದ 50 ಸಾವಿರ ರೂಪಾಯಿ ಅಧಿಕಾರಿ ಹಾಗೂ ಆಟೋ ಚಾಲಕರ ಸಮಯ ಪ್ರಜ್ಞೆಯಿಂದ ಮತ್ತೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ತಮ್ಮ ಅತ್ತೆಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಶಶಿಕಲಾ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ನಂತರ ಆಟೋ ಹತ್ತಿ ಅತ್ತೆ ಜೊತೆಗೆ ಸಂಜಯ್ ಗಾಂಧಿ ಆಸ್ಪತ್ರೆ ಬಳಿ ಹೋದ ನಂತರ ತಮ್ಮ ಬಳಿ ಇದ್ದ ಹಣವನ್ನು ಎಂಆರ್‍ಐ ಸ್ಕ್ಯಾನಿಂಗ್ ರಿಪೋರ್ಟ್ ಜೊತೆಗೆ ಮಿಸ್ ಮಾಡಿಕೊಂಡಿದ್ದಾರೆ.

    ನಂತರ ನೇರ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಕರೆತಂದ ಆಟೋ ಚಾಲಕ ಸಿದ್ದರಾಜು, ಸ್ಯಾಟಲೈಟ್ ನಿಲ್ದಾಣಾಧಿಕಾರಿ ಲಕ್ಕೇಗೌಡರ ಬಳಿ ವಿಷಯ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಯಾವ ಬಸ್, ಯಾವ ಡಿಪೋಗೆ ಸೇರಿದ ಬಸ್, ನಿರ್ವಾಹಕರ ನಂಬರ್ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಬಳಿಕ ಶಶಿಕಲಾರವರು ಬಂದ ಬಸ್ ರಾಮನಗರದ ಬಳಿ ಸಂಚರಿಸುತ್ತಿದ್ದ ವಿಷಯ ತಿಳಿದುಬಂದಿದೆ. ಎಂಆರ್‌ಐ ಸ್ಕ್ಯಾನಿಂಗ್ ರಿಪೋರ್ಟ್ ಒಳಗೆ ಹಣ ಇದ್ದಿದ್ದರಿಂದ ಸದ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ಕೊನೆಗೆ ಆಟೋ ಚಾಲಕ ಸಿದ್ದರಾಜು ಹಾಗೂ ಸ್ಯಾಟಲೈಟ್ ಕೆಎಸ್‌ಆರ್‌ಟಿಸಿ ನಿಲ್ದಾಣಾಧಿಕಾರಿ ಲಕ್ಕೇಗೌಡರಿಂದ ಶಶಿಕಲಾ ಅವರಿಗೆ ಹಣ ಮತ್ತೆ ಸಿಕ್ಕಿದೆ.

    ಶಶಿಕಲಾ ಅವರು ತಮ್ಮ ಅತ್ತೆಗೆ ಶಸ್ತ್ರಚಿಕಿತ್ಸೆ ಇದ್ದ ಹಿನ್ನೆಲೆಯಲ್ಲಿ ಒಡವೆ ಮಾರಿ ಹಣ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಕಷ್ಟಪಟ್ಟು ದುಡಿದಿದ್ದ ಹಣ ಮತ್ತೆ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯಿಂದ ನಮ್ಮ ಹಣ ಸಿಕ್ಕಿದೆ. ಅವರಿಗೆ ಒಳ್ಳೆದಾಗಲಿ ಎಂದು ಶಶಿಕಲಾ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

  • ‘ಮಾ ಪ್ರಗ್ಯಾ ಭಾರತಿ’ಯಾದ ಬಿಗ್‍ಬಾಸ್ ಸ್ಪರ್ಧಿ ಚೈತ್ರಾ ಕೊಟೂರು

    ‘ಮಾ ಪ್ರಗ್ಯಾ ಭಾರತಿ’ಯಾದ ಬಿಗ್‍ಬಾಸ್ ಸ್ಪರ್ಧಿ ಚೈತ್ರಾ ಕೊಟೂರು

    ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಅಧ್ಯಾತ್ಮಿಕದ ಕಡೆ ವಾಲಿದ್ದಾರೆ.

