Tag: ಬೆಂಕಿ ದುರಂತ

  • ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಬಣವೆ, 14 ಜಾನುವಾರುಗಳು ಭಸ್ಮ

    ಭೀಕರ ಅಗ್ನಿ ದುರಂತ: 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಬಣವೆ, 14 ಜಾನುವಾರುಗಳು ಭಸ್ಮ

    ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಮೇವಿನ ಬಣವೆ, 14 ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.

    ಶನಿವಾರ ಸಂಜೆ ಸುಮಾರು 4.30ರ ವೇಳೆಗೆ ಗ್ರಾಮದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಊರ ಹೊರಗಡೆ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬೆಂಕಿಯ ಕೆನ್ನಾಲಿಗೆ ಗ್ರಾಮಕ್ಕೂ ಸಹ ಆವರಿಸಿ ಶೇ.70 ರಷ್ಟು ಗ್ರಾಮ ಬೆಂಕಿಗಾಹುತಿಯಾಗಿದೆ. ಮನೆಗಳಿಗೆ ಬೆಂಕಿ ಬಿದ್ದಿದ್ದರಿಂದ 25ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗಿವೆ.

    ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಆಗಮಿಸಿರುವ 10ಕ್ಕೂ ಹೆಚ್ಚು ಅಗ್ನಿ ಶಾಮಕದಳದ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಬೆಂಕಿ ಹತೋಟಿಗೆ ಬರುತ್ತಿಲ್ಲ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ.

    ಶನಿವಾರ ರಾತ್ರಿ ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಹೊರಬಂದು ರಸ್ತೆಬದಿಯಲ್ಲಿ ಕುಳಿತಿದ್ದರು. ಸದ್ಯ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಕುಟುಂಬಗಳಿಗೆ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

    https://youtu.be/p6_BxagEP_g