Tag: ಬೆಂಕಿ

  • ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

    ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

    ನವದೆಹಲಿ: ಹಾಂಕಾಂಗ್‌ನಿಂದ (Hong Kong) ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    AI 315 ವಿಮಾನ ಮಂಗಳವಾರ ಮಧ್ಯಾಹ್ನ 12:12ಕ್ಕೆ ದೆಹಲಿಯಲ್ಲಿ (Delhi) ಲ್ಯಾಂಡ್ ಆಯಿತು. ಹಾರಾಟದ ವೇಳೆ ಯಾವುದೇ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆದರೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಆಗಸ್ಟ್‌ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆ

    ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದರು, ಈ ವೇಳೆ ವಿಮಾನದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಏರ್‌ಲೈನ್‌ನಲ್ಲಿರುವ ಸ್ವಯಂಚಾಲಿತ ವ್ಯವಸ್ಥೆಯಿಂದಾಗಿ ಆಕ್ಸಿಲರಿ ಪವರ್ ಯೂನಿಟ್ ಬಂದ್ ಆಗಿದೆ. ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಆದರೆ ಪ್ರಯಾಣಿಕರು ಅಷ್ಟು ಹೊತ್ತಿಗಾಗಲೇ ಕೆಳಗೆ ಇಳಿದ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ಏರ್ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಹಾವೇರಿ | ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಐವರಿಗೆ ಗಾಯ

  • Tamil Nadu | ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಭಾರೀ ಅಗ್ನಿ ಅವಘಡ

    Tamil Nadu | ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಭಾರೀ ಅಗ್ನಿ ಅವಘಡ

    – ರೈಲು ಸೇವೆಯಲ್ಲಿ ವ್ಯತ್ಯಯ

    ಚೆನ್ನೈ: ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನ (Goods Train) 4 ವ್ಯಾಗನ್‌ಗಳಲ್ಲಿ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ತಮಿಳುನಾಡಿನ (Tamil Nadu) ತಿರುವಲ್ಲೂರು (Tiruvallur) ರೈಲು ನಿಲ್ದಾಣದ ಬಳಿ ನಡೆದಿದೆ.

    ಇಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಬೆಂಕಿ ಅವಘಡದಿಂದ ರೈಲು ಹೊತ್ತಿ ಉರಿದಿದ್ದು, ಆಕಾಶದಲ್ಲಿ ಕಪ್ಪು ದಟ್ಟಹೊಗೆ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ರೈಲಿನಲ್ಲಿ ಡೀಸೆಲ್ ಇದ್ದ ಕಾರಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ – ಮೂವರ ದುರ್ಮರಣ

    ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮನಾಲಿಯಿಂದ ತಿರುಪತಿ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ತಿರುವಲ್ಲೂರು ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹತ್ತಿರದ ಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗಿದೆ. ಘಟನೆಗೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ಚೆನ್ನೈಗೆ ತೆರಳುವ ಮತ್ತು ಅಲ್ಲಿಂದ ಹೊರಡಬೇಕಿದ್ದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ರೈಲು ಹಳಿ ತಪ್ಪಿ ಪಲ್ಟಿಯಾಗಿ, ಡೀಸೆಲ್‌ ಸೋರಿಕೆಯಿಂದ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    – ಫ್ರಿಡ್ಜ್, ರಿಜಿಸ್ಟರ್ ಬುಕ್, ಬೆಡ್ ಬೆಂಕಿಗಾಹುತಿ
    – 26 ರೋಗಿಗಳು ಬೇರೆ ಬ್ಲಾಕ್‌ಗೆ ಶಿಫ್ಟ್

    ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಸುಟ್ಟುಗಾಯಗಳ ವಿಭಾಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ರೋಗಿಗಳನ್ನು ಬೇರೆ ಬ್ಲಾಕ್‌ಗೆ ಶಿಫ್ಟ್ ಮಾಡಲಾಗಿದೆ.