    ಓಶೋ ಧ್ಯಾನ ಮಂದಿರಕ್ಕೆ ಸೇರಿಕೊಂಡಿರುವ ಚೈತ್ರಾ ಕೊಟೂರುಗೆ ಅಲ್ಲಿನ ಗುರುಗಳು ಮಾ ಪ್ರಗ್ಯಾ ಭಾರತಿ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಈ ಕುರಿತಂತೆ ಫೋಟೋವೊಂದನ್ನು ಚೈತ್ರಾ ಕೊಟೂರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಚೈತ್ರಾ ಕೊಟೂರುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಓಶೋ ಧ್ಯಾನ ಮಂದಿರದ ಗುರುಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ.. ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ 28ರಂದು ಮದುವೆ ವಿಚಾರದಲ್ಲಿ ಕಿರಿಕ್ ಆಗಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣಗಳಲಿ ಸಕ್ರಿಯರಾಗಿದ್ದ ಚೈತ್ರಾ ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡು ಪಾಸಿಟಿವ್ ಬರಹಗಳನ್ನು ಬರೆಯುತ್ತಿದ್ದರು. ಇದೀಗ ಬೆಳಗಾವಿಯ ಪಿಂಪಿಲಿಯಲ್ಲಿ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೊಟೂರು ಪ್ರತ್ಯಕ್ಷರಾಗಿದ್ದಾರೆ. ಸದ್ಯ ಆಧ್ಯಾತ್ಮಿಕ ಹಾದಿಯತ್ತ ಸಾಗಿ ಹೊಸ ಜೀವನ ಪ್ರಾರಂಭಿಸುತ್ತಿರುವ ಚೈತ್ರಾ ಕೊಟೂರಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲ

  • ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನ ಅಪ್ಪನಿಗೆ ಸ್ಪರ್ಧಿಗಳ ವಿಶ್

    ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನ ಅಪ್ಪನಿಗೆ ಸ್ಪರ್ಧಿಗಳ ವಿಶ್

    ಬೆಂಗಳೂರು: ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ದೊಡ್ಮನೆ ಸದಸ್ಯರು ಫಾದರ್ಸ್ ಡೇ ಪ್ರಯುಕ್ತ ತಮ್ಮ ಪ್ರೀತಿಯ ಅಪ್ತಂದಿರಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

    ಹೌದು, ಪ್ರತಿಯೊಬ್ಬ ಮಕ್ಕಳ ಮೊದಲ ಹೀರೋ ಅಂದರೆ ಅದು ಅವರ ತಂದೆ. ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಅವರನ್ನು ಮಕ್ಕಳಂತೆಯೇ ನೋಡುವುದು ಪೋಷಕರು ಮಾತ್ರ. ಮಕ್ಕಳನ್ನು ಪಾಲಿಸಿ, ಪೋಷಿಸಿ, ಬೆಳೆಸುವುದರಲ್ಲಿ ತಾಯಿಯ ಪಾತ್ರ ಎಷ್ಟು ದೊಡ್ಡದಿರುತ್ತದೇಯೋ ಹಾಗೆಯೇ ತಂದೆ ಪಾತ್ರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಎಲ್ಲಾ ಸಂದರ್ಭದಲ್ಲಿ ಸದಾ ಮಕ್ಕಳ ಬೆನ್ನ ಹಿಂದೆ ಬೆಂಬಲವಾಗಿ ಮೊದಲು ನಿಲ್ಲುವುದು ತಂದೆ ಮಾತ್ರ. ಅಂತಹ ವಿಶ್ವ ತಂದೆಯಂದಿರ ದಿನಾಚರಣೆಯಂದು ಬಿಗ್ ಮನೆ ಸ್ಪರ್ಧಿಗಳು ತಮ್ಮ ತಂದೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Aravind K P (@aravind_kp)

    ಪಂಚರಂಗಿ ಬೆಡಗಿ ನಟಿ ನಿಧಿ ಸುಬ್ಬಯ್ಯರವರು, ತಮ್ಮ ತಂದೆ ಜೊತೆಗಿರುವ ಬಾಲ್ಯದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಿಮ್ಮ ಬಗ್ಗೆ ಯೋಚಿಸದೇ ಒಂದು ದಿನವೂ ಕಳೆಯುವುದಿಲ್ಲ. ನೀವು ಇರಬೇಕಿತ್ತು. ನಾನು ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹ್ಯಾಪಿ ಫಾದರ್ಸ್ ಡೇ ಪಪ್ಪಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Nidhi Subbaiah (@nidhisubbaiah)

    ವೈಷ್ಣವಿ ಗೌಡ ಕೂಡ ತಮ್ಮ ತಂದೆಯೊಟ್ಟಿಗಿರುವ ಫೋಟೋ ಜೊತೆಗೆ ಹ್ಯಾಪಿ ಫಾದರ್ಸ್ ಡೇ ಅಪ್ಪ, ಎಂದಿಗೂ ನೀವು ನನ್ನ ಸೂಪರ್ ಹೀರೋ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಅರವಿಂದ್ ಕೆಪಿ ಕೂಡ ಬೈಕ್ ಮೇಲೆ ಅವರ ತಂದೆ ಕುಳಿತುಕೊಂಡಿರುವ ಫೋಟೋ ಹಾಕಿ ವಿಶ್ ಮಾಡಿದರೆ, ದಿವ್ಯಾ ಉರುಡುಗ ಕೂಡ ಅವರ ತಂದೆ ಜೊತೆಗಿರುವ ಫೋಟೋ ಜೊತೆಗೆ ಪುಟ್ಟಿಮಗ ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಅಪ್ಪಾಜಿ, ಹ್ಯಾಪಿ ಫಾದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

     

    View this post on Instagram

     

    A post shared by Vaishnavi (@iamvaishnavioffl)

     

     

    View this post on Instagram

     

    A post shared by Divya Uruduga (@divya_uruduga)

  • ಬ್ರಾಹ್ಮಣ್ಯದ ವಿರುದ್ಧ ನಟ ಚೇತನ್ ಹೇಳಿಕೆ – ವಿಚಾರಣೆಗೆ ಹಾಜರು

    ಬ್ರಾಹ್ಮಣ್ಯದ ವಿರುದ್ಧ ನಟ ಚೇತನ್ ಹೇಳಿಕೆ – ವಿಚಾರಣೆಗೆ ಹಾಜರು

    ಬೆಂಗಳೂರು: ಆ ದಿನಗಳು ಖ್ಯಾತಿಯ ನಟ ಚೇತನ್ ಇವತ್ತು ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.

    ಬ್ರಾಹ್ಮಣ್ಯದ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ. ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡಿ, ಜಾತಿ ಜಾತಿಗಳ ನಡುವೆ ಗಲಭೆ ಉಂಟು ಮಾಡಲು ಪ್ರಚೋದನೆ ನೀಡಿದ್ದಾರೆ. ಅವರ ಹೇಳಿಕೆಗಳು ಯು ಟ್ಯೂಬ್ , ಫೇಸ್ ಬುಕ್ ನಲ್ಲಿ ವೈರಲ್ ಆಗಿವೆ ಎಂದು ವಿಪ್ರ ಯುವ ವೇದಿಕೆಯ ಪವನ್ ಕುಮಾರ್ ಶರ್ಮಾ ದೂರು ನೀಡಿದ್ದರು. ದೂರು ಸಂಬಂಧ ಎಫ್‍ಐಆರ್ ದಾಖಲಿಸಿದ್ದ ಬಸವನಗುಡಿ ಪೊಲೀಸರು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದನ್ನೂ ಓದಿ:ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ

    ಅದರಂತೆ ಇಂದು ವಿಚಾರಣೆಗೆ ಹಾಜರಾದ ಚೇತನ್‍ರವರಿಗೆ ಬ್ರಾಹ್ಮಣ್ಯ, ಪುರೋಹಿತ ಶಾಹಿ, ಬ್ರಾಹ್ಮಣ ವಿರೋಧವಾಗಿ ಮಾತಾಡಿರುವ ವೀಡಿಯೋ ನಿಮ್ಮದೇನಾ? ನಿಮ್ಮ ಪಾಸ್ಪೋರ್ಟ್ ನಂಬರ್ ಏನು? ವೀಸಾ ಮಾಹಿತಿ ತಿಳಿಸಿ? ಶ್ರೇಣಿಕೃತ ಅಸಮಾನತೆಯ ವ್ಯವಸ್ಥೆಯಿಂದ ಪುರೋಹಿತ ಶಾಹಿ ವರ್ಗದವರಿಗೆ ಹೇಗೆ ಲಾಭವಾಗುತ್ತದೆ? ಹೀಗೆ 36 ಪ್ರಶ್ನೆಗಳನ್ನ ಕೇಳಿ ಉತ್ತರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    ವಿಚಾರಣೆ ಮುಗಿಸಿ ಹೊರ ಬಂದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾನೂನು ಮೇಲೆ ಅಪಾರ ನಂಬಿಕೆ ಇದೆ. ಜಾತಿ, ಜನಾಂಗದ ವಿರುದ್ಧ ಹೋರಾಟ ಮಾಡುತ್ತಲ್ಲ. ಕೆಲವರು ಹುಟ್ಟಿದ ತಕ್ಷಣ ಶ್ರೇಷ್ಠ, ಕೆಲವರು ಕೀಳು ಅಂಥ ಮಾಡಬಾರದು. ಬೇಧ ಭಾವದ ವಿರುದ್ಧ ಹೋರಾಟ ಮಾಡುತ್ತೀವಿ. ಈ ಹೋರಾಟವನ್ನು ಮುಂದುವರಿಸುತ್ತೇವೆ. ನಮಗೆ ನ್ಯಾಯ ಸಿಗುತ್ತೆ. ವಿಚಾರಣೆಗೆ ಅಗತ್ಯವಿದ್ದಲ್ಲಿ ಮತ್ತೆ ಬರುತ್ತೇನೆ. 18ನೇ ತಾರೀಖು ಮತ್ತೆ ಬರುವುದಕ್ಕೆ ಹೇಳಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ಕೊಡುತ್ತೇನೆ. ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣ್ಯದ ವಿರುದ್ಧ ಪೋಸ್ಟ್ – ನಾಳೆ ನಟ ಚೇತನ್ ವಿಚಾರಣೆ

  • ಸರಕಾರದ ಕ್ರಮಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸ್ವಾಗತ

    ಸರಕಾರದ ಕ್ರಮಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸ್ವಾಗತ

    ಬೆಂಗಳೂರು: ಕೊರೊನಾ ಪರಿಹಾರ ಪ್ಯಾಕೇಜ್‍ನಲ್ಲಿ ಮಸ್ಜಿದ್ ಇಮಾಮರಿಗೂ ಸಹಾಯ ಧನ ಘೋಷಿಸಿರುವ ರಾಜ್ಯ ಸರಕಾರದ ಕ್ರಮವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಹಝ್ರತ್ ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಸ್ವಾಗತಿಸಿದ್ದಾರೆ.

    ಕೋವಿಡ್ ನಿಗ್ರಹಕ್ಕಾಗಿ ವಿಧಿಸಲಾಗಿದ್ದ ಲಾಕ್‍ಡೌನ್ ವೇಳೆ ರಾಜ್ಯ ಸರಕಾರವು ದೇವಸ್ಥಾನಗಳ ಅರ್ಚಕರಿಗೆ ಪರಿಹಾರ ಘೋಷಿಸಿತ್ತು. ಅದರಂತೆ ಮಸ್ಜಿದ್ ಇಮಾಮರಿಗೂ ಪರಿಹಾರ ಘೋಷಿಸಬೇಕೆಂದು ಈ ಮುನ್ನ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿರವರು ಮನವಿ ಮಾಡಿಕೊಂಡಿದ್ದರು.

    ಕೊರೊನಾ ಮತ್ತು ಲಾಕ್ ಡೌನ್ ಸಂಕಷ್ಟದ ಪ್ರಾರಂಭದಿಂದಲೂ ಮಸ್ಜಿದ್ ಇಮಾಮರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಜೀವನ ನಿರ್ವಹಣೆಗಾಗಿ ಆದಾಯವಿಲ್ಲದೆ ಅವರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡಿದ್ದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಇಮಾಮರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತಾ ಬಂದಿತ್ತು. ಪತ್ರಿಕಾ ಪ್ರಕಟನೆ ಮೂಲಕ ಮತ್ತು ಶಾಸಕರು ಹಾಗೂ ಸರಕಾರದ ಅಧಿಕೃತರನ್ನು ಸಂಪರ್ಕಿಸಿ ತನ್ನ ಬೇಡಿಕೆಯನ್ನು ಮುಂದಿಟ್ಟಿತ್ತು. ಇದೀಗ ಪರಿಹಾರ ಪ್ಯಾಕೇಜ್ ನಲ್ಲಿ ಮಸ್ಜಿದ್ ಇಮಾಮರು ಮತ್ತು ಮುಅಝ್ಝಿನ್ ಗಳನ್ನು ಪರಿಗಣಿಸಿರುವುದು ಸಂತಸದ ವಿಚಾರವಾಗಿದೆ ಮತ್ತು ಇದಕ್ಕಾಗಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ. ಇದನ್ನು ಓದಿ: ಕೊರೊನಾ ನಿಯಮ ಉಲ್ಲಂಘನೆ-ಹುಟ್ಟುಹಬ್ಬ ಆಚರಿಸಿಕೊಂಡ ಸಬ್ ಇನ್‌ಸ್ಪೆಕ್ಟರ್

    ಪರಿಹಾರ ವಿತರಣೆಯ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ಸಂಕಷ್ಟದಲ್ಲಿರುವ ಎಲ್ಲಾ ಇಮಾಮರಿಗೂ ಸಮರ್ಪಕವಾಗಿ ಸಹಾಯಧನ ತಲುಪಿಸಲು ಕ್ರಮಕೈಗೊಳ್ಳಬೇಕು. ಅದೇ ರೀತಿ ಈ ಪರಿಹಾರ ಪ್ಯಾಕೇಜನ್ನು ರಾಜ್ಯದಲ್ಲಿರುವ ಮದ್ರಸ ಅಧ್ಯಾಪಕರಿಗೂ ವಿಸ್ತರಿಸಬೇಕೆಂದು ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ. ಇದನ್ನು ಓದಿ:ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್‍ಟಿಎಸ್

  • ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

    ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

    ಬೆಂಗಳೂರು: ಕೋವಿಡ್ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್‍ಡೌನ್ ವೇಳೆ ರಾಜ್ಯ ಸರಕಾರವು ದೇವಸ್ಥಾನಗಳ ಅರ್ಚಕರಿಗೆ ಪರಿಹಾರ ನೀಡಿದಂತೆ ಮಸ್ಜಿದ್ ಇಮಾಮರಿಗೂ ಪರಿಹಾರ ಘೋಷಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಆಗ್ರಹಿಸಿದ್ದಾರೆ.

    ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಪರಿಹಾರವನ್ನು ಘೋಷಿಸಿದೆ. 33.45 ಕೋಟಿ ರೂಪಾಯಿ ಮುಂಗಡ ತಸ್ತಿಕ್ ಜೊತೆಗೆ 4.50 ಕೋಟಿ ರೂ. ವರ್ಷಾಸನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಅದರೊಂದಿಗೆ ಆಹಾರ ಕಿಟ್‍ನ ವ್ಯವಸ್ಥೆಗೂ ಆದೇಶ ಹೊರಡಿಸಿದೆ. ಇದೇ ವೇಳೆ ಮಸೀದಿಗಳ ಇಮಾಮರು ಮತ್ತು ಮುಅಝ್ಝಿನ್ ಗಳು, ಚರ್ಚ್‍ನ ಪಾದ್ರಿಗಳು ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಗೆ ಯಾವುದೇ ಪರಿಹಾರ ಘೋಷಣೆ ಮಾಡದಿರುವುದು ರಾಜ್ಯ ಸರಕಾರದ ಧಾರ್ಮಿಕ ಅಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ.