    ಮುಂಜಾನೆ 3 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ರಿಜಿಸ್ಟರ್ ಬುಕ್, ಬೆಡ್ ಎಲ್ಲಾ ಸುಟ್ಟು ಹೋಗಿದೆ. ಫ್ರಿಡ್ಜ್‌ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್ ಪೂರ್ತಿ ಬೆಂಕಿ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಟ್ಟಡದ ಎಲ್ಲಾ ರೋಗಿಗಳನ್ನ ಹೆಚ್ ಬ್ಲಾಕ್‌ಗೆ ಶಿಫ್ಟ್ ಮಾಡಲಾಗಿದೆ. 14 ಪುರುಷರು, 5 ಮಹಿಳೆಯರು ಹಾಗೂ 7 ಮಂದಿ ಮಕ್ಕಳು ಸೇರಿ ಒಟ್ಟು 26 ರೋಗಿಗಳನ್ನು ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸುವುದಾಗಿ 200 ರೂ. ವಂಚನೆ; 30 ವರ್ಷದ ನಂತರ ಬಂಧನ

    ಡ್ಯೂಟಿ ಡಾಕ್ಟರ್ ದಿವ್ಯಾ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ವೈದ್ಯೆ ದಿವ್ಯಾ ನೇತೃತ್ವದ ತಂಡ ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ 3:30ರ ಸುಮಾರಿಗೆ ಡಾ. ದಿವ್ಯಾ ಮೊದಲ ಮಹಡಿಗೆ ಹೋಗಿದ್ದರು. ಈ ವೇಳೆ ಸೆಮಿನರ್ ರೂಂನಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತ್ತು. ಶಬ್ದ ಕೇಳಿ ಕೂಡಲೇ ಅಲರ್ಟ್ ಆದ ದಿವ್ಯಾ ಮತ್ತು ಸಿಬ್ಬಂದಿ ಕೋಡ್ ರೆಡ್ ಅಲರ್ಟ್ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಸೂಪರಿಂಟೆಂಡೆಂಟ್‌ಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸೋ ಪ್ರಯತ್ನದ ಜೊತೆಗೆ ಹಿರಿಯ ಅಧಿಕಾರಿಗಳಿಗೂ ದಿವ್ಯಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸುಮಾರು 30 ನಿಮಿಷದಲ್ಲಿ ಎಲ್ಲಾ ರೋಗಿಗಳನ್ನು ಸ್ಥಳಾಂತರಿಸಲಾಗಿದೆ. ಐಸಿಯುನಲ್ಲಿದ್ದವರು ಸೇರಿ ಎಲ್ಲರನ್ನೂ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಗಡಿ ಉಸ್ತುವಾರಿ ಸಚಿವರಾಗಿ ಹೆಚ್‌.ಕೆ ಪಾಟೀಲ್‌ ನೇಮಕ

  • ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ – ಬಾಲ್ಕನಿಯಿಂದ ಹಾರಿದ ತಂದೆ, ಇಬ್ಬರು ಮಕ್ಕಳು ಸಾವು

    ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ – ಬಾಲ್ಕನಿಯಿಂದ ಹಾರಿದ ತಂದೆ, ಇಬ್ಬರು ಮಕ್ಕಳು ಸಾವು

    ನವದೆಹಲಿ: ದೆಹಲಿಯ (New Delhi) ದ್ವಾರಕಾ ಸೆಕ್ಟರ್ 13ರ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ (Shabad Apartment) ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾಯದಿಂದ ಪಾರಾಗಲು ಬಾಲ್ಕನಿಯಿಂದ ಹಾರಿದ ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದಾರೆ.

    10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಹಾಗೂ ತಂದೆ ಯಾದವ್ (35) ಮೃತ ದುರ್ದೈವಿಗಳು. ಏಕಾಏಕಿ ಭಾರೀ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗುವ ಸಲುವಾಗಿ ಯಾದವ್ ತನ್ನ ಇಬ್ಬರು ಮಕ್ಕಳೊಂದಿಗೆ ಅಪಾರ್ಟ್ಮೆಂಟ್‌ನ 9ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಕೂಡಲೇ ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಆಕಾಶ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಅವರಿಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ತಂದೆ ಯಾದವ್ ಐಜಿಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

    ಬೆಂಕಿ ಅವಘಡ ವೇಳೆ ಅಪಾರ್ಟ್ಮೆಂಟ್‌ನಲ್ಲಿ ಸಿಲುಕಿದ್ದ ಯಾದವ್ ಪತ್ನಿ ಹಾಗೂ ಹಿರಿಯ ಮಗನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪಾರ್ಟ್ಮೆಂಟ್‌ನಲ್ಲಿದ್ದ ಎಲ್ಲಾ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಅಪಾಯ ತಡೆಗಟ್ಟುವ ಸಲುವಾಗಿ ವಿದ್ಯುತ್ ಹಾಗೂ ಗ್ಯಾಸ್ ಕನೆಕ್ಷನ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

  • ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

    ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

    – ಮೂವರ ಸ್ಥಿತಿ ಗಂಭೀರ

    ನವದೆಹಲಿ: ದೆಹಲಿಯ (New Delhi) ದ್ವಾರಕಾ ಸೆಕ್ಟರ್ 13ರ (Dwaraka Sector 13) ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ (Shabad Apartment) ಮಂಗಳವಾರ ಮುಂಜಾನೆ ಭಾರೀ ಬೆಂಕಿ ಅವಘಡ ಸಂಭವಿಸಿದೆ.

    ಏಕಾಏಕಿ ಬೆಂಕಿ ಕಾಣಿಸಿಕೊಂಡ (Fire) ಹಿನ್ನೆಲೆ ಅಪಾಯದಿಂದ ಪಾರಾಗುವ ಸಲುವಾಗಿ ಮೂವರು ಮಹಡಿಯಿಂದ ಹಾರಿದ್ದು, ಸ್ಥಿತಿ ಗಂಭೀರವಾಗಿದೆ. ಎಂಆರ್‌ವಿ ಶಾಲೆಯ ಬಳಿಯ ಸೆಕ್ಟರ್ -13ರ ಶಾಬಾದ್ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಗಾಯಾಳುಗಳ ವಿವರಗಳು ಇನ್ನೂ ತಿಳಿದುಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ

    ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡದ ಬಗ್ಗೆ ಬೆಳಗ್ಗೆ 10 ಗಂಟೆಯ ಸುಮಾರಿಗೆ ಕರೆ ಬಂತು. ತಕ್ಷಣವೇ ಎಂಟು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಅಂಬುಲೆನ್ಸ್ ಘಟನಾ ಸ್ಥಳದಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ. ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್‌ ಸರ್ಜರಿ? – 10 ಸಚಿವರಿಗೆ ಕೊಕ್‌ ಸಾಧ್ಯತೆ

  • Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

    Hyderabad | ಚಾರ್‌ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ಬೆಂಕಿ ಅವಘಡ – 17 ಮಂದಿ ಸಜೀವ ದಹನ

    – ಉಸಿರಾಟ ತೊಂದರೆಯಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಹೈದರಾಬಾದ್: ಚಾರ್‌ಮಿನಾರ್ (Charminar) ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ (Gulzar House) ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 17 ಮಂದಿ ಸಜೀವ ದಹನವಾಗಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿದೆ. ಗುಲ್ಜಾರ್ ಹೌಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಇರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದ ಪರಿಣಾಮ ಉಸಿರಾಟದ ತೊಂದರೆಯಿಂದಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜೇಂದ್ರ ಕುಮಾರ್ (67), ಅಭಿಷೇಕ್ ಮೋದಿ, ಸುಮಿತ್ರಾ, ಮುನ್ನಿಬಾಯ್, ಆರುಷಿ ಜೈನ್, ಶೀತಲ್ ಜೈನ್, ಇರಾಜ್ ಹಾಗೂ ಅರ‍್ಷಾದಿ ಗುಪ್ತಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಮೂಲದ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢ ಸಾವು

    ಗುಲ್ಜಾರ್ ಹೌಸ್‌ನ ಮೊದಲ ಮಹಡಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಕಿಷನ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ಕಾರ್ಯಾಚರಣೆ ಮುಂದುವರಿದಿದೆ. ಸಿಎಂ ರೇವಂತ್ ರೆಡ್ಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ – ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

  • Tumakuru | ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ – ಚಾಲಕ ಪಾರು

    Tumakuru | ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ – ಚಾಲಕ ಪಾರು

    – ಲಾರಿ ಸಂಪೂರ್ಣ ಸುಟ್ಟು ಭಸ್ಮ

    ತುಮಕೂರು: ಚಲಿಸುತ್ತಿದ್ದ ಲಾರಿಯಲ್ಲಿ (Lorry) ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತುಮಕೂರಿನ (Tumakuru) ಕ್ಯಾತಸಂದ್ರ (Kyathasandra) ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

    ಲಾರಿ ಡಾಬಸ್ ಪೇಟೆಯಿಂದ ವಸಂತ ನರಸಾಪುರ ಕಡೆಗೆ ತೆರಳುತ್ತಿತ್ತು. ಈ ವೇಳೆ ಲಾರಿಯ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಲಾರಿಯನ್ನು ಬಿಟ್ಟು ಚಾಲಕ ಕೆಳಗೆ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಲಾರಿ ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೂ ಮೊದಲೇ ಉಗ್ರರ ದಾಳಿ ಬಗ್ಗೆ ಎಚ್ಚರಿಸಿದ್ದ ಗುಪ್ತಚರ ಇಲಾಖೆ

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಖಾಲಿಯಿದ್ದ ಹಿನ್ನೆಲೆ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ಬೆಂಗಳೂರಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

  • ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು

    ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು

    ಗದಗ: ನಡುರಸ್ತೆಯಲ್ಲೇ ಬ್ರೀಝಾ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ಗದಗದ (Gadag) ಹೊರವಲಯದಲ್ಲಿ ನಡೆದಿದೆ.