    ರಾಜ್ಯ ಸರಕಾರವು ಮಾನವೀಯತೆಯ ತಳಹದಿಯಲ್ಲಿ ಪರಿಹಾರ ಘೋಷಣೆ ಮಾಡಬೇಕೇ ಹೊರತು ಧರ್ಮಾಧರಿತ ರಾಜಕೀಯದ ಆಧಾರದಲ್ಲಿ ಅಲ್ಲ. ಎಲ್ಲಾ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಯನ್ನು ಸಮಾನವಾಗಿ ಕಾಣುವುದರ ಜೊತೆಗೆ ಅವರಿಗೆ ಸಮಾನ ನ್ಯಾಯವನ್ನು ಖಾತರಿಪಡಿಸಬೇಕು. ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿರುವ ಈ ಸಿಬ್ಬಂದಿಗೆ ಸರಕಾರವು ತಕ್ಷಣಕ್ಕೆ ಜಾರಿಯಾಗುವಂತೆ ಪರಿಹಾರ ಘೋಷಿಸಿ ಅವರ ಸಂಕಷ್ಟಕ್ಕೆ ನೆರವಾಗಬೇಕು. ಅದೇ ರೀತಿ ಪರಿಹಾರ ಬಿಡುಗಡೆಗಾಗಿ ವಕ್ಫ್ ಬೋರ್ಡ್ ಕೂಡ ಸರಕಾರವನ್ನು ಆಗ್ರಹಿಸಬೇಕೆಂದು ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ.

  • ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ಬೆಂಗಳೂರು: ಪತ್ರಕರ್ತ ಹಾಗೂ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ.

    ವಿಚಾರಣೆಯ ವೇಳೆ ಯಾವುದೇ ಹೇಳಿಕೆ ನೀಡದಿರುವ ರವಿ ಬೆಳಗೆರೆ, ಯಾವ ಸುಪಾರಿಯೂ ನಾನು ನೀಡೇ ಇಲ್ಲ. ಕುಡಿದ ಮತ್ತಿನಲ್ಲಿ ಏನೋ ಹೇಳಿರಬಹುದು. ಅದನ್ನಾ ಪರಿಗಣಿಸೋಕೆ ಸಾಧ್ಯನಾ? ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ಹೇಳಿರಬಹುದು ಅದನ್ನೇ ನೀವು ಸುಪಾರಿ ಅಂತ ಇದ್ದೀರಿ. ನಾನೇನಾದರೂ ಹೊಸಬನ ಭೇಟಿ ಮಾಡಿ, ಮಾತನಾಡಿದ್ರೆ ನಿಮ್ಮ ಅನುಮಾನ ಸರಿಯಾಗಿ ಇರ್ತಿತ್ತು. ಆದ್ರೆ ನಾನು ನನ್ನ ಮಾಜಿ ಡ್ರೈವರ್ ಭೇಟಿಯಾಗಿದ್ದೆ. ಪರಿಸ್ಥಿತಿ ಒತ್ತಡಕ್ಕೆ ಸಿಕ್ಕಿ ಕೊಲೆಗಾರ ಆದ. ಕೊಲೆಗಾರನನ್ನು ಭೇಟಿ ಮಾಡಿದ್ರೆ ನಾನು ಕೊಲೆಗಾರನ ಕೊಲೆ ಮಾಡಿಸ್ತೀನಾ?. ಸುಮ್ಮನೆ ನಿಮಗೂ ಕಾಲಹರಣ ನನಗೂ ಹಿಂಸೆನ್ರಪ್ಪ ಅಂತ ಸಿಸಿಬಿ ಅಧಿಕಾರಿಗಳಿಗೆಯೇ ರವಿ ಬೆಳಗೆರೆ ಟಾಂಗ್ ನೀಡಿದ್ದಾರೆ.

    ರವಿ ಬೆಳಗೆರೆ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈಗಾಗಲೇ ಪೊಲೀಸರು ಸಿಸಿಟಿವಿ, ಫೋನ್ ಕರೆಯನ್ನೇ ಆಧರಿಸಿ ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಈಗಾಗಲೇ ಸುನಿಲ್ ಹೆಗ್ಗರವಳ್ಳಿ ಹೇಳಿಕೆ ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮೂಲಗಳ ಮಾಹಿತಿ ನೀಡಿವೆ.

    ಎಫ್‍ಐಆರ್ ದಾಖಲು: ರವಿಬೆಳಗೆರೆ ಬಂಧನ ಪ್ರಕರಣದ ಬಳಿಕ ಹಾಯ್ ಬೆಂಗಳೂರು ಕಚೇರಿಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಪತ್ತೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಶನಿವಾರ ಅರಣ್ಯಾಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ವಶಕ್ಕೆ ಪಡೆದಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ರವಿಬೆಳಗೆರೆ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

    ಆರೋಗ್ಯದಲ್ಲಿ ಏರುಪೇರು: ರವಿಬೆಳಗೆರೆಯವರಿಗೆ ಮತ್ತೆ ಲೋ ಶುಗರ್, ಲೋ ಬಿಪಿಯಾಗಿ ಆರೋಗ್ಯದಲ್ಲಿ ಏರಪೇರಾಗಿದೆ. ಹೀಗಾಗಿ ವೈದಕೀಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರವಿಬೆಳಗೆರೆ ಹೈಡ್ರಾಮ ಮಾಡಿದ್ದು, ಸಿಗರೇಟ್ ಬೇಕಾಂತ ಹಠ ಹಿಡಿದಿದ್ದರು. ಅಲ್ಲದೇ ಕಾರಿಗೆ ಕಾಲು ಅಡ್ಡ ಇಟ್ಟಿಕೊಂಡು ಸಿಗರೇಟ್ ಕೊಡದೆ ಇದ್ರೆ ಕಾಲು ತೆಗೆಯಲ್ಲ ಅಂತಾ ಹಠ ಮಾಡಿದ್ದಾರೆ.

    ಸಿಗರೇಟು ಕೊಡದೇ ಇದ್ದಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿಯೇ ಅವಕಾಶ ಇದೆ, ಕೊಡೊದಕ್ಕೆ ನಿಮಗೇನು ಅಂತ ಬೈಯ್ದಿದ್ದಾರೆ. ಮನವೊಲಿಸಲು ಹೋದ ಮಗ ಕರ್ಣನ ಮೇಲೂ ಕಿಡಿಕಾರಿದ್ದಾರೆ. ಕೊನೆಗೆ ಸಿಸಿಬಿ ಪೊಲೀಸರು ಸಿಗರೇಟು ಕೊಟ್ಟು ಸೇದಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಕಾಲಿಗೆ ಗಾಯ ಆಗಿದೆ ನಿಮಗೆ ಮನುಷ್ಯತ್ವ ಇಲ್ವಾ ಅಂತ ಪೊಲೀಸರಿಗೆ ಬೆಳಗೆರೆ ತರಾಟೆ ತೆಗೆದುಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಮಾಧ್ಯಮದವರನ್ನು ಹತ್ತಿರ ಕರೆದು ಎಷ್ಟು ದಿನ ಅಂತ ನನ್ನನ್ನೇ ಕಾಯ್ತಿರೋ ಬೇಜರಾಗೊಲ್ವಾ..? ಮತ್ತೆ ಸಿಕ್ತೀನಿ ಬಿಡ್ರೋ ಅಂತ ಹೇಳಿದ್ದಾರೆ.

    https://www.youtube.com/watch?v=Gw8qDp91QbA

    https://www.youtube.com/watch?v=7FMDBk4SZIs

    https://www.youtube.com/watch?v=BSYzOrn_xUM