    ಈರಣ್ಣ ಜಾಲಿಹಾಳ ಎಂಬುವರಿಗೆ ಸೇರಿದ ಬ್ರೀಝಾ ಕಾರ್‌ನಲ್ಲಿ ಇಂಜಿನ್ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿತ್ತು. ಈರಣ್ಣ ಹಾಗೂ ಅವರ ಕುಟುಂಬಸ್ಥರು ಬ್ರೀಝಾ ಕಾರ್‌ನಲ್ಲಿ ಗದಗನಿಂದ ಹನುಮಸಾಗರಕ್ಕೆ ಹೊರಟಿದ್ದರು. ಚಲಿಸುತ್ತಿರುವ ವೇಳೆ ಇಂಜಿನ್‌ನಲ್ಲಿ ಸ್ವಲ್ಪ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದವರು ಕೆಳಗೆ ಇಳಿದ್ದಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

    ದಿಢೀರ್ ಕಾಣಿಸಿಕೊಂಡ ಬೆಂಕಿಗೆ ಕಾರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    – ತಾತ್ಕಾಲಿಕವಾಗಿ ಪೀಣ್ಯ ಫ್ಲೈಓವರ್ ಬಂದ್

    ಬೆಂಗಳೂರು: ಫ್ಲೈಓವರ್ ಮೇಲೆ ಲಾರಿಯೊಂದು (Lorry) ಏಕಾಏಕಿ ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಪೀಣ್ಯದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕೂಡಲೇ ಲಾರಿಯಿಂದ ಕೆಳಗಿಳಿದಿದ್ದಾರೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ನಗರದ ಕಡೆಗೆ ಕೆಲಗಂಟೆಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ನಗರದ ಕಡೆಗೆ ಬರುವವರು ಫ್ಲೈಓವರ್ ಕೆಳಗಡೆ ಬರುವಂತೆ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: ಬಿಜೆಪಿ ನೂತನ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆ ಚುರುಕು – ಶೀಘ್ರದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲೂ ಅಧ್ಯಕ್ಷರ ಬದಲಾವಣೆ?

    ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:  ನಾವು ಹಿಂದೂಗಳಿಗಿಂತ ವಿಭಿನ್ನ – ಎರಡು ರಾಷ್ಟ್ರ ಥಿಯರಿ ಹೇಳಿ ಪಾಠ ಮಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

  • ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

    ನಿಲ್ದಾಣದಲ್ಲಿ ನಿಂತಿದ್ದ ಬಸ್ಸಿಗೆ ಬೆಂಕಿ – 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

    ಚಿಕ್ಕಬಳ್ಳಾಪುರ: ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಚಿಂತಾಮಣಿ(Chintamani) ನಗರದ ಬೆಂಗಳೂರು ವೃತ್ತದಲ್ಲಿ ನಡೆದಿದೆ.

    ಬಸ್ಸಿನ ಹಿಂಭಾಗ ದೂರವಾಣಿ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು, ಅಪಘಾತ ಮತ್ತು ಇತರ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲೇ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿದೆ. ಇದನ್ನೂ ಓದಿ: ಹಾವೇರಿ| ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದ ಕಳ್ಳರು

    ರಾತ್ರಿ ಗಸ್ತು ಮಾಡುತ್ತಿದ್ದ ಪೊಲೀಸರು ಬಸ್‌ಗೆ ಬೆಂಕಿ ತಗುಲಿರುವುದನ್ನು ಕಂಡು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 80ರ ಇಳಿವಯಸ್ಸಲ್ಲಿ ಇ-ಸ್ವತ್ತಿಗಾಗಿ ಗ್ರಾಮ ಪಂಚಾಯಿತಿ ಮುಂದೆ ಅಜ್ಜಿ ಹೋರಾಟ

    ಪ್ರತಿದಿನ ಬೆಳಗ್ಗೆ 7 ಗಂಟೆಗೆ ಚಿಂತಾಮಣಿಯಿಂದ ಹೊಸಕೋಟೆ ಇಂಡಸ್ಟ್ರಿಯಲ್ ಏರಿಯಾಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದ ಅನ್ನಪೂರ್ಣೇಶ್ವರಿ ಖಾಸಗಿ ಬಸ್ ಅನ್ನು ಬೆಂಗಳೂರು ವೃತ್ತದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ನಿಲ್ಲಿಸಲಾಗುತ್ತಿತ್ತು